ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಕ್ಷರಶಃ ಅಬ್ಬರಿ ಬೊಬ್ಬಿರಿದರು. ಕೇವಲ 64 ಎಸೆತಗಳಲ್ಲಿ ರೋಹಿತ್ ಶರ್ಮಾ ಐತಿಹಾಸಿಕ ಶತಕ ಪೂರೈಸಿದರು. ಇದು ರೋಹಿತ್ ಶರ್ಮಾ ಅವರ 5ನೇ ಅಂತರಾಷ್ಟ್ರೀಯ ಟಿ-20 ಶತಕವಾಗಿದೆ. ರೋಹಿತ್ಗೂ ಮೊದಲು ಯಾವುದೇ ಬ್ಯಾಟ್ಸ್‌ಮನ್‌ಗಳು ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕಗಳನ್ನು ಸಿಡಿಸಿರಲಿಲ್ಲ. ಇದೀಗ ದಾಖಲೆಯ 5ನೇ ಶತಕ ಸಿಡಿಸಿರುವ ರೋಹಿತ್ ಶರ್ಮಾ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 69 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 11 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 121* ರನ್ ಚಚ್ಚಿದರು. ರಿಂಕು ತೂಫಾನ್ ಬ್ಯಾಟಿಂಗ್ ಒಂದೆಡೆ ರೋಹಿತ್ ಅಫ್ಘಾನ್ ಬೌಲರ್ಗಳನ್ನು ದಂಡಿಸುತ್ತಿದ್ದರೆ, ಮತ್ತೊಂದೆಡೆ ಸೂಪರ್ ಸ್ಟಾರ್ ರಿಂಕು ಸಿಂಗ್…
Author: AIN Author
ಬೆಂಗಳೂರು: ಪ್ರತಿಭಾವಂತ ಆಟಗಾರ ಪ್ರಖರ್ ಚತುರ್ವೇದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಭೇಟಿ ಮಾಡಿದರು. ಕೂಚ್ ಬೆಹಾರ್ ಟ್ರೋಫಿ (Cooch Behar Trophy) ಕ್ರಿಕೆಟ್ ಪಂದ್ಯದಲ್ಲಿ 404 ರನ್ ಗಳಿಸಿ ದಾಖಲೆ ಬರೆದಿರುವ ಪ್ರಖರ್ ಚತುರ್ವೇದಿ (Prakhar Chaturvedi) ಅವರನ್ನು ಮುಖ್ಯಮಂತ್ರಿಗಳು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದಿಸಿದರು. ಪ್ರಖರ್ ಚತುರ್ವೇದಿಯವರು ಮುಂಬೈ ವಿರುದ್ಧ ನಡೆದ 2024ರ ಕೂಚ್ ಬೆಹಾರ್ ಟ್ರೋಫಿ ಅಂಡರ್ 19 ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಜೇಯ 404 ರನ್‍ಗಳನ್ನು ಗಳಿಸಿ ದಾಖಲೆ ಬರೆದಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್‍ನಿಂದ ಕರ್ನಾಟಕ ತಂಡ ಟ್ರೋಫಿ ಗೆದ್ದಿದೆ. ಪಂದ್ಯದಲ್ಲಿ ಅಜೇಯ 404 ರನ್ ಗಳಿಸಿದ ಕರ್ನಾಟಕದ ಯುವ ಆಟಗಾರ ಪ್ರಖರ್ ಚತುರ್ವೇದಿ, ಕೂಚ್ ಬೆಹಾರ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರ ದಾಖಲೆ ಮುರಿದಿದ್ದರು. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ…
ಬೆಂಗಳೂರು: ಒಳ ಮೀಸಲಾತಿ ಕುರಿತು ಇಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು. ಹೆಚ್ ಸಿ ಮಹದೇವಪ್ಪ ನವರ ಮನೆಯಲ್ಲಿ ನಡೆದ ಸಭೆಯಾಗಿದ್ದು ಕೆಹೆಚ್. ಮುನಿಯಪ್ಪ ನವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಹದೇವಪ್ಪ, ರಾಜ್ಯ ಸಭಾ ಸದಸ್ಯರಾದ ಎಲ್ ಹನುಮಂತಯ್ಯ, ಮಾಜಿ ಸಚಿವರಾದ ಹೆಚ್, ಆಂಜನೇಯ,ಮಾಜಿ ಸಂಸದ ಚಂದ್ರಪ್ಪ,ಎಂಎಲ್ ಸಿ,ಸುದಾಮದಾಸ್,ತಿಮ್ಮಯ್ಯ ಉಪಸ್ಥಿತರಿದ್ದರು.
ನವದೆಹಲಿ: ಮುಂಬೈ ಏರ್‌ಪೋರ್ಟ್‌ನ ರನ್‌ವೇನಲ್ಲೇ (Mumbai Airport) ಪ್ರಯಾಣಿಕರು ಕುಳಿತು ಆಹಾರ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ (IndiGo) ಸಂಸ್ಥೆಗೆ 1.2 ಕೋಟಿ ರೂ. ದಂಡ ವಿಧಿಸಲಾಗಿದೆ. ಈಚೆಗೆ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ್ದರು. ಆ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ವಿಮಾನ ಸಂಸ್ಥೆಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ದಂಡ ವಿಧಿಸಿದೆ. ದೇಶದ ವಿಮಾನಯಾನ ನಿಯಂತ್ರಕ, ಡಿಜಿಸಿಎ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಲೋಪಕ್ಕಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ 30 ಲಕ್ಷ ರೂ. ದಂಡ ವಿಧಿಸಿದೆ. ಗೋವಾ-ದೆಹಲಿ ಮಾರ್ಗದ ಇಂಡಿಗೋ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ್ದರು. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಹಾಗೂ ಮುಂಬೈ ವಿಮಾನ ನಿಲ್ದಾಣಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.…
ದೊಡ್ಡಬಳ್ಳಾಪುರ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೈಜ ಷೇರುದಾರ ರೈತರನ್ನು ಹೊರಗಿಟ್ಟು ಅಕ್ರಮ ಹಾಗೂ ಕಾನೂನು ಬಾಹಿರ ಚುನಾವಣೆ ನಡೆಸಲಾಗುತ್ತಿದೆ ಅದ್ದರಿಂದ ಈ ಭಾಗದ ಜನರಲ್ಲಿ ತಾರತಮ್ಯವನ್ನು ಸೃಷ್ಟಿಸಿರುವುದು ಸರಿಯಲ್ಲ ಹಾಗಾಗಿ ಈ ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯನ್ನು ಮುಂದೂಡಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಗ್ರಹಿಸಿದರು. ತಾಲೂಕಿನ ಹೊನ್ನಾವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣಾ ಪ್ರಕ್ರಿಯೆಯು ಸಹಕಾರಿ ಸಂಘಗಳ ನಿಯಮಗಳಿಗೆ ಅನುಗುಣವಾಗಿ ಹಾಗೂ ಕಾನೂನು ರೀತಿಯಲ್ಲಿ ನಡೆಯದೆ ಇರುವುದರಿಂದ ಈ ಭಾಗದ ಮೂಲ ಷೇರುದಾರರಿಗೆ ಅನ್ಯಾಯವಾಗುತ್ತದೆ, ಈ ಸಹಕಾರ ಸಂಘದಲ್ಲಿ ರಾಜಕೀಯ ಪ್ರೇರಿತ ಪಿತೂರಿ ನಡೆಯಿತ್ತಿದೆ. ಗಂಡರಗೂಳಿಪುರ ಗ್ರಾಮದ ಉದ್ದೇಶಿತ ವಿಎಸ್ಎಸ್ಎನ್ ಕಚೇರಿ ಬಳಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಂಚಾಯತಿ ವ್ಯಾಪ್ತಿಯ 17 ಗ್ರಾಮಗಳಲ್ಲಿ ಅರ್ಹ ಷೇರುದಾರರನ್ನು ಉದ್ದೇಶ ಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಸಂಘವನ್ನು ನೋಂದಣಿ ಮಾಡಿಸುವ ಸಮಯದಲ್ಲಿ ಕೆಲವೇ ಕೆಲವು…
ಬೆಂಗಳೂರು: ಬೆಸ್ಕಾ ವ್ಯಾಪ್ತಿಯ ಕೆಲವೆಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದ್ದು ಕೆಪಿಟಿಸಿಎಲ್ ನ ದುರಸ್ತಿ ಕಾಮಗಾರಿ ಹಿನ್ನೆಲೆ ಪವರ್ ಕಟ್ ಆಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಕೆಪಿಟಿಸಿಎಲ್ ದುರಸ್ತಿ ಕಾರ್ಯ ನಡೆಯಲಿದೆ. ಹೀಗಾಗಿ ಕೆಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಯಾವ ಯಾವ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ? ಬೆಂಗಳೂರು ಸಿಟಿ 1 ಶಾಂತಿನಗರ, ಬಿಎಂಟಿಸಿ 2 ಬನ್ನೇರುಘಟ್ಟ 3 ಪೌಲ್ರ್ಟಿ ರೋಡ್ 4 ಸೆಂಟ್ ಜಾನ್ಸ್ ವುಡ್ ಬೆಂಗಳೂರು ನಗರದ ಹೊರವಲಯ ದೊಡ್ಡಬಳ್ಳಾಪುರದ ಭಾಗಶಃ ಕುಂದಾಣ ದೇವನಹಳ್ಳಿ ಡಿ ಕ್ರಾಸ್- ಡಿಬಿ ಪುರ
ಭಾರತದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ತೋರುತ್ತಿರುವ ಗೂಗಲ್ ಪೇ, ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಸಾಲದ ಉತ್ಪನ್ನಗಳನ್ನು ನೀಡಲು ಪ್ರಾರಂಭಿಸುವುದಾಗಿ ಹೇಳಿದೆ. ದೇಶದಲ್ಲಿ ಹಲವಾರು ಜನರು ಇನ್ನೂ ಹಣಕಾಸು ಸೇವೆಗಳಿಗೆ ಸಾಕಷ್ಟು ಪ್ರವೇಶವನ್ನು ಹೊಂದಿಲ್ಲ. ಈ ಹಿನ್ನೆಲೆ ಸಾಲದಾತರು ಮತ್ತು ಹಣಕಾಸು ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ದೇಶದ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಸಾಲದ ಉತ್ಪನ್ನಗಳನ್ನು ನೀಡಲು ಪ್ರಾರಂಭಿಸುವುದಾಗಿ ಗೂಗಲ್ ಪೇ ಮಾಹಿತಿ ನೀಡಿದೆ. “ಕ್ರೆಡಿಟ್ (ಸಾಲ) ಅನ್ನು ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಿಂದ ನೀಡಲಾಗುತ್ತದೆಯಾದರೂ, ಅದನ್ನು ಪ್ರವೇಶಿಸಲು, ಸರಳ ಮತ್ತು ಅನುಕೂಲಕರವಾಗಿಸಲು Google Pay ಅವರೊಂದಿಗೆ ಸಹಕರಿಸುತ್ತದೆ” ಎಂದು ಸಂಸ್ಥೆ ಹೇಳಿದೆ. ಭಾರತದಲ್ಲಿನ Paytm ಮತ್ತು PhonePe ನಂತಹವುಗಳೊಂದಿಗೆ ಸ್ಪರ್ಧಿಸುವ fintech ಕಂಪನಿಯು, DMI ಫೈನಾನ್ಸ್‌ನ ಸಹಯೋಗದೊಂದಿಗೆ ವ್ಯಾಪಾರಿಗಳಿಗೆ 15,000 ರೂಪಾಯಿಗಳಿಂದ ಪ್ರಾರಂಭವಾಗುವ ಸ್ಯಾಚೆಟ್ ಅಥವಾ ಸಣ್ಣ-ಟಿಕೆಟ್ ಸಾಲಗಳನ್ನು ವಿಸ್ತರಿಸುತ್ತದೆ. ಇದಲ್ಲದೇ, ವ್ಯಾಪಾರಿಗಳು ತಮ್ಮ ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಲು, ಇದು ಅವರಿಗೆ ePayLater ಪಾಲುದಾರಿಕೆಯಲ್ಲಿ…
ಕಲಬುರಗಿ: ನಾಳೆ ಕಲಬುರಗಿ ಏರ್‌ಪೋರ್ಟ್́ಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಆದ್ದರಿಂದ ಏರ್‌ಪೋರ್ಟ್ ಸುತ್ತಮುತ್ತ ಡ್ರೋಣ್, ಕ್ಯಾಮರಾ ಹಾರಾಟ ನಿರ್ಬಂಧ ಹೇರಲಾಗಿದೆ. CRPC ಸೆಕ್ಷನ್ 144 ಅಡಿ ಡೋಣ್ ಹಾರಾಟ ನಿಷೇಧಿಸಿ ಡಿಸಿ ಆದೇಶ ನೀಡಿದ್ದಾರೆ. ಭದ್ರತಾ ದೃಷ್ಟಿಯಿಂದ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಪ್ರೋಣ್ ಹಾರಾಟಕ್ಕೆ ಬ್ರೇಕ್ ಹಾಕಲಾಗಿದೆ. https://ainlivenews.com/heart-attack-bjp-mla-uday-garudachar-hospitalized/ ನಾಳೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಏರ್‌ಪೋರ್ಟ್‌ನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳುವ ಮೋದಿ ಸೊಲ್ಲಾಪುರದಿಂದ ಮಧ್ಯಾಹ್ನ 1ಕ್ಕೆ ಕಲಬುರಗಿ ಏರ್‌ಪೋರ್ಟಿಗೆ ವಾಪಸ್ ಬಳಿಕ ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ.
ತೆಲುಗು ಸಿನಿಮಾ ರಂಗಕ್ಕೆ ಕಾಂತಾರ ಬೆಡಗಿ ಸಪ್ತಮಿ ಗೌಡ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದು ಈಗ ನಿಜವಾಗಿದೆ. ತಮ್ಮುಡು ಸಿನಿಮಾದ ಮೂಲಕ ಸಪ್ತಮಿ ತೆಲುಗು ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ಈ ಹಿಂದೆ ಸಪ್ತಮಿ ಗೌಡ (Saptami Gowda) ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ತಮ್ಮುಡು (Thammadu) ಚಿತ್ರದ ಮೂಲಕ ತೆಲುಗು (Telugu) ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದಂತಾಗಿದೆ. ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಯುವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದಲ್ಲಿ ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಅದೊಂದು ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಯುವರಾಜ್ ಕುಮಾರ್ ಈ ಸಿನಿಮಾದ…
ಬೆಂಗಳೂರು ಗ್ರಾ.ಮಾಂತರ: ಭಾರತ ಚುನಾವಣಾ ಆಯೋಗವು, ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಿದ್ದು, ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು 2024 ಫೆಬ್ರವರಿ 16 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 20 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಯ ಮಾದರಿ ಚುನಾವಣಾ ನೀತಿ ಸಂಹಿತೆಯು ಜ.16ರಿಂದಲೇ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಶಿವಶಂಕರ. ಎನ್ ತಿಳಿಸಿದ್ದಾರೆ. ಚುನಾವಣಾ ವೇಳಾ ಪಟ್ಟಿಯಂತೆ ಚುನಾವಣಾ ಅಧಿಸೂಚನೆ ಜ.23 (ಮಂಗಳವಾರ), ನಾಮಪತ್ರ ಸಲ್ಲಿಸಲು ಕೊನೆಯ ದಿನ 30 ಜನವರಿ 2024 (ಮಂಗಳವಾರ), ನಾಮಪತ್ರಗಳ ಪರಿಶೀಲನೆ ಜ.31, 2024 (ಬುಧವಾರ), ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ ಫೆ.02 (ಶುಕ್ರವಾರ), ಮತದಾನದ ದಿನಾಂಕ ಫೆ.16 (ಶುಕ್ರವಾರ) ಎಂದು ತಿಳಿಸಿದೆ. ಇನ್ನೂ, ಮತದಾನದ ಸಮಯ- ಬೆಳಿಗ್ಗೆ 8:00 ರಿಂದ ಸಂಜೆ…