ಕಲಬುರ್ಗಿ:- ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಛಾಳಿ ಬಿಜೆಪಿ ಅವರದ್ದು ಎಂ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಭಾವನಾತ್ಮಕವಾಗಿ ಜನರ ಕೆರಳಿಸಿ ಲಾಭ ಮಾಡಿಕೊಳ್ಳುವುದು ಬಿಜೆಪಿಯ ಗುಣ. ಜನ ಬಹಳಷ್ಟು ಜಾಗೃತರಾಗಿದ್ದಾರೆ, ಈ ರೀತಿಯ ವಿಷ ಬೀಜ ಬಿತ್ತುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಮ, ಕೃಷ್ಣ, ಸೀತಾ ಎಲ್ಲಾ ಜನರ ಭಕ್ತಿ ಮತ್ತು ನಂಬಿಕೆಗೆ ಬಿಟ್ಟಿದ್ದು. ನಾವು ದೇವರ ಭಕ್ತರೇ ಇದ್ದೆವೆ. ಬಿಜೆಪಿಯವರು ದೇಶಕ್ಕಾಗಿ ಏನೇನು ಮಾಡಿಲ್ಲ. ದೇಶಕ್ಕಾಗಿ ಎಲ್ಲಾ ರೀತಿಯಲ್ಲಿ ತ್ಯಾಗ ಮಾಡಿದ್ದು ಕಾಂಗ್ರೆಸ್. ನ್ಯಾವ್ಯಾಕೆ ಹೊಟ್ಟೆ ಕಿಚ್ಚು ಪಡಬೇಕು?, ರಾಷ್ಟ್ರವಿರೋಧಿ ಸಂಘಟನೆಗಳಿಗೆ ಯಾವತ್ತಿಗೂ ಬೆಂಬಲ ಕೊಡುವವರು ಬಿಜೆಪಿಯವರು. ನಮಗೆ ನಷ್ಟ ಆದ್ರೂ ಪರವಾಗಿಲ್ಲ, ನಾವು ರಾಷ್ಟ್ರ ವಿರೋಧಿಗಳಿಗೆ ಬೆಂಬಲ ಕೊಡಲಾರೆವು ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
Author: AIN Author
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಜರುಗಿದೆ. 30 ವರ್ಷದ ನೀಲಂ ಮೃತ ರ್ದುದೈವಿ. ಪತಿ ಕೆಲಸಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಮನೆಯಲ್ಲಿದ್ದ ಒಡವೆ, ಹಣ ಏನೂ ಕಳ್ಳತನವಾಗಿಲ್ಲ. ಹೀಗಾಗಿ ಯಾರೋ ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಎಲೆಕ್ಟ್ರಾನಿಕ್ಸಿಟಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪತಿ ಹಾರ್ಡ್ವೇರ್ ಶಾಪ್ ಜೊತೆ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. ಮಧ್ಯಾಹ್ನ ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹೌದು, ಮಕ್ಕಳು ಮನೆಯಲ್ಲಿ ನೋಡಿದಾಗ ಹಾಲ್ನಲ್ಲಿ ತಾಯಿ ಕೊಲೆಯಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಕೂಡಲೇ ತಂದೆಗೆ ಹೇಳಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಇನ್ನು ಮನೆಯಲ್ಲಿದ್ದ ಒಡವೆ, ಹಣ ಯಾವುದು ಕಳ್ಳತನವಾಗಿಲ್ಲದೆ ಇರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು:- ಶ್ರೀರಾಮಚಂದ್ರನ ಮರ್ಯಾದೆಯನ್ನು ಬಿಜೆಪಿ ತೆಗೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಸಂಬಂಧ X ಮಾಡಿರುವ ಕಾಂಗ್ರೆಸ್, ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ ಎಂದು ವಾಗ್ದಾಳಿ ನಡೆಸಿದೆ. ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ. ಆತನ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ. ಹೊಸ ಪ್ರತಿಭೆಯನ್ನು ಪರಿಚಯಿಸಲಿ ಎಂದು ಕುಟುಕಿದೆ. ಕ್ರಿಮಿನಲ್ ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್‌ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ ಎಂದು ಹರಿಹಾಯ್ದಿದೆ. ಅಕ್ರಮ ಸಾರಾಯಿ ದಂಧೆಕೋರ, ಮಟ್ಕಾ, ಜೂಜುಕೋರನನ್ನು…
ಕೊಪ್ಪಳ: ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅಂತವರು ಗಲಭೆಗೆ ಪ್ರಚೋದನೆ ನೀಡುವಂತಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸ ಬೇಕು ಎಂದು ಸಂಸದ ಸಂಗಣ್ಣ ಕರಡಿ (Sanganna Karadi) ಒತ್ತಾಯಿಸಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ಉದ್ಘಾಟನೆಗೆ ತೆರಳುವ ಕರ ಸೇವಕರಿಂದ ಮತ್ತೊಮ್ಮೆ ಗೋಧ್ರಾ ಮಾದರಿ ಗಲಭೆ ನಡೆಯಬಹುದು ಎಂಬ ಹರಿಪ್ರಸಾದ್ ಮಾತಿಗೆ ತಿರುಗೇಟು ನೀಡಿದರು. https://ainlivenews.com/employment-opportunities-for-the-unemployed-great-opportunity-at-csir-apply-today/ ಹರಿಪ್ರಸಾದ್ (B.K Hariprasad) ಅವರ ಭಾವನೆ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಇಂತಹ ಹೇಳಿಕೆಗಳನ್ನು ಅಡ್ವಾನ್ಸ್ ಕೊಡುತ್ತಾರೆ ಅಂದರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದ ಸಂಸದ ಸಂಗಣ್ಣ ಕರಡಿ, ಹೀಗೆ ಹೇಳುತ್ತಾರೆ ಎಂದರೆ ಇವರದ್ದೇ ಆಂತರಿಕ ಪ್ರಚೋದನೆ ಇರಬಹುದು. ಕೃತ್ಯ ಎಸಗಲು ಕೆಲವರಿಗೆ ಪ್ರಚೋದನೆ ನೀಡುತ್ತಿರಬಹುದು. ಕೆಲವು ಬಾರಿ ಇಂತಹ ಹೇಳಿಕೆಗಳಿಂದಲೇ ಹಲವು ಪ್ರಚೋದನೆಗೆ ಒಳಗಾಗುತ್ತಾರೆ. ಯಾರ ಮನಸ್ಸಿನಲ್ಲೂ ಇಲ್ಲದಿದ್ದರೂ ಕ್ರಿಯೇಟ್ ಆಗುತ್ತದೆ. ಇದರಿಂದ ಹರಿಪ್ರಸಾದ್ ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರು ಗರ್ಭಧರಿಸಿದಾಗ ದೇಹದಲ್ಲಿ ಪ್ರೊಲ್ಯಾಕ್ಟಿನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಹೆಚ್ಚಾಗಿ ಹಾಲನ್ನು ಉತ್ಪಾದಿಸಲು ಸ್ತನಗಳನ್ನು ಪ್ರಚೋದಿಸುತ್ತದೆ. ಇದರಲ್ಲಿ ತಾಯಿಯ ಆಹಾರ ಮತ್ತು ಪೌಷ್ಟಿಕಾಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ತಾಯಿಯ ದೇಹ ತಂಪಾಗಿದ್ದರೆ ಅದು ಹಾಲಿನ ಮೂಲಕ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಂತೆ. ಹಾಗೇ ಹಾಲುಣಿಸುವ ತಾಯಂದಿರು ಯಾವುದೇ ಔಷಧಿಗಳನ್ನು ಸೇವಿಸಿದರೆ ಅದು ಹಾಲಿನ ಮೂಲಕ ಮಗುವಿನ ದೇಹ ಸೇರುವುದಿಲ್ಲ. ಇದರಿಂದ ಮಗುವಿಗೆ ಯಾವುದೇ ಪರಿಣಾಮವಾಗುವುದಿಲ್ಲ. ಆದರೆ ಕ್ಯಾನ್ಸರ್ ನಂತಹ ರೋಗಗಳಿಗೆ ಔಷಧಿ ತೆಗೆದುಕೊಳ್ಳುವವರು ಮಗುವಿಗೆ ಹಾಲುಣಿಸುವ ಹಾಗಿಲ್ಲ ಎನ್ನಲಾಗುತ್ತದೆ.
ಅಡುಗೆ ಮಾಡುವುದು ಸಹ ಒಂದು ಕಲೆ. ಈ ಕಲೆಯಲ್ಲಿ ಕೆಲವರು ಸಿದ್ಧಹಸ್ತರಾಗಿರುತ್ತಾರೆ. ಹಾಗೆ ಅಕ್ಕಿಯ ಮೂಲಕ ಅನ್ನದ ರೂಪದಲ್ಲಿ ನಾವು ಪಲಾವ್, ಬಿರಿಯಾನಿ, ಚಿತ್ರಾನ್ನ ಹೀಗೆ ಹತ್ತಾರು ಭಕ್ಷ್ಯ ಮಾಡಬಹುದಿದೆ. ಈ ಎಲ್ಲಾ ಭಕ್ಷ್ಯಗಳಿಗೂ ಒಂದೇ ರೀತಿಯ ಅನ್ನ ಸರಿಹೊಂದುವುದಿಲ್ಲ. ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ಬೇಯಿಸಬೇಕಾಗುತ್ತದೆ. ನೀವು ಅಡುಗೆ ಮಾಡುವಲ್ಲಿ ಹತ್ತಾರು ವರ್ಷದ ಅನುಭವವಿದ್ದರೂ ಅನ್ನ ಮಾಡಬೇಕಾದರೆ ಸರಿಯಾದ ಗಮನವಿಡಬೇಕು. ಹಾಗಾದ್ರೆ ನೀವು ಅನ್ನವನ್ನು ಬೇಯಿಸುವಾಗ ಮಾಡುತ್ತಿರುವ 5 ತಪ್ಪುಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಸಾಮಾನ್ಯವಾಗಿ ನೀವು ಅನ್ನ ಬೇಯಿಸುವಾಗ ಈ ತಪ್ಪುಗಳನ್ನು ಮಾಡಿರುತ್ತೀರಿ. ಹಾಗಾದ್ರೆ ಆ ತಪ್ಪುಗಳೇನು ಎಂಬುದನ್ನು ನೋಡಿ. 1. ಅಕ್ಕಿಯನ್ನು ಚೆನ್ನಾಗಿ ತೊಳೆಯದಿರುವುದು ನೀವು ಅಕ್ಕಿಯನ್ನು ಸರಿಯಾಗಿ ತೊಳೆಯುತ್ತೀರಾ ಅಥವಾ ನೇರವಾಗಿ ಬಳಸುತ್ತೀರಾ? ಅಕ್ಕಿಯನ್ನು ಬೇಯಿಸುವಾಗ ನೀವು ಮಾಡಬಹುದಾದ ಸಾಮಾನ್ಯ ತಪ್ಪುಗಳೆಂದರೆ ಧಾನ್ಯಗಳನ್ನು ಸರಿಯಾಗಿ ತೊಳೆಯದಿರುವುದು. ಅಕ್ಕಿಯನ್ನು ತೊಳೆಯದಿದ್ದಾಗ, ಹೆಚ್ಚುವರಿ ಮೇಲ್ಮೈ ಪಿಷ್ಟವನ್ನು ಉಳಿಸಿಕೊಳ್ಳುತ್ತವೆ, ಅದು ಅಡುಗೆ ಮಾಡುವಾಗ ತುಂಬಾ ಜಿಗುಟಾದಂತಾಗುತ್ತದೆ. ಇದನ್ನು ತಪ್ಪಿಸಲು ಅಕ್ಕಿಯನ್ನು ಕನಿಷ್ಠ…
ಇರುವುದೆಲ್ಲವ ಬಿಟ್ಟು ಕಥೆ ಹೇಳಿ ಗೆದ್ದಿದ್ದ ಕಾಂತ ಕನ್ನಲ್ಲಿ ಈಗ ಮತ್ತೊಂದು ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಎದುರು ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ’ಲೈಫ್ Today’ ಮುಹೂರ್ತ ನೆರವೇರಿದೆ. ನಿರ್ದೇಶಕ ಮಹೇಂದರ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ತಿಳಿಸಿದರು. ಬಳಿಕ ಮಾಧ್ಯಮದವರೊಂದಿಗೆ ಧ್ರುವ ಸರ್ಜಾ ಮಾತನಾಡಿ, ಟೈಟಲ್ ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟಿಸುತ್ತದೆ. ನಿರ್ದೇಶಕರು ಅತ್ತಿಯವರ ಇರುವುದೆಲ್ಲವನ್ನು ಬಿಟ್ಟು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರ ಚೆನ್ನಾಗಿತ್ತು. ಈಗ ಲೈಫ್ Today ಮಾಡ್ತಿದ್ದಾರೆ. ಸಿನಿಮಾದಲ್ಲಿ ಹೊಸಬರು ಇದ್ದಾರೆ. ಹಳೆಬರು ಇದ್ದಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು. ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ಇರುವುದೆಲ್ಲವ ಬಿಟ್ಟು ಸಿನಿಮಾಗೆ ನೀವು ತೋರಿಸಿದ ಪ್ರೀತಿ, ಪ್ರೋತ್ಸಾಹ ಹಾಗೂ ಸಹಕಾರವನ್ನು ಎಂದು ಮರೆಯಲಾಗುವುದಿಲ್ಲ. ಆ ಸಹಕಾರವೇ ನನ್ನ…
ಕವರಟ್ಟಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ (Lakshadweep) ವಾಸ್ತವ್ಯ ಹೂಡಿದ್ದಾಗ ತೆಗೆಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ. ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಪ್ರವಾಸದಲ್ಲಿದ್ದ ಮೋದಿ ಅವರು ಹಲವು ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ (Snorkeling) ಮಾಡುತ್ತಿರುವ ಫೋಟೋಗಳು ಹಾಗೂ ಕಡಲತೀರಗಳಲ್ಲಿ ಮಾರ್ನಿಂಗ್ ವಾಕ್ ಮಾಡುತ್ತಾ ಅನುಭವಿಸಿದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಹಂಚಿಕೊಂಡ ಚಿತ್ರದಲ್ಲಿ, ಅವರು ಸಮುದ್ರತೀರದಲ್ಲಿ ಕುರ್ಚಿಯ ಮೇಲೆ ಕುಳಿತು ಕಾಲ ಕಳೆಯುತ್ತಿರುವುದು, ಈ ವೇಳೆ ಅವರು ಲಕ್ಷದ್ವೀಪದ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಕಪ್ಪು ಕುರ್ತಾ ಪೈಜಾಮಾ ಧರಿಸಿ ಬೀಚ್‌ನಲ್ಲಿ ದಡದಲ್ಲೇ ನಡೆದಾಡುತ್ತಾ ಕಡಲ ತೀರದ ಸೌಂದರ್ಯ ಸವಿದಿದ್ದಾರೆ. ಮತ್ತೊಂದು ಚಿತ್ರದಲ್ಲಿ ಸಮುದ್ರತೀರದಲ್ಲಿ ಶಾಲು ಹೊದ್ದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪ್ರವಾಸವನ್ನು ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಎಕ್ಸ್…
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸದಿದ್ದರೆ ತಿಳುವಳಿಕೆ ಪತ್ರ ನೀಡಲು ಮುಖ್ಯ ಆಯುಕ್ತರ ಸೂಚನೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಬಳಸದೇ ಇರುವವರಿಗೆ ತಿಳುವಳಿಕೆ ಪತ್ರ ನೀಡಿ ಕೂಡಲೆ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರರಾದ ತುಷಾರ್ ಗಿರಿ ನಾಥ್ ರವರು ವಲಯ ಆಯುಕ್ತರಿಗೆ ಸೂಚನೆ ನೀಡಿದರು. ನಗರದ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಅಳವಡಿಸುವ ಸಂಬಂಧ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲಾ ವಲಯದ ಉದ್ದಿಮೆಗಳನ್ನು ಜನವರಿ 15ರ…
ತುಮಕೂರು: ಅಯ್ಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ನನಗೂ ಕೂಡ ಆಹ್ವಾನ ಬಂದಿದೆ. ಆದರೆ ನಾನು ಹೋಗಲು ಆಗುವುದಿಲ್ಲ. ಕಾರಣ ಅದೇ ದಿನದಂದು ಲಿಂಗೈಕ್ಯ, ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ (Dr. Shivakumara Swamiji) 5ನೇ ವರ್ಷದ ಪುಣ್ಯ ಸ್ಮರಣೆ ಇರುವ ಕಾರಣ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಾನು ಹೋಗಲು ಆಗುವುದಿಲ್ಲ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಅವರು ಸ್ಪಷ್ಟಪಡಿಸಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಉದ್ಘಾಟನೆಯ ಮುನ್ನ ದಿನವೇ ಅಂದರೆ ಜನವರಿ 20ರಂದು ಬಂದು ಅಯೋಧ್ಯೆಯಲ್ಲಿ ತಂಗುವಂತೆ ಮನವಿ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಜನವರಿ 23 ರಂದೇ ಹಿಂದಿರುಗಲು ಹೇಳಿದ್ದಾರೆ. ಆದರೆ ನಾನು ಹೋಗಲು ಆಗುತ್ತಿಲ್ಲ. https://ainlivenews.com/stomach-ache-immediately-after-eating-so-try-this-home-remedy/ ಕಾರಣ, ಜನವರಿ 21ರಂದು ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆ ಇದೆ. ಈ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ಆದರೆ ಶ್ರೀ ಸಿದ್ದಗಂಗಾ ಮಠದಿಂದ ರಾಮ ಮಂದಿರ…