ಹಾವೇರಿ:- ರಾಣೆಬೆನ್ನೂರು ಬಳಿಯಿರುವ ಮೆಗಾ ಮಾರುಕಟ್ಟೆ ಹಲವು ವರ್ಷಗಳಿಂದ ಬಳಕೆಯಾಗದೇ ಪಾಳು ಬಿದ್ದಿದೆ. ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ ಮೆಗಾ ಮಾರ್ಕೆಟ್ ಈಗ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. https://ainlivenews.com/bbk11-dhanraj-achars-emotional-post-after-getting-out-of-bigg-boss/ 129 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಮಾರುಕಟ್ಟೆ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ. ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ಉಂಟಾಗುತ್ತಿದ್ದ ದಟ್ಟಣೆ ಹಾಗೂ ಸುಸಜ್ಜಿತ ಮಾರುಕಟ್ಟೆಯ ಅಗತ್ಯತೆಯನ್ನು ಪೂರೈಸುವ ಉದ್ದೇಶದಿಂದ ಮೆಗಾ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ರಾಜ್ಯದಲ್ಲಿಯೇ ಬೃಹತ್ ಪ್ರಮಾಣದ ಮಾರುಕಟ್ಟೆ ಇದಾಗಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಬರುವ ರೈತರಿಗೆ ಒಂದೇ ಸೂರಿನಡಿ ವ್ಯಾಪಾರ-ವಹಿವಾಟು ಮಾಡಲು ಅನುಕೂಲವಾಗಲೆಂದು ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಮಾರುಕಟ್ಟೆ ಪ್ರದೇಶ ಕ್ರಮೇಣ ಹಾಳಾಗುತ್ತಿದೆ. ರಾಣೆಬೆನ್ನೂರಿನಲ್ಲಿ ಗೋವಿನ ಜೋಳ, ಶೇಂಗಾ, ಹತ್ತಿ, ಸೂರ್ಯಕಾಂತಿ, ಜೋಳ, ಈರುಳ್ಳಿ ಹಾಗೂ ಬೆಳ್ಳುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದೇ ವ್ಯಾಪಾರವನ್ನು ಮೆಗಾ ಮಾರುಕಟ್ಟೆಗೆ ಹಸ್ತಾಂತರಿಸುವ ಉದ್ದೇಶ ಸರ್ಕಾರದ್ದಾಗಿದೆ. ಆದರೆ, ಮೆಗಾ ಮಾರುಕಟ್ಟೆ ಇದುವರೆಗೂ ಹಸ್ತಾಂತರವಾಗಿಲ್ಲ. ಮೆಗಾ ಮಾರುಕಟ್ಟೆಯ ಮುಖ್ಯರಸ್ತೆಯ ಎರಡೂ ಕಡೆ, ಉದ್ಯಾನ…
Author: AIN Author
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಧನರಾಜ್ ಆಚಾರ್ ಭಾವುಕ ಪೋಸ್ಟ್ ಮಾಡಿದ್ದಾರೆ. ಬಿಗ್ಬಾಸ್ನಿಂದ ಆಚೆ ಬರುತ್ತಿದ್ದಂತೆ ಧನರಾಜ್ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಇದೇ ಖುಷಿಯಲ್ಲಿದ್ದ ಧನರಾಜ್ ಆಚಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. https://ainlivenews.com/i-have-nothing-to-do-with-eds-press-release-siddaramaiah/ ಈ ಪ್ರೀತಿಗಾಗಿ, ಅಭಿಮಾನಕ್ಕಾಗಿ ಕನಸು ಕಂಡವನು ನಾನು. ನನಸು ಮಾಡಿದಿರಿ ನೀವು. Big boss Season 11 ನನ್ನಂತಹ ಸಾಮಾನ್ಯನ ಪಾಲಿಗೆ ಮರೆಯಲಾಗದ ಅತ್ಯದ್ಭುತ ಅವಕಾಶ. ಕರ್ನಾಟಕದ ಯಾವುದೋ ಮೂಲೆಯಲ್ಲಿ ಇದ್ದ ನಾನಿಗ ಈ ವೇದಿಕೆ ದೊರೆತದ್ದು ಅದು ನಿಮ್ಮಿಂದ. ಅಂತಹ ದೊಡ್ಡ ವೇದಿಕೆಯಲ್ಲಿ ಎರಡು ವಾರಗಳನ್ನು ಕಳೆದರೂ ಅದು ಜನ್ಮಗಳ ಪುಣ್ಯ. ಅಂತದ್ದರಲ್ಲಿ ನನಗೆ ನೀವು ಬರೋಬ್ಬರಿ 110 ದಿನಗಳನ್ನು ಕಳೆಯುವ ಅವಕಾಶವನ್ನು ನೀಡಿದ್ದೀರಿ. ಅಷ್ಟು ದೊಡ್ಡ ಮನೆಯಲ್ಲಿ ನಾನು ಮಾಡಿದ ತಪ್ಪುಗಳನ್ನು ಕ್ಷಮಿಸಿದ್ದೀರಿ. ನಾನು ಅತ್ತಾಗ ಹೆಗಲಾಗಿ ಜೊತೆಯಾಗಿದ್ದೀರಿ. ನನ್ನ ನಗುವಿನಲ್ಲಿ ನೀವು ಖುಷಿ ಕಂಡಿದ್ದೀರಿ ಅಂದು ಬೊಗಸೆಯಷ್ಟು ಪ್ರೀತಿಯನ್ನು ಬಯಸಿದವನು ನಾನು. ಇಂದು ಆಗಸದಷ್ಟು…
ಬೆಂಗಳೂರು:- ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. https://ainlivenews.com/why-is-cm-siddaramaiah-a-target-km-shivalingegowda-question/ ಈ ಸಂಬಂಧ ಮಾತನಾಡಿದ ಅವರು, ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ಬಿಜೆಪಿಯವರು ಈ ಪತ್ರಿಕಾ ಪ್ರಕಟಣೆಯನ್ನು ಅನಗತ್ಯವಾಗಿ ಇಡಿಯವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಎಂದರು. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಪ್ರತಿಪಕ್ಷಗಳ ಆರೋಪ ಹಾಗೂ ರಾಜ್ಯದ ತೆರಿಗೆ ಹಣದಲ್ಲಿ ನಾಳಿನ ಸಮಾರಂಭ ನಡೆಸುತ್ತಿರುವ ಬಗ್ಗೆ ಆರೋಪಿಸುತ್ತಿರುವ ಕುರಿತುc ಪ್ರತಿಕ್ರಿಯೆ ನೀಡಿ, ಹಣ ದುರುಪಯೋಗ ಆಗಿರುವ ಪ್ರಶ್ನೆಯೇ ಇಲ್ಲ ಎಂದರು. ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು:- ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಎಂದು ಕೆಎಂ ಶಿವಲಿಂಗೇಗೌಡ ಪ್ರಶ್ನೆ ಮಾಡಿದ್ದಾರೆ. https://ainlivenews.com/the-happiness-of-the-clapped-woman-did-not-last-long/ ಮುಡಾ ಹಗರಣದ ಬಗ್ಗೆ ಮಾತಾಡಿದ ಅವರು ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಆಸ್ತಿ ಈಡಿ ಜಪ್ತು ಮಾಡಿದೆ ಅಂತ ಬರುತ್ತಿದೆ? ಅವರ ಆಸ್ತಿ ಜಪ್ತಿ ಆಗಿದೆಯಾ? ಅವರ 3.14 ಎಕರೆ ಜಮೀನು ಬದಲಿಗೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 50:50 ಅನುಪಾತದಲ್ಲಿ 14 ಸೈಟುಗಳನ್ನು ನೀಡಿದ್ದು ತಪ್ಪು ಅಂತಾದರೆ ಸೈಟು ನೀಡಿದ ಬಿಜೆಪಿಯನ್ನು ಮೊದಲು ಪ್ರಶ್ನೆ ಮಾಡಿ, ಮಾನವೀಯತೆಯ ದೃಷ್ಟಿಯಿಂದ ಸೈಟುಗಳನ್ನು ವಾಪಸ್ಸು ನೀಡಿರುವ ಸಿದ್ದರಾಮಯ್ಯರನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂದ ಅವರು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರು:- ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿ ಬಿಟ್ಟ ಕರುಣಾಜನಕ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ಜರುಗಿದೆ. https://ainlivenews.com/the-dead-boy-got-peace-the-court-finally-sentenced-the-poison-girl-of-kerala-to-death/ ಚಂದ್ರು ತನ್ನ ಮಗಳ ಮದುವೆಯನ್ನು ಭರ್ಜರಿಯಾಗಿ ಮಾಡಿ ಕುಟುಂಬಸ್ಥರ ಬಳಿ ಶಹಬ್ಬಾಸ್ ಅನ್ನಿಸಿಕೊಳ್ಳುವ ಆಸೆ ಹೊಂದಿದ್ದರು. ಮೊದಲ ಮಗಳ ಮದುವೆ ಸಮಯಕ್ಕೆ ಕೋವಿಡ್ ಪಾಸಿಟಿವಿ ಆಗಿದ್ದು ಮದುವೆ ನೋಡಲು ಆಗಿರಲಿಲ್ಲ. 2ನೇ ಮಗಳು ಲವ್ ಮ್ಯಾರೇಜ್ ಆಗಿದ್ದಳು. ಇದೀಗ ಕೊನೇ ಮಗಳ ಮದುವೆಯನ್ನು ನೋಡೋ ಭಾಗ್ಯ ಕೂಡ ಚಂದ್ರುಗೆ ಸಿಗಲೇ ಇಲ್ಲ. ಈ ಹುಡುಗಿ ಖುಷಿಯಾಗಿಯೇ ಹಸೆಮಣೆ ಏರಿದ್ದಳು. ಅಪ್ಪ ಸುಸ್ತಾಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ವಿಷಯ ಮಾತ್ರ ತಲೆಯಲ್ಲಿ ಇತ್ತು. ಮದುವೆ ಮುಗಿಸಿಕೊಂಡು ನೇರವಾಗಿ ಹೋಗಿ ಆ ಸಂಭ್ರಮವನ್ನು ಹೇಳಿಕೊಳ್ಳೋಣ ಅಂತಾನೆ ಮದುವೆ ಮುಗಿಯೋದನ್ನೇ ಕಾದಿದ್ದಳು. ಮದುವೆಯೂ ಮುಗಿಯಿತು ಅಪ್ಪ ಎಲ್ಲಿ ಅಂದಾಗಲೇ ಅವಳಿಗೆ ಬರಸಿಡಿಲು ಬಡಿಯಿತು. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಚಂದ್ರು, ಮಮತಾಳ ಮೂರನೇ ಮಗಳು ದೀಕ್ಷಿತಾಳ ಮದುವೆಯನ್ನು ಕಡೂರು ತಾಲೂಕಿನ ಬೀರೂರಿನ ಯತಿರಾಜ್ ಜೊತೆಗೆ ನಿಶ್ವಿಯವಾಗಿತ್ತು. ನಿನ್ನೆ ಮನೆಯಿಂದ ವಧುವನ್ನ ಕಲ್ಯಾಣ…
ಕೇರಳ: ಅದು 2022ರಲ್ಲಿ ಶಾರೂನ್ ಎಂಬ ಯುವಕನ ಸಾವು ರಾಷ್ಟ್ರದ ಗಮನ ಸೆಳೆದಿತ್ತು, ಈತನನ್ನು ಈತನ ಪ್ರೇಯಿಸಿಯೇ ವಿಷ ನೀಡಿ ಸಾಯಿಸಿದ್ದಳು, ಈ ಪ್ರಕಣರಣ ಹೊರ ಹೊರ ಬಂದಾಗ ಅಂದಗಾತಿಯ ಮನಸ್ಸು ಇಷ್ಟೊಂದು ಕ್ರೂರಿಯಾಗಿತ್ತೇ? ಅವಳಿಗೆ ಬೇಡವೆಂದರೆ ಅವನನ್ನು ಬಿಡಬಹುದಿತ್ತು, ಅನ್ಯಾಯವಾಗಿ ಆ ಹುಡುಗನನ್ನು ಕೊಂದಳು ಎಂದು ಜನರು ಆಕೆಗೆ ಹಿಡಿ ಶಾಪ ಹಾಕಿದರು. https://ainlivenews.com/ksrtc-bus-overturns-30-people-seriously-injured/ ಇನ್ನೂ ಕೇರಳದ ವಿಷ ಕನ್ಯೆ ಗ್ರೀಷ್ಮಾಳಿಗೆ ಕೋರ್ಟ್ ಮರಣದಂಡನೆ ನೀಡಿದೆ,ಈ ತೀರ್ಪು ಸಾಕಷ್ಟು ಜನರಿಗೆ ಸಂತಸ ತಂದಿದೆ, ಕೊನೆಗೂ ಸತ್ತ ಹುಡುಗನ ಆತ್ಮಕ್ಕೆ ಶಾಂತಿ ಸಿಗುವಂತಾಯ್ತು ಎಂದು ಮಾತನಾಡುತ್ತಿದ್ದಾರೆ. ಗ್ರೀಷ್ಮಾ ಎಂಬ ಕೊಲೆಗಾತಿಗೆ ಮರಣ ದಂಡನೆ ಶಿಕ್ಷೆ ನೀಡುವ ಮೂಲಕ ಶಾರೂನ್ ಸಾವಿಗೆ ನ್ಯಾಯ ಸಿಕ್ಕಿದೆ. ಅಪೂರ್ವಗಳಲ್ಲಿ ಅಪೂರ್ವವಾಗಿರುವ ಈ ಪ್ರಕರಣ ಏನು? ಎಷ್ಟೋ ಕೊಲೆಗಾರರು ಜೈಲ್‌ನಲ್ಲಿದ್ದಾರೆ ಅವರಿಗೆಲ್ಲಾ ಜೈಲು ಶಿಕ್ಷೆಯಿದೆ,ಆದರೆ ಮರಣ ದಂಡನೆ ಶಿಕ್ಷೆಯಾಗಿಲ್ಲ, ಆದರೆ ಈಕೆಗೆ ಕೇರಳ ಹೈಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ. ಶಾರೂನ್ ಮತ್ತು ಗ್ರೀಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು, ಇಬ್ಬರು…
ಮಂಡ್ಯ:-KSRTC ಬಸ್ ಪಲ್ಟಿಯಾಗಿ ಸುಮಾರು 33 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮದ್ದೂರಿನ ರುದ್ರಾಕ್ಷಿಪುರದ ಬಳಿ ಜರುಗಿದೆ. https://ainlivenews.com/rcb-got-elephant-power-star-player-entry-to-the-team/ ಬಸ್ ಚಲಿಸುತ್ತಿದ್ದ ವೇಳೆ ಚಾಲಕ ಅಚಾನಕ್ಕಾಗಿ ಹಿಂಬದಿ ತಿರುಗಿನೋಡಿದ್ದು, ಈ ವೇಳೆ ಚಕ್ರ ಡಿವೈಡರ್ ಮೇಲೆ ಹತ್ತಿದೆ. ಹೀಗಾಗಿ ಬಸ್ ಪಲ್ಟಿ ಹೊಡೆದಿದೆ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರ ಪೈಕಿ 30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪ್ರಯಾಣಿಕರಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಗಾಯಾಳುಗಳಿಗೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯ ಬಿದ್ದರೆ ಮಿಮ್ಸ್ ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ
IPL 2025ರ ಆರಂಭಕ್ಕೆ ಇನ್ನೇನು ಎರಡು ತಿಂಗಳು ಮಾತ್ರ ಬಾಕಿ ಇದೆ. 2025ರ ಮೆಗಾ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗುತ್ತಿದೆ. ಕಳೆದ ಬಾರಿ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೋಫಿ ಮೊಲಿನೆಕ್ಸ್ ತೀವ್ರವಾಗಿ ಗಾಯಗೊಂಡ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದು ಶಾಕಿಂಗ್ ನ್ಯೂಸ್ ಆಗಿದ್ದು, ಇವರ ಜಾಗಕ್ಕೆ ಸ್ಟಾರ್ ಪ್ಲೇಯರ್ ಎಂಟ್ರಿ ಆಗಿದ್ದಾರೆ https://ainlivenews.com/what-did-the-labor-minister-say-about-the-case-of-assault-on-workers-in-vijayapur/ ಇನ್ನು, ಸೋಫಿ ಮೊಲಿನೆಕ್ಸ್ ಬದಲಿಗೆ ಇಂಗ್ಲೆಂಡ್ ಆಫ್‌ಸ್ಪಿನ್ನರ್ ಚಾರ್ಲಿ ಡೀನ್ ಆರ್‌ಸಿಬಿ ತಂಡವನ್ನು ಸೇರಿದ್ದಾರೆ. ಈ ಬಗ್ಗೆ ಆರ್‌ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಅಧಿಕೃತ ಘೋಷಣೆ ಹೊರಡಿಸಿದೆ. ಇದು ಆರ್‌ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ ಆಗಿದೆ. ಕಳೆದ ಸೀಸನ್ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಆರ್‌ಸಿಬಿ ಚಾಂಪಿಯನ್ ಆಗಲು ಸೋಫಿ ಮೊಲಿನೆಕ್ಸ್ ಕೊಡುಗೆ ಬಹಳ ಇತ್ತು. ಟೂನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು ಮೊಲಿನೆಕ್ಸ್. ಮುಂದಿನ ಸೀಸನ್ನಲ್ಲೂ ಇವರು ಮಿಂಚುವ ನಿರೀಕ್ಷೆಯಿತ್ತು. ಆದರೆ, ಮೊಣಕಾಲಿನ ಗಾಯದಿಂದಾಗಿ ಬಳಲುತ್ತಿರೋ ಇವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. 24 ವರ್ಷದ…
ಕೊಲೆ ಪ್ರಕರಣದಲ್ಲಿ ಕೋರ್ಟ್ ನಲ್ಲಿ ಹೋರಾಡಿ ಮೊದಲಿಗೆ ಮಧ್ಯಂತರ ಜಾಮೀನು ಪಡೆದು ತದನಂತರ ರೆಗ್ಯೂಲರ್ ಜಾಮೀನು ಪಡೆದಿರುವ ನಟ ದರ್ಶನ್, ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾದರೆ ಅದ್ಯಾವ್ ವಿಚಾರಕ್ಕೆ ಅಂತೀರಾ ಹೇಳ್ತೀವಿ ನೋಡಿ… ಯೆಸ್… ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು ದರ್ಶನ್ನಿಂದ ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದರು. ಆ ಹಣವನ್ನು ಮರಳಿ ಕೊಡಿಸುವಂತೆ ನಟ ದರ್ಶನ್ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೊಲೆ ಕೇಸ್ ನಲ್ಲಿ ದರ್ಶನ್ ಬಂಧನದ ಬಳಿಕ ಅವರಿಂದ ಬರೋಬ್ಬರಿ 37 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಬಳಸಲಾಗಿತ್ತು ಎಂದು ಪೊಲೀಸರು ಆರೋಪ ಮಾಡಿದ್ದರು. ಹೌದು.. ರೇಣುಕಾ ಸ್ವಾಮಿ ಕೊಲೆಯನ್ನು ತಾವು ಮಾಡಿದ್ದಾಗಿ ಒಪ್ಪಿಕೊಳ್ಳಲು ಹೊರಗಡೆಯಿಂದ ಕರೆಸಲಾಗಿದ್ದ ಮೂವರಿಗೆ ಅದಾಗಲೇ ಒಂದಿಷ್ಟು ಹಣವನ್ನು ಸಹ ನೀಡಲಾಗಿತ್ತು. ಹಣ ವಶಪಡಿಸಿಕೊಂಡಿದ್ದ ಪೊಲೀಸರು ಆದಾಯ ತೆರಿಗೆ ಇಲಾಖೆಗೆ…
ಬೆಂಗಳೂರು: ವಿಜಯಪುರದ ಇಟ್ಟಿಗೆ ಕಾರ್ಖಾನೆಯಲ್ಲಿ ಮೂವರು ಕಾರ್ಮಿಕರ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಮಿಕರ ಮೇಲೆ ಹಲ್ಲೆ ಖಂಡನೀಯ, ಈ ಕುರಿತು ಎಸ್‌ಪಿ ಜೊತೆ ಸಂಪರ್ಕದಲ್ಲಿದ್ದೇನೆ. ಪೊಲೀಸರಿಂದ ನಾನು ಮಾಹಿತಿ ಪಡೆದಿದ್ದೇನೆ. ಈಗಾಗಲೇ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಎಪಿಎಂಸಿ ವ್ಯಾಪ್ತಿಯ ಬಾವಿಕಟ್ಟಿ ತಾಂಡಾದಲ್ಲಿ ಈ ಘಟನೆ ನಡೆದಿದೆ. https://ainlivenews.com/are-you-experiencing-these-symptoms-your-body-weight-is-increasing-be-careful/ ಮೂವರು ದಲಿತ ಸಮುದಾಯಕ್ಕೆ ಸೇರಿದವರು. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ. ಈ ಕುರಿತು ಜಿಲ್ಲಾಧಿಕಾರಿಯ ಜೊತೆಗೂ ಮಾತನಾಡಿದ್ದೇನೆ. ಮಾಲೀಕ ಖೇಮು ರಾಠೋಡ ಕಾಂಪ್ರಮೈಸ್‌ಗೂ ಯತ್ನ ನಡೆಸಿದ್ದ. ಆದರೆ ಅದ್ಯಾವುದಕ್ಕೂ ಅವಕಾಶ ಕೊಡದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.