ಹಾವೇರಿ:- ಹಿಂದೂ ವ್ಯಕ್ತಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರು ಎಂಬ ಕಾರಣಕ್ಕೆ ಮುಸ್ಲಿಂ ಯುವತಿಯ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಜರುಗಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವತಿ ಬ್ಯಾಡಗಿ ತಾಲೂಕು ಅಗಸನಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದರು. ತಮ್ಮ ಜೊತೆ ಕೆಲಸ ಮಾಡ್ತಿದ್ದ ಜಗದೀಶ್ ಎಂಬ ವ್ಯಕ್ತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬ್ಯಾಡಗಿ ಪಟ್ಟಣದ ಪುರಸಭೆಯ ಬಳಿಯ ಶಿವನ ದೇವಸ್ಥಾನದ ಬಳಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ. ನೀನು ಯಾಕೆ ಇವನ ಜೊತೆ ಬೈಕ್ ನಲ್ಲಿ ಬಂದೆ? ಎಂದು ಪ್ರಶ್ನಿಸಿ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಯುವತಿಯನ್ನ ಎಳೆದಾಡಿ ಕಪಾಳಕ್ಕೆ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆಂದು ಆಕೆ ಪ್ರಕರಣ ದಾಖಲಿಸಿದ್ದಾರೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, 7 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.…
Author: AIN Author
ಬೆಂಗಳೂರು:- ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ ಇಲಾಖೆ ಈ ಸೂಚನೆ ನೀಡಿದೆ. ಪೌರಕಾರ್ಮಿಕರನ್ನ ಬೇರೆ ಕೆಲಸಗಳಿಗೆ ನಿಯೋಜನೆಗೆ ಸೂಚಿಸಿದವರು ಮತ್ತು ಅವರಿಂದ ಸೇವೆ ಪಡೆದವರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾವುವುದು ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಎಲ್ಲಾ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರೆ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿರುವ ಕುರಿತು ನಿರ್ದೇಶನಾಲಯಕ್ಕೆ ದೂರುಗಳು ಬಂದಿವೆ. ಪೌರಕಾರ್ಮಿಕರನ್ನು ಅವರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗಾಗಿ ಇನ್ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಇತರೆ ಯಾವುದೇ ಅನ್ಯ ಕೆಲಸಗಳಿಗೆ ನಿಯೋಜಿಸದಂತೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ.
ನಾವಿಡುವ ಪ್ರತಿ ಹೆಜ್ಜೆಯೂ ನಮ್ಮನ್ನು ಆರೋಗ್ಯಕರ ದೇಹ ಮತ್ತು ಮನಸ್ಸಿನ ಕಡೆಗೆ ಚಲಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನವು ನಮ್ಮ ಜಗತ್ತನ್ನು ಆಕ್ರಮಿಸಿಕೊಂಡಿರುವುದರಿಂದ ಮತ್ತು ಎಲ್ಲವೂ ಮನೆ ಬಾಗಿಲಲ್ಲಿ ಲಭ್ಯವಿರುವುದರಿಂದ ನಾವು ನಡೆಯುವುದೇ ಕಡಿಮೆಯಾಗಿದೆ. ಇದರಿಂದ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕೀಲು ನೋವುಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನೀವು ದಿನವೂ ಎಷ್ಟು ಸಮಯ ವಾಕ್ ಮಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ದಿನವೂ ನಿಮ್ಮ ನಡಿಗೆಯ ಸಮಯವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಇದರಿಂದ ನಿಮ್ಮ ದೇಹ ವಾಕಿಂಗ್ಗೆ ಹೊಂದಿಕೊಳ್ಳಲು ಸಹಾಯಕವಾಗುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಆಗಾಗ ಸ್ವಲ್ಪ ಸ್ವಲ್ಪ ನಡೆಯುವುದನ್ನು ರೂಢಿಸಿಕೊಳ್ಳಿ. ದೀರ್ಘ ಕಾಲದವರೆಗೆ ಕುಳಿತಿರುವುದರ ಬದಲು ಆಚೀಚೆ ಓಡಾಡುತ್ತಿರಿ. – ಪೆಡೋಮೀಟರ್ ಅಥವಾ ಫಿಟ್‌ನೆಸ್ ಟ್ರ್ಯಾಕರ್ ಮೂಲಕ ನೀವು ದಿನವೂ ಎಷ್ಟು ನಡೆದಿದ್ದೀರೆಂದು ಟ್ರ್ಯಾಕ್ ಮಾಡಿ. ಇದರಿಂದ ಮರುದಿನ ಹೆಚ್ಚು ನಡೆಯಲು ನಿಮಗೆ ಪ್ರೇರಣೆ ಸಿಗುತ್ತದೆ. – ಸಾಧ್ಯವಾದಾಗಲೆಲ್ಲಾ ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳ ಮೂಲಕ ಹತ್ತಿ, ಇಳಿಯಲು ಅಭ್ಯಾಸ ಮಾಡಿ.…
ಬೆಂಗಳೂರು: ಅಫಘಾನಿಸ್ತಾನ ವಿರುದ್ಧ ನಡೆದ ಡಬ್ಬಲ್ ಸೂಪರ್ ಓವರ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಪಂದ್ಯ ಗೆಲ್ಲುವಲ್ಲಿ ಯುವ ಫಿನಿಷರ್ ರಿಂಕು ಸಿಂಗ್ ಮಹತ್ತರ ಪಾತ್ರ ವಹಿಸಿದ್ದರು. ತಮ್ಮ ಹಾಗೂ ನಾಯಕ ರೋಹಿತ್ ಶರ್ಮಾ ಜೊತೆಯಾಟದಲ್ಲಿ ಮೂಡಿಬಂದ ಅಜೇಯ190 ರನ್ ಗಳ ವಿಶ್ವದಾಖಲೆಯ ಬಗ್ಗೆ ಯುವ ಎಡಗೈ ಆಟಗಾರ ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ 17( ಬುಧವಾರ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫಘಾನಿಸ್ತಾನ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, 22 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 5ನೇ ವಿಕೆಟ್ ಗೆ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಜೋಡಿ ಮುರಿಯದ 190 ರನ್ ಗಳ ಜೊತೆಯಾಟದಿಂದ ತಂಡದ ಮೊತ್ತವನ್ನು 212 ರ ಗಡಿ ಮುಟ್ಟಿಸಿದ್ದರು. ನಾಯಕನ ಜೊತೆಗಿನ ಮಾಸ್ಟರ್ ಕ್ಲಾಸ್ ಆಟದ ಬಗ್ಗೆ ಐಪಿಎಲ್ ತಾರೆ ಸಂತಸ ವ್ಯಕ್ತಪಡಿಸಿದ್ದಾರೆ. “ರೋಹಿತ್ ಭಯ್ಯ ಜೊತೆಗಿನ…
ದುನಿಯಾ ವಿಜಯ್ ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ತಂದೆ-ತಾಯಿ ಸಮಾಧಿ ಬಳಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗೆ ಸಾಥ್ ನೀಡಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ತಂದೆ-ತಾಯಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಬೆಂಗಳೂರು ಸಮೀಪ ಇರುವ ಆನೇಕಲ್ ತಾಲೂಕಿನ ಕುಂಬಾರಹಳ್ಳಿಯಲ್ಲಿ ವಿಜಯ್ ತಂದೆ, ತಾಯಿ ಸಮಾಧಿ ಇದೆ. ಬರ್ತ್ಡೇ ಶುಭಾಶಯ ಕೋರಲು ಇಂದು ಅಭಿಮಾನಿಗಳು ತೆರಳಲಿದ್ದಾರೆ. ಹೀಗಾಗಿ, 5,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಅವರು ಊರಿನಲ್ಲೇ ಉಳಿದುಕೊಂಡಿದ್ದರು. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳು ಬರುತ್ತಿವೆ. ದುನಿಯಾ ವಿಜಯ್ ಅವರು ಕಳೆದ ವರ್ಷವೂ ಬರ್ತಡೇನ ತಂದೆ, ತಾಯಿ ಸಮಾಧಿ ಬಳಿಯೇ ಮಾಡಿಕೊಂಡಿದ್ದರು. ಈ ಬಾರಿ ಸಮಾಧಿಯನ್ನು ದೇವಸ್ಥಾನದಂತೆ ನಿರ್ಮಿಸಿದ್ದಾರೆ. ಈ ಮೂಲಕ ತಂದೆ, ತಾಯಿ ಮೇಲಿರುವ ಪ್ರೀತಿಯನ್ನು ಅವರು ಹೊರ ಹಾಕಿದ್ದಾರೆ. ಇನ್ನೂ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ನಟಿಸಿ ನಿರ್ದೇಶಿಸುತ್ತಿರುವ ‘ಭೀಮ’ ಸಿನಿಮಾದ ಟೀಸರ್ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ
ಬೆಳಗಾವಿ : ಭೀಕರ ಬರಕ್ಕೆ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅದ್ರಲ್ಲೂ ದ್ರಾಕ್ಷಿ ಬೆಳೆಗಾರರ ಗೊಳಂತೂ ಹೇಳತೀರದು. ಸಾಲ-ಸೂಲ ಮಾಡಿ ಲಕ್ಷ ಗಟ್ಟಲೆ ಭೂಮಿಯಲ್ಲಿ ಹಣ ಖರ್ಚು ಮಾಡಿದ ರೈತರು ಇಂದು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಗಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕಾಗವಾಡ ವ್ಯಾಪ್ತಿಯ ಸಂಬರಗಿ ಗ್ರಾಮದ ವಿಠ್ಠಲ್ ಭಾವು ಶಿಂಧೆ ಎಂಬ ರೈತ ಕಳೆದ ಎಂಟು ವರ್ಷಗಳಿಂದ ಲಕ್ಷಗಟ್ಟಲೆ ಖರ್ಚು ಮಾಡಿ ದ್ರಾಕ್ಷಿ ಬೆಳೆದರೂ ಎರಡು ಬಾರಿ ಮಾತ್ರ ಫಸಲು ಕೈಗೆಟಕಿದೆ. ಅದ್ರಲ್ಲೂ ಈ ಬಾರಿ ಬರಗಾಲದ ಛಾಯೆ ಆವರಿಸಿ ನೀರು ಇಲ್ಲದೆ ರೈತರು ಕಂಗಾಲಾಗಿದ್ದು, ದ್ರಾಕ್ಷಿ ಬೆಳೆದ ರೈತರು ಬೆಳೆ ನಾಷವಾದ ಪರಿಣಾಮ ನಷ್ಟದ ಕೊಂಡಿಗೆ ಸಿಲುಕಿ ಮತ್ತೆ ಬರ ಸಿಡಿಲು ಅಪ್ಪಳಂಸಿದಂತಾಗಿದೆ. ವಿಜಯಪುರ ಬಿಟ್ಟರೆ ರಾಜ್ಯದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ನಾಡು ಎಂದರೆ ಅದು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರ. ಆದರೆ. ಪ್ರಕೃತಿ ವಿಮೋಪದಿಂದ ರೋಗಭಾದೆಗೆ ತುತ್ತಾಗಿ ನೂರಾರು ಎಕರೆ…
ದರ್ಶನ್ ನಟನೆ ಕಾಟೇರ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ 206 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಿಂದ (Box Office) ಕೊಳ್ಳೆ ಹೊಡೆದಿದೆ. 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಸುದೀಪ್ ಮತ್ತೊಂದು ಸಂಭ್ರಮದ ಸುದ್ದಿ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ…
ಬೆಂಗಳೂರು: ಪ್ರವಾಸಿ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದ ಮುನ್ನಡೆ ಗಳಿಸಿದೆ. ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಮೂರನೇ ದಿನ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇನ್ನು 25 ರನ್‌ಗಳ ಹಿನ್ನಡೆಯಲ್ಲಿತ್ತು. ಮೂರನೇ ದಿನ ತಂಡ 9 ವಿಕೆಟ್ ನಷ್ಟದಲ್ಲಿ 94 ರನ್ ಗಳಿಸಿದ್ದಾಗಲೂ ಇನಿಂಗ್ಸ್ ಸೋಲಿನ ಸಂಕಷ್ಟದಲ್ಲೇ ಉಳಿದಿತ್ತು. ಆದರೆ, ಕೆಮಾರ್ ರೋಚ್ ಮತ್ತು ಶಾಮ್ರ ಜೋಸೆಫ್ ಕೊನೇ ವಿಕೆಟ್‌ಗೆ 26 ರನ್ ಜೋಡಿಸಿ ವಿಂಡೀಸ್‌ಗೆ ಅಲ್ಪ ಮುನ್ನಡೆ ತಂದುಕೊಟ್ಟರು. ಬಳಿಕ ಗೆಲುವಿಗೆ 26 ರನ್ ಗುರಿ ಪಡೆದ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆದರೆ, ಶಾಮ್ರ ಜೋಸೆಫ್ ಎಸೆದ ಬೌನ್ಸರ್‌ನಲ್ಲಿ ಆಸೀಸ್ ಓಪನರ್ ಉಸ್ಮಾನ್ ಖವಾಜ ತಲೆಗೆ ಪೆಟ್ಟುತಿಂದು ರಿಟೈರ್ ಹರ್ಟ್ ಆದರು. ಆಸ್ಟ್ರೇಲಿಯಾ ಪರ ಎರಡನೇ ಇನಿಂಗ್ಸ್‌ನಲ್ಲಿ ವೇಗದ ಬೌಲರ್ ಜಾಶ್ ಹೇಝಲ್‌ವುಡ್…
ಚುಮುಚುಮು ಚಳಿಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ತಿನ್ನಲು ಏನಾದರೂ ಸಿಕ್ಕರೆ ಅದರಲ್ಲಿ ಸಿಗುವ ಆನಂದವೇ ಬೇರೆ.ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ ಬೇಕಾಗುವ ಸಾಮಗ್ರಿಗಳು: ಪನೀರ್ ಕ್ಯೂಬ್ಸ್ – 500 ಗ್ರಾಂ ಕಡ್ಲೆ ಹಿಟ್ಟು – 1 ಕಪ್ ಅಚ್ಚಖಾರದ ಪುಡಿ – 1 ಚಮಚ ಅರಶಿಣ – 1 ಚಮಚ ಉಪ್ಪು – ರುಚಿಗೆ ತಕ್ಕಷ್ಟು ಜೀರಿಗೆ ಪುಡಿ – ಅರ್ಧ ಚಮಚ ಅಡುಗೆ ಸೋಡಾ – 1 ಚಮಚ ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು ಚಾಟ್ ಮಸಾಲ – ಸ್ವಲ್ಪ ಮಾಡುವ ವಿಧಾನ: * ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಶಿಣ ಮತ್ತು ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಮಿಶ್ರಣವನ್ನು ಮಾಡಿಕೊಳ್ಳಿ. * ಈಗ ಪನೀರ್ ಕ್ಯೂಬ್ಸ್ ಅನ್ನು…
ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್ ನಿಯಮ ಹಿನ್ನೆಲೆ, ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ. ಬೊಮ್ಮನಹಳ್ಳಿ – 6762 ಯಲಹಂಕ – 4518, ಬೆಂಗಳೂರು ದಕ್ಷಿಣ – 3747, ಮಹದೇವಪುರ – 4838, ದಾಸರಹಳ್ಳಿ – 1458, ಬೆಂಗಳೂರು ಪಶ್ಚಿಮ – 5650, ಪೂರ್ವ ವಲಯ – 5579 ರಾಜ ರಾಜೇಶ್ವರಿ ವಲಯದಲ್ಲಿ 2010 ನೋಟಿಸ್ ನೀಡಲಾಗಿದೆ. ಇನ್ನೂ ಈ ಹಿಂದೆ ನಾಮಫಲಕದಲ್ಲಿ ಮೇಲೆ ಕನ್ನಡ ಕೆಳಗಡೆ ಯಾವುದೇ ಭಾಷೆ ಬೇಕಾದರು ಇರಬೇಕು ಎಂದು ಹೇಳಿದ್ದರೂ ಈಗ ಬೋರ್ಡ್ ನಲ್ಲಿ ಕನ್ನಡ 60% ಇರಬೇಕು ಅಂತ ಹೇಳುತ್ತಿದ್ದಾರೆ.…