ಅಯೋಧ್ಯೆ: ರಾಮ ಮಂದಿರದ (Ayodhya Ram Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ನಾಗ್ಪುರದ ಬಾಣಸಿಗ ವಿಷ್ಣು ಮನೋಹರ್ ಅವರು ಅಯೋಧ್ಯೆಯಲ್ಲಿ 7,000 ಕೆ.ಜಿ ತೂಕದ ‘ರಾಮ ಹಲ್ವಾ’ ತಯಾರಿಸಲು ಮುಂದಾಗಿದ್ದಾರೆ. ಈ ಸಂಬಂಧ ಬಾಣಸಿಗ ವಿಷ್ಣು ಮನೋಹರ್ ಮಾತನಾಡಿ, ರಾಮ ಹಲ್ವಾ (Rama Halwa) ತಯಾರು ಮಾಡಲು 12 ಸಾವಿರ ಲೀಟರ್ ಸಾಮರ್ಥ್ಯದ ವಿಶೇಷ ಕಡಾಯಿ (ಕಡಾಯಿ) ತಯಾರಿಸಿದ್ದು, ಅದರಲ್ಲಿ ರಾಮ ಹಲ್ವಾ ತಯಾರು ಮಾಡಲಿದ್ದಾರೆ. 900 ಕೆ.ಜಿ ರವೆ, 1000 ಕೆ.ಜಿ ತುಪ್ಪ, 1000 ಕೆ.ಜಿ ಸಕ್ಕರೆ, 2000 ಲೀಟರ್ ಹಾಲು, 2,500 ಲೀಟರ್ ನೀರು, 300 ಕೆ.ಜಿ ಡ್ರೈ ಫ್ರೂಟ್ಸ್ ಮತ್ತು 75 ಕೆ.ಜಿ ಏಲಕ್ಕಿ ಪುಡಿಯನ್ನು ಬಳಸಿ ಹಲ್ವಾವನ್ನು ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ರಾಮಹಲ್ವಾ ತಯಾರು ಮಾಡುವ ಕಡಾಯಿ ಬಗ್ಗೆ ಹೇಳುವುದಾದರೆ ಇದರ ತೂಕ 1, 300 ರಿಂದ 1400 ಕೆ.ಜಿ. ಇದ್ದು, https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಇದನ್ನು ಉಕ್ಕಿನಿಂದ ತಯಾರಿಸಲಾಗಿದೆ. ಹಲ್ವಾ ಮಾಡುವಾಗ ಅದು ಸುಡದಂತೆ ಮಧ್ಯಭಾಗವನ್ನು…
Author: AIN Author
ಹಾಸನ: ನಾನು ಕೇಂದ್ರ ಮಂತ್ರಿ ಆಗುವ ಬಗ್ಗೆ ಚಿಂತೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ಮಾಧ್ಯಮಗಳ ಜತೆ ಮಾತನಾಡಿದರು. ನಾನು ಇವುಗಳ ಯಾವುದರ ಬಗ್ಗೆ ಚಿಂತೆ ಮಾಡಿಲ್ಲ. 28 ಕ್ಷೇತ್ರಗಳನ್ನು ಗೆಲ್ಲುವುದಷ್ಟೆ ನಮ್ಮ ಮೈತ್ರಿಕೂಟದ ಗುರಿ. ನನ್ನ ಮುಂದೆ ಇರುವ ಏಕೈಕ ಅಜೆಂಡಾ ಎಂದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸೋದು ಎಂದು ಅವರು ಹೇಳಿದರು. ಮಂತ್ರಿಯಾಗಿ ಏನು ಮಾಡಲಿ? ನನಗೆ ಅ ಸುದ್ದಿಯೇ ಗೊತ್ತಿಲ್ಲ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಗಮನಿಸಿದ್ದೇನೆ. ನನಗೆ ಅ ಬಗ್ಗೆ ಆಸೆಯೂ ಇಲ್ಲ. ಅ ರೀತಿ ಚರ್ಚೆಯೇ ಆಗಿಲ್ಲ ಎಂದ ಅವರು; ಮುಂದಿನ ಫೆಬ್ರವರಿ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದರೆ ಏನು ಮಾಡುವುದು? ಕೇಂದ್ರ ಮಂತ್ರಿ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಆಸೆಯೂ ಇಲ್ಲ ಎಂದರು.
ಬೆಂಗಳೂರು:- ಕಿಡಿಗೇಡಿಯೊಬ್ಬ ಕುಡಿದ ಮತ್ತಿನಲ್ಲಿ ಪ್ರಕಾಶ್ ನಗರದ ಕುವೆಂಪು ಮೆಟ್ರೋ ನಿಲ್ದಾಣ ಬಳಿಯ ಮನೆ ಮುಂದೆ ಮತ್ತು ಲೇಡಿಸ್ ಪಿಜಿ ಎದುರು ನಿಲ್ಲಿಸಿದ್ದ ಬೈಕ್ ಮತ್ತು ಸ್ಕೂಟಿಯನ್ನು ಬೀಳಿಸಿ ಅಟ್ಟಹಾಸ ಮೆರೆದಿದ್ದಾರೆ. ಸೋಮವಾರರ ರಾತ್ರಿ 8 ಗಂಟೆ ಸುಮಾರಿಗೆ ಜರುಗಿದೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಆದಾಯ ಹೆಚ್ಚಳಕ್ಕೆ ಬಿಬಿಎಂಪಿಯಿಂದ ಹೊಸ ಪ್ಲಾನ್ ಮಾಡಿದ್ದು, ತನ್ನ ವ್ಯಾಪ್ತಿಯ ಗುತ್ತಿಗೆ, ಲೀಜ್ ಆಸ್ತಿಗಳ ಮಾರಾಟಕ್ಕೆ ಯೋಜನೆ ರೂಪಿಸಿದೆ. ಈ ಪ್ಲಾನ್ ಸಕ್ಸಸ್ ಆದ್ರೆ 600 ಕೋಟಿ ಆದಾಯ ಹರಿದುಬರುವ ನಿರೀಕ್ಷೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತನ್ನ ಬೊಕ್ಕಸದ ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಹಲವು ಪ್ಲಾನ್ ಮಾಡಿದೆ. ಈಗಾಗಲೇ ಬಾಕಿ ಆಸ್ತಿ ತೆರಿಗೆ ವಸೂಲಿಗೆ ವೇಗ ನೀಡಿರೋ ಪಾಲಿಕೆ, ಇದೀಗ ತನ್ನ ಗುತ್ತಿಗೆ ಹಾಗೂ ಲೀಜ್ ಆಸ್ತಿಗಳನ್ನ ಹರಾಜಿನ ಮೂಲಕ ಮಾರಾಟ ಮಾಡೋಕೆ ಪ್ಲಾನ್ ಮಾಡಿದೆ. ಸದ್ಯ ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ, ಶೀಘ್ರದಲ್ಲೇ ಆಸ್ತಿಗಳನ್ನ ಮಾರಾಟ ಮಾಡಿ ಆದಾಯ ಹೆಚ್ಚಿಸೋಕೆ ಸಜ್ಜಾಗಿದೆ. ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ನಿರ್ವಹಣಾ ನಿಯಮ 2023 ರ ಜಾರಿಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸದ್ಯ ಗುತ್ತಿಗೆಗೆ ನೀಡಿರೋ ಯೂನಿಟಿ ಬಿಲ್ಡಿಂಗ್, ಕಂಠೀರವ ಸ್ಟೇಡಿಯಂ ಸೇರಿದಂತೆ ವಿವಿಧ ಕಡೆ ಇರುವ ಪಾಲಿಕೆ ಆಸ್ತಿಗಳನ್ನ ಹರಾಜಿನ…
ನಿಂಬೆಹಣ್ಣಿನಲ್ಲಿ ಅಗಾಧ ಪ್ರಮಾಣದ ಉತ್ತಮ ಅಂಶಗಳಿವೆ.ನಿಂಬೆ ನೀರನ್ನು ಮಿತವಾಗಿ ಸೇವಿಸುವುದರಿಂದ ನೀವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರಿಂದಾಗಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಏನೇಲ್ಲಾ ಸಮಸ್ಯೆಗಳನ್ನು ದೂರಮಾಡುತ್ತೆ ಗೊತ್ತಾ ಇಲ್ಲಿದೆ ನೋಡಿ! 1. ನಿಂಬೆ ನೀರು ಮತ್ತು ತೂಕ ನಷ್ಟ ನಿಂಬೆ ನೀರು ತೂಕ ನಷ್ಟದ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ. ತೂಕ ನಷ್ಟವನ್ನು ಸ್ವಯಂಪ್ರೇರಿತ ಅಥವಾ ಅನೈಚ್ಛಿಕ ಸಂದರ್ಭಗಳಿಂದ ಉಂಟಾಗುವ ಒಟ್ಟು ದೇಹದ ತೂಕದಲ್ಲಿ ಕಡಿತ ಎಂದು ವ್ಯಾಖ್ಯಾನಿಸಲಾಗಿದೆ. ಆಹಾರದಲ್ಲಿ ಕರಗುವ ಫೈಬರ್ಗಳ ಸೇವನೆಯು ತೂಕ ನಷ್ಟಕ್ಕೆ ಸಂಬಂಧಿಸಿದೆ. 2. ನಿಂಬೆ ನೀರು ಮತ್ತು ಆರೋಗ್ಯಕ್ಕೆ ಡಿಟಾಕ್ಸ್ ಪರಿಣಾಮ ನಿಂಬೆ ನೀರಿನ ಡಿಟಾಕ್ಸ್ ಪ್ರಭಾವವು ಆಧಾರರಹಿತವಾಗಿದೆ. ಡಿಟಾಕ್ಸ್ ಆಹಾರಗಳು ಟಾಕ್ಸಿನ್ ಕ್ಲಿಯರೆನ್ಸ್‌ಗೆ ಸಹಾಯ ಮಾಡುವ ಜನಪ್ರಿಯ ಆಹಾರ ಪದ್ಧತಿಗಳಾಗಿವೆ. ಅಂಗಗಳು ಸ್ವಯಂ ಅಮಲೇರಿಸಬಹುದು ಮತ್ತು ಅವುಗಳನ್ನು ಶುಚಿಗೊಳಿಸುವುದು ಮುಖ್ಯ ಎಂಬ ಕಲ್ಪನೆಯನ್ನು ಅವು ಆಧರಿಸಿವೆ. 3. ನಿಂಬೆ ನೀರು ಮತ್ತು ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದ ಕಲ್ಲುಗಳಿಗೆ ನಿಂಬೆ ನೀರು…
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿರೋ ಚೀನಾ ಮೂಲದ ಮೊಬೈಲ್ ಕಂಪನಿ Xiaomi ವಿನೂತನ, ವಿಶಿಷ್ಟ ಫೀಚರ್ಗಳನ್ನು ಹೊಂದಿರುವ ಮೊಬೈಲ್ಗಳನ್ನು ಪರಿಚಯಿಸುತ್ತಲೇ ಬಂದಿದ್ದು, ಗ್ರಾಹಕ ಸ್ನೇಹಿಯಾಗಿ ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡ್ತಿದೆ. ಇದೀಗ ಈ ಸಂಸ್ಥೆ Xiaomi-Mi9 ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅತ್ತುತ್ತಮ ಕ್ಯಾಮರಾ, ಬ್ಯಾಟರಿ ಬ್ಯಾಕ್ಅಪ್, ಆಕರ್ಷಕ ಡಿಸ್ಪ್ಲೆಯನ್ನು ಹೊಂದಿದೆ. 6.13 ಇಂಚು ಡಿಸ್ಪ್ಲೇ ಹೊಂದಿರು ಈ ಮೊಬೈಲ್ ಸಖತ್ ಸ್ಟೈಲಿಶ್ ಆಗಿದೆ. ಕ್ಯಾಮರಾ ಮತ್ತು ಬ್ಯಾಟರಿ ವಿಚಾರಕ್ಕೆ ಬಂದ್ರೆ ಈ ಮೊಬೈಲ್ ಟ್ರಿಪಲ್ ರಿಯರ್ ಸೆನ್ಸಾರ್ ಹೊಂದಿದ್ದು ,48MP+12MP+16MP ಲೆನ್ಸಸ್ ಹೊಂದಿದೆ. ಹಾಗೂ 20MP ಫ್ರಂಟ್ ಕ್ಯಾಮರವನ್ನು ಇದೆ.́ ಉತ್ತಮವಾದ ಬ್ಯಾಟರಿ ಬ್ಯಾಕ್ಅಪ್ ಹೊಂದಿದ್ದು 3,300mAh ಇದೆ. ಕಡಿಮೆ ಅವಧಿಯಲ್ಲಿ ಬ್ಯಾಟರಿ ಚಾರ್ಜ್ ಮಾಡ್ಬಹುದು. ಮೊಬೈಲ್ನಲ್ಲಿ 128GB ಇನ್ಬಿಲ್ಟ್ ಸ್ಟೋರೆಜ್ ಇದೆ. 6GB RAM ಹೊಂದಿದೆ. ಡೀಪ್ ಗ್ರೇ, ಕಡುನೀಲಿ ಕಲರ್ಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಮೊಬೈಲ್ಗೆ ಆರಂಭಿಕ ದರ 31,790 ರೂ.
ಬೆಂಗಳೂರು:- ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಗುಂಪೊಂದು ಪುಂಡಾಟ ಮೆರೆದಿರುವಂತಹ ಘಟನೆ ಜರುಗಿದೆ. ಯುವಕರ ಭಯಕ್ಕೆ ಬೈಕ್ ಮೇಲೆ ಕಾರು ಚಲಾಯಿಸಿಕೊಂಡು ಚಾಲಕಿ ಹೋಗಿದ್ದಾಳೆ. ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ. ಓವರ್ ಟೇಕ್ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಯುವಕರಿಂದ ತಪ್ಪಿಸಿಕೊಳ್ಳಲು ಕಾರನ್ನು ಜೋರಾಗಿ ಓಡಿಸಿದ್ದಾಳೆ. ನಂತರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಿಡಿಗೇಡಿಗಳು, ಕಾರನ್ನು ಯುವಕರು ಅಡ್ಡಗಟ್ಟಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಘಟನೆ ಕಂಡುಬಂದಿದೆ.
ಮಾಲೆ: #BoycottMaldives ಅಭಿಯಾನ ಯಶಸ್ವಿಯಾಗಿದ್ದು EaseMyTrip ಮಾಲ್ಡೀವ್ಸ್ ಫ್ಲೈಟ್ ಬುಕ್ಕಿಂಗ್ ರದ್ದು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಕ್ಕೆ ಭಾರತೀಯ ನೆಟ್ಟಿಗರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ EaseMyTrip ಫ್ಲೈಟ್ ಬುಕ್ಕಿಂಗ್ ರದ್ದು ಮಾಡಿದೆ. ಭಾರತದ ಆನ್‌ಲೈನ್ ಟ್ರಾವೆಲ್ ಕಂಪನಿ EaseMyTrip ಸಿಇಒ ನಿಶಾಂತ್ ಪಿಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಭಾರತೀಯ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ (Maldives govt) ಅಮಾನುತು ಮಾಡಿದೆ. ಮೋದಿ ವಿರುದ್ಧ ಕೀಳು ಅಭಿರುಚಿಯುಳ್ಳ ಹೇಳಿಕೆ ನೀಡಿದ್ದ ಮಾರಿಯಂ ಶಿಯುನಾ, ಮಲ್ಲಾ ಷರೀಫ್ ಹಾಗೂ ಮಝೂಂ ಮಜೀದ್ ಅವರನ್ನು ಅಮಾನತು ಮಾಡಲಾಗಿದೆ. ಪ್ರಧಾನಿ ಮೋದಿ ಕುರಿತಾಗಿ ಎರಡು ದೇಶಗಳ ಮಧ್ಯೆ ಬಿಕಟ್ಟು ಸೃಷ್ಟಿಯಾಗಿತ್ತು. ಸ್ವತ: ಮಾಲ್ಡೀವ್ಸ್ ಜನರೇ ಸಚಿವರ…
ಟಾಲಿವುಡ್‌ನ ಸ್ಟಾರ್ ನಟ ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ಜೊತೆ ಹೊಸ ಸಿನಿಮಾಗಾಗಿ ಕೈ ಜೋಡಿಸಿರೋದು ಗೊತ್ತಿರುವ ವಿಚಾರ. ಇದೀಗ ಮಹೇಶ್ ಬಾಬು ಜೊತೆ ಡ್ಯುಯೇಟ್ ಹಾಡುವ ನಾಯಕಿ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ (Chelsea Elizabeth Islan) ಅವರನ್ನು ಮಹೇಶ್ ಬಾಬುಗೆ (Mahesh Babu) ನಾಯಕಿಯಾಗಿ ಚಿತ್ರತಂಡ ಫೈನಲ್ ಮಾಡಿದೆ ಮಹೇಶ್ ಬಾಬು- ರಾಜಮೌಳಿ (Rajamouli) ಕಾಂಬಿನೇಷನ್ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಚಿತ್ರಕ್ಕೆ ಬೇಕಾಗಿರೋ ಪಾತ್ರಧಾರಿಗಳ ಹುಡುಕಾಟ ಕೂಡ ನಡೆಯುತ್ತಿದೆ. ಸದ್ಯ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ನಾಯಕಿಯ ಆಯ್ಕೆ ಮಾಡಲಾಗಿದೆ. ನಟಿ ಚೆಲ್ಸಿಯಾ ಅವರನ್ನು ಕೆಲದಿನಗಳ ಹಿಂದೆ ಸ್ಕ್ರಿನ್ ಟೆಸ್ಟ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ. ಇಂಡೋನೇಷಿಯಾದ ಮೂಲದ ಈ ನಟಿ ‘ಟೇಂಟಂಗಾ ಮೆಸಾ ಗಿಟು’ ಹೆಸರಿನ ಟಿವಿ ಸರಣಿ ಮೂಲಕ ಜನಪ್ರಿಯತೆ ಗಳಿಸಿದವರು. ನಟ ಮಹೇಶ್ ಬಾಬುಗೆ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ನಾಯಕಿ ಎಂಬ…
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಪುತ್ರ ಮಾಸ್ಟರ್ ಪವನ್ ಬಸ್ರೂರು ಕ್ಲಿಕ್ ಸಿನಿಮಾ ಮೂಲಕ ಪರಿಪೂರ್ಣವಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಗಿರ್ಮಿಟ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ಪವನ್, ಕ್ಲಿಕ್ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ. ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ (Shashikiran) ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ಶರಣ್ಯ ಫಿಲ್ಮಂಸ್ ನಡಿ ಕ್ಲಿಕ್ (Click) ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪವನ್ ಜೊತೆ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಮ್ಮಲ್ಲಿ ಹೆಚ್ಚಿನ ಪಾಲು ಪೋಷಕರು ಮಕ್ಕಳು ಡಾಕ್ಟರ್-ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ…