Author: AIN Author

ಬೆಂಗಳೂರು: ಟಿಕೆಟ್ ಮಷೀನ್ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿರುವ ಒಂದೇ ಒಂದು ಬಸ್ಸು ಹೊರಗಡೆ ಹೋಗದೆ ಸಾರ್ವಜನಿಕರು ಪರದಾಟ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ https://ainlivenews.com/bjp-never-supports-family-politics-k-s-eshwarappa/ ಇಂದು ಮುಂಜಾನೆ ಟಿಕೆಟ್ ಜನರೇಟರ್ ಹಾಕದೆ ಹಿನ್ನೆಲೆಯಲ್ಲಿ ಕೆಲವೊಂದು ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ವಾಗದೆ ಸ್ಥಳೀಯರು ಸಾರ್ವಜನಿಕರು ಉದ್ಯೋಗಸ್ಥರು ದೂರದ ಪ್ರಯಾಣ ಬಳಸುವ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವನ್ನು ಉಂಟು ಮಾಡಿತು.. ಇನ್ನು ರಾಮನಗರ ವಿಭಾಗದ ಆನೇಕಲ್ ಡಿಪ್ಪೋ ದಲ್ಲಿ ಟೆಕ್ನಿಕಲ್ ಪ್ರಾಬ್ಲಮ್ ನಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಒಂಬತ್ತು ಗಂಟೆಯವರೆಗೂ ಕೆಎಸ್ಆರ್ಟಿಸಿ ಬಸ್ಗಾಗಿ ಜನರು ಪರದಾಡುವಂತೆ ಪರಿಸ್ಥಿತಿ ಎದರಗಿತ್ತು.. ಇನ್ನು ಕೆ ಎಸ್ ಆರ್ ಟಿ ಸಿ ಬಸ್ ಬಾರದ ಹಿನ್ನೆಲೆಯಲ್ಲಿ ಆನೇಕಲ್ ಜನತೆ ಅಧಿಕಾರಿಗಳೇ ಇಡಿ ಶಾಪವನ್ನು ಹಾಕಿದ್ದರು. ಇನ್ನು ಬಸ್ಸಿಲ್ಲದ ಪರಿಣಾಮ ಬಸ್ ಸ್ಟಾಂಡ್ ನಲ್ಲಿ ಜನರು ಕೂಡ ತುಂಬಿ ತುಳುಕುತ್ತಿದ್ರು . ಇನ್ನು ಆನೆಕಲ್ ನಿಂದ ತಮಿಳುನಾಡು ಹೊಸೂರು ತಮಿಳುನಾಡಿನ ತಳಿ, ಬೆಂಗಳೂರು ರಾಮನಗರ ಮಾದೇಶ್ವರ…

Read More

ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆಗೈದು (Murder) ದುಷ್ಕರ್ಮಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉಡುಪಿಯ (Udupi) ಸಂತೆಕಟ್ಟೆ (Santekatte) ನೇಜಾರು (Nejaru) ಸಮೀಪ ನಡೆದಿದೆ. ತಾಯಿ ಹಾಗೂ ಮೂವರು ಮಕ್ಕಳನ್ನು ದುಷ್ಕರ್ಮಿ ಕೊಲೆಗೈದಿದ್ದಾನೆ. ಮೃತರನ್ನು ತಾಯಿ ಹಸೀನಾ (46), ಮಕ್ಕಳಾದ ಅಫ್ನಾನ್ (23), ಅಯ್ನಝ್ (21), ಆಸಿಂ (12) ಎಂದು ಗುರುತಿಸಲಾಗಿದೆ. ಹರಿತವಾದ ಆಯುಧಗಳಿಂದ ಇರಿದು ನಾಲ್ವರನ್ನು ಕೊಲೆ ಮಾಡಿದ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ.  ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿ ಮಾತಿನ ಚಕಮಕಿ ನಡೆಸಿದ್ದಾನೆ. ಮೊದಲು ಹಸೀನಾ, ಅಫ್ನಾನ್ ಹಾಗೂ ಅಯ್ನಾಝ್‌ಗೆ ಇರಿದಿದ್ದಾನೆ. ಈ ವೇಳೆ ಹೊರಗಡೆ ಆಟವಾಡುತ್ತಿದ್ದ ಆಸಿಂ ಸದ್ದು ಕೇಳಿ ಮನೆ ಒಳಗಡೆ ಬಂದಿದ್ದಾನೆ. ನಂತರ ಕಿರಿಯ ಮಗನನ್ನೂ ಕೊಂದಿದ್ದಾನೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಇದಾದ ಬಳಿಕ ಗಲಾಟೆ ಕೇಳಿ ಪಕ್ಕದ ಮನೆಯ ಯುವತಿ ತನ್ನ ಮನೆಯಿಂದ ಹೊರ ಬಂದಿದ್ದಾಳೆ. ದುಷ್ಕರ್ಮಿ ಆಕೆಯನ್ನೂ ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಹಸೀನಾ ಅತ್ತೆಗೂ ತೀವ್ರವಾದ ಗಾಯಗಳಾಗಿವೆ. ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅವರ…

Read More

ದೀಪಾವಳಿ.. ಬೆಳಕಿನ ಹಬ್ಬ, ಭಾರತದಲ್ಲಿ ಅತ್ಯಂತ ಸಂತೋಷದಾಯಕ ಮತ್ತು ಬಹು ನಿರೀಕ್ಷಿತ ಆಚರಣೆಗಳಲ್ಲಿ ಒಂದಾಗಿದೆ. ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ದೀಪಾವಳಿ ಹಬ್ಬಕ್ಕೆ ಡಿ ಬಾಸ್‌ ದರ್ಶನ್‌ ಅವರು ರಾಜ್ಯದ ಜನತೆಗೆ ಹಾಗು ತನ್ನೆಲ್ಲಾ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು

Read More

ಚಿತ್ರದುರ್ಗ: ಬಿಜೆಪಿ (BJP) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ (BY Vijayendra) ‘ಹೊಸ ಬಾಟಲಿಯಲ್ಲಿ ಹಳೆ ವೈನ್’ ಹಾಕಿದಂತೆ. ಹೀಗಾಗಿ ಆ ವಿಚಾರಕ್ಕೆ ನೋ ರಿಯಾಕ್ಷನ್ ಎಂದು ಸಚಿವ ಡಿ.ಸುಧಾಕರ್ (D Sudhakar) ಹೇಳಿದರು. ಚಿತ್ರದುರ್ಗದಲ್ಲಿ (Chitradurga) ನಡೆದ ಒನಕೆ ಓಬವ್ವ ಜಯಂತಿಯ ಮೆರವಣಿಗೆ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿರುವುದಕ್ಕೆ ಕೆಲ ಹಿರಿಯ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಅವರ ಪಕ್ಷದಲ್ಲಿನ ಅಸಮಾಧಾನ ಅವರ ಆಂತರಿಕ ವಿಚಾರವಾಗಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಹೀಗಾಗಿ ನಾವು ಆ ವಿಚಾರಕ್ಕೆ ಮೂಗು ತೂರಿಸಲ್ಲ ಎಂದರು. ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿಯವರ ಸಿದ್ಧಾಂತವೇ ಬೇರೆಯಾಗಿದ್ದು, ಅವರು ಸಮಾಜ ಒಡೆಯುವ ನೀತಿ ಹೊಂದಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಅವರ ನೇತೃತ್ವದ ಬಿಜೆಪಿ ಅಧಿಕಾರ ಪಡೆಯಲ್ಲ ಎಂದು ಭವಿಷ್ಯ ನುಡಿದರು. ಹಾಗೆಯೇ ಬಿಜೆಪಿಗೆ ಈವರೆಗೆ ರಾಜ್ಯಾಧ್ಯಕ್ಷರಿಲ್ಲ ಎಂದು ಹೇಳುತ್ತಿದ್ದರು. ಈಗ ನೇಮಕವಾಗಿದೆ. ನಾವು ಎಲ್ಲೂ ಬಿಜೆಪಿಗೆ ಗೇಲಿಮಾಡಿಲ್ಲ. ಆದರೆ ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕರೇ ಬಿಜೆಪಿಗೆ…

Read More

ಹಾಸನ: ವರ್ಷಕ್ಕೆ ಒಂದು ಬಾರಿ ದರ್ಶನ ನೀಡುವ ಹಾಸನಾಂಬೆಯ ಜಾತ್ರಾ ಮಹೋತ್ಸವ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ದಾಖಲೆಯ ಆದಾಯ ಗಳಿಸಿದೆ. 9 ದಿನಗಳ ದರ್ಶನದಲ್ಲಿ ಒಟ್ಟು 4,56,22,580 ರೂ. ಸಂಗ್ರಹವಾಗಿದೆ. ವಿಶೇಷ ದರ್ಶನದ ಪಾಸ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಕೋಟಿ ಕೋಟಿ ಆದಾಯ ಗಳಿಸಿದೆ. ನ.3ರಿಂದ ಪ್ರಾರಂಭವಾಗಿ ನ.11ರ ಮಧ್ಯಾಹ್ನ 2ಗಂಟೆಯವರೆಗೆ ಒಟ್ಟು 4,56,22,580 ರೂ. ಆದಾಯ ಬಂದಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಸಾವಿರ ರೂ. ಟಿಕೆಟ್ ಮಾರಾಟದಿಂದ 2,30,91,000 ರೂ. ಸಂಗ್ರಹವಾಗಿದ್ದು, 300 ರೂ. ಟಿಕೆಟ್ ಮಾರಾಟದಿಂದ 1,79,65,500 ರೂ. ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ ಕೂಡ 45,66,080 ಹಣ ಸಂಗ್ರಹವಾಗಿದ್ದು, ಒಟ್ಟು 4,56,22,580 ರೂ. ಆದಾಯವನ್ನು ಹಾಸನಾಂಬ ದೇವಾಲಯ ಗಳಿಸಿದೆ. ಹಾಸನಾಂಬೆ ದರ್ಶನೋತ್ಸವ ಇತಿಹಾಸದಲ್ಲೇ ಅತಿ ಹೆಚ್ಚಿನ ಆದಾಯ ಗಳಿಸಿದ್ದು, ಇನ್ನೂ ಮೂರು ದಿನ ಬಾಕಿ ಇರುವಾಗಲೇ ಕೋಟಿ ಕೋಟಿ ಆದಾಯ ಗಳಿಸಿದೆ.

Read More

ಬೆಂಗಳೂರು: ಬಿಜೆಪಿ ಒಡೆದ ಮಡಿಕೆ ಚೂರಾಗಿದೆ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ಒಡೆದ ಮನೆಯಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಲವಾರು ಕಾಂಗ್ರೆಸ್​​​ಗಳಿವೆ. ಆದರೆ, ಬಿಜೆಪಿ ಇರುವುದು ಇಡೀ ದೇಶದಲ್ಲಿ ಒಂದೇ ಎಂದು ಕಾಂಗ್ರೆಸ್ಸಿಗರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚಾಟಿ ಬೀಸಿದ್ದಾರೆ. https://ainlivenews.com/muhurta-fix-for-bjps-new-president-vijayendras-inauguration/ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ ಭಾರತದ ಲೋಕಸಭಾ ಚುನಾವಣೆ ಎದುರು ನೋಡ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕ ಎಂದು ಹೇಳಲಾಗಿದೆ. ಕಳೆದ ಬಾರಿ 28 ಸ್ಥಾನಗಳನ್ನು ಗೆದಿದ್ದೆವು. ಕಾಂಗ್ರೆಸ್​​​ನವರ ರಿಯಾಕ್ಷನ್ ನೋಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ. ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್​​​​ಗೆ ಈ ಆರೋಪ ಮಾಡಲು ನೈತಿಕತೆ ಇಲ್ಲ. ಕಾಂಗ್ರೆಸ್ ಇರುವುದೇ ಕುಟುಂಬ ರಾಜಕಾರಣದಲ್ಲಿ. ಬಿಜೆಪಿ ಎಂದಿಗೂ ಕುಟುಂಬ ರಾಜಕಾರಣ ಬೆಂಬಲಿಸಲ್ಲ ಎಂದು ತಿಳಿಸಿದ್ದಾರೆ. ಎಲ್ಲಾ ಬೂತ್​​ಗಳಲ್ಲಿ ಪಕ್ಷ ಸಂಘಟನೆ ಎಲ್ಲಾ ಬೂತ್​​ಗಳಲ್ಲಿ ಪಕ್ಷ ಸಂಘಟನೆ ಬಲ ಪಡಿಸುತ್ತೇವೆ. ಬೂತ್ ಗೆದ್ದರೆ,…

Read More

ಎಡಗೈ ಬಳಸುವವರ ಕಥೆಯಾಧಾರಿತ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗಿರುವುದು ಗೊತ್ತಿರುವ ವಿಚಾರ. ಯುವ ನಿರ್ದೇಶಕ ಸಮರ್ಥ್‌ ಕಡಕೋಳ್‌ ಸಾರಥ್ಯದಲ್ಲಿ ಮೂಡಿಬಂದಿರುವ ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರದ ಹೊಸ ಪೋಸ್ಟರ್ ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಟೇಬಲ್ ಹಿಂಬದಿಯಲ್ಲಿ ಬಚ್ಚಿಟ್ಟುಕೊಂಡು ಕುಳಿತಿರುವ ನಾಯಕ ಹಾಗೂ ನಾಯಕಿ..ಅವರ ಬೆನ್ನಿಂದೆ ವ್ಯಕ್ತಿಯೋರ್ವ ನಿಂತಿದ್ದಾರೆ. ಅವರು ಯಾರು ಅನ್ನೋದನ್ನು ರಿವೀಲ್ ಮಾಡದೇ ಚಿತ್ರತಂಡ ಕುತೂಹಲ ಕಾಯ್ದುಕೊಂಡಿದೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ…

Read More

ಬೆಂಗಳೂರು: ದೀಪಾವಳಿ ಹಬ್ಬದ ನಿಮಿತ್ತ ಬೆಂಗಳೂರಿನ ಕೆ ಆರ್‌ ಮಾರ್ಕೆಟ್‌ನಲ್ಲಿ ಹಬ್ಬದ ಖರೀದಿ ಜೋರಾಗಿದೆ. ಮುಂಜಾನೆಯೇ ಜನರು ಹಬ್ಬದ ಖರೀದಿಗೆ ಮುಗಿ ಬಿದಿದ್ದಾರೆ. ಹೂ, ಹಣ್ಣು ಖರೀದಿ ಇಂದ ಮಾರುಕಟ್ಟೆ ಜನ ದಟ್ಟಣೆಯಿಂದ ಕಿಕ್ಕಿರಿದಿತ್ತು ಹೂವು, ಹಣ್ಣುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಇನ್ನು ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲೆ ಅನಧಿಕೃತವಾಗಿ ಗ್ರಾಹಕರು ವಾಹನಗಳ ಪಾರ್ಕಿಂಗ್ ಮಾಡಿದ್ದಾರೆ. ಹಾಗಾಗಿ ಕಿರಿದಾದ ಮೇಲ್ಸೆತುವೆ ಮೇಲೆ ವಾಹನ ಚಲಾಯಿಸಲು ಸವಾರರು ಹರಸಾಹಸ ಪಟ್ಟಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರಾಗಿದ್ದು, ಹಣ್ಣು, ಹೂವುಗಳ ದರ ಏರಿಕೆ ಆಗಿದೆ. ಮಾರು ಹೂವಿನ ಬೆಲೆ 50 ರೂ ಏರಿಕೆ ಆಗಿದೆ. ಒಂದು ಕೆಜಿ ಸೇಬಿನ ಬೆಲೆ 120 ರಿಂದಿ 140 ಇದೆ. ದಾಳಿಂಬೆ ಬೆಲೆ 150 ರಿಂದ 170 ರೂ ಇದೆ. ಹೂ, ಹಣ್ಣುಗಳ ಖರೀದಿಗೆ ಗ್ರಾಹಕರು ಆಗಮಿಸುತ್ತಿದ್ದಾರೆ. ನಾಳೆ ದೀಪಾವಳಿ ಅಮವಾಸ್ಯೆ, ಬಲಿಂದ್ರನ ಪೂಜೆ, ಮಂಗಳವಾರ ಬಲಿಪಾಡ್ಯಮಿ ದೀಪಾವಳಿ ಹಬ್ಬದ ಚಂದ್ರದರ್ಶನ ಇದೆ.

Read More

ಮೈಸೂರು: ಮಲೆ ಮಾದಪ್ಪನ ದರ್ಶನಕ್ಕೆಂದು ತೆರಳಿದ್ದ ಟಂಟಂ ವಾಹನ (ಪಲ್ಟಿಯಾದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಘಟನೆಯಲ್ಲಿ ದರ್ಶನ್ (20) ಮೃತಪಟ್ಟಿದ್ದಾನೆ. ಮೈಸೂರಿನ ಟಿ ನರಸೀಪುರ ಮುಖ್ಯರಸ್ತೆಯ ಮೆಗಳಾಪುರ ಬಳಿ ಘಟನೆ ನಡೆದಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ದರ್ಶನ್ ಸೇರಿದಂತೆ ಕೆಲ ಯುವಕರು ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾಗಿದೆ.  ಘಟನೆಯಲ್ಲಿ ದರ್ಶನ್ ಸಾವನ್ನಪ್ಪಿದ್ದು, ಸುಮಾರು 10 ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Read More

ಬೆಳಗಾವಿ : ಗಡಿಯಲ್ಲಿ ಸದ್ದಿಲ್ಲದೆ ಕನ್ನಡದ ಬೆಳೆಸುವ ಮೂಲಕ ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತಿಯಾಗಿದ್ದ ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ (63) ಅವರು ಭಾನುವಾರ ಲಿಂಗೈಕ್ಯರಾಗಿದ್ದಾರೆ. 12ರಂದು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ ಗಡಿ ಭಾಗದಲ್ಲಿ ಚಿಂಚಣಿ ಶ್ರೀಗಳು ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾಗಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದ ಸ್ವಾಮೀಜಿಯಾಗಿದ್ದ ಇವರು ಅಪಾರ ಭಕ್ತರನ್ನು, ಅನುಯಾಯಿಗಳನ್ನು ಹೊಂದಿದ್ದರು. ಕೆಲ ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಾಮೀಜಿ ಅಗಲಿಕೆಯಿಂದಾಗಿ ಸಾವಿರಾರು ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಭಾನುವಾರವೇ ಸ್ವಾಮೀಜಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೂರಾರು ಭಕ್ತರು ಮಠದ ಬಳಿ ಜಮಾಯಿಸಿದ್ದಾರೆ. ಇನ್ನೂ ನೂರಾರು ಭಕ್ತರು ಮಠದತ್ತ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More