Author: AIN Author

ತುಮಕೂರು:- ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ ತಂಡದ ಸೆಮಿ ಫೈನಲ್ ಪಂದ್ಯವನ್ನು ಮದುವೆ ಮಂಟಪದಲ್ಲಿ ವಧು ವರರು ವೀಕ್ಷಿಸಿದ್ದಾರೆ. ವಧು ವರರಿಂದ ಮದುವೆ ಮಂಟಪದಲ್ಲಿ ಇಂಡೋ – ಕಿವೀಸ್ ಸೆಮಿ ಫೈನಲ್ ವೀಕ್ಷಣೆ‌‌ ಮಾಡಲಾಗಿದೆ. ಆರತಕ್ಷತೆಗೆ ಬರುವ ಸಂಬಂದಿಕರು, ಸ್ನೇಹಿತರಿಗಾಗಿ ಎಲ್‌ಈ‌ಡಿ ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಪಾವಗಡದ ಎಸ್ ಎಸ್ ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೇಟ್ ಪ್ರೇಮಿಗಳ ಮದುವೆ ನಡೆದಿದೆ. ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯಕ್ಕಾಗಿ ಎಲ್‌ಈ‌ಡಿಗಳ ಅಳವಡಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಸೌಂದರ್ಯ, ಕಾರ್ತಿಕ್ ಮದುವೆಯಲ್ಲಿ ಸೆಮಿ ಫೈನಲ್ ಪಂದ್ಯ ವಿಕ್ಷಣೆ ಮಾಡಲಾಗಿದೆ. ಆರ್ಕೇಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಈ‌ಡಿ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದ ಜೊತೆ ಪಂದ್ಯ ವೀಕ್ಷಣೆಯ ಭಾಗ್ಯ ದೊರೆತಿದೆ. ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ನಡೆದಿದೆ.

Read More

ಮುಂಬೈ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಕ್ರಿಕೆಟ್ ದೇವರ ಹಲವು ದಾಖಲೆಗಳನ್ನು ಈಗಾಗಲೇ ಮುರಿದಿದ್ದ ವಿರಾಟ್‌ ಕೊಹ್ಲಿ, ಇದೀಗ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ಇದರ ಬೆನ್ನಲ್ಲೆ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರು ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ದಾಖಲೆ ಮುರಿದ ವಿರಾಟ್‌ ಕೊಹ್ಲಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ನನ್ನ ದಾಖಲೆ ಮುರಿದಿರುವುದಕ್ಕೆ ಖುಷಿಯಾಗಿದೆ. ಅದರಲ್ಲೂ ವಿಶೇಷವಾಗಿ ಭಾರತೀಯನೇ ನನ್ನ ದಾಖಲೆ ಮುರಿದಿರುವುದರಿಂದ ನನಗೆ ಸಂತೋಷ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ವಿರಾಟ್‌ ಕೊಹ್ಲಿಗೆ ಸಚಿನ್‌ ತೆಂಡೂಲ್ಕರ್‌ ಭಾವನಾತ್ಮಕ ಸಂದೇಶ “ಭಾರತ ತಂಡದ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ನಾನು ನಿಮ್ಮನ್ನು ಮೊದಲ ಬಾರಿ ಭೇಟಿಯಾಗಿದ್ದೆ. ನನ್ನ ಪಾದವನ್ನು ಮುಟ್ಟುವಂತೆ ಸಹ ಆಟಗಾರರು ನಿಮ್ಮ ಬಳಿ ಫ್ರಾಂಕ್ ಮಾಡಿದ್ದರು. ಆ ದಿನ ನನ್ನ ನಗುವನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ತದ ನಂತರ ತಮ್ಮ ಆಟದ ಮೇಲಿನ ಉತ್ಸಾಹ ಮತ್ತು…

Read More

ವಿಜಯಪುರ: ‘ನಾವು ದಲಿತರು, ನಮಗಾಗಿ ಯಾರೂ ಕೈ ಎತ್ತಿಲ್ಲ. ನಾವು ದಲಿತರಾಗಿದ್ದರೆ ಯಾವುದೇ ರೀತಿಯ ಬೆಳವಣಿಗೆ ಸಾಧ್ಯವಿಲ್ಲ’ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಈ ಮೂಲಕ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹೈಕಮಾಂಡ್ ನಿರ್ಧಾರಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ದಲಿತರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಸೆಂಬ್ಲಿಯಲ್ಲೂ ನೋಡಿದ್ದೇವೆ, ಲೋಕಸಭೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡದೊಡ್ಡ ಗೌಡರು, ಸಾಹುಕಾರರುಗಳು ಬಂದರು. ಅವರಿಗೆ, ಅವರ ಪರವಾಗಿ ಕೈ ಎತ್ತುತ್ತಲೇ ಇದ್ದೇವೆ. ಕಳೆದ 75 ವರ್ಷಗಳಿಂದ ನಾವು ಕೈ ಎತ್ತಿಕೊಂಡು ಬಂದಿದ್ದೇವೆ. ನಾವು ದಲಿತರು, ನಮಗಾಗಿ ಈ ಜೀವನದಲ್ಲಿ ಯಾರೂ ಕೈ ಎತ್ತಿಲ್ಲ. ಇದು ಬಹಳ ದುಃಖದ ಸಂಗತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. https://ainlivenews.com/are-we-stupid-to-believe-hd-kumaraswamys-words-dcm-question/ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನೇಮಕ ನಾವಂತೂ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚಿಸಿ, ಮಾಜಿ…

Read More

ಮುಂಬೈ: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮಾರಕ ದಾಳಿ ಮುಂದುವರಿಸಿರುವ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ (ನವೆಂಬರ್ 15) ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 57ಕ್ಕೆ7 ವಿಕೆಟ್ ಪಡೆದು ರೋಹಿತ್ ಶರ್ಮಾ ಪಡೆಗೆ 70 ರನ್ ಗಳ ಗೆಲುವು ತಂದುಕೊಟ್ಟಿದ್ದಾರೆ. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಶಮಿ, ಟೀಮ್ ಇಂಡಿಯಾ ಫೈನಲ್ ಹಂತ ತಲುಪಲು ಮಹತ್ತರ ಕಾಣಿಕೆ ನೀಡಿದ್ದಾರೆ. ಜಹೀರ್ ಖಾನ್ ದಾಖಲೆ ಮುರಿದ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಕೇವಲ 6 ಪಂದ್ಯಗಳಲ್ಲೇ 23 ವಿಕೆಟ್ ಪಡೆದ ಶಮಿ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಮ್ ಇಂಡಿಯಾದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಹಿರಿಯ ವೇಗಿ ಜಹೀರ್ ಖಾನ್ 21 ವಿಕೆಟ್ ಪಡೆದು ಗಮನ ಸೆಳೆದಿದ್ದರು.

Read More

ತುಮಕೂರು:-ತುಮಕೂರಿನ ಸರಸ್ವತಿಪುರಂನಲ್ಲಿ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪತ್ತೆಯಾಗಿದೆ. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ. 17ನೇ ವಾರ್ಡ್ ನ ಸರಸ್ವತಿಪುರಂ 5 ಕ್ರಾಸ್ ನಲ್ಲಿರುವ ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆಯಲಾಗಿತ್ತು. ಗಿಡದಲ್ಲಿ ಗಾಂಜಾ ಸೊಪ್ಪು ಕಿತ್ತುಕೊಂಡು ಹುಡುಗರು ಹೋಗುತ್ತಿದ್ದರು. ಸ್ಥಳೀಯರ ಮಾಹಿತಿ ಆಧಾರದ ಮೇಲೆ‌ ಸ್ಥಳಕ್ಕೆ ಭೇಟಿ ಕೊಟ್ಟು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ನಿವೇಶನದ ಮಾಲೀಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಗದಗ: ಕರ್ನಾಟಕ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಹವಾಮಾನ ವರದಿ ಪ್ರಕಾರ ಹಿಂಗಾರು ಮಳೆ ಕೊರತೆಯೂ ಬಹಳಷ್ಟಿದೆ. ರಾಜ್ಯದಲ್ಲಿ ಮಳೆ ಪರಿಸ್ಥಿತಿ ಗಂಭೀರ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ ಸಾಧ್ಯತೆ ಇದೆ ಎಂದು ಸಚಿವ ಹೆಚ್​ಕೆ ಪಾಟೀಲ್ (H.K.Patil) ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೇವು, ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಮುಂದಿನ ಜೂನ್, ಜುಲೈ ವರೆಗೂ ಮಳೆ ಬರುವ ಲಕ್ಷಣಗಳು ಕಡಿಮೆ ಇದೆ. ವಾಡಿಕೆ ಮಳೆಗಿಂತ ಬಹಳ ಕೊರತೆ ಇದೆ. ಹೀಗಾಗಿ ಕುಡಿಯುವ ಕೊರತೆ ಸಾಧ್ಯತೆ ಇದೆ‌. ಸಾರ್ವಜನಿಕರು ನೀರಿನ ಬಳಕ ವಿಚಾರ ಮಾಡಿ ಬಳಕೆ ಮಾಡಬೇಕಾದ ಮಾನಸಿಕ ಸ್ಥಿತಿಗೆ ಬರಬೇಕಿದೆ. ನೀರು ಇದ್ದರೆ ಹೇಗೆ ಬೇಕಾದರೂ ಬಳಕೆ ಮಾಡುತ್ತೇವೆ. ಆದರೆ ನೀರಿನ ಕೊರತೆ ಆಗುವ ಸಾಧ್ಯತೆ ಇರುವುದರಿಂದ ಎಲ್ಲರೂ ಮುಂಜಾಗ್ರತೆಯಿಂದ ಇರಬೇಕು ಎಂದರು. https://ainlivenews.com/are-we-stupid-to-believe-hd-kumaraswamys-words-dcm-question/ ನೀರು ಹಾಳು‌ ಮಾಡದೇ ಮಿತವಾಗಿ ಬಳಸಬೇಕು ಅಂತ ಜಿಲ್ಲೆಯ ಜನರಿಗೆ ಮನವಿ ಮಾಡಿದ ಹೆಚ್​ಕೆ ಪಾಟೀಲ್,…

Read More

ದೇಶ ವಿದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ತೀಕ್ಷ್ಣ ಬೆಲೆ ಏರಿಕೆ ಕಂಡಿವೆ. ಅಮೆರಿಕದಲ್ಲಿ ಅಲ್ಲಿನ ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಏರಿಸುವ ಸಾಧ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿರುವಂತೆಯೇ ಹೂಡಿಕೆದಾರರು ಚಿನ್ನದ ಮೊರೆ ಹೋಗುತ್ತಿದ್ದಾರೆ. ಈ ಬಾರಿಯ ಬೆಲೆ ಏರಿಕೆ ದೀರ್ಘಕಾಲದ್ದಾಗಿರಲಿದ್ದು, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿ ಗೋಲ್ಡ್ ಸ್ಕೀಮ್​ನಲ್ಲಿ ಹಣ ತೊಡಗಿಸಿದವರು ನಿರಾಳರಾಗಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,470 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,150 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 16ಕ್ಕೆ): 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,950 ರೂ 24 ಕ್ಯಾರಟ್​ನ 10 ಗ್ರಾಂ…

Read More

ಬೆಂಗಳೂರು:- ತನ್ನ ಸಹೋದ್ಯೋಗಿಗಳನ್ನು ಬಿಟ್ಟು ಬರಲು ರಾತ್ರಿ 10 ಗಂಟೆ ಸಮಯದಲ್ಲಿ ಮಹಿಳೆಯೊಬ್ಬರು ಕಾರಿನಲ್ಲಿ ಹೊರಟಿದ್ದ ವೇಳೆ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಏಕಾಏಕಿ ನಿಲ್ಲಿಸಿದ ಆರೋಪಿಗಳು ಹೇಳಿದ್ದು, ನೀವು ಇನ್ನೊಂದು ವಾಹನಕ್ಕೆ ಡಿಕ್ಕಿ ಮಾಡಿ ಬಂದಿದ್ದೀರಿ. ಹೀಗೆ ಹೋದರೆ ಹೇಗೆ ಎಂದು ಪ್ರಶ್ನಿಸಿತು. ಹಣ ಕೀಳುವ ಉದ್ದೇಶ ಅವರಲ್ಲಿ ಇತ್ತು. ಎಚ್ಚೆತ್ತುಕೊಂಡ ಮಹಿಳೆ ಧೈರ್ಯದಿಂದಲೇ ಎದುರಿಸಿ ಪೊಲೀಸರು ಹಾಗೂ ಮನೆಯವರ ಜತೆಗೆ, ಪರಿಚಯಸ್ಥರಿಗೆ ಅಲ್ಲಿಂದ ಕರೆ ಮಾಡಿದರು. ಇದನ್ನು ಕಂಡ ಆ ತಂಡ ಅಲ್ಲಿಂದ ಕಾಲ್ಕಿತ್ತಿತು. https://twitter.com/srijanshetty/status/1724289712729501959?ref_src=twsrc%5Etfw%7Ctwcamp%5Etweetembed%7Ctwterm%5E1724289712729501959%7Ctwgr%5E0d647e4350ca57df15259a2c575493270a9a0cb8%7Ctwcon%5Es1_c10&ref_url=http%3A%2F%2Fapi-news.dailyhunt.in%2F ಇದು ನಡೆದಿರುವುದು ಸರ್ಜಾಪುರದ ಮುಖ್ಯ ರಸ್ತೆಯಲ್ಲಿ. ಪೊಲೀಸರು ವಿವರವನ್ನು ಪಡೆದುಕೊಂಡು ಯುವಕರ ತಂಡದ ಪತ್ತೆಗೆ ಮುಂದಾಗಿದ್ಧಾರೆ. ಮಹಿಳೆಯ ಪತಿ ಎಕ್ಸ್‌ನಲ್ಲಿ ಈ ಅನುಭವ ಪೋಸ್ಟ್‌ ಮಾಡಿದ್ದು, ಇದಕ್ಕೆ ಹಲವರು ಗಂಭೀರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಉದ್ಯೋಗಿ ಸೃಜನ್‌ ಶೆಟ್ಟಿ ಎಂಬುವವರ ಪತ್ನಿ ಕೆಲಸ ಮುಗಿಸಿ ಹೊರಡುವಾಗಲೇ ತಡವಾಗಿತ್ತು. ಈ ವೇಳೆ ಜತೆಗಿದ್ದ ಇಬ್ಬರು ಮಹಿಳಾ ಹಾಗು ಪುರುಷ ಸಿಬ್ಬಂದಿಗೂ ರಾತ್ರಿಯಾಗಿದ್ದರಿಂದ ಕ್ಯಾಬ್‌ ಸಿಗುವುದು…

Read More

ಚಾಮರಾಜನಗರ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲಿಂಗಾಯತ ಮತಗಳನ್ನು ಸೆಳೆಯುತ್ತಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ಅದೇನು ಹೊಸದಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಲಿಂಗಾಯತರು ಮೊದಲಿಂದಲೂ ಹೆಚ್ಚು ಬಿಜೆಪಿ ಪರ ಇದ್ದಾರೆ. ನಮ್ಮ ಜತೆ ಇರುವವರು ಇದ್ದಾರೆ. ಅವರು ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ ಎಂದು ಹೇಳಿದ್ದಾರೆ. https://ainlivenews.com/are-we-stupid-to-believe-hd-kumaraswamys-words-dcm-question/ ಬಿಜೆಪಿಯವರ ಜತೆ ಹೆಚ್ಚಿನ ಲಿಂಗಾಯತರು ಇದ್ದಾರೆ ಅಷ್ಟೇ. ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮುಂದೆ ಹೆಚ್ಚಿನ ಹೋರಾಟಗಳಿವೆ. ಆ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಅವರಿಗೆ ಆ ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಮುಂದೆ ಲೋಕಸಭಾ ಚುನಾವಣೆ ಇದೆ. ಅದಾದ ಮೇಲೆ ಫೈನಲ್ ಮ್ಯಾಚ್, 2028 ರ ವಿಧಾನಸಭಾ ಚುನಾವಣೆ ಇದೆ. ಅವರು ಯಾವ ರೀತಿ ಸಂಘಟನೆ ಮಾಡ್ತಾರೆ, ಪಕ್ಷ ಯಾವರೀತಿ ಸಹಕಾರ ನೀಡುತ್ತಾರೆ ಕಾದು ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.  

Read More

ಬೆಂಗಳೂರು:- ಡಿಕೆ ಬ್ರದರ್ಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ರಂಜಿತ್ ಬಂಧಿತ ಆರೋಪಿ. ವಿಚಾರಣೆ ವೇಳೆ ಆರೋಪಿ ರಂಜಿತ್​ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಈತ DK ಬ್ರದರ್ಸ್​ ಬಗ್ಗೆ ಮಾತ್ರವಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆಯೂ ನಿಂದಿಸಿ ಪೋಸ್ಟ್​​ ಹಾಕಿದ್ದ. ಬೇರೆ ರಾಜ್ಯಗಳ ರಾಜಕಾರಣಿಗಳಿಗೂ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್​​​​ ಹಾಕಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಖಾಸಗಿ ಕಂಪನಿ ನೌಕರ ರಂಜಿತ್, ಫೇಸ್‌ಬುಕ್ ಹಾಗೂ ಎಕ್ಸ್‌ ಖಾತೆಯಲ್ಲಿ ‘ಕಿಲ್ ಡಿಕೆ ಬ್ರದರ್ಸ್’ ಎಂದು ಪೋಸ್ಟ್ ಹಾಕಿದ್ದ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಮತ್ತು ಡಿ.ಕೆ ಸಹೋದರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ. ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿದ್ದ ಎಂದು ಆರೋಪಿಸಿ ಜಯನಗರ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶರತ್ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಜಯನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮತ್ತಷ್ಟು ಸತ್ಯ ಬಯಲಾಗಿದೆ. ಈತ ತಾನೂ ಸೈಬರ್ ಅಪರಾಧದ…

Read More