Author: AIN Author

ದಾವಣಗೆರೆ: ಸರ್ವಧರ್ಮ ಸಮನ್ವಯತೆಯಿಂದ ಸರ್ವಧರ್ಮಿಯರು ಬಾಳುವಂತೆ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ದಾವಣಗೆರೆ ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದ ಕುಕ್ಕುವಾಡೇಶ್ವರಿ ದೇವಸ್ಥಾನ ಸಮಿತಿ, ವಾಲ್ಮೀಕಿ ನಾಯಕ ಯುವಕರ ಸಂಘ, ಗೊಲ್ಲರಹಳ್ಳಿಯ ಎಲ್ಲಾ ನೌಕರರು ಹಾಗೂ ಸಮಸ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ಉದ್ಘಾಟನಾ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸ್ವಾಮೀಜಿ ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ದೇವರು ನಿರಾಕಾರವಾಗಿದ್ದು, ಗಾಳಿಯಂತೆ ಕಣ್ಣಿಗೆ ಕಾಣುವುದಿಲ್ಲ. ದೇವರು ಬೇರೆ ರೂಪದಲ್ಲಿ ಕಂಡಾಗ ಅದಕ್ಕೆ ಜಾತಿ, ಧರ್ಮದ ಲೇಪನ ಮಾಡಬಾರದು. ಆಸ್ತಿ, ಮನೆಗಾಗಿ ಹೊಡೆದಾಟಕ್ಕಿಂತ ಮನುಷ್ಯ ಮನುಷ್ಯನ ಮೇಲೆ ಇವತ್ತು ಕ್ರೌರ್ಯ ಎಸೆಗುತ್ತಿರುವುದು ದೇವರು ಮತ್ತು ಧರ್ಮದ ಹೆಸರಿನಲ್ಲಿ ಎಂದು ವಿಷಾಧಿಸಿದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಒಂದು ಊರು ಎಂದರೆ ಜಾತಿ, ಮತವೆಂಬ ಬೇಧ ಬಿಟ್ಟು ಬೆಳೆಯಬೇಕು. ಇಂತಹದ್ದನ್ನು ಒಗ್ಗಟ್ಟಾಗಿ ಅಣಜಿ, ಗೊಲ್ಲರಹಳ್ಳಿ ಗ್ರಾಮಸ್ಥರು ಮಾಡಿದ್ದಾರೆ. ಇದಕ್ಕೆ ಕುಕ್ಕವಾಡೇಶ್ವರಿ ಮೂರ್ತಿಯಾಗಿ ಪ್ರತಿಷ್ಠಾಪಿತವಾಗಲು ಕಾರಣ…

Read More

ಕೋಲಾರ: ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು 53 ಲಕ್ಷ 11 ಸಾವಿರ ಕೋಟಿ ಈ ದೇಶದ ಮೇಲೆ ಸಾಲ ಇತ್ತು. ಈಗ 125 ಲಕ್ಷ ಕೋಟಿ ಈ ದೇಶದ ಮೇಲೆ ಸಾಲ‌ ಇದೆ ಎಂದು ಕೋಲಾರದಲ್ಲಿ ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟವನ್ನ ದಿವಾಳಿ ಮಾಡಿದ್ದಾರೆ ಎನ್ನುವ ಮೋದಿ ಅವರು, ಇದೀಗ ಯಾರೂ ದಿವಾಳಿ ಮಾಡಿದ್ದಾರೆ. ಮಿಸ್ಟರ್ ನರೇಂದ್ರ ಮೋದಿ ದೇಶವನ್ನ ದಿವಾಳಿ ಮಾಡಿದ್ದಾರೆ. ಬೇಕಾದರೆ ಕರಿರಿ ನರೇಂದ್ರ ಮೋದಿ ಅವರನ್ನ ಹೇಳುತ್ತೇನೆ. ಕಾಂಗ್ರೇಸ್ ಪಕ್ಷ ಹೆಚ್ಚು ದಿನ ಇರುವುದಿಲ್ಲ ಎನ್ನುವುದು ಮೋದಿ ಅವರ ಹಗಲುಗನಸು ಎಂದು ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.

Read More

ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ತೀವ್ರ ಮುಜುಗರಕ್ಕೆ ಸಿಲುಕಿಸಿದ್ದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಸಿಐಡಿಗೆ ನೀಡಿ ಸರ್ಕಾರ ಆದೇಶಿಸಿದೆ. ಈಗಾಗಲೇ ಕಲಬುರಗಿ ಪೋಲೀಸರಿಂದ ಕಿಂಗ್ ಪಿನ್ RD ಪಾಟೀಲ್ ಸೇರಿ ಹಲವರು ಅರೆಸ್ಟಾಗಿದ್ದಾರೆ. ವಿಶ್ವವಿದ್ಯಾಲಯ ಠಾಣೆ ಅಶೋಕ ನಗರ ಠಾಣೆ ಹಾಗು ಅಫಜಲಪುರ ಠಾಣೆಗಳಲ್ಲಿ ಪರೀಕ್ಷಾ ಅಕ್ರಮದ ಕೇಸ್ ದಾಖಲಾಗಿವೆ.ಇದೀಗ ತೀವ್ರ ತನಿಖೆಯ ನಂತ್ರ ಇನ್ನೂ ಹಲವು ಕುಳಗಳು ಅಂದರ್ ಆಗಲಿವೆ ಅನ್ನೋ ಮಾತುಗಳು ಕೇಳಿಬರ್ತಿವೆ..

Read More

ಬಳ್ಳಾರಿ: ಒಂದು ವರ್ಷವಾಗಿದೆ ಕೋರ್ಟ್ ಉದ್ಘಾನೆಗೊಂಡು, ಕೆಲವು ಕಾರಣಾಂತರದಿಂದ ಕಾರ್ಯಕಲಾಪ ಹಳೆ ಕೋರ್ಟ್ನಲ್ಲಿ ನಡೆಯುತ್ತಿವೆ. ಇನ್ನು ಕೇಲವೆ ದಿನಗಳಲ್ಲಿ ಸಂಪೂರ್ಣ ಕೋರ್ಟ್ ವ್ಯವಹಾರಗಳು ಇಲ್ಲಿಗೆ ಸಿಫ್ಟ್ ಆಗುತ್ತವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಮಾಡಿಕೊಳ್ಳಲು ಇಷ್ಟು ಸಮಯ ತೆಗೆದುಕೊಂಡಿದ್ದಾರೆ, ಇದರಿಂದ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗುದಿಲ್ಲ ಎಂದರು. ಇನ್ನೂ ರಾಜ್ಯದಲ್ಲಿ ಬರ ಅಧ್ಯಾಯನ ತಂಡ ಈಗಾಗಲೇ ವರದಿಯನ್ನು ನೀಡಿದೆ, ಪ್ರತಿ ಜಿಲ್ಲೆಯಲ್ಲಿ ಸಚಿವರು ಸಂಚಾರಿಸಿ ರೈತರ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ರೈತರಿಗೆ ಸರ್ಕಾರದ ವತಿಯಿಂದ  ಪರಿಹಾರ ನೀಡುವುದು ಗ್ಯಾರಂಟಿ, ರೈತರ ಪರವಾಗಿರುವ ನಾವು, ರೈತರಿಗೆ ಅನುಕೂಲಕರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೆವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

Read More

ಚೆನ್ನೈ: ಶನಿವಾರ ಮುಂಜಾನೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ (Government Bus) ಮತ್ತು ಓಮ್ನಿಬಸ್ (Omnibus) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು, ಸುಮಾರು 60 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಮಾರು 10 ಅಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮೀಪದ ಚೆಟ್ಟಿಯಪ್ಪನೂರಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ಸಂಸ್ಥೆಯ ಬಸ್ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಓಮ್ನಿಬಸ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.  ಗುಡುವಂಚೇರಿಯ ರಿತಿಕಾ (32), ವಾಣಿಯಂಬಾಡಿಯ ಮೊಹಮ್ಮದ್ ಫಿರೋಜ್ (37), ಎಸ್‌ಇಟಿಸಿ ಬಸ್ ಚಾಲಕ ಕೆ ಎಲುಮಲೈ (47) ಮತ್ತು ಚಿತ್ತೂರಿನ ಬಿ ಅಜಿತ್ (25) ಸ್ಥಳದಲ್ಲೇ ಮೃತಪಟ್ಟರೆ, https://ainlivenews.com/great-job-opportunity-in-hindustan-aeronautics-limited-posting-in-bangalore/ ಓಮ್ನಿಬಸ್ ಚಾಲಕ ಎನ್ ಸೈಯದ್ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ…

Read More

ಬೆಂಗಳೂರು: ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ನೆದರ್​​ಲ್ಯಾಂಡ್​ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಕುರಿತು ಕೇಂದ್ರ ವಿಭಾಗ ಡಿಸಿಪಿ ಶೇಖರ್​ ಪ್ರತಿಕ್ರಿಯಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಗೂಡ್ಸ್ ವಾಹನಗಳಿಗೆ ನಿಷೇಧ ಹೇರಲಾಗಿದೆ ಎಂದು ​ತಿಳಿದ್ದಾರೆ. ಕ್ಯಾಬ್​ಗಳಿಗೆ ಪಿಕ್ ಅಪ್ ಆ್ಯಂಡ್​ ಡ್ರಾಪ್ ಸ್ಥಳಗಳನ್ನ ಗುರುತಿಸಲಾಗಿದ್ದು,  ಸಾರ್ವಜನಿಕರು ನಾಳೆ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಸಾಧ್ಯವಾದಷ್ಟು ಪ್ರಯಾಣ ಕಡಿಮೆ ಮಾಡಿದರೆ ಉತ್ತಮ ಎಂದು ತಿಳಿಸಿದ್ದಾರೆ. ಇನ್ನು, ಯಾವುದೇ ರೀತಿಯ ಸಂಚಾರ ದಟ್ಟಣೆ ಆಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Read More

ಬಂಗಾರಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೋಲಾರ, ಬಂಗಾರಪೇಟೆ ಮಾಲೂರು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯರಗೋಳ್ ಅಣೆಕಟ್ಟು ಉದ್ಘಾಟನೆ ನೆರವೇರಿಸಿದರು. https://ainlivenews.com/great-job-opportunity-in-hindustan-aeronautics-limited-posting-in-bangalore/ ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಒಟ್ಟು 2197.72 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಸಚಿವರಾದ ಡಾ: ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಶಾಸಕರು ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂಸದ ಉಪಸ್ಥಿತರಿದ್ದರು.  

Read More

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯಾಧ್ಯಕ್ಷ ಸ್ಥಾನ ಕೊನೆಗೂ ಘೋಷಣೆಯಾಗಿದೆ, ಅಳೆದೂ ತೂಗಿ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರರನ್ನ ಸಾರಥಿಯನ್ನಾಗಿ ಮಾಡಿದೆ ಬಿಜೆಪಿ ಹೈಕಮಾಂಡ್. ವಿಜಯೇಂದ್ರ‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದ್ದು, ಯುವ ಪಡೆಗೆ ಹೊಸ ಚೈತನ್ಯ ಮೂಡಿದಂತಾಗಿದೆ, ಕಾರ್ಯಕರ್ತನೇ ಪಕ್ಷದ ಬಲ ಅನ್ನೋ ಸಂದೇಶ ಸಾರಿದ್ದಾರೆ. ಇನ್ಮುಂದೆ ರಾಜ್ಯ ಬಿಜೆಪಿಯಲ್ಲಿ ಜ್ಯೂನಿಯರ್ ರಾಜಾಹುಲಿಯ ಖದರ್ ಶುರುವಾಗಲಿದೆ…. ವಿಧಾನಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿ ಒಡೆದು ಮೂರು ಬಾಗಿಲಾಗಿತ್ತು, ಮಾಜಿ ಸಿಎಂ ಯಡಿಯೂರಪ್ಪ, ಬಿಎಲ್ ಸಂತೋಷ್, ಯತ್ನಾಳ್ ಬಣಗಳ ನಡುವೆ ಕೋಲ್ಡ್ ವಾರ್ ನಿಂದಾಗಿ ಬಿಜೆಪಿ ಸೂತ್ರವಿಲ್ಲದ ಗಾಳಿಪಟವಾಗಿತ್ತು. ಅದ್ರಲ್ಲೂ ಪ್ರಮುಖವಾಗಿ ಮುಂದಿನ ರಾಜ್ಯಾಧ್ಯಕ್ಷ ಯಾರು ಅನ್ನೋ ಚರ್ಚೆಗಳು ಜೋರಾಗಿದ್ವು ಯಡಿಯೂರಪ್ಪ- ಸಂತೋಷ್ ಬಣದ ನಡುವೆ ಅಧ್ಯಕ್ಷ ಪಟ್ಟಕ್ಕೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಜೋರಾಗೆ ಇತ್ತು. ಸಿಟಿ ರವಿ, ಅಶ್ವಥ್ ನಾರಾಯಣ, ಶೋಭಾ ಕರಂದ್ಲಾಜೆ, ಯತ್ನಾಳ್, ಸೋಮಣ್ಣ ಸೇರಿದಂತೆ ಹಲವು ನಾಯಕರು ರೇಸ್ ನಲ್ಲಿದ್ರು. ಎಲ್ಲಾ ಘಟಾನುಗಟಿಗಳ ಮಧ್ಯೆ ಬಿಜೆಪಿ ಹೈಕಮಾಂಡ್…

Read More

ಬೆಂಗಳೂರು: ನಾಳೆ ಭಾರತ ನೆದರ್ಲ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆ ನಗರ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಬೆಂಗಳೂರಲ್ಲಿ ಒಟ್ಟು ಐದು ಪಂದ್ಯ ನಿಗಧಿಯಾಗಿತ್ತು ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ,ಐದನೇ ಪಂದ್ಯ ನಾಳೆ ನಡೆಯಲಿದೆ ನಾಳೆ ಭಾರತ-ನೆದರ್ಲ್ಯಾಂಡ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆಚಿನ್ನಸ್ವಾಮಿ‌ ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ 9 ಜನ ಎಸಿಪಿ 28 ಇನ್ಸ್ ಪೆಕ್ಟರ್ 86 ಜನ ಪಿಎಸ್ಐಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ4 ಕೆಎಸ್ ಆರ್ ಪಿ ತುಕಡಿ,2 ಡಿ ಸ್ವಾಟ್ ಆ್ಯಂಬುಲೆನ್ಸ್ ವ್ಯವಸ್ಥ ಮಾಡಲಾಗಿದೆ ವಿದ್ವಾಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆಎಲ್ಲಾ ಗೇಟ್ ಬಳಿ ವಿದ್ವಾಂಸಕ ಕೃತ್ಯ ತಪಾಸಣೆ ಕೈಗೊಳ್ತೇವೆ ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಪಾಲಿಸಬೇಕು

Read More

ಮೈಸೂರು: ಟಿ. ನರಸೀಪುರ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಸುಮಾರು ೨೭೫ ಮಕ್ಕಳು ಓದುತ್ತಿದ್ದು, ಇಲ್ಲಿ ಮೂಲಸೌಕರ್ಯ ಕೊರತೆಯಿದೆ. ಹೀಗಿದ್ದರೂ ಸಂಬಂಧಿಸಿದ ಶಾಸಕರು, ಸಚಿವರು ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಕೂಡಲೇ ಸೌಲಭ್ಯ ಕಲ್ಪಿಸದಿದ್ದರೆ ಆಮ್ ಆದ್ಮಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ರಂಗಯ್ಯ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಶಾಲೆಯಲ್ಲಿ ಶೌಚಾಲಯವಿಲ್ಲ. https://ainlivenews.com/great-job-opportunity-in-hindustan-aeronautics-limited-posting-in-bangalore/ ಶಾಲೆಯ ಕಟ್ಟಡ ಮೇಲ್ಭಾಗ ಕಿತ್ತುಹೋಗಿದ್ದು, ಆತಂಕದಲ್ಲಿ ವಿದ್ಯಾರ್ಥಿನಿಯರು ಕಾಲ ಕಳೆಯುವಂತಾಗಿದೆ. ಶಾಲೆಗೆ ಸೂಕ್ತ ಕಾಂಪೌAಡ್ ಇಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲವಾಗಿದೆ. ಈಗಲಾದರೂ ಸಂಬAಧಪಟ್ಟರು ಇತ್ತ ಗಮನ ಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಉಷಾ ಸಂಪತ್ಕುಮಾರ್, ವಿಶ್ವನಾಥ್ ಕುಲಕರ್ಣಿ, ಶಿವಣ್ಣ, ಸೋಸಲೆ ಸಿದ್ದರಾಜು ಹಾಜರಿದ್ದರು.

Read More