Author: AIN Author

ಬೆಳಗಾವಿ:- ಅಕ್ಕ, ತಮ್ಮನ ಮೇಲೆ ದುಷ್ಕರ್ಮಿಗಳ ಗುಂಪೊಂದು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಈ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ೯ ಜನರನ್ನು ಬಂಧಿಸಿದ್ದಾರೆ. ನಗರದ ಸಮೀಪದ ಯಮನಾಪುರದ ನಿವಾಸಿಗಳಾದ ಸಚೀನ ಲಮಾಣಿ ಹಾಗೂ ಮುಸ್ಕಾನ ಗಂಭೀರವಾಗಿ ಗಾಯಗೊಂಡವರು, ಇಲ್ಲಿನ ರಾಮನಗರದ ವಡ್ಡರಛಾವಣಿಯ ಮೊಹಮ್ಮದ ಹುಸೇನ್ ನೂರಹಮ್ಮದ ಇನಾಮಾದರ (೨೨), ಶಿವಾಜಿನಗರದ ಪಂಜಿಬಾಬಾ ನಿವಾಸಿ ಅತೀಫ್‌ಅಹ್ಮದ ಅಬ್ದುಲ್ ಮಜೀದ ಶೇಖ (೨೨), ಆಜಾದನಗರದ ಮಹ್ಮದಅಮನ್ ಗುಲಾಮಹುಸೇನ ಚಾಬುಕಸವಾರ್ (೨೭), ರಾಮನಗರದ ಸೈಫಅಲಿ ನಸೀಮಮುಲ್ಲನಿ ಇಸ್ಮಾಯಿಲ್ ಮಗದುಮ್ (೨೭), ವೀರಭದ್ರನಗರದ ಉಮರ್ ಸಾಧಿಕ ಬಡೇಗರ (೧೯) ಕ್ಯಾಂಪ ಪ್ರದೇಶದ ಮಾರ್ಕೇಟ್ ಸ್ಟ್ರೀಟ್‌ಮ ರಿಹಾನ್ ಮಹ್ಮದಗೌಸ್ ರೋಟಿವಾಲೆ (೧೯) ವೀರಭದ್ರನಗರದ ಅಜಾನ ಅಬೆದಿನ ಕಾಲಕುಂದ್ರಿ (೧೯) ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ೯ ಜನರನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಶನಿವಾರ ಬೆಳಗಾವಿಯ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದ ಅಕ್ಕ,…

Read More

ಬೆಳಗಾವಿ: ಬೆಳಗಾವಿಯಲ್ಲಿ ಮುಸ್ಲಿಮ್‌ರ ಗೂಂಡಾಗಳ ನೈತಿಕ ಪೊಲೀಸಗಿರಿ ಆಶ್ಚರ್ಯ ಮತ್ತು ನೋವು ತಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಬಾಣಿ ಯವಕ ಮುಸ್ಲಿಮ್ ಯುವತಿಯ ತಾಯಿ ಮೊದಲು ಲಂಬಾಣಿ ಇದ್ದವರು, ಈಗ ಮತಾಂತರವಾಗಿದ್ದಾರೆ. ಮುಸ್ಲಿಮ್ ಯುವತಿ ಅಕ್ಕ, ಹಿಂದೂ ಯುವಕ ತಮ್ಮ. ಯುವನಿಧಿ ಅರ್ಜಿ ಹಾಕಲು ಹೋದಾಗ ದಾಖಲಾತಿ ಸಲುವಾಗಿ ಕಿಲ್ಲಾ ಕೆರೆಯ ಆವರಣದಲ್ಲಿ ಕುಳಿತಿದ್ದಾಗ. ಮುಸ್ಲಿಮ್ ಗೂಂಡಾಗಳು ಹಲ್ಲೆ ಮಾಡಿದ್ದಾರೆ ಎಂದರೆ ಕರ್ನಾಟಕ ಸರಕಾರ ಬದುಕಿದೆಯೋ ಸತ್ತಿದೆಯೋ ಎಂದು ಪ್ರಶ್ನಿಸಿದರು. ಗೃಹ ಸಚಿವ ಪರಮೇಶ್ವರ ಹಾಗೂ ಸಚಿವ ಕೆ.ಜೆ. ಜಾರ್ಜ್ ರಾಜ್ಯದಲ್ಲಿ ನೈತಿಕ ಪೊಲೀಸಗಿರಿ ಮಾಡಲು ಬಿಡುವುದಿಲ್ಲ ಎನ್ನುತ್ತಾರೆ. ಈಗೇನು ಹೇಳುತ್ತಾರೆ ಎಂದ ಅವರು, ಬೆಳಗಾವಿಯಲ್ಲಿ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಸಿಎಂ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಬಳಿ ನಾನು ಮನವಿ ಮಾಡುತ್ತೇನೆ. ಒಂದು ತನಿಖಾ ದಳ ಬೆಳಗಾವಿಗೆ ಕಳಿಸಿ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ…

Read More

ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಜವಬ್ದಾರಿಯನ್ನು ಡಿಸಿಪಿ ಅರುಣಾಂಶು ಗಿರಿ ಹೆಗಲಿಗೆ ವಹಿಸಲಾಗಿದೆ. ಈ ಮೂಲಕ ಅಧಿಕಾರಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ನಿರ್ವಾನ ಸ್ಪಾ ಮೇಲೆ ನಿನ್ನೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅನೇಕ ಮಹಿಳೆಯರನ್ನು ರಕ್ಷಿಸಿ, ಗಿರಾಕಿಗಳು, ಸ್ಪಾ ಓನರ್ ಬಂಧಿಸಿದ್ದರು. ಸದ್ಯ ಮುಂದಿನ ತನಿಖೆಯ ಹೊಣೆ ಸಿಎಆರ್ ಹೆಡ್ ಕ್ವಾಟರ್ ಡಿಸಿಪಿ ಹೆಗಲಿಗೆ ನೀಡಲಾಗಿದೆ. ಅಪರೂಪಕ್ಕೆ ತನಿಖಾ ಜವಾಬ್ದಾರಿಯನ್ನ ನಾನ್ ಎಗ್ಸಿಗ್ಯೂಟಿವ್ ಡಿಸಿಪಿ ನೀಡಿ ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ. ನಿರ್ವಾನ್ ಸ್ಪಾ ಮೇಲಿನ ಕಾರ್ಯಾಚರಣೆಗೆ ಅರುಣಾಂಶು ಗಿರಿ ಟೀಮ್ ಲೀಡ್ ಮಾಡಿದ್ದರು. ಕಳೆದೊಂದು ತಿಂಗಳಿಂದ ಮಫ್ತಿಯಲ್ಲಿ ಡಿಕಾಯ್ ಮಾಡಿದ್ದ ಸಿಸಿಬಿ ಟೀಮ್, ಕೆಲ ಪೊಲೀಸರ ಸಹಕಾರದಿಂದ ಈ ದಂಧೆ ನಡೀತಿತ್ತು ಅನ್ನೋ ಅನುಮಾನ ಮೇರೆಗೆ ದಾಳಿ ನಡೆಸಿದೆ. ಸಾಕಷ್ಟು ಜನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಕ್ರಮವಾಗಿರಲಿಲ್ಲ. ಐದು ವರ್ಷದಿಂದ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ…

Read More

ನವದೆಹಲಿ: ರಾಜ್ಯದಲ್ಲಿ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಹಲಾಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಜಮಿಯತ್ ಉಲಮಾ-ಇ-ಮಹಾರಾಷ್ಟ್ರ, ಮತ್ತು ಜಮಿಯತ್ ಉಲಮಾ ಹಲಾಲ್ ಫೌಂಡೇಶನ್ ಸರ್ಟಿಫಿಕೇಶನ್ ಪ್ರೈವೆಟ್ ಲಿಮಿಟೆಡ್ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು (Halal Certified Product) ನಿಷೇಧಿಸುವ ಉತ್ತರ ಪ್ರದೇಶ (Uttar Pradesh) ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯನ್ನು ಇಂದು ನ್ಯಾ. ಬಿ.ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ವಿಚಾರಣೆ ನಡೆಸಿದರು. https://ainlivenews.com/elon-musk-offered-1-billion-dollars-to-change-the-name-on-wikipedia/ ವಿಚಾರಣೆ ವೇಳೆ ನೀವೂ ಹೈಕೋರ್ಟ್ ಅನ್ನು ಮೊದಲು ಸಂಪರ್ಕಿಸಬಹುದಲ್ವೇ? ನಾವೇಕೆ ಆರ್ಟಿಕಲ್ 32ರ ಅಡಿಯಲ್ಲಿ ಮನರಂಜನೆ ನೀಡಬೇಕು? ಪ್ಯಾನ್ ಇಂಡಿಯಾ ಶಾಖೆಗಳು ಇತ್ಯಾದಿಗಳು ಉತ್ತಮವಾಗಿದೆ. ಆದರೆ ಹೈಕೋರ್ಟ್ ಅದನ್ನು ಪರಿಶೀಲಿಸಬಹುದು ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ವಕೀಲರು,…

Read More

ದೊಡ್ಡಬಳ್ಳಾಪುರ :- ಪಾಪಿಯಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ, ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ ಎಂಬ ಬಸವಣ್ಣನವರ ವಚನವಿದೆ. ಆದರೆ ನಾಯಿಯೊಂದು ತನ್ನ ಮರಿಗಳಿಗೆ ಹೊರತಾಗಿ ಇಟ್ಟುಕೊಂಡಿದ್ದ ಮೇಕೆ ಮರಿಗೆ ಹಾಲುಣಿಸುವ ಮೂಲಕ ಅಚ್ಚರಿಯ ಘಟನೆಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ರಘುನಾಪುರದ ಕೃಷ್ಣಪ್ರಸಾದ್ ರವರ ಮನೆ ನಾಯಿ ಮತ್ತು ಮೇಕೆ ಮರಿ ನಡುವಿನ ತಾಯಿ ಪ್ರೀತಿಗೆ ಸಾಕ್ಷಿಯಾಗಿದೆ. ಕೃಷ್ಣಪ್ರಸಾದ್ ಸಾಕಿಕೊಂಡಿರುವ ನಾಯಿ ಮೇಕೆ ಮರಿಗೆ ಹಾಲುಣಿಸುವ ಮೂಲಕ ಅಚ್ಚರಿಯ ತಾಯಿ ವಾತ್ಸಲ್ಯಕ್ಕೆ ಕಾರಣವಾಗಿದೆ. ಈ ನಾಯಿ 20 ದಿನಗಳ ಹಿಂದೆ ಎರಡು ನಾಯಿ ಮರಿಗಳಿಗೆ ಜನ್ಮ ನೀಡಿತ್ತು, ನೋಡಲು ಮುದ್ದಾಗಿದ ನಾಯಿ ಮರಿಗಳನ್ನ ಸಾಕುವ ಸಲುವಾಗಿ ಬೇರೆಯವರು ತೆಗೆದುಕೊಂಡು ಹೋಗಿದ್ರು, ಆದರೆ ನಾಯಿ ಮೊಲೆಯ ಹಾಲು ನಾಯಿಯ ಮೊಲೆಯಲ್ಲೇ ಉಳಿಯಿತು. ಅದೇ ಸಮಯಕ್ಕೆ ಕೃಷ್ಣ ಪ್ರಸಾದ್ ಮೇಕೆ ಯೊಂದು ಮರಿಗಳನ್ನ ಹಾಕಿತ್ತು. ತನ್ನ ನಾಯಿ ಮರಿಗಳಿಗೆ ಹಾಲುಣಿಸುವ ಅವಕಾಶ ಕಳೆದುಕೊಂಡಿದ್ದ ನಾಯಿ ಮೇಕೆ ಮರಿಗೆ ಹಾಲುಣಿಸುವ ಮೂಲಕ ತಾಯಿ ಸುಖವನ್ನ ಸಂತೋಷದಿಂದ…

Read More

ಸ್ಯಾಂಡಲ್ ವುಡ್ ನ ಸ್ಟಾರ್ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹೀಗಾಗಿ ಎಲ್ಲಾ ಕಡೆಯಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಯಶ್ ಗೆ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಎಲ್ಲರೂ ಯಶ್​ಗೆ ಬರ್ತ್​ಡೇ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಯಶ್ ಅವರು ಏಕಾಏಕಿ ದೊಡ್ಡ ಸ್ಟಾರ್ ಆದವರಲ್ಲ. ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರಿಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಧಾರಾವಾಹಿ ಮೂಲಕ ವೃತ್ತಿಜೀವನ ಆರಂಭಿಸಿದ ಯಶ್ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ತಮ್ಮ ಸಾಮ್ರಾಜ್ಯವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದಾರೆ. ಇನ್ನೂ ಯಶ್ ಅವರು ಟ್ಯಾಕ್ಸಿಕ್ಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಾರಣ ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಣೆ ಸಾಧ್ಯವಿಲ್ಲ ಎಂದು ಯಶ್ ಈಗಾಗಲೇ ತಿಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ.

Read More

ಈ ಬಾರಿ ಚಳಿ ಹೆಚ್ಚಾಗಿಯೇ ಇದೆ. ಚಳಿಗಾಲ ಬಂತು ಅಂದ್ರೆ ಸಾಕು ಎಲ್ಲಿಲ್ಲದ ಕಾಯಿಲೆಗಳು ನಮ್ಮನ್ನ ಹುಡುಕುತ್ತಾ ಬರುತ್ತವೆ. ಜ್ವರ, ಶೀತ ಕೆಮ್ಮು ಮತ್ತು ಶೀತಗಳ ಹೊರತಾಗಿ, ಅತೀ ನೋವನ್ನುಂಟು ಮಾಡುವ ಗಂಟಲು ನೋವು ಹೆಚ್ಚಾಗಿ ಕಾಣಿಸುತ್ತವೆ. ಚಳಿಗಾಲದಲ್ಲಿ ವೈರಸ್ಗಳು ಬೇಗ ಮನುಷ್ಯರನ್ನ ಆವರಿಸುತ್ತವೆ. ಅತಿ ಹೆಚ್ಚು ಗಂಟಲು ನೋವು ಕಾಣಿಸಿಕೊಳ್ಳೋದಕ್ಕೆ ಬ್ಯಾಕ್ಟೀರಿಯಾಗಳು ಸಹ ಕಾರಣ ಎಂದು ಹೇಳಲಾಗುತ್ತೆ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಸ್ಟ್ರೆಪ್ ಗಂಟಲಿಗೆ ಹೆಚ್ಚು ಅಪಾಯಕಾರಿ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದ ಸೋಂಕಿನಿಂದಲೂ ಹೆಚ್ಚಿನ ಜ್ವರ ಉಂಟಾಗುತ್ತದೆ. ಸ್ಟ್ರೆಪ್ ಥ್ರೋಟ್ ಸೋಂಕು ವೈರಲ್ ಗಂಟಲಿನ ಸೋಂಕಿಗಿಂತ ಹೆಚ್ಚು ತೊಂದರೆ ಉಂಟುಮಾಡಬಹುದು. ಆದರೆ, ಗಾಬರಿಯಾಗಬೇಡಿ, ಗಂಟಲು ನೋವನ್ನು ತೊಡೆದುಹಾಕಲು ನೀವು ಕೆಲವು ಮನೆಮದ್ದುಗಳನ್ನ ಉಪಯೋಗಿಸಬಹುದು. ಶೀತ ಮತ್ತು ಗಂಟಲು ನೋವು ತೊಡೆದುಹಾಕಲು ಕೆಲವೊಂದು ಪರಿಹಾರಗಳು 1.ಅರಿಶಿನ ಚಹಾ: ಗಂಟಲು ನೋವಿನ ಸಮಸ್ಯೆ ಪ್ರತಿಯೊಬ್ಬರಲ್ಲಿ ಕಾಡೋದು ಸಹಜ, ಗಂಟಲು ನೋವಿನ ವಿರುದ್ಧ ಅರಿಶಿಣ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಅರಿಶಿನ ಚಹಾ ಗಂಟಲಿನ ಉರಿಯೂತವನ್ನು…

Read More

ಬೆಂಗಳೂರು :- ರಾಜ್ಯದಲ್ಲಿ ನಿನ್ನೆ 329 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗದಗ ಜಿಲ್ಲೆಯಲ್ಲಿ 48 ವರ್ಷದ ವ್ಯಕ್ತಿಯೋರ್ವ ಕೊರೊನಾಗೆ ಬಲಿಯಾಗಿದ್ದಾನೆ. ಇನ್ನು ಬೆಂಗಳೂರಿನಲ್ಲಿಯೇ 177 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯದ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 8.61 ರಷ್ಟಿದೆ. ಈ ಮೂಲಕ 1,181 ಜನರಲ್ಲಿ ಕೊರೊನಾ ಸಕ್ರಿಯ ಕೇಸ್​ಗಳಿವೆ. ಇಂದು 283 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು 329 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರು 177, ಮೈಸೂರು 27, ಹಾಸನ 17, ತುಮಕೂರು 16, ಬಾಗಲಕೋಟೆ 10, ಮಂಡ್ಯ 10, ಬೆಂಗಳೂರು ಗ್ರಾಮಾಂತರ 8, ಚಿಕ್ಕಮಗಳೂರು 7, ಚಿತ್ರದುರ್ಗ 7, ಧಾರವಾಡ 7, ಉತ್ತರ ಕನ್ನಡ 6, ಚಾಮರಾಜನಗರ 5, ರಾಯಚೂರು 5, ಚಿಕ್ಕಬಳ್ಳಾಪುರ 4, ಕೋಲಾರ 4, ಕೊಪ್ಪಳ 4, ಬಳ್ಳಾರಿ 3, ಶಿವಮೊಗ್ಗ 3, ವಿಜಯನಗರ 3, ದಾವಣಗೆರೆ…

Read More

ಚಿಕ್ಕೋಡಿ: ಸಿದ್ದರಾಮಯ್ಯ (Siddaramaiah) ಅವರನ್ನ ನಾನೂ ದೇವರೆಂದು ನೋಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಬೆಳಗಾವಿಯ (Belagavi) ಹುಕ್ಕೇರಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಬಳಿಕ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಕಾರ್ಯಕರ್ತರಂತೆ ನಾನು ಕೂಡ ಅವರನ್ನ ದೇವರೆಂದು ನೋಡುತ್ತೇನೆ ಎಂದು ತಿಳಿಸಿದ್ದಾರೆ. ಅವರವರ ನಾಯಕರನ್ನ ಭಕ್ತಿಪೂರ್ವಕವಾಗಿ ದೇವರ ರೂಪದಲ್ಲಿ ನೋಡುತ್ತಾರೆ. ದೇವರ ರೂಪದಲ್ಲಿ ನೋಡಲು ತಪ್ಪೇನಿಲ್ಲ. ದೇವರೇ ಬೇರೆ ಮನುಷ್ಯರೇ ಬೇರೆ. ಮೋದಿ, ಯಡಿಯೂರಪ್ಪ, ದೇವೆಗೌಡ  ಅವರನ್ನ ಅವರ ಕಾರ್ಯಕರ್ತರು ದೇವರು ಎಂದು ನೋಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿ ಕೊಂಡಿದ್ದಾರೆ. https://ainlivenews.com/elon-musk-offered-1-billion-dollars-to-change-the-name-on-wikipedia/ ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಮಾಡಲು ಕಿತ್ತಾಟದ ವಿಚಾರವಾಗಿ ಮಾತನಾಡಿದ ಅವರು, ನಾವು ಸಭೆ ನಡೆಸಿದ್ದು ನಿಜ. ಸಭೆಯಲ್ಲಿ ಡಿಸಿಎಂ ಸ್ಥಾನ ಕೇಳುವ ವಿಚಾರ ಚರ್ಚೆ ಆಗಿಲ್ಲ. ಡಿಸಿಎಂ ಆಗಬೇಕು ಎಂದು ಯಾರೂ ಕೇಳೇ ಇಲ್ಲ ಎಂದಿದ್ದಾರೆ. ಒಂದು ವರ್ಷದಲ್ಲಿ ಸರ್ಕಾರ ಪತನವಾಗುತ್ತೆ ಎನ್ನುವ ಹೆಚ್.ಡಿ.ದೇವೆಗೌಡ ಬಗ್ಗೆ ಪ್ರತಿಕ್ರಿಯಿಸಿ, ಆರಂಭದಿಂದಲೂ ಅವರು ಹೀಗೆ ಹೇಳುತ್ತಿದ್ದಾರೆ.…

Read More

ಮೈಸೂರು:- ಹುಲ್ಲಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಪ ತಹಶೀಲ್ದಾರ್ ಕಿರುಕುಳ ತಾಳಲಾರದೆ ವಿಕಲಚೇತನ ವ್ಯಕ್ತಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. ಪರಮೇಶ್ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ನಾಡ ಕಚೇರಿಯಲ್ಲಿ ಪರಮೇಶ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಉಪ ತಹಶೀಲ್ದಾರ್ ಶಿವಕುಮಾರ್ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇವರ ಕಿರುಕುಳ ತಾಳಲಾರದೆ ಪರಮೇಶ್​ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಕೂಡಲೇ ಪರಮೇಶ್ ಅವರನ್ನು ಮೈಸೂರಿನ ಕೆ.ರ್.ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪರಮೇಶ್ ಮೃತಪಟ್ಟಿದ್ದಾರೆ. ನನ್ನ ಸಾವಿಗೆ ಉಪ ತಹಸೀಲ್ದಾರ್ ಶಿವಕುಮಾರ್ ಕಾರಣ ಎಂದು ಪರಮೇಶ್​​ ಡೆತ್ ನೋಟ್​ನಲ್ಲಿ ಬರೆದಿದ್ದಾರೆ.

Read More