ಚಾಮರಾಜನಗರ:- ಮಕರ ಸಂಕ್ರಾಂತಿಯಂದು ಹುಲುಗನಮುರುಡಿ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿದೆ. ದಕ್ಷಿಣ ಶೇಷಾದ್ರಿ ಎನಿಸಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯಲ್ಲಿರುವ ಹುಲಗನಮುರಡಿ ಬೆಟ್ಟದಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ರಥೋತ್ಸವ ಸಂಭ್ರಮ ಮನೆ ಮಾಡಿದೆ. ಚಾಮರಾಜನಗರ ಜಿಲ್ಲೆಯಲ್ಲಿ ವರ್ಷದ ಮೊದಲನೇ ಜಾತ್ರೆ ಇದಾಗಿದ್ದು, ವಿಜೃಂಭಣೆಯಿಂದ ಜರುಗಿದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದರು. ರಥಕ್ಕೆ ಹಣ್ಣು ಧವನ ಎಸೆದು ಪೂಜೆ ಸಲ್ಲಿಕೆ ಮಾಡಲಾಗಿದ್ದು, ತಿರುಪತಿಗೆ ಹೋಗಲಾರದವರು ಹುಲಗನಮುರಡಿ ವೆಂಕಟರಮಣನ ದರ್ಶನ ಮಾಡಿದರೆ ತಿರುಪತಿಗೆ ಹೋದಷ್ಟೆ ಪುಣ್ಯ ಎಂಬ ನಂಬಿಕೆ ಇದೆ. ರಾಜ್ಯದ ವಿವಿಧೆಡೆ ಹಾಗು ನೆರೆಯ ತಮಿಳುನಾಡಿನಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದಾರೆ.
Author: AIN Author
ಚಾಮರಾಜನಗರ:- ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಿಚ್ಚು ಆಯಿಸುವ ಮೂಲಕ ರೈತರು ಮಕರ ಸಂಕ್ರಾಂತಿ ಹಬ್ಬ ಆಚರಿಸಿ ಸಂಭ್ರಮಿಸಿದರು. ಗಡಿ ಜಿಲ್ಲೆಯ ರೈತರಿಂದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಸಂಕ್ರಾಂತಿಯಲ್ಲಿ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಆಯಿಸೋದು ವಾಡಿಕೆ ಇದ್ದು, ರೈತ ಕುಟುಂಬದಿಂದ ಗೋವುಗಳಿಗೆ ಭಕ್ತಿಯಿಂದ ಪೂಜೆ ಮಾಡಲಾಗಿದೆ. ಪೂಜೆ ನಂತರ ಬೆಂಕಿಯಲ್ಲಿ ಓಡಿಸಿ ಕಿಚ್ಚು ಆಯಿಸೋದು ಪದ್ದತಿ. ಜಾನುವಾರುಗಳನ್ನು ಬೆಂಕಿಯ ನಡುವೆ ಓಡಿಸಿ ಸಂಕ್ರಾಂತಿ ಹಬ್ಬವನ್ನು ಗಡಿ ಜಿಲ್ಲೆಯ ರೈತರು ಆಚರಣೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಹೋಬಳಿಯ ಹೆಗ್ಗವಾಡಿಪುರದಲ್ಲಿ ರೈತರು ಸಂಭ್ರಮಿಸಿ, ಗ್ರಾಮದೊಳಗೆ ಕಿಚ್ಚು ಹಾಯಿಸಿದ್ದಾರೆ. ಮಕರ ಸಂಕ್ರಾಂತಿ ಹಬ್ವದಂದು ಜಾನುವಾರುಗಳ ಜೊತೆ ಕಿಚ್ಚು ಆಯಿಸಿದರೆ ರೋಗ ರುಜಿನಗಳಿಂದ ಮುಕ್ತ ಎಂಬ ಪ್ರತೀತಿ ಇದ್ದು, ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಕಿಚ್ಚು ಆಯಿಸೋದು ಪ್ರತೀತಿ ಆಗಿದೆ. ಅದರಂತೆ ಗ್ರಾಮೀಣ ಭಾಗದಲ್ಲಿ ರೈತರಿಂದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.
ಧಾರವಾಡ- ರೈತರ ಪಾಲಿನ ಸುಗ್ಗಿ ಹಬ್ಬ ಹಾಗೂ ವರ್ಷದ ಮೊದಲ ಹಬ್ಬವಾದ ಸಂಕ್ರಮಣ ಹಬ್ಬವನ್ನು ಧಾರವಾಡ ತಾಲೂಕಿನ ಶಿರೂರು ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಸಂಕ್ರಮಣ ಹಿನ್ನೆಲೆಯಲ್ಲಿ ಗ್ರಾಮದ ಬಾಲಲೀಲ ಸಂಗಮೇಶ್ವರನಿಗೆ ಮುಂಜಾನೆಯಿಂದ ವಿಶೇಷ ಪೂಜೆಗಳು ನೇರವೆರಿದ್ದು, ಸಹಸ್ರಾರು ಭಕ್ತರು ವಿಶೇಷ ಪೂಜೆ ಸಕ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು. ಇನಾಂಹೊಂಗಲ ವಿರಕ್ತಮಠದ ಶಿದ್ದಲಿಂಗ ಸ್ವಾಮೀಜಿ, ಗರಗ ಗ್ರಾಮ ಕಲ್ಮಠದ ಪ್ರಶಾಂತ ದೇವರು ಅವರ ಸಾನಿಧ್ಯದಲ್ಲಿ ಬಾಲಲೀಲ ಸಂಗಮೇಶ್ವರನ ದೇವಸ್ಥಾನ ಬಳಿಯ ತುಂಬ ಹರಿಯುತ್ತಿದ್ದ ಮಲಪ್ರಭಾ ಕಾಲುವೆಯಲ್ಲಿ ತೇಪೋತ್ಸ ನಡೆಯಿತು. ತೇಪೋತ್ಸ ವೇಳೆ ಭಕ್ತರೆಲ್ಲರು ಶ್ರೀ ಬಾಲಲೀಲ ಸಂಗಮೇಶ್ವರಕಿ ಜೈ ಎಂಬ ಘೋಷಣೆ ಕೂಗಿ ದೇವರ ಕೃಪೆಗೆ ಪಾತ್ರರಾದರು. ಇನ್ನೂ ತೇಪೋತ್ಸವ ಕಾರ್ಯಕ್ರಮದಲ್ಲಿ ನವಲಗುಂದ ಸೇರಿದಂತೆ ಅಕ್ಕ ಪಕ್ಕದ ತಾಲೂಕಿನ ಗ್ರಾಮಸ್ಥರೆಲ್ಲರು ಭಾಗಿಯಾಗಿ ಇಷ್ಟಾರ್ಥ ಸುದ್ಧಗೆ ಪ್ರಾರ್ಥಿಸಿಕೊಂಡರು.
ಹಾವೇರಿ :- ಸಾರ್ವತ್ರಿಕ ಮೂಲ ಆದಾಯದ ತತ್ವದ ಆಧಾರದ ಮೇಲೆ ಎಲ್ಲರಿಗೂ ಕೊಳ್ಳುವ ಶಕ್ತಿ ಬರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶ್ರೀ ನೊಳಂಬ ಲಿಂಗಾಯತ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿರುವ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ 851 ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರ ಎಲ್ಲಾ ಸಮಾಜದಲ್ಲಿನ ಬಡವರನ್ನು ಮುಖ್ಯ ವಾಹಿನಿಗೆ ತಂದು, ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಬೇಕು ಎಂದು ಪ್ರಯತ್ನ ಮಾಡುತ್ತಿದೆ. ಅನುಭವ ಮಂಟಪದಲ್ಲಿ ಸಮಸಮಾಜ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳಾಗುತ್ತಿತ್ತು. ಅಂಥ ಸಮಾಜವನ್ನು ಬಸವಾದಿ ಶರಣರು, ಸಿದ್ದರಾಮೇಶ್ವರರು ಬಯಸಿದ್ದರು ಎಂದರು. ಆತ್ಮಾವಲೋಕನ ಅಗತ್ಯ:+ ಶಿವಯೋಗಿ ಸಿದ್ದರಾಮೇಶ್ವರರು ಬಸವಣ್ಣನವರ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 12 ನೇ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸಿ ಜೀವನದ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಜೀವನ ಮೌಲ್ಯಗಳನ್ನು ಮಾವು ಅರಿಯಬೇಕು. ಹುಟ್ಟು ಆಕಸ್ಮಿಕ, ಸಾವು ಖಚಿತವಾದರೂ ಹುಟ್ಟು…
ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಹುಡುಗಿಯ ಭಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಉರಿ ತಹಸಿಲ್‌ನ ಮುಸ್ಲಿಂ ಸೈಯದ್ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿನಿ ಸೈಯದಾ ಬಟೂಲ್ ಝೆಹ್ರಾ (19)ಗಾಯಕ ಜುಬಿನ್ ನೌಟಿಯಾಲ್ ಹಾಡಿದ ಭಜನೆಯಿಂದ ಸ್ಫೂರ್ತಿ ಪಡೆದು ಪಹಾರಿ ಭಾಷೆಯಲ್ಲಿ ಹಾಡಿದ ಸುಮಧುರ ರಾಮ ಭಜನೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಚರ್ಚೆಯ ವಿಷವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ದೇಶದೆಲ್ಲೆಡೆ ರಾಮ ನಾಮ ಜಪ ತೀವ್ರವಾಗಿರುವ ವೇಳೆ ಜಮ್ಮು ಮತ್ತು ಕಾಶ್ಮೀರದ ಮುಸ್ಲಿ ಹುಡುಗಿಯೊಬ್ಬಳು ಹಾಡಿರುವ ರಾಮ ಭಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. https://twitter.com/ANI/status/1746751421884874838?ref_src=twsrc%5Etfw%7Ctwcamp%5Etweetembed%7Ctwterm%5E1746751421884874838%7Ctwgr%5Ec1d71e66d7f92e1e7dc5dc38ed45624d2f50bd3f%7Ctwcon%5Es1_c10&ref_url=https%3A%2F%2Fd-38348583743295711021.ampproject.net%2F2312191621000%2Fframe.html ಕುಪ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಝೆಹ್ರಾ, “ಇತ್ತೀಚೆಗೆ, ನಾನು ರಾಮ್ ಭಜನ್ ಹಾಡಿದ್ದೇನೆ ಅದು ವೈರಲ್ ಆಗಿದೆ. ಗಾಯಕ ಜುಬಿಯಾನ್ ನೌಟಿಯಲ್ ಅವರು ಹಿಂದಿಯಲ್ಲಿ ಹಾಡಿದ ರಾಮ್ ‘ಭಜನ್’ ಪಹಾರಿಯಲ್ಲಿ ಅದರ ಆವೃತ್ತಿಯನ್ನು ರಚಿಸಲು ಪ್ರೇರೇಪಿಸಿತು ಎಂದರು. “ನಾನು ಯೂಟ್ಯೂಬ್‌ನಲ್ಲಿ ಜುಬಿನ್ ನೌಟಿಯಾಲ್ ಅವರ ಹಿಂದಿ ಭಜನ್ ಅನ್ನು ನೋಡಿದೆ. ನಾನು ಅದನ್ನು ಮೊದಲು ಹಿಂದಿಯಲ್ಲಿ ಹಾಡಿದೆ ಬಳಿಕ…
ಶಿವಮೊಗ್ಗ:- ಮಧು ಬಂಗಾರಪ್ಪ ಸಣ್ಣತನದ ರಾಜಕಾರಣ ಮತ್ತು ಅಧಿಕಾರಿಗಳನ್ನು ಬೆದರಿಸುವುದು ನಿಲ್ಲಿಸಬೇಕು ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಚಿವ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಅಧಿಕಾರಿಗಳ ಮೇಲೆ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ 100 ಬಿಎಸ್ ಎನ್ ಎಲ್ ಟಾವರ್ಗಳಿಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ತಾವು ಕ್ಲೀಯರನ್ಸ್ ಕೊಡಿಸಿದ್ದು ಇನ್ನೇನು ಕೆಲಸ ಆರಂಭಾವಾಗಲಿದೆ ಎಂದ ರಾಘವೇಂದ್ರ, ಮಧು ಬಂಗಾರಪ್ಪ ಅಧಿಕಾರಿಗಳನ್ನು ಹೆದರಿಸುವ ಭಯ ಹುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆಂದು ಹೇಳಿದರು. ತಾನು ನಡೆಸುವ ಸಭೆಗಳಿಗೆ ಹಾಜರಾಗುವ ಆಧಿಕಾರಿಗಳಿಗೆ ಮಧು ಬಂಗಾರಪ್ಪ ಗದರುತ್ತಾರೆ, ಮೀಟಿಂಗ್ ಹಾಜರಾಗಬಾರದೆಂದು ತಾಕೀತು ಮಾಡುತ್ತಾರೆ ಎಂದು ರಾಘವೇಂದ್ರ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಇಂಥ ಸಣ್ಣತನ ಪ್ರದರ್ಶಿಸಬಾರದು ಎಂದು ಸಂಸದ ಖಾರವಾಗಿ ಹೇಳಿದರು.
ದಾವಣಗೆರೆ:- ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ ಎಂದು ಹೇಳುವ ಮೂಲಕ ಸಂಸದ ಸಿದ್ದೇಶ್ವರ್ ಗೆ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಂಸದ ಸಿದ್ದೇಶ್ವರ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ತಮಗೆ ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ ಎಂದು ಟಾಂಗ್ ಕೊಟ್ಟಿದ್ದಾರೆ. ಅನ್ನದಲ್ಲಿ ವಿಷ ಹಾಕಿ ಮುಗಿಸ್ತಾರೆ ಅಂತಾ ಸಂಸದರು ಹೇಳಿಕೊಂಡಿದ್ದಾರೆ. ಜಿ.ಎಂ.ಸಿದ್ದೇಶ್ವರ ತಂದೆ ಮಲ್ಲಿಕಾರ್ಜುನಪ್ಪ ಬಗ್ಗೆ ನನಗೆ ಗೌರವವಿದೆ. ಅವರು 2 ಸಲ ಸಂಸದರಾಗಿದ್ದರು, ಸಿದ್ದೇಶ್ವರ 4 ಬಾರಿ ಸಂಸದರಾಗಿದ್ದಾರೆ. ದಾವಣಗೆರೆ ಸಂಸದ ಸಿದ್ದೇಶ್ವರ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹೀಗಾಗಿ ಈ ಬಾರಿ ದಾವಣಗೆರೆ ಜಿಲ್ಲೆಯವರಿಗೆ ಅವಕಾಶ ಕಲ್ಪಿಸಲಿ. ಪಕ್ಷದ ವರಿಷ್ಠರು ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವೆ ಮಾಡಲಿ. ಸರ್ವೆಯಲ್ಲಿ ಯಾರ ಹೆಸರು ಬರುತ್ತೋ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿ ಎಂದು ಹೇಳುವ ಮೂಲಕ ಈ ಬಾರಿ ಯುವಕರಿಗೆ ಅವಕಾಶಕೊಡಿ ಎಂದರು. ಈ ಮೂಲಕ ರೇಣುಕಾಚಾರ್ಯ ಅವರು ಪರೋಕ್ಷವಾಗಿ ದಾವಣಗೆರೆ…
ಚಿಕ್ಕಬಳ್ಳಾಪುರ:- ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲಾಗ್ತಿಲ್ಲ, ಇದು ನನ್ನ ದುರದೃಷ್ಟ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ, ಆದರೆ ಹೋಗಲಾಗುತ್ತಿಲ್ಲ. ಇದು ದುರದೃಷ್ಟಕರ ಎಂದು ಈಶಾ ಸಂಸ್ಥಾಪಕ ಜಗ್ಗಿ ವಾಸುದೇವ್ ಹೇಳಿದರು. ನನಗೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗದಿ ಕಾರ್ಯಕ್ರಮ ಇರುವ ಕಾರಣದಿಂದ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲಾಗುತ್ತಿಲ್ಲ. ಇದು ನನ್ನ ದುರದೃಷ್ಟ, ನಾನು ಹೋಗಲಾಗುತ್ತಿಲ್ಲ ಅಂತ ಸ್ಪಷ್ಟಪಡಿಸಿದರು
ಬೆಂಗಳೂರು:- ಹಾವೇರಿ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸರ್ಕಾರದ ಉಡಾಫೆ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಹಾವೇರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ತನಿಖೆಗೆ ಸರ್ಕಾರ ಎಸ್‍ಐಟಿ ರಚನೆ ಮಾಡಬೇಕು ಎಂದರು. ಹಾವೇರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇಪದೇ ಈ ರೀತಿಯ ಘಟನೆಗಳು ಆಗುತ್ತಿವೆ. ಬೆಳಗಾವಿ ಹಾಗೂ ಹಾವೇರಿಯ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಘಟನೆಗಳು ನಾಚಿಕೆಗೇಡಿನ ಸಂಗತಿಯಾಗಿವೆ. ಈ ತಿಂಗಳ 7ರಂದು ಈ ಘಟನೆ ನಡೆದಿದೆ. ಈಗ ಒಂದು ವಾರ ಕಳೆದರೂ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ಎಫ್‍ಐಆರ್ ಕೂಡ ದಾಖಲಿಸಿಲ್ಲ. ಮತ್ತೊಂದು ಕಡೆ ಈ ದುರ್ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನ ಆಗುತ್ತಿದೆ. ಇದು ಬೇಸರದ ಮತ್ತು ಖಂಡನೀಯ ವಿಚಾರ ಎಂದಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಇದು ಗಂಭೀರವಾದ ವಿಚಾರವಾಗಿದ್ದು, ಇದನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸಿದೆ. ಪೊಲೀಸರು ರಾಜ್ಯ ಕಾಂಗ್ರೆಸ್ ಸರ್ಕಾರದ ತಾಳಕ್ಕೆ…
ಸಾಕಷ್ಟು ಜನ ರೈತರು ಬೆಳೆದ ಏಳನೀರು ಬಿಟ್ಟು ಪೆಪ್ಸಿ, ಕೋಕಾ ಕೋಲಾದಂತಹ ಐಷಾರಾಮಿ ಕಂಪನಿಗಳ ಪಾನೀಯಗಳ ಆಸ್ವಾದಿಸುತ್ತಾರೆ. ಬೇಸಿಗೆಯಲ್ಲಿ ತಣ್ಣನೆಯ ಅನುಭವ ನೀಡಲಿದೆ ಎಂಬ ಮಾತ್ರಕ್ಕೆ ಈ ತಂಪು ಪಾನೀಯಗಳಿಗೆ ಜನರು ಮರುಳಾಗುತ್ತಿದ್ದಾರೆ. ಆದರೆ ಈ ತಂಪು ಪಾನೀಯಗಳು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ ಎಂಬುದನ್ನು ನೀವು ತಿಳಿದರೆ ಇನ್ನೆಂದು ಅದರ ತಂಟೆಗೂ ಹೋಗಲಾರಿರಿ. ಹಾಗಾದ್ರೆ ತಂಪು ಪಾನೀಯವನ್ನು ಕುಡಿದಾಗ ನಮ್ಮ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನೋಡೋಣ. ಕೋಕಾ-ಕೋಲಾದ ಡಬ್ಬವು ಪರಿಪೂರ್ಣವಾದ ಸಿಹಿ ಸತ್ಕಾರವಾಗಬಹುದು, ವಿಶೇಷವಾಗಿ ಬೇಸಿಗೆಯ ದಿನದಲ್ಲಿ ಮತ್ತಷ್ಟು ಹಿತ ಎನಿಸಬಹುದು, ಆದರೆ ತಂಪು ಪಾನೀಯದ ಪರಿಣಾಮವು ಹೆರಾಯಿನ್‌ನಂತೆಯೇ ಇರುತ್ತದೆ – ಮತ್ತು ಅದನ್ನು ಕುಡಿದ ನಂತರ ನಮ್ಮ ದೇಹಕ್ಕೆ ಏನಾಗುತ್ತದೆ ಎಂದು ತಜ್ಞರು ಹಂಚಿಕೊಂಡಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧವಾದ ಫಿಜ್ಜಿ ಪಾನೀಯಗಳಲ್ಲಿ ಒಂದಾಗಿ, ಕೋಕಾ-ಕೋಲಾದ ತಣ್ಣನೆಯ ಕ್ಯಾನ್‌ನ ರುಚಿಯನ್ನು ಪ್ರತಿಯೊಬ್ಬರೂ ತಿಳಿದಿದ್ದಾರೆ. ಆದರೆ ನಮ್ಮ ನೆಚ್ಚಿನ ಪಾನೀಯವು ನಿಜವಾಗಿಯೂ…