ದೆಹಲಿ: ರಾಮಮಂದಿರದ (Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಕೇವಲ 7 ದಿನಗಳು ಬಾಕಿ ಉಳಿದಿದ್ದು, ಇಂದಿನಿಂದ ಪೂಜಾಕಾರ್ಯಗಳು ಆರಂಭಗೊಂಡಿದೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕನಾಗಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ. ಸೋಮವಾರ ರಾಂಚಿಯಲ್ಲಿರುವ (Ranchi) ಅವರ ನಿವಾಸದಲ್ಲಿ ಆಹ್ವಾನವನ್ನು ನೀಡಿದ್ದು, ಎಂಎಸ್ ಧೋನಿ ಭಕ್ತಿಪೂರ್ವಕವಾಗಿ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಧೋನಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಅವರು ಆಹ್ವಾನ ನೀಡಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆಗೆ ಧೋನಿಯನ್ನು ಆಹ್ವಾನಿಸಿದ ಸಂದರ್ಭ ಬಿಜೆಪಿ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕರ್ಮವೀರ್ ಸಿಂಗ್ ಸಹ ಉಪಸ್ಥಿತರಿದ್ದರು. ಇತ್ತೀಚಿಗಷ್ಟೇ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ವಿರಾಟ್ ಕೊಹ್ಲಿ (Virat Kohli) ಅವರನ್ನೂ ಪ್ರಾಣಪ್ರತಿಷ್ಠೆ…
Author: AIN Author
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವವು ಭಕ್ತಮಹಾಗಣ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಸಲ್ಲುವ ಶುಭ ಮೇಷ ಲಗ್ನ ಮುಹೂರ್ತದಲ್ಲಿ ಬಹಳ ವೈಭವದೊಂದಿಗೆ ನೆರವೇರಿತು. ರಥೋತ್ಸವಕ್ಕೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದು, ರಥವನ್ನ ಎಳೆದು, ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಭಕ್ತಿ ಇಚ್ಚಾನುಸಾರ ಸಮರ್ಪಿಸಿ ಪುನೀತರಾದರು. ಷಷ್ಠಿಯ ದಿನದಂದು ಮುಂಜಾನೆ 3ರಿಂದ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಆರಂಭವಾಗಲಿವೆ. ಅಭಿಷೇಕ ಕಾರ್ಯಗಳು ಪ್ರಾರಂಭಗೊಂಡು, 5:30ಕ್ಕೆ ಮಹಾಮಂಗಳಾರತಿ ನೆರವೇರಿತು. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ ಕಾಲದಲ್ಲಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂದಾಭಿಷೇಕ, ಭಸ್ಮದಭಿಷೇಕದೊಂದಿಗೆ ಹೂವಿನ ಅಲಂಕಾರ ನೆರವೇರಿಸಲಾಯಿತು. ರಾತ್ರಿ 8:30ರವರೆಗೂ ಭಕ್ತರಿಗೆ ದರ್ಶನ ವ್ಯವಸ್ಥೆ ದೊರೆಯಲಿದೆ. ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.…
ಬಿಗ್ ಬಾಸ್’ ಸೀಸನ್ 6 (Bigg Boss Kannada 6) ವಿನ್ನರ್ ಶಶಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ‘ಮೆಹಬೂಬಾ’ ಚಿತ್ರೀಕರಣದ ವೇಳೆ ಶಶಿ ಪೆಟ್ಟು ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಆತಂಕಗೊಂಡಿದ್ದಾರೆ ಮಾಡ್ರನ್ ರೈತ ಎಂದೇ ಫೇಮಸ್ ಆಗಿದ್ದ ‘ಬಿಗ್ ಬಾಸ್’ ಶಶಿ ಅವರು ತಮ್ಮ ಮುಂಬರುವ ಸಿನಿಮಾ ‘ಮೆಹಬೂಬಾ’ (Mehabooba) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ರಿಸ್ಕಿ ಸೀನ್ಸ್ ಶೂಟ್ ಮಾಡುವಾಗ ಬಿದ್ದು ಶಶಿ ಏಟು ಮಾಡಿಕೊಂಡಿದ್ದಾರೆ. ಸೂಕ್ತ ಚಿಕಿತ್ಸೆಯ ಬಳಿಕ ಶಶಿ ಇದೀಗ ಚೇತರಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ 6 ಬಿಗ್ ಬಾಸ್ ಶೋನಲ್ಲಿ ವಿಜೇತರಾಗಿದ್ದ ಶಶಿ ಕೃಷಿ ಮತ್ತು ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ಜೊತೆ ‘ಮೆಹಬೂಬಾ’ ಎಂಬ ಲವ್‌ಸ್ಟೋರಿ ಹೇಳಲು ಶಶಿ ರೆಡಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.
ಬೆಂಗಳೂರು: ಆರ್.ಟಿ.ಓ ಅಧಿಕಾರಿಗಳ ಯಡವಟ್ಟಿನಿಂದ ವ್ಯಕ್ತಿಯ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಸ್ಕೂರಿನಲ್ಲಿರುವ ಆರ್.ಟಿ.ಓ ದಲ್ಲಿ ನಡೆದಿದೆ ಡ್ರೈವರ್ ವಸಂತ್ ಕುಮಾರ್ ಅನುಮಾನಸ್ಪದ ಸಾವನ್ನಪ್ಪಿದ್ದು ಇದೇ ತಿಂಗಳ 10ನೇ ತಾರೀಖಿನಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.. ಪೀಣ್ಯ 2 ನೇ ಹಂತದಿಂದ ಲಾರಿ ಡ್ರೈವ್ ಮಾಡಿಕೊಂಡು ಹೋಗಿದ್ದ ವಸಂತ್ 9 ನೇ ತಾರೀಖಿನಂದು ಎಲೆಕ್ಟ್ರಾನಿಕ್ ಸಿಟಿ ಬಳಿ ಡ್ರೈವ್ ಮಾಡಿಕೊಂಡು ಹೋಗುವಾಗ ಆರ್.ಟಿ.ಓ ಅಧಿಕಾರಿಗಳು ಹಿಡಿದಿದ್ದಾರೆ ನಂತರ ಲಾರಿ ಡಾಕ್ಯೂಮೆಂಟ್ಸ್ ಲ್ಯಾಪ್ಸ್ ಆಗಿದೆ ಅಂತ ಲಾರಿ ಸೀಜ್ ಮಾಡಿದ್ದಾರೆ ಸೀಜ್ ಮಾಡಿ ಎಲೆಕ್ಟ್ರಾನಿಕ್ ಆರ್.ಟಿ.ಓ ಕಚೇರಿಗೆ ಲಾರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಆರ್.ಟಿ.ಓ ಇನ್ಸ್ಪೆಕ್ಟರ್ ಮತ್ತು ತಂಡದಿಂದ ಲಾರಿ ಪರಿಶೀಲನೆ ಮಾಡಿ ನಂತರ ಸೀಜ್ ಮಾಡಿದ್ದಾರೆ.. ಆಗ ವಸಂತ್ ಲಾರಿ ಮಾಲಾಕನಿಗೆ ಮಾಹಿತಿ ನೀಡಿದ್ದಾರೆ.. ಲಾರಿ ಮಾಲೀಕ ಬೆಳಿಗ್ಗೆ ನೋಡಿಕೊಳ್ಳೋಣ ಎಂದಿದ್ದಾರೆ ಆಗ ಲಾರಿಯಲ್ಲಿಯೇ ರಾತ್ರಿ ಇಡೀ ಮಲಗಿದ್ದ ವಸಂತ್.. ಬೆಳಗ್ಗೆ ಆರ್.ಟಿ.ಓ ಕಚೇರಿಯ ಒಳಭಾಗದಲ್ಲಿಯೇ ಮಲಗಿದ್ದ ಲಾರಿಯಲ್ಲಿ ಸಾವನಪ್ಪಿದ್ದ…
ಚಿಕ್ಕಮಗಳೂರು:-CM ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಮಾಜಿ ಶಾಸಕ ಸಿಟಿ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ಹಿರಿಯರು ಮತ್ತು ಸ್ಥಾನಕ್ಕೆ ಕೊಡಬೇಕಾದ ಗೌರವ ಕೊಡಲೇಬೇಕು. ಹೆಗಡೆಯವರ ಕಾರ್ಯಶೈಲಿ ಭಿನ್ನವಿದೆ. ಹಾಗಂತ ಮತ್ತೊಬ್ಬರನ್ನ ನೋಯಿಸಬಾರದು. ಅವರ ಹೇಳಿಕೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ. ರಾಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವನು. ಅವರು ಏಕವಚನದಲ್ಲಿ ಮಾತನಾಡಿರುವುದ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಘಜನಿ, ಘೋರಿ, ಬಾಬರ್ ಮಾನಸಿಕತೆ ಬಹಳ ಅಪಾಯಕಾರಿ. ಇಲ್ಲಿನ ಮುಸ್ಲಿಮರು ಅದರಿಂದ ಹೊರ ಬರಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ. ಘಜನಿ, ಕಿಲ್ಜಿ, ಘೋರಿ, ಔರಂಗಜೇಬ್, ಮೊಘಲರು, ಟಿಪ್ಪು ಕಾಲದಲ್ಲಿ 42 ಸಾವಿರ ದೇಗುಲ ಧ್ವಂಸ ಮಾಡಲಾಗಿತ್ತು. ಭಾರತೀಯ ಮುಸಲ್ಮಾನರು ಆ ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನ ಗುರುತಿಸಿಕೊಳ್ಳುವುದಿಲ್ಲ. ಎಲ್ಲಾ ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ನಾವು ನೋಡುವುದಿಲ್ಲ. ಇಲ್ಲಿನ ಮುಸ್ಲಿಮರಿಗೆ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಆದರ್ಶವಾಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ…
ಗದಗ:- ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕವಾಗಿ ಜನನಿಬಿಡ ಬಸ್ ನಿಲ್ದಾಣದ ಬಳಿ ರಸ್ತೆಯ ಮೇಲೆ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಟಂ ಟಂ ಚಾಲಕರ ಮೇಲೆ ದಾಳಿ ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯ ಎಸ್. ಎಮ್. ಶಿರಗುಪ್ಪಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಹುಲಕೋಟಿ ಗ್ರಾಮದ ಸಾಯಿ ನಗರ ನಿವಾಸಿಗಳಾದ ಟಂ ಟಂ ಚಾಲಕರಾದ ಮಣಿಕಂಠ ತಂದೆ ಕರಿಯಪ್ಪ ಕೊಂಡಿಕೊಪ್ಪ (22), ಹರೀಶ್ ತಂದೆ ಹನಮಂತಪ್ಪ ಹರಕುಣಿ (23) ಎಂಬ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮರಿಯಪ್ಪ ತಂದೆ ಕರಿಯಪ್ಪ ಕವಡಿಕಿ ಎಂಬ ಟಂ ಟಂ ಚಾಲಕ ಪರಾರಿಯಾಗಿದ್ದಾನೆ. ಬಂಧಿತರಿಂದ 13,440 ರೂ. ಮೌಲ್ಯದ 448 ಗ್ರಾಮ ಗಾಂಜಾ ಹಾಗೂ ಟಂಟಂ ಜಪ್ತಿ ಮಾಡಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ:- ಮುರುಡೇಶ್ವರದಲ್ಲಿ ಕಡಲಬ್ಬರಕ್ಕೆ ಬೀಚ್ ಬಳಿಯಿದ್ದ ಗೂಡಂಗಡಿಗಳಿಗೆ ಹಾನಿ ಆಗಿರುವ ಘಟನೆ ಜರುಗಿದೆ. ನಿನ್ನೆ ಸಂಕ್ರಾಂತಿ ಹಬ್ಬ ಹಿನ್ನೆಲೆ ಮುರುಡೇಶ್ವರನ ಸನ್ನಿಧಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಬೀಚ್ ಬಳಿ ಇದ್ದ ಗೂಡಂಗಡಿಗಳಲ್ಲಿನ ವಸ್ತುಗಳು ಸಮುದ್ರಪಾಲಾಗಿವೆ. ಇದರಿಂದಾಗಿ ಅಂಗಡಿ ಇಟ್ಟುಕೊಂಡಿದ್ದ ಮಾಲೀಕರೀಗ ಕಂಗಾಲಾಗಿದ್ದು ಕಣ್ಣೀರು ಹಾಕುವಂತ ಪರಿಸ್ಥಿತಿ ಎದುರಾಗಿದೆ. ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಸಮುದ್ರದ ಅಲೆಗಳು ಕಣ್ಣೀರು ತರಿಸಿವೆ. ನಿನ್ನೆ ರಾತ್ರಿ ಏಕಾಏಕಿ ಸಮುದ್ರದ ಅಬ್ಬರ ಹೆಚ್ಚಾದ ಹಿನ್ನೆಲೆ ಗೂಡಂಗಡಿಗಳು ಹಾನಿಗೊಳಗಾಗಿವೆ. ಸಮುದ್ರದ ಅಲೆಯಲ್ಲಿ ಗೂಡಂಗಡಿಗಳ ಹಲವು ಸಾಮಾನುಗಳು ಕೊಚ್ಚಿ ಹೋಗಿವೆ. ತನ್ನ ಅಂಗಡಿ ಹಾನಿಗೊಳಗಾದದ್ದು ನೋಡಿ ಮಹಿಳೆಯೊಬ್ಬರು ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿದೆ.
ವಿಜಯನಗರ:- ಕನ್ಯಾ ಕೊಡೋಕೆ ಯಾರು ಮುಂದೆ ಬರ್ತಿಲ್ಲ ಅಂತಾ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಜರುಗಿದೆ. ಬಿ.ಮಧುಸೂದನ್ (26) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ. ಮದ್ವೆಗಾಗಿ ಮೃತ ಮಧುಸೂದನ್ ಮೂರು ಕನ್ಯಾ ನೋಡಿ ಬಂದಿದ್ದ. ಹುಡಗನ ತಂದೆ ವರ್ತನೆ ಸರಿಯಿಲ್ಲ ಅಂತಾ ಹುಡ್ಗಿ ಕಡೆಯವರು ನಿರಾಕರಣೆ ಮಾಡಿದ್ದಾರೆ. ನನಗೆ ಮದ್ವೆನೇ ಅಗಲ್ಲ ಅಂತಾ ನೊಂದಿದ್ದ ಮಧುಸೂದನ್, ಕನ್ಯೆ ಸಿಗದ ಹಿನ್ನಲೆ, ಮದ್ಯಪಾನದ ಚಟಕ್ಕೆ ಬಿದ್ದಿದ್ದ. ಯುವಕನ ತಂದೆ ಅರೆ ಹುಚ್ಚನ ಹಾಗೇ ವರ್ತನೆ ಮಾಡುವ ಹಿನ್ನಲೆ, ಹುಡುಗಿಯ ಕಡೆಯವರು ವಾಪಾಸ್ ಆಗುತ್ತಿದ್ದಾರೆ. ಮದ್ವೆ ಆಗ್ತಿಲ್ಲ ಅಂತಾ ಮನೊಂದು ಮಧುಸೂದನ್ ವಿಷ ಸೇವಿಸಿದ್ದ. ಜ.05 ರಂದು ವಿಷ ಕುಡಿದಿದ್ದ ಮಧುಸೂದನ್,ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಚಿಕಿತ್ಸೆ ಫಲಿಸದೆ ಜ. 13 ರಂದು ಸಾವನ್ನಪ್ಪಿದ್ದಾನೆ. ಮಧುಸೂದನ್‌ನ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಣ್ಣು ಸಿಗ್ತಿಲ್ಲ , ಮದ್ವೆನೇ ಆಗಲ್ಲ ಅಂತಾ…
ಹುಬ್ಬಳ್ಳಿ: ಬಹುಜನ ಸಮಾಜ ಪಾರ್ಟಿ ಯ ರಾಷ್ಟ್ರೀಯ ಅಧ್ಯಕ್ಷರು, ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿಗಳು, ಉಕ್ಕಿನ ಮಹಿಳೆ ಬೆಹನ್ ಕುಮಾರಿ ಮಾಯಾವತಿಜಿ ರವರ 68ನೇ ಹುಟ್ಟು ಹಬ್ಬವನ್ನ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾಸಭಾ ಕ್ಷೇತ್ರದಲ್ಲಿ ಆಚರಿಸಲಾಯಿತು. ಈ ಸಮಯದಲ್ಲಿ ಬಿಎಸ್ ಪಿ ಧಾರವಾಡ ಜಿಲ್ಲಾ ಉಸ್ತುವಾರಿ ರೇವಣಸಿದ್ಧ ಹೊಸಮನಿ ಮತ್ತು ಪಕ್ಷದ ಹಿರಿಯ ಮುಖಂಡರು ನಿಸಾರ್ ಅಹ್ಮದ್ ಮುಲ್ಲಾ, ಶೌಕತ್ ಅಲಿ ಹೊಸಳ್ಳಿ, ಪಧಾಧಿಕಾರಿಗಳದ ನಾಗರಾಜ್ ಗಳಗಿ, ದ್ಯಾಮಣ್ಣ ಕಮ್ಮಾರ, ಯಾಸೀನ್ ಮೇಗಡೆ, ತೌಸೀಫ್ ಔರಂಗವಾಲೆ, ತೌಸೀಫ್ ಮುಲ್ಲಾ, ರಫೀಕ್ ಮುಲ್ಲಾ, ಹಸನ ಗದಗಕರ್, ಜಾಕೀರ್, ಮದಾರ್ ಮ ಕೇಂದ್ರ, ಆರಿಫ್, ಅಷ್ಪಾಕ್ ತಡಕೋಡ ಪಾಲ್ಗೊಂಡಿದ್ದರು.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ ಸಂಸದ ಅನಂತ್‍ಕುಮಾರ್ ಹೆಗಡೆಯವರ ಹೇಳಿಕೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. https://ainlivenews.com/postponement-of-congress-workers-convention-scheduled-on-january-21/ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅನಂತ್‍ಕುಮಾರ್ ಹೆಗಡೆಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ನಿಷ್ಕಲ್ಮಶ ಭಾವನೆ ಇದೆ. ಏನು ಬಾಯಿಗೆ ಬರುತ್ತೋ ಅದನ್ನು ಅವರು ನನ್ನ ಹಾಗೆ ಮಾತಾಡಿ ಬಿಡ್ತಾರೆ. ಹಿಂದೆ ಮುಂದೆ ನೋಡೋದೇ ಇಲ್ಲ. ಸಿದ್ದರಾಮಯ್ಯ ಕೇವಲ ಸಿದ್ದರಾಮಯ್ಯ ಅಲ್ಲ, ಈ ರಾಜ್ಯದ ಸಿಎಂ. ಸಿದ್ದರಾಮಯ್ಯ ಏನೋ ಮಾತಾಡ್ತಾರೆ ಎಂದು ನಾವ್ಯಾಕೆ ಚಿಕ್ಕವರಾಗಬೇಕು? ನಾವು ಚಿಕ್ಕವರಾಗೋದು ಬೇಡ ಎಂದಿದ್ದಾರೆ. ಅನಂತ್‍ಕುಮಾರ್ ಹೆಗಡೆಯವರು ಸುಸಂಸ್ಕೃತ ಕುಟುಂಬದಿಂದ ಬಂದವರು. ನಾವು ನಮ್ಮ ಭಾಷೆ ಹಿಡಿತದಲ್ಲಿ ಇಟ್ಕೋಬೇಕಾಗುತ್ತೆ. ಅವರ ಹೇಳಿಕೆ ವೈಯಕ್ತಿಕವಾಗಿ ನನಗೆ ಸ್ವಲ್ಪ ಬೇಸರ ತರಿಸಿದೆ ಎಂದು ಅವರು ಹೇಳಿದ್ದಾರೆ. ಅನಂತ್‍ಕುಮಾರ್ ಹೆಗಡೆಯವರ ಹೇಳಿಕೆಯಗೆ ನಯವಾಗಿಯೇ ವಿರೋಧಿಸಿದ ಅವರು, ಸಿದ್ದರಾಮಯ್ಯ ಭಾಷೆ ಏನು, ಹೇಗೆ ಎಂದು ನಮಗೆ ಬೇಡ. ಅವರು ಸಿಎಂ…