ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಸಂಕ್ರಾಂತಿ ಹಬ್ಬದ ವೇಳೆ ನಿಗಮ ಮಂಡಳಿ ನೇಮಕ ಆಗಲಿದೆ ಎಂದಿದ್ದರು.ಆದ್ರೆ, ಇಂದಿನ ವಾತಾವರಣವೇ ಬದಲಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನ ಕೇಳಿದ್ರೆ ನೀವು ಸಿಎಂ,ಡಿಸಿಎಂ ಕೇಳಿ ಅಂತಾರೆ.ಖರ್ಗೆಯವರ ಮಾತು ನೋಡಿದ್ರೆ ಯಾಕೋ ಸದ್ಯಕ್ಕೆ ಆಗುವಂತೆ ಕಾಣ್ತಿಲ್ಲ. ಎಐಸಿಸಿ ಅಧ್ಯಕ್ಷರಿಗೆ ಮಾಹಿತಿ ಇಲ್ಲ ಅಂದ್ರೆ ನೇಮಕದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಅನ್ನೋದು ಅಷ್ಟೇ ಸ್ಪಷ್ಟ.ಯಾಕಂದ್ರೆ ಗೊಂದಲಗಳು ಇನ್ನೂ ಮುಂದುವರಿದಿವೆ.ಪಟ್ಟಿ ಬಿಡುಗಡೆ ಮಾಡಿದ್ರೆ ಸಿಗದವರು ಚುನಾವಣೆಯಲ್ಲಿ ಕೈಕೊಡಬಹುದು ಅನ್ನೋ ಅನುಮಾನವೂ ಇದೆಯಂತೆ.ಕೊಟ್ಟವರು ಕೆಲಸ ಮಾಡಿದ್ರೆ ಉಳಿದವ್ರು ನಾವ್ಯಾಕೆ ಲಾಭವಿಲ್ಲದೆ ಮಾಡ್ಬೇಕು ಅಂತಾರೆ. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ಹಾಗಾಗಿ ಚುನಾವಣೆಯವರೆಗೆ ಸುಮ್ಮನಿದ್ರೆ ಆಗ ಎಲ್ಲರು ಕೆಲಸ ಮಾಡ್ತಾರೆ. ಹೆಚ್ಚಿನ ಸೀಟು ಗಳನ್ನ ಗೆಲ್ಲಬಹುದು.ಒಂದ್ವೇಳೆ ಪಟ್ಟಿ ಬಿಟ್ರೆ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಅನುಮಾನಗಳೂ ಇವೆಯಂತೆ..ಹಾಗಾಗಿಯೇ ಈಗ ಆಗ ಅಂತ ಕಾಲ ತಳ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಎನ್ನಲಾಗಿದೆ. ಇನ್ನು ಕಾಂಗ್ರೆಸ್ ನಾಯಕರ ತೀರ್ಮಾನಕ್ಕೆ ನಿಗಮ ಮಂಡಳಿ ಆಕಾಂಕ್ಷಿಗಳು ಅಸಮಧಾನ…
Author: AIN Author
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರದಿಂದ,ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮತ್ತೆ ಮುಂದಕ್ಕೆ ಹೋಗಿದೆ.ಸಂಕ್ರಾಂತಿಗೆ ಸಿಹಿ ಸುದ್ಧಿ ಕೊಡುತ್ತೇವೆ ಎಂದಿದ್ದ ಸಿಎಂ,ಡಿಸಿಎಂ ಮಾತು ಮತ್ತೆ ಹುಸಿಯಾಗಿದೆ.ಸರ್ಕಾರ ನಡೆಗೆ ಶಾಸಕರು, ಕಾರ್ಯಕರ್ತರಲ್ಲಿ, ಅಸಮಾಧಾನ ಸ್ಪೋಟವಾಗುವ ಸಾಧ್ಯತೆ ಇದೆ.ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ಇಂದು ಅಥವಾ ನಾಳೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಹೊರಬೀಳಲಿದೆ.ಗೂಟದ ಕಾರಿನ ಭಾಗ್ಯ ಸಿಗಲಿದೆ ಎಂಬ ಶಾಸಕರ ಕನಸು ಕಮರುವಂತೆ ಕಾಣ್ತಿದೆ.ನಿನ್ನೆಯಷ್ಟೇ ಡಿಸಿಎಂ ಡಿಕೆಶಿ ಆಗೇ ಅಗುತ್ತದೆ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು.ಹಾಗಾಗಿ ಶಾಸಕರು ಹಾಗೂ ಕಾರ್ಯಕರ್ತರು ಇಂದೋ ನಾಳೆಯೂ ಆಗುತ್ತದೆ ಎಂದು ಕನಸು ಕಂಡಿದ್ದರು.ಆದ್ರೆ ಅಂತಹ ಯಾವ ಲಕ್ಷಣಗಳೂ ಕಾಣ್ತಿಲ್ಲ.ಪಕ್ಷದಲ್ಲಿರುವ ಬಣ ಬಡಿದಾಟದಿಂದ ನಿಗಮ ಮಂಡಳಿ ನೇಮಕ ಮತ್ತೆ ಮುಂದಕ್ಕೆ ಹೋಗಿದೆ.
ಬೆಂಗಳೂರು: ಸಂಸದ ಅನಂತ್‌ಕುಮಾರ್ ಹೆಗಡೆ ಬಂಧನ ಮಾಡಬೇಕಾ, ಬೇಡ್ವಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಸಂಸದರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಂಸದರ ಮೇಲೆ ಎಫ್‌ಐಆರ್ ಆಗಿದೆ. ಪೊಲೀಸರು ಸಾಕ್ಷ್ಯ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ಅದಾದ ಮೇಲೆ ಮುಂದಿನ ಕ್ರಮ ಏನು ಆಗಬೇಕೋ ಅದು ಕಾನೂನು ರೀತಿ ಆಗುತ್ತದೆ. ಅವರನ್ನು ಅರೆಸ್ಟ್ ಮಾಡಬೇಕಾ, ಮಾಡಬಾರದಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದರು. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ನಾವು ಗೃಹ ಇಲಾಖೆಯಿಂದ ಯಾವುದೇ ಡೈರೆಕ್ಷನ್ ಕೊಡೋದಿಲ್ಲ. ಅವರನ್ನು ಅರೆಸ್ಟ್ ಮಾಡಿ, ಬಿಡಿ ಅಂತ ನಾನು ಯಾವತ್ತೂ ಯಾರಿಗೂ ಹೇಳಿಲ್ಲ. ಹೇಳೋದು ಇಲ್ಲ. ಸ್ಥಳೀಯ ಪೋಲೀಸರು ಯಾವ ಸೆಕ್ಷನ್ ಹಾಕಬೇಕೋ ಆ ಸೆಕ್ಷನ್ ಹಾಕಿದ್ದಾರೆ. ಆ ಸೆಕ್ಷನ್‌ನಲ್ಲಿ ಅರೆಸ್ಟ್ ಮಾಡಬೇಕು ಎಂದು ಇದ್ದರೆ ಅರೆಸ್ಟ್ ಮಾಡುತ್ತಾರೆ ಎಂದು…
ಕಾರವಾರ: ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು ಬಹಿರಂಗವಾಗಿ ಚರ್ಚೆಗೆ ಬರಲಿ. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ ಎಂದು ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಶಿರಸಿಯ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು (Siddaramaiah) ಬಹಿರಂಗವಾಗಿ ಚರ್ಚೆಗೆ ಬರಲಿ. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? 20% ಮತಕ್ಕಾಗಿ ಎಷ್ಟೊಂದು ಜೊಲ್ಲು ಸುರಿಸಿ ಮಾತನಾಡುತ್ತಾರೆ? 80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಆ ಮೂಲಕ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೋದಿ ಅವರನ್ನ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು. https://ainlivenews.com/garbage-collection-rs-20-grandmother-who-donated-is-invited-to-the-opening-of-the-ram-mandir/ ಕಾಂಗ್ರೆಸ್ ನವರಿಗೆ, ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ? ಇದು ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ ಸಿಂಗ್, ಮೋದಿಯವರನ್ನ ರಾವಣ ಅಂತಾ ಕರೆದರು.…
ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್ (Karthik Mahesh) ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸಂಗೀತಾ ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಇದರ ಬೆನ್ನಲ್ಲೇ ಬಿಗ್ಬಾಸ್ ನೀಡಿದ ಒಂದು ಆಕ್ಟಿವಿಟಿಯಲ್ಲಿ ಮನೆಯ ಕೆಲ ಮಂದಿ ಪೀಕಲಾಟಕ್ಕೆ ಸಿಲುಕಿದರೆ ವಿನಯ್ ಮಾತ್ರ ಸಖತ್ ಮಜಾ ಮಾಡಿದರು. ವಿನಯ್ಗೆ ವಿಶೇಷ ಅಧಿಕಾರವೊಂದನ್ನು ಬಿಗ್ಬಾಸ್ ನೀಡಿದರು, ಆ ಅಧಿಕಾರವನ್ನು ಸರಿಯಾಗಿಯೇ ಬಳಸಿಕೊಂಡರು ವಿನಯ್. https://ainlivenews.com/darshan-greeted-sankranti-in-his-own-style-with-a-cow/ ಮನೆಯಲ್ಲಿ ಯಾವ ಪುರುಷ ಸದಸ್ಯ ಹೆಣ್ಣಿನ ವೇಷ ಧರಿಸಿ ಓಡಾಡಬೇಕು ಎಂದು ಕೇಳಿದ ಪ್ರಶ್ನೆಗೆ ಮನೆಯ ಬಹುತೇಕ ಸದಸ್ಯರು ವಿನಯ್ ಹೆಸರು ಹೇಳಿದರು. ಆದರೆ ವಿನಯ್, ಕಾರ್ತಿಕ್ ಹೆಸರು ಹೇಳಿದರು. ಇದರಿಂದಾಗಿ ಕಾರ್ತಿಕ್ ಹೆಣ್ಣಿನಂತೆ ವೇಷ ಧರಿಸಿ ಓಡಾಡುವಂತಾಯ್ತು. ಬಿಗ್ಬಾಸ್ನ ಮುಂದಿನ ಆದೇಶ ಬರುವವರೆಗೆ ಇವರೆಲ್ಲರೂ ಈಗ ನೀಡಿರುವ ಆದೇಶ ಪಾಲಿಸಬೇಕಾಗಿದೆ. ಇದೆಲ್ಲವೂ ಬಹುಮತದ ಆದೇಶ ಅಲ್ಲ ಬದಲಿಗೆ ವಿನಯ್ ನೀಡಿದ ಆದೇಶ. ಇದಕ್ಕೆ ಬದಲಾಗಿ ಅವರಿಗೆ ದಿನನಿತ್ಯವೂ ಒಳ್ಳೊಳ್ಳೆ ಊಟ ಸಹ ಸಿಕ್ಕಿದೆ…
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇಂದು ಮತ್ತೊಂದು ಚಿರತೆ ಸಾವನ್ನಪ್ಪಿದೆ. ಆ ಮೂಲಕ ಇಲ್ಲಿ ಚಿರತೆಗಳ ಸಾವಿನ ಸಂಖ್ಯೆ 10 ಕ್ಕೇರಿದೆ. 2022 ರಲ್ಲಿ ನಮೀಬಿಯಾ ಚಿರತೆಗಳನ್ನು (Namibian Cheetah) ಭಾರತದಲ್ಲಿ ಮತ್ತೆ ಪರಿಚಯಿಸಲಾಗಿತ್ತು. ಇಂದು ಮೃತಪಟ್ಟ ನಮೀಬಿಯಾದ ಚಿರತೆ ‘ಶೌರ್ಯ’ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. https://ainlivenews.com/darshan-greeted-sankranti-in-his-own-style-with-a-cow/ ಇಲ್ಲಿಯವರೆಗೆ ರಾಷ್ಟ್ರೀಯ ಉದ್ಯಾನದಲ್ಲಿ ಏಳು ವಯಸ್ಕ ಮತ್ತು ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ. ಮಧ್ಯಾಹ್ನ 3:17 ರ ಸುಮಾರಿಗೆ ನಮೀಬಿಯಾದ ಶೌರ್ಯ ಹೆಸರಿನ ಚಿರತೆ ಕೊನೆಯುಸಿರೆಳೆದಿದೆ. 1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮತ್ತೆ ಈ ತಳಿಯ ಪ್ರಾಣಿಗಳನ್ನು ಉದ್ಯಾನವನಕ್ಕೆ ತರಲಾಯಿತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾ ಮತ್ತು 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ ಅವುಗಳನ್ನು ತರಲಾಗಿತ್ತು.
ಚಿಕ್ಕಬಳ್ಳಾಪುರ: ನಿಮಗೆ ನಾಚಿಕೆ ಆಗಲ್ವಾ, ನಾನು ಆಗಿದ್ದರೆ 1 ನಿಮಿಷದಲ್ಲಿ ರಾಜೀನಾಮೆ ಕೊಡುತ್ತಿದ್ದೆ ಎಂದು ಮಾಜಿ ಸಚಿವ ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಚಿವ ಸುಧಾಕರ್ (K Sudhakar) ವಿರುದ್ಧ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕಾಯಕರ್ತರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವರು, ನಾವು ಮಾಡಿದ್ದಂತಹ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರದ್ದು ಮಾಡಿ ಕೋಲಾರಕ್ಕೆ ಮರಳಿ ಸೇರಿಸಿದ್ದೀರಿ. ನಮ್ಮ ಜಿಲ್ಲೆಯ ಹೈನುಗಾರರು ಏನು ಮಾಡಿದ್ರಿ…? ಜಿಲ್ಲೆಯ ಜನ ಕಾಂಗ್ರೆಸ್ ಎಂಎಲ್ ಎ ಗಳನ್ನ ಗೆಲ್ಲಿಸಲಿಲ್ವಾ..? ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಇನ್ನೂ ಗೆದ್ದ ಮೇಲೆ ಗೌರಿಬಿದನೂರಿನವರು ಸಹ ಕಾಂಗ್ರೆಸ್ ಗೆ ಸೇರಿಕೊಂಡಿದ್ದಾರೆ. ಒಬ್ಬರು ಮಂತ್ರಿ ಸಹ ಆಗಿದ್ದಾರೆ. ಇವರು ಏನು ಮಾಡ್ತಿದ್ದಾರೆ.? ಸ್ವಾಭಿಮಾನ ಇಲ್ವಾ ಜಿಲ್ಲೆಯಲ್ಲಿ ಹುಟ್ಟಿಲ್ವಾ..? ನನ್ನಂತಹವನು ಆಗಿದ್ದರೆ 1 ನಿಮಿಷದಲ್ಲಿ ರಾಜೀನಾಮೆ ಕೊಡ್ತಿದ್ದೆ ಎಂದು ಕಿಡಿಕಾರಿದರು. https://ainlivenews.com/darshan-greeted-sankranti-in-his-own-style-with-a-cow/ ಮೆಡಿಕಲ್ ಕಾಲೇಜು (Medical College) ಹೋದಾಗ ನಾನು ರಾಜೀನಾಮೆ ಕೊಡಲಿಲ್ವಾ?, ಅಧಿಕಾರಕ್ಕಾಗಿ ನಾನು ಅಂಟಿಕೊಂಡಿರಲಿಲ್ಲ. ನಾನು…
ಬೆಂಗಳೂರು: ಕಾಂಗ್ರೆಸ್ ನಿಂದ ಸಂಸ್ಕೃತಿ ಕಲಿಯಬೇಕಿಲ್ಲ ಎಂದಿರುವ ಬಿಜೆಪಿಯ ಅನಂತಕುಮಾರ್ ಹೆಗಡೆ ಅವರ ಹೇಳಿಕೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ನಾಯಕರೇ ಅನಂತಕುಮಾರ್ ಹೆಗಡೆ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಹೇಳಿಕೆ ಸರಿ ಇಲ್ಲ ಎಂದಿದ್ದಾರೆ. ನಾನು ಅವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ಮಧ್ಯಮಗಳ ಪ್ರಶ್ನೆಗೆ ಶೇಷಾದ್ರಿಪುರದಲ್ಲಿ, ಮಂಗಳವಾರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ಹೆಗಡೆ ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಡಿಸಿಎಂ ಅವರು ಹಿಂದೆ ತಿರುಗೇಟು ನೀಡಿದ್ದನ್ನು ಸ್ಮರಿಸಬಹುದು.
ಇರಾನ್: ಇರಾಕ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇರಾನ್ ವಿರೋಧಿಗಳ ಬೇಹುಗಾರಿಕೆ ಕೇಂದ್ರಗಳು ಮತ್ತು ಪಡೆಗಳನ್ನು ನಾಶಮಾಡಲು ಇಂದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ. ಇರಾನ್‌ನ ಕುರ್ದಿಸ್ತಾನ್‌ನ ರಾಜಧಾನಿ ಎರ್ಬಿಲ್‌ನಿಂದ ಈಶಾನ್ಯಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಯುಎಸ್ ಕಾನ್ಸುಲೇಟ್ ಮತ್ತು ನಾಗರಿಕರ ನಿವಾಸಗಳ ಸಮೀಪವಿರುವ ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಸಿತು. https://ainlivenews.com/darshan-greeted-sankranti-in-his-own-style-with-a-cow/ ಕ್ಷಿಪಣಿ ದಾಳಿಯಲ್ಲಿ ಉದ್ಯಮಿ ಕುರ್ದಿಶ್ ಉದ್ಯಮಿ ಪೆಶ್ರಾ ದಿಜಾಯಿ ಮತ್ತು ಅವರ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇರಾನ್ ಈ ಹಿಂದೆ ಇರಾಕ್‌ನ ಉತ್ತರ ಕುರ್ದಿಸ್ತಾನ್ ಪ್ರದೇಶದಲ್ಲಿ ದಾಳಿ ನಡೆಸಿತ್ತು. ಕುರ್ದಿಸ್ತಾನ್ ಸೆಕ್ಯುರಿಟಿ ಕೌನ್ಸಿಲ್ ಆಫ್ ಇರಾಕ್ ಪ್ರಕಾರ, ಈ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 6 ಜನರು ಗಾಯಗೊಂಡಿದ್ದಾರೆ.
ಬೆಂಗಳೂರು: ಪಕ್ಷದಲ್ಲಿ ಕಲೆವರ ನಡೆಗೆ ಅಸಮಾಧಾನಗೊಂಡಿದ್ದ ವಿ ಸೋಮಣ್ಣ ಇದೀಗ ಹೈಕಮಾಂಡ್ ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್ ಸಹ ಸೋಮಣ್ಣ ಕೋಪವನ್ನು ಶಮನ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಜತೆ ಶನಿವಾರವಷ್ಟೇ ಮಾತುಕತೆ ನಡೆಸಿ ಬಂದಿರುವ ಹಿರಿಯ ನಾಯಕ ವಿ ಸೋಮಣ್ಣ , https://ainlivenews.com/darshan-greeted-sankranti-in-his-own-style-with-a-cow/ ಇದೀಗ ಭೇಟಿ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸೋಮಣ್ಣ ಹಿರಿಯರು, ಪಕ್ಷಕ್ಕೆ ಅವರದ್ದೇ ಆದ ಕೊಡುಗೆ ಇದೆ. ಗೆಲ್ಲುವ ಭರವಸೆ ಮೇಲೆ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಸೋಮಣ್ಣ ಪರಾಭವ ಆಗಿದ್ದಕ್ಕೆ ನಮಗೂ ನೋವು ಇದೆ ಎಂದಿದ್ದಾರೆ.