Author: AIN Author

ಚಳಿಗಾಲದಲ್ಲಿ ಪಾದಗಳ ಊತವನ್ನು ಚಿಲ್ಬ್ಲೇನ್ಸ್ ಎಂದು ಕರೆಯಲಾಗುತ್ತದೆ. ಇದು ಒಂದು ಅಥವಾ ಇನ್ನೊಂದು ಸಮಯದಲ್ಲಿ ಪ್ರತಿಯೊಬ್ಬರೂ ಎದುರಿಸುವ ಸ್ಥಿತಿಯಾಗಿದೆ. ಈ ಸ್ಥಿತಿಯು ಯಾವುದೇ ವಯಸ್ಸಿನಲ್ಲಿ ಪರಿಣಾಮ ಬೀರಬಹುದು. ಇದು ಶೀತಕ್ಕೆ ತೀವ್ರವಾಗಿ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ. ಇದು ಕೆಂಪು, ಊತ, ಕಾಲ್ಬೆರಳುಗಳಲ್ಲಿ ನೋವು, ಬೆರಳುಗಳು ಇತ್ಯಾದಿಗಳಿಂದ ನಿರೂಪಿಸಲ್ಪಟ್ಟಿದೆ. ಹೊರಗಿನ ತಾಪಮಾನದಲ್ಲಿನ ಕೆಲವು ಬದಲಾವಣೆಗಳಿಗೆ ದೇಹವು ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ ಈ ಸ್ಥಿತಿಯು ಸಂಭವಿಸುತ್ತದೆ. ತಾಪಮಾನವು ಸಾಮಾನ್ಯವಾಗಿದ್ದಾಗ, ರಕ್ತನಾಳಗಳ ವಿಸ್ತರಣೆಯೊಂದಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಶೀತ ಪ್ರಚೋದನೆಯ ಮೇಲೆ, ರಕ್ತನಾಳಗಳ ಕಿರಿದಾಗುವಿಕೆಯೊಂದಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಊದಿಕೊಂಡ ಪಾದಗಳಿಗೆ ಟಾಪ್ 7 ನೈಸರ್ಗಿಕ ಸಲಹೆಗಳು ಸಾಸಿವೆ ಎಣ್ಣೆ – ಉಗುರು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಪೀಡಿತ ಕಾಲು ಅಥವಾ ಕಾಲ್ಬೆರಳುಗಳಿಗೆ ಅನ್ವಯಿಸಿ, 10-15 ನಿಮಿಷಗಳ ಕಾಲ ಬಿಡಿ ಮತ್ತು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಆಹಾರದಲ್ಲಿ ತ್ರಿಕಾಟು ಪುಡಿಯನ್ನು ಸೇರಿಸಿ – ತ್ರಿಕಟು ಮೂರು ಮಸಾಲೆಗಳ ಮಿಶ್ರಣವಾಗಿದೆ. ನೀವು ತ್ರಿಕಾಟು ಸ್ವಲ್ಪ…

Read More

ಬೆಂಗಳೂರು:- ಇಂಗ್ಲಿಷ್ ನಾಮಫಲಕ ವಿರೋಧಿಸಿ ಜೈಲು ಸೇರಿರುವ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಅವರು, ಇನ್ನೇನು ಕೆಲವೇ ನಿಮಿಷಗಳಲ್ಲಿ ಜೈಲಿನಿಂದ ರಿಲೀಸ್ ಆಗಲಿದ್ದಾರೆ. ಹೀಗಾಗಲೇ ಬೇಲ್ ಕಾಪಿ ಪರಿಶೀಲನೆ ಪ್ರಕ್ರಿಯೆಯನ್ನು ಜೈಲು ಅಧಿಕಾರಿಗಳು ಮುಗಿಸಿದ್ದಾರೆ. ಕರವೇ ನಾರಾಯಣ ಗೌಡ ಬಿಡುಗಡೆ ಹಿನ್ನೆಲೆ ಜೈಲು ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಹಂತದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೈಲು ಚೆಕ್ ಪೋಸ್ಟ್ ಐವತ್ತಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಗನಾಥಪುರ ಜಂಕ್ಷನ್ ಬಳಿ ಐವತ್ತಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಹೊಸರೋಡ್ ಜಂಕ್ಷನ್ ಬಳಿ ಮೂವತ್ತಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಜೈಲು ಮೇನ್ ಗೇಟ್ ಬಳಿ ಅಗ್ನೇಯ ವಿಭಾಗ ಡಿಸಿಪಿ ಬಾಬಾ ಸೇರಿದಂತೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮೂರು ಎಸಿಪಿ, ಆರು ಇನ್ಸ್ಪೆಕ್ಟರ್, ಹದಿನೈದು ಪಿಎಸ್ಐ ನಿಯೋಜನೆ ಮಾಡಲಾಗಿದೆ. ಒಟ್ಟು ಇನ್ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸರ ಸರ್ಪಗಾವಲಿನಲ್ಲಿ ಕರವೇ ನಾರಾಯಣ ಗೌಡ ಬಿಡುಗಡೆ ಮಾಡಲಾಗುತ್ತದೆ.

Read More

ರಾಯಚೂರು:- ಕಂಠಪೂರ್ತಿ ಕುಡಿದು ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನೇರವಾಗಿ ಮಾನ್ವಿ ಪೊಲೀಸ್ ಠಾಣೆಗೆ ಬಂದು ನೀಡಿದ ಕಾಟಕ್ಕೆ ಪೊಲೀಸರೇ ಸುಸ್ತಾಗಿದ್ದರು. ಊಟದ ಹೊತ್ತಲ್ಲಿ ಎಂಟ್ರಿ ಕೊಟ್ಟಿದ್ದ ಆತನ ಕಿರಿಕ್​ಗೆ ಖಾಕಿ ಪಡೆ ಏನ್ ಮಾಡಬೇಕು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಏಕಾಏಕಿ ಠಾಣೆಗೆ ಎಂಟ್ರಿ ಕೊಟ್ಟಿದ್ದ ನರಸಿಂಹ, ನನಗೆ ಹೆಂಡ್ತಿ ಬೇಕು, ಇಲ್ಲದಿದ್ದರೆ ಠಾಣೆ ಬಿಟ್ಟು ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅರೆಬರೆ ಬಟ್ಟೆ ಹಾಕಿಕೊಂಡು ತೇಲಾಡುತ್ತಿದ್ದಿದ್ದನ್ನ ನೋಡಿ ಈತ ಪಕ್ಕಾ ಕುಡುಕ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಆತನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೇಳಲಿಲ್ಲ. ಬಿಸಿಲು ನೆತ್ತಿ ಸುಡುತ್ತಿದ್ದರಿಂದ ಆತನಿಗೆ ಮದ್ಯದಮಲು ನೆತ್ತಿಗೇರಿತ್ತು. ಪೊಲೀಸರ ಮಾತು ಕೇಳದೇ ಇಂಗ್ಲಿಷ್​ನಲ್ಲಿ ಲೈಫ್​ ಲಾಂಗ್​ ಅಂತೆಲ್ಲಾ ಇಂಗ್ಲಿಷ್​ನಲ್ಲಿ ಡೈಲಾಗ್ ಹೊಡೆದಿದ್ದಾನೆ. ಬಳಿಕ ನಾನು ಸಾಯೋ ವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಅಲ್ಲಿದ್ದ ಕೆಲ ಸಾರ್ವಜನಿಕರು ಕೂಡ ಆತನನ್ನ ಮಾತನಾಡಿಸುವ ಪ್ರಯತ್ನ ಮಾಡಿರೂ…

Read More

ಕನ್ನಡದ ರಣವಿಕ್ರಮ, ಬೈರಾಗಿ(Bhairagi), ಹೊಂಗನಸು ಚಿತ್ರಗಳ ನಾಯಕಿ ಅಂಜಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಲೀಲಾರನ್ನ ಹೋಲಿಕೆ ಮಾಡಿದ್ದಕ್ಕೆ ಅಂಜಲಿ ಗರಂ ಆಗಿದ್ದಾರೆ. ಶ್ರೀಲೀಲಾ (Sreeleela) ವಿಚಾರಕ್ಕೆ ಅಂಜಲಿ ತಿರುಗೇಟು ನೀಡಿದ್ದಾರೆ ಸೌತ್ ನಟಿ ಅಂಜಲಿ(Anjali) ಅವರು ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪುವ ಮೂಲಕ ಟಾಕ್‌ನಲ್ಲಿದ್ದಾರೆ. ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ರಾಂಗ್ ಆಗಿದ್ದಾರೆ. ಶ್ರೀಲೀಲಾ ಮತ್ತು ಅವರ ಸಿನಿಮಾ ಕೆರಿಯರ್ ಸಂಬಂಧಿಸಿದ ಕೆಲ ಪ್ರಶ್ನೆಗಳು ಅಂಜಲಿಗೆ ಕೇಳಲಾಗಿದೆ. ಈ ವೇಳೆ, ನಟಿ ಗರಂ ಆಗಿದ್ದಾರೆ. ನಾನು ನಿಮ್ಮ ಅಭಿಮಾನಿ, ತೆಲುಗಿನ ಹುಡುಗಿ ಎಂಬ ಕಾರಣಕ್ಕೆ ನಿಮಗೆ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂದು ಎಂದಾದರೂ ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕೊಂಚ ಖಾರವಾಗಿಯೇ ಅಂಜಲಿ ಉತ್ತರಿಸಿದ್ದಾರೆ. ನನಗೆ ಬ್ರೇಕ್ ಸಿಗದೇ ಇದ್ದರೆ ನೀವು ಹೇಗೆ ನನಗೆ ಅಭಿಮಾನಿ ಆಗುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. ತೆಲುಗಿನಲ್ಲಿ ನಾನು ಸಿನಿಮಾಗಳನ್ನು ಮಾಡದೇ ಇರಬಹುದು, ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದರು. ಪತ್ರಕರ್ತೆಯೊಬ್ಬರು ಮಾತು ಮುಂದುವರೆಸಿ ಶ್ರೀಲೀಲಾ (Sreeleela)…

Read More

ಧಾರವಾಡ: “ಬಿಕೆ ಹರಿಪ್ರಸಾದ್‌ಗೆ ಮಂತ್ರಿಗಿರಿ ಸಿಕ್ಕಿಲ್ಲ ಅಂತಾ ಏನೇನೋ ಮಾತಾಡುತ್ತಿದ್ದಾರೆ. ಇದೇ ರೀತಿ ಮಾತಾಡಿದರೆ ಶಾಶ್ವತವಾಗಿ ಮಂತ್ರಿಗಿರಿ ಸಿಗೋಲ್ಲ. ನೀವು ರಾಮನ ಸೇವೆ ಮಾಡಿದರೆ ಮಂತ್ರಿಗಿರಿ ನಿಜವಾಗಿಯು ಸಿಗುತ್ತೆ. ರಾಮನ ವಿರೋಧಿ ಭಾವನೆ ವ್ಯಕ್ತಪಡಿಸಬೇಡಿ ” ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರು ವಿಧಾನಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್ ಅವರಿಗೆ ಸಲಹೆ ನೀಡಿದ್ದಾರೆ. ಬಿ.ಕೆ. ಹರಿಪ್ರಸಾದ ಹೇಳಿಕೆ ವಿಚಾರ ಕುರಿತು ಹುಬ್ಬಳ್ಳಿಯಲ್ಲಿ ಪ್ರಮೋದ್‌ ಮುತಾಲಿಕ್‌ ಮಾತನಾಡಿದರು. ” ಕಾಂಗ್ರೆಸ್‌ನವರು ಒಟ್ಟಾರೆ ಹತಾಶರಾಗಿದ್ದಾರೆ. ಈ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಹಿಂದೂರಾಷ್ಟ್ರ ಮಾಡಲು ಪುನಿತ್‌ನಂಥವರಿಗೆ ಫತ್ವಾ ಕೊಡಲಾಗಿದೆ ಅನ್ನೋ ಹೇಳಿಕೆ ಕೊಡುತ್ತಿದ್ದಾರೆ. ಅವರ ಹೇಳಿಕೆ ವಿಚಿತ್ರವಾಗಿದೆ, ಅವರಿಗೆ ದೇಶದ ಹಿಂದೂಗಳ ಶಾಪ ತಟ್ಟುತ್ತದೆ ” ಎಂದು ಮುತಾಲಿಕ್‌ ಕಿಡಿಕಾರಿದರು. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ‘ಕಾಂಗ್ರೆಸ್ ನವರಿಗೆ ರಾಮ ಶಕ್ತಿ, ರಾಮ ಭಕ್ತಿ ತಡೆದುಕೊಳ್ಳಲು ಆಗುತ್ತಿಲ್ಲ. ದಿನೇ ದಿನೇ ಉತ್ಸಾಹದ ವಾತಾವರಣ ಎಲ್ಲೆಡೆ ಹಬ್ಬುತ್ತಿದೆ. ಇದೀಗ ಕಾಂಗ್ರೆಸ್‌ನವರಿಗೆ ಮೈ ಪರಚಿಕೊಳ್ಳುವಂತಾಗಿದೆ” ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್…

Read More

ಕಲಬುರಗಿ: ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಜನೆವರಿ 22 ರಂದು ಪ್ರಭು ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು,ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಮಹಾ ಸಂಸ್ಥಾನಕ್ಕೆ ಆಹ್ವಾನ ನೀಡಲಾಗಿದೆ. ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿಯಾಗಿರುವ ಬಸವರಾಜ ದೇಶಮುಖ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ವಿಭಾಗದ ಪ್ರಮುಖರಾದ ಕೃಷ್ಣ ಜೋಶಿ ಆಹ್ವಾನ ಪತ್ತಿಕೆ ನೀಡಿ ಆಮಂತ್ರಿಸಿದರು.

Read More

ಬೆಂಗಳೂರು:-ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್​ಪಿ ಶಾಂತಕುಮಾರ್ ಮತ್ತು ಅವರ ಕುಟುಂಬಸ್ಥರ ವಿರುದ್ಧ FIR ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ ಆರೋಪ ಸಂಬಂಧ ವಿದ್ಯಾ ಅವರು ನೀಡಿದ ದೂರಿನ ಅನ್ವಯ FIR ದಾಖಲಾಗಿದೆ. ಡಿವೈಎಸ್​ಪಿ ಶಾಂತಕುಮಾರ್, ಪತ್ನಿ ಲಕ್ಷ್ಮಿಕಾಂತ, ಮಕ್ಕಳಾದ ಮಹೇಶ್ ಹಾಗೂ ಸಾಯಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾವೇರಿ ಪೊಲೀಸ್ ಸಂಕೀರ್ಣದಲ್ಲಿ ವಾಸವಿರುವ ವಿದ್ಯಾ ಅವರು ಜನವರಿ 7 ರಂದು ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದ ವೇಳೆ ಆವರಣದಲ್ಲಿ ತೆಂಗಿನ ಕಾಯಿ, ನಿಂಬೆ ಹಣ್ಣು, ಬೂದು ಕುಂಬಳಕಾಯಿ ಒಡೆದು ಹಾಕಲಾಗಿತ್ತು. ಇದನ್ನು ನೋಡಿದ ವಿದ್ಯಾ ಅವರು ಕಸ ಗುಡಿಸುವವರ ಬಳಿ ಕ್ಲೀನ್ ಮಾಡುವಂತೆ ಹೇಳಿದಾಗ ಲಕ್ಷ್ಮಿಕಾಂತ ಅವರು ವಿನಾಕಾರಣ ಜಗಳ ತೆಗೆದಿದ್ದಾರೆ. ಈ ವೇಳೆ ಪತ್ನಿಯ ಸಹಾಯಕ್ಕೆ ಶಾಂತಕುಮಾರ್ ಹಾಗೂ ಮಕ್ಕಳು ಆಗಮಿಸಿದ್ದಾರೆ. ಬಳಿಕ ವಿದ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

Read More

ಪುಷ್ಪ ಸಿನಿಮಾದ ‘ವೂಂ ಅಂಟಾವ ಮಾವ..’ ಹಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡೇ ಪಷ್ಪ ಸಿನಿಮಾಗೆ ಜನರನ್ನೂ ಕರೆತಂದಿದ್ದು. ಸೋಷಿಯಲ್ ಮೀಡಿಯಾದಲ್ಲಂತೂ ಕೋಟ್ಯಂತರ ಜನರು ರೀಲ್ಸ್ ಮಾಡಿದ್ದರು. ಈ ಹಾಡಿಗೆ ಸಮಂತಾ (Samantha) ಸಖತ್ತಾಗಿಯೇ ಸೊಂಟ ಬಳುಕಿಸಿದ್ದರು. ಈ ಯಶಸ್ಸನ್ನು ಮತ್ತೊಂದು ಬಾರಿ ಬಳಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಪುಷ್ಪ 2  (Pushpa 2, ) ಸಿನಿಮಾದಲ್ಲೂ ಐಟಂ ಸಾಂಗ್ (Item Song) ವೊಂದಿದ್ದು, ಅದಕ್ಕೆ ಸಮಂತಾ ಅವರೇ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹಿಂದೆ ಸುದ್ದಿ ಆಗಿತ್ತು. ಆದರೆ, ಸಮಂತಾ ಬದಲು ಮತ್ತೋರ್ವ ನಟಿಯನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆಯಂತೆ. ಸಮಂತಾ ಅವರೇ ಡಾನ್ಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿದ್ದರೂ, ಇದೀಗ ಬಾಲಿವುಡ್ ನಟಿ ದಿಶಾ ಪಠಾನಿ (Disha Pathani) ಹೆಸರು ಕೇಳಿ ಬಂದಿದೆ. ಸಮಂತಾ ಅವರ ಅನಾರೋಗ್ಯದ ಕಾರಣದಿಂದಾಗಿ ಈ ನಿರ್ಧಾರ ತಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಚಿತ್ರತಂಡ ಈ ಕುರಿತು ಹೇಳಿಕೊಳ್ಳಬೇಕಿದೆ. ನಿರ್ದೇಶಕ…

Read More

ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಮೈಕಲ್ ಅಜಯ್ (Michael). ಹುಟ್ಟಿದ ಮನೆಗೆ ವಾಪಸ್ಸಾಗಿರುವ ಮೈಕಲ್ ತನ್ನ ಜರ್ನಿ ಮತ್ತು ಬಿಗ್ ಬಾಸ್ ಮನೆಯ ಟಾಪ್ 5 ಕಂಟೆಸ್ಟೆಂಟ್ ಗಳ ಬಗ್ಗೆ ಮಾತನಾಡಿದ್ದಾರೆ. ಯಾಕೆ ಅವರು ಟಾಪ್ ಅನ್ನುವ ವಿಚಾರವನ್ನೂ ಹಂಚಿಕೊಂಡಿದ್ದಾರೆ. ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್ ಸಂಗೀತಾ, ತುಕಾಲಿ ಮತ್ತು ಪ್ರತಾಪ್ ಇವರು ಕೊನೆಯ ಹಂತದಲ್ಲಿರುತ್ತಾರೆ. ಸಂಗೀತಾ ವಿನ್ ಆಗಬಹುದು ಅಂತ ನನಗನಿಸುತ್ತದೆ.  ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು. ಯಾಕೆಂದರೆ, ಅವಳು ಲೌಡ್ ಆಗಿದ್ದಾಳೆ. ಅದರೆ ಅವಳ ಗೇಮ್ ತುಂಬ ಸ್ಲೋ ಆಗಿ ಹೋಗುತ್ತಿದೆ. ಜಿಯೊ ಫನ್ ಫ್ರೈಡೆ ಟಾಸ್ಕ್‌ಗಳು ನನಗೆ ಯಾವಾಗಲೂ ಇಷ್ಟ. ಚೆನ್ನಗಿರುತ್ತಿದ್ದವು. ಫ್ರೈಡೆ ಮಾಡಲಿಕ್ಕೆ ಹೆಚ್ಚೇನೂ ಇರುತ್ತಿರಲಿಲ್ಲ. ಹಾಗಾಗಿ ಫನ್ ಫ್ರೈಡೆಗಾಗಿ ನಾವೆಲ್ಲ ಕಾಯುತ್ತಿದ್ದೆವು. ಅದೇ ದೊಡ್ಡ ಎಂಟರ್‍ಟೈನ್ಮೆಂಟ್‌. ಯಾವಾಗಲೂ ಒಂದು ಎಂಟರ್‍ಟೈನಿಂಗ್ ಟಾಸ್ಕ್‌ ಆಗಿರುತ್ತಿತ್ತು. ನನಗೆ ತುಂಬ ದಿನಗಳವರೆಗೆ ಒಂದು ಫೀಲಿಂಗ್ ಇತ್ತು,…

Read More

ಬೆಂಗಳೂರು:- ನಮ್ಮ ಮೆಟ್ರೋದಲ್ಲಿ ಸಾಲು ಸಾಲು ಅವಘಡಗಳು ಆಗುತ್ತಿರುವುದು ಬಿಎಂಆರ್​ಸಿಎಲ್ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಇದಕ್ಕೆಲ್ಲ ಕಡಿವಾಣ ಹಾಕಲು ಬಿಎಂಆರ್​ಸಿಎಲ್ ಮಾಸ್ಟರ್ ಪ್ಲಾನ್ ಮಾಡಿದೆ. ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ‌ ನಿರ್ಮಾಣಕ್ಕೆ ಪ್ಲಾನ್ ಮಾಡ್ತಿದೆ. ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಈಗಾಗಲೇ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ಅಳವಡಿಕೆ ಮಾಡುವ ಕೆಲಸ ಬಿಎಂಆರ್​ಸಿಎಲ್ ಮಾಡ್ತಿದೆ. ಇನ್ಫೋಸಿಸ್‌ ಫೌಂಡೇಶನ್‌ ಅನುದಾನದೊಂದಿಗೆ ಈ ಕಾಮಗಾರಿ ನಡೆಯುತ್ತಿದೆ. ಇದೇ ರೀತಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 63 ಮೆಟ್ರೋ ನಿಲ್ದಾಣದಲ್ಲಿ ಪಿಎಸ್ ಡಿ ಅಳಡಿಕೆಗೆ ಯೋಜನೆ ಸಿದ್ಧಪಡಿಸ್ತಿದೆ. ಮೊದಲ ಹಂತದಲ್ಲಿ ಕೊಟ್ಟಿಗೆರೆ ಟೂ ನಾಗವಾರ ಮೆಟ್ರೋ ಮಾರ್ಗದಲ್ಲಿ ಬರುವ ಡೈರಿ ಸರ್ಕಲ್ ನಿಂದ ಆರಂಭವಾಗುವ ಎಲ್ಲಾ ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ ಗಳಲ್ಲೂ ಈ ಪಿಎಸ್ ಡೋರ್ ಅಳವಡಿಸಲು ಮುಂದಾಗುತ್ತೀವಿ. ಎಲ್ಲಾ ಮೆಟ್ರೋ ಸ್ಟೇಷನ್ ಗಳಲ್ಲೂ ಪಿಎಸ್ಡಿ ಅಳವಡಿಸಲು…

Read More