ಬೆಂಗಳೂರು:- ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ ಆಯೋಜನೆ ಮಾಡಲಾಗಿದ್ದು, ಇಂದು ಭಾನುವಾರ ಸಂಡೇ ದಿನ ಅವರೆ ಬೇಳೆಯ ವೆರೈಟಿ ಫುಡ್ ಟೇಸ್ಟ್ ಅನ್ನು ಸಿಟಿ ಮಂದಿ ಫುಲ್ ಎಂಜಾಯ್ ಮಾಡಿದ್ದಾರೆ. 24ನೇ ಆವೃತ್ತಿಯ ಅವರೆ ಬೇಳೆ ಮೇಳದಲ್ಲಿ ರಜೆಯ ದಿನ ಜೋರಾಗಿತ್ತು. ಭಾನುವಾರ ಹಿನ್ನೆಲೆ ಅವರೆ ಬೇಳೆ ಮೇಳ ಫುಲ್ ರಶ್.. ರಶ್ ಆಗಿದೆ. ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಮೇಳದಲ್ಲಿ ಸುತ್ತಾಡಿ ಸಿಟಿ ಜನ ಫುಡ್ ಸವಿಯುತ್ತಿದ್ದಾರೆ. ಜನವರಿ 5ಕ್ಕೆ ಈ ಮೇಳ ಆರಂಭವಾಗಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ ಪಿಜ್ಜಾ, ಬರ್ಗರ್, ಕೆಎಫ್‍ಸಿ ತಿಂದು ಬೋರಾದ ಫುಡ್ ಪ್ರಿಯರಿಗೆ ಈಗ, ಅವರೇ ಫುಡ್ ಟೇಸ್ಟ್ ಮಾಡುವ ಅವಕಾಶ ನೀಡಲಾಗಿದೆ. ಹೀಗಾಗಿ ಬೇಳೆ ಪ್ರಿಯರಿಗೆ ಜಾತ್ರೆಯೋ ಜಾತ್ರೆ.. ಸ್ವೀಟ್ಸ್ ಗೂ ಸೈ, ಅವರೆ ಬೇಳೆ ಚಾಟ್ಸ್ ಗೂ ಸೈ ಎನ್ನುವಂತೆ ಸವಿದಿದ್ದಾರೆ.
Author: AIN Author
ಹಾವೇರಿ :- ಸರ್ಕಾರವನ್ನು ತಾಲಿಬಾನ್ ರೀತಿ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಜೆ ಹಳ್ಳಿ, ಕೆಜೆ ಹಳ್ಳಿಯವರನ್ನು ಅಮಾಯಕರು ಅಂತ ಹೇಳುತ್ತಾರೆ. ಸಾಕ್ಷಿಗಳನ್ನು ವೀಕ್ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ. ದೇಶದ ಈ ನೆಲದಲ್ಲಿ ಎಂಥ ರಿಸ್ಕ್ ಬೇಕಾದರೂ ತೆಗೆದುಕೊಂಡು ಅವರನ್ನು ಉಳಿಸಬೇಕು ಎಂಬುದು ಕಾಂಗ್ರೆಸ್ ನಿರ್ಧಾರ. ಶ್ರೀಕಾಂತ್ ಪೂಜಾರಿ ವಿಚಾರವನ್ನೇ ತೆಗೆದುಹಾಕಿದ್ದಾರೆ. 16 ಕೇಸು ಇದೆ ಅಂತ ಯಾರು ವರದಿ ಕೊಟ್ಟರು? ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಸಚಿವರು ಪ್ರಶ್ನಿಸಿದ್ದಾರೆ. ‘ತಾಲಿಬಾನ್ ರೀತಿ ಸರ್ಕಾರ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹುಚ್ಚುಚ್ಚು ಮಾಡೋಕೆ ಹೋದರೆ ಜನ ನಿಮಗೆ ತಕ್ಕ ಉತ್ತರ ಕೊಡ್ತಾರೆ’ ಎಂದರು. ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಶ್ರೀಕಾಂತ್ ಪೂಜಾರಿ ಮೇಲಿನ ಕೇಸ್ ಯಾಕೆ ವಾಪಾಸ್ ಪಡೆಯಲಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಟಾಂಗ್ ಕೊಟ್ಟ ಜೋಶಿ, ‘ಈಗ ಅವರ ಸರ್ಕಾರದಲ್ಲಿ ಅವರ…
ಮಹಾರಾಷ್ಟ್ರ:- ಅಕ್ರಮವಾಗಿ ನೆಲೆಸಿದ್ದ 23 ರಿಂದ 45 ವರ್ಷ ವಯಸ್ಸಿನ ಮೂವರು ಬಾಂಗ್ಲಾದೇಶ ಪ್ರಜೆಗಳನ್ನು ಅರೆಸ್ಟ್ ಮಾಡಲಾಗಿದೆ. ಇಲ್ಲಿನ ವಸಾಯಿ ಪ್ರದೇಶದಲ್ಲಿ ವಾಸವಾಗಿದ್ದರು. ಈ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದು ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ವಸಾಯಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಸಿಎಎ ಕಾಯ್ದೆ ಕೇಂದ್ರ ಜಾರಿಗೆ ತರಲಿದೆ ಎಂದು ಹೇಳಿದ ಬಳಿಕ ಅಕ್ರಮ ಬಾಂಗ್ಲಾ ವಲಸಿಗರು ತಮ್ಮ ದೇಶಕ್ಕೆ ಹಿಂದಿರುಗುತ್ತಿರುವ ಸಂಖ್ಯೆ ಹೆಚ್ಚಳವಾಗಿತ್ತು. ಸಿಎಎ ಕಾಯ್ದೆಯನ್ನು ಜಾರಿಗೆ ತರಲು ಮುಂದಾದ ಕೇಂದ್ರದ ವಿರುದ್ಧ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು. ಆದರೆ ಈ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಅಮಿತ್ ಶಾ ಕೋವಿಡ್ ಸಮಯದಲ್ಲಿ ಹೇಳಿದ್ದರು. ಪೌರತ್ವ ತಿದ್ದುಪಡಿ ಮಸೂದೆಗೆ ಮಮತಾ ಬ್ಯಾನರ್ಜಿ ಮತ್ತು ಎಡಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮಸೂದೆ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಮಮತಾ ಘೋಷಿಸಿದ್ದರು. ಬಾಂಗ್ಲಾದೇಶದ ಅಕ್ರಮ ವಲಸಿಗರು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಒಂದು ಭಾಗವಾಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ…
ಬೆಂಗಳೂರು:- ಅನಾಹುತಗಳ ಬಳಿಕ ಎಚ್ಚತ್ತ ಬಿಎಂಆರ್‌ಸಿಎಲ್ ಪ್ರಯಾಣಿಕರನ್ನು ಟ್ರ್ಯಾಕ್‌ಗಳಿಂದ ದೂರವಿರಿಸಲು ಹ್ಯಾಂಡ್ ರೇಲಿಂಗ್‌ಗಳ ಅಳವಡಿಕೆ ಮಾಡಲು ಮುಂದಾಗಿದೆ. ಬಿಎಂಆರ್‌ಸಿಎಲ್ ತನ್ನ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳ ಉದ್ದಕ್ಕೂ ಸ್ಟೀಲ್ ಹ್ಯಾಂಡ್ ರೇಲಿಂಗ್‌ಗಳನ್ನು ಅಳವಡಿಸಲು ಮುಂದಾಗಿದೆ. ಇತ್ತೀಚೆಗಷ್ಟೆ ಪ್ರಯಾಣಿಕರು ಹಳಿಗಳಿಗೆ ಇಳಿದ ಘಟನೆಗಳಿಂದ ಎಚ್ಚೆತ್ತ ಬಿಎಂಆರ್‌ಸಿಎಲ್ ಈ ನಿರ್ಧಾರಕ್ಕೆ ಬಂದಿದೆ. ಪ್ರಯಾಣಿಕರು ಹಳಿಗಳ ಮೇಲೆ ಇಳಿಯುವುದರಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಪೀಕ್ ಅವರ್‌ಗಳಲ್ಲಿ ರೈಲು ಸೇವೆಗಳಲ್ಲಿ ಅಡಚಣೆಗೆ ಆಗುವುದರಿಂದ ಬಿಎಂಆರ್‌ಸಿಎಲ್ ಈ ಕ್ರಮಕ್ಕೆ ಮುಂದಾಗಿದೆ. ಭದ್ರತಾ ತಪಾಸಣೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡುವುದರ ಹೊರತಾಗಿಯೂ ಹಂತ-1ಗಾಗಿ ಪ್ಲಾಟ್‌ಫಾರ್ಮ್ ಗೇಟ್‌ಗಳ ಸ್ಥಾಪನೆ ಮಾಡಲು ಮುಂದಾಗಿದೆ. ಹಂತ-2ರ ಸುರಂಗ ಕಾರಿಡಾರ್‌ಗಾಗಿ ಪ್ಲಾಟ್‌ಫಾರ್ಮ್ ರೀಲಿಂಗ್ ಅಳವಡಿಕೆಗಾಗಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಇನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರು, “ಜನನಿಬಿಡ ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳ ಉದ್ದಕ್ಕೂ ಜನರು ಹಳಿಗಳಿಗೆ ಪ್ರವೇಶಿಸುವುದನ್ನು ತಡೆಯಲು ನಾವು ಸ್ಟೀಲ್ ಹ್ಯಾಂಡ್ ರೇಲಿಂಗ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಅವುಗಳನ್ನು ಪ್ಲಾಟ್‌ಫಾರ್ಮ್‌ಗಳ ಅಂಚಿನಲ್ಲಿ ಇರಿಸಲಾಗುವುದು. ರೈಲುಗಳ ಬಾಗಿಲು…
ಕಲಬುರಗಿ: ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಹಿನ್ನಲೆ ಓಮಿನಿ ಕಾರೊಂದು ಧಗದಗನೇ ಹೊತ್ತಿ ಉರಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಬಳಿ ಘಟನೆ ನಡೆದಿದ್ದು ಕಾರು ಯಾದಗಿರಿಯಿಂದ ಕಲಬುರಗಿ ಕಡೆ ಬರ್ತಿತ್ತು ಎನ್ನಲಾಗಿದೆ. ಅವಘಡದಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಸ್ಥಳಕ್ಕೆ ವಾಡಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..
ಗದಗ: ಇದೇ ಜನೆವರಿ 22 ರಂದು ಅಯೋಧ್ಯೆಯಲ್ಲಿ ಶ್ರಿ ರಾಮಮಂದಿರ ಉದ್ಘಾಟನೆ ಶ್ರೀ ರಾಮಲಲ್ಲಾ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ಹಾಗೂ ರಾಮ ಮಂದಿರ ಭಾವಚಿತ್ರ ಮನೆ ಮನೆ ವಿತರಣೆ ಕಾರ್ಯ ಪ್ರಾರಂಭವಾಗಿದೆ. ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ನೇತೃತ್ವದಲ್ಲಿ ಇಂದು ಗದಗ ನಗರದ ವಿವಿಧೆಡೆ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಣೆ ಕಾರ್ಯ ಮಾಡಲಾಯಿತು. 22 ನೇ ತಾರೀಖು ಮನೆ ಮುಂದೆ ದೀಪ ಹಚ್ಚಿ ರಂಗೋಳಿ ಬಿಡಿಸಿ ರಾಮನಾಮ ಜಪ ಮಾಡೋ ಮೂಲಕ ಹಬ್ಬ ಆಚರಿಸುವಂತೆ ಇದೇ ವೇಳೆ ಮನವಿಯನ್ನ ಮಾಡಿದ್ರು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾಗಿದ್ರು.
ಕಲಬುರಗಿ: ಲೋಕಸಭೆ ಚುನಾವಣೆಗೆ ಕಲಬುರಗಿಯಲ್ಲಿ ಕೈ ಅಭ್ಯರ್ಥಿ ಆಗ್ತಾರಾ ಸಚಿವ ಪ್ರಿಯಾಂಕ್ ಖರ್ಗೆ..? ಇಂತಹದೊಂದು ಗರ್ಮಾಗರಂ ಚರ್ಚೆ AICC ಅಧ್ಯಕ್ಷರ ತವರೂರಲ್ಲಿ ಜೋರಾಗಿ ನಡೀತಿದೆ.. ಎಲ್ಲದಕೂ ಕಾರಣ ಖುದ್ದು ಪ್ರಿಯಾಂಕ್ ಖರ್ಗೆ ಆಡಿದ ಆ ಒಂದು ಮಾತು. ಹೌದು ಈಗಾಗಲೇ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಆಗಿರೋ ಚರ್ಚೆಯ ಪ್ರಕಾರ ಕೆಲ ಸಚಿವರನ್ನ ಲೋಕದ ಅಖಾಡದಲ್ಲಿ ಇಳಿಸಲು ಚಿಂತನೆ ನಡೆದಿದೆ.. ಇದೇವೇಳೆ ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ನಿಲ್ಲು ಅಂದ್ರೆ ನಾನು ಮಾತ್ರವಲ್ಲ ಎಲ್ಲ ಸಚಿವರೂ ಪಾರ್ಲಿಮೆಂಟಿಗೆ ನಿಲ್ಲಲು ತಯಾರು ಅಂತ ಸ್ಪಷ್ಟಪಡಿಸಿದ್ದಾರೆ..ಆದ್ರೆ ಪ್ರಿಯಾಂಕ್ ನಿಲ್ತಾರಾ ಇಲ್ಲ AICC ಅಧ್ಯಕ್ಷ ಖರ್ಗೆಯವರೇ ಮತ್ತೊಮ್ಮೆ ಕಣಕ್ಕಿಳೀತಾರಾ ಸದ್ಯಕ್ಕೆ ಸಸ್ಪೆನ್ಸ್..
ಶ್ರೀ ಅಡಿವೆಪ್ಪ ಗುರುಸ್ವಾಮಿಗಳ ಆಶೀರ್ವಾದದೊಂದಿಗೆ ಶ್ರೀ ಅಯ್ಯಪ್ಪ ಭಕ್ತ ವೃದ ಚಿಕ್ಕೌಂಶಿ ಹೊಸೂರ ಸನ್ನಿಧಿಯಲ್ಲಿ 37 ನೇ ವರ್ಷದ ಶಬರಿಮಲೈ ಯಾತ್ರೆಯ ಪ್ರಯುಕ್ತ ಜನವರಿ 10 ರಂದು ಹಾನಗಲ್ಲ ತಾಲೂಕ ಚಿಕ್ಕೌಂಶಿ ಹೊಸೂರ ಗ್ರಾಮದ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಗಳಿಂದ ಮಹಾಪಡಿಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಶ್ರೀ ಅಡಿವೆಪ್ಪ ಗುರು ಸ್ವಾಮಿಗಳ ಅಮೃತ ಹಸ್ತದಿಂದ ಇರುಮುಡಿ ಕಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಂತರ ಸ್ವಾಮಿಗಳು ಶಬರಿ ಮಲೆ ಯಾತ್ರೆಗೆ ಹೊರಡುವರು. ಕಾರಣ ಈ ಎಲ್ಲ ಕಾರ್ಯಕ್ರಮಗಳಲ್ಲಿ ಯಾವತ್ತೂ ಸದ್ಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿ ಸ್ವಾಮಿಯ ಕೃಪೆಗೆ ಪಾತ್ರರಾಗಬೆಕೆಂದು ಸನ್ನಿಧಿಯ ಸ್ವಾಮಿಗಳು ವಿನಂತಿಸಿಕೊಡಿದ್ದಾರೆ. ನೂತನ ಕಮೀಟಿ ರಚನೆ- ವೀರ ಮಣಿಕಂಠ ಸೇವಾ ಸಮಿತಿಯ ಟ್ರಸ್ಟನ್ನು ಪುನರಚನೆ ಮಾಡಲಾಗಿದ್ದು ನೂತನವಾಗಿ ಮಂಜು ಗುರುಸ್ವಾಮಿಗಳು ಅಧ್ಯಕ್ಷರಾಗಿ ಡಾಕ್ಟರ್ ಸುಶೀಲಾ ಸ್ವಾಮಿಗಳು ಅವರು ಉಪಾಧ್ಯಕ್ಷರಾಗಿ ಶಿವರಾಜ್ ಸಜ್ಜನ್ ಸ್ವಾಮಿಗಳು ಕಾರ್ಯದರ್ಶಿಯಾಗಿ ನೇಮಕವಾಗಿದ್ದು ಶಂಕರಸ್ವಾಮಿ ಬಡೀಗೇರ, ಚಂದ್ರುಸ್ವಾಮಿ ಕ್ಯಾಸನೂರ,ಪುಟ್ಟು ಸ್ವಾಮಿ ಮೂಡೂರ,ಹರಿಶ್ ಬಾಂಡೆಸ್ವಾಮಿ ಪ್ರವೀಣಸ್ವಾಮಿ ಹೋಸೂರ,…
ಹುಬ್ಬಳ್ಳಿ: ಶ್ರೀ ರಂಭಾಪುರಿ ಜಗದ್ಗುರುಗಳ 68ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಶ್ರೀಮದ್ವೀರಶೈವ ಸದ್ಭೋದನ ಸಂಸ್ಥೆ ಹುಬ್ಬಳ್ಳಿ ತಾಲೂಕ ಘಟಕದ ಅಧ್ಯಕ್ಷರಾದ ಪ್ರಕಾಶ ಬೆಂಡಿಗೇರಿ ಇವರ ಅಧ್ಯಕ್ಷತೆಯಲ್ಲಿ ಹಳೆ ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರ ಸ್ವಾಮಿ ಮೂರ್ತಿಗೆ ಮಹಾರು ದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ನಂತರ ದುರ್ಗದ ಬಯಲಿನಲ್ಲಿ, ರಂಭಾಪುರಿ ಜಗದ್ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ವನ್ನು ಅತಿ ವಿಜ್ರಂಭಬ ಯಿಂದ ಆಚರಿಸಲಾಯಿತು . ನಂತರ ಎಲ್ಲರಿಗೂ ಸಿಹಿ ಹಂಚುವ ಮೂಲಕ ನೆರವೇರಿಸಲಾಯಿತು ಈ ಕಾರ್ಯಕ್ರಮದಲ್ಲಿ ಶೇಖರಗೌಡ್ರು ಪಾಟೀಲ್, ಹನುಮಂತ ಅಂಕಲಗಿ, ಈಶ್ವರ್ ಬದ್ರಾಪುರ, ವೀರಭದ್ರಪ್ಪ ಮೇಟಿ ,ಪದ್ಮಾವತಿ ಬಾಗಲಕೋಟೆ, ಬಸವರಾಜ್ ಪೂಜಾರ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಹುಬ್ಬಳ್ಳಿ: ಈ ಸರ್ಕಾರ ದಬ್ಬಾಳಿಕೆಯ ಸರ್ಕಾರ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗ್ತಿದೆ. ಅನ್ಯಾಯದ ವಿರುದ್ದ ಹೋರಾಟ ಮಾಡಿದ್ರೆ ಕೇಸ್ ಹಾಕ್ತೀದಾರೆ. ಸರ್ಕಾರದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯ ಹುಟ್ಟಿಸೋ ಪ್ರಯತ್ನ ಇದೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಕೇಸ್ ಒಂದು. ಯಾವದೇ ಕೇಸ್ ಇಲ್ಲ ಅಂದ್ರು,ಒಳಗಡೆ ಹಾಕಿದ್ರು. ಇದು ಎಮರ್ಜೆನ್ಸಿ ಅಲ್ಲಿ ಮಾತ್ರ ಸಾಧ್ಯ. ಅವರನ್ನು ಒಳಗಡೆ ಹಾಕಿದ ಅಧಿಕಾರಿ,ಮಂತ್ರಿಗಳು ಕ್ಷಮೆ ಕೇಳಲಿಲ್ಲ. ಇದನ್ನು ಜನರು ಗಮನಿಸುತ್ತಿದ್ದಾರೆ ಎಂದರು. ಏಳೇ ತಿಂಗಳಲ್ಲಿ ಅಧಿಕಾರದ ಮದ ಏರಿದೆ. ಸರ್ಕಾರದ ದಾಷ್ಯ ಹೆಚ್ಚಾಗಿದೆ. ಸರ್ಕಾರದ ವಿರುದ್ದ ನಾವು ಹೋರಾಟ ಮಾಡ್ತೀವಿ. ನಾಳೆ ಚಿಂತನ ಮಂಥನ ಇದೆ, ಅಲ್ಲಿ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ. ಕಾಂಗ್ರೆಸ್ ಗೆ ರಾಮ ಮಂದಿರ ಆಗಬಾರದು ಅನ್ನೋ ಆಸೆ ಇತ್ತು. ಹರಿಪ್ರಸಾದ್ ಅವರು ಗೋಧ್ರಾ ಬಗ್ಗೆ ಮಾತಾಡ್ತಾರೆ. ಅವರ…