ಬಳ್ಳಾರಿ: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ (Biscuit Factory) ಬಾಯ್ಲರ್ (Boiler) ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ. ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಅವಘಡ ಸಂಭವಿಸಿದೆ. ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಸಲೀಂ ಎನ್ನುವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. https://ainlivenews.com/rowdysheeter-arrested-by-kylie-machi-and-shouting-at-a-woman/ ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ನಗರದ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಬಾಯ್ಲರ್ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Author: AIN Author
ಬೆಂಗಳೂರು: ಜೆಟ್ಲಾಗ್ ನಲ್ಲಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಪ್ರಕರಣ ಹಿನ್ನೆಲೆ ತನಿಖಾ ವರದಿ ತಯಾರು ಮಾಡಿರೋ ಸುಬ್ರಮಣ್ಯನಗರ ಪೊಲೀಸರು ರಿಪೋರ್ಟ್ ನೀಡೋಕೆ ಮಲ್ಲೇಶ್ವರಂ ಎಸಿಪಿಗೆ ಸೂಚಿಸಿದ್ದ ಕಮೀಷನರ್ ದಯಾನಂದ್ ಸ್ಟಾರ್ ಗಳ ಹೇಳಿಕೆ ಹಾಗೂ ಸಿಬ್ಬಂದಿ ತನಿಖಾ ವರದಿ ಕೇಳಿದ್ದ ಕಮೀಷನರ್ ನಾಳೆ (ಮಂಗಳವಾರ) ತನಿಖಾ ವರದಿ ಸಲ್ಲಿಕೆಗೆ ಸಿದ್ಧತೆ ಮಾದಕ ವಸ್ತು ಬಳಕೆ ಬಗ್ಗೆ ಸ್ಟಾರ್ ಗಳಿಗೆ ಪ್ರಶ್ನೆ ಮಾಡಿದ್ದ ಪೊಲೀಸರು..! ತಡರಾತ್ರಿ ವರೆಗೂ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಾಹಿತಿ ಕೇಳಿರೊ ಖಾಕಿ ಪಾರ್ಟಿಯಲ್ಲಿ ಮಾದಕ ವಸ್ತು ಬಳಸಿರಬಹುದು ಎಂಬ ಶಂಕೆ ಹೀಗಾಗಿ ಗಾಂಜಾ ಸೇವನೆ ಬಗ್ಗೆ ಸ್ಟಾರ್ ನಟರನ್ನ ಪ್ರಶ್ನೆ ಮಾಡಿದ್ದ ಪೊಲೀಸರು ಗಾಂಜಾ ಪ್ರಶ್ನೆಗೆ ದರ್ಶನ್ ಗರಂ ಆಗಿದ್ರಂತೆ!ಗಾಂಜಾ ಬಗ್ಗೆ ಯಾಕೆ ಕೇಳ್ತಿದ್ದೀರಾ..? ಯಾವುದಾದ್ರೂ ಮಾಧ್ಯಮದಲ್ಲಿ ಬಂದಿದ್ಯಾ ಅಂತಾ ಗರಂ ಆಗಿದ್ದ ದರ್ಶನ್ ಅಲ್ಲಿ ಯಾವುದೇ ರೀತಿ ಮಾದಕ ವಸ್ತು ಸೇವನೆ ಆಗಿಲ್ಲ ಅಂತ ಉತ್ತರ ನೀಡಿದ್ದ ದರ್ಶನ್. ಊಟ, ಸಿನಿಮಾ ವಿಚಾರದ ಮಾತುಕತೆ ಎಂದಿರೋ ಸ್ಟಾರ್ಸ್…
ಹುಬ್ಬಳ್ಳಿ: ಅಯೋಧ್ಯೆಯಲ್ಲಿ (Ayodhya) ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಭಾಗವಾಗಿ ಬಿಜೆಪಿ ದೇಶಾದ್ಯಂತ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿಗೊಳಿಸುವ ʻಸ್ವಚ್ಛ ತೀರ್ಥʼ ಅಭಿಯಾನ (Swachh Teerth Campaign) ಹಮ್ಮಿಕೊಂಡಿದೆ. ಪಕ್ಷದ ನಾಯಕರು (BJP Leaders), ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ದೇಶದ ವಿವಿಧ ಭಾಗಗಳಲ್ಲಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಖ್ಯಾತ ಬಾಲಿವುಡ್ ನಟರೂ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರುವಾಗ ದೇಶಾದ್ಯಂತ ಸಂಭ್ರಮದ ವಾತಾವರಣ ಮೂಡಿಸಲು ಬಿಜೆಪಿ ಈ ಅಭಿಯಾನ ಕೈಗೊಂಡಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಸೋಮವಾರ ಹುಬ್ಬಳ್ಳಿಯ ಸಾಯಿನಗರ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ಮೂಲ ಗದ್ದುಗೆ ಮಠದ ಆವರಣದಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿ ತಮ್ಮ ಸೇವೆ ಸಲ್ಲಿದ್ದಾರೆ. ಬಿಜೆಪಿ ಹುಬ್ಬಳ್ಳಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಾನಗರ…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆಗೆ ಅವಾಜ್ ಹಾಕಿ ಬೆದರಿಕೆ ಹಾಕಿದ ರೌಡಿಶೀಟರ್ ಮುತ್ತು ಮುರಳಿ ಅಲಿಯಾಸ್ ಮುರುಳಿಯನ್ನ ಪೊಲೀಸರು ಬಂಧಿಸಿದ್ದಾರೆ. ವರ್ತೂರು ಪೊಲೀಸರು ಆರ್ಮ್ ಆಕ್ಟ್ ಅಡಿಯಲ್ಲಿ ಬಂಧಿಸಲಾಗಿದೆ. ಮಹದೇವಪುರದ ಪಣತ್ತೂರು ದಿನ್ನೆಯಲ್ಲಿ ರೌಡಿಶೀಟರ್ ಮುತ್ತುನ ಅಟ್ಟಹಾಸ ಮೆರೆದಿದ್ದು, ರೌಡಿ ಮುತ್ತು ಪ್ರತಿನಿತ್ಯ ಕುಡಿದು ಅಕ್ಕಪಕ್ಕದ ಮನೆಗಳಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದ. ಮದ್ಯಾಹ್ನವೇ ಇಸ್ಪೀಟ್ ಮತ್ತು ಗಾಂಜಾ ಸೇವಿಸಿ ನೆರೆಹೊರೆ ಜನರಿಗೆ ಕಿರುಕುಳ ನೀಡುತ್ತಿದ್ದ. ಪ್ರಶ್ನಿಸಿದಕ್ಕೆ ಎದುರು ಮನೆ ಮಹಿಳೆಗೆ ಅವಾಜ್ ಹಾಕಿದ್ದಾನೆ. ಲಾಂಗ್ ಹಿಡಿದು ಮಹಿಳೆಗೆ ಅವಾಜ್ ಹಾಕುತ್ತಿರುವ ವಿಡೀಯೋ ವೈರಲ್ ಆಗಿದ್ದು, ವಿಡೀಯೋ ವೈರಲ್ ಆದ್ರೂ ಕಂಡು ಕಾಣದಂತೆ ವರ್ತೂರು ಪೊಲೀಸರು ವರ್ತಿಸುತ್ತಿದ್ದಾರೆ. ಅಲ್ಲದೇ ವರ್ತೂರು ಪೊಲೀಸರು ರೌಡಿಶೀಟರ್ ಮುತ್ತುಗೆ ಹೆದರುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಬಿಜೆಪಿ ಮಾಜಿ ಸಚಿವ ಕೆ.ಸುಧಾಕರ್ ಅವರು ಭೇಟಿ ಮಾಡಿದರು. ಮಾಜಿ ಸಚಿವ ಸುಧಾಕರ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಬಿಡದಿ ತೋಟದ ಮನೆಯಲ್ಲಿ ಹೆಚ್‌ಡಿಕೆ ಭೇಟಿಯಾಗಿ ಮಾತುಕತೆ ನಡೆಸಿದ ಉಭಯ ನಾಯಕರು. ಪ್ರಸ್ತುತ ರಾಜಕೀಯ ವಿದ್ಯಾಮನಗಳ ಬಗ್ಗೆ ಚರ್ಚೆ ಹಾಗೆ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಸಿದರು.
ಮುಂಬೈ: ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಮಿಲಿಂದ್ ದಿಯೋರಾ ಅವರು ಶಿವಸೇನೆ (Shivasene) ಸೇರ್ಪಡೆಯಾಗಲಿದ್ದಾರೆ ಎಂಬ ಗುಮಾನಿ ಎದ್ದಿದೆ. ಈ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ದಿಯೋರಾ ಅವರು ಕಾಂಗ್ರೆಸ್ (Congress) ತೊರೆದ ವಿಚಾರ ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಅವರು ಶಿವಸೇನೆಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ದಕ್ಷಿಣ ಮುಂಬೈನ ಮಾಜಿ ಸಂಸದ ಮಿಲಿಂದ್ ದಿಯೋರಾ (Milind Deora) ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆ ಬಣದ ನಡುವಿನ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರದಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ. ದಿಯೋರಾ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ಸಾಧ್ಯತೆ ಇದೆ ಎಂದು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ.…
ಬೆಂಗಳೂರು: ಕೆಂಗೇರಿ ಹೋಬಳಿಯ ಸೋಂಪುರದಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಕಡಲೆಕಾಯಿ ಪರಿಷೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾಗವಹಿಸಿದ್ದರು. ಹಾಗೆ ದೇವರ ದರ್ಶನಾಶೀರ್ವಾದ ಪಡೆಯಲಾಯಿತು. ವರ್ಷದ ಮೊದಲ ಹಬ್ಬ ಸಂಕ್ರಮಣದಂದು ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಕೆ.ಆರ್.ಐ.ಡಿ.ಎಲ್ ಮಾಜಿ ಅಧ್ಯಕ್ಷರಾದ ಶ್ರೀ ಎಂ.ರುದ್ರೇಶ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಜಿ ಮರಿಸ್ವಾಮಿ ಅವರು, ಸ್ಥಳೀಯ ಮುಖಂಡರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ಕೊಪ್ಪಳ: ಸಿಎಂ ಸಿದ್ದರಾಮಯ್ಯ ಮುಂದೆ ಸಂಸದ ಅನಂತ್ ಕುಮಾರ್ ಹೆಗಡೆ ಪುಟಗೋಸಿಗೆ ಸಮನಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಮಾತನಾಡುವ ನಿಮ್ಮಂಥ ನಾಯಿಗಳಿಗೆ ನಾನು ಅಲ್ಲಿಗೆ ಬಂದು ಉತ್ತರ ಕೊಡಬೇಕಾಗುತ್ತೆ ಮಗನೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ. ಕೊಪ್ಪಳ (Koppal) ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅನಂತ್ ಕುಮಾರ್‌ಗೆ ಅವನದೇ ಭಾಷೆಯಲ್ಲಿ ಉತ್ತರ ಕೊಡಲು ನನಗೂ ಬರುತ್ತೆ. ಆದರೆ ನನ್ನ ಹಿರಿಯರು ನನಗೆ ಸಂಸ್ಕಾರ ಕಲಿಸಿದ್ದಾರೆ. ಅದಕ್ಕಾಗಿ ಅವನಿಗೆ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತಿಲ್ಲ. ಬದಲಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ಮೊದಲು ಮತ್ತು ಕೊನೆ. ಸಿದ್ದರಾಮಯ್ಯ ಬಗ್ಗೆ ಅವನು ಮಾತನಾಡಬಾರದು. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಸಿದ್ದರಾಮಯ್ಯ ಅವರಿಗೆ ಆಗಿರುವ ಅನುಭವದಷ್ಟು ಅವನಿಗೆ ವಯಸ್ಸಾಗಿಲ್ಲ. ಅವರ ಕಾಲಿನ ಧೂಳಿಗೂ ಹೆಗಡೆ ಸಮನಲ್ಲ. ನಾನೂ ಕೂಡ ಹೀಗೆ ಮಾತನಾಡಬಾರದು. ಆದರೆ ಅವನಾಡಿದ ಮಾತಿನಿಂದ ನೋವಾಗಿ ಹೀಗೆ ಹೇಳಿದ್ದೇನೆ. ಇಂಥ ನಾಯಿಗಳಿಗೆ ನಾವು ಬುದ್ಧಿ…
ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ. ನಾಲ್ಕೂವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ (Congress) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಮುಂದುವರಿಸುವ ಅನಂತ್ ಕುಮಾರ್ ಹೆಗಡೆಯಂತಹ ಕ್ರಿಮಿ ಕೀಟಗಳು ಈ ದೇಶಕ್ಕೆ ಕ್ಯಾನ್ಸರ್‌ನಂತೆ ಕಾಡುತ್ತವೆ. ಈ ಕ್ಯಾನ್ಸರ್‌ಗೆ ಸಂವಿಧಾನದಲ್ಲಿ ಔಷಧವಿದೆ ಎಂದು ವಾಗ್ದಾಳಿ ನಡೆಸಿದೆ ಕಾಂಗ್ರೆಸ್ ಪಕ್ಷದ ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ. ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದು ಹರಿಹಾಯ್ದಿದೆ
ಆರ್.ಎಸ್.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ಅವರು ನಿರ್ಮಿಸುತ್ತಿರುವ ಉಸಿರು (Usiru) ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ, ಲಕ್ಷ್ಮಿ ಹರೀಶ್ ಅವರು ನೂತನ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಉಸಿರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತಿರುವ ಈ ಚಿತ್ರದ ಪೋಸ್ಟರ್ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕ ಪ್ರಭಾಕರ್ (Prabhakar) ಹೇಳಹೊರಟಿದ್ದಾರೆ, ಸುಮಾರು 6 ತಿಂಗಳವರೆಗೆ ವರ್ಕ್ ಷಾಪ್ ನಡೆಸಿ ತಯಾರಾಗಿರುವ ಚಿತ್ರತಂಡ ಇದೇ ತಿಂಗಳ 17ರಿಂದ ಮಡಿಕೇರಿಯಲ್ಲಿ …