Author: AIN Author

ಬೆಂಗಳೂರು: ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಸಿಎಂ ಇಬ್ರಾಹಿಂಗೆ (CM Ibrahim) ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಹೆಚ್‍ಡಿಡಿ ಕುಟುಂಬದ ವಿರುದ್ಧವೇ ಸಿಎಂ ಇಬ್ರಾಹಿಂ ತೊಡೆ ತಟ್ಟಿದರು. ಈ ಹಿನ್ನೆಲೆಯಲ್ಲಿ ಹೆಚ್.ಡಿ ದೇವೇಗೌಡರ (HD Devegowda) ನೇತೃತ್ವದಲ್ಲಿ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. https://ainlivenews.com/see-how-many-health-benefits-drinking-buttermilk-has/ ಆದರೆ ಜೆಡಿಎಸ್‍ನಿಂದ (JDS) ಉಚ್ಛಾಟನೆಯಾದರೂ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ಚಿನ್ನೆ ಬಳಸುತ್ತಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ಆದೇಶ ನೀಡುವುದರ ಜೊತೆಗೆ ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಹಾಗೂ ಪಕ್ಷದ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಇಷ್ಟು ಮಾತ್ರವಲ್ಲದೇ ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.

Read More

ಬೆಂಗಳೂರು: ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ. https://ainlivenews.com/see-how-many-health-benefits-drinking-buttermilk-has/ ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಮನಬಂದಂತೆ ಟೀಕಿಸುತ್ತಿದೆ. ಕಾಂಗ್ರೆಸ್ನ ಈ ನಿಲುವನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ವಿರೋಧಿಸಿದ್ದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು ಇದನ್ನು ನಾನು ಮೆಚ್ಚುತ್ತೇನೆ ಎಂದರು.

Read More

ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ. ವೃದ್ಧೆಯೊಬ್ಬರ ಮನೆಯ ಮೇಲೆ ಲೋನ್ ಪಡೆದು ಈ ಗ್ಯಾಂಗ್ನವರು ವಂಚನೆ ಎಸಗಿದ್ದರು. ವೃದ್ಧೆ ಮನೆ ಮಾರಾಟ ಮಾಡಿ ವಿದೇಶಕ್ಕೆ ತೆರಳಲು ತೀರ್ಮಾನಿದ್ದರು. https://ainlivenews.com/see-how-many-health-benefits-drinking-buttermilk-has/ ಈ ವಿಚಾರವನ್ನು ಪಕ್ಕದ ಮನೆಯ ನಿವಾಸಿ ಮಂಜುನಾಥ್ ಬಳಿ ಹೇಳಿಕೊಂಡಿದ್ದರು. ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಮಂಜುನಾಥ, ತನ್ನ ಸ್ನೇಹಿತರ ಜೊತೆಗೆ ಸೇರಿ ಲೋನ್ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣದ ತನಿಖೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ಗಳ ಯಡವಟ್ಟು ಬಯಲಿಗೆ ಬಂದಿದೆ.

Read More

ಭಾರತ ಸಂವಿಧಾನ ಅಂಗೀಕೃತಗೊಂಡ 75 ವರ್ಷಗಳ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು. ನಗರದ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ನಡೆದ ಆಚರಣಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಸಂವಿಧಾನ ಹಾಗೂ ಸಂವಿಧಾನ ಪೀಠಿಕೆಯ ಆಶೋತ್ತರಗಳನ್ನು ಜನಮಾನಸಕ್ಕೆ ಮುಟ್ಟಿಸುವ ಹಿನ್ನೆಲೆಯಲ್ಲಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನವರಿ 26 ಕ್ಕೆ ಜಿಲ್ಲಾಕೇಂದ್ರದಿಂದ ಆರಂಭವಾಗುವ ಜಾಥಾ ಪೆಬ್ರವರಿ 23ಕ್ಕೆ ಜಿಲ್ಲೆಯಲ್ಲಿ ಮುಕ್ತಾಯಗೊಂಡು ಬೆಂಗಳೂರು ತಲುಪಲಿದೆ. 2 ಮಾಹಿತಿ ಪೂರ್ಣ ಟ್ಯಾಬ್ಲೋ ವಾಹನಗಳು ಮೈಸೂರು ಮತ್ತು ಹುಣಸೂರು ಉಪವಿಭಾಗಗಳಲ್ಲಿ ಸಂಚರಿಸಲಿವೆ ಎಂದರು. ಜಿಲ್ಲೆಯ 256 ಗ್ರಾಮ ಪಂಚಾಯತಿ, 14 ಸ್ಥಳೀಯ ಸಂಸ್ಥೆಗಳು ಹಾಗೂ 1ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಅಂಬೇಡ್ಕರರ ಆಶಯಗಳೊಂದಿಗೆ ಸಾಮಾಜಿಕ ನ್ಯಾಯ, ಸೌಹಾರ್ದ, ಭಾತೃತ್ವ ಹಾಗೂ ಸಮಾನತೆಯ ಸಂದೇಶಗಳನ್ನು ಎಲ್ಲಾ ವರ್ಗದ ಮನೆ ಮನಗಳಿಗೆ ಕೊಂಡೊಯ್ಯುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಇಂಬು ಕೊಡಲಿವೆ ಎಂದರು. ಜಿಲ್ಲೆಯಾದ್ಯಂತ ಸಂಚರಿಸುವ…

Read More

ಬೆಂಗಳೂರು : ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಅಂತಿಮ SSLC ವೇಳಾಪಟ್ಟಿ ಪ್ರಕಟವಾಗಿದೆ. ಹೌದು 2023-2024ನೇ ಸಾಲಿನ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 25ರಿಂದ ಏಪ್ರಿಲ್ 6 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ • 25-03-2024 : (ಪ್ರಥಮ ಭಾಷೆ) ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ,ತಮಿಳು, ಉರ್ದು, ಸಂಸ್ಕೃತ • 27-03-2024 : ಸಮಾಜ ವಿಜ್ಞಾನ • 30-03-2024 : ವಿಜ್ಞಾನ, ರಾಜ್ಯ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ • 02-04-2024 : ಗಣಿತ, ಸಮಾಜ ಶಾಸ್ತ್ರ • 03-04-2024 : ಅರ್ಥಶಾಸ್ತ್ರ • 04-04-2024 : (ತೃತೀಯ ಭಾಷೆ) ಕನ್ನಡ,ಇಂಗ್ಲಿಷ್, ಹಿಂದಿ, ಉರ್ದು,ಸಂಸ್ಕೃತ, ಪರ್ಶಿಯನ್, ತುಳು • 06-04-2024 : ದ್ವೀತಿಯ ಭಾಷೆ ಇಂಗ್ಲಿಷ್, ಕನ್ನಡ ಮೂರು ಬಾರಿ ಪರೀಕ್ಷೆಗೆ…

Read More

ಬೆಂಗಳೂರು: ರಾಮಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯ ಸರ್ಕಾರ ಸಹಕಾರ ಕೊಡಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ (Congress) ನಾಯಕರ ಹೇಳಿಕೆಗಳು, ಕೋಲಾರದಲ್ಲಿ ಫ್ಲೆಕ್ಸ್ ಹರಿದ ಪ್ರಕರಣ ಇವೆಲ್ಲ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನದ ಘಟನೆ, ಇದೆಲ್ಲವನ್ನೂ ನೋಡಿದಾಗ ರಾಜ್ಯದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. https://ainlivenews.com/see-how-many-health-benefits-drinking-buttermilk-has/ ರಾಮಮಂದಿರ (Ram Mandir) ಉದ್ಘಾಟನೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ. ದೇಶದಲ್ಲಿ ರಾಮಜಪ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ದುರುದ್ದೇಶದಿಂದಲೇ ಶ್ರೀಕಾಂತ್ ಪೂಜಾರಿ ಯವರನ್ನು ಬಂಧಿಸಲಾಯಿತು. ವಾತಾವರಣ ಕಲುಷಿತಗೊಳಿಸಬೇಕೆಂಬ ದುರುದ್ದೇಶದಿಂದಲೇ ಬಂಧನ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

Read More

ಜನವರಿ 22 ರಂದೇ ನಟ ನಿಖಿಲ್‌ ಕುಮಾರಸ್ವಾಮಿಯವರ ಹುಟ್ಟುಹಬ್ಬವಾಗಿದೆ (Nikhil Birthday). ಹೀಗಾಗಿ ಇದೇ ದಿನ ನಿಖಿಲ್‌ ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ಮಾಹಿತಿ ಹಂಚಿಕೊಂಡು ಕ್ಷಮೆ ಕೇಳಿದ್ದಾರೆ. ಪತ್ರದಲ್ಲೇನಿದೆ..?: ಜನವರಿ 22 ರಂದು ನನ್ನ ಹುಟ್ಟುಹಬ್ಬವಾಗಿದ್ದು, ಈ ದಿನ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಬೇಕಿದೆ. ಹೀಗಾಗಿ ನೀವೆಲ್ಲರೂ ನೀವಿದ್ದ ಕಡೆಯಿಂದಲೇ ನನ್ನ ಹುಟ್ಟುಹಬ್ಬಕ್ಕೆ ಹರಸಿದರೆ ಅದೇ ನನಗೆ ಸಂತೋಷ. https://ainlivenews.com/see-how-many-health-benefits-drinking-buttermilk-has/  ನನ್ನ ಹುಟ್ಟುಹಬ್ಬಕ್ಕಾಗಿ ಯಾವುದೇ ರೀತಿಯ ದುಂದುವೆಚ್ಚ ಬೇಡ. ಅದನ್ನೇ ಒಳ್ಳೆಯ ಕಾರ್ಯಕ್ಕೆ ಬಳಸಿ. ಮತ್ತೊಮ್ಮೆ ನಿಮ್ಮ ಬಳಿ ಕ್ಷಮೆ ಕೇಳುತ್ತಾ ಆದಷ್ಟು ಬೇಗ ಭೇಟಿ ಮಾಡೋಣ ಎಂದಿದ್ದಾರೆ. ಒಟ್ಟಿನಲ್ಲಿ ರಾಮಂದಿರದ ಕಾರ್ಯಕ್ರಮದಲ್ಲಿ ಭಾಗಿ ಆಗ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆಗೆ ನಿಖಿಲ್‌ ಅವರು ಬ್ರೇಕ್ ಹಾಕಿದ್ದಾರೆ.

Read More

ದಿಸ್ಪುರ್: ಮುಂದಿನ ಮೂರು ವರ್ಷಗಳಲ್ಲಿ ಭಾರತ ನಕ್ಸಲಿಸಂ ಮುಕ್ತ ರಾಷ್ಟ್ರವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭರವಸೆ ಕೊಟ್ಟಿದ್ದಾರೆ. ಅಸ್ಸಾಂನ (Assam) ಸಲೋನಿಬರಿಯಲ್ಲಿ ಸಶಸ್ತ್ರ ಸೀಮಾ ಬಲದ 60ನೇ ಪುನರುತ್ಥಾನ ದಿನಾಚರಣೆಯ (Sashastra Seema Bal’s 60th Raising Day) ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ನಕ್ಸಲ್ ಸಮಸ್ಯೆಯಿಂದ 100% ಮುಕ್ತವಾಗಲಿದೆ ಎಂದಿದ್ದಾರೆ. https://ainlivenews.com/see-how-many-health-benefits-drinking-buttermilk-has/ ಎಲ್ಲಾ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಸಂಸ್ಕೃತಿ, ಇತಿಹಾಸ, ಭೂಗೋಳ ಮತ್ತು ಭಾಷೆಯನ್ನು ಸೂಕ್ಷ್ಮವಾಗಿ ಸಂಯೋಜಿಸುವಲ್ಲಿ ವಿಶಿಷ್ಟ ಪಾತ್ರ ವಹಿಸುತ್ತದೆ. ಅಲ್ಲದೇ ಗಡಿ ಪ್ರದೇಶಗಳಲ್ಲಿ ಜನರನ್ನು ದೇಶದ ಇತರ ಭಾಗಗಳಿಗೆ ಹತ್ತಿರವಾಗುವಂತೆ ಮಾಡುತ್ತದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಶಸ್ತ್ರ ಸೀಮಾ ಬಲದ 60ನೇ ಪುನರುತ್ಥಾನ ದಿನಾಚರಣೆಯ ಅಂಗವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.

Read More

ಚೆನ್ನೈ: ತಮಿಳುನಾಡಿಗೆ 3 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಮೇಶ್ವರಂನಲ್ಲಿರುವ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ 2.10ಕ್ಕೆ ಹೆಲಿಕಾಪ್ಟರ್ ಮೂಲಕ ರಾಮೇಶ್ವರಂ (Rameshwaram) ಪಕರುಂಬುವಿನ ಅಮೃತಾನಂದ ಶಾಲಾ ಆವರಣಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಅಲ್ಲಿಂದ ಮಧ್ಯಾಹ್ನ 3.10ಕ್ಕೆ ಅಗ್ನಿತೀರ್ಥದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ದೇವಸ್ಥಾನದಲ್ಲಿ ನಡೆಯುತ್ತಿದ್ದ ರಾಮಾಯಣ ಪಥ ಮತ್ತು ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ನಡೆಯಲಿರುವ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ದವರೆಗೆ 11 ದಿನಗಳ, https://twitter.com/ANI/status/1748675224806289713?ref_src=twsrc%5Etfw%7Ctwcamp%5Etweetembed%7Ctwterm%5E1748675224806289713%7Ctwgr%5E190836ded6dcbab334bc8fe2f30de9fd907917c8%7Ctwcon%5Es1_&ref_url=https%3A%2F%2Fpublictv.in%2Fpm-modi-takes-holy-dip-in-agni-theerth-beach-prays-at-rameswaram-temple%2F ವ್ರತದಲ್ಲಿರುವ ಪ್ರಧಾನಿ ಮೋದಿ ಶನಿವಾರ ತಿರುಚಿರಾಪಳ್ಳಿಗೆ ಆಗಮಿಸಿದರು. ಇದಕ್ಕೂ ಮುನ್ನ ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ತಮ್ಮ ಭೇಟಿಯ ವೇಳೆ ಮೋದಿ ಅವರು ದೇವಾಲಯದ ಆವರಣದಲ್ಲಿ ‘ಆಂಡಾಳ್’ ಎಂಬ ಆನೆಯ ಬಳಿಯಿಂದ ಆಶೀರ್ವಾದ ಪಡೆದರು.

Read More

ಬೆಂಗಳೂರು: ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರದಿಂದ ರಜೆ ಕೊಡೋದಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಜೆ ಘೋಷಣೆ ‌ಮಾಡಲು ಬಿಜೆಪಿಯಿಂದ (BJP) ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ನಾವು ನಮ್ಮ ಭಕ್ತಿ, ನಮ್ಮ ಗೌರವ, ನಮ್ಮ ಧರ್ಮ ಪ್ರಚಾರಕ್ಕೆ ನಾವು ಏನು ಮಾಡಲ್ಲ. ನಮ್ಮ ಭಾವನೆ ಇದೆಯಲ್ಲ. ನಮ್ಮ ಮಂತ್ರಿಗಳೇ ಎಲ್ಲಾ ದೇವಸ್ಥಾನಗಳಲ್ಲಿ ಮಾಡಬೇಕಾದ ಆಚರಣೆಗಳಿಗೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ. ಪೂಜೆ, ಪುನಸ್ಕಾರ ಏನು ಮಾಡಬೇಕೋ ಆ ಕೆಲಸ ಮಾಡ್ತಿದ್ದೇವೆ. ನಮ್ಮ ಪ್ರಾರ್ಥನೆಗೆ ಫಲ ನಮಗೆ ದೊರೆಯುತ್ತದೆ ಅನ್ನೋ ನಂಬಿಕೆಯಿದೆ. https://ainlivenews.com/see-how-many-health-benefits-drinking-buttermilk-has/ ಹೀಗಾಗಿ ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳಿ ಅಂತ ಹೇಳ್ತಿದ್ದೇವೆ ಎಂದರು. ಸಿದ್ದರಾಮಯ್ಯ (Siddaramaiah) ಹೆಸರಲ್ಲಿ ರಾಮ ಇದ್ದಾನೆ. ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ. ಯಾರು ಒತ್ತಡ ಹಾಕೋದು ಬೇಕಿಲ್ಲ. ನಮ್ಮ ಕರ್ತವ್ಯ ನಾವು ಮಾಡ್ತೀವಿ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು…

Read More