ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಮ್ಮೆ ಮನವಿ ಮಾಡುತ್ತೇವೆ. ಸರ್ಕಾರಿ ರಜೆ ಘೋಷಣೆ ಮಾಡಿ ರಾಮಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ (Central Govt) ಕೂಡ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಹಾಗಾಗಿ ರಾಜ್ಯದಲ್ಲೂ ರಜೆ ಘೋಷಣೆ ಮಾಡಬೇಕು ಅಂತಾ ಮನವಿ ಮಾಡಿದ್ರು. ಸೆಲ್ಫಿ ಕಟೌಟ್‌ಗಳನ್ನ ರಾಜ್ಯದ ಎಲ್ಲ ಪ್ರಮುಖ ಸ್ಥಳಗಳಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಹಾಕಲಾಗುತ್ತೆ. ಅಲ್ಲದೆ ಕರ್ನಾಟಕದಿಂದ ಅಯೋಧ್ಯೆಗೆ (Ayodhya Ram Mandir) ಜನವರಿ 22ರ ಬಳಿಕ 60 ದಿನಗಳ ಕಾಲ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, 35 ಸಾವಿರಕ್ಕೂ ಹೆಚ್ಚು ರಾಮಭಕ್ತರು ಪ್ರಯಾಣ ಮಾಡುತ್ತಾರೆ. ಜನವರಿ 31ರಿಂದ ಮಾರ್ಚ್ 25ರ ವರೆಗೆ ರಾಮಭಕ್ತರು ಪ್ರಯಾಣ ಮಾಡುತ್ತಾರೆ. ರಾಮಭಕ್ತರೇ ಪ್ರಯಾದ ಖರ್ಚು ವೆಚ್ಚ ಭರಿಸಲಿದ್ದಾರೆ ಅಂತಾ ವಿಜಯೇಂದ್ರ ಸ್ಪಷ್ಟಪಡಿಸಿದ್ರು.
Author: AIN Author
ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಮತ್ತು ಹರ್ಯಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿದೆ, ಆದರೆ ಪಂಜಾಬ್, ರಾಜಸ್ಥಾನ, ಹಿಮಾಚಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಧನ ಬೆಲೆ ಕಡಿಮೆಯಾಗಿದೆ. ಇತರ ರಾಜ್ಯಗಳು ಮತ್ತು ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಿಳಿಯೋಣ. ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ – ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. – ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ 94.27 ರೂ. – ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. -ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ, ಡೀಸೆಲ್ 87.89 ರೂ. https://ainlivenews.com/see-how-many-health-benefits-drinking-buttermilk-has/ ಈ ನಗರಗಳಲ್ಲಿ ಬೆಲೆಗಳು ಎಷ್ಟು ಬದಲಾಗಿವೆ – ನೋಯ್ಡಾದಲ್ಲಿ ಪೆಟ್ರೋಲ್ 96.94 ರೂ. ಮತ್ತು ಡೀಸೆಲ್ ಲೀಟರ್‌ಗೆ 90.11 ರೂ. ಆಗಿದೆ. – ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 96.44 ರೂ ಮತ್ತು ಡೀಸೆಲ್…
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಎರಡು ದಿನಗಳಿಂದ ಗ್ರಾಮ್ಗೆ 65 ರೂನಷ್ಟು ಇಳಿದಿದ್ದ ಚಿನ್ನದ ಬೆಲೆ ಇದೀಗ ಗ್ರಾಮ್ಗೆ 40 ರೂ ಮೇಲೆ ಜಿಗಿದಿದೆ. ಬೆಳ್ಳಿ ಬೆಲೆಯೂ ಗ್ರಾಮ್ಗೆ 20 ಪೈಸೆಯಷ್ಟು ಹೆಚ್ಚಾಗಿದೆ. ವಿದೇಶ ಮಾರುಕಟ್ಟೆಗಳ ಪೈಕಿ ಯುಎಇಯಲ್ಲಿ ಮಾತ್ರವೇ ತುಸು ಕಡಿಮೆ ಆಗಿದೆ. ಉಳಿದ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,570 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 21ಕ್ಕೆ) 22…
ಕನ್ನಡ ಸಿನಿಮಾ ಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಕೊಡುತ್ತಿರುವ ಡಾಲಿ ಪಿಕ್ಚರ್ಸ್ ನ ಮೂರನೇ ಕೊಡುಗೆ ಟಗರು ಪಲ್ಯ ಕಿರುತೆರೆಯಲ್ಲಿಯೂ ದೊಡ್ಡ ಮಟ್ಟದ ಹಿಟ್ ಕಂಡಿದೆ. ಬೆಳ್ಳಿಪರದೆ ಹಾಗೂ ಅಮೇಜಾನ್ ಪ್ರೈಮ್ ನಲ್ಲಿಯೂ ಫ್ಯಾಮಿಲಿ ಆಡಿಯನ್ಸ್ ಮನಸೂರೆಗೊಳಿಸಿರುವ ಈ ಚಿತ್ರ ನಾಟಿ ಹಿಟ್ ಎನಿಸಿಕೊಂಡಿದೆ. ಥಿಯೇಟರ್ ಹಾಗೂ ಒಟಿಟಿ ಎರಡು ವೇದಿಕೆಯಲ್ಲಿಯೂ ಗೆದ್ದಿರುವ ಟಗರು ಪಲ್ಯ ಕಿರುತೆರೆ ಪ್ರೇಕ್ಷಕ ವರ್ಗಕ್ಕೂ ರುಚಿಸಿದೆ. ಎರಡು ವಾರದ ಹಿಂದಷ್ಟೇ ಅಂದರೆ ಜ.7ರಂದು ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ತೆರೆಕಂಡಿತ್ತು. ಕಿರುತೆರೆಗೆ ಅಪ್ಪಳಿಸಿದ್ದ ಈ ಚಿತ್ರ ಟಿಆರ್ ಪಿಯಲ್ಲಿ ಧೂಳ್ ಎಬ್ಬಿ ಸಿದೆ. 7.2 ಟಿಆರ್ ಪಿ ಟಗರು ಪಲ್ಯ ಸಿನಿಮಾಗೆ ದಕ್ಕಿದೆ. ಹೊಸಬರ ಸಿನಿಮಾಗೆ ಇಷ್ಟು ಟಿಆರ್ ಪಿ ಬಂದಿರೋದು ನಿಜಕ್ಕೂ ದಾಖಲೆಯೇ ಸರಿ.. ಈ ಹಿಂದೆ ಡಾಲಿ ಪಿಕ್ಚರ್ಸ್ ನಿರ್ಮಾಣ ಮಾಡಿದ್ದ ಚೊಚ್ಚಲ ಸಿನಿಮಾ ಬಡವ ರಾಸ್ಕಲ್ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊಡ್ಡ ಮಟ್ಟದ ಹಿಟ್ ಕಂಡಿತ್ತು.…
ಟೆಕ್ಸಾಸ್: ಗರ್ಭಿಣಿ ಮಹಿಳೆಯೋರ್ವಳನ್ನೂ ಅಪಹರಿಸಿ ಆಕೆಯನ್ನೂ ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರ ಮಾಡಿದ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲಾಗಿದೆ. ಹೌದು ಐದು ವರ್ಷಗಳ ಹಿಂದೆ ಮಹಿಳೆಯನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಕ್ಕಾಗಿ ಟೆಕ್ಸಾಸ್‌ನ ವ್ಯಕ್ತಿ ಲೀ ಕಾರ್ಟರ್ (Lee Carter) ಎಂಬಾತನನ್ನು ಬಂಧಿಸಲಾಗಿದೆ. 52 ವರ್ಷದ ಮಹಿಳೆ ಗರ್ಭಿಣಿಯಾಗಿದ್ದಾಗ ಕಾರ್ಟರ್ ಬೀದಿಯಿಂದ ಆಕೆಯನ್ನು ಅಪಹರಿಸಿದ್ದು, ಆತನ ವಿರುದ್ಧ ಅಪಹರಣ (kidnapping) ಆರೋಪ ಹೊರಿಸಲಾಗಿದೆ. ಹೂಸ್ಟನ್‌ನಲ್ಲಿರುವ (Houston) ಕಾರ್ಟರ್‌ನ ಮನೆಗೆ ಹತ್ತಿರದಲ್ಲಿದ್ದ ಗ್ಯಾರೇಜ್‌ನಲ್ಲಿ ಮಹಿಳೆಯನ್ನು ಲಾಕ್ ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಮಾಡಿದರು. ಎಪ್ರಿಲ್ 7, 2023 ರಂದು ಬಹಿರಂಗಪಡಿಸಿದ ದಾಖಲೆಗಳ ಪ್ರಕಾರ ಹೂಸ್ಟನ್‌ನ 5251 ಪೆರ್ರಿ ಸ್ಟ್ರೀಟ್‌ಗೆ ಹೋಗುತ್ತಿರುವಾಗ ಹೂಸ್ಟನ್ ಪೊಲೀಸರು ಗ್ಯಾರೇಜ್‌ನಿಂದ ಧ್ವನಿ ಕೇಳಿದರು ಎಂದು ಹೇಳಲಾಗಿದೆ. ಅಧಿಕಾರಿಗಳು ಗ್ಯಾರೇಜ್‌ನ ಕಿಟಕಿಯನ್ನು ಒಡೆದಿರುವುದನ್ನು ವಿಡಿಯೊ ತೋರಿಸುತ್ತದೆ. ಅವರು ಒಳಗೆ ನಾಯಿ ಮತ್ತು ಹಾಸಿಗೆಯನ್ನು ಕಂಡುಕೊಂಡರು, ಅಲ್ಲಿ ಮಹಿಳೆಯನ್ನು ಸೆರೆಯಲ್ಲಿ ಇರಿಸಲಾಗಿತ್ತು. ಸಂತ್ರಸ್ತೆ ಸುಮಾರು 30 ವರ್ಷ ವಯಸ್ಸಿನವಳಾಗಿದ್ದು, ಆಕೆಯನ್ನು ರಕ್ಷಿಸಿದಾಗ ಆಕೆ ಕೇವಲ 70 ಪೌಂಡ್‌ಗಳಷ್ಟು ತೂಕವಿದ್ದರು.ಅವಳು…
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ- ಜೆಡಿಎಸ್ ನಾಯಕರ ಹೈವೋಲ್ಟೇಜ್ ಸಭೆ ಆರಂಭವಾಗಿದೆ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಾಗಿದ್ದು, ಸಭೆಯಲ್ಲಿ ಬಿಜೆಪಿ ಕಡೆಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ, https://ainlivenews.com/see-how-many-health-benefits-drinking-buttermilk-has/ ಮಾಜಿ ಸಿಎಂ ಗಳಾದ ಸದಾನಂದಗೌಡ, ಬಸವರಾಜ ಬೊಮ್ಮಾಯಿ, ವಿಪಕ್ಷನಾಯಕ ಆರ್.ಅಶೋಕ್, ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಜೆಡಿಎಸ್ ಕಡೆಯಿಂದ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿಟಿ ದೇವೇಗೌಡರ, ಬಂಡೆಪ್ಪ ಕಾಶಂಪೂರ್, MLC ಭೋಜೇಗೌಡ, ತಿಪ್ಪೇಸ್ವಾಮಿ ಭಾಗಿಯಾಗಿದ್ದಾರೆ.
ನವದೆಹಲಿ: ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದೆ. 2028ರ ವರೆಗೆ ಐಪಿಎಲ್ ಪ್ರಾಯೋಜಕತ್ವ ಪಡೆದಿರುವ ಟಾಟಾ ಸಂಸ್ಥೆಯು ಪ್ರತಿ ಆವೃತ್ತಿಗೆ ಬಿಸಿಸಿಐಗೆ ₹500 ಕೋಟಿ ಪಾವತಿಸಲಿದೆ. 2022-23ರ ಆವೃತ್ತಿಗಳಲ್ಲಿ ಟಾಟಾ ಸಂಸ್ಥೆ ಶೀರ್ಷಿಕೆ ಹಕ್ಕು ಪಡೆದಿತ್ತು. ವರ್ಷಕ್ಕೆ ತಲಾ 335 ಕೋಟಿ ರು ಪಾವತಿಸಿತ್ತು. https://ainlivenews.com/see-how-many-health-benefits-drinking-buttermilk-has/ ಇತ್ತೀಚೆಗಷ್ಟೆ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್ ಆಹ್ವಾನಿಸಿತ್ತು. ಟಾಟಾ ಸಂಸ್ಥೆಗೆ ಆಯೋಜನೆ ಹಕ್ಕು ಸಿಕ್ಕಿದ್ದು, 5 ವರ್ಷಗಳಲ್ಲಿ ಒಟ್ಟು 2500 ಕೋಟಿ ರು, ಬಿಸಿಸಿಐಗೆ ಪಾವತಿಸಲಿದೆ. 2008ರಲ್ಲಿ ಐಪಿಎಲ್ ಆರಂಭಗೊಂಡಾಗ ಡಿಎಲ್‌ಎಫ್ 5 ವರ್ಷಕ್ಕೆ ಪ್ರಾಯೋಜಕತ್ವ ಪಡೆದು, ಪ್ರತಿ ವರ್ಷಕ್ಕೆ 40 ಕೋಟಿ ರು ಪಾವತಿಸಿತ್ತು.
ಬೆಂಗಳೂರು: ಶಾಸಕರನ್ನು ಪ್ರಶ್ನಿಸಿದರು ಎನ್ನುವ ಕಾರಣಕ್ಕೆ ಚಿಕ್ಕಬಳ್ಳಾಪುರದ ಜೆಡಿಎಸ್ ಕಾರ್ಯಕರ್ತ ರೊಬ್ಬರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರದೀಪ್ ಈಶ್ವರ್ ಬೆಂಬಲಿಗರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಜಾತ್ಯತೀತ ಜನತಾದಳ ಆಗ್ರಹಪಡಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜೆಡಿಎಸ್; ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿ ರೌಡಿಗಳಂತೆ ವರ್ತಿಸಿ ನಮ್ಮ ಕಾರ್ಯಕರ್ತರ ಮೇಲೆ ಧಮ್ಕಿ ಹಾಕಿ, ಜೀವ ಬೆದರಿಕೆ ಒಡ್ಡುತ್ತಿರುವ ಘಟನೆಗಳು ಗಮನಕ್ಕೆ ಬಂದಿವೆ. ಚಿಕ್ಕಬಳ್ಳಾಪುರ ಕ್ಷೇತ್ರ ಜನರ ಸ್ವತ್ತೇ ಹೊರತು ಶಾಸಕರಾದ ಪ್ರದೀಪ್ ಈಶ್ವರ್ ಅಥವಾ ಕಾಂಗ್ರೆಸ್ ಪಕ್ಷದ ಜಹಗೀರಲ್ಲ. ಈ ಅಂಶವನ್ನು ಕಾಂಗ್ರೆಸ್ ಗೂಂಡಾಗಳು ಅರ್ಥ ಮಾಡಿಕೊಂಡರೆ ಒಳಿತು ಎಂದು ಎಚ್ಚರಿಕೆ ನೀಡಿದೆ. ಹಿರಿಯ ಸಹಕಾರಿ ಧುರೀಣರು, ಮಾಜಿ ಶಾಸಕರು ಹಾಗೂ ನಮ್ಮ ಗೌರವಾನ್ವಿತ ನಾಯಕರು, ಜನಾನುರಾಗಿಗಳು ಆಗಿದ್ದ ಶ್ರೀ ಕೆ.ಬಿ.ಪಿಳ್ಳಪ್ಪನವರ ವಿಗ್ರಹ ಸ್ಥಾಪನೆ ಮಾಡುವ ಬಗ್ಗೆ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಅವರೇ ನೀಡಿದ್ದ ಭರವಸೆಯನ್ನು ಆರು ತಿಂಗಳಾದರೂ ಈಡೇರಿಸದ ಬಗ್ಗೆ ನಮ್ಮ…
ಅಯೋಧ್ಯೆ: ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಮಹೋತ್ಸವಕ್ಕೆ ಗಂಟೆಗಳ ಎಣಿಕೆ ಆರಂಭವಾಗಿದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಅಯೋಧ್ಯೆಗೆ ದೇಶದ ಗಣ್ಯಾತಿಗಣ್ಯರು ಆಗಮಿಸ್ತಿದ್ದಾರೆ. ಭಾನುವಾರ ಗಣ್ಯರ ಆಗಮನದ ಸಂಖ್ಯೆ ಇನ್ನೂ ಹೆಚ್ಚಲಿದೆ. ಈ ಹೊತ್ತಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ರಾಮಮಂದಿರ (Ayodhya Ram Mandir) ಕಾರಣಕ್ಕಾಗಿ ಅಯೋಧ್ಯೆ ನಗರಿ ದೇಶದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ದೇಶ-ವಿದೇಶಗಳ 11 ಸಾವಿರ ವಿವಿಐಪಿಗಳು ರಾಮನೂರಿಗೆ ಆಗಮಿಸುವ ಕಾರಣ ಗರಿಷ್ಠ ಭದ್ರತೆ ಒದಗಿಸಲಾಗಿದೆ. ಭೂಮಿ, ನೀರು, ವಾಯುಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಅಯೋಧ್ಯೆ ಮೇಲೆ ದಾಳಿ ನಡೆಸೋದಾಗಿ ಖಲಿಸ್ಥಾನ್ ಉಗ್ರ ಪನ್ನೂನ್ ಎಚ್ಚರಿಕೆ ಮೇಲೆ ಎಚ್ಚರಿಕೆ ನೀಡ್ತಿದ್ದಾನೆ. ಇದರ ಜೊತೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಷ್ ದಾಳಿ ನಡೆಸುವ ಸಂಭವ ಇದೆ ಎಂದು ಗುಪ್ತಚರ ಪಡೆಗಳು ಎಚ್ಚರಿಸಿವೆ. ಹೀಗಾಗಿ ಅಯೋಧ್ಯೆಯಲ್ಲಿ ಗರಿಷ್ಠ ಮಟ್ಟದ ಮಟ್ಟದ ನಿಗಾ ವಹಿಸಲಾಗಿದೆ. ರಾಮಮಂದಿರದ ಬಳಿ ಮೂರು ಹಂತದ ಭದ್ರತೆ ಏರ್ಪಾಟು ಮಾಡಲಾಗಿದೆ. https://ainlivenews.com/see-how-many-health-benefits-drinking-buttermilk-has/ ಅಯೋಧ್ಯಾ ನಗರಿಯಲ್ಲಿ ಭದ್ರತಾ ಪಡೆಗಳ ಪ್ಯಾಟ್ರೋಲಿಂಗ್ ಹೆಚ್ಚಿದೆ.…
‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ ‘ಕೆಟಿಎಂ’ ಸಿನಿಮಾ ಟೀಸರ್ ನಿಂದಲೇ ಭಾರೀ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಮೆಲೋಡಿ ಹಾಡು ಅನಾವರಣಗೊಂಡಿದೆ. ಸೋಜಿಗ ಎಂಬ ಸಾಂಗ್ ಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಚೇತನ್ ರಾವ್ ಮ್ಯೂಸಿಕ್ ಶ್ರಮ ಹಾಡಿಗಿದೆ. ದೀಕ್ಷಿತ್ ಹಾಗೂ ಕಾಜಲ್ ಕುಂದರ್ ಸೋಜಿಗ ಸಿಂಗಿಂಗ್ ಧಮಾಕದಲ್ಲಿ ಮಿಂಚಿದ್ದಾರೆ. ‘ಅಥರ್ವ’ ಸಿನಿಮಾ ಖ್ಯಾತಿಯ ಅರುಣ್, ಈ ‘ಕೆಟಿಎಂ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅರುಣ್ ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಿರತವಾಗಿರುವ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಮೊದಲ ಹಂತವಾಗಿ ಇಂಟ್ರಸ್ಟಿಂಗ್ ಟೀಸರ್ ಬಿಡುಗಡೆ ಮಾಡಿತ್ತು. ಸ್ಯಾಂಡಲ್ವುಡ್ನ 50 ಮಂದಿ ಸೆಲೆಬ್ರಿಟಿಗಳು ‘ಕೆಟಿಎಂ’ ಟೀಸರ್ ರಿಲೀಸ್ ಮಾಡಿ ಶುಭ ಕೋರಿದ್ದರು. ನವಿರಾದ ಪ್ರೇಮ್ ಕಹಾನಿ ಒಳಗೊಂಡಿರುವ ‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಕ್ಷಿತ್, ನಾಲ್ಕು ಶೇಡ್ನಲ್ಲಿ ತೆರೆ…