ನಟನಾಗಿ ಚಿತ್ರರಂಗಕ್ಕೆ ಬಂದ ತರುಣ್ ಸುಧೀರ್ ನಂತರ ನಿರ್ದೇಶಕನಾಗಿದ್ದು ಯಾಕೆ!? ಎಂಬುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶಿರುವ ಕಾಟೇರ ಸಿನಿಮಾ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು, ಕೋಟಿ ಕೋಟಿ ಬಾಚುತ್ತಿದೆ. ಇನ್ನೂ ಈ ಸಿನಿಮಾ ನಿರ್ದೇಶಿಸಿರುವ ತರುಣ್ ಸುಧೀರ್ ಅವರು ಮೊದಲು ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಟನಾಗಬೇಕು ಎಂಬ ಆಸೆಯಿಂದ. ಆದರೆ ನಿರ್ದೇಶಕನಾಗಿದ್ಯಾಕೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಜೀವನದಲ್ಲಿ ನಾನು ಪ್ಲ್ಯಾನ್ ಮಾಡಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ನನಗೆ ಗೊತ್ತಿರುವುದು. ನಮ್ಮ ತಂದೆ ಇಲ್ಲಿ ಸೇವೆ ಮಾಡಿದ್ದಾರೆ. ಅವರ ಹೆಸರಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ನಟನಾಗಿ ಒಂದಷ್ಟು ವರ್ಷ ಶ್ರಮಪಟ್ಟೆ. ಆದರೆ ಅದು ನನಗೆ ವಕೌರ್ಟ್ ಆಗಲಿಲ್ಲ. ನಿರ್ದೇಶನ ಟ್ರೈ ಮಾಡು ಅಂತ ಸ್ನೇಹಿತರು ಹೇಳಿದರು. ಆಗ ಸಹ-ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದೆ. ಆಮೇಲೆ ‘ಚೌಕ’ ಚಿತ್ರ ನಿರ್ದೇಶನ ಮಾಡಿದೆ. ಹಾಗೆ ನನ್ನ ಪಯಣ ಮುಂದುವರಿದಿದೆ ಎಂದು ಹೇಳಿದ್ದಾರೆ.
Author: AIN Author
ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳನ್ನು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತದ ಯುವ ಆರಂಭಿಕ ಶುಭಮನ್ ಗಿಲ್‌ಗೆ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಮಹತ್ವದ ಸಲಹೆ ನೀಡಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಾರದು ಎಂದು ಹೇಳಿದ್ದಾರೆ. ಸೆಂಚೂರಿಯನ್‌ನ ಸೂಪರ್‌ಸ್ಪೋರ್ಟ್ ಕ್ರೀಡಾಂಗಣದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಈ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಮತ್ತು 32 ರನ್‌ಗಳಿಂದ ಹೀನಾಯ ಸೋಲನ್ನು ಅನುಭವಿಸಿತು. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಗಿಲ್, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 26 ರನ್ ಗಳಿಸಿ ಔಟ್ ಆಗಿದ್ದರು. ಇವರು ಕ್ರಮವಾಗಿ ವೇಗಿ ನಂಡ್ರೆ ಬರ್ಗರ್ ಮತ್ತು ಮಾರ್ಕೊ ಯೆನ್ಸೆನ್‌ಗೆ ವಿಕೆಟ್ ಒಪ್ಪಿಸಿದ್ದರು ಸ್ಟಾರ್ ಸ್ಪೋರ್ಟ್ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, ಬಿಳಿ ಚೆಂಡಿಗಿಂತ ಟೆಸ್ಟ್ ಕ್ರಿಕೆಟ್‌ನ ಅಗತ್ಯಗಳನ್ನು ನೆನೆಪಿಸಿಕೊಂಡು ಬ್ಯಾಟ್ ಮಾಡಬೇಕೆಂದು ಶುಭಮನ್…
ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ರೈತರು ಬೆಳೆದ ಬೆಳೆಯೆಲ್ಲಾ ಹಾಳಾಗಿ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ರೈತರ ನೆರವಿಗೆ ರಾಜ್ಯ ಸರ್ಕಾರ ಬರ ಪರಿಹಾರ ಘೋಷಿಸಿದೆ. ಆದರೆ ಬರ ಪರಿಹಾರ ಪಡೆಯಲು ಈ ಕೆಲಸ ಮಾಡಲೇಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ X ಮಾಡಿರುವ ಸಿಎಂ ಸಿದ್ದರಾಮಯ್ಯ, ಬರ ಪರಿಹಾರ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ ಎಂದು ಹೇಳಿದ್ದಾರೆ. ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು ಎಂದು ತಿಳಿಸಿದ್ದಾರೆ. https://twitter.com/CMofKarnataka/status/1742109158361780275?ref_src=twsrc%5Etfw%7Ctwcamp%5Etweetembed%7Ctwterm%5E1742109158361780275%7Ctwgr%5Eb178a8a0005a37b2611a18718f57c63f1b742bef%7Ctwcon%5Es1_c10&ref_url=http%3A%2F%2Fapi-news.dailyhunt.in%2F
ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಿಂತ ಹೆಚ್ಚೆಚ್ಚು ತಮ್ಮ ಖಾಸಗಿ ವಿಚಾರವಾಗಿಯೇ ಚಾಲ್ತಿಯಲ್ಲಿರುತ್ತಾರೆ. ಇದೀಗ ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ (Koffe With Karan 8) ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸೆನ್ಸೇಷನಲ್ ಶೋ ಅಂದರೆ ಅದು ಕಾಫಿ ವಿತ್ ಕರಣ್ ಕಾರ್ಯಕ್ರಮ. ಏನಾದರೂ ವಿವಾದಗಳ ಅಥವಾ ಸ್ಟಾರ್‌ಗಳ ಸೀಕ್ರೆಟ್ ರಿವೀಲ್ ಆಗುವ ಮೂಲಕ ಶೋ ಅಭಿಮಾನಿಗಳ ಗಮನ ಸೆಳೆದಿದೆ. ಹೀಗಿರುವಾಗ ಕರಣ್ ಶೋಗೆ ಶ್ರೀದೇವಿ ಪುತ್ರಿಯರು ಜಾನ್ವಿ-ಖುಷಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ತಮ್ಮ ರಿಯಲ್ ಲೈಫ್ ಲವ್ ಬಗ್ಗೆ ಜಾನ್ವಿ (Janhvi Kapoor) ರಿವೀಲ್ ಮಾಡಿದ್ದಾರೆ. ಜಾನ್ವಿ ಕಪೂರ್-ಶಿಖರ್ ಪಹಾಡಿಯಾ ಡೇಟಿಂಗ್ ದೃಢವಾಗಿದೆ. ಕಾರ್ಯಕ್ರಮದಲ್ಲಿ ನೀವು ಹೆಚ್ಚಾಗಿ ಫೋನಿನಲ್ಲಿ ಮಾತನಾಡೋದು ಯಾರ ಜೊತೆ, ನಿಮಗೆ ಯಾರು ತುಂಬಾ ಕ್ಲೋಸ್ ಎಂದು ಕರಣ್ ಜೋಹರ್ (Karan Johar) ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಜಾನ್ವಿ, ಮೊದಲಿಗೆ ಅಪ್ಪ, ತಂಗಿ ಖುಷಿ, ಶಿಖು ಎಂದು ಹೇಳಿದ್ದರು. ಶಿಖು ಎಂದು ಶಿಖರ್ ನಿಕ್ ನೇಮ್…
ಹೊಸ ವರ್ಷದ (New Movie) ಮುನ್ನ ದಿನ ಶಿವರಾಜ್ ಕುಮಾರ್ (Shivaraj Kumar) ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು ದಿನಕರ್ ತೂಗುದೀಪ್ (Dinkar Thugudeep). ಶಿವರಾಜ್ ಕುಮಾರ್ ಅವರ ಚಿತ್ರ ಮಾಡುವುದಾಗಿ ಘೋಷಿಸಿಕೊಂಡಿದ್ದರು. ಇದೀಗ ಶಿವಣ್ಣ ನಟನೆಯ 131ನೇ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಶಿವರಾಜ್ ಕುಮಾರ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ. ಉತ್ಸಾಹದ ಚಿಲುಮೆಯಂತಿರುವ ಖ್ಯಾತ ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಿದೆ. ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ. ಪ್ರೀ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಶೀರ್ಷಿಕೆ ಬಿಡುಗಡೆಯಾಗಲಿದೆ.…
ನಟ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾ ಘೋಷಣೆಯಾಗಿದ್ದು, ದರ್ಶನ್ ಅವರ ಸಹೋದರ ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣಗೆ ದಿನಕರ್ ತೂಗುದೀಪ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಎಂಬ ಕಾರಣಕ್ಕೆ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್. ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರಲಿದ್ದು, ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಹೆಣೆದಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಶಿವಣ್ಣ ಜೊತೆ ದೊಡ್ಡ ತಾರಾಬಳಗ ಇರಲಿದೆ. ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಶಿವರಾತ್ರಿ ಹಬ್ಬಕ್ಕೆ ಚಿತ್ರದ ಟೈಟಲ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಹಿಂದೆ ನಟ ಪುನೀತ್ ರಾಜ್ಕುಮಾರ್ ಹಾಗೂ ದಿನಕರ್…
ಹೆಚ್ಚು ಜನರು ಅಡುಗೆ ಟೇಸ್ಟಿ ಆಗಿ ಇರಲಿ ಅಂತ ಹೆಚ್ಚು ಎಣ್ಣೆ ಬಳಕೆ ಮಾಡ್ತಾರೆ. ಆದರೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಹೀಗಾಗಿ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ, ಇದರ ಡೀಟೈಲ್ಸ್ ನಾವು ಕೊಟ್ಟಿದ್ದೀವಿ! ಹೌದು, ಒಂದು ಸ್ಪೂನ್ ಎಣ್ಣೆ ತಿನ್ನುವ ಬದಲು ಒಂದು ಡ್ರೈ ಚಪಾತಿಯನ್ನೇ ತಿಂದುಬಿಡಬಹುದು. ಒಂದು ಸ್ಪೂನ್ ಎಣ್ಣೆಯಲ್ಲಿ 120 ಕ್ಯಾಲೊರಿ ಇರುತ್ತದೆ. ಅತಿಯಾಗಿ ಎಣ್ಣೆ ತಿಂದರೆ ದೇಹಕ್ಕೇನಾಗುತ್ತದೆ? ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಬೇಧಿ ಸುಲಭವಾಗಿ ತೂಕ ಹೆಚ್ಚಾಗುತ್ತದೆ, ಬೊಜ್ಜಿನ ದೇಹ ನಿಮ್ಮದಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಸ್ಟ್ರೋಕ್‌ಗೆ ಆಹ್ವಾನ ನೀಡಿದಂತೆ ಡಯಾಬಿಟಿಸ್ ಬರುವ ರಿಸ್ಕ್ ಹೆಚ್ಚು ಮಾಡುತ್ತದೆ. ಮೆದುಳಿನ ಕೆಲಸದ ಜೊತೆ ಆಟ ಆಡುತ್ತದೆ ಮೊಡವೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಹೀಗಾಗಿ ಅಡುಗೆಯಲ್ಲಿ ಮಿತವಾಗಿ ಎಣ್ಣೆ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.
ದಾವಣಗೆರೆ: ಕೋರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಸವಾಲನ್ನ ಹಾಕಿದ್ದಾರೆ. ದಾವಣಗೆರೆಯಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಆರೋಪ ಸಾಬೀತು ಮಾಡುವಂತೆ ಸವಾಲು ಹಾಕಿದ್ದಾರೆ. ಕೋವಿಡ್ ನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ಹಗರಣ ನಡೆದಿದೆ ಎಂದಿದ್ದಾರೆ. ಆಗ ಇವರು ಶಾಸಕರಾಗಿದ್ದರು. ನಾವು ಕೂಡ ಮಾಸ್ಕ್, ಆಕ್ಸಿಜನ್ ಸೇರಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಸದನದಲ್ಲಿಯೇ ದಾಖಲೆ ತೋರಿಸಿದ್ದೇವೆ ಎಂದು ತಿಳಿಸಿದ್ದಾರೆ. https://ainlivenews.com/golden-opportunity-in-the-postal-department-apply-today-salary-20k/ “ಯತ್ನಾಳ ಕೂಡ ಆಗ ಶಾಸಕರಾಗಿದ್ದರು, ಯಾಕೆ ಮಾತನಾಡಲಿಲ್ಲ, ಈಗ ಆರೋಪ ಮಾಡುತ್ತಿದ್ದಾರೆ. ಇವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ವಿಜಯಪುರದಲ್ಲಿ ಪ್ರಭಾವಿ ಸಚಿವರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸರ್ಕಾರದಲ್ಲಿ ಕೆಲಸ ಮಾಡಿಕೊಂಡು ಆರೋಪ ಮಾಡೋದು…
ಜನರು ಬ್ಯುಸಿನೆಸ್ ಗೆ ಕೈ ಹಾಕ್ತಾರೆ. ಅದ್ರಲ್ಲಿ ಯಶಸ್ವಿಯಾಗುವ ಕನಸು ಕಂಡು ಅದಕ್ಕೆ ಹಣ ಸುರಿಯುತ್ತಾರೆ. ಆದ್ರೆ ದಿನ ಕಳೆದಂತೆ ಹಣಕಾಸಿನ ಸಮಸ್ಯೆ ಹಾಗೂ ಸರಿಯಾದ ಪ್ಲಾನಿಂಗ್ ಇಲ್ಲದೆ ಮಾಡುವ ಕೆಲಸ ವ್ಯವಹಾರದಲ್ಲಿ ಹಿನ್ನಡೆಯಾಗಲು ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಅಪ್ ಕಂಪನಿಗಳಿಗೆ ಹಣ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಅವು ತಮ್ಮ ಉದ್ಯೋಗಿ ಗಳನ್ನು ಕೆಲಸದಿಂದ ತೆಗೆಯುತ್ತಿವೆ. ಐಬಿಎಂನ ಇತ್ತೀಚಿನ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದೆ. ವರದಿಯ ಪ್ರಕಾರ, 91 ಪ್ರತಿಶತದಷ್ಟು ಸ್ಟಾರ್ಟ್‌ಅಪ್‌ಗಳು ಪ್ರಾರಂಭವಾದ ಐದು ವರ್ಷಗಳಲ್ಲಿ ಮುಚ್ಚುತ್ತವೆ. ನೀವು ಈಗಾಗಲೇ ಸ್ಟಾರ್ಟ್ ಅಪ್ ಹೊಂದಿದ್ದರೆ ಅಥವಾ ಸ್ಟಾರ್ಟ್ ಅಪ್ ಶುರು ಮಾಡುವ ಆಲೋಚನೆಯಲ್ಲಿದ್ದರೆ ಮೊದಲು ಅದ್ರ ಪ್ಲಾನಿಂಗ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಕೊನೆಯಲ್ಲಿ ಕೈಸುಟ್ಟುಕೊಳ್ಳುವ ಬದಲು ಆರಂಭದಿಂದಲೇ ಪ್ಲಾನ್ ರೀತಿಯಲ್ಲಿ ಕೆಲಸ ಮಾಡಿದ್ರೆ ಯಶಸ್ಸು ಸಾಧ್ಯ. ಮೊದಲು ಈ ಕೆಲಸಗಳನ್ನು ಮಾಡಬೇಕು;- *ಉತ್ತಮ ಉದ್ಯೋಗಿಗಳು *ಗ್ರಾಹಕರನ್ನು ಹಿಡಿದಿಡಿ *ಪ್ರಚಾರಕ್ಕೆ ಗಮನ ನೀಡಿ *ಆಫರ್ ಮತ್ತು ಡಿಸ್ಕೌಂಟ್ ಗೆ…
ಆಪಲ್ ಬೀಟ್ರೂಟ್ ಕ್ಯಾರೆಟ್ ಮಿಶ್ರಿತ ಜ್ಯೂಸನ್ನು ಎಬಿಸಿ ಜ್ಯೂಸ್ ಎನ್ನಲಾಗುತ್ತದೆ . ಸಾಕಷ್ಟು ವಿಟಮಿನ್ಸ್ ಮತ್ತು ಪೋಷಕಾಂಶಗಳು ಹೇರಳವಾಗಿರುವ ಈ ರಸ ದೇಹಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಹೆಚ್ಚು ಪೂರಕ ಎನಿಸಿದೆ ಚರ್ಮವನ್ನು ಪುನಶ್ಚೇತನಗೊಳಿಸುವ ಪರಿಪೂರ್ಣ ನಿಮಿಷ ಕರಣ ಪಾನೀಯವಾಗಿರುವ ಎಬಿಸಿ ಜ್ಯೂಸ್ ಚರ್ಮ ಬೇಗ ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತದೆ ಉದ್ದ ಹಾಗೂ ಸಮೃದ್ಧ ಕೂದಲು ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆ ಚರ್ಮದ ಶುಷ್ಕತೆಯನ್ನು ತಪ್ಪಿಸುತ್ತದೆ ಮುಖದ ಮೇಲಿನ ಮೊಡವೆ ಕಲೆಗಳನ್ನು ನಿವಾರಿಸಿ ಚರ್ಮದ ಒಳಗಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಕೂಡ ಚರ್ಮದ ಕಾಂತಿಯನ್ನು ಹೆಚ್ಚಿಸುವ ಮತ್ತು ಬಿಸಿಲಿನಿಂದ ಚರ್ಮನು ರಕ್ಷಿಸುವ ಶಕ್ತಿ ಹೊಂದಿದೆ