ತುಮಕೂರು:- ಅಂಗನವಾಡಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಾಮಾಗ್ರಿ ಕಳವಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಅಂಗನವಾಡಿಯಲ್ಲಿ 2 ಸಿಲಿಂಡರ್ ಕಳವಾಗಿದ್ದು, ಶಾಲೆಯ ಬೀಗ ಹೊಡೆದು 50 ಕೆಜಿ ತೂಕದ 23 ಚೀಲ ಅಕ್ಕಿ ಮೂಟೆ ಕಳ್ಳತನವಾಗಿದೆ 50 ಕೆಜಿ ತೂಕದ 5 ಚೀಲ ತೊಗರಿ ಬೆಳೆ,165 ಕೆಜಿ ಗೋಧಿ ಕಳವಾಗಿದ್ದು, ಅಂಗನವಾಡಿ ಹಾಗೂ ಶಾಲೆಯ ಬೀಗ ಮುರಿದು ಕಳ್ಳರು ಕೃತ್ಯ ನಡೆಸಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Author: AIN Author
ಬೆಳಗಾವಿ: 500 ವರ್ಷದ ಕೆಳಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ರು, ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿ ಬಾಬ್ರಿ ಮಸೀದಿ ಅಂದ್ರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೆಯುತ್ತೇನೆ ಎಂದು ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ. ಅಲ್ಲಿರುವ ಮಸೀದಿಗಳು ಧ್ವಂಸ ಆಗುತ್ತೆ ದೇವಸ್ಥಾನ ತಲೆ ಎತ್ತುತ್ತೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಂಮರು ನೀವಾಗಿ ನೀವೆ ಕಿತ್ತು ಹಾಕಿ. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕ್ತಿವಿ ಎಂದು ಎಚ್ಚರಿಕೆ ನೀಡಿದರು. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಸಿದ್ದರಾಮಯ್ಯ ನಾವು ಜಾತ್ಯಾತೀತವಾದಿಗಳು ಅಂತಾರೆ. ನಾವು ನಿಮಗಿಂತ ಜಾತ್ಯಾತೀತವಾದಿಗಳು. ಹಿಂದೂ ಮುಸ್ಲಿಂ ಅನ್ಯೋನ್ಯವಾಗಿರಬೇಕು ಎನ್ನುವವರು ನಾವು. ನೀವು ನಮಾಜ್ ಮಾಡ್ಕೊಳ್ಳಿ ನಾವು ಅದರ ಗೊಡವೆಗೆ…
ಬೆಂಗಳೂರು:- ಇಂಗ್ಲಿಷ್ ನಾಮಫಲಕ ವಿರೋಧಿಸಿ ಜೈಲು ಸೇರಿ ಇದೀಗ ಬಿಡುಗಡೆಯಾಗುತ್ತಿದ್ದಂತೆ ಕರವೇ ನಾರಾಯಣಗೌಡ ಮತ್ತೆ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರಿಗೆ ಜಾಮೀನು ಮಂಜೂರು ಆದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾಗಿದ್ದಾರೆ. ನಾರಯಣಗೌಡ ಅವರು ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಇದೀಗ ಮಾರ್ಥಾಸ್ ಆಸ್ಪತ್ರೆಯಲ್ಲಿ ನಾರಾಯಣಗೌಡ ಅವರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. 2017ರ ಹಳೇ ಕೇಸ್ ಸಂಬಂಧ ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು:- ಲೋಕಾಯುಕ್ತ ಅಧಿಕಾರಿಗಳು ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳು ಒಟ್ಟು ಏಳು ಕಡೆ ದಾಳಿ ಮಾಡಿದ್ದು, ಹಲವು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಶೋಧ ಕಾರ್ಯ ಮಾಡಿದ್ದಾರೆ. ಬಳ್ಳಾರಿಯ ಐದು ಹಾಗೂ ಬೆಂಗಳೂರಿನ ಎರಡು ಕಡೆ ಶೋಧ ನಡೆಸಿದ್ದಾರೆ. ಕುಂದಣ ಪಿಡಿಒ ಪದ್ಮನಾಬ್ ಅವರಿಗೆ ಸೇರಿದ ಮೂರು ಮನೆ ಮೆನಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದರೆ. ಜೊತೆಗೆ ದಾಬಸ್ಪೇಟೆ ಹಾಗೂ ತುಮಕೂರಿನಲ್ಲಿ ಸಹ ಪದ್ಮನಾಬ್ಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿಬಂದಿದೆ. ಈ ಅಕ್ರಮ ಹಣದಲ್ಲಿ ಪೆಟ್ರೋಲ್ ಬಂಕ್, ಮನೆ, ಜಮೀನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ನಾಗರಾಜ್ 7.50…
ಮೈಸೂರು: ಬಿ.ಕೆ ಹರಿಪ್ರಸಾದ್ ಅವ್ರನ್ನು ಒಳಗೆ ಹಾಕಬೇಕು. ಮಂಪರು ಪರೀಕ್ಷೆ ಮಾಡಬೇಕು. ಈ ನಿರ್ಧಾರವನ್ನು ಮುಖ್ಯಮಂತ್ರಿಗಳು ತಕ್ಷಣ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಗೋಧ್ರಾ ಮಾದರಿ ದುರಂತ ದೇಶದಲ್ಲಿ ಮತ್ತೊಮ್ಮೆ ದೇಶದಲ್ಲಿ ಘಟಿಸಬಹುದು ಎಂಬ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸಚಿವರ ಹೇಳಿಕೆಗಳು, ಶಾಸಕರ ಹೇಳಿಕೆಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ ಅಂತ ಆರೋಪಿಸಿದರು. ಹಿಂದೂ ಕಾರ್ಯಕರ್ತರನ್ನ ಬೆದರಿಸುವ ಕೆಲಸವನ್ನ ಕಾಂಗ್ರೆಸ್ ಪಕ್ಷ ಮಾಡ್ತಿದೆ. ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನ ಓಲೈಸುವ ಕೆಲಸ ಮಾಡ್ತಿದೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ . ಹಿಂದೂ ಕಾರ್ಯಕರ್ತರನ್ನ ಬಂಧಿಸೋದು. ಯಾರೋ ಪೊಲೀಸ್ ಸ್ಟೇಷನ್‌ಗೆ ಬೆಂಕಿ ಇಟ್ಟವರನ್ನ ಅಮಾಯಕರು ಅನ್ನೋದು. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ. ಇದನ್ನ ನಾವು ಖಂಡಿಸುತ್ತೇವೆ. ಬಿಜೆಪಿ ಸದಾ ಹಿಂದೂ ಪರ ನಿಲ್ಲುತ್ತದೆ.…
ಬೆಂಗಳೂರು:- ಸಾರ್ವಜನಿಕ ಸ್ಥಳದಲ್ಲೆ ಯುವತಿ ಎದುರಿಗೆ ವ್ಯಕ್ತಿಯೊಬ್ಬನಿಂದ ಹಸ್ತ ಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ ಘಟನೆ ಜರುಗಿದೆ. ಯುವತಿಯೋರ್ವರು ಕಾರನ್ನ ಪಾರ್ಕ್ ಮಾಡಿ ಕಾರಿನಲ್ಲಿ ಕುಳಿತುಕೊಂಡಿದ್ದರು. ಅ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಹಸ್ತಮೈಥುನ ಮತ್ತು ಅಸಭ್ಯ ವರ್ತನೆ ಮಾಡಿದ್ದಾನೆ. ಅದನ್ನ ನೋಡಿ ಹೆದರಿಕೆಯಿಂದ ಯುವತಿ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾನೆ. ಅನಂತರ ಕಾರಿನ ಬಳಿ ಬಂದು ಕಾರಿನ ಸುತ್ತಲ ಓಡಾಡಿದ್ದಾನೆ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನ ನೋಡಿದ್ದಾನೆ. ಹೆದರಿಕೆಯಿಂದ ಅತನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸ್ಟಿಯರಿಂಗ್ ಕೆಳಗೆ ಯುವತಿ ಅರಿತುಕೊಂಡಿದ್ದಾಳೆ. ಅಕೆಯ ಸ್ನೇಹತರೊಬ್ಬರು ಬಂದ ನಂತರ ಕಾರಿನಿಂದ ಯುವತಿ ಕೆಳಗಿಳಿದ್ದಾಳೆ. ಟ್ವೀಟ್ ನಲ್ಲಿ ತಾನು ಅನುಭವಿಸಿದ ಸಮಸ್ಯೆ ಬಗ್ಗೆ ಯುವತಿ ಬರೆದು ಕೊಂಡಿದ್ದಾರೆ. ಜನವರಿ 5 ನೇ ತಾರಿಖಿನಂದು ನಡೆದಿರುವ ಘಟನೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮಹಾದೇವಪುರ ಪೊಲೀಸ್ ಠಾಣೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಮಂಡ್ಯ :- ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರಿನ ಮೇರೆಗೆ ಮಂಗಳವಾರ ಬೆಳಿಗ್ಗೆ ಬಿಬಿಎಂಪಿ ಪಾಲಿಕೆ ಅಧಿಕಾರಿ ಮಂಜು ಎಂಬುವವರ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮಂಜು ಎಂಬುವವರ ಸಂಬಂಧಿ, ಹಲಗೂರು ಗ್ರಾ.ಪಂ ಸದಸ್ಯ ಸುರೇಂದ್ರ ಎಂಬುವವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದ ಜೆಪಿಎಂ ಬಡಾವಣೆಯ ಸುರೇಂದ್ರ ಅವರ ಮನೆ ಸ್ವಗ್ರಾಮ ಗುಂಡಾಪುರದ ಮನೆ ಹಾಗೂ ಮದ್ದೂರು ತಾಲೂಕಿನ ಎಸ್.ಐ.ಹೊನ್ನಲಗೆರೆಯ ತಾತನ ಮನೆ, ಅಗಸನಪುರದ ತೋಟದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ವರದಿ : ಗಿರೀಶ್ ರಾಜ್, ಮಂಡ್ಯ
ನೆಲಮಂಗಲ: ಪರಿಚಿತ ಮಹಿಳೆಯೊಬ್ಬರು ಕುಡಿದು ರಸ್ತೆಯ ಮಧ್ಯದಲ್ಲಿ ಮಲಗಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಿದ ಮಾನವೀಯತೆ ಮೆರೆದಿದ್ದಾರೆ. ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಉರುಳಾಡುತ್ತಿದ್ದ. ಸಲ್ಪ ಯಾಮಾರಿದ್ರು ವಾಹನಗಳ ಚಕ್ರಕ್ಕೆ ಸಿಲುಕುತಿದ್ದ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದ ಘಟನೆ ಜರುಗಿದೆ. ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡದೆ ಸಾರ್ವಜನಿಕ ಯರು ತೆರಳುತ್ತಿದ್ದರು. ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆ ಮಾನವೀಯತೆಯಿಂದ ಸ್ಕೂಟರ್ ನಿಲ್ಲಿಸಿ ವ್ಯಕ್ತಿಯನ್ನ ಪಾರು ಮಾಡಿದ್ದಾರೆ. ಸಿಸಿಟಿವಿ ಹಾಗೂ ಸ್ಥಳೀಯ ವ್ಯಕ್ತಿಯ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ. ನೆರವು ಮಾಡಿದ ಅಪರಿಚಿತ ಮಹಿಳೆ, ಆ ವ್ಯಕ್ತಿ ಕೂಡ ಅಪರಿಚಿತ ಎನ್ನಲಾಗಿದ್ದು, ಮಾನವೀಯತೆಗೆ ಸಾಕ್ಷಿಯಾದ ಮಹಿಳೆಗೆ ಸಲಾಂ ಹೇಳಬಹುದಾಗಿದೆ.
ಅಯೋಧ್ಯೆ: ಶ್ರೀರಾಮಮಂದಿರ (Shri Ram Mandir) ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ದೇಶ-ವಿದೇಶಗಳಿಂದ ಭಕ್ತರು ಹಲವು ರೀತಿಯಲ್ಲಿ ಉಡುಗೊರೆಗಳನ್ನು ಅಯೋಧ್ಯೆಗೆ ತಲುಪಿಸುತ್ತಿದ್ದಾರೆ. ಆದ್ರೆ ಗುಜರಾತ್‌ನ (Gujarat) ನವಸಾರಿ ನಗರದ ಕಲಾವಿನೊಬ್ಬ ಸಾವಿರಾರು ರಾಮಭಕ್ತರಿಗೆ ಉಚಿತವಾಗಿ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾಗಿದ್ದಾನೆ. ಕಲಾವಿದ (Gujarat Tattooist) ಜಯ್ ಸೋನಿ ಗುಜರಾತ್‌ನಲ್ಲಿ ರಾಮನ ಭಕ್ತರಿಗೆ ಉಚಿತವಾಗಿ ಶ್ರೀರಾಮನ ಹೆಸರನ್ನು ಹಚ್ಚೆಹಾಕಲು ಮುಂದಾಗಿದ್ದಾನೆ. ಈಗಾಗಲೇ ಅಭಿಯಾನ ಶುರು ಮಾಡಿದ್ದು 200 ಭಕ್ತರ ಕೈಯಲ್ಲಿ ʻಶ್ರೀರಾಮʼನ ಹೆಸರನ್ನು ಹಚ್ಚೆಹಾಕಿದ್ದಾನೆ, ಇನ್ನೂ 700 ಮಂದಿಗೆ ಮುಂಗಡವಾಗಿ ಕಾಯ್ದಿರಿಸಿದ್ದಾನೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗುವ ವೇಳೆಗೆ ಕನಿಷ್ಠ 1,000 ಮಂದಿಗೆ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆ ಸಲ್ಲಿಸಲು ಮುಂದಾಗಿದ್ದಾನೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದಾಗ ನನ್ನ ಕಡೆಯಿಂದ ಏನು ಸೇವೆ ಮಾಡಬಹುದೆಂದು ನಾನು ಯೋಚಿಸುತ್ತಿದ್ದೆ. ಟ್ಯಾಟೂ ಕಲಾವಿದನಾಗಿರುವುದರಿಂದ, ಭಕ್ತರಿಗೆ ಭಗವಾನ್ ಶ್ರೀರಾಮನ ಹೆಸರನ್ನೇ ಉಚಿತವಾಗಿ ಹಚ್ಚೆ ಹಾಕಬೇಕೆಂದು ನಿರ್ಧರಿಸಿದೆ ಎಂಬುದಾಗಿ ಕಲಾವಿದ ಹೇಳಿಕೊಂಡಿದ್ದಾನೆ. ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಉದ್ಘಾಟನೆ…
20 ರಾಷ್ಟ್ರಗಳ ನಡುವೆ ನಡೆಯಲಿರುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಐರ್ಲೆಂಡ್, ಅಮೆರಿಕ ಮತ್ತು ಕೆನಡಾ ತಂಡಗಳಿರುವ ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ 2022 ಸಾಲಿನ ಚಾಂಪಿಯನ್ಸ್ ಇಂಗ್ಲೆಂಡ್ ತಂಡ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲುವನ್ನು ಎದುರು ನೋಡುತ್ತಿದ್ದು, ಆಸ್ಟ್ರೇಲಿಯಾ, ನಮಿಬಿಯಾ, ಸ್ಕಾಟ್ಲೆಂಡ್ ಮತ್ತು ಒಮಾನ್ ಇರುವ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿದೆ. ‘ಸಿ’ ಪಿನಲ್ಲಿ ಆತಿಥೇಯ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಅಫಘಾನಿಸ್ತಾನಮ ಉಗಾಂಡ ಮತ್ತು ಪಪುವಾ ನ್ಯೂಗಿನಿ ತಂಡಗಳಿವೆ. ‘ಡಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ. ಜೂನ್ 1ರಂದು ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಜಂಟಿ ಆತಿಥ್ಯ ರಾಷ್ಟ್ರವಾದ ಅಮೆರಿಕ ಮತ್ತು ಕೆನಡಾ ತಂಡಗಳು ಕಾದಾಟ ನಡೆಸಲಿವೆ. 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಬರೋಬ್ಬರಿ 20 ತಂಡಗಳು ಪೈಪೋಟಿ ನಡೆಸಲಿವೆ. ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ತಲಾ…