ಬೆಂಗಳೂರು: ಬಿಜೆಪಿಯ ಬಂಡಾಯ ಶಮನಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಸ್ ಮೇಲೆ ಸರ್ಕಸ್ ಮಾಡ್ತಿದ್ದಾರೆ. ಪಕ್ಷದ ವಿರುದ್ದ ಮುನಿಸಿಕೊಂಡಿದ್ದ ಮಾಜಿ ಸಚಿವ MTB ನಾಗರಾಜ್ ಮನೆಗೆ ತೆರಳಿ ಅಸಮಾಧಾನ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ರೆ ಇತ್ತ ಸೋಮಣ್ಣ, ಸಿಟಿ ರವಿ ದೊಡ್ಡಗೌಡ್ರನ್ನ ಭೇಟಿಯಾಗಿರೋದು ಊಹಾಪೋಹಗಳಿಗೆ ವೇದಿಕೆಯಾಗಿದೆ. ರೆಬಲ್ ಯತ್ನಾಳ್, ಲಿಂಬಾಳಿ ವಿಚಾರಕ್ಕೆ ಮರಿಹುಲಿ ತಲೆನೇ ಹಾಕದಿರೋದು ಲೋಕಸಭಾ ಬಂಡಾಯಕ್ಕೆ ಪುಷ್ಠಿ ಕೊಡುವಂತಿದೆ.. 2023 ರ ವಿಧಾನಸಭಾ ಚುನಾವಣೆಗೂ ಮುನ್ನ ಶುರುವಾದ ರಾಜ್ಯ ಬಿಜೆಪಿಯ ಬಂಡಾಯದ ಬಾವುಟ ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ರು ಇನ್ನು ಶಮನವಾಗ್ತಿಲ್ಲ. ಅದ್ರಲ್ಲೂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ರಾದ್ಮೇಲಂತು ಬಂಡಾಯದ ಭಾವುಟ ದೊಡ್ಡಮಟ್ಟದಲ್ಲಿ ಹಾರಾಡ್ತು. ಅದನ್ನ ಶಮನ ಮಾಡಲು ಮರಿಹುಲಿ ಸರ್ಕಸ್ ಮೇಲೆ ಸರ್ಕಸ್ ಮಾಡ್ತಿದ್ದಾರೆ ಕಳೆದ ಕೆಲವು ದಿನಗಳಿಂದ ಅಸಮಾಧಾನಿತರ ಮನೆಗೆ ಹೋಗ್ತಿರುವ ವಿಜಯೇಂದ್ರ ಇಂದು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ MTB ನಾಗರಾಜ್ ಮನೆಗೆ ತೆರಳಿ ಮನವೊಲಿಸುವ ಕೆಲಸ ಮಾಡಿದ್ದಾರೆ…. ಮಾಜಿ ಸಚಿವ MTB…
Author: AIN Author
ಉಪೇಂದ್ರ (Upendra) ನಿರ್ದೇಶಿಸಿ, ನಟಿಸುತ್ತಿರುವ ಯುಐ (UI) ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದಾರೆ. ಶಿವರಾಜ್ ಕುಮಾರ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದಾರೆ.ನಟ ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದರೆ, ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಸಾಥ್ ನೀಡಿದ್ದಾರೆ. ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಲಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ ಹಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉಪ್ಪಿ, ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು ಸಿನಿಮಾಗಲ್ಲ ಎಂದು ಹೇಳುವ ಮೂಲಕ ಚಿತ್ರದಲ್ಲಿ ಸಾಕಷ್ಟು ಸತ್ಯಗಳನ್ನು ಹೇಳಿದ್ದೇನೆ ಎನ್ನುವ ಸೂಚನೆ ನೀಡಿದ್ದಾರೆ. 8 ವರ್ಷಗಳ ಬಳಿಕ ‘ಉಪ್ಪಿ’ ಡೈರೆಕ್ಷನ್ ಮಾಡುತ್ತಿದ್ದು, ಕೆ.ಪಿ. ಶ್ರೀಕಾಂತ್, ನವೀನ್ ಮನೋಹರನ್ ಹಾಗೂ ಲಹರಿ ಫಿಲಂಸ್ ನಿರ್ಮಾಣದಲ್ಲಿ…
ಗದಗ: ನಟ ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ (Electrocuted) 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ (Laxmeshwar) ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಇನ್ನೂ . ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಶಾಸಕ ಚಂದ್ರು ಲಮಾಣಿ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ…
ಬೆಂಗಳೂರು: ರಾಮ ಮಂದರ ವಿಚಾರ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಾಕ್ಸಮರಕ್ಕೆ ವೇದಿಕೆಯಾಗಿದೆ, ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ಧರ್ಮ ದಂಗಲ್ ನಡೆಯುತ್ತಿದ್ದು ಪ್ರತಿಷ್ಠೆಯ ಹೋರಾಟಕ್ಕೆ ಬಿದ್ದಿದ್ದಾರೆ. ಕೇಸರಿ ನಾಯಕರು ಮನೆ ಮನೆಗೆ ಹೋಗಿ ಮಂತ್ರಾಕ್ಷತೆ ಕೊಡ್ತಿದ್ದು ಕರಸೇವಕರ ಕೇಸ್ ಅನ್ನೇ ಭ್ರಹ್ಮಾಸ್ತ್ರವಾಗಿಸಿಕೊಂಡಂತಿದೆ .ಕಾಂಗ್ರೆಸ್ ನಾಯಕರು ನಾವೂ ರಾಮಭಕ್ತರೇ ಅನ್ನೋದನ್ನ ಒತ್ತಿ ಒತ್ತಿ ಹೇಳ್ತಿದ್ದು 22 ರಂದು ರಾಜ್ಯದಾದ್ಯಂತ ಪೂಜಾ ಕೈಂಕರ್ಯಕ್ಕೆ ಸರ್ಕಾರ ಆದೇಶ ಹೊರಡಿಸಿ ಸೆಡ್ಡು ಹೊಡೆದಿದೆ, ಈ ಮಧ್ಯೆ ಬಿಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕೇಸರಿ ಭಯೋತ್ಪಾದನೆಯ ಫತ್ವದ ಬಾಂಬ್ ಸಿಡಿಸಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ… ರಾಮ ಮಂದಿರ ಉದ್ಘಾಟನೆ ವಿಚಾರ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ, ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ಪ್ರತಿಷ್ಠೆಯ ಧರ್ಮ ದಂಗಲ್ ಗೆ ವೇದಿಕೆಯಾಗಿದ್ದಾನೆ ಪ್ರಭು ಶ್ರೀರಾಮಚಂದ್ರು. ಈ ಹಿಂದಿನಿಂದಲೂ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಸ್ಲಿಂ ತುಷ್ಠೀಕರಣದ ಅಸ್ತ್ರ ಪ್ರಯೋಗಿಸಿ ಹಿಂದುತ್ವದ ಕಾರ್ಡ್ ಫ್ಲೇ ಮಾಡ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡಿರು…
ಕವರಟ್ಟಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ (Lakshadweep) ಸಮುದ್ರತೀರಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಭೇಟಿ ಬಳಿಕ ಪ್ರವಾಸಿಗರ ಚಿತ್ತ ಲಕ್ಷದ್ವೀಪದತ್ತ ಹರಿದಿದ್ದು, ಮಾಲ್ಡೀವ್ಸ್‌ನಲ್ಲಿ ಕಿಚ್ಚು ಹೊತ್ತಿಸಿದೆ. ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ಬಳಿಕ ಮಾಲ್ಡೀವ್ಸ್ (Maldives) ಸಚಿವರೊಬ್ಬರು, ಭಾರತವು ಮಾಲ್ಡೀವ್ಸ್ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಆದ್ರೆ ಸಚಿವರು ಮಾಡಿರುವ ಅವಹೇಳನಾಕಾರಿ ಟ್ವೀಟ್‌ಗೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉತ್ತರವಾಗಿ, ಮಾಲ್ಡೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರವಾಸಿ ತಾಣವನ್ನಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. https://twitter.com/fa_luck7/status/1743538080655777937?ref_src=twsrc%5Etfw%7Ctwcamp%5Etweetembed%7Ctwterm%5E1743538080655777937%7Ctwgr%5Ec4caf3080d3b7b3ca43fb93f6fc3931312b634db%7Ctwcon%5Es1_&ref_url=https%3A%2F%2Fpublictv.in%2Findians-cancel-maldives-trips-amid-row-over-island-ministers-post%2F ದೇಶದ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅಪ್ಪಟ ಕನ್ನಡ ಸೊಗಡಿನ ‘ಕಾಟೇರ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ಮತ್ತೊಮ್ಮೆ ಡಿ ಬಾಸ್ ಗೆದ್ದು ಬೀಗಿದ್ದಾರೆ. ಡಿಸೆಂಬರ್ 29ರಂದು ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡ ‘ಕಾಟೇರ’ ಸೂಪರ್ ಡೂಪರ್ ಹಿಟ್ ಆಗಿದೆ. ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದೆ. ವೀಕೆಂಡ್ ಹೊರತುಪಡಿಸಿ ವಾರದ ದಿನಗಳಲ್ಲೂ ‘ಕಾಟೇರ’ ಒಳ್ಳೆಯ ಗಳಿಕೆ ಮಾಡುತ್ತಿದೆ. ಕೇವಲ ಒಂದೇ ವಾರಕ್ಕೆ ಬರೋಬ್ಬರಿ 104 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಕುರಿತು ದರ್ಶನ್ ಆಪ್ತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಮತ್ತು ಕರುನಾಡೆ ಮೆಚ್ಚಿದ ನಮ್ಮ ‘ಕಾಟೇರ’ ಕೇವಲ ಒಂದು ವಾರದಲ್ಲಿ 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದೆ. 104 ಕೋಟಿಗೂ ಅಧಿಕ ಹಣವನ್ನು ಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು ಹೊಸ…
ಚಿತ್ರ ನಟ ಯಶ್ ಜನ್ಮದಿನದ ಹಿನ್ನಲೆ ಅವರ ಬ್ಯಾನರ್ ಕಟ್ಟುವಾಗ ಮೂವರು ಅಭಿಮಾನಿಗಳು ದಾರುಣ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ನಡೆದಿದೆ. ಹನಮಂತ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಮೃತ ಯುವಕರು. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲರೂ ಸೂರಣಗಿ ಗ್ರಾಮದವರು. ಯಶ್ ಅವರ ಜನ್ಮದಿನಕ್ಕೆ ಶುಭಾಶಯ ಕೋರುವ ಬ್ಯಾನರ್ ಅನ್ನು ಹಸಿ ನೀಲಗಿರಿ ಕಟ್ಟಿಗೆಗೆ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದು ಅವಘಡ ಸಂಭವಿಸಿದೆ. ಈ ಅವಘಡ ಯುವಕರ ಸಾವಿಗೆ ಕಾರಣವಾಗಿದೆ. ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟ ಯಶ್ ಜನ್ಮದಿನದಂದು ಈ ಹಿಂದೆಯೂ ಅವಘಡಗಳು ಸಂಭವಿಸಿದ್ದವು, 2018ರಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಹಾವೇರಿಯಲ್ಲಿ ನಡೆದ ಊರಹಬ್ಬಕ್ಕೆ ಯಶ್ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಹಾವೇರಿಯ ಅಗಡಿ ಮೂಲದ ಹರೀಶ್ ಎರಡೂ ಕೈ ಕಳೆದುಕೊಂಡಿದ್ದರು. ಹರೀಶ್ ಗೆ…
ಬೆಂಗಳೂರು: ಫೆಬ್ರವರಿ 29ರಿಂದ ಮಾರ್ಚ್ 7ವರೆಗೂ ಬೆಂಗಳೂರಿನಲ್ಲಿ ಚಲನಚಿತ್ರೋತ್ಸವ ನಡೆಸಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆವೃತ್ತಿಯಾಗಿದೆ. ದೇಶ ವಿದೇಶಗಳಲ್ಲಿ ಈ ಚಲನಚಿತ್ರೋತ್ಸವ ಮನ್ನಣೆ ಪಡೆದಿದ್ದು ಮಾರ್ಚ್ 7ರಂದು ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯಪಾಲರು ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ. ಈ ಚಿತ್ರೋತ್ಸವ ಸಂಬಂಧ ಕೋರ್ ಕಮಿಟಿ ರಚನೆ ಮಾಡಲಾಗಿದೆ. ವಿದೇಶದಿಂದ ಉತ್ತಮ ಚಿತ್ರಗಳನ್ನ ತರಿಸುತ್ತೇವೆ, ಸಮಾನತೆ, ಶಾಂತಿ ಸೌಹಾರ್ದತೆ ಬಗ್ಗೆ ಸಾರುವ ಚಿತ್ರಗಳ ಪ್ರದರ್ಶನ ನಡೆಯುತ್ತೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಸ್ಪ್ಯಾನಿಷ್ (Spanish0 ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿ ಅಧಿಕ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ…
ದಕ್ಷಿಣ ಭಾರತದ ಹೆಸರಾಂತ ನಟಿ, ಕನ್ನಡತಿ ಪ್ರಣೀತಾ ಸುಭಾಷ್ ಟರ್ಕಿ (Turkey) ಪ್ರವಾಸದಲ್ಲಿ ಇದ್ದಾರೆ. ಕುಟುಂಬದೊಂದಿಗೆ ಟರ್ಕಿ ಪ್ರವಾಸದಲ್ಲಿರುವ ಅವರು, ತಿಳಿನೀಲಿ ಕಡಲು ಕಿನಾರೆಯಲ್ಲಿ ಸ್ವಿಮ್ ಸೂಟ್ (swimsuit) ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲೂ ಅವರು ಹಂಚಿಕೊಂಡಿದ್ದಾರೆ. ಒಂದು ಕಡೆ ಪ್ರವಾಸದಲ್ಲಿ ನಟಿ ಬ್ಯುಸಿಯಾಗಿದ್ದರೆ, ಮತ್ತೊಂದು ಕಡೆ ರಿಷಿ ನಟನೆಯ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಮೊನ್ನೆಯಷ್ಟೇ ರಿಷಿ ಹಾಗೂ ಪ್ರಣೀತಾ ನಟನೆಯ ಬಹು ನಿರೀಕ್ಷಿತ ಸಿನಿಮಾ ರಾಮನ ಅವತಾರದ ಹಾಡು ರಿಲೀಸ್ ಆಗಿದೆ. ಅದು ರಾಮನ ಅವತಾರ ಸಿನಿಮಾದ ಎರಡನೇ ಹಾಡು (Song) ಆಗಿದ್ದು, ಸಿಂಪಲ್ ಸುನಿ ಸಾಹಿತ್ಯದ ಮನಸ್ಸು ಬೇರೆ ದಿಕ್ಕಿಗೆ ಸಾಗಲು ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ. ಉಡುಪಿ ಬೀಚ್ ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ (Pranitha) ಜೋಡಿ ನೋಡುಗರ ಗಮನಸೆಳೆಯುತ್ತಿದೆ. ರಾಮನ ಅವತಾರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್…