Author: AIN Author

ಜನವರಿ  7ರವರೆಗೆ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಳ್ಳಲು ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡ ಎದುರು ನೋಡುತ್ತಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್, ಟೀಮ್ ಇಂಡಿಯಾ ತನ್ನ ಆಡುವ 11ರ ಬಳಗದಲ್ಲಿ 2 ಮಹತ್ವದ ಬದಲಾವಣೆಗಳನ್ನು ತಂದುಕೊಳ್ಳಬೇಕು ಎಂದಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಎರಡೂ ಇನಿಂಗ್ಸ್‌ಗಳಲ್ಲಿ ಎದುರಿಸಿದ ಬ್ಯಾಟಿಂಗ್‌ ವೈಫಲ್ಯ ಕಾರಣ ಮೂರು ದಿನಗಳ ಒಳಗೆ ಇನಿಂಗ್ಸ್‌ ಮತ್ತು 32 ರನ್‌ಗಳ ಅಂತರದ ಹೀನಾಯ ಸೋಲನುಭವಿಸಿತು. ಇದು 3ನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ರೇಸ್‌ನಲ್ಲಿ ಭಾರತ ತಂಡಕ್ಕೆ ದೊಡ್ಡ ಅಡಚಣೆ ಆಗಲಿದೆ. ಹೀಗಾಗಿ ಎರಡನೇ ಟೆಸ್ಟ್‌ ಗೆದ್ದು ಹಾನಿ ತಗ್ಗಿಸಿಕೊಳ್ಳಲು ಭಾರತ ತಂಡ ಶತಾಯ ಗತಾಯ ಪ್ರಯತ್ನ ಮಾಡಲಿದೆ. “ಸಂಪೂರ್ಣ ಫಿಟ್ನೆಸ್‌ಗೆ ಮರಳಿದ್ದರೆ ರವೀಂದ್ರ ಜಡೇಜಾ ಎರಡನೇ ಟೆಸ್ಟ್‌ ಆಡಬೇಕು. ಬ್ಯಾಟರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ…

Read More

ವಾಟ್ಸಪ್‌ (Whatssap) ಇಲ್ಲಿಯವರೆಗೆ ನೀಡುತ್ತಿದ್ದ ಫ್ರೀ ಗೂಗಲ್‌ ಡ್ರೈವ್‌ (Google Drive) ಸ್ಟೋರೇಜ್‌ ಅನ್ನು 2024ರ ಮಧ್ಯದಲ್ಲಿ ನಿಲ್ಲಿಸಲಿದೆ. ಈಗಾಗಲೇ ವಾಟ್ಸಪ್‌ ಬೀಟಾ ಅವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಸೆಟ್ಟಿಂಗ್ಸ್‌ನಲ್ಲಿ ಗೂಗಲ್‌ ಡ್ರೈವ್‌ ಬ್ಯಾಕಪ್‌ ಆಯ್ಕೆಯನ್ನು ತೋರಿಸುತ್ತಿದೆ. ವಾಟ್ಸಪ್‌ನಲ್ಲಿ ಇಲ್ಲಿಯವರೆಗೆ ಚಾಟ್‌, ಫೋಟೋ, ವಿಡಿಯೋಗಳು ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಆಗುತ್ತಿತ್ತು. ಇದಕ್ಕೆ ಯಾವುದೇ ಮಿತಿ ಇರುತ್ತಿರಲಿಲ್ಲ. ಯಾಕೆ ಈ ಬದಲಾವಣೆ? ಯಾವ ಕಾರಣಕ್ಕೆ ಈ ಬದಲಾವಣೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ವಾಟ್ಸಪ್‌ ಮತ್ತು ಗೂಗಲ್‌ ಇಲ್ಲಿಯವರೆಗೆ ಹೇಳಿಲ್ಲ. ಎಲ್ಲರಿಗೂ ಫ್ರೀ ಕ್ಲೌಡ್‌ ಸ್ಟೋರೇಜ್‌ ನೀಡುವುದು ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕೆ ವಾಟ್ಸಪ್‌ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಮಾಲೀಕತ್ವವನ್ನು ಹೊಂದಿರುವ ಗೂಗಲ್‌ ಉಚಿತ 15 ಜಿಬಿ ಮಿತಿ ಮಗಿದ ಬಳಿಕ ಮತ್ತೆ ಡ್ರೈವ್‌ನಲ್ಲಿ ಸ್ಟೋರ್‌ ಮಾಡಿದರೆ ಶುಲ್ಕ ವಿಧಿಸುತ್ತದೆ. ಆದರೆ ಇಲ್ಲಿಯವರೆಗೆ ವಾಟ್ಸಪ್‌ ಡೇಟಾಗಳು ಸ್ಟೋರ್‌ ಆಗಿದ್ದಕ್ಕೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಪ್ರಸ್ತುತ ಗೂಗಲ್‌ ಡ್ರೈವ್‌ನಲ್ಲಿ ಗರಿಷ್ಠ 15 ಜಿಬಿವರೆಗಿನ…

Read More

ಪಾಟ್ನಾ: ಬಿಹಾರದಲ್ಲಿ ವಿಚಿತ್ರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಕ್ಕಳಾಗದ ಮಹಿಳೆಯರನ್ನ (Impregnating Women) ಗರ್ಭಧರಿಸುವಂತೆ ಮಾಡಿದ್ರೆ ಪುರುಷರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಆಫರ್‌ ಕೊಟ್ಟಿದ್ದ 8 ಮಂದಿಯನ್ನ ಪೊಲೀಸರು ಬಿಹಾರದ ನವಾಡದಲ್ಲಿ ಬಂಧಿಸಿದ್ದಾರೆ. ಖತರ್ನಾಕ್‌ಗಳು ʻಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌ʼ (All India Pregnant Job Service) ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಮೊದಲಿಗೆ ಈ ಗ್ಯಾಂಗ್‌ ಬಿಹಾರ (Bihar) ರಾಜ್ಯದ ನವಾಡ ಜಿಲ್ಲೆಯಲ್ಲಿ ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ ಅನ್ನೋ ಸಂಸ್ಥೆಯ ಹೆಸರಲ್ಲಿ ಜಾಹೀರಾತು ನೀಡಿತ್ತು. ಆಗ ವಾಟ್ಸಪ್‌, ಫೇಸ್‌ಬುಕ್‌ ಸೇರಿದಂತೆ ಎಲ್ಲಾ ಜಾಲತಾಣಗಳಲ್ಲೂ ಜಾಹೀರಾತು ಪ್ರಸಾರವಾಗಿತ್ತು. ಈ ಜಾಹಿರಾತನ್ನು ನೋಡಿದ ಪುರುಷರು ಜಾಹೀರಾತಿನ ಜೊತೆಗೆ ಇದ್ದ ವಾಟ್ಸಪ್ ನಂಬರ್‌ ಸಂಪರ್ಕಿಸಿದರು. ಮಕ್ಕಳಾಗದ ಸ್ತ್ರೀಯರಿಗೆ (Womens) ಸಂತಾನ ಭಾಗ್ಯ ಕೊಡುವ ಸಾಮರ್ಥ್ಯ ನಮಗಿದೆ. ಅವಕಾಶ ಕೊಡಿ ಅಂತಾ ಹಕ್ಕೊತ್ತಾಯ ಮಾಡಿದ್ದರು. ಆ ನಂತರ ವಂಚಕರ ಅಸಲಿ…

Read More

ದೇಶದ ಕೃಷಿ ಕ್ಷೇತ್ರದಲ್ಲಿ ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ, ಪಿಎಂ ಕುಸಮ್‌ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ಹಣ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಪ್ರಧಾನಮಂತ್ರಿ ಕುಸುಮ್‌ ಯೋಜನೆಯ ಹೆಸರಲ್ಲಿ ಸಾಕಷ್ಟು ವಂಚನೆಯ ಪ್ರಕರಣಗಳು ಕೂಡ ಬೆಳಕಿಗೆ ಬಂದವು. ಅನೇಕ ಖದೀಮರು ಪಿಎಂ ಕುಸುಮ್‌ ಯೋಜನೆಯ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಗಳನ್ನು ಸೃಷ್ಟಿ ರೈತರಿಂದ ಅಪಾರ ಹಣವನ್ನು ಪಡೆದು ವಂಚಿಸದ ಘಟನೆಗಳು ಬೆಳಕಿಗೆ ಬಂದವು. ಹೀಗೆ ಈ ಯೋಜನೆಯ ಹೆಸರಿನ ಮೇಲೆ ಸಾಕಷ್ಟು ರೈತರು ತಮ್ಮ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸಾಂಕ್ರಾಮಿಕ ರೋಗ, ಹಣದ ಕೊರತೆಯಿಂದ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ್ ಯೋಜನೆ (PM-KUSUM) ಪ್ರಗತಿಯು ನಿಧಾನವಾಗಿ ಸಾಗಿದೆ. ಇತ್ತ ಅಗತ್ಯವಿರುವ ಅನುದಾನದ ಕೊರತೆ ಮತ್ತು ಜಾಗೃತಿ ಕೊರತೆಯಿಂ ಈ ಯೋಜನೆಯು ಈ ವರ್ಷ ಬಜೆಟ್ ಅನುದಾನವನ್ನು ಪಡೆಯುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಅನ್ನದಾತರಿಗೆ ಬೇಸಾಯಕ್ಕಾಗಿ ನೀರು ಮತ್ತು ವಿದ್ಯುತ್ ಒದಗಿಸುವ…

Read More

ನಮಗೆ ದಿನವೀಡಿ ಕೆಲಸ ಮಾಡಲು ಉತ್ಸಾಹ ಇರಬೇಕು ಎಂದು ಅದಕ್ಕೆ ಸೇವಿಸುವ ಆಹಾರ ಆಗಿರುತ್ತದೆ. ಆದರೆ ಕೆಲವೊಮ್ಮೆ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ವಿಪರೀತ ಉಷ್ಣ ಹೀಗೆ ಹತ್ತು ಹಲವು ಕಾರಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬಿರದೇ ಕೆಲವು ಮನೆಮದ್ದುಗಳನ್ನು ಅನುಸರಿಸಿ. ನಿಂಬೆ ಚಹಾ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಚಹಾ ಮಾಡಿಕೊಂಡು ಕುಡಿಯಬೇಕು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ. ಪುದೀನ ಎಲೆ: ತಾಜಾ ಪುದೀನ ಎಲೆಗಳು ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಮನೆಮದ್ದು ಆಗಿದೆ. ಕೆಲವೊಮ್ಮೆ ನಮ್ಮ…

Read More

ಮಹಮ್ಮದ್ ಸಿರಾಜ್​ ಮಾರಕ ದಾಳಿಗೆ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡ 55 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಡೀನ್‌ ಎಲ್ಗರ್ ನಾಯತ್ವದ ದಕ್ಷಿಣ ಆಫ್ರಿಕಾ ತಂಡ 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್‌ ಆಗಿ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಇನ್ಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಬೆಡಿಂಗ್‌ಹ್ಯಾಮ್‌ (12) ಮತ್ತು ಕೈಲ್‌ ವೆರೆನ್ನೆ (15) ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್​ಮನ್​ಗಳು ಯಾರೂ ಎರಡಂಕಿ ದಾಟಲಿಲ್ಲ. 6 ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್‌, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಸಿರಾಜ್‌ ವೇಗಕ್ಕೆ ಜೊತೆಯಾದ ಜಸ್ಪ್ರೀತ್ ಬೂಮ್ರಾ ಮತ್ತು ಮುಖೇಶ್‌ ಕುಮಾರ್‌ ಕೂಡಾ ತಲಾ ಎರಡು ವಿಕೆಟ್‌ ಪಡೆದರು. 9 ಓವರ್‌ ಬೌಲಿಂಗ್‌ ಮಾಡಿದ ಸಿರಾಜ್‌ 6 ವಿಕೆಟ್‌ ಕಬಳಿಸಿ 15 ರನ್‌ ಮಾತ್ರ ಕೊಟ್ಟುರು.

Read More

ಹಾಸನ : ಮೂವತ್ತೊಂದು ವರ್ಷದ ಹಿಂದಿನ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧಿಸಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಮತ್ತೆ ಮತ್ತೆ ಸಾಭಿತು ಪಡಿಸುತ್ತಿದೆ ಎಂದು ಬಿಜೆಪಿ ಮುಖಂಡ ನವೀಲೆ ಅಣ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ಹಿಂದೂ ಕಾರ್ಯಕರ್ತ ಶ್ರೀಕಾಂತ್ ಬಂಧನ ವಿರೋಧಿಸಿ ‌ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಇದ್ದು ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ್ ರವರ 31 ವರ್ಷಗಳ ಹಿಂದಿನ ಪ್ರಕರಣವನ್ನು ಪುನಃ ತೆರೆದು ಬಂಧಿಸಿವುದರ ಮೂಲಕ ಸಿಎಂ‌ ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಪದೇ ಪದೇ ಕರ್ನಾಟಕದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ.‌‌ ರಾಮ ಜನ್ಮಭೂಮಿ ಹೋರಾಟದ ಪ್ರಕರಣ 31 ವರ್ಷಗಳ ನಂತರ ಮರು ಪ್ರಕರಣ ಮಾಡುವ ಅವಶ್ಯಕತೆಯಿರಲಿಲ್ಲ. ಕಾಂಗ್ರೆಸ್ ಸರ್ಕಾರ ಒಂದು ಕಡೆ ಅಲ್ಪಸಂಖ್ಯಾತರ ಒಲೈಕೆ ಮಾಡುಕೊಳ್ಳುತ್ತಿದ್ದರೆ ಮತ್ತೊಂದು ಕಡೆ…

Read More

ಕೆಆರ್ ಪುರ:  ಇದೇ ಮೊದಲ ಬಾರಿಗೆ ಆಯೋಜಿಸಿರುವ “ಬಾಗಿಲಿಗೆ ಬಂತು ಸರ್ಕಾರ – ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿದ್ದು. ನಾಗರಿಕರಿಂದ ಅಹವಾಲುಗಳನ್ನು ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವೀಕರಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಮಹದೇವಪುರ ವಲಯ ವ್ಯಾಪ್ತಿಗೆ ಬರುವ ಕೆ.ಆ‌ರ್ ಪುರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಇಡೀ ಸರ್ಕಾರದ ಅಧಿಕಾರಿಗಳನ್ನು ಕರೆದು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಸಂಜೆಯವರೆಗಿದ್ದು, ಅರ್ಜಿಯನ್ನು ನೋಂದಣಿ ಮಾಡಿಕೊಳ್ಳಬೇಕು. ಆನಂತರ, ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗುವುದು. ನಿಮ್ಮ ಅರ್ಜಿಗಳನ್ನು ನೋಡಿ ಕೌನೂನು ಚೌಕಟ್ಟಿನಲ್ಲಿ ಆಗುತ್ತಾ ಇಲ್ಲಾ ಎನ್ನುವುದನ್ನು ಪರಿಶೀಲಿಸಿ ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಬಸ್, ಒಳಚರಂಡಿ ಸಮಸ್ಯೆ, 5 ಗ್ಯಾರಂಟಿಗಳ ಬಗ್ಗೆ ಸಮಸ್ಯೆ ಇದ್ದರೆ ತಿಳಿಸಿ. ನಿಮ್ಮ ಕಷ್ಟ ಕೇಳಲು ಇಲ್ಲಿಗೆ ಬಂದಿದ್ದೇನೆ. ವಿಕಲ…

Read More

ಢಾಕಾ: ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆರೋಪದ ಮೇಲೆ ಬಾಂಗ್ಲಾದೇಶದ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಆರ್ಥಶಾಸ್ತ್ರಜ್ಞ ಮುಹಮ್ಮದ್‌ ಯೂನಸ್‌ ಅವರಿಗೆ ಸ್ಥಳೀಯ ನ್ಯಾಯಾಲಯ ಆರು ತಿಂಗಳ ಕಾರಾಗೃಹ ಸೆರೆವಾಸ ಶಿಕ್ಷೆ ವಿಧಿಸಿದೆ. ಯೂನಸ್‌ ಜತೆ ಗ್ರಾಮೀಣ ಟೆಲಿಕಾಂನಲ್ಲಿ ಕೆಲಸ ಮಾಡುತ್ತಿದ್ದ ಅವರ ಮೂವರು ಸಹದ್ಯೋಗಿಗಳಿಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಾರ್ಮಿಕ ಕಾನೂಗಳ ಉಲ್ಲಂಘನೆಯ ಗಂಭಿರ ಆರೋಪದ ಮೇಲೆ ಬಾಂಗ್ಲಾದೇಶದ ಮೂರನೇ ಕಾರ್ಮಿಕ ನ್ಯಾಯಾಲಯದ ನ್ಯಾ. ಶೇಖ್‌ ಮೆರಿನಾ ಸುಲ್ತಾನಾ ಅವರು ಮುಹಮ್ಮದ್‌ ಯೂನಸ್‌ ಮತ್ತವರ ಸಹದ್ಯೋಗಿಗಳಿಗೆ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಇದೇ ವೇಳೆ ನಾಲ್ವರಿಗೂ ತಲಾ 25 ಸಾವಿರ ರೂ. ದಂಡ ವಿಧಿಸಿದರು. ಕೋರ್ಟ್‌ ತೀರ್ಪಿನ ಬೆನ್ನಿಗೆ 5 ಸಾವಿರ ರೂ. ಬಾಂಡ್‌ ಆಧಾರದಲ್ಲಿ ಎಲ್ಲಾ ನಾಲ್ಕು ಮಂದಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು. ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ (ಜ. 7ಕ್ಕೆ ಮತದಾನ) ನೊಬೆಲ್‌ ಶಾಂತಿ ಪುರಸ್ಕೃತ ಮುಹಮ್ಮದ್‌ ಯೂನಸ್‌ಗೆ ಶಿಕ್ಷೆ ವಿಧಿಸಿರುವ…

Read More

ಕಾಗವಾಡ: ವಿಧಾನ ಸಭಾ ವ್ಯಾಪ್ತಿಯ ಚಂದ್ರಪ್ಪವಾಡಿ ಗ್ರಾಮದಲ್ಲಿ 55 ರೈತರು ಹಸಿರು ಶಾಲ ಧರಿಸುವ ಮೂಲಕ ರೈತ ಸಂಘಕ್ಕೆ ಬಲವರ್ಧನೆ ಮಾಡಲಾಗಿದೆ. ಗಡಿ ಭಾಗದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ರೈತರಿಗೆ ನ್ಯಾಯಸಮ್ಮತ ನಿರ್ಧಾರಕ್ಕೆ ಸರ್ಕಾರ ಹಿಂದೆಟು ಹಾಕುತ್ತಿವೆ. ಗಡಿ ಭಾಗದಲ್ಲಿ ಒದಗಿಸಬೇಕಾದ ಬಸವೇಶ್ವರ ಎತ ನೀರಾವರಿ ಯೋಜನೆ ವಿಳಂಬ ಹಾಗೂ ಭ್ರಷ್ಟಾಚಾರ ಕುರಿತ ಸಮಗ್ರ ವರದಿ ಸಂಗ್ರಹಣೆಗೆ ಮುಂದಾದ ರೈತ ಸಂಘ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಗಡಿ ಭಾಗದ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಗೆ ಸೂಕ್ತ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ ಏಳು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಬಸವೇಶ್ವರ ಎತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸದೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪವನ್ನ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಮಾಡಿದ್ದೂ ಮುಂದಿನ ದಿನಗಳಲ್ಲಿ ಸತ್ಯ- ಸತ್ತೇತೆಯ ಬಗ್ಗೆ ತಿಳಿಯಲು ಕಾನೂನಾತ್ಮಕ ಹೋರಾಟಕ್ಕೆ ಬದ್ದರಿದ್ದೇವೆ ಎಂದು ರೈತ ಮುಖಂಡರು ಹೇಳಿದರು.

Read More