Author: AIN Author

ಬೆಂಗಳೂರು: ಸಂಸದ ಅನಂತ್‌ಕುಮಾರ್ ಹೆಗಡೆ ಬಂಧನ ಮಾಡಬೇಕಾ, ಬೇಡ್ವಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಸಂಸದರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಂಸದರ ಮೇಲೆ ಎಫ್‌ಐಆರ್ ಆಗಿದೆ. ಪೊಲೀಸರು ಸಾಕ್ಷ್ಯ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ಅದಾದ ಮೇಲೆ ಮುಂದಿನ ಕ್ರಮ ಏನು ಆಗಬೇಕೋ ಅದು ಕಾನೂನು ರೀತಿ ಆಗುತ್ತದೆ. ಅವರನ್ನು ಅರೆಸ್ಟ್ ಮಾಡಬೇಕಾ, ಮಾಡಬಾರದಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದರು. ನಾವು ಗೃಹ ಇಲಾಖೆಯಿಂದ ಯಾವುದೇ ಡೈರೆಕ್ಷನ್ ಕೊಡೋದಿಲ್ಲ. ಅವರನ್ನು ಅರೆಸ್ಟ್ ಮಾಡಿ, ಬಿಡಿ ಅಂತ ನಾನು ಯಾವತ್ತೂ ಯಾರಿಗೂ ಹೇಳಿಲ್ಲ. ಹೇಳೋದು ಇಲ್ಲ. ಸ್ಥಳೀಯ ಪೋಲೀಸರು ಯಾವ ಸೆಕ್ಷನ್ ಹಾಕಬೇಕೋ ಆ ಸೆಕ್ಷನ್ ಹಾಕಿದ್ದಾರೆ. ಆ ಸೆಕ್ಷನ್‌ನಲ್ಲಿ ಅರೆಸ್ಟ್ ಮಾಡಬೇಕು ಎಂದು ಇದ್ದರೆ ಅರೆಸ್ಟ್ ಮಾಡುತ್ತಾರೆ ಎಂದು ತಿಳಿಸಿದರು

Read More

ಕಲಬುರಗಿ : ಬಿಜೆಪಿಯನ್ನ ಮತ್ತಷ್ಟು ಬಲಪಡಿಸಲು ನಿರ್ಧರಿಸಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದೀಗ ಕಲಬುರಗಿಯ ಜಿಲ್ಲಾ ಘಟಕಕ್ಕೆ ಜೋಡೆತ್ತುಗಳನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನಗರ ಘಟಕಕ್ಕೆ ಚಂದು ಪಾಟೀಲ್ ಹಾಗು ಗ್ರಾಮಾಂತರ ಘಟಕಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಗಿ ನೇಮಕವಾಗಿದ್ದಾರೆ..ಈಗಾಗಲೇ ರದ್ದೇವಾಡಗಿ ಒಂದು ಬಾರಿ ಅಧ್ಯಕ್ಷರಾಗಿ ಇದೀಗ ಎರಡನೇ ಬಾರಿಗೂ ಆಯ್ಕೆಯಾಗಿ ಜಾಕ್ ಪಾಟ್ ಹೊಡೆದಿದ್ದಾರೆ. ಇಬ್ಬರೂ ಮುಖಂಡರು ಒಟ್ಟಾಗಿ ಕಾರ್ಯಕರ್ತರ ಜೊತೆ ಶ್ರಮಿಸಿ ಲೋಕ ಸಮರ ಗೆಲ್ಲಲು ಮುಂದಾಗಿ ಅಂತ ಬಿವೈವಿ ಕಿವಿಮಾತು ಹೇಳಿದ್ದಾರೆ…

Read More

ಬೆಂಗಳೂರು: ನಗರದ ಹಲಸೂರು ಕೆರೆಯ ಸಮೀಪದ ಕೆನ್ನಿಂಗ್ಟನ್‌ ಜಂಕ್ಷನ್ ಬಳಿ ಕುಸಿದಿದ್ದ ಬಿಬಿಎಂಪಿ ವೈಟ್ ಟಾಪಿಂಗ್ ರಸ್ತೆಯನ್ನು ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ಕಾರ್ಯ ಪಾಲಕ ಅಭಿಯಂತರ ನಿರಂಜನ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ವೈಟ್ ಟಾಪಿಂಗ್ ರಸ್ತೆ ಕುಸಿತಕ್ಕೆ ಸಂಬಂಧಪಟ್ಟಂತೆ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತ್ತು. ಈ ಸಂಬಂಧ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಡಾ. ಸತೀಶ್ ಕುಮಾರ್ ನೀಡಿದ ದೂರು ದಾಖಲಿಸಿಕೊಂಡ ಲೋಕಾಯುಕ್ತ ಇಲಾಖೆ, ಗುಂಡಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಗುಣಮಟ್ಟ ಪರಿಶೀಲನೆ ನಡೆಸಿದೆ. ಪರಿಶೀಲನೆ ಬಳಿಕ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಮೋಹನ್, ಜನರ ಹಣ ಪೋಲಾಗುತ್ತಿರುವುದನ್ನು ಮನಗಂಡು ನಾವು ಲೋಕಾಯುಕ್ತರಿಗೆ ದೂರು ನೀಡಿದ್ದೆವು. ನಮ್ಮ ದೂರಿಗೆ ಸ್ಪಂದಿಸಿದ ಲೋಕಾಯುಕ್ತರು ಸ್ಥಳಕ್ಕೆ ಆಗಮಿಸಿ ಗುಣಮಟ್ಟವನ್ನು ಪರಿಶೀಲನೆ ಮಾಡಿದ್ದಾರೆ ಎಂದರು. ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್‌ರವರು ವಾಹಿನಿಯೊಂದಕ್ಕೆ ಹೇಳಿಕೆ…

Read More

ಬೆಂಗಳೂರು : ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಗಾಂಜಾಗಾಗಿ ಜೈಲು ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ಗಲಾಟೆ ನಡೆದಿರುವ ವಿಚಾರ ಸಂಬಂಧ ಬಿಜೆಪಿ ಪ್ರತಿಕ್ರಿಯಿಸಿದೆ. ಈ ಕುರಿತು ಟ್ವೀಟ್​ ಮಾಡಿರುವ ರಾಜ್ಯ ಬಿಜೆಪಿ, ಕಲ್ಬುರ್ಗಿಯನ್ನು ರಿಪಬ್ಲಿಕ್‌ ಅನ್ನಾಗಿಸಿಕೊಂಡಿರುವ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿಯಲ್ಲಿ ಬರೀ ಅಕ್ರಮಗಳದ್ದೇ ಸದ್ದು ಎಂದು ಲೇವಡಿ ಮಾಡಿದೆ. ಜೈಲಿನಲ್ಲಿರುವ ವಿಚಾರಣಾಧೀನ ಖೈದಿ ಹಾಗೂ ಜೈಲು ಸಿಬ್ಬಂದಿಗಳ ನಡುವೆ ಗಾಂಜಾಗಾಗಿ ಹೊಡೆದಾಟ ನಡೆದಿದೆ. ಕರ್ನಾಟಕದ ಉಳಿದೆಡೆ ಜೈಲು ಶಿಕ್ಷೆ ಅನುಭವಿಸುವ ತಾಣವಾದರೆ, ಕಲ್ಬುರ್ಗಿಯಲ್ಲಿ ಮಾತ್ರ ಜೈಲು ಮಜಾ ಮಾಡುವ, ವ್ಯಸನ ಮಾಡುವ ತಾಣವಾಗಿದೆ ಎಂದು ಚಾಟಿ ಬೀಸಿದೆ. ಸಚಿವ ಪ್ರಿಯಾಂಕ್‌ ಖರ್ಗೆಯವರ ಕೃಪಾಕಟಾಕ್ಷದಿಂದ ಕಲ್ಬುರ್ಗಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದೆ. ಮಾತ್ರವಲ್ಲದೆ ಜೈಲುಗಳು ಸಹ ಅಕ್ರಮದ ತಾಣಗಳಾಗುತ್ತಿರುವುದು ನಿಜಕ್ಕೂ ದುರಂತ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರವು IAS ಮತ್ತು KAS ತರಬೇತಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್‌ಗಳಿಗೆ ಕಾಲೇಜು ಶಿಕ್ಷಣ ಇಲಾಖೆಯಡಿ ನೋಂದಣಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯದಲ್ಲಿ ಇನ್ಮುಂದೆ ಕೋಚಿಂಗ್‌ ಸೆಂಟರ್​ಗಳ ನೋಂದಣಿ ಕಡ್ಡಾಯವಾಗಿ ಮಾಡಬೇಕು. ರಾಜ್ಯದಲ್ಲಿ ಎಗ್ಗಿಲ್ಲದೇ ಕೋಚಿಂಗ್‌ ಸೆಂಟರ್​ಗಳು ತಲೆಯೆತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತೇವೆ ಎಂದು ಅಭ್ಯರ್ಥಿಗಳಿಂದ ಹಣ ಪಡೆಯುತ್ತಿವೆ. ಹೀಗಾಗಿ ಕೋಚಿಂಗ್‌ ಸೆಂಟರ್​ಗಳು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಸುತ್ತೋಲೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸಂಸ್ಥೆಗಳು 15 ದಿನಗಳಲ್ಲಿ 25,000 ರೂಪಾಯಿ ಶುಲ್ಕವನ್ನು ಪಾವತಿಸಿ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ತಪ್ಪಿದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

Read More

ಧಾರವಾಡ: – ಚಾಲಕನ ನಿಯಂತ್ರಣ ತಪ್ಪಿದ ಕಾರವೊಂದು ರಸ್ತೆ ಪಕ್ಕದ ವಾಟರ್ ಪೈಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರಿಗೆ ಗಂಭೀರ ಗಾಯವಾದ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಹೊರವಲಯದ ಧಾರವಾಡ ಸವದತ್ತಿ ರಸ್ತೆಯಲ್ಲಿ ನಡೆದಿದೆ. ಧಾರವಾಡ ಸವದತ್ತಿ ರಸ್ತೆಯ ಮೂಲಕ ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಯುವಕರು ಕಾರನಲ್ಲಿ ದಾಂಡೇಲಿಗೆ ತೆರಳುತ್ತಿದ್ದರು. ಈ ವೇಳೆ ಅಮ್ಮಿನಭಾವಿ ಬಳಿ ಬರುತ್ತಿದಂತೆ ಕಾರ್ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಕಾರ್ ಸ್ಪೀಡಾಗಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ವಾಟರ್ ಪೈಪಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ರಾಮದುರ್ಗ‌ ತಾಲೂಕಿನ ಊದಪೂಡ್ ಗ್ರಾಮದವರೆಂದು ತಿಳಿದು ಬಂದಿದೆ. ಸಾಗರ ಹಿರೆಮಠ, ಮಹಾಂತೇಶ ಬಡಿಗೇರಿ, ಮಂಜುನಾಥ್ ಕರಡಿಗುಡ್ಡ ಸೇರಿ ಇನ್ನೋರ್ವನಿಗೆ ಗಾಯವಾಗಿದ್ದು, ಧಾರವಾಡ ಜಿಲ್ಲಾ ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಇನ್ನೂ ಘಟನೆ ನಡೆಯುತ್ತಿದಂತೆ, ಜಮೀನಿಗಳಿಗೆ ಬಂದಿದ್ದ ಜನರು ಹಾಗೂ ಸ್ಥಳೀಯರು ಅಪಘಾತಕ್ಕೆ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್ ಐಟಿ ರಚಿಸಲು ನಿರಾಕರಣೆ ಮಾಡಿರುವುದು ಒಂದು ರೀತಿಯಲ್ಲಿ ಈಗಾಗಲೇ ಕೇಸ್ ತಿರುಚುವ ಮುಖಾಂತರ ಸ್ಥಳಿಯ ಪೊಲೀಸರು ಮುಚ್ಚಿಹಾಕುವ ಪ್ರಯತ್ನ ಮಾಡುವುದಕ್ಕೆ ಲೈಸೆನ್ಸ್ ಕೊಟ್ಟಂತಾಗಿದೆ. ಮುಖ್ಯಮಂತ್ರಿಗಳ ಈ ನಿಲುವನ್ನು ಖಂಡಿಸುತ್ತೇನೆ. ಅವರಿಗೆ ಸಂತ್ರಸ್ತ ಮಹಿಳೆಗೆ ನ್ಯಾಯಕೊಡಿಸುವ ಉದ್ದೇಶ ಇದ್ದರೆ ಕೂಡಲೆ ಎಸ್ ಐಟಿ ರಚನೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ. ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಹಾವೇರಿ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ಥೆಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಮನೆಗೆ ಕಳಿಸಿರುವುದಕ್ಕೆ ಸಿಎಂ ಬಳಿ ಉತ್ತರ ಇಲ್ಲ. ಹಾಗೂ ಅವಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹೇಳಿರುವುದು. ಸರ್ಕಾರ ಇಷ್ಟು ದೊಡ್ಡ ಆರೋಗ್ಯ ಇಲಾಖೆ ಇದ್ದು, ಅವಳಿಗೆ ಸೂಕ್ತ ಚಿಕಿತ್ಸೆ ಕೊಡಲು ತಯಾರಿಲ್ಲ ಎಂದರೆ, ಮತ್ತು ಆ ಜವಾಬ್ದಾರಿಯನ್ನು ತಮ್ಮ ಶಾಸಕರಿಗೆ ವಹಿಸಿರುವಂಥದ್ದು. ಈ ಪ್ರಕರಣವನ್ನು ಮುಚ್ಚಿ ಹಾಕುವ ಹಾಗೂ ಆ ಹೆಣ್ಣು ಮಗಳನ್ನು ಸಂಪೂರ್ಣ…

Read More

ಮಂಡ್ಯ:- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಜಮೀನೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ 4 ಗಂಟೆ ಸಮಯಕ್ಕೆ ಜಮೀನೊಂದರಲ್ಲಿ ಹುಲಿ ಓಡಾಡುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇನ್ನು ಹುಲಿ ರಸ್ತೆ ದಾಟುತ್ತಿರುವ ವಿಡಿಯೊವನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೊಗಳನ್ನು ಕಂಡ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಹುಲಿ ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ರಾಜಕಾರಣದಲ್ಲಿ ಯಾರು ಮಿತ್ರರಲ್ಲ ಶತೃಗಳಲ್ಲ ಎಲ್ಲರು ಸಮಾನರು ಜನ ಸೇವೆಗೆ ಯಾರು ತಮ್ಮ ಜೀವನ ಮುಡುಪಾಗಿಟ್ಟಿರುತ್ತಾರೋ ಅವರೇ ನಿಜವಾದ ಜನ ಸೇವಕರು ಹಾಗೆ ನಿಜವಾದ ರಾಜಕಾರಣಿಗಳು. ಹಾಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥ್‌ ನಾರಾಯಣ ಅವರು ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಎಂದು  ಶುಭ ಹಾರೈಸಿದ್ದಾರೆ. ಶೇಷಾದ್ರಿಪುರಂ ಗುಂಡೂರಾವ್ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯದ ಮಲ್ಲೇಶ್ವರಂ, ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನ ಒಟ್ಟುಗೂಡಿಸಿಕೊಂಡು ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಶ್ವಥ್ ನಾರಾಯಣ್ ಅವರು ವೇದಿಕೆ ಮೇಲೆಯೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅಂತಾ ಆಶಿಸಿದರು. ಜನರನ್ನ ನೇರವಾಗಿ ತಲುಪುವ ಕೆಲಸವನ್ನು ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಅವರಿಗೆ ಈಗ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ಆಶಿಸುತ್ತಾ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಿ ಮುಖ್ಯಮಂತ್ರಿ ಕೂಡ ಆಗಲಿ ಎಂದು ಶುಭ ಹಾರೈಸಿದರು.  ಕರ್ನಾಟಕ ಸರ್ಕಾರ ಉತ್ತಮವಾದ ಕಾರ್ಯಕ್ರಮ ರೂಪಿಸಿದೆ. ನಮ್ಮ ಪಶ್ಚಿಮ ವಲಯದಲ್ಲಿ…

Read More

ಬೆಂಗಳೂರಿನಿಂದ ನೆಲಮಂಗಲ ಕಡೆ ಹೋಗುವವರು ಈ ಸ್ಟೋರಿ ಮಿಸ್ ಮಾಡದೆ ನೋಡಿದೆ. ಯಾಕೆಂದರೆ ಬರೋಬ್ಬರಿ 18 ಜಿಲ್ಲೆಗೆ ಸಂಪರ್ಕಿಸೋ ಪೀಣ್ಯ ಫ್ಲೈ ಓವರ್ ಮತ್ತೆ ಬಂದ್ ಆಗಲಿದೆ. ಈ ಬಾರಿ ಮೂರು ದಿನಗಳ ಕಾಲ ಸಂಚಾರಕ್ಕೆ ನಿರ್ಬಂಧ ಇರಲಿದೆ. ಮೊದಲೇ ಸಂಚಾರ ದಟ್ಟಣೆ ಮಧ್ಯೆ ಇದು ಪ್ರಯಾಣಿಕರು, ವಾಹನ ಸವಾರರಿಗೆ ಮತ್ತಷ್ಟು ಕಿರಿಕಿರಿ ಎದುರಾಗಲಿದೆ. ಬೆಂಗಳೂರು ನಗರದಿಂದ ಬರೋಬ್ಬರಿ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಪೀಣ್ಯ ಫ್ಲೈಓವರ್. ಇಂದು ರಾತ್ರಿಯಿಂದ ಮೂರು ದಿನಗಳ ಕಾಲ ಬಂದ್ ಆಗಿರಲಿದೆ. ಇಂದು ರಾತ್ರಿ 11 ಗಂಟೆಯಿಂದ ಜನವರಿ 19ರ ರ ಬೆಳಗ್ಗೆ 11 ಗಂಟೆವರೆಗೆ ಸಂಪೂರ್ಣ ವಾಹನಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ-೪ ರ ಪೀಣ್ಯ ಎಲಿವೇಟೆಡ್ ಹೈವೇಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಹಿನ್ನೆಲೆ ಲೋಡ್ ಟೆಸ್ಟಿಂಗ್ ನಡೆಸಲಿರುವ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಮೀ ಉದ್ದವಿರುವ…

Read More