Author: AIN Author

ಪ್ರವಾಸಿ ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡ, ಇದೀಗ ಜನವರಿ 3ರಿಂದ 7ರವರೆಗೆ ನಡೆಯಲಿರುವ 3ನೇ ಹಾಗೂ ಅಂತಿಮ ಟೆಸ್ಟ್‌ನಲ್ಲೂ ಪ್ರವಾಸಿಗರ ಸದ್ದಡಗಿಸಿ ಸರಣಿ ವೈಟ್‌ವಾಶ್‌ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆ. ಅಂದಹಾಗೆ ಈ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆಸೀಸ್‌ ಓಪನರ್‌ ಡೇವಿಡ್‌ ವಾರ್ನರ್‌ ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನ ಕಟ್ಟ ಕಡೆಯ ಪಂದ್ಯವಾಗಿದೆ. ಸರಣಿಗೂ ಮೊದಲೇ ನಿವೃತ್ತಿ ಘೋಷಿಸಿದ್ದ ವಾರ್ನರ್‌ ಎಸ್‌ಸಿಜಿ ಕ್ರೀಡಾಂಗಣದಲ್ಲಿ ಕೊನೇ ಬಾರಿ ರೆಡ್‌ ಬಾಲ್‌ ಕ್ರಿಕೆಟ್‌ ಆಡಲಿದ್ದಾರೆ. ಅಂದಹಾಗೆ ಈ ಮಹತ್ವದ ಪಂದ್ಯಕ್ಕೂ ಮುನ್ನ ಡ್ಯಾಷಿಂಗ್‌ ಓಪನರ್‌ ತಮ್ಮ ಅತ್ಯಮೂಲ್ಯ ಬ್ಯಾಗಿ ಗ್ರೀನ್‌ ಕ್ಯಾಪ್‌ ಕಳೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ವಾರ್ನರ್‌ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಮಾನ ಪ್ರಯಾಣದ ವೇಳೆ ಲಗೇಜ್‌ನಲ್ಲಿ ಇರಿಸಲಾಗಿದ್ದ ತಮ್ಮ ಬ್ಯಾಗಿ ಗ್ರೀನ್‌ (ಆಸ್ಟ್ರೇಲಿಯಾ ಟೆಸ್ಟ್‌ ತಂಡದಲ್ಲಿ ಆಡುವ…

Read More

ಚಳಿಗಾಲದ ತಿಂಡಿ ಕಡಲೆಕಾಯಿಯಾಗಿದೆ. ಹುರಿದ ಕಡಲೆಕಾಯಿಯನ್ನು ಚಳಿಗಾಲದಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇವುಗಳು ನಿಮ್ಮ ರುಚಿಗೆ  ಇಷ್ಟವಾಗುವುದಿಲ್ಲ ಆದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡಬಹುದು. ಕಡಲೆಕಾಯಿ ತೂಕ ನಷ್ಟಕ್ಕೆ ಸ್ನೇಹಿಯಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕಡಲೆಕಾಯಿಯ ಪ್ರಯೋಜನಗಳ ಬಗ್ಗೆ ನೀವು ಆಶ್ಚರ್ಯ ಪಡುತ್ತಿದ್ದರೆ, ನೀವು ಎಷ್ಟು ಸೇವಿಸಬೇಕು, ಕಡಲೆಕಾಯಿಯನ್ನು ತಿನ್ನಲು ಉತ್ತಮ ಸಮಯ ಮತ್ತು ಹೆಚ್ಚಿನದನ್ನು ನಾವು ನಿಮಗೆ ತಿಳಿಸುತ್ತೇವೆ. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶೇಂಗಾವನ್ನು ನೆನೆಸಿ ತಿನ್ನುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ. ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ: ಕಡಲೆಕಾಯಿಯು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದ್ದು, ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಅವು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಕಡಲೆಕಾಯಿಯನ್ನು ಸೇವಿಸುವುದರಿಂದ ನಿಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಗಮನಾರ್ಹವಾಗಿ ಕೊಡುಗೆ ನೀಡಬಹುದು, ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ಸಮತೋಲಿತ ಆಹಾರವನ್ನು ನಿರ್ವಹಿಸುವುದು ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಚಳಿಗಾಲದ ಚಟುವಟಿಕೆಗಳಿಗೆ ಎನರ್ಜಿ ಬೂಸ್ಟ್: ಚಳಿಗಾಲವು ಆಗಾಗ್ಗೆ ಶಕ್ತಿಯ…

Read More

ಬೆಂಗಳೂರು:- ಬೆಂಗಳೂರಿನ ವೈಟ್‌ಫೀಲ್ಡ್‌ ನಲ್ಲಿ ಬೈಕ್‌ ಸವಾರಿ ಮಾಡುವಾಗ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟವಾಗಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ. ಯುವಕನನ್ನು ಪ್ರಸಾದ್‌ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಸಾದ್ ಬುಧವಾರ ಬೈಕ್ ರೈಡ್ ಮಾಡುವಾಗ ಮೊಬೈಲ್ ಅನ್ನು ಪ್ಯಾಂಟ್ ಜೇಬಿನಲ್ಲಿರಿಸಿದ್ದರು. ಆಗ ಅಕಸ್ಮಾತ್ ಆಗಿ ಅದು ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ, ಮೊಬೈಲ್ ಸ್ಫೋಟವಾಗಿ ಪ್ರಸಾದ್ ಗಾಯಗೊಂಡ ಘಟನೆ ಅವರು ಮೊಬೈಲ್ ಖರೀದಿಸಿದ್ದ ಶೋರೂಂ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಪಂದಿಸಿದ್ದು, ಪ್ರಸಾದ್ ಅವರ ಅಲ್ಪ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮತ್ತು ಮೊಬೈಲ್‌ನ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಹೊಸ ವರ್ಷದಂದು ಯುಐ (UI) ಕುರಿತಂತೆ ಹೊಸ ಅಪ್ ಡೇಟ್ ನೀಡುವುದಾಗಿ ಉಪ್ಪಿ (Upendra) ಹೇಳಿಕೊಂಡಿದ್ದರು. ಅದರಂತೆ ಇವತ್ತು ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಓಡುತ್ತಿರುವ ಕುದುರೆ, ಕುದುರೆ ಕಾಲಿನ ಲಾಳದಿಂದ ಹೊರಬರುವ ಬೆಂಕಿ, ಆ ನಂತರ ದಿನಾಂಕವೊಂದು ರಿವೀಲ್ ಆಗುತ್ತದೆ. ಅಲ್ಲಿ ದಿನಾಂಕ ಬಿಟ್ಟು, ತಿಂಗಳು ಮತ್ತು ವರ್ಷವನ್ನು ಹಾಕಿದ್ದಾರೆ. ದಿನಾಂಕ ಗುರುತಿಸಿ, ಇವೆಂಟ್ ನಲ್ಲಿ ಭಾಗಿಯಾಗಲು ಪಾಸ್ ಪಡೆಯಿರಿ ಎಂದಿದ್ದಾರೆ. ದಿನಾಂಕ ಗ್ಯಾಪ್ ಬಿಟ್ಟಿರೋದು ಸಿನಿಮಾ ರಿಲೀಸ್ (Release) ದಿನಾಂಕ ಇರಬಹುದಾ ಅಥವಾ ಇವೆಂಟ್ ದಿನಾಂಕ ಇರಬಹುದಾ ಗೊತ್ತಿಲ್ಲ. ಒಟ್ಟಿನಲ್ಲಿ ದಿನಾಂಕ ಡಿಕೋಡ್ ಮಾಡಿ ಎಂದಷ್ಟೇ ಹೇಳಿದ್ದಾರೆ. ಅದು ರಿಲೀಸ್ ದಿನಾಂಕ ಆಗಿದ್ದರೆ, ಇದೇ ತಿಂಗಳು ಯುಐ ಸಿನಿಮಾ ರಿಲೀಸ್ ಆಗಲಿದೆ. ಯಾವ ದಿನದಂದು ಅನ್ನೋದು ಮಾತ್ರ ರಹಸ್ಯವಾಗಿ ಉಳಿದುಕೊಂಡಿದೆ. ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ…

Read More

ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ದರ ಕಡಿಮೆಯಾಗಿದೆ. ಬೆಳ್ಳಿ ದರ ಕಳೆದ 5 ದಿನಗಳಿಂದಲೂ ಸ್ಥಿರವಾಗಿಯೇ ಇದೆ. ಮೊನ್ನೆ ಕೊಂಚ ಏರಿಕೆ ಕಂಡಿದ್ದರೂ ಬಾರಿ ವ್ಯತ್ಯಾಸವಾಗಿರಲಿಲ್ಲ. ಹಾಗಾದರೆ ಇಂದು ದೇಶದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ. ಇಂದು 1 ಗ್ರಾಂ ಚಿನ್ನದ ಬೆಲೆ 5,850 ರೂ. ಆಗಿದೆ. ನಿನ್ನೆ 5,875 ರೂ. ಇದ್ದು ಇಂದು 25 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,800 ರೂ. ನೀಡಬೇಕು. ನಿನ್ನೆ 47,000 ರೂ ಇದ್ದು ಈ ದರಕ್ಕೆ ಹೋಲಿಸಿದೆ ಇವತ್ತು 200 ರೂ ಇಳಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,500 ಆಗಿದ್ದರೆ, ನಿನ್ನೆ 58,750 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 5,85,000 ರೂ. ಇದೆ. ನಿನ್ನೆ 5,87,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 2,500 ರೂ ಕಡಿಮೆಯಾಗಿದೆ. 1 ಗ್ರಾಂ 24…

Read More

ಇಸ್ಲಾಮಾಬಾದ್: ಮುಂಬೈ ಭಯೋತ್ಪಾದನಾ ದಾಳಿಯ (Mumbai Terror Attack) ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed) ಬೆಂಬಲಿತ ಪಕ್ಷ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಷ್ಕರ್-ಎ-ತೈಬಾದ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್‌ನ ರಾಜಕೀಯ ಘಟಕವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (PMML) ಮುಂಬರುವ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2024 ರ ಫೆಬ್ರವರಿ 8 ರಂದು ಚುನಾವಣೆ (Pakistan Election) ನಡೆಯಲಿದೆ.  ಹಫೀಜ್ ಸಯೀದ್‌ನ ಪುತ್ರ ತಲ್ಹಾ ಸಯೀದ್, ಲಾಹೋರ್‌ನ ನ್ಯಾಷನಲ್ ಅಸೆಂಬ್ಲಿಯ NA-127 ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ. ಆದರೆ PMML ನ ಕೇಂದ್ರ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು NA-130 ನಿಂದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. https://ainlivenews.com/do-you-know-the-benefits-of-eating-cashews-every-day-2/ 2019 ರಿಂದ ಜೈಲಿನಲ್ಲಿರುವ ಮೊಹಮ್ಮದ್‌ ಹಫೀಜ್‌ಗೆ 2022 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು,…

Read More

ಮೆಂತ್ಯ ಎಲೆಗಳು ಸ್ವಲ್ಪ ಕಹಿ ಮತ್ತು ಮಣ್ಣಿನ ರುಚಿಗೆ ಹೆಸರುವಾಸಿಯಾಗಿದೆ. ನೈಸರ್ಗಿಕವಾಗಿ ನಿಮ್ಮನ್ನು ಬೆಚ್ಚಗಾಗಿಸುವ ಭಕ್ಷ್ಯಗಳಲ್ಲಿ ಅವುಗಳನ್ನು ಸೇರಿಸಲಾಗುತ್ತದೆ, ಶೀತ ಹವಾಮಾನದ ಸಮಯದಲ್ಲಿ ಆರಾಮದಾಯಕ ಸ್ಪರ್ಶವನ್ನು ನೀಡುತ್ತದೆ. ಮೆಂತ್ಯ-ಆಧಾರಿತ ಪಾಕವಿಧಾನಗಳಾದ ಮೇಥಿ ಲಡೂಸ್ ಮತ್ತು ಮೇಥಿ ಪರಂಥಸ್ ನಿಮ್ಮ ದೇಹದ ಮೇಲೆ ಬೆಚ್ಚಗಾಗುವ ಪರಿಣಾಮವನ್ನು ನೀಡುತ್ತದೆ.  ಶೀತ ವಾತಾವರಣದಲ್ಲಿ ಅವುಗಳನ್ನು ಆದ್ಯತೆಯ ಆಯ್ಕೆಯನ್ನಾಗಿ ಮಾಡುತ್ತದೆ, ಏಕೆಂದರೆ ಅವು ನಿಮ್ಮ ರುಚಿ ಮೊಗ್ಗುಗಳನ್ನು ಪೂರೈಸುವುದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಉಷ್ಣತೆ ಮತ್ತು ಸೌಕರ್ಯವನ್ನು ನೀಡುತ್ತದೆ. ಚಳಿಗಾಲದಲ್ಲಿ ಮೆಂತ್ಯ ಸೊಪ್ಪು ಹೆಚ್ಚಿಗೆ ಸಿಗುವುದರಿಂದ ಇದನ್ನೂ ಬೇರೆ ಬೇರೆ ವಿಧದ ಆಹಾರಗಳಲ್ಲಿ ಬಳಸಬಹುದು. ಮೆಂತ್ಯೆ ಪಲ್ಯ, ಸೊಪ್ಪು ಸಾರು, ಚಪಾತಿ ಹೀಗೆ ನಾನಾ ರೀತಿಯಲ್ಲಿ ಮೆಂತ್ಯೆ ಸೊಪ್ಪನ್ನು ಬಳಸಬಹುದು. ಹೈ ಬ್ಲಡ್ ಶುಗರ್ ಇರುವವರು ಮೆಂತ್ಯೆ ಸೊಪ್ಪನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೆಂತ್ಯ ಸೊಪ್ಪನ್ನು ಸೇವಿಸುವುದರಿಂದ ದೇಹವು ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಪಡೆಯುತ್ತದೆ. ಇದನ್ನು ತಿನ್ನುವುದರಿಂದ…

Read More

ಬೆಂಗಳೂರು:- ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ ಆಗಿದ್ದು, ಇದು ತಿಂಗಳಲ್ಲಿ ಎರಡನೇ ಪ್ರಕರಣವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಆಕೆಯ ಸಹೋದರ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೇತ್ರಾ ಅವರು WIT ಕ್ಯಾಬ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಹುಣಸಮಾರನಹಳ್ಳಿಯ ‘ಯಮುನಾ’ ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆ ಪ್ರತಿದಿನ ತನ್ನ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಡಿಸೆಂಬರ್ 29 ರಂದು ಮಧ್ಯಾಹ್ನ ಕರೆ ಮಾಡಿ, ಆ ದಿನ ರಾತ್ರಿ ಡ್ಯೂಟಿಯಲ್ಲಿರುವುದಾಗಿ ತಿಳಿಸಿದ್ದರು. ಡಿಸೆಂಬರ್ 30 ರಿಂದ, ಕುಟುಂಬದವರು ಆಕೆಯಿಂದ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಮನೆಯವರು ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮುಗಿದಿರಬಹುದು ಎಂದು ಅವರು ಭಾವಿಸಿದ್ದರು. ಅವರು ಡಿಸೆಂಬರ್ 31…

Read More

ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ (Chaithra Achar) ಮತ್ತೆ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ‘ಟೋಬಿ’ (Toby) ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬಿಳಿ ಬಣ್ಣದ ಶರ್ಟ್‌- ಲೈಟ್ ಕಲರ್ ಸ್ಕರ್ಟ್ ಧರಿಸಿದ್ದಾರೆ ಚೈತ್ರಾ. ಮಾದಕ ನೋಟ ಬೀರುವ ಮೂಲಕ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿ ಚೈತ್ರಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೋ ನೋಡ್ತಿದ್ದಂತೆ ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಹೋಲಿಸಿ ಹೊಗಳಿದ್ದಾರೆ ಫ್ಯಾನ್ಸ್. ಕನ್ನಡದ ಆಲಿಯಾ ಭಟ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಫೋಟೋಶೂಟ್‌ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು. ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು…

Read More

ಬೆಂಗಳೂರು:- ಐಟಿ ಸಿಟಿ ಬೆಂಗಳೂರು ಈಗ ಕ್ರೈಂ ಸಿಟಿ ಆಗಿದ್ದು, ಒಂದೇ ವರ್ಷದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾರೀ ಹೆಚ್ಚಳವಾಗಿದೆ. 2023ನೇ ಸಾಲಿನ ವಾರ್ಷಿಕ ಅಪರಾಧ ವರದಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಇದರಲ್ಲಿ ಕೊಲೆಗಳು ಶೇ.31, ದರೋಡೆ ಶೇ.41 ಹಾಗೂ ಸೈಬರ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳಿಗೆ ಕಡಿವಾಣ ಬೀಳದೆ ಏರಿಕೆಯಾಗಿದ್ದು ವರದಿಯಾಗಿದೆ. 2021ರಲ್ಲಿ 7566 ಹಾಗೂ 2022ರಲ್ಲಿ 9254 ಪ್ರಕರಣಗಳು ವರದಿಯಾದರೆ 2023ರಲ್ಲಿ 12627 ಪ್ರಕರಣಗಳು ದಾಖಲಾಗಿವೆ. ಆದರೆ ಅಪರಾಧ ಪತ್ತೆದಾರಿಕೆ ಕುಂಠಿತವಾಗಿದೆ. ಕಳೆದ ವರ್ಷ 12 ಸಾವಿರ ಪೈಕಿ ಕೇವಲ 3603 ಪ್ರಕರಣಗಳು ಪತ್ತೆಯಾಗಿವೆ. 3 ವರ್ಷಗಳಲ್ಲಿ 533 ಹತ್ಯೆಗಳು ನಡೆದಿವೆ. ಅವುಗಳಲ್ಲಿ ತಕ್ಷಣ ಪ್ರಚೋದನೆಗೊಳಗಾಗಿ (49), ಅನೈತಿಕ ಸಂಬಂಧ (32), ಕೌಟುಂಬಿಕ ಕಲಹ (31), ವೈರತ್ವ (31) ಹಾಗೂ ಹಣಕಾಸು ವಿವಾದ (17)ಗಳಿಗೆ ಅಧಿಕ ಹತ್ಯೆಗಳಾಗಿವೆ. ಆದರೆ ಲಾಭಕ್ಕಾಗಿ ಹಾಗೂ ಭೂ ವಿವಾದಗಳಿಗೆ ಹತ್ಯೆಗಳಲ್ಲಿ ಇಳಿಕೆ ಕಂಡು ಬಂದಿದೆ. 2021ರಲ್ಲಿ 153,…

Read More