Author: AIN Author

ಹಾವೇರಿ: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿದ್ದನ್ನು ಸ್ವಾಗತಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಲ್ಲಿ ವಾಲ್ಮೀಕಿ ಮಂದಿರವನ್ನು ಸಹ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಿದ್ದು ಸಂತಸ ನಾವು ಸ್ವಾಗತ ಮಾಡುತ್ತೇವೆ. https://ainlivenews.com/curry-leaves-are-good-for-cooking-and-good-for-health-this-has-many-benefits/ ಈ ಬಗ್ಗೆ ಈ ಹಿಂದೆಯೇ ನಾವು ಒತ್ತಾಯ ಮಾಡಿದ್ದೆವು. ಇದರೊಂದಿಗೆ ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿಯೂ ನಾವು ಡಿಮ್ಯಾಂಡ್ ಮಾಡಿದ್ದೇವೆ. ರಾಮನ ಪರಿಚಯ ಮಾಡಿಸಿದವರು ವಾಲ್ಮೀಕಿ. ಈಗ ಒಂದು ಹಂತಕ್ಕೆ ಬಂದಿದ್ದು ವಾಲ್ಮೀಕಿ ಮಂದಿರವೂ ಆಗಬೇಕು. ಈ ಕುರಿತಂತೆ ಸಭೆಯಲ್ಲಿ ಕೂಡಾ ಚರ್ಚೆ ಮಾಡಿದ್ದೇವೆ ಎಂದು ಜಾರಕಿಹೊಳಿ ತಿಳಿಸಿದರು. ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಮಂದಿರ ಆಗಿದೆ. ಬಹಳ ಜನರ ನಿರೀಕ್ಷೆ ಇತ್ತು. ಒಳ್ಳೆಯ ರೀತಿಯಲ್ಲಿ ತಯಾರಾಗಿದೆ. ಪ್ರತಿಷ್ಠಿತ ಮಂದಿರ ಆಗಿದೆ. ಬಹಳಷ್ಟು ಮಂದಿರದಲ್ಲಿ ಇದೂ ಒಂದಾಗಿದೆ. ಮಾರ್ಡನ್ ಅರ್ಕಿಟೆಕ್ ನಿಂದ ಕೂಡಿದೆ ಎಂದು ಜಾರಕಿಹೊಳಿ ತಿಳಿಸಿದರು.

Read More

ಹುಬ್ಬಳ್ಳಿ: ನಾರಾಯಣ ಪಾರಾಯಣ ಬಳಗದ ವತಿಯಿಂದ ವನಸಿರಿ ನಗರದ ಪ್ರೊ. ವಾಮನ ಬಾದ್ರಿ ಅವರ ನಿವಾಸದಲ್ಲಿ ಜ. 3 ಮತ್ತು 4ರಂದು ಸಂಜೆ 6ರಿಂದ 7 ಗಂಟೆಯವರೆಗೆ ಭಗವದ್ಗೀತೆಯ ಆರನೇ ಅಧ್ಯಾಯ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂ. ಶ್ರೀನಿಧಿ ಆಚಾರ ಬಲ್ಲರವಾಡ ಪಾರಾಯಣ ನಡೆಸಿಕೊಡುವರು. ಜ. 4ರಂದು ಸಂಜೆ 6 ಗಂಟೆಗೆ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭೀಮನಕಟ್ಟೆಯ ಶ್ರೀಮದ್ ಅಚ್ಯುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನದ ಶ್ರೀ ರಘುವರೇಂದ್ರ ತೀರ್ಥರು ಭಾಗವಹಿಸಿ ಅನುಗ್ರಹ ಸಂದೇಶ ನೀಡುವರು ಎಂದು ಬಳಗದ ಕಾರ್ಯದರ್ಶಿ ರಘೊತ್ತಮ ಅವಧಾನಿ ತಿಳಿಸಿದ್ದಾರೆ.

Read More

ಚಳಿಗಾಲವೆಂದರೆ ನಾವು ಸಾಕಷ್ಟು ಕಾಳಜಿ ವಹಿಸಬೇಕಾದ ಸಮಯ. ಏಕೆಂದರೆ ಚಳಿಗಾಲವು ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಮುಂತಾದ ಹಲವಾರು ರೀತಿಯ ಕಾಯಿಲೆಗಳ ಸಮಯ ಎಂದು ಹೇಳಲಾಗುತ್ತದೆ. ಮತ್ತು ಈಗ COVID-19 ಆಗಮನದೊಂದಿಗೆ, ನಾವು ಅನೇಕ ವೈರಲ್ ಸೋಂಕುಗಳ ವಿರುದ್ಧ ಹೋರಾಡಬೇಕಾಗಿದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ಇದು ನಿಮ್ಮ ದೇಹವನ್ನು ಬೆಚ್ಚಗಾಗಿಸುತ್ತದೆ. ಇದನ್ನು ಆಹಾರಕ್ಕೆ ಸೇರಿಸುವುದಲ್ಲದೆ, ಅರಿಶಿನವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕಿತ್ತಳೆ, ಅರಿಶಿನ ಮತ್ತು ವೆನಿಲ್ಲಾ ಮೊಸರು ಈ ಆರೋಗ್ಯಕರ ಪಾನೀಯವು ನಿಮ್ಮನ್ನು ದೀರ್ಘಕಾಲ ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ವೈರಲ್ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಆದರೆ ಅರಿಶಿನದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ನಿಮ್ಮನ್ನು ಬೆಚ್ಚಗಾಗಿಸುತ್ತದೆ. ಕಿತ್ತಳೆ ರಸ, ವಾಲ್್ನಟ್ಸ್, ವೆನಿಲ್ಲಾ ಮೊಸರು, ಜೇನುತುಪ್ಪ, ಅರಿಶಿನ, ವೆನಿಲ್ಲಾ ಸಾರ, ಬಾಳೆಹಣ್ಣು ಮತ್ತು ದಾಲ್ಚಿನ್ನಿ ನಯವಾದ ತನಕ ಮಿಶ್ರಣ ಮಾಡಿ, ಗಾಜಿನೊಳಗೆ ಸುರಿಯಿರಿ ಮತ್ತು ತಕ್ಷಣವೇ ಕುಡಿಯಿರಿ. ಅರಿಶಿನ ಹಾಲು ಗೋಲ್ಡನ್ ಮಿಲ್ಕ್ ಎಂದೂ ಕರೆಯಲ್ಪಡುವ ಅರಿಶಿನ…

Read More

ಹುಬ್ಬಳ್ಳಿ: ನಗರದ ಚಿನ್ಮಯ ವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ಆಚರಿಸಲಾಯಿತು. ಆಡಳಿತಾಧಿಕಾರಿ ವಿಶ್ವನಾಥ ರಾನಡೆ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕುವೆಂಪು ಸಾಹಿತ್ಯ ವಿಶ್ವಮಾನ್ಯ. ಅವರ ಸಮಗ್ರ ಸಾಹಿತ್ಯ ಓದಿದರೆ ಮನುಜನರು ವಿಶ್ವಪಥಕ್ಕೆ ಮರಳುವರು. ಜಾತಿ,ಮತ, ಪಂಥ ಮೀರಿದ ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕು ಎಂದರು. ಮುಖ್ಯೋಪಾಧ್ಯಾಯಿನಿ ನೀತಾ ಹೆಗಡೆ ಮಾತನಾಡಿದರು. ವಿದ್ಯಾರ್ಥಿನಿ ಸಿಂಚನಾ ಸಂಗಡಿಗರು ಭರತ ಭೂಮಿ ನನ್ನ ತಾಯಿ ಕವಿತೆ ಹಾಡಿದರು. ಅಮೂಲ್ಯ ಜೋಶಿ, ಸರಯೂ ಕುಲಕರ್ಣಿ ಅಭಿಪ್ರಾಯ ಹಂಚಿಕೊಂಡರು. ಶಿಕ್ಷಕರಾದ ಕೃಷ್ಣ ಮಲ್ಲಣ್ಣವರ, ಮೂಕಾಂಬಿಕಾ ಭಟ್ ಇತರರು ಇದ್ದರು.

Read More

ಹುಬ್ಬಳ್ಳಿ: ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಜ. 5ರಿಂದ 8ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಸೆಣಸಲಿರುವ ಆತಿಥೇಯ ಕರ್ನಾಟಕ ಹಾಗೂ ಪಂಜಾಬ್ ತಂಡಗಳ ಆಟಗಾರರು ತಡ ರಾತ್ರಿ ನಗರಕ್ಕೆ ಆಗಮಿಸಿದರು‌‌ ಕರ್ನಾಟಕ ತಂಡದ ಆಟಗಾರರು ಹಾಗೂ ಸಿಬ್ಬಂದಿ ಗೋಕುಲ ರಸ್ತೆ ವಿಮಾನ ನಿಲ್ದಾಣ ಬಳಿಯ ಫಾರ್ಚೂನ್ ಹೋಟೆಲ್​ನಲ್ಲಿ ಮತ್ತು ಪಂಜಾಬ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ವಿದ್ಯಾನಗರದ ಲೇಮನ್ ಟ್ರೀ ಹೋಟೆಲ್​ನಲ್ಲಿ ತಂಗಲಿದ್ದಾರೆ. ಉಭಯ ತಂಡಗಳ ಆಟಗಾರರು ಬುಧವಾರ ಮತ್ತು ಗುರುವಾರ ರಾಜನಗರ ಮೈದಾನದಲ್ಲಿ ಪಂದ್ಯ ಪೂರ್ವ ಅಭ್ಯಾಸ ನಡೆಸಲಿದ್ದಾರೆ. ಪ್ರಸಕ್ತ ರಣಜಿ ಋತುವಿನ ಆರಂಭಿಕ ಪಂದ್ಯ ಇದಾಗಿದ್ದು, ಹುಬ್ಬಳ್ಳಿ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಇದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಮೊದಲ ಬಾರಿ 2012ರಲ್ಲಿ ರಣಜಿ ಪಂದ್ಯ ನಡೆದಿತ್ತು. ಬಳಿಕ ಇಲ್ಲಿ ಹಲವು ರಣಜಿ ಪಂದ್ಯಗಳು, ಅಂತಾರಾಷ್ಟ್ರೀಯ ಚತುರ್ದಿನ (ಎ ತಂಡಗಳು) ಹಾಗೂ ಮಹಿಳಾ ತಂಡಗಳ ನಡುವೆ ಪಂದ್ಯಗಳು ನಡೆದಿವೆ.

Read More

ಹುಬ್ಬಳ್ಳಿ: ಯೂಟ್ಯೂಬ್ ಚಾನೆಲ್‌ಗಳನ್ನು ಶೇರ್, ಸಬ್‌ಸ್ಕ್ರೈಬ್ ಮಾಡಿ ಸ್ಕ್ರೀನ್‌ಶಾಟ್ ಕಳುಹಿಸಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ವಿದ್ಯಾನಗರದ ಪ್ರಶಾಂತ ಕುಲಕರ್ಣಿ ಅವರಿಗೆ ವಾಟ್ಸ್ ಆ್ಯಪ್ ನಂಬರ್‌ನಲ್ಲಿ ಸಂದೇಶ ಕಳುಹಿಸಿ ನಂಬಿಸಿದ ವಂಚಕರು, ಅವರಿಂದ 15.61 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಕೆಲವು ಟಾಸ್ಕ್ ನೀಡಿದ ವಂಚಕರು, ಅವುಗಳಿಗೆ ಹಣ ವರ್ಗಾಯಿಸಿದ್ದ. ಅದನ್ನೇ ನಂಬಿ ಪ್ರಶಾಂತ ಅವರು ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

2023ರ ವರ್ಷ ಮುಗಿದಿದ್ದು ವಿಶ್ವ ಕ್ರಿಕೆಟ್‌ನ ಎಲ್ಲಾ ಆಟಗಾರರು 2024ರಲ್ಲಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಇದರ ನಡುವೆ ಐಸಿಸಿ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಮಾತನಾಡಿದ್ದು, 2024 ರಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಮ್ ಅತಿ ಹೆಚ್ಚು ರನ್ ಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ನಾಸರ್ ಹುಸೇನ್ ಅವರು ತಮ್ಮ ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿಗೆ ಸ್ಥಾನ ಕಲ್ಪಿಸಿದ್ದಾರೆ. 2023ರಲ್ಲಿ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿ ಅಲ್ಲದೆ ಇಡೀ ವರ್ಷ ಉತ್ತಮ ಫಾರ್ಮ್‌ ನಲ್ಲಿದ್ದು ರನ್ ಶಿಖರ ನಿರ್ಮಿಸಿದ್ದರು. “ನಿಜಕ್ಕೂ ವಿರಾಟ್ ಕೊಹ್ಲಿಯೇ ನನ್ನ ಮೊದಲ ಆಯ್ಕೆಯಾಗಿದ್ದಾರೆ. ಅವರು 2023ರಲ್ಲಿ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಈ ವರ್ಷ ಕೊಹ್ಲಿ ಬಹುತೇಕ ದಾಖಲೆಗಳನ್ನು ಮುರಿದು ಗಮನ ಸೆಳೆದಿದ್ದಾರೆ. ಅಲ್ಲದೆ ಅವರ ಬ್ಯಾಟಿಂಗ್ ಮತ್ತಷ್ಟು ಆಕರ್ಷಿಸಿತು. ವಿರಾಟ್ ಕೊಹ್ಲಿ ಈ ರೀತಿ ಬ್ಯಾಟಿಂಗ್ ಪರಾಕ್ರಮ ತೋರಿದ್ದನ್ನು ನಾನು ಹಿಂದೆಂದೂ ನೋಡಿರಲಿಲ್ಲ.…

Read More

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಎಪಿಎಂಸಿ ಸಮಿತಿಗೆ ಅಧ್ಯಕ್ಷರಾಗಿ ಬಸವರಾಜ ಯಕಲಾಸಪುರ ಹಾಗೂ ಉಪಾಧ್ಯಕ್ಷರಾಗಿ ರಾಜಶೇಖರ ಬತ್ಲಿ ನೇಮಕಗೊಂಡಿದ್ದಾರೆ. ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Read More

ಮುಂಬೈ:- 97.38 ರಷ್ಟು 2ಸಾವಿರ ರೂ.ನ ಕರೆನ್ಸಿ ನೋಟುಗಳು ಡಿಸೆಂಬರ್ 29 ರವರೆಗೆ ಬ್ಯಾಂಕ್‌ಗಳಿಗೆ ಮರಳಿವೆ ಎಂದು ಆರ್‌ಬಿಐ ತಿಳಿಸಿದೆ. 2ಸಾವಿರ ರೂ.ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ನಂತರ ಶೇ.97.38 ನೋಟುಗಳನ್ನು ಡಿಸೆಂಬರ್ 29 ರವರೆಗೆ ಹಿಂತಿರುಗಿಸಲಾಗಿದೆ ಎಂದು ಆರ್​ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೇ 19, 2023 ರಂದು ವಹಿವಾಟು ಮುಕ್ತಾಯದ ಸಮಯದಲ್ಲಿ ಸುಮಾರು 3.56 ಲಕ್ಷ ಕೋಟಿ ಮೌಲ್ಯದ 2000 ನೋಟುಗಳು ಚಲಾವಣೆಯಲ್ಲಿದ್ದವು. ಡಿಸೆಂಬರ್ 29ಕ್ಕೆ ಇನ್ನೂ 9,330 ಕೋಟಿ ರೂ.ಬಾಕಿ ಇದೆ. ಆದರೆ 2023 ಮೇ 19 ಲಭ್ಯವಿರುವ ಎರಡು ಸಾವಿರ ನೋಟುಗಳಲ್ಲಿ ಶೇ.97.38ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ತಲುಪಿವೆ ಎಂದು ಆರ್‌ಬಿಐ ತಿಳಿಸಿದೆ. 2000 ಕರೆನ್ಸಿ ನೋಟುಗಳಿಗೆ ಇನ್ನೂ ಕಾನೂನು ಮಾನ್ಯತೆ ಇದೆ ಎಂದು ಆರ್‌ಬಿಐ ಬಹಿರಂಗಪಡಿಸಿದೆ. ನೋಟು ಅಮಾನ್ಯೀಕರಣದ ಸಮಯದಲ್ಲಿ ಪರಿಚಯಿಸಲಾದ 2ಸಾವಿರ ರೂ.ನೋಟುಗಳನ್ನು ಬ್ಯಾಂಕ್‌ಗಳು 2023 ರಲ್ಲಿ ಹಿಂಪಡೆಯಲು ಪ್ರಾರಂಭಿಸಿದವು. ಕಳೆದ ವರ್ಷ ಅಕ್ಟೋಬರ್ 7ರವರೆಗೆ ಎಲ್ಲಾ ಬ್ಯಾಂಕ್‌ಗಳಲ್ಲಿ ಎರಡು ಸಾವಿರ ನೋಟುಗಳು ಜಮೆ…

Read More

ದಾವಣಗೆರೆ: ಕೋರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಆರೋಪ ಸಾಬೀತು ಮಾಡಿ. ನೀವು ಮಾಡಿರುವ ಆರೋಪಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬನ್ನಿ, ನಾನೂ ಬರ್ತೀನಿ ಎಂದು ಯತ್ನಾಳಗೆ ಸವಾಲು ಹಾಕಿದರು. ಇನ್ನು ವಿಜಯಪುರದಲ್ಲಿ ಪ್ರಭಾವಿ ಸಚಿವರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸರ್ಕಾರದಲ್ಲಿ ಕೆಲಸ ಮಾಡಿಕೊಂಡು ಆರೋಪ ಮಾಡೋದು ಬಿಡಬೇಕು. https://ainlivenews.com/curry-leaves-are-good-for-cooking-and-good-for-health-this-has-many-benefits/ ಕೋವಿಡ್ ನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ರೂ ಹಗರಣ ನಡೆದಿದೆ ಎಂದಿದ್ದಾರೆ. ಆಗ ಇವರು ಶಾಸಕರಾಗಿದ್ದರು. ನಾವು ಕೂಡ ಮಾಸ್ಕ್, ಆಕ್ಸಿಜೆನ್ ಸೇರಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಸದನದಲ್ಲಿಯೇ ದಾಖಲೆ ತೋರಿಸಿದ್ದೇವೆ. ಯತ್ನಾಳ…

Read More