ಹಾಸನ : ಮಾಜಿ ಸಚಿವ ಬಿ.ಶಿವರಾಂ ಅವರು ಸಾರ್ವಜನಿಕವಾಗಿ ನೀಡುತ್ತಿರುವ ಅನಗತ್ಯ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ವರ್ಛಸ್ಸಿಗೆ ಧಕ್ಕೆ ತರುವಂಥದ್ದಾಗಿದ್ದು ಈ ಬಗ್ಗೆ ಹೈ ಕಮಾಂಡ್‌ಗೆ ದೂರು ನೀಡುತ್ತಿದ್ದೇನೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು. ಪಕ್ಷದ ಸಭೆಗಳಲ್ಲಿ ಚರ್ಚಿಸಬೇಕಾದ ಕೆಲವು ವಿಚಾರಗಳನ್ನು ಅವರು ಸುದ್ದಿಗೋಷ್ಠಿ ಮೂಲಕ ಹೇಳುವ ಅಗತ್ಯವಾದರೂ ಏನು ಎಂಬುದೇ ಅರ್ಥವಾಗುತ್ತಿಲ್ಲ. ನನ್ನ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿರುವ ಜತೆಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರ ನಡುವೆ ಒಡಕು ಸೃಷ್ಟಿಸಿದಂತಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಹಾಗೂ ಕೆಪಿಸಿಸಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅರಸೀಕೆರೆ ಕ್ಷೇತ್ರದ ವೀರಶೈವ ಮುಖಂಡ ಶಶಿಧರ್ ಸ್ಥಾನಮಾನದ ಬಗ್ಗೆ ಕಾಳಜಿಯ ಮಾತನಾಡುತ್ತಿರುವ ಬಿ.ಶಿವರಾಂ ಅವರು ತಮ್ಮದೇ ಬೇಲೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಗ್ರಾನೈಟ್ ರಾಜಶೇಖರ್ ಅವರಿಗೆ ಸ್ಥಾನ ಬಿಟ್ಟುಕೊಟ್ಟು ಜಿಲ್ಲಾ ಕೇಂದ್ರದಿAದ ಸ್ಪರ್ಧೆ ಮಾಡಬಹುದಿತ್ತು. ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು…
Author: AIN Author
ಹುಬ್ಬಳ್ಳಿ: ಬಿಜೆಪಿ ಯುವ ಮುಖಂಡ ಸಕ್ರಪ್ಪ ಕಮ್ಮಾರ ಅವರನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಎಂ.ಆರ್.ಪಾಟೀಲ್ ಅವರನ್ನ ಇಂದು ಹುಬ್ಬಳ್ಳಿಯ ಶಾಸಕರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಸಕ್ರಪ್ಪ ಕಮ್ಮಾರ ಅವರು ಭಾರತೀಯ ಜನತಾ ಪಕ್ಷದ ವಿವಿಧ ಮೂರ್ಚಾಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ, ವಿವಿಧ ಹುದ್ದೆಗಳನ್ನ ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ. ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಸಹ ಹಿರಿಯ ನಾಯಕರು ಕೊಟ್ಟ ಜವಾಬ್ದಾರಿಯನ್ನು ಸಹ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಕಾರಣ ಸಕ್ರಪ್ಪ ಕಮ್ಮಾರ ಅವರನ್ನ ನೇಮಕ ಮಾಡುವುದರಿಂದ ಇನ್ನಷ್ಟು ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ಆಗುತ್ತದೆ ಎಂದು ಅವರು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್ ಯೋಗಪ್ಪನವರ , ಬಸಪ್ಪ ಕಲಿವಾಳ, ರಾಜು ಮಲ್ಲಿಗವಾಡ, ಮಂಜುನಾಥ ಮಲ್ಲಿಗವಾಡ, ಸಾಗರ ಕಾಶಪ್ಪನವರ, ಗೋಪಾಲ್ ದೊಡ್ಮಮನಿ, ಸಹದೇವಪ್ಪ ಮಾಳಗಿ, ಮಹೇಶ್ ಕೋಳಿವಾಡ , ಉಪಸ್ಥಿತರಿದ್ದರು.
ಕೋಲಾರ:-ಜಾತಿ ಪ್ರಮಾಣ ಪತ್ರ ವಿಚಾರ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರದ ತೀರ್ಮಾನಕ್ಕೆ ಕಾದು ನೋಡಬೇಕು ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ರು. ನಗರದಲ್ಲಿ ಸುದ್ದಿಗರಾರಂದಿಗೆ ಮಾತನಾಡಿದ ಅವ್ರುಕೋರ್ಟ್ ತೀರ್ಪಿನ ಸಂಪೂರ್ಣ ವರದಿಯನ್ನು ನಾನು ಇನ್ನೂ ಗಮನಿಸಿಲ್ಲಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ನಮ್ಮ ವಕೀಲರ ಬಳಿ ಮಾತನಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. 2008ರಿಂದಲೂ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ, ಮುಂದೆಯೂ ಇರ್ತಾರೆ. ಅವರು ರಾಜಕೀಯವಾಗಿ ಮುಗಿಸಲು ಹೋದ್ರೆ, ಜನ ನನ್ನ ಪರವಾಗಿ ಇರ್ತಾರೆ. ಇದರಲ್ಲಿ ಎಲ್ಲಾ ಪಕ್ಷದವರೂ ಸೇರುತ್ತಾರೆ ಎಂದು ಹೇಳಿದರು.
ಮಂಡ್ಯ:- ದೇವರನ್ನು ಮುಂದಿಟ್ಟು ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಶ್ರೀರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ರನ್ನೇ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ ಎಂದರು. ಸಚಿವ ಸಂಪುಟದ ಸದಸ್ಯರನ್ನೇ ಪ್ರಧಾನಿ ನರೇಂದ್ರ ಮೋದಿ ಕರೆದಿಲ್ಲ. ಅಪೂರ್ಣ ರಾಮಮಂದಿರ ಉದ್ಘಾಟನೆಗೆ ಅನೇಕ ಮಠಗಳು ವಿರೋಧಿಸಿವೆ. ಲೋಕಸಭೆ ಚುನಾವಣೆಗಾಗಿ ಶ್ರೀರಾಮಮಂದಿರ ಉದ್ಘಾಟಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವು ರಾಮಭಕ್ತರೇ. ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುವುದು ಹೆಚ್ಚು ದಿನ ನಡೆಯಲ್ಲ. ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಂದ್ರದಲ್ಲಿ ರಜೆ ಘೋಷಣೆ ಮಾಡಿ, ಇಡೀ ದೇಶಕ್ಕೆ ರಜೆ ಕೊಡಿಸಲಿ. ಅಪರೂಪಕ್ಕೆ ಉತ್ತರಪ್ರದೇಶ ಸಿಎಂ ಯೋಗಿರನ್ನು ಪಕ್ಕಕ್ಕೆ ಕರೆದುಕೊಳ್ಳುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇಲ್ಲ, ಎಲ್ಲಾ ಮೋದಿಯವರೇ. ಮೋದಿಯ ದೊಡ್ಡ ಫೋಟೋಗಳು, ರಾಮನ ಚಿಕ್ಕ ಫೋಟೋ ಹಾಕಿದ್ದಾರೆ. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತರು ಹಾಗೂ ಮಾನಸ ಗ್ರುಪ್ ನ ಸಂಸ್ಥಾಪಕರಾದ ಡಾ.ಆನಂದಕುಮಾರ್ ಅವರು ಬ್ಯಾಂಕಾಕ್ ನಲ್ಲಿ ನಡೆದ ಇಂಡೋಥಾಯ್ ಪ್ರೇಂಡ್ ಶಿಫ್ ಮತ್ತು ಎಕಾನಾಮಿಕ್ ಕೋ ಆಪರೇಟಿವ್ ಸಮ್ಮೇಳನದಲ್ಲಿ ಆಮಂತ್ರಿತರಾಗಿ ವಿಶೇಷ ಪುರಸ್ಕಾರಕ್ಕೆ ಭಾಜನರಾದರು. ಇಂಟರ್ನ್ಯಾಷನಲ್ ಗೋಲ್ಡನ್ ಫಿನಾಕಲ್ ಆವಾರ್ಡ್ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು. ಥಾಯ್ಲೆಂಡ್ ಮಾಜಿ ಉಪಪ್ರಧಾನಿ ಕಾರ್ನ್ ದಬ್ಬಾರನ್ಸಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಎಂಇಎ ಹಾಗೂ ಆರ್ ಎಸ್ ವಿಪಿ ರಾಯಭಾರಿ ಕೆ.ವಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ನೂರಾರು ಪ್ರತಿನಿಧಿಗಳು, ಗಣ್ಯರು ಹಾಗೂ ವಿವಿಧ ಕ್ಷೇತ್ರದ ಸಾಧಕರು ಭಾಗವಹಿಸಿದ್ದರು.
ಹುಬ್ಬಳ್ಳಿ : ಸೌದತ್ತಿ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಬದಾಮಿ ಶ್ರೀ ಬನಶಂಕರಿದೇವಿ ಜಾತ್ರೆಗೆ ಹೋಗಿ ಬರುವ ಭಕ್ತಾದಿಗಳ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಜನೆವರಿ 23 ರಿಂದ 30 ರ ವರೆಗೆ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸೌದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಹಾಗೂ ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆಗಳು ಜನವರಿ 23 ರಿಂದ 30 ರವರೆಗೆ ಜರುಗಲಿವೆ. ಈ ಜಾತ್ರೆಗಳಿಗೆ ಹೋಗಿ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡ ಮತ್ತು ಬನಶಂಕರಿಗೆ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ಹೆಚ್ಚುವರಿ ಜಾತ್ರಾ ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹುಬ್ಬಳ್ಳಿಯಿಂದ 25 ಹಾಗೂ ನವಲಗುಂದ ದಿಂದ 10 ಬಸ್ಸುಗಳು, 100ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗಾಗಿ 10 ಅಧಿಕಾರಿಗಳು ಹಾಗೂ 20 ಮೇಲ್ವಿಚಾರಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಒತ್ತಡಕ್ಕೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ. ಎಂದು ಹುಬ್ಬಳ್ಳಿ ಗ್ರಾಮಾಂತರ…
ಬೆಳಗಾವಿ:- ರಾಜ್ಯದಲ್ಲಿ ಸಿಲಿಂಡರ್ ಗ್ಯಾಸ್ ಸ್ಪೋಟವಾಗಿ ಅನಾಹುತಗಳು ನಡೆದು ಯಾವ ರೀತಿ ಜೀವ ಹಾನಿಗಳು ನಡೆಯುತ್ತಿವೆ ಎಂಬುದನ್ನು ನಾವೆಲ್ಲ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅದರಂತೆ ಬೆಳಗಾವಿ ಜಿಲ್ಲೆಯ ಕಾಗವಾಡ ವ್ಯಾಪ್ತಿಯ ಸಂಬರಗಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂಬರ್ ೧ ರಲ್ಲಿ ಮತ್ತೆ ಗ್ಯಾಸ ಒಲೆ ಉರಿಯುತ್ತಿರುವಾಗಲೇ ದೊಡ್ಡ ಗಾತ್ರದ ಬೆಂಕಿ ಕಾಣಿಸಿಕೊಂಡು ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆದುಕೊಂಡು ಹೊರಗಡೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಹಿಂದೆಯು ಗ್ಯಾಸ್ ಸೋರಿಕೆಯಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ ಆದರೂ ಸಹ ಎಚ್ಚೆತ್ತುಕೊಳ್ಳದ ಅಂಗನವಾಡಿ ಸಿಬ್ಬಂದಿಗಳ ವಿರುದ್ಧ ಪೊಷಕರು ಆಕ್ರೋಶಗೊಂಡಿದ್ದಾರೆ, ಮಕ್ಕಳಿಗೆ ಸರಿಯಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿ ಮಾಯವಾಗಿದ್ದು, ಈ ರೀತಿ ಬೇಜವಾಬ್ದಾರಿ ತೋರಿ, ಏನಾದರೂ ಅವಘಡ ಸಂಭವಿಸಿದರೆ ನಮ್ಮ ಮಕ್ಕಳನ್ನು ಯಾರ ಜವಾಬ್ದಾರಿ ಮೇಲೆ ಶಾಲೆಗೆ ಕಳುಹಿಸಬೇಕು ಎಂದು ಪೋಷಕವರ್ಗದವರಲ್ಲಿ ಆತಂಕ ಹುಟ್ಟಿಸಿದೆ. ಒಟ್ಟಾರೆ ಮೇಲಾಧಿಕಾರಿಗಳು ಗ್ಯಾಸ್ ಸಮಸ್ಯೆ ಪರಿಶೀಲಿಸಿ ಈ ರೀತಿಯ ಬೇಜವಾಬ್ದಾರಿ ಧೋರಣೆ ತೋರಿ…
ಬೆಂಗಳೂರು:- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ರಾಮಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯ ಸರ್ಕಾರ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಕಾಂಗ್ರೆಸ್ ನಾಯಕರ ಹೇಳಿಕೆಗಳು, ಕೋಲಾರದಲ್ಲಿ ಫ್ಲೆಕ್ಸ್ ಹರಿದ ಪ್ರಕರಣ ಇವೆಲ್ಲ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನದ ಘಟನೆ, ಇದೆಲ್ಲವನ್ನೂ ನೋಡಿದಾಗ ರಾಜ್ಯದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ ರಾಮಮಂದಿರ ಉದ್ಘಾಟನೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ. ದೇಶದಲ್ಲಿ ರಾಮಜಪ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ದುರುದ್ದೇಶದಿಂದಲೇ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಲಾಯಿತು. ವಾತಾವರಣ ಕಲುಷಿತಗೊಳಿಸಬೇಕೆಂಬ ದುರುದ್ದೇಶದಿಂದಲೇ ಬಂಧನ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ದಾವಣಗೆರೆ:- ರಾಜಕಾರಣಿಗಳ ನೀಚ ರಾಜಕೀಯದ ನಡುವೆ ಅಯೋಧ್ಯೆಯ ಮಂತ್ರಾಕ್ಷತೆ ಸ್ವೀಕರಿಸಿ ಮುಸ್ಲಿಂರು ಹಾರೈಸಿದ್ದಾರೆ. ಸದ್ಯ, ದೇಶಾದ್ಯಂತ ಅಯೋಧ್ಯೆ ಮಂತ್ರಾಕ್ಷತೆ ಹಾಗೂ ರಾಮ ಮಂದಿರ ಪೋಟೋವನ್ನು ಕೂಡ ಹಿಂದೂ ಕಾರ್ಯಕರ್ತರು, ಮುಖಂಡರು, ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲೂ ನೀಡಲಾಗುತ್ತಿದ್ದು, ಮುಸ್ಲಿಂ ಸಮುದಾಯದವರೂ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶುಭ ಹಾರೈಸಿ ಭಾವೈಕ್ಯತೆ ಸಾರಿದ್ದಾರೆ. ಹರಿಹರ ತಾಲ್ಲೂಕಿನ ಕಡರ ನಾಯಕನಹಳ್ಳಿಯಲ್ಲಿ ವಿಭಿನ್ನವಾಗಿ ಮಂತ್ರಾಕ್ಷತೆ ರಾಮ ಮಂದಿರ ಪೋಟೋ ಮನೆ ಮನೆಗೂ ನೀಡುತ್ತಿದ್ದು, ಅದರಲ್ಲೂ ಮಹಿಳೆಯರ ತಂಡ ಮಂತ್ರಾಕ್ಷತೆ ಪೋಟೋ ಜೊತೆ ಮಹಿಳೆಯರಿಗೆ ಬಳೆ ಅರಿಶಿಣ ಕುಂಕುಮ ಕೊಟ್ಟು ಶ್ರೀರಾಮ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಭಿಯಾನ ನಡೆಸುತ್ತಿದ್ದಾರೆ. ಈ ಅಭಿಯಾನದಲ್ಲಿ ಮುಸ್ಲಿಮರು ಕೂಡ ಭಾಗಿಯಾಗಿದ್ದು, ಅವರು ಕೂಡ ಶ್ರೀರಾಮನ ಮಂತ್ರಾಕ್ಷತೆ ಪೋಟೋ ಪಡೆದು ಸಂಭ್ರಮದಲ್ಲಿ ಭಾಗವಹಿಸಿದರು. ನಾವು ಕೂಡ ರಾಮ ಭಕ್ತರೇ. ಎಲ್ಲಾ ದೇವರು ಒಂದೇ, ನಾವು ಕೂಡ ಭಾರತೀಯರು ಎನ್ನುವುದರ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಬೆಂಗಳೂರು:- ಜನವರಿ 23 ರಂದು 545 ಪಿಎಸ್ಐ ಮರು ಪರೀಕ್ಷೆ ಹಿನ್ನೆಲೆ, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ. ಪಿಎಸ್ಐ ಮರು ಪರೀಕ್ಷೆ ಬೆಂಗಳೂರು ನಗರದಲ್ಲಿ ಮಾತ್ರ ನಡೆಯಲಿದ್ದು, ಒಟ್ಟು 117 ಕೇಂದ್ರಗಳಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಪರೀಕ್ಷೆ ಮುಗಿಯುವವರೆಗೆ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.