Author: AIN Author

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ & ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ “ಗಂಟು ಮೂಟೆ” , “ಟಾಮ್ & ಜರ್ರಿ” ಖ್ಯಾತಿಯ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೆಯರ್ ಶಂಕರ” ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಜನವರಿ 3 ರಂದು ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್ ಆಗಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಚಿತ್ರದ ಕುರಿತಾದ ಮಹತ್ವದ ಸುದ್ದಿಯನ್ನು ತಿಳಿಸಲು ಚಿತ್ರತಂಡ ತಯಾರಿ ನಡೆಸಿದೆ. ಚಿತ್ರತಂಡದಿಂದ ಹೊರಬರುತ್ತಿರುವ ಮಹತ್ವದ ವಿಷಯ ಏನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Read More

ಗದಗ: ದೇಶದೆಲ್ಲೆಡೇ ಇದೀಗ ರಾಮ ಮಂದಿರ ಉದ್ಘಾಟನೆಯದ್ದೇ ಮಾತು. ದೇಶದ ಕೋಟ್ಯಂತರ ಜನರ 500 ವರ್ಷಗಳ ಹೋರಾಟದ ಫಲವಾಗಿ ಇದೀಗ ರಾಮ ಮಂದಿರ ಇದೇ ಜನೆವರಿ 22 ರಂದು ಉದ್ಘಾಟನೆಗೆ ಸಜ್ಜಾಗಿದೆ. ಈ ನಡುವೆ ಅಯೋಧ್ಯಾ ನಗರದಲ್ಲಿರೋ ವಿಮಾನ ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಆ ಹಿನ್ನೆಲೆ ಗದಗ ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಸಂಭ್ರಮಾಚರಣೆಯನ್ನ ಮಾಡಿದ್ರು. ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ರು.

Read More

ಚಾಮರಾಜನಗರ: ಎವಿ. ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ರವರು ಸೂಚನೆ ನೀಡಿದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚಿಸಿದರು. 396 ವಸತಿಗೃಹಗಳ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಹಬ್ಬ ಹರಿದಿನ ಜಾತ್ರಾ ಸಂದರ್ಭಗಳಲ್ಲಿ ಭಕ್ತರಿಗೆ ವಾಸ್ತವ್ಯಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಚಿವರು ತಿಳಿಸಿದರು. 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ತಳ ಭಾಗದಲ್ಲಿ ನಡೆಯುತ್ತಿರುವ ಮಹದೇಶ್ವರ ಚರಿತ್ರೆ ತಿಳಿಸುವ ಪ್ರತಿಮೆ ಇತರೆ ಕಾಮಗಾರಿಗಳ ಕುರಿತು ಪರಿಶೀಲಿಸಿದ ಸಚಿವರು ಪ್ರತಿಮೆ ಉದ್ಘಾಟನೆಯಾಗಿ 9 ತಿಂಗಳು ಕಳೆದಿದೆ. ಮುಂದುವರೆದ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸಬೇಕು. ಇನ್ನು…

Read More

ಗದಗ: ನಡೆದಾಡುವ ದೇವರೆಂದೇ ಪ್ರಸಿಧ್ಧರಾಗಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೋತ್ಸವವನ್ನು ಗದಗ ನಗರದ ಆದಿತ್ಯಾ ನಗರದಲ್ಲಿ ಶ್ರಧ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಓಣಿಯ ಜನರೆಲ್ಲಾ ಸೇರಿಕೊಂಡು ಶ್ರೀ ಸಿಧ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಜ್ಯೋತಿ ಬೆಳಗೋ ಮೂಲಕ ಪೂಜೆ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲೆ ನಡೆಯೋ ಮೂಲಕ ಮಾದರಿ ಸಮಾಜ ಕಟ್ಟುವೆಂದ್ರು.

Read More

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ದಿನ ಹತ್ತಿರ ಬರುತ್ತಿರುವ ಸಮಯದಲ್ಲಿಯೇ ರಾಮಜನ್ಮಭೂಮಿ ಹೋರಾಟ ಪ್ರಕರಣ ರೀ ಓಪನ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. 1992 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಮ ಜನ್ಮಭೂಮಿ ಹೋರಾಟದ ಸಮಯದಲ್ಲಿ ಗಲಭೆಗಳು ನಡೆದಿದ್ದವು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಚನ್ನಪೇಟದಲ್ಲಿನ ಕರಸೇವಕ ಶ್ರೀಕಾಂತ ಪೂಜಾರಿ ಅವರನ್ನು ಡಿ. 29 ರಂದು ಬಂಧಿಸಲಾಗಿದ್ದು, ಶ್ರೀಕಾಂತ ಜಾಮೀನಿಗೆ ಸಿದ್ಧತೆ ನಡೆಸಿದ್ದಾರೆ. 31 ವರ್ಷಗಳ ಬಳಿಕ ಈ ಪ್ರಕರಣ ರೀ ಓಪನ್ ಮಾಡುವಂತಹ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪತ್ತೆ ಹಾಗೂ ಕ್ರೋಡೀಕರಣ ಮಾಡಲಾಗುತ್ತಿದೆ. ಸಂಪೂರ್ಣ ದಾಖಲೆಗಳ ಸಹಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದೇವೆ. ಬುಧವಾರ ಜಾಮೀನು ಪಡೆದು ಶ್ರೀಕಾಂತ ಪೂಜಾರಿ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಬಂಧನ ಖಂಡಿಸಿ ಪ್ರತಿಭಟನೆ-ಆರ್. ಅಶೋಕ ಎಂಟ್ರಿ: ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾದವರ ಬಂಧನ ಖಂಡಿಸಿ, ಬುಧವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ…

Read More

ರಾಯಚೂರು: ರಾಮನ ಹೋಲಿಕೆಯನ್ನು ಇನ್ನೊಬ್ಬರಿಗೆ ಹೋಲಿಸುವಂತದ್ದಲ್ಲಾ, ರಾಮನ ಹೆಸರನ್ನ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ರಾಮನ ಆದರ್ಶ ಹಾಗೂ ರಾಮನ ಜನಾನುರಾಗ ಸಿದ್ದರಾಮಯ್ಯನು ಸಹ ಪಡೆಯಲಿ. ಅವರಿಗೂ ನಾವು ಅಭಿನಂದಿಸೋಣ ಅಂತ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮಿ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಮಂತ್ರಾಲಯ ಶ್ರೀಗಳು, ಸಿಎಂ ಸಿದ್ದರಾಮಯ್ಯರನ್ನ ರಾಮನಿಗೆ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಯಾವ ಹೇಳಿಕೆ ಕೊಟ್ಟಿದ್ದಾರೆ ನಾನು ಗಮನಿಸಿಲ್ಲ. ರಾಮ ಎಲ್ಲ ರೀತಿಯಿಂದಲೂ ಅನುಕರಣೀಯ ಹಾಗೂ ಆದರ್ಶ ವ್ಯಕ್ತಿ. ನೀನು ಹೇಗಿರಬೇಕು ಅಂತ ಹೇಳುವಾಗ ರಾಮನಂತೆ ನೀನು ಇರು ಅಂತ ದೃಷ್ಟಾಂತ ಎಲ್ಲರೂ ಕೊಡುತ್ತಾರೆ. ಯಾರೊಂದಿಗೂ ಹೋಲಿಕೆ ಸರಿಯಲ್ಲ ಸಿದ್ದರಾಮಯ್ಯನವರಿಗೂ ಒಳ್ಳೆಯದಾಗಲಿ ಎಂದರು. ಭಾರತೀಯರ, ದೇಶದ ಹಿಂದೂಗಳ ಬಹುದಿನಗಳ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬೇಡಿಕೆ ಈಡೇರಿದೆ. ರಾಮ ಮಂದಿರ ಲೋಕಾರ್ಪಣೆ ದಿನ ಬಹುತೇಕ ನಾವು ಪಾಲ್ಗೊಳ್ಳುತ್ತೇವೆ. ವಿದ್ಯುತ್ ಪ್ಯಾನಲ್ ಚಾರ್ಜ್‍ನ್ನ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿ ಬಂದಿದ್ದೇವೆ ಅಂತ ಮಂತ್ರಾಲಯ ಶ್ರೀ ಹೇಳಿದರು.

Read More

ವಿಜಯಪುರ: ಕಾಂಗ್ರೆಸ್ ಸರ್ಕಾರ ಐಸಿಸ್ ಸರ್ಕಾರ  ಮಾದರಿ ಸರ್ಕಾರ ನಡೆಸುತ್ತಿದೆ, ಸೋನಿಯಾ ರಾಹುಲ್ ಖುಷಿ ಪಡಿಸಲು ರಾಮಮಂದಿರ‌ ಕುರಿತು ವಿರೋಧ ಹೇಳಿಕೆಯನ್ನಾ ಕಾಂಗ್ರೆಸ್ ಮುಖಂಡರು ನೀಡುತ್ತಿದ್ದಾರೆ ಎಂಬ ಪ್ರಹ್ಲಾದ ಜೋಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಬಿ ಎಲ್ ಡಿ ಇ ಕ್ಯಾಂಪಸ್ ನ‌ ಹೆಲಿಪ್ಯಾಡ್  ಬಳಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೇ ನೀಡಿದರು.  ನಾವು ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಗುರು ನಮನ  ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ. ಕೇಂದ್ರ ಸಚಿವರು ಐಸಿಸ್ ಮಾದರಿ  ಸರ್ಕಾರ ಎಂಬ ಹೇಳಿಕೆ ಸರಿಯಲ್ಲ. ಕಳೆದ ಐದು ವರ್ಷ ಬಿಜೆಪಿ ಸರ್ಕಾರ ಯಾವ ರೀತಿ ಸರ್ಕಾರ ನಡೆಸಿದೆ ಎಲ್ಲರಿಗೂ ಗೊತ್ತು. ಹಿಜಾಬ್, ಅಜಾನ್, ಹಲಾಲ್ ವಿಚಾರಗಳನ್ನು ನಡೆಸಿದರು. ಆಡಳಿತ ಯಂತ್ರ ಕೈಗೆ ತೆಗೆದುಕೊಂಡರು. ಆದ್ದರಿಂದಲೇ ಬಿಜೆಪಿಯವರಿಗೆ ರಾಜ್ಯದ ಜನ‌ ಪಾಠ ಕಲಿಸಿ ಮನೆಗೆ ಕಳಿಹಿಸಿದ್ದಾರೆ ಎಂದರು. ನಮ್ಮ ಸರ್ಕಾರ ಬಸವಾದಿ ಶರಣರ ಸರ್ಕಾರ. ಸರ್ವ‌ಜನಾಂಗದ ಶಾಂತಿ ತೋಟ ಎಂಬಂತೆ ಕೆಲಸ‌ ಮಾಡುತ್ತಿದ್ದೇವೆ. ನಾವು ಅನ್ನ…

Read More

ಬೆಂಗಳೂರು: ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಈಡೇರಿಸಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಜೀ (Narendra Modi) ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಪ್ರಕರಣಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಟೀಕಿಸಿದರು. https://ainlivenews.com/i-will-retire-from-politics-if-there-is-a-problem-with-covid-mp-renukacharya/ ಇನ್ನೂ  ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದ್ವೇಷ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು. ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ (Ayodhya) ಮಹರ್ಷಿ ವಾಲ್ಮೀಕಿ ದೇವಾಲಯದ…

Read More

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರದ ಮೊದಲ ಹಾಡು ಜನವರಿ 3 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರಮೋದ್ ಜಯ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಗೂ ಸ್ಪರ್ಷ ಹಾಡಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಮೊದಲ ಹಾಡಿನ ಕುರಿತಾದ ಪ್ರೋಮೊ ಬಿಡುಗಡೆಯಾಗಿದ್ದು ಹಾಡಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ “ದಿಲ್ ಖುಷ್” ಚಿತ್ರವನ್ನು ಪ್ರಮೋದ್ ಜಯ ನಿರ್ದೇಶಿಸಿದ್ದಾರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಿಂಪಲ್ ಸುನಿ ಅವರ ಬಳಿ ಕಾರ್ಯ ನಿರ್ವಹಿಸಿರುವ ಪ್ರಮೋದ್ ಜಯ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಐದು ಸುಮಧುರ ಹಾಡುಗಳಿದ್ದು, ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ನಿರ್ದೇಶನವಿದೆ. ನಿವಾಸ್ ನಾರಾಯಣ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ. ರಂಜಿತ್…

Read More

ನವದೆಹಲಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಭಯೋತ್ಪಾದಕ ದಾವೂದ್ ಇಬ್ರಾಹಿಂನ (Dawood Ibrahim) ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಶುಕ್ರವಾರ ಹರಾಜು ಹಾಕಲಾಗುವುದು. ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್‌ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.‌ ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ. 4.53 ಕೋಟಿ ರೂ.ಗೆ ರೆಸ್ಟೋರೆಂಟ್ ಮಾರಾಟ ಮಾಡಲಾಗಿದೆ. 3.53 ಕೋಟಿ ರೂ. ಆರು ಫ್ಲಾಟ್‌ಗಳು ಮತ್ತು 3.52 ಕೋಟಿ ರೂ.ಗೆ ಅತಿಥಿ ಗೃಹ ಕೂಡ ಮಾರಾಟವಾಗಿದೆ. 1993 ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ 1983 ರಲ್ಲಿ ಮುಂಬೈಗೆ ತೆರಳುವ ಮೊದಲು ಮುಂಬಾಕೆ ಗ್ರಾಮದಲ್ಲಿ ವಾಸಿಸುತ್ತಿದ್ದ. 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ನಂತರ ಭಾರತ ತೊರೆದಿದ್ದ. https://ainlivenews.com/the-water-of-16-holy-rivers-will-come-from-nepal-for-the-abhisheka-of-sri-rama-in-ayodhya/ 1993, ಮಾರ್ಚ್ 12…

Read More