ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆರೋಗ್ಯ ಸಮುದಾಯ ಕೇಂದ್ರದಿಂದ 10 ಸ್ಯಾಂಪಲ್ ಗಳನ್ನು ಕಳುಹಿಸಲಾಯಿತು. ಅದರಲ್ಲಿ ಒಂದು ಬನಹಟ್ಟಿಯ ವ್ಯಕ್ತಿಗೆ ಕೋರೋನಾ ಪಾಸಿಟೀವ ದೃಢಪಟ್ಟಿದೆ. 9 ಜನರಿಗೆ ನೆಗೆಟಿವ್ ಎಂದು ರಿಪೋರ್ಟ್ ಬಂದಿದೆ ಯಾವುದೇ ಟ್ರಾವೆಲ್ಸ್ ಹಿಸ್ಟರಿ ಇಲ್ಲದೆ ಮತ್ತು ಯಾವುದೇ ಸಿಂಟಮ್ಸ್ ಇಲ್ಲದೆ ಕೋರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೂ ಮುಂಜಾಗ್ರತ ಕ್ರಮವಾಗಿ ಕೋರೋನಾ ಪಾಸಿಟಿವ್ ದೃಢಪಟ್ಟ ವ್ಯಕ್ತಿಯನ್ನು ಹೋಂ ಐಸುಲೇಶನ್ ನಲ್ಲಿ ಇಡಲಾಗಿದೆ. ರಬಕವಿ ಬನಹಟ್ಟಿ ನಗರದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಮುಂಜಾಗ್ರತೆ ವಹಿಸಬೇಕು ಎಂದು ಜಮಖಂಡಿ ಆರೋಗ್ಯ ಅಧಿಕಾರಿ ಡಾ ಗಲಗಲಿ ಹೇಳಿದರು. ಪ್ರಕಾಶ ಕುಂಬಾರ ಬಾಗಲಕೋಟೆ
Author: AIN Author
ಕೋಲಾರ:- ಯುವಕ ಯುವತಿಯರು ಈ ದೇಶದ ಬಹು ದೊಡ್ಡ ಆಸ್ತಿ ಅವರನ್ನು ಸರಿದಾರಿಗೆ ನಡೆಸಿಕೊಂಡು ಹೋಗಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯ ಮಾಡುವುದು ಸರ್ಕಾರದ ಪ್ರಮುಖ ಗುರಿ ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು. ಇಂದು ಬಂಗಾರಪೇಟೆ ತಾಲ್ಲೂಕಿನ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಹೊಸ ಸರ್ಕಾರ ಬಂದ ನಂತರ ಕೋಲಾರ ಹಾಗೂ ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸಲು ನಿನ್ನೆ ತೀರ್ಮಾನ ಕೈಗೊಳ್ಳಲಾಯಿತು. ಇದರ ಭಾಗವಾಗಿ ಇಂದು ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಲಾಗುತ್ತಿದೆ. ಈ ಹಿಂದೆ ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯ ಮಾರಿಕುಪ್ಪಮ್ ಠಾಣೆಯನ್ನು ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಬೂದಿಕೋಟೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಇದೆ, ಈ ಭಾಗದ ಜನ ಕಾನೂನು ಪಾಲನೆ ಮಾಡುತ್ತಿರುವ ಬಗ್ಗೆ…
ಬೆಂಗಳೂರು:- ಬಿಜೆಪಿಯವರು ಅಮಾಯಕರ ಮೇಲೆ ಕೇಸ್ ಹಾಕಿದ್ದು ಸರೀನಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದರು. ಬೆಂಗಳೂರು, ಹುಬ್ಬಳ್ಳಿಯಲ್ಲಿ ಕೇಸ್ ಹಾಕಿದ್ದಾರೆ ಎಂದರು. ನಾವು ಅವರ ರೀತಿಯಲ್ಲಿ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಾಟಿ ಬೀಸಿದ್ದಾರೆ. ನಾವು ಅವರ ರೀತಿಯಲ್ಲಿ ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಾಟಿ ಬೀಸಿದ್ದಾರೆ ಕರಸೇವಕ ಬಂಧನ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಿನ್ನೆಲೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾವು ಯಾರಿಗೂ ತೊಂದರೆ ಕೊಡುವ ಸಂದರ್ಭ ಇಲ್ಲ. ಪೆಡಿಂಗ್ ಇದ್ದ ಕೇಸ್ಗಳನ್ನ ನೋಡಿದ್ದಾರೆ. ಯಾರು ದೇಶಕ್ಕೆ ರಾಜ್ಯಕ್ಕೆ ಅಗೌರವ, ಅಶಾಂತಿ ಮೂಡಿಸುತ್ತಾರೋ ಕಾನೂನು ರೀತಿಯಲ್ಲಿ ಮೊದಲಿಂದಲೂ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು:- ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸುವುದಾಗಿ ಹೇಳಿರುವ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕರ ಮೇಲೆ ಮಧು ಬಂಗಾರಪ್ಪ ಸೌಜನ್ಯದ ಎಲ್ಲೆ ಮೀರಿ ವೈಯಕ್ತಿಕ ಟೀಕೆಗಿಳಿದಿರುವುದು ಖಂಡನೀಯ. ಸಾರ್ವಜನಿಕ ಜೀವನದಲ್ಲಿರುವವರ ವೈಯಕ್ತಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಗೆ ಬರುವುದು ಸಹಜ. ಮಕ್ಕಳಿಗೆ ನೈತಿಕ ಶಿಕ್ಷಣ ಹೇಳಿಕೊಡುವ ಶಿಕ್ಷಣ ಇಲಾಖೆಯ ಮುಖ್ಯಸ್ಥರು ನೈತಿಕತೆ ಪ್ರದರ್ಶಿಸದಿರುವುದು ವಿಪರ್ಯಾಸ ಎಂದು ಕೋಟ ಟೀಕಿಸಿದರು.
ಹಾಸನ : ಮನೆ ಕಿಟಕಿ, ಬಾಗಿಲು ಮುಚ್ಚಿಟ್ಟು ಗಾಳಿಯಾಡದಂತೆ ಮಾಡಿ ವಿಷಾನಿಲ ತುಂಬಿಸಿ ತನ್ನಿಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ದಾಸರಕೊಪ್ಪಲಿನಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡುವ ತೀರ್ಥ ಎಂಬವರ ಪತ್ನಿ ಶಿವಮ್ಮ (೩೬), ಮಕ್ಕಳಾದ ಸಿಂಚು (೭) ಪವನ (೧೦) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಸೋಮವಾರ ಸಂಜೆ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಪತಿ ತೀರ್ಥ ತಾನು ಹಾಸನಕ್ಕೆ ಬರುತ್ತಿದ್ದು ರಾತ್ರಿ ಊಟಕ್ಕೆ ಅಡುಗೆ ಸಿದ್ಧಪಡಿಸಲು ಹೇಳಿದ್ದರು. ಆದರೆ ರಾತ್ರಿ ತಡವಾಗಿ ಬಂದ ಆತ ಬಾಗಿಲು ತಟ್ಟಿದಾಗ ಪತ್ನಿ ಬಾಗಿಲು ತೆರೆಯಲಿಲ್ಲ. ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಆಕೆ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ಪತಿ ಮನೆಯ ಛಾವಣಿಗೆ ಹೋಗಿ ಮಲಗಿದ್ದರು. ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಪಡೆದು, ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಆತ ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು…
ಬೆಳಗಾವಿ:- ನಿನ್ನೆ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತ ಬೆಳಗಾವಿ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರ ಕಾರ್ಮಿಕರಿಗೆ ಖಾಯಂ ಆದೇಶ ಪತ್ರ ಪಡೆಯಲು Mk ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರು ಹೊರಟಿದ್ದರು. ಇಂತಹ ಸಂದರ್ಭದಲ್ಲೇ ಸಮಾರಂಭದ ಸ್ಥಳಕ್ಕೆ ತೆರಳಬೇಕು ಎನ್ನುವಷ್ಟರಲ್ಲೇ ಎಂಕೆ ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ನಿಂಗಪ್ಪ ದೇಮಟ್ಟಿ ಎಂಬುವವರರು ಹೃದಯಾಘಾತವಾಗಿ ತೀರಿಕೊಂಡಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾಯಂ ಆದೇಶ ಪತ್ರ ಪಡೆಯಲು ಸಂತೋಷದಿಂದ ಹೋಗುತ್ತಿದ್ದ ಈ ಪೌರ ಕಾರ್ಮಿಕನ ಪ್ರಾಣಪಕ್ಷಿ ಹೊರಟು ಹೋಗಿರುವುದು ಕುಟುಂಬದಲ್ಲಿ ತೀವ್ರ ದುಃಖ ಆವರಿಸಿದೆ. ಇನ್ನೂ ಇಂದು ಮುಖ್ಯ ಅಧಿಕಾರಿಗಳು ರವಿ ಬಾಗಲಕೋಟೆ ಹಾಗೂ ಸಿಬ್ಬಂದಿ ಮೃತ ಪೌರ ಕಾರ್ಮಿಕನ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದು, ಮಾಧ್ಯಮ ಪ್ರತಿನಿಧಿ ಬಸವರಾಜು ಸಹ ಈ ಮೃತ ಪೌರ ಕಾರ್ಮಿಕ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯ ಮಾಡಿ, ಬೆಳಗಾವಿ ಜಿಲ್ಲಾ ನಗರ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ…
ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧನ ಕ್ರೀಡೆಯಾಗಿದೆ. ಒಳ್ಳೆಯ ಆಟದ ಮೈದಾನ ಮತ್ತು ಕ್ರೀಡಾ ಉಪಕರಣಗಳ ಸೌಲಭ್ಯ ಪಡೆದು ಕ್ರೀಡೆಯಲ್ಲಿ ಮುಂದೆ ಬರಬೇಕು ಎಂದು ಶಿಕ್ಷಣ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪ್ರಕಾಶ್ ಬಿ.ಕೆ.ತಿಳಿಸಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ಮಾರ್ಕೆಟ್ ಹತ್ತಿರ ಇರುವ ಬಿ.ಎನ್. ಅರ್. ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾದ ಪ್ರಕಾಶ್ ಬಿ.ಕೆ. ಮಾತನಾಡಿ ಕ್ರೀಡಾ ಚಟುವಟಿಕೆಗಳಿಂದ ನಮ್ಮ ಆರೋಗ್ಯ ಸದೃಢಗೊಳ್ಳುತ್ತದೆ ಎಂದು ಕ್ರೀಡೆಯಲ್ಲಿ ಸೋಲು, ಗೆಲುವು ಸ್ವಾಭಾವಿಕವಾಗಿದ್ದು, ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಮ್ಮ ದೇಹವೂ ಸದೃಢ ಮತ್ತು ಆರೋಗ್ಯವಾಗಿ ಇರುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸೋಲು-ಗೆಲುವಿನ ಅರ್ಥವನ್ನು ತಿಳಿದುಕೊಳ್ಳಬೇಕು, ಈ ಮೂಲಕ ಜೀವನದಲ್ಲಿ ಸಮಚಿತ್ತವನ್ನು ಸಾಧಿಸಿಕೊಳ್ಳಬಹುದು, ಉತ್ತಮ ಕ್ರೀಡಾಪಟು ಉತ್ತಮ ವಿದ್ಯಾರ್ಥಿಯಾಗುತ್ತಾನೆ. ಉತ್ತಮ ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ಜೀವನದಲ್ಲಿ ಯಶಸ್ಸು ಪಡೆಯುತ್ತಾನೆ ಎಂದರು. ನಿವೃತ್ತ ಯೋಧ ಮುರುಳಿ ಟಿ.ವಿ ಮಾತನಾಡಿ ಆಟಗಳು ಮತ್ತು ಕ್ರೀಡೆಗಳು ಒಬ್ಬರ…
ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಅನೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಇದು ದೊಡ್ಡ ಸಮಸ್ಯೆಯಾಗದಿದ್ದರೂ, ಕೆಲವೊಮ್ಮೆ ಇದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದನ್ನು ಮಧುಮೇಹ ಎಂದು ಹಲವರು ಭಾವಿಸುತ್ತಾರೆ. ವಾಸ್ತವವಾಗಿ, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದನ್ನು ಮಧುಮೇಹ ಎಂದು ತಪ್ಪಾಗಿ ಗ್ರಹಿಸಬಹುದು. ಆದರೆ ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆಗಾಗ್ಗೆ ಮೂತ್ರ ವಿಸರ್ಜನೆ, ವಿಶೇಷವಾಗಿ ಪುರುಷರಲ್ಲಿ, ಕೆಲವು ಸಂದರ್ಭಗಳಲ್ಲಿ ಲೋಕಲ್ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣವೆಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಖ್ಯಾತ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಅನುರಾಗ್ ಕುಮಾರ್ ಅವರು ಹೇಳುವಂತೆ ಮೂತ್ರ ವಿಸರ್ಜನೆಯ ಸಮಸ್ಯೆಗೆ ಮಧುಮೇಹವೇ ಕಾರಣ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ.. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಈ ರೋಗಲಕ್ಷಣವು ಮಧುಮೇಹವಲ್ಲ. ವೈದ್ಯಕೀಯ ಜರ್ನಲ್ – ದಿ ಲ್ಯಾನ್ಸೆಟ್‌ನ ಸಂಶೋಧನೆಯ ಪ್ರಕಾರ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಪ್ರಾಸ್ಟೇಟ್ ಕ್ಯಾನ್ಸರ್‌ಗೆ…
ಚೀನಾ:- ತನ್ನ ಬೆರಳು ಕಚ್ಚಿದ ಇಲಿಯನ್ನು ಹಿಡಿದ ಯುವತಿಯೊಬ್ಬಳು ಸೇಡು ತೀರಿಸಿಕೊಳ್ಳುವುದಕ್ಕಾಗಿ ತಿರುಗಿಸಿ ಅದಕ್ಕೆ ಕಚ್ಚಿದ ಘಟನೆ ಚೀನಾದಲ್ಲಿ ನಡೆದಿದೆ. ಕಳೆದ ತಿಂಗಳ 21ರಂದು ಈ ಘಟನೆ ನಡೆದಿದೆ. 18 ವರ್ಷದ ತರುಣಿಯ ಬೆರಳನ್ನು ಇಲಿಯೊಂದು ಕಚ್ಚಿ ಗಾಯಗೊಳಿಸಿದೆ. ಆಕೆ ಅಧ್ಯಯನ ನಡೆಸುತ್ತಿದ್ದ ವಿಶ್ವವಿದ್ಯಾಲಯದ ಆವರಣದಲ್ಲಿರು ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಯುವತಿ ಇಲಿಯನ್ನು ದೂರ ಓಡಿಸುವ ಬದಲು ಅದನ್ನು ಜೀವಂತ ಹಿಡಿಯಲು ಯತ್ನಿಸಿದ್ದಳು. ಅಲ್ಲದೇ ಇಲಿಯನ್ನು ಹಿಡಿಯಲು ಯಶಸ್ವಿಯೂ ಆದ ಆಕೆ ಬಳಿಕ ಅದರ ತಲೆಯನ್ನು ಕಚ್ಚಿದ್ದಾಳೆ. ಇದರಿಂದ ಇಲಿಯ ತಲೆಯಲ್ಲಿ ಯುವತಿಯ ಹಲ್ಲಿನ ಗುರುತುಗಳಾಗಿದ್ದು, ಈಕೆ ಈ ಕೃತ್ಯವೆಸಗಿದ ಸ್ವಲ್ಪ ಹೊತ್ತಿನಲ್ಲೇ ಇಲಿ ಸತ್ತು ಹೋಗಿದೆ. ಇಲಿಯನ್ನು ಕಚ್ಚಿ ಹಿಡಿದ ಪರಿಣಾಮ ಆಕೆಯ ಬಾಯಿಗೂ ಗಾಯವಾಗಿದ್ದು, ನಂತರ ಇದಕ್ಕಾಗಿ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಂಡಿದ್ದು, ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ
ಬೆಂಗಳೂರು:- ಅರೆ ವೈದ್ಯಕೀಯ ಕೋರ್ಸ್ ಮುಗಿಸಿ ಕ್ಲಿನಿಕ್ ತೆರೆಯುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಕ್ಲಿನಿಕ್ ನಡೆಸಲು ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಗಳು ಎಂಬ ವಿಷಯದಲ್ಲಿ ಡಿಪ್ಲೋಮ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅರ್ಜಿದಾರರ ವಿದ್ಯಾಭ್ಯಾಸಕ್ಕೆ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಎ) ಕಾಯ್ದೆ ಸೆಕ್ಷನ್ 2(ಕೆ) ಅನ್ವಯವಾಗುವುದಿಲ್ಲ. ಆದ ಕಾರಣ ಅವರನ್ನು ವೈದ್ಯರೆಂದು ಪರಿಗಣಿಸಲು ಹಾಗೂ ಖಾಸಗಿಯಾಗಿ ವೈದ್ಯಕೀಯ ಸೇವೆ ಮುಂದುವರಿಸಲು ಅನುಮತಿಸಲಾಗದು ಆದೇಶದಲ್ಲಿ ತಿಳಿಸಿದೆ.