Author: AIN Author

ಬೆಂಗಳೂರು: ಸಿಲಿಕಾಲ್‌ ಸಿಟಿಯಲ್ಲಿ  ರಸ್ತೆ ಮಧ್ಯೆ ಹುಡುಗರು ಹುಚ್ಚಾಟ ನಡೆಸಿರುವ ಘಟನೆ ನಗರದ ಎನ್ ಹೆಚ್ 7 ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಹುಡುಗರು ಕಾರ್ ರೂಫ್ ಮೇಲೆ ಹತ್ತಿ ಡ್ಯಾನ್ಸ್ ಮಾಡುತ್ತಾ ಹಾಗೆ  ಚಲಿಸುತ್ತಿರುವ ಕಾರಿನ ಮೇಲೆಯೇ ಬಟ್ಟೆ ಕಳಚಿ ಕೂಗಿ ಕೂಗಿಕೊಂಡು ಪುಂಡಾಟ ಮೆರೆದಿದ್ದಾರೆ. ನಾಲ್ವರು ಯುವಕರಿಂದ ನಡು ರಸ್ತೆಯಲ್ಲಿ ಪುಂಡಾಟ ಮರರೆದಿದ್ದು  DL 3cba9775 ನಂಬರಿನ ಕಾರಿನಲ್ಲಿದ್ದ ಯುವಕರು ಕುಡಿದ ಅಮಲಿನಲ್ಲಿ ಕಾರಿನ ರೂಫ್ ಹತ್ತಿ ಪುಂಡಾಟ ನಡೆಸಿದ್ದು ಹಿಂದೆ ಬರುತ್ತಿರುವ ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈಗ ಎಲ್ಲೆಡೆ ವೈರಲ್‌ ಆಗಿದ್ದು ಪೊಲೀಸರು ಹುಡುಗರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.

Read More

ನವದೆಹಲಿ: ಸಂಸತ್‌ನಲ್ಲಿನ (Parliament) ಭದ್ರತಾ ಲೋಪದ (Security Breach) ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿ ಅಶಿಸ್ತನ್ನು ತೋರಿದ ಆರೋಪದ ಮೇಲೆ ತೃಣಮೂಲ (TMK) ಸಂಸದ ಡೆರೆಕ್ ಒಬ್ರಿಯಾನ್ (Derek O’Brien) ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ. ಅಶಿಸ್ತಿನ ನಡವಳಿಕೆಯ ಕಾರಣ ನೀಡಿ ಡೆರೆಕ್ ಒಬ್ರಿಯಾನ್ ಅವರನ್ನು ಸಭಾಪತಿ ಜಗದೀಪ್ ಧನ್ಕರ್ (Jagdeep Dhankhar) ಅಮಾನತುಗೊಳಿಸಿದ್ದು, ಅಧಿವೇಶನದ ಉಳಿದ ಭಾಗಕ್ಕೆ ಹಾಜರಾಗದಂತೆ ಆದೇಶಿಸಿದ್ದಾರೆ. ಸಂಸತ್ ಭವನದ ಮೇಲೆ ದಾಳಿ ಮಾಡಿದ ಘಟನೆಗೆ ಸಂಬಂಧಿಸಿ ಇಡೀ ದಿನ ಚರ್ಚೆಗೆ ಅವಕಾಶ ನೀಡುವಂತೆ ಟಿಎಂಸಿ ಸಂಸದ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸದನದ ಬಾವಿಗಿಳಿದು ಪ್ರತಿಭಟಿಸಿದ ಡೆರೇಕ್ ಒಬ್ರಿಯಾನ್ ನಿಯಮ ಉಲ್ಲಂಘಿಸಿ ನಡೆದುಕೊಂಡಿದ್ದಾರೆ. ಸಭಾಪತಿ ಜಗದೀಪ್ ಧನ್ಕರ್ ನಿಯಮ ಪಾಲಿಸುವಂತೆ ಹಲವು ಭಾರಿ ಎಚ್ಚರಿಕೆ ನೀಡಿದರೂ ಡೆರೇಕ್ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ಪ್ರತಿಭಟನೆ ಮುಂದುವರಿಸಿದ್ದಾರೆ. ಸಭಾಪತಿ ಮಾತನ್ನು ಧಿಕ್ಕರಿಸಿದ ಡೆರೇಕ್ ಒಬ್ರಿಯಾನ್ ಈ ವಿಚಾರದಲ್ಲಿ ಯಾವುದೇ ನಿಯಮ ಗೌರವಿಸುವುದಿಲ್ಲ ಎಂದಿದ್ದಾರೆ. ದುರ್ನಡತೆ, ಅಶಿಸ್ತಿನ ನಡೆಯಿಂದ…

Read More

ಬೆಂಗಳೂರು: ತಾಂತ್ರಿಕ ದೋಷದಿಂದ ಪೀಣ್ಯ ನಿಲ್ದಾಣದಲ್ಲಿ (Peenya Metro Station) ಮೆಟ್ರೋ ರೈಲು ಕೆಟ್ಟು ನಿಂತಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ರೈಲು ಕೆಟ್ಟು ನಿಂತಿದ್ದು ಹಸಿರು ಮಾರ್ಗದ ಮೆಟ್ರೋ (Green Line Metro) ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಸಿರು ಮಾರ್ಗದಲ್ಲಿ ಬರುವ ಯಶವಂತಪುರ ಟೂ ನಾಗಸಂದ್ರ ಮಾರ್ಗ ನಾಗಸಂದ್ರ ಟೂ ಯಶವಂತಪುರ ಮೆಟ್ರೋ ನಡೆವೆ ಸಂಚಾರ ಇಲ್ಲ ನಾಗಸಂದ್ರ ಟೂ ಯಶವಂತಪುರ- ಯಶವಂತಪುರ ಟೂ ನಾಗಸಂದ್ರ ಒಂದು ಗಂಟೆಯಿಂದ ಎರಡು ಕಡೆಯಿಂದಲೂ ಮೆಟ್ರೋ ರೈಲು ಸಂಚಾರ ಮಾಡ್ತಿಲ್ಲ ಮೆಟ್ರೋ ರೈಲು ಸಂಚಾರವಿಲ್ಲದೆ ವಾಪಸ್ಸು ಹೋಗುತ್ತಿರುವ ಪ್ರಯಾಣಿಕರು ಸದ್ಯ ಯಶವಂತಪುರ – ಸಿಲ್ಕ್ ಇನ್‌ಸ್ಟಿಟ್ಯೂಟ್‌ ವರೆಗೆ ಮಾತ್ರ ಮೆಟ್ರೋ ಸಂಚಾರ ನಡೆಸುತ್ತಿದ್ದು ಪೀಣ್ಯ – ನಾಗಸಂದ್ರ ರೈಲು ಸಂಚಾರ ಸ್ಥಗಿತಗೊಂಡಿದೆ. ಮುಂದಿನ 2 ಗಂಟೆಯ ಒಳಗಡೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Read More

ಜೋಹಾನ್ಸ್‌ಬರ್ಗ್‌: ನಾಯಕ ಸೂರ್ಯಕುಮಾರ್‌ ಯಾದವ್‌ (Surya Kumar Yadav) ಅವರ ಸ್ಫೋಟಕ ಶತಕ ಮತ್ತು ಕುಲ್ದೀಪ್‌ ಯಾದವ್‌ (Kuldeep Yadav) ಅವರ ಭರ್ಜರಿ ಬೌಲಿಂಗ್‌ನಿಂದ ಭಾರತ (Team India) ದಕ್ಷಿಣ ಆಫ್ರಿಕಾ (South Africa) ವಿರುದ್ಧ ಕೊನೆಯ ಟಿ20 ಪಂದ್ಯವನ್ನು 106 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಡ್ರಾ ಮಾಡಿಕೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್‌ ಆಯ್ತು. ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಹೋದ ಆಫ್ರಿಕಾಗೆ ಡೇವಿಡ್‌ ಮಿಲ್ಲರ್‌ ಸ್ವಲ್ಪ ಶಕ್ತಿ ತುಂಬಿದರು. ಆದರೆ ಕುಲ್ದೀಪ್‌ ಯಾದವ್‌ ದಾಳಿಗೆ ಇಳಿಯುತ್ತಿದ್ದಂತೆ ವಿಕೆಟ್‌ ಪತನಗೊಳ್ಳಲು ಆಂಭವಾಯಿತು. 4 ವಿಕೆಟ್‌ ನಷ್ಟಕ್ಕೆ 75 ರನ್‌ಗಳಿಸಿದ ದಕ್ಷಿಣ ಆಫ್ರಿಕಾ ನಂತರ 20 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತ್ತು. ಡೇವಿಡ್‌ ಮಿಲ್ಲರ್‌ 35 ರನ್‌ ಹೊಡೆದರೆ…

Read More

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಇನ್ನೂ ಆರಿಲ್ಲ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ವಿರುದ್ಧ ಒಂದು ಗುಂಪು ತೊಡೆತಟ್ಟಿದ್ರೆ, ಮತ್ತೊಂದು ಗುಂಪು ಸೈಲೆಂಟಾಗಿ ಕಾಂಗ್ರೆಸ್ ಗೆ ಜಂಪ್ ಆಗಲು ಹೊರಟಿದೆ..  ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಳ್ಳದ ರೆಬೆಲ್ ಶಾಸಕರು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಯೆಸ್.. ರಾಜ್ಯ ಬಿಜೆಪಿ ನಾಯಕತ್ವ ಹಾಗೂ ಕಡೆಗಣನೆಯಿಂದ ಬೇಸತ್ತಿರೋ ಬಾಂಬೆ ಬಾಯ್ಸ್ ಕಾಂಗ್ರೆಸ್ ಗೆ ಸೇರಲು ಸಜ್ಜಾಗ್ತಿದ್ದಾರೆ. ‌ ಬೆಳಗಾವಿ ಅಧಿವೇಶನಕ್ಕೆ ಬಂದು ಬಿಜೆಪಿ ಮೀಟಿಂಗ್ ಗಳಿಗೆ ಚಕ್ಕರ್ ಹಾಕ್ತಿದ್ದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಔತಣಕೂಟಗಳಲ್ಲಿ ಪ್ರತ್ಯಕ್ಷರಾಗ್ತಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿದಿದ್ದ ಮೂವರು ಬಾಂಬೆ ಬಾಯ್ಸ್ ,ನಿನ್ನೆ ಸಿಎಲ್ಪಿ ಸಭೆ ಬಳಿಕ ಡಿಕೆಶಿ ಆಯೋಜಿಸಿದ್ದ ಔತನಕೂಟದಲ್ಲಿ ಭಾಗಿಯಾಗಿದ್ದಾರೆ. https://ainlivenews.com/faster-mohammad-shami-farm-house-tight-security/ ಎಸ್‌ ಟಿ ಸೋಮಶೇಖರ್, ಶಿವರಾಂ‌ಹೆಬ್ಬಾರ್ ,ಎಚ್ ವಿಶ್ವನಾಥ್ ಕಾಂಗ್ರೆಸ್ ಸಚಿವರು, ಶಾಸಕರ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.ಈ ಮೂಲಕ ಬಿಜೆಪಿ ನಾಯಕರಿಗೆ ಇರುಸು ಮುರುಸು ತಂದಿದ್ದಾರೆ. ನಿನ್ನೆ ರಾತ್ರಿಯ…

Read More

ಬೆಂಗಳೂರು: ರಾಜ್ಯದಲ್ಲೇ ಭಾರೀ ಸಂಚಲನ ಸೃಷ್ಟಿಸಿದ್ದ  ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಕೇಸ್ ಬಗ್ಗೆ ಬೆಳಗಾವಿಯ ವಿಧಾನಪರಿಷತ್‌ ಅಧಿವೇಶನದಲ್ಲಿ ಟಿ.ಎ.ಶರವಣ ಅವರು ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆ ಇದರ ಬಗ್ಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಹಾಗೆ ಇದಕ್ಕೊಂದು ಶಾಶ್ವತ ಪರಿಹಾರ ನೀಡಲೇಬೇಕು ಎಂದು ಸರ್ಕಾರಕ್ಕೆ  ಆಗ್ರಹಿಸಿದ್ದಾರೆ ಪರಿಷತ್ ಮಾತನಾಡಿದ ಟಿಎ ಶರವಣ ಅವರು, ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಕುರಿತಾಗಿ ಸದನದಲ್ಲಿ ಸರ್ಕಾರದ ಗಮನವನ್ನು ಸೆಳೆದರು. ಹಾಗೆ ಭ್ರೂಣ ಹತ್ಯೆಯಿಂದ ದೇಶದಲ್ಲಿ ಲಿಂಗಾನುಪಾತ 979ರಿಂದ 947ಕ್ಕೆ ಕುಸಿದಿದೆ. ಜನರೂ ಭ್ರೂಣ ಹತ್ಯೆಯನ್ನು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅಕ್ರಮ ಸೆಂಟರ್ಗಳು, ಕೃತ್ಯಗಳು ಹೆಚ್ಚಾಗುತ್ತಿವೆ. ಈ ಕುರಿತು ಜನಜಾಗೃತಿ ಹೆಚ್ಚಾಗಬೇಕು, ಜೊತೆಗೆ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭ್ರೂಣ ಹತ್ಯೆ ಮಾಡಿಸಿದವರು ಹಾಗೂ ಮಾಡಿದವರು ಸೇರಿ ಎರಡು ಕಡೆಯವರನ್ನು ಹೊಣೆ ಮಾಡಬೇಕು. ಭ್ರೂಣ ಹತ್ಯೆ ಎಂದರೆ ಅದು ಕೊಲೆಯೇ ಆಗಿದೆ ಎಂದರು. ಇದನ್ನು ತಡೆಯಲು ಕಾನೂನು ಜಾರಿಗೆ ತರಬೇಕು. ಭ್ರೂಣ ಲಿಂಗ…

Read More

ಲಕ್ನೋ: ಶ್ರೀಕೃಷ್ಣ ಜನ್ಮಭೂಮಿಯಲ್ಲಿ (Krishna Janmabhoomi) ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು (Shahi Idagh Mosque) ಸಮೀಕ್ಷೆ ನಡೆಸಲು ಅಲಹಾಬಾದ್‌ ಹೈಕೋರ್ಟ್ (Allahabad High Court) ಸಮ್ಮತಿ ನೀಡಿದೆ. ಮಸೀದಿ ಪರಿಶೀಲಿಸಲು ಆಯುಕ್ತರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪುರಸ್ಕರಿಸಿದ  ನ್ಯಾ. ಮಯಾಂಕ್‌ ಕುಮಾರ್‌ ಜೈನ್‌ ಅವರಿದ್ದ ಪೀಠ ಮೂವರು ಅಧಿಕಾರಿಗಳಿರುವ ಆಯೋಗ ರಚಿಸುವಂತೆ ಸೂಚಿಸಿದೆ. ಶ್ರೀ ಕೃಷ್ಣನ ಜನ್ಮಸ್ಥಳವು ಮಸೀದಿಯ ಕೆಳಗೆ ಇದೆ ಮತ್ತು ಮಸೀದಿಯು ಹಿಂದೂ ದೇವಾಲಯವಾಗಿದೆ ಎಂದು ತೋರಿಸುವ ಹಲವು ಚಿಹ್ನೆಗಳು ಇವೆ. ಹೀಗಾಗಿ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಹಿಂದೂ ದೇವಾಲಯಗಳ ವಿಶಿಷ್ಟ ಲಕ್ಷಣವಾಗಿರುವ ಕಮಲದ ಆಕಾರದ ಸ್ತಂಭವು ಅಸ್ತಿತ್ವದಲ್ಲಿದೆ. ಕೃಷ್ಣ ಜನಿಸಿದ ರಾತ್ರಿ ಆತನನ್ನು ರಕ್ಷಿಸಿದ ಹಿಂದೂ ದೇವತೆಗಳಲ್ಲಿ ಒಬ್ಬನಾದ ಶೇಷನಾಗನ ಚಿತ್ರವೂ ಇದೆ. ಮಸೀದಿಯ ಕಂಬದ ತಳದಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಕೆತ್ತನೆಗಳು ಸಹ ಗೋಚರಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. https://ainlivenews.com/faster-mohammad-shami-farm-house-tight-security/ ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ…

Read More

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಇನ್ನೂ ಆರಿಲ್ಲ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ವಿರುದ್ಧ ಒಂದು ಗುಂಪು ತೊಡೆತಟ್ಟಿದ್ರೆ, ಮತ್ತೊಂದು ಗುಂಪು ಸೈಲೆಂಟಾಗಿ ಕಾಂಗ್ರೆಸ್ ಗೆ ಜಂಪ್ ಆಗಲು ಹೊರಟಿದೆ.. ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಳ್ಳದ ರೆಬೆಲ್ ಶಾಸಕರು, ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಯೆಸ್.. ರಾಜ್ಯ ಬಿಜೆಪಿ ನಾಯಕತ್ವ ಹಾಗೂ ಕಡೆಗಣನೆಯಿಂದ ಬೇಸತ್ತಿರೋ ಬಾಂಬೆ ಬಾಯ್ಸ್ ಕಾಂಗ್ರೆಸ್ ಗೆ ಸೇರಲು ಸಜ್ಜಾಗ್ತಿದ್ದಾರೆ.‌ ಬೆಳಗಾವಿ ಅಧಿವೇಶನಕ್ಕೆ ಬಂದು ಬಿಜೆಪಿ ಮೀಟಿಂಗ್ ಗಳಿಗೆ ಚಕ್ಕರ್ ಹಾಕ್ತಿದ್ದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಔತಣಕೂಟಗಳಲ್ಲಿ ಪ್ರತ್ಯಕ್ಷರಾಗ್ತಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿದಿದ್ದ ಮೂವರು ಬಾಂಬೆ ಬಾಯ್ಸ್ ,ನಿನ್ನೆ ಸಿಎಲ್ಪಿ ಸಭೆ ಬಳಿಕ ಡಿಕೆಶಿ ಆಯೋಜಿಸಿದ್ದ ಔತನಕೂಟದಲ್ಲಿ ಭಾಗಿಯಾಗಿದ್ದಾರೆ. https://ainlivenews.com/police-good-news-for-new-year-celebrations-separate-lane-for-couples-on-brigade-road/ ಎಸ್‌ ಟಿ ಸೋಮಶೇಖರ್, ಶಿವರಾಂ‌ಹೆಬ್ಬಾರ್ ,ಎಚ್ ವಿಶ್ವನಾಥ್ ಕಾಂಗ್ರೆಸ್ ಸಚಿವರು, ಶಾಸಕರ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.ಈ ಮೂಲಕ ಬಿಜೆಪಿ ನಾಯಕರಿಗೆ ಇರುಸು ಮುರುಸು ತಂದಿದ್ದಾರೆ. ನಿನ್ನೆ…

Read More

ಹುಬ್ಬಳ್ಳಿ : ಜಿಲ್ಲೆಯ ಲಕ್ಷ್ಮಿ ದಳವಾಯಿಗೆ ಸಮಯಕ್ಕೆ ಸರಿಯಾಗಿ ಆಕೆಗೆ ಟಾಟಾ ಮೋಟರ್ಸ್ ಮತ್ತು ವಿದ್ಯಾ ಪೋಷಕ್ಕಿಂದ ನೆರವು ಮತ್ತು ಮಾರ್ಗದರ್ಶನ ಸಿಕ್ಕಿದುದರಿಂದ ಮತ್ತು ಆಕೆಯ ಕಠಿಣ ಪರಿಶ್ರಮದಿಂದ 10 ನೇ ತರಗತಿಯ ಪರೀಕ್ಷೆಯಲ್ಲಿ ಶೇ 90 ಅಂಕಪಡೆದುಕೊಂಡು ನಂತರ ಇಂಜಿನಿಯರ್ ವೃತ್ತಿ ಬದುಕಿನಲ್ಲಿ ಸುಂದರ ಬದುಕುಕಟ್ಟಿಕೊಂಡಿದ್ದಾರೆ. ಈ ಕುರಿತು ಕಂಪನಿಯ ಪ್ರಮುಖರು ಮಾಹಿತಿ ನೀಡಿದ್ದು ಟಾಟಾ ಮೋಟರ್ಸ್ನಿಂದ ಶಿಷ್ಯವೇತನ, ಅತ್ಯಾವಶ್ಯಕ ವಸ್ತುಗಳ ಸರಬರಾಜು, ತಜ್ಞನಿರ್ದೇಶಿತ ಮನೆಪಾಠ ಅಧಿವೇಶನ ಮತ್ತು ಐಐಟಿ-ಜೆಇಇಗೆ ಕೋಚಿಂಗ್ ಅವಳು ತನ್ನ ಕನಸಿನ ವೃತ್ತಿಯನ್ನು ನನಸಾಗಿಸಿಕೊಳ್ಳಲು ನೆರವಾಯಿತು. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಯಶಸ್ವಿಯಾಗಿ ಕೆಲಸ ಮಾಡುತ್ತ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಲಕ್ಷ್ಮಿ ಮಾತನಾಡಿ, ನನ್ನ ಶಿಕ್ಷಣದುದ್ದಕ್ಕೂ ಟಾಟಾ ಮೋಟರ್ಸ್ ಮತ್ತು ವಿದ್ಯಾ ಪೋಷಕ್ ನಿರಂತರ ಬೆಂಬಲದೊಂದಿಗೆ ನನ್ನ ಕನಸುಗಳಿ ಸಾಕಾರಗೊಳಿಸಿಕೊಳ್ಳಲು ನೆರವಾಯಿತು ಎಂದರು. ವಿದ್ಯಾ ಪೋಷಕ್’ ಅಡಿ ಹಣಕಾಸು ನೆರವಿನ ಜೊತೆಗೆ ಲಕ್ಷ್ಮಿಗೆ ಸಾಫ್ಟ್ ಸ್ಕಿಲ್ಸ್ ಮತ್ತು ವೃತ್ತಿ ಮಾರ್ಗದರ್ಶನದಲ್ಲೂ ತರಬೇತಿ ಒದಗಿಸಲಾಯಿತು. ಹೊಸದಾಗಿ ಕಂಡುಕೊಂಡ…

Read More

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಒಂದು ದಿನದ ಹಿಂದಷ್ಟೇ ಅಫ್ಘಾನಿಸ್ತಾನದ ಫೈಜಾಬಾದ್​ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಫೈಜಾಬಾದ್‌ನ ಆಗ್ನೇಯಕ್ಕೆ ಸುಮಾರು 180 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದ ಉಂಟಾದ ಹಾನಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಈಗ ಸಂಭವಿಸಿರುವ ಭೂಕಂಪದ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯವಾಗಿಲ್ಲ. ಅಫ್ಘಾನಿಸ್ತಾನದಲ್ಲಿ ಅಕ್ಟೋಬರ್​ನಲ್ಲಿ ಸಂಭವಿಸಿದ ಸರಣಿ ಭೂಕಂಪದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 2 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು. ಅಫ್ಘಾನಿಸ್ತಾನದ ಜನರು ಒಂದರ ನಂತರ ಒಂದರಂತೆ ಭೂಕಂಪನದ ಪ್ರಬಲ ಕಂಪನವನ್ನು ಅನುಭವಿಸುತ್ತಿದ್ದಾರೆ. ಇದುವರೆಗೆ 4 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಅಫ್ಘಾನಿಸ್ತಾನದ ಭೂಕಂಪವು ಹೆಚ್ಚು ಭಯಾನಕವಾಗಿದೆ ಎಂದು ನಂಬಲಾಗಿತ್ತು.

Read More