ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ “ಮಾರ್ಟಿನ್” ಪ್ಯಾನ್ ಇಂಡಿಯಾ ಚಿತ್ರದ ಆಡಿಯೋ ಹಕ್ಕು ಅಧಿಕ ಮೊತ್ತಕ್ಕೆ (ಒಂಭತ್ತು ಕೋಟಿ ರೂಪಾಯಿ) ಮಾರಾಟವಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆಯಾದ “ಸರೆಗಮ”, ” ಮಾರ್ಟಿನ್ ” ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. “ನನಗೆ ತಿಳಿದ ಇಷ್ಟು ದೊಡ್ಡ ಮೊತ್ತಕ್ಕೆ ಯಾವುದೇ ಚಿತ್ರದ ಆಡಿಯೋ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ” ನಮ್ಮ ಚಿತ್ರದ ಆಡಿಯೋ ರೈಟ್ಸ್ ಈ ಬಾರಿ ಮೊತ್ತಕ್ಕೆ ಮಾರಾಟವಾಗಿರುವುದು ತುಂಬಾ ಖುಷಿಯಾಗಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ ಎಂದು ನಿರ್ಮಾಪಕ ಉದಯ್ ಕೆ ಮೆಹ್ತಾ ತಿಳಿಸಿದ್ದಾರೆ.…
Author: AIN Author
ಲಂಡನ್: ಕ್ಯಾನ್ಸರ್ ರೋಗ ಮಾರಣಾಂತಿಕ ಕಾಯಿಲೆ. ಈ ರೋಗ ಬಂದವ್ರೆಲ್ಲ ತೀವ್ರ ಭಯದಿಂದ ನರಳುತ್ತಿರುತ್ತಾರೆ. ನಾವು ಬದುಕೋದು ಇನ್ನು ಕೆಲವು ದಿನಗಳು ಮಾತ್ರ, ಸಾಯೋದು ಗ್ಯಾರಂಟಿ ಎಂಬ ಬೀತಿ ಕಾಡುತ್ತಿರುತ್ತದೆ. ಅಲ್ಲದೆ, ಕ್ಯಾನ್ಸರ್ ಚಿಕಿತ್ಸೆಗೆ ತುಂಬಾ ಸಮಯ, ಹಣ ಬೇಕಾಗುತ್ತದೆ ಎಂದೂ ಅನೇಕ ರೋಗಿಗಳು ಭಯ ಪಡುತ್ತಿರುತ್ತಾರೆ. ಆದರೆ, ಇನ್ಮುಂದೆ ಹೆಚ್ಚಯ ಭಯ ಬೇಡ. ಏಕೆಂದರೆ, ಮೊದಲ ಬಾರಿಗೆ, ಇಂಗ್ಲೆಂಡ್ ವಿಶ್ವದ ಮೊದಲ 7 ನಿಮಿಷಗಳ ಕ್ಯಾನ್ಸರ್ ಚಿಕಿತ್ಸೆಯ ಚುಚ್ಚುಮದ್ದನ್ನು ಹೊರತರಲಿದೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಈ ವೈದ್ಯಕೀಯ ಪ್ರಗತಿಯನ್ನು ಒದಗಿಸುವ ವಿಶ್ವದ ಮೊದಲ ಆರೋಗ್ಯ ಸಂಸ್ಥೆಯಾಗಲಿದೆ. ಇನ್ನು, ಇದು ಚಿಕಿತ್ಸೆಯ ಸಮಯವನ್ನು ಮುಕ್ಕಾಲು ಭಾಗದಷ್ಟು ಕಡಿಮೆ ಮಾಡುತ್ತದೆ. https://ainlivenews.com/indias-richest-person-gautam-adani-has-overtaken-mukesh-ambani-as-indias-richest-person/ ಇಮ್ಯುನೋಥೆರಪಿಯೊಂದಿಗೆ ಚಿಕಿತ್ಸೆ ಪಡೆದ ನೂರಾರು ರೋಗಿಗಳು atezolizumab ಇಂಜೆಕ್ಷನ್ ಅನ್ನು “ಚರ್ಮದ ಅಡಿಯಲ್ಲಿ” ಸ್ವೀಕರಿಸಲು ಸಿದ್ಧರಾಗಿದ್ದಾರೆ. ಇದು ಅಂತಿಮವಾಗಿ ಕ್ಯಾನ್ಸರ್ ತಂಡಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತದೆ ಎಂದು ಮಂಗಳವಾರ, NHS ಇಂಗ್ಲೆಂಡ್ ಮಾಹಿತಿ ನೀಡಿದೆ. ಈ ಇಂಜೆಕ್ಷನ್…
ಕಲಬುರ್ಗಿ:- ಸದ್ಯ ಮೂರು ತಿಂಗಳವರೆಗೆ ಬೆಂಗಳೂರಿಗೆ ಹೋಗಲ್ಲ ಸಿಎಂಗೆ ಸಲಹೆ ಕೊಡಲ್ಲ ಅಂತ ಅಳಂದ ಶಾಸಕ ಹಾಗು ಸಿಎಂ ಸಲಹೆಗಾರ ಬಿಆರ್ ಪಾಟೀಲ್ ಹೇಳಿದ್ದಾರೆ.. ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪಾಟೀಲ್ ಈಗ ಏನಿದ್ರೂ ಲೋಕ ಸಮರದತ್ತ ಗಮನ ಕೊಡ್ತೇನೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಸಾಹೇಬರ ಈ ಭಾಗದಲ್ಲಿ ಕಲಬುರಗಿ ಬೀದರ್ ಯಾದಗಿರಿ ಸೇರಿ ಕಲ್ಯಾಣದಲ್ಲಿ ಅತಿ ಹೆಚ್ಚು ಸೀಟ್ ಕಾಂಗ್ರೆಸ್ ಗೆಲ್ಲಬೇಕು.ಅದಕ್ಕಾಗಿ ನಾವೂ ನೀವು ಸೇರಿ ಈ ಕುರಿತು ಕೆಲಸ ಮಾಡೋಣ ಅಂದ್ರು..
ಗದಗ:- ಜಿಲ್ಲೆಯಲ್ಲಿ ಬೆಳ್ಳಂಬೆಳ್ಳಿಗೆ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಪುರಸಭೆಯಿಂದ ತೆರವು ಕಾರ್ಯಾಚರಣೆ ನಡೆದಿದ್ದು, ಪಟ್ಟಣದ ತಹಶಿಲ್ದಾರರ ಕಚೇರಿಯ ಮುಂಭಾಗದಲ್ಲಿನ ಗೂಡಂಗಡಿಗಳ ತೆರವು ಕಾರ್ಯ ನಡೆದಿದೆ. ಪುರಸಭೆ ಅಧಿಕಾರಿಗಳು, ಜೆಸಿಬಿಯಿಂದ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲಕ್ಕೆ ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ವ್ಯಾಪಾರಸ್ಥರು ಹಾಗೂ ಪುರಸಭೆ ಅಧಿಕಾರಿಗಳ ಮಧ್ಯ ವಾಗ್ವಾದ ನಡೆದಿದೆ. ಇದೇ ವೇಳೆ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು:- ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯ ಖಚಿತ ಎಂದು JDS ಹೇಳಿದೆ. ಈ ಸಂಬಂಧ X ಮಾಡಿರುವ ಜೆಡಿಎಸ್, ಮಾನ್ಯ ಮಾಜಿ ಪ್ರಧಾನಿಗಳು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಇಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ, ಹೌದು. ದೇಶವನ್ನು ಜಾತಿ,ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇಪುಟದಲ್ಲಿ ಏದುಸಿರು ಬಿಡುತ್ತಿದೆ. ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅವರ ಹಸ್ತ ಅಭಯ ಹಸ್ತ.ಅದು ಆಶೀರ್ವಾದ,ಅನುಗ್ರಹದ ದ್ಯೋತಕ.ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ @siddaramaiah ನವರೇ? ಎಂದು ಪ್ರಶ್ನಿಸಿದರು. ಜಾತ್ಯತೀತತೆ ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ.. ಈ ಪದಗಳೆಲ್ಲ ನಿಮಗೆ ಆಗಿ…
ಹಲವಾರು ಬಾರಿ ಮರು ಚಿತ್ರೀಕರಣ, ಮತ್ತೆ ಮತ್ತೆ ತಿದ್ದುಪಡಿಗಳು, ಹಲವಾರು ಬದಲಾವಣೆಗಳೊಂದಿಗೆ ಕ್ರೇಜ್ ಹುಟ್ಟುಹಾಕುತ್ತಿರುವ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನಿಮಾದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸಿ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ “ಗೋಪಿ ಸುಂದರ್” ಈಗ ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಜೊತೆ ಎಲ್ಲಾ ಹಾಡುಗಳನ್ನು ಮತ್ತೆ ಹೊಸದಾಗಿ ಕಂಪೋಜ್ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತ್ರಿವಿಕ್ರಮ ಸಪಲ್ಯ ರವರು ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ನ ಅಡಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ “ಕೊರಗಜ್ಜ” ಚಿತ್ರಕ್ಕೆ RRR, ಪುಷ್ಪ ಮೊದಲಾದ ಹಿಟ್ ಸಿನಿಮಾಗಳ ತಂತ್ರಜ್ಞರ ದಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಸುಮಾರು ಎಂಟು ನೂರು ವರ್ಷಗಳ ಹಿಂದಿನ ಕಥೆಯುಳ್ಳ ಈ ಸಿನಿಮಾದಲ್ಲಿ ಹಾಲಿವುಡ್- ಬಾಲಿವುಡ್ ಕಲಾವಿದರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಜೊತೆ ಶ್ರುತಿ, ಭವ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ. ಋತಿಕ ಎನ್ನುವ ಹೊಸ ಮುಖ ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ…
ಆನೇಕಲ್:- ಅಪರಾಧ ಮಾಸಾಚರಣೆ ಹಿನ್ನೆಲೆ ವಾಕಾಥಾನ್ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಮಾದಕ ವಸ್ತುಗಳು ನಮಗೆ ಬೇಡ ಜಾಗೃತಿ ಅಭಿಯಾನ ಜರುಗಿದೆ. ಜಾಗೃತಿ ಅಭಿಯಾನದಲ್ಲಿ ನಟಿ ಸಪ್ತಮಿ ಗೌಡ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಜುಂಬಾ ಡ್ಯಾನ್ಸ್ ಮೂಲಕ ವಿಧ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ವಿವಿಧ ಪ್ರತಿಷ್ಠಿತ ಕಾಲೇಜಿನ ನೂರಾರು ಮಂದಿ ವಿಧ್ಯಾರ್ಥಿಗಳು ಭಾಗಿಯಾಗಿದರು. ಕಲಾವಿದೆ ಐಶ್ವರ್ಯ ಸೇರಿದಂತೆ ಸಿನಿತಾರೆಯರ ಬಾಗಿಯಾಗಿದರು. ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ಮಾಸಾಚರಣೆ ಆಯೋಜನೆ ಮಾಡಲಾಗಿತ್ತು. ಆನೇಕಲ್ ಪಟ್ಟಣದ ಅಲಯನ್ಸ್ ಕಾಲೇಜಿನಲ್ಲಿ ಜಾಗೃತಿ ಅಭಿಯಾನ ಜರುಗಿದ್ದು, ಜಾಗೃತಿ ಅಭಿಯಾನಕ್ಕೆ ಕೇಂದ್ರ ವಲಯ ಐಜಿ ರವಿಕಾಂತೇಗೌಡ ಹಾಗೂ ನಟಿ ಸಪ್ತಮಿಗೌಡ ಚಾಲನೆ ನೀಡಿದ್ದಾರೆ. 5k ಹಾಗೂ 3K ವಾಕಾಥಾನ್ ನಲ್ಲಿ ವಿಧ್ಯಾರ್ಥಿಗಳು ಹಾಗೂ ಪೊಲೀಸರು ಹೆಜ್ಜೆ ಹಾಕಿದ್ದು, 5k ಹಾಗೂ 3K ವಾಕಾಥಾನ್ ನಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಮಾದಕ ವಸ್ತು ಜಾಗೃತಿ ಅಭಿಯಾನದಲ್ಲಿ ವಿಂಟೇಜ್ ಕಾರ್ ಗಳ ಶೋ ನಡೆದಿದ್ದು, ವಿಂಟೇಜ್ ಕಾರ್ ಗಳನ್ನ ನೋಡಿ…
ನವದೆಹಲಿ:- ಬೀಚಲ್ಲಿ ಫೋಟೋಶೂಟ್‌ಗೆ ಟೈಮಿದೆ, ಮಣಿಪುರಕ್ಕಿಲ್ಲ ಎಂದು ಪ್ರಧಾನಿ ಮೋದಿ ಗೆ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇವಸ್ಥಾನ ನಿರ್ಮಾಣವಾಗುತ್ತಿರುವ ಸ್ಥಳಗಳಲ್ಲಿ ಮತ್ತು ಬೀಚ್‌ಗಳಲ್ಲಿ ಫೋಟೋಶೂಟ್ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಸಮಯವಿದೆ. ಆದರೆ ಹಿಂಸಾಚಾರದಿಂದ ಬಳಲುತ್ತಿರುವ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದರು. ಪ್ರಧಾನಿ ಮೋದಿಗೆ ಸಮುದ್ರದಲ್ಲಿ ಈಜಾಡುತ್ತಿರುವ ಫೋಟೋಶೂಟ್‌ಗೆ ಸಮಯವಿದೆ. ಕೇರಳ ಸೇರಿದಂತೆ ದೇವಸ್ಥಾನ ನಿರ್ಮಾಣವಾಗುತ್ತಿರುವ ಎಲ್ಲ ಕಡೆ ಅವರ ಫೋಟೋಗಳನ್ನು ನೋಡಬಹುದು. ಆದರೆ ಮಣಿಪುರದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಅಲ್ಲಿ ಜನ ಸಾಯುತ್ತಿದ್ದಾರೆ. ಆ ಮಹಾಪುರುಷ ಅಲ್ಲಿಗೆ ಏಕೆ ಹೋಗಲ್ಲ? ಅದು ದೇಶದ ಭಾಗವಲ್ಲವೇ?’ ಎಂದು ಕಿಡಿಕಾರಿದ್ದಾರೆ.
ಚಾಮರಾಜನಗರ:- ಪಕ್ಷದ ಬೆಳವಣಿಗೆಯಲ್ಲಿ ವಿ ಸೋಮಣ್ಣ ಕೊಡುಗೆ ಅಪಾರ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪಕ್ಷದಲ್ಲಿ ಸಂಪೂರ್ಣವಾಗಿ ಎಲ್ಲವೂ ಸರಿ ಹೋಗಿದೆ ಎಂದು ಹೇಳಿಲ್ಲ ಹೇಳುವುದು ಇಲ್ಲ. ಸಾಕಷ್ಟು ಬದಲಾವಣೆ ಆಗಲಿದೆ ಎಂದು ವಿ.ಸೋಮಣ್ಣ ಪರ ಬಿ.ವೈ.ವಿಜಯೇಂದ್ರ ಸಾಫ್ಟ್ ಕಾರ್ನರ್ ತೋರಿದ್ದಾರೆ. ಸೋಮಣ್ಣ ಹಿರಿಯರಿದ್ದಾರೆ ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಕೂಡ ಸಾಕಷ್ಟಿದೆ. 45 ವರ್ಷಗಳ ಸುದೀರ್ಘ ಅನುಭವ ಇರುವಂತ ರಾಜಕಾರಣಿ ಅವ್ರು. ಎರಡು ಕಡೆ ಸ್ಪರ್ಧಿಸಿ ಗೆಲವು ಸಾಧಿಸುತ್ತೇನೆಂಬ ವಿಶ್ವಾಸ ಇದ್ದಂತವರಿಗೆ ಎರಡುಕಡೆ ಸೋಲಾದ್ರೆ ನೋವಾಗುವುದು ಸಾಮಾನ್ಯ. ಸೋಲಿಗೆ ಬೇರೆ ಕಾರಣ ಇರಬಹುದು ಇಬ್ಬರು ಕುಳಿತು ಮಾತನಾಡುತ್ತೇವೆ ಎಂದು ಚಾಮರಾಜನಗರದಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ: ನಗರದಾದ್ಯಂತ ಶನಿವಾರ ಸಂಜೆ ಸುಮಾರು 30 ನಿಮಿಷಗಳ ಕಾಲ ಅಕಾಲಿಕ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆಗೆ, ಮಳೆ ತುಸು ತಂಪನೆರೆಯಿತು. ಮಾರುಕಟ್ಟೆಗೆ ಬಂದವರು ಏಕಾಏಕಿ ಸುರಿದ ಮಳೆಯಿಂದ ಪರದಾಡಿದರು. ಬೈಕ್ ಸವಾರರು ನೆನೆಯುತ್ತಲೇ ಸಂಚರಿಸಿದ ದೃಶ್ಯ ಕಂಡು ಬಂದಿತು. ರಸ್ತೆ ಕಾಮಗಾರಿ ನಡೆಯುತ್ತಿರುವ ಅಶೋಕನಗರ, ದೇಶಪಾಂಡೆನಗರ, ದೇವಾಂಗಪೇಟೆ, ಚನ್ನಪೇಟೆ, ಆನಂದನಗರ ರಸ್ತೆಯ ಅಲ್ಲಲ್ಲಿ ನೀರು ನಿಂತಿತ್ತು. ಕಾಮಗಾರಿಯಿಂದಾಗಿ ನಿಂತ ಕೊಳಚೆ ನೀರಿನಿಂದ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.