Author: AIN Author

ಬೆಂಗಳೂರು:- ಅಧಿಕಾರ ಇರಲಿ, ಬಿಡಲಿ ಪಕ್ಷಕ್ಕಾಗಿ ನನ್ನ ಸೇವೆ ನಿರಂತರ ಆಗಿರಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದು, ಅವಕಾಶ ನೀಡಿದ್ದ ವರಿಷ್ಠರು, ಸಹಕಾರ ನೀಡಿದ್ದ ಎಲ್ಲರನ್ನೂ ಸ್ಮರಿಸುತ್ತಾ, ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ. ಇನ್ನು ಮುಂದೆಯೂ ಸರ್ವರ ಸಹಕಾರ, ಪ್ರೀತಿ, ವಿಶ್ವಾಸ ಬಯಸುವೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಹಿರಂಗ ಪತ್ರದ ಮೂಲಕ ಪಕ್ಷದ ಇಡೀ ಸಂಘಟನೆಗೆ ವಂದನೆ ತಿಳಿಸಿದ್ದಾರೆ. ಮಾತೃ ಸಮಾನವಾಗಿರುವ ನಮ್ಮ ಪಕ್ಷ ಮತ್ತು ಹಿರಿಯರು ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ, ರಾಜ್ಯದ ಅತ್ಯುನ್ನತ ಜವಾಬ್ದಾರಿ ವಹಿಸಿದ ಈ 4 ವರ್ಷ 3 ತಿಂಗಳ ಅವಧಿಯಲ್ಲಿ ಈ ಹೊಣೆಗಾರಿಕೆಯನ್ನು ನಿಮ್ಮೆಲ್ಲರ ಸಹಕಾರದಿಂದ ಪರಿಪೂರ್ಣತೆಯಿಂದ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರ್ಗದರ್ಶನ ಮಾಡಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ, ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಈಗ ರಾಷ್ಟ್ರೀಯ ಗೃಹಸಚಿವರಾಗಿರುವ…

Read More

ಹುಣಸೆಹಣ್ಣಿನ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ಚಟ್ನಿ ತಯಾರಿಸುವುದರ ಜೊತೆಗೆ, ಇದನ್ನು ಅನೇಕ ಭಾರತೀಯ ಅಡುಗೆಮನೆಯ ಆಹಾರದಲ್ಲಿ ಬಳಸಲಾಗುತ್ತದೆ. ಆದರೆ ಹುಣಸೆ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಹೆಚ್ಚಿನ ಮನೆಗಳಲ್ಲಿ, ಹಿರಿಯರು ಹುಣಸೆಹಣ್ಣು ತಿನ್ನುವುದನ್ನು ನಿಲ್ಲಿಸುತ್ತಾರೆ, ಆದರೆ ಇದರ ಪ್ರಯೋಜನಗಳು ಹಲವು. ಹುಣಸೆಹಣ್ಣು ತೂಕ ಇಳಿಸಿಕೊಳ್ಳಲು ಔಷಧವಾಗಿಯೂ ಕಾರ್ಯನಿರ್ವಹಿಸುತ್ತದೆ. ಹುಣಿಸೇಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ ಇನ್ನು ಹತ್ತು ಹಲವು ಪ್ರಯೋಜನಗಳು ಹುಣಸೆ ಹಣ್ಣಿನಲ್ಲಿದೆ, ಅವು ಯಾವುವು ಹೇಗೆ ಅನ್ನೋದನ್ನು ನೀವು ತಿಳಿಯಿರಿ. ಹುಣಿಸೇಹಣ್ಣಿನಿಂದ ಜೀರ್ಣಕಾರಿ ಪ್ರಕ್ರಿಯೆ ಹುಣಿಸೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಜೊತೆಗೆ ಇದನ್ನು ತಿನ್ನುವುದರಿಂದ ಮಲಬದ್ಧತೆ, ಆಮ್ಲೀಯತೆ, ಗ್ಯಾಸ್ ಅಥವಾ ಅಲ್ಸರ್ಗಳಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಮಧುಮೇಹದ ಪ್ರಯೋಜನ : ಹುಣಸೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್ ಅಂಶಗಳು ಕಂಡುಬರುತ್ತವೆ. ಇದಲ್ಲದೆ, ಹುಣಸೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ…

Read More

ಆಗ್ರಾ: ಇಲ್ಲಿನ ಬ್ರಹ್ಮಕುಮಾರಿ ಆಶ್ರಮದಲ್ಲಿ ವಾಸವಿದ್ದ ಸೋದರಿಯರಿಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಡೆತ್‌ನೋಟ್‌ನಲ್ಲಿ ಸೋದರಿಯರು ಆಶ್ರಮದ ನಾಲ್ವರು ಉದ್ಯೋಗಿಗಳನ್ನು ದೂರಿ ಬರೆದಿದ್ದು, ಬಳಿಕ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 37 ವರ್ಷ ಪ್ರಾಯದ ಏಕ್ತಾ ಹಾಗೂ 34 ವರ್ಷ ಪ್ರಾಯದ ಸಿಕ್ತಾ ಸಾವಿಗೆ ಶರಣಾದ ಸೋದರಿಯರು. ಇವರಿಬ್ಬರು ಆಗ್ರಾದ ಜಗನೇರ್ ಪ್ರದೇಶದಲ್ಲಿರುವ ಆಶ್ರಮದಲ್ಲಿ ಕಳೆದೊಂದು ವರ್ಷದಿಂದ ವಾಸ ಮಾಡುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.  ಸಾವಿಗೂ ಮುನ್ನ ಇವರಿಬ್ಬರೂ ತಮ್ಮ ಡೆತ್‌ನೋಟನ್ನು ಬ್ರಹ್ಮಕುಮಾರಿಯರ ಗ್ರೂಪ್ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ವಾಟ್ಸಾಪ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.  https://ainlivenews.com/are-we-stupid-to-believe-hd-kumaraswamys-words-dcm-question/ ಇವರಿಬ್ಬರ ಸೋದರ ಈ ಆಶ್ರಮದಿಂದ 13 ಕಿಲೋ ಮೀಟರ್ ದೂರದಲ್ಲಿ ವಾಸ ಮಾಡುತ್ತಿದ್ದ. ಈತ ಸೋದರಿಯರ ವಾಟ್ಸಾಪ್ ಸಂದೇಶ ನೋಡಿ ಕೂಡಲೇ ಅಲ್ಲಿಗೆ ಹೊರಟು ಬಂದಿದ್ದು, ಅಷ್ಟರಲ್ಲಿ ಸೋದರಿಯರು ಸಾವನ್ನಪ್ಪಿದ್ದಾರೆ. ಈ ಸೋದರಿಯರ ಬಳಿ ಇದ್ದ ಫೋನ್ ಹಾಗೂ…

Read More

ಬೆಂಗಳೂರು:- ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಗೆ ಬೆಂಕಿ ತಗುಲಿದ ಘಟನೆ ರಾಜ್ ಕುಮಾರ್ ಸಮಾಧಿ ಬಳಿ ಜರುಗಿದೆ. ಬೆಂಕಿಗೆ ಕೆನ್ನಾಲಿಗೆಗೆ ಬ್ರಹ್ಮಶ್ರೀ ಸ್ವೀಟ್ಸ್ ಅಂಡ್ ಕಾಂಡಿಮೆಂಟ್ಸ್ ಆಹುತಿಯಾಗಿದೆ. ಬೆಂಕಿ ಹೊತ್ತಿಕೊಳ್ತಿದ್ದಂತೆ ಸಿಲಿಂಡರ್‌ ಅನ್ನು ಸಿಬ್ಬಂದಿ ಹೊರ ತಂದಿದ್ದು, ಆದ್ದರಿಂದ‌ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಇಲ್ಲ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ವಾಹನ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಬೇಕರಿಯಲ್ಲಿದ್ದ ವಸ್ತುಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.

Read More

ಬಿಗ್ ಬಾಸ್ ಮನೆಯೊಳಗೆ ಹೋದಾಗಿನಿಂದಲೂ ವಿನಯ್ ಮತ್ತು ಪ್ರತಾಪ್ ಮಧ್ಯ ಶೀತಲಸಮರ ನಡೆಯುತ್ತಲೇ ಇತ್ತು. ಅದು ಕೆಲವೊಮ್ಮೆ ಮಾತಿನ ಚಕಮಕಿಗೂ ಇಳಿದಿದ್ದಿದೆ. ಪ್ರತಾಪ್ ಅವರನ್ನು ಅವಕಾಶ ಸಿಕ್ಕಾಗೆಲ್ಲ ಟೀಕಿಸುತ್ತಿದ್ದ, ತೆಗಳುತ್ತಿದ್ದ ವಿನಯ್ ಇದೀಗ ಅವರನ್ನು ಹೊಗಳುತ್ತಿದ್ದಾರೆ. ‘ನಿನ್ನ ಬಗ್ಗೆ ಗೌರವ ಹೆಚ್ಚಾಗಿದೆ’ ಅನ್ನುತ್ತಿದ್ದಾರೆ. ಹಾಗಾದರೆ ಅಂಥದ್ದೇನು ಬದಲಾವಣೆಯಾಗಿದೆ? ಇದು ಮನಸಾಳದಿಂದ ಹುಟ್ಟಿಕೊಂಡ ಮೆಚ್ಚುಗೆಯಾ ಅಥವಾ ಹೊಸದೊಂದು ಗೇಮ್ ಗೆ ಮುನ್ನುಡಿಯಾ? ಅರ್ಥ ಮಾಡಿಕೊಳ್ಳುವುದು ಕಷ್ಟವೇ.‌ಆದರೆ ಪ್ರತಾಪ್ ಅವರಿಗೆ ಇದು ಕಷ್ಟವೇನಲ್ಲ.‌ ಮೊದಲಿನಿಂದಲೂ ಚಾಣಾಕ್ಷತನದಿಂದಲೇ ಎಲ್ಲರನ್ನೂ ತೂಗಿಸಿಕೊಂಡು ಬಂದಿರುವ ಅವರು, ಈಗ ವಿನಯ್ ಮತ್ತು ಅವರ ತಂಡದಿಂದ ಬಂದಿರುವ ಪ್ರಶಂಸೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಕಾಯ್ದು ನೋಡೋಣ.

Read More

ಬೆಂಗಳೂರು:- ಬೀದಿನಾಯಿ ಕಚ್ಚಿ ಸತ್ತರೆ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 5 ಸಾವಿರ ರೂ. ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಹೈಕೋರ್ಟ್​ಗೆ ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 2023ರ ಅ.6ರಂದು ಸಭೆ ನಡೆಸಲಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರಿಗೆ ಐದು ಸಾವಿರ ರೂ. ಹಾಗೂ ಜೀವ ಕಳೆದುಕೊಂಡವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವ ಕುರಿತು ರ್ಚಚಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಂದಿನ 4 ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತು. ಪ್ರಾಣಿ ಪೋಷಣೆ, ಲಸಿಕಾ ವಿಧಾನ ಮತ್ತು ಇನ್ನಿತರ ಶ್ವಾನ ಸಂಬಂಧಿ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕಿದೆ. ಸರ್ಕಾರವು ಶ್ವಾನಗಳ ಕುರಿತು ಜಾಹೀರಾತು, ಕಿರುಚಿತ್ರಗಳನ್ನು ಚಿತ್ರಮಂದಿರಗಳಲ್ಲಿ…

Read More

ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್​​ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ, ನ್ಯೂಜಿಲೆಂಡ್​ ತಂಡಗಳು ಮುಖಾಮುಖಿ ಆಗಿತ್ತು. ಶತಕೋಟಿ ಭಾರತೀಯರಿಗೆ ಈ ದಿನ ಎಂದೆಂದಿಗು ಮರೆಯಲು ಆಗಲ್ಲ. ಯಾಕಂದ್ರೆ ಒಂದು ಕಡೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ನಿರ್ಮಾಣ ಮಾಡಿದ್ದ ದಾಖಲೆ ಇಂದು ಮುರಿದು ಹೋಗಿದೆ. ಇನ್ನೊಂದೆಡೆ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆ ಭಾರತೀಯನೇ ಮುರಿದಿದ್ದಾನೆ. ಹೀಗೆ ಎಷ್ಟೋ ಜನರ ಡೈರಿಯಲ್ಲಿ 15 ನವೆಂಬರ್ 2023 ಅಚ್ಚಳಿಯದೆ ಉಳಿಯಲಿದೆ. ಇದಕ್ಕೆಲ್ಲಾ ಕಾರಣ ಮಾನ್ಯ ಕೊಹ್ಲಿ. ವಿರಾಟ್ ಕೊಹ್ಲಿ ಅಂದ್ರೆ ಮಾಸ್, ವಿರಾಟ್ ಕೊಹ್ಲಿ ಅಂದ್ರೆ ಕ್ಲಾಸ್.. ಹೀಗೆ ಎಲ್ಲದಕ್ಕೂ ಈ ನಮ್ಮ ಕೊಹ್ಲಿಯವರೆ ಮಾದರಿ. ಇಂತಿಪ್ಪ ಕೊಹ್ಲಿ ಮೊನ್ನೆ ಮೊನ್ನೆ ತಾನೆ ಏಕದಿನ ಕ್ರಿಕೆಟ್ ಅಖಾಡದಲ್ಲಿ ತಮ್ಮ 48ನೇ ಶತಕ ಬಾರಿಸಿದ್ದರು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ಸಚಿನ್ ಅವರ ದಾಖಲೆಯನ್ನ ಕೊಹ್ಲಿ ಇದೇ ವಿಶ್ವಕಪ್ ಅಖಾಡದಲ್ಲಿ ಮುರಿಯುತ್ತಾರೆ ಅಂತಾ. ಈ ನಂಬಿಕೆಯನ್ನು ವಿರಾಟ್ ಕೊಹ್ಲಿ ಸುಳ್ಳು ಮಾಡಲಿಲ್ಲ. ಅದರಲ್ಲೂ 05…

Read More

ಅಮೆರಿಕ: 2008ರಲ್ಲಿ ಮುಂಬೈ ಮೇಲೆ ಪಾಕ್‌ ಉಗ್ರರು ದಾಳಿ ನಡೆಸಿದ ಹೊರತಾಗಿಯೂ ಆ ದೇಶದ ಅಂದಿನ ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಯಾವುದೇ ಪ್ರತಿಕಾರದ ಕ್ರಮ ಕೈಗೊಂಡಿರಲಿಲ್ಲ. ಹಮಾಸ್‌ ವಿರುದ್ಧವೂ ಇಸ್ರೇಲ್‌ ಇಂಥದ್ದೇ ನಿಲುವು ಪ್ರದರ್ಶಿಸಬಹುದಿತ್ತು ಎಂದು ಅಮೆರಿಕದ ಖ್ಯಾತ ಲೇಖಕ ಥಾಮಸ್‌ ಫ್ರೈಡ್ಮನ್‌ ಹೇಳಿದ್ದಾರೆ. ಹಮಾಸ್‌- ಇಸ್ರೇಲ್‌ ಯುದ್ಧದ ಕುರಿತು ಥಾಮಸ್‌ ಬರೆದಿರುವ ಲೇಖನ ‘ದಿ ನ್ಯೂಯಾರ್ಕ್‌ ಟೈಮ್ಸ್’ನಲ್ಲಿ ಪ್ರಕಟವಾಗಿದ್ದು, ಈ ಲೇಖನದಲ್ಲಿ ಮೇಲಿನ ತಮ್ಮ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ‘ನಾನು ಇಸ್ರೇಲ್‌- ಹಮಾಸ್‌ ಯುದ್ಧವನ್ನು ನೋಡುತ್ತಿದ್ದೇನೆ. ಈ ವೇಳೆ ನನ್ನ ನೆಚ್ಚಿನ ವಿಶ್ವನಾಯಕರಲ್ಲಿ ಒಬ್ಬರಾದ ಮನಮೋಹನ್‌ ಸಿಂಗ್‌ ಬಗ್ಗೆ ನಾನು ಯೋಚಿಸುತ್ತಿದ್ದೇನೆ. https://ainlivenews.com/joint_pain_suprem_ray_treatment_reiki/ 10 ಜನ ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕರು ಭಾರತದೊಳಗೆ ನುಸುಳಿ ಮುಂಬೈನಲ್ಲಿ 160ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದಾಗ ಮನಮೋಹನ್‌ ಅವರು ಪಾಕಿಸ್ತಾನ ಅಥವಾ ಉಗ್ರರ ವಿರುದ್ಧ ಯಾವುದೇ ಪ್ರತಿಕಾರ ತೀರಿಸಿಕೊಳ್ಳಲಿಲ್ಲ. ಇದು ಆಗ ಸರಿಯಾದ ನಿರ್ಧಾರವಾಗಿತ್ತು’ ಎಂದಿದ್ದಾರೆ.  

Read More

ಬೆಂಗಳೂರು:- ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿದ ವಿಜಯೇಂದ್ರ ಅವರು ಇದೇವೇಳೆ ಭಾರತ ಮಾತೆ, ಜಗನ್ನಾಥ ರಾವ್ ಜೋಷಿ ಮತ್ತಿತರ ಪ್ರಮುಖರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಆದರೆ, ವಲಸಿಗ ಬಿಜೆಪಿಗರಾದ ರಮೇಶ್‌ ಜಾರಕಿಹೊಳಿ ಅಂಡ್‌ ಟೀಮ್‌ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ಸ್ವೀಕರ ಕಾರ್ಯಕ್ರಮಕ್ಕೆ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೌದು, ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರ ಆಯ್ಕೆಗೆ ಬಿಜೆಪಿ ಹಿರಿಯ ನಾಯಕರು ಅಸಮಾಧಾನಗೊಂಡಿದ್ದು, ಹಲವು ನಾಯಕರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಸಿದ್ದಾರೆ. ಇನ್ನೂ ಮಾಜಿ ಸಚಿವರಾದ ಸಿ ಟಿ ರವಿ, ವಿ ಸೋಮಣ್ಣ ಅಸಮಾಧಾನಗೊಂಡಿದ್ರೆ, ಇತ್ತ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಮೌನಕ್ಕೆ ಜಾರಿದ್ದಾರೆ. ಅಲ್ಲದೇ ಮೂಲ ಬಿಜೆಪಿಗರು ಹಾಗೂ ವಲಸಿಗ ಬಿಜೆಪಿಗರ ನಡುವೆ ಸಾಕಷ್ಟು ಮನಸ್ತಾಪಕ್ಕೆ ಕಾರಣವಾಗಿದೆ. ಈಗಾಗಲೇ ಮೂಲ ಬಿಜೆಪಿ ಸೇರ್ಪಡೆಯಾದ 17 ಜನ…

Read More

ಬೆಂಗಳೂರು:- ಬುಧವಾರ ಮುಂಬೈನ ವಾಂಖೆಡೆಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸದೆಬಡಿದು 70 ರನ್ ಗಳಿಂದ ಗೆಲುವು ಸಾಧಿಸಿರುವ ಭಾರತ ತಂಡಕ್ಕೆ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರು ಶುಭ ಹಾರೈಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಶರವಣ ಅವರು, ಎಂತಹ ಸೊಗಸಾದ ಪಂದ್ಯ!. ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದು ತುಂಬಾ ಖುಷಿ ಹಾಗೂ ಹೆಮ್ಮೆಯ ವಿಚಾರ. ಫೈನಲ್‌ ಗೆ ಲಗ್ಗೆ ಇಟ್ಟ ಭಾರತ ತಂಡಕ್ಕೆ ನನ್ನ ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಮುಂಬೈನ ವಾಂಖೆಡೆಯಲ್ಲಿ ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 70 ರನ್ ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಫೈನಲ್ ಗೆ ಲಗ್ಗೆ ಇಟ್ಟಿದೆ.

Read More