ಕೌನ್ ಬನೇಗಾ ಕರೋರ್‍ಪತಿ ಸೀಸನ್ ಮುಗೀತಾ ಅಥವಾ ಅಮಿತಾಭ್ ಬಚ್ಚನ್ (Amitabh Bachchan) ಅವರೇ ಅಲ್ಲಿಂದ ನಿರ್ಗಮಿಸಿದ್ದಾರಾ ಗೊತ್ತಿಲ್ಲ. ಒಟ್ಟಿನಲ್ಲಿ ಅಮಿತಾಭ್ ಬಚ್ಚನ್ ಮಾಡಿದ ವಿದಾಯದ ಭಾಷಣ ಮಾತ್ರ ಸಾಕಷ್ಟು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಬಿಬಿಎಸ್ ನ ಹಲವಾರು ಸೀಸನ್ ಗಳನ್ನು ಅಮಿತಾಭ್ ಮಾಡಿದ್ದಾರೆ. ಯಾವತ್ತೂ ಅವರು ಈ ರೀತಿಯ ವಿದಾಯ ಭಾಷಣ ಮಾಡಿಲ್ಲ. ಇದೇ ಮೊದಲ ಬಾರಿಗೆ ಮಾಡಿದ್ದರಿಂದ ಅಮಿತಾಭ್ ಇನ್ಮುಂದೆ ಕೌನ್ ಬನೇಗಾ ಕರೋರ್ ಪತಿ ಮಾಡುವುದಿಲ್ಲ ಎಂದೇ ಹೇಳಲಾಗುತ್ತಿದೆ. ಕೆಲವರು ಅವರು ಇನ್ಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದರೆ, ಇನ್ನೂ ಹಲವರು ಈ ಸೀಸನ್ ಮುಗಿದಿದೆ. ಕೊನೆಯ ಸಂಚಿಕೆಯ ಶೂಟಿಂಗ್ ಮುಗಿಸಿ, ವಿದಾಯದ ಮಾತುಗಳನ್ನು ಅಮಿತಾಭ್ ಆಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಯಾವುದೂ ಈವರೆಗೂ ಸ್ಪಷ್ಟತೆ ಕೊಟ್ಟಿಲ್ಲ. ನಿನ್ನೆ ನಡೆದ ಫೈನಲ್ ಎಪಿಸೋಡ್ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿದ್ಯಾ ಬಾಲನ್, ಸಾರಾ ಅಲಿಖಾನ್, ಶರ್ಮಿಳಾ ಟ್ಯಾಗೋರ್ ಸೇರಿದಂತೆ ಅನೇಕರು ಸೀಸನ್ ನ ಕೊನೆಯ ಸಂಚಿಕೆಯಲ್ಲಿ…
Author: AIN Author
ನಮ್ಮ ಪಟ್ಟಿಯ ಸರಣಿಯನ್ನು ಮುಂದುವರಿಸುತ್ತಾ, 2024 ರಲ್ಲಿ ಭಾರತದಲ್ಲಿ ಮುಂಬರುವ ಸೆಡಾನ್‌ಗಳ ವಿವರಗಳನ್ನು ನಾವು ನೋಡೋಣ. ಸೆಡಾನ್ ಒಂದು ವಿಭಾಗವಾಗಿದ್ದು, SUV ಗಳ ಅಭೂತಪೂರ್ವ ಜನಪ್ರಿಯತೆಯಿಂದ ತೀವ್ರವಾಗಿ ಪ್ರಭಾವಿತವಾಗಿದೆ. ಭಾರತದಲ್ಲಿ, ಮತ್ತು ಜಗತ್ತಿನಾದ್ಯಂತ, SUVಗಳು ಬಹಳಷ್ಟು ಪ್ರಮುಖ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನಾವು ನೋಡಿದ್ದೇವೆ. ನಮ್ಮ ಮಾರುಕಟ್ಟೆಯಲ್ಲಿ ನಿರ್ದಿಷ್ಟವಾಗಿ, ಕಾರು ತಯಾರಕರು ವ್ಯಾಪಕ ಶ್ರೇಣಿಯ ಪ್ರೇಕ್ಷಕರನ್ನು ಪ್ರವೇಶಿಸಲು ಹೊಸ SUV ವಿಭಾಗಗಳನ್ನು ರಚಿಸಿದ್ದಾರೆ. ಇದು ದೊಡ್ಡ 7-ಸೀಟ್ SUV ಅಲ್ಲದಿದ್ದರೂ ಜನರು SUV ಯ ರಸ್ತೆ ಉಪಸ್ಥಿತಿಗೆ ಆಕರ್ಷಿತರಾಗುವುದರಿಂದ ಇದು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದ್ದರಿಂದ, ಸೆಡಾನ್‌ಗಳು ವರ್ಷದಿಂದ ವರ್ಷಕ್ಕೆ ಮಾರಾಟ ಪಟ್ಟಿಯಲ್ಲಿ ಕಡಿಮೆಯಾಗುತ್ತಿವೆ. ಇನ್ನೂ, ಈ ಭಾರತದಲ್ಲಿ ಕೆಲವು ಪ್ರಮುಖ ಸೆಡಾನ್‌ಗಳಿವೆ. ಮುಂದೆ ಹೋಗುವಾಗ, ನಾವು ಇನ್ನೂ ಕೆಲವನ್ನು ರಸ್ತೆಗಳಲ್ಲಿ ನೋಡುತ್ತೇವೆ. ನಮ್ಮ ಪಟ್ಟಿಯ ಸರಣಿಯನ್ನು ಮುಂದುವರಿಸುತ್ತಾ, 2024 ರಲ್ಲಿ ಭಾರತದಲ್ಲಿ ಮುಂಬರುವ ಸೆಡಾನ್‌ಗಳ ವಿವರಗಳನ್ನು ನಾವು ನೋಡೋಣ. ಸೆಡಾನ್ ಒಂದು ವಿಭಾಗವಾಗಿದ್ದು, SUV ಗಳ ಅಭೂತಪೂರ್ವ ಜನಪ್ರಿಯತೆಯಿಂದ ತೀವ್ರವಾಗಿ ಪ್ರಭಾವಿತವಾಗಿದೆ.…
ಬೆಂಗಳೂರು: ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು (ಸೋಮವಾರ) ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇತಿಹಾಸ ಎಲ್ಲರಿಗೂ ತಿಳಿಯಬೇಕು. ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಗಳ ಅಧ್ಯಯನ ವಾಗಬೇಕು ಎಂದರು. *ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕು ಅಮರಾಶಿಲ್ಪಿ ಜಕಣಾಚಾರಿ ಸಂಸ್ಮರಣೆ 2019 ರಲ್ಲಿ ಪ್ರಾರಂಭವಾದರೂ ಕೋವಿಡ್ ಇದ್ದುದರಿಂದ ಆಚರಿಸಲಾಗಲಿಲ್ಲ. ಕಳೆದ ವರ್ಷ ವಿಜಯನಗರ ಜಿಲ್ಲೆಯಲ್ಲಿ ಆಚರಿಸಲಾಗಿತ್ತು ಎಂದರು. ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಲಾಗುತ್ತದೆ ಎಂದರು. ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು ಜಕಣಾಚಾರಿ ಇಡೀ ರಾಜ್ಯಕ್ಕೆ ಗೊತ್ತಿರುವವರು. ಅವರ ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು. ಜಕಣಾಚಾರಿ…
ಮಿಲ್ಕಿ ಬ್ಯೂಟಿ ತಮನ್ನಾ ಲಂಡನ್ ಗೆ ಹಾರಿದ್ದಾರೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಅವರು ಬಾಯ್ ಫ್ರೆಂಡ್ ಜೊತೆ ವಿಮಾನ ಏರಿದ್ದಾರೆ. ಲಂಡನ್ (London) ನಲ್ಲಿ ಸುತ್ತಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಈ ಜೋಡಿಯ ಸುತ್ತಾಟವೂ ಹೆಚ್ಚಾಗಿದೆ. ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಇಬ್ಬರೂ ಒಟ್ಟೊಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ, ಹಲವಾರು ಪ್ರಾಜೆಕ್ಟ್ ಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ ಮದುವೆ ವಿಚಾರವನ್ನು ಈ ಜೋಡಿ ಅಧಿಕೃತವಾಗಿ ಹೇಳದೇ ಇದ್ದರೂ, ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು…
ತಮಿಳು ನಟ ಧನುಷ್ (Dhanush) ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡ್ತಿದೆ. ರಜನಿಕಾಂತ್ ಜೈಲರ್ ನಲ್ಲಿ ನರಸಿಂಹ ಆಗಿ ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವನ ಹೊಸ ಅವತಾರ ನೋಡೋದಿಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ. ಇತ್ತ ಧನುಷ್ 49ನೇ ಚಿತ್ರ ಇದಾಗಿದ್ದು, ಹೀಗಾಗಿ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ಸದ್ಯ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಗೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಪೊಂಗಲ್ (Sankranti) ಹಬ್ಬದ ಸ್ಪೆಷಲ್ ಆಗಿ ಧನುಷ್-ಶಿವಣ್ಣ ಸಿನಿಮಾ ತೆರೆಗೆ ಬರಲಿದೆ. 2024, ಜನವರಿ 12ರಂದು ‘ಕ್ಯಾಪ್ಟನ್ ಮಿಲ್ಲರ್’ ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು…
ಬೆಂಗಳೂರು:- ಇಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಸಾಧ್ಯತೆ ಇದ್ದರೆ, ಉತ್ತರ ಕನ್ನಡದಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಹಾವೇರಿಯಲ್ಲಿ ಅಲ್ಲಲ್ಲಿ ಹಗುರ ಮಳೆ ಇರಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಶಿವನೊಗ್ಗ, ಹಾಸನ, ಚಿಕ್ಕಮಗಳೂರಲ್ಲೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಾವು ಉದ್ದನೆಯ ಕೂದಲು (ಹೇರ್ ಸ್ಟೈಲ್) ಕಾಪಾಡಿಕೊಳ್ಳುವ ಬಗ್ಗೆ ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂ.ಎಸ್ ಧೋನಿ, ತಮ್ಮ ಇತ್ತೀಚಿನ ಹೇರ್ ಸ್ಟೈಲ್ (ಕೇಶ ವಿನ್ಯಾಸ) ಅನ್ನು ಕಾಪಾಡಿಕೊಳ್ಳಲು ಕಷ್ಟವಾಗಿದ್ದರೂ, ಈ ನೋಟವನ್ನು ಅಭಿಮಾನಿಗಳಿಂದ ಪಡೆದ ಪ್ರೀತಿಯಿಂದಾಗಿ ಅದನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನನ್ನ ಹೇರ್ ಸ್ಟೈಲ್ ಅನ್ನು ನಿರ್ವಹಿಸುವುದು ತುಂಬಾ ಕಷ್ಟ. ನಾನು ಈ ಮೊದಲು 20 ನಿಮಿಷಗಳಲ್ಲಿ ರೆಡಿ ಆಗುತ್ತಿದ್ದೆನು. ಆದರೆ, ಈಗ ರೆಡಿಯಾಗಲು 1 ಗಂಟೆ 10 ನಿಮಿಷಗಳು ತೆಗೆದುಕೊಳ್ಳುತ್ತೇನೆ. ಫ್ಯಾನ್ಸ್ ಉದ್ದನೆಯ ಕೂದಲನ್ನು ಇಷ್ಟಪಡುತ್ತಿರುವುದರಿಂದ ನಾನು ಅದನ್ನು ಮಾಡುತ್ತಿದ್ದೇನೆ. ಆದರೆ, ಒಂದು ದಿನ ನಾನು ಎಚ್ಚರಗೊಂಡು ಸಾಕು ಎಂದು ನಿರ್ಧರಿಸುತ್ತೇನೆ. ನಾನು ಅದನ್ನು ಟ್ರಿಮ್ ಮಾಡುತ್ತೇನೆ ಎಂದು ಉದ್ದನೆಯ ಕೂದಲಿಗೆ ಕತ್ತರಿ ಹಾಕುವ ಬಗ್ಗೆಯೂ ಸೂಚನೆ ನೀಡಿದ್ದಾರೆ.
ಅರ್ಜೆಂಟೀನಾ: ವೃತ್ತಿಯಲ್ಲಿ ವಕೀಲನಾಗಿರುವ ಅರ್ಜೆಂಟೀನಾದ ಸಾಲ್ಟಾ ನಗರದ 23 ವರ್ಷದ ಯುವಕ ಮೌರಿಸಿಯೊ ಈಗಾಗಲೇ ಮೃತರಾಗಿರುವ ತಮ್ಮ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್ ಅವರ ಪಿಂಚಣಿ ಹಣಕ್ಕಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಮೌರಿಸಿಯೊ ಹೇಳುವ ಪ್ರಕಾರ, ತಾನು ತನ್ನ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್ ಅವರ ಪತಿ ಅದಕ್ಕಾಗಿ ಪಿಂಚಣಿಗೆ ಅರ್ಹನಾಗಿದ್ದೇನೆ ಎಂದು ವಾದ ಮಂಡಿಸಿದ್ದಾರೆ. 2015ರಲ್ಲಿ ಸಂಬಂಧದಲ್ಲಿ ತಮ್ಮ ಹಿರಿಯ ದೊಡ್ಡಮ್ಮನಾಗಿರುವ ಯೋಲಾಂಡಾ ಅವರನ್ನು ವಿವಾಹವಾಗಿದ್ದೇನೆ. 2016ರ ಏಪ್ರಿಲ್‌ನಲ್ಲಿ ನನ್ನ ಪತ್ನಿಯೂ ಆಗಿದ್ದ ಇವರು ನಿಧನರಾದರು. ಇಂಥ ಸ್ಥಿತಿಯಲ್ಲಿ ಇವರ ಪಿಂಚಣಿ ಹಣಕ್ಕೆ ನಾನು ಅರ್ಹನಾಗಿದ್ದೇನೆ ಎಂದು ಮೌರಿಸಿಯೊ ಹೇಳಿದ್ದಾರೆ. ಆದರೆ, ಸಾಕಷ್ಟು ತನಿಖೆಯ ಬಳಿಕ ಈತನ ಮನೆಯ ನೆರೆಹೊರೆಯವರು ಈ ಮದುವೆಯನ್ನು ನಕಲಿ ಎಂದು ಘೋಷಣೆ ಮಾಡಿದಾಗ ಮೌರಿಸಿಯೊ ಅವರ ಅರ್ಜಿ ತಿರಸ್ಕೃತವಾಗಿದೆ. ವಾಯುವ್ಯ ಅರ್ಜೆಂಟೀನಾದ ಸಾಲ್ಟಾ ನಗರದ ಮೌರಿಸಿಯೊ, 2009 ರಲ್ಲಿ ಅವರ ಪೋಷಕರು ಬೇರ್ಪಟ್ಟ ನಂತರ ಅವರ ತಾಯಿ, ಸಹೋದರಿ, ಅಜ್ಜಿ ಮತ್ತು…
ಚಳಿ ಹೆಚ್ಚುತ್ತಿದ್ದಂತೆ ಸೋಂಕುಗಳ ಲಕ್ಷಣಗಳು ಎಲ್ಲೆಡೆ ತೀವ್ರವಾಗುತ್ತಿವೆ. ಸುಸ್ತು, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಮುಂತಾದವುಗಳದ್ದೇ ಕಾರುಭಾರು ಎಲ್ಲೆಡೆ. ಪ್ರೌಢರಲ್ಲೂ ಈ ಲಕ್ಷಣಗಳು ತೊಂದರೆ ಕೊಡುತ್ತವಾದರೂ ಮಕ್ಕಳಷ್ಟಲ್ಲ. ರೋಗ ನಿರೋಧಕ ಶಕ್ತಿ ಇನ್ನೂ ಬಲವಾಗದ ಎಳೆಯರಿಗೆ ಚಳಿಗಾಲದ ವೈರಸ್‌ಗಳು ನೀಡುವ ಕಾಟ ಒಂದೆರಡು ದಿನಗಳಿಗೆ ಮುಗಿಯುವುದೇ ಇಲ್ಲ. ಮೊದಲು ನೆಗಡಿಯೊ ಕೆಮ್ಮೊ ಶುರುವಾಗಿ ಮಾರನೇ ದಿನಕ್ಕೆ ಜೋರು ಜ್ವರ, ನಡುಕ, ಬೆನ್ನಿಗೇ ಗಂಟಲು ನೋವು ಅಥವಾ ತಲೆನೋವು ಇಲ್ಲವೇ ಕಿವಿ ನೋವು, ಏಳಲಾರದ ಸುಸ್ತು ಇತ್ಯಾದಿ ಇತ್ಯಾದಿ. ನಾಲ್ಕು ದಿನ ಕಾಡಿಸಿದ ಜ್ವರ ಹೇಗೊ ಬಿಟ್ಟರೂ, ಕಫ-ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು ತರುತ್ತದೆ. ಚಳಿಗಾಲದ ಸೋಂಕುಗಳು ಮಕ್ಕಳನ್ನು ಕಾಡದಂತೆ ತಡೆಯುವುದು ಹೇಗೆ? ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್‌ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ತ್ವರಿತವಾಗಿ. ಶಾಲೆಯಲ್ಲಿ ಅಥವಾ ಡೇ ಕೇರ್‌ನಲ್ಲಿ ಒಟ್ಟಿಗೆ ಆಡುವ, ಅಕ್ಕಪಕ್ಕ ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು…
ಕಳೆದ ವಾರ ಶಾಂತದಿಂದ ಇದ್ದ ಬಿಗ್ ಬಾಸ್ ಮನೆ ಇದೀಗ ಮತ್ತೆ ಅಶಾಂತಿ ಮೂಡಿದೆ. ವಿನಯ್ ಗೌಡ, ತನಿಷಾ ನಡುವೆ ಗಲಾಟೆ ಶುರುವಾಗಿದ್ದು, ತಾರಕಕ್ಕೇರಿದೆ. ಈ ಎಲ್ಲದಕ್ಕೂ ಮುನ್ನ ವರ್ತೂರ್ ಸಂತೋಷ್ ಮನೆಯ ಸ್ಪರ್ಧಿಯೊಬ್ಬರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಿಚನ್’ನಲ್ಲಿ ಕಾರ್ತಿಕ್ ಜೊತೆ ಮಾತನಾಡುತ್ತಿದ್ದ ವೇಳೆ, ವರ್ತೂರ್ ಸಂತೋಷ್ ಈ ಮಾತನ್ನು ಹೇಳಿದ್ದಾರೆ. ಅಂದಹಾಗೆ ಕಾರ್ತಿಕ್, ಸಂತೋಷ್ ಬಳಿ “ಈ ಮನೆಯಲ್ಲಿ ನವಗ್ರಹಗಳಿದ್ದೇವೆ. ಶನಿ ಯಾರು?” ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಂತೋಷ್, “ವಿನಯ್ ಗೌಡ ಮೊದಲನೇ ಶನಿ” ಎಂದಿದ್ದಾರೆ. ಅದಕ್ಕೆ ಮತ್ತೆ ಪ್ರಶ್ನೆ ಮಾಡಿದ ಕಾರ್ತಿಕ್, “ಎರಡನೇ ಶನಿ ಯಾರು?” ಎಂದಿದ್ದಾರೆ. ಅದಕ್ಕೆ ಸಂತೋಷ್ “ನಮ್ರತಾ ಎರಡನೇ ಶನಿ, ಮೂರನೇ ಶನಿ ಸಂಗೀತಾ” ಎಂದು ಹೇಳಿದ್ದಾರೆ.