Author: AIN Author

ಗದಗ:- ಅಯೋಧ್ಯೆ ರಾಮ ಮಂದಿರದ ಫೋಟೋ ತಿರುಚಿ ಪೋಸ್ಟ್ ಮಾಡಿದ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ​ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್‌ ದಫೇದಾ‌ರ್ ಎಂಬ ಯುವಕನೊಬ್ಬ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭದಲ್ಲಿ ಇಂತಹ ಘಟನೆ ನಡೆದಿದೆ. ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರ ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಲಾಗಿದೆ. ಸುದ್ಧಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ಹೊರ ಹಾಕಿದ್ದು ಗಜೇಂದ್ರಗಡ ಪೊಲೀಸರು ತಾಜುದ್ದೀನ್‌ ದಫೇದಾ‌ರ್ ಎಂಬಾತನನ್ನು ಬಂಧಿಸಿದ್ದಾರೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿ ಪೊಲೀಸ್ ಠಾಣೆಗೆ ದೌಡಾಯಿಸಿ ಯುವಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Read More

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಹಿಂದೂಗಳ ಬಹುವರ್ಷಗಳ ಕನಸಿಗೆ ಕೆಲವೇ ಕೆಲವು ಗಂಟೆ ಬಾಕಿ ಉಳಿದಿದೆ. ಪ್ರತಿ ಮನೆ..ಮನೆಯಲ್ಲಿಯೂ ಜಯ ಶ್ರೀ ರಾಮನ ನಾಮ ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಲಾವಿದನೋರ್ವ ಮಗಳ ಕೆನ್ನೆಯ ಮೇಲೆಯೇ ಶ್ರೀರಾಮನ ಚಿತ್ರ ಬಿಡಿಸಿದ್ದಾರೆ. ಕಲಾವಿದ ಯಲ್ಲಪ್ಪ ವೈ‌.ಕುಂಬಾರ ಕಲೆಗೆ ಜನ್ರು ಫಿದಾ ಆಗಿದ್ದಾರೆ. ಶ್ರೀರಾಮನ ಆಗಮನವನ್ನು ನಮ್ಮ‌ಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕಲಾವಿದ ಹೇಳಿದ್ದಾರೆ.

Read More

ಬೆಂಗಳೂರು:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಟಾಪನೆಗೆ ಶುಭ ಹಾರೈಕೆ ತಿಳಿಸಿದ್ದಾರೆ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ರಾಮರಾಜ್ಯದ ನಿರ್ಮಾಣ, ನಮ್ಮ ಕನಸು. ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರಂಟಿಗಳು ಇಂದು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.

Read More

ರಾಮಲಾಲ ಪ್ರಾಣ ಪ್ರತಿಷ್ಠಾಕ್ಕಾಗಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಅಯೋಧ್ಯೆಗೆ ತಲುಪಿದ್ದಾರೆ. ವಿರಾಟ್ ಜೊತೆಗೆ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಆರ್ ಅಶ್ವಿನ್, ಹರ್ಮನ್‌ಪ್ರೀತ್ ಕೌರ್ ಮತ್ತು ಮಿಥಾಲಿ ರಾಜ್ ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೊಹ್ಲಿಗೆ ಬಿಸಿಸಿಐ ಒಂದು ದಿನದ ರಜೆ ಕೂಡ ನೀಡಿದೆ. ರೋಹಿತ್ ಶರ್ಮಾ ಸದ್ಯ ಮುಂಬೈನಲ್ಲಿದ್ದು, ಇವರು ಆಗಮಿಸುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಅನುಭವಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ದೇವಾಲಯದ ಉದ್ಘಾಟನೆಗೆ ಅಯೋಧ್ಯೆ ತಲುಪಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ರವೀಂದ್ರ ಜಡೇಜಾ ಅಯೋಧ್ಯೆಗೆ ತಲುಪಿದ್ದಾರೆ ಎಂದು ವರದಿಗಳು ಹೇಳಿವೆ.

Read More

ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ ಸ್ತನದ ಕ್ಯಾನ್ಸರ್‌ ಆರಂಭಿಕ ಹಂತಗಳಲ್ಲಿ ಗಮನಾರ್ಹ ಲಕ್ಷಣಗಳನ್ನು ಪ್ರಕಟಿಸದೆ ಇರಬಹುದು. ಹೀಗಾಗಿ ಮ್ಯಾಮೊಗ್ರಾಮ್‌ ನಂತಹ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಶೀಘ್ರವಾಗಿ ಈ ರೋಗವನ್ನು ಪತ್ತೆಹಚ್ಚುವುದಕ್ಕೆ ನಿರ್ಣಾಯಕವಾಗಿವೆ; ಯಾಕೆಂದರೆ ಲಕ್ಷಣಗಳು ಗಮನಕ್ಕೆ ಬರುವ ವೇಳೆಗೆ ಸ್ತನದ ಕ್ಯಾನ್ಸರ್‌ ಮುಂದುವರಿದ ಹಂತಗಳನ್ನು ಮುಟ್ಟಿರುವ ಅಪಾಯ ಇರುತ್ತದೆ. ಸ್ತನದ ಕ್ಯಾನ್ಸರ್ ಹೇಗೆ ಬರುತ್ತದೆ? ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿದೆ. ಸ್ತನದ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‍ನಲ್ಲಿ ಪ್ರಾರಂಭವಾಗುತ್ತದೆ. ಮಹಿಳೆಯರಲ್ಲಿ ಹೋಲಿಸಿದರೆ ಒಂದು ಸಾವಿರ ಪುರುಷರಲ್ಲಿ ಒಬ್ಬರಿಗೆ ಮಾತ್ರ ಸ್ತನದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಇದು ಸ್ತನದ ತೊಟ್ಟುಗಳ ಪ್ರದೇಶದ…

Read More

ಅಯೋಧ್ಯೆ:-ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಮಧ್ಯಾಹ್ನ 12.29 ರಿಂದ 12.30 ರವರೆಗೆ ಇರಲಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಪೂಜಾ ವಿಧಿವಿಧಾನಗಳನ್ನು ದೇಶದ ಜನರ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಬೆಳಗ್ಗೆ 10.45ಕ್ಕೆ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಲಿಪ್ಯಾಡ್​ಗೆ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ 10.55ಕ್ಕೆ ಹೆಲಿಕಾಪ್ಟರ್‌ನಲ್ಲಿ ಶ್ರೀರಾಮ ಮಂದಿರ ತಲುಪಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೂ ಸಮಯ ಕಾಯ್ದಿರಿಸಲಾಗಿದೆ. ಮಧ್ಯಾಹ್ನ 12.05-12.55ರವರೆಗೆ ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.55ಕ್ಕೆ ಪೂಜಾ ಸ್ಥಳದಿಂದ ಹೊರಡಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಕಾರ್ಯಕ್ರಮ ಸ್ಥಳದಲ್ಲಿರುವ ಮೋದಿ, ಮಧ್ಯಾಹ್ನ 2.10ಕ್ಕೆ ಕುಬೇರ್…

Read More

ಸಪೋಟಾ ರಸದಲ್ಲಿ ತಾಮ್ರ, ನಿಯಾಸಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕವೂ ಸಮೃದ್ಧವಾಗಿದೆ. ಸಪೋಟಾ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯ ಲಾಭಗಳು ಸಿಗಲಿವೆ. ಹೌದು , ಚಳಿಗಾಲದಲ್ಲಿ ಇದರ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಸಪೋಟ ಹಣ್ಣು ಹಲವಾರು ಬಗೆಯ ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಸಪೋಟದಲ್ಲಿ ಇರುವಂತಹ ಹಲವಾರು ಬಗೆಯ ಪೋಷಕಾಂಶಗಳಾಗಿರುವಂತಹ ಕಬ್ಬಿಣಾಂಶ, ಪೊಟಾಶಿಯಂ, ತಾಮ್ರ, ವಿಟಮಿನ್ ಸಿ ಮತ್ತು ಎ, ಸಿಯಾಸಿನ್, ಫಾಲಟೆ ಇತ್ಯಾದಿಗಳು ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂದಿನ ಕೊರೊನಾ ಕಾಲಘಟ್ಟದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲವಾಗಿ ಇಟ್ಟುಕೊಳ್ಳುವುದು ಅತೀ ಅನಿವಾರ್ಯ. ಹೀಗಾಗಿ ಪ್ರತಿನಿತ್ಯವೂ ಚಿಕ್ಕು ತಿಂದರೆ ಅದು ಪ್ರತಿರೋಧಕ ಶಕ್ತಿ ವೃದ್ಧಿಸಿ, ಯಾವುದೇ ಸೋಂಕು ದೇಹವನ್ನು ಬಾಧಿಸದಂತೆ ತಡೆಯುವುದು. ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತೀಯರ ಮೂಳೆಗಳು ತುಂಬಾ ದುರ್ಬಲ ಎಂದು ಪರಿಗಣಿಸಲಾಗಿದೆ. ಹೀಗಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡಿಕೊಂಡು ಮೂಳೆಗಳನ್ನು ಬಲಪಡಿಸಬೇಕು. ಚಿಕ್ಕುವಿನಲ್ಲಿ…

Read More

ಚೆನ್ನೈ:- ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಸಚಿವೆ, ತಮಿಳುನಾಡಿನ ದೇವಸ್ಥಾನಗಳಲ್ಲಿ ಸೋಮವಾರ ರಾಮನ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಅನ್ನದಾನ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನಿಗೆ 200 ಕ್ಕೂ ಹೆಚ್ಚು ದೇವಾಲಯಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಯಾವುದೇ ಪೂಜೆ/ಭಜನೆ/ಪ್ರಸಾದ/ಅನ್ನದಾನವಿಲ್ಲ. ಶ್ರೀರಾಮನ ನಾಮಸ್ಮರಣೆಗೆ ಅವಕಾಶವಿದೆ. ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಪೆಂಡಾಲ್‌ಗಳನ್ನು ಕಿತ್ತುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸಿ ಎಂದು ಕೇಂದ್ರ ಸಚಿವೆ ಬರೆದುಕೊಂಡಿದ್ದಾರೆ. ಕೇಂದ್ರ ಸಚಿವರ ಆರೋಪಗಳನ್ನು ತಮಿಳುನಾಡು ಮಾನವ ಸಂಪನ್ಮೂಲ ಮತ್ತು ಸಿಇ ಸಚಿವ ಪಿ.ಕೆ.ಶೇಖರ್‌ಬಾಬು…

Read More

ಚಿಕ್ಕೋಡಿ:- ನನ್ನ ವಿರುದ್ಧದ ಎಲ್ಲಾ ಆರೋಪ ಡಿಕೆಶಿ ಷಡ್ಯಂತ್ರದಿಂದಲೇ ಆಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನನ್ನನ್ನು ಹಿಮ್ಮೆಟ್ಟಿಸಲು ಡಿಕೆಶಿ ಅಪ್ಪ ಬಂದ್ರೂ ನಾನು ಬಿಡುವುದಿಲ್ಲ. ಸಿಡಿ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ನನಗೆ ಶಿಕ್ಷೆ ವಿಧಿಸಲು ಪ್ಲ್ಯಾನ್ ಮಾಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಬ್ಯಾಂಕ್‍ಗೆ ವಂಚನೆ ಹೆಸರಿನಲ್ಲಿ 420 ಕೇಸ್ ದಾಖಲಿಸಿದ್ದಾನೆ. ನನ್ನ ಹೆಸರು ಟಿವಿಯಲ್ಲಿ ಬರೋದನ್ನು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ ಎಂದರು. ರಾಮಮಂದಿರದ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್‍ನವರು ಈ ರೀತಿ ಮಾಡುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಮುಸ್ಲಿಂ ಸಮುದಾಯದ ಮತ ಓಲೈಕೆಗಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಯಾರು ಸಲಹೆ ನೀಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಮಮಂದಿರ ಉದ್ಘಾಟನೆಗೆ ದೇಶವೇ ಕಾತುರದಿಂದ ಕಾದಿದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಫ್ರೀ ಹ್ಯಾಂಡ್ ಕೆಲಸ ಮಾಡಲು ಅಲ್ಲಿಯವರು ಬಿಡುತ್ತಿಲ್ಲ. ಅವರ ಮೇಲೆ ಒತ್ತಡ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ತಂದು ಸಿಎಂ…

Read More

ಭಾರತದ ಔದ್ಯೋಗಿಕ ಪ್ರಗತಿಗಾಗಿ ನೌಕರರು ವಾರಕ್ಕೆ 70 ಗಂಟೆ ಕಾಲ ಕೆಲಸ ಮಾಡಬೇಕು ಎಂದು ಕರೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ನಿಲುವಿಗೆ ನೌಕ್ರಿ ಡಾಟ್ ಕಾಮ್ ಅಧ್ಯಕ್ಷರು ಬೆಂಬಲ ಘೋಷಿಸಿದ್ದಾರೆ.  ಯಾರೂ ಕೂಡಾ ಸಂಜೆ 5 ಗಂಟೆ ಆಗುತ್ತಿದ್ದಂತೆಯೇ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಕೆಲಸ ಮುಗೀತು ಅನ್ನೋದಕ್ಕೆ ಸಾಧ್ಯವಿಲ್ಲ. ಶನಿವಾರ ಹಾಗೂ ಭಾನುವಾರ ನಾವು ಕೆಲಸ ಮಾಡೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀವು ಕೆಲಸ ಮಾಡಲೇ ಬೇಕಾಗುತ್ತೆ. ನೀವು ನಿಮ್ಮ ಔದ್ಯೋಗಿಕ ರಂಗದಲ್ಲಿ ಯಶಸ್ವಿ ಆಗಲೇ ಬೇಕು ಎಂದಾದರೆ ನೀವು ಕೆಲಸ ಮಾಡಲೇ ಬೇಕು ಎಂದು ನೌಕ್ರಿ ಡಾಟ್ ಕಾಮ್ ಅಧ್ಯಕ್ಷ ಸಂಜೀವ್ ಬಿಕ್ಚಾನಂದಾನಿ ಹೇಳಿದ್ದಾರೆ. ಯಾವುದೇ ಸ್ಟಾರ್ಟ್‌ ಅಪ್‌ನ ಸಂಸ್ಥಾಪಕರು ಆರಂಭದ ದಿನಗಳಲ್ಲಿ ತಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮಯ ಹೊಂದಿಸೋದಕ್ಕೆ ಕಷ್ಟ ಪಡುತ್ತಾರೆ. ಇಂದಿನ ದಿನಗಳಲ್ಲಿ ಭಾರತದಲ್ಲಿ ಯಶಸ್ವಿಯಾದ ಯಾವುದೇ ಉದ್ಯಮಿಯನ್ನು ನೀವು ಕೇಳಿ ನೋಡಿ, ನೀವು ಎಷ್ಟು ಗಂಟೆ…

Read More