Author: AIN Author

ಅಯೋಧ್ಯೆ:-ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಮಧ್ಯಾಹ್ನ 12.29 ರಿಂದ 12.30 ರವರೆಗೆ ಇರಲಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಪೂಜಾ ವಿಧಿವಿಧಾನಗಳನ್ನು ದೇಶದ ಜನರ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಬೆಳಗ್ಗೆ 10.45ಕ್ಕೆ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಲಿಪ್ಯಾಡ್​ಗೆ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ 10.55ಕ್ಕೆ ಹೆಲಿಕಾಪ್ಟರ್‌ನಲ್ಲಿ ಶ್ರೀರಾಮ ಮಂದಿರ ತಲುಪಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೂ ಸಮಯ ಕಾಯ್ದಿರಿಸಲಾಗಿದೆ. ಮಧ್ಯಾಹ್ನ 12.05-12.55ರವರೆಗೆ ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.55ಕ್ಕೆ ಪೂಜಾ ಸ್ಥಳದಿಂದ ಹೊರಡಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಕಾರ್ಯಕ್ರಮ ಸ್ಥಳದಲ್ಲಿರುವ ಮೋದಿ, ಮಧ್ಯಾಹ್ನ 2.10ಕ್ಕೆ ಕುಬೇರ್…

Read More

ಸಪೋಟಾ ರಸದಲ್ಲಿ ತಾಮ್ರ, ನಿಯಾಸಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕವೂ ಸಮೃದ್ಧವಾಗಿದೆ. ಸಪೋಟಾ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯ ಲಾಭಗಳು ಸಿಗಲಿವೆ. ಹೌದು , ಚಳಿಗಾಲದಲ್ಲಿ ಇದರ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಸಪೋಟ ಹಣ್ಣು ಹಲವಾರು ಬಗೆಯ ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಸಪೋಟದಲ್ಲಿ ಇರುವಂತಹ ಹಲವಾರು ಬಗೆಯ ಪೋಷಕಾಂಶಗಳಾಗಿರುವಂತಹ ಕಬ್ಬಿಣಾಂಶ, ಪೊಟಾಶಿಯಂ, ತಾಮ್ರ, ವಿಟಮಿನ್ ಸಿ ಮತ್ತು ಎ, ಸಿಯಾಸಿನ್, ಫಾಲಟೆ ಇತ್ಯಾದಿಗಳು ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂದಿನ ಕೊರೊನಾ ಕಾಲಘಟ್ಟದಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲವಾಗಿ ಇಟ್ಟುಕೊಳ್ಳುವುದು ಅತೀ ಅನಿವಾರ್ಯ. ಹೀಗಾಗಿ ಪ್ರತಿನಿತ್ಯವೂ ಚಿಕ್ಕು ತಿಂದರೆ ಅದು ಪ್ರತಿರೋಧಕ ಶಕ್ತಿ ವೃದ್ಧಿಸಿ, ಯಾವುದೇ ಸೋಂಕು ದೇಹವನ್ನು ಬಾಧಿಸದಂತೆ ತಡೆಯುವುದು. ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತೀಯರ ಮೂಳೆಗಳು ತುಂಬಾ ದುರ್ಬಲ ಎಂದು ಪರಿಗಣಿಸಲಾಗಿದೆ. ಹೀಗಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡಿಕೊಂಡು ಮೂಳೆಗಳನ್ನು ಬಲಪಡಿಸಬೇಕು. ಚಿಕ್ಕುವಿನಲ್ಲಿ…

Read More

ಚೆನ್ನೈ:- ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಸಚಿವೆ, ತಮಿಳುನಾಡಿನ ದೇವಸ್ಥಾನಗಳಲ್ಲಿ ಸೋಮವಾರ ರಾಮನ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಅನ್ನದಾನ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನಿಗೆ 200 ಕ್ಕೂ ಹೆಚ್ಚು ದೇವಾಲಯಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಯಾವುದೇ ಪೂಜೆ/ಭಜನೆ/ಪ್ರಸಾದ/ಅನ್ನದಾನವಿಲ್ಲ. ಶ್ರೀರಾಮನ ನಾಮಸ್ಮರಣೆಗೆ ಅವಕಾಶವಿದೆ. ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಪೆಂಡಾಲ್‌ಗಳನ್ನು ಕಿತ್ತುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸಿ ಎಂದು ಕೇಂದ್ರ ಸಚಿವೆ ಬರೆದುಕೊಂಡಿದ್ದಾರೆ. ಕೇಂದ್ರ ಸಚಿವರ ಆರೋಪಗಳನ್ನು ತಮಿಳುನಾಡು ಮಾನವ ಸಂಪನ್ಮೂಲ ಮತ್ತು ಸಿಇ ಸಚಿವ ಪಿ.ಕೆ.ಶೇಖರ್‌ಬಾಬು…

Read More

ಚಿಕ್ಕೋಡಿ:- ನನ್ನ ವಿರುದ್ಧದ ಎಲ್ಲಾ ಆರೋಪ ಡಿಕೆಶಿ ಷಡ್ಯಂತ್ರದಿಂದಲೇ ಆಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನನ್ನನ್ನು ಹಿಮ್ಮೆಟ್ಟಿಸಲು ಡಿಕೆಶಿ ಅಪ್ಪ ಬಂದ್ರೂ ನಾನು ಬಿಡುವುದಿಲ್ಲ. ಸಿಡಿ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ನನಗೆ ಶಿಕ್ಷೆ ವಿಧಿಸಲು ಪ್ಲ್ಯಾನ್ ಮಾಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಬ್ಯಾಂಕ್‍ಗೆ ವಂಚನೆ ಹೆಸರಿನಲ್ಲಿ 420 ಕೇಸ್ ದಾಖಲಿಸಿದ್ದಾನೆ. ನನ್ನ ಹೆಸರು ಟಿವಿಯಲ್ಲಿ ಬರೋದನ್ನು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ ಎಂದರು. ರಾಮಮಂದಿರದ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್‍ನವರು ಈ ರೀತಿ ಮಾಡುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಮುಸ್ಲಿಂ ಸಮುದಾಯದ ಮತ ಓಲೈಕೆಗಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಯಾರು ಸಲಹೆ ನೀಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಮಮಂದಿರ ಉದ್ಘಾಟನೆಗೆ ದೇಶವೇ ಕಾತುರದಿಂದ ಕಾದಿದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಫ್ರೀ ಹ್ಯಾಂಡ್ ಕೆಲಸ ಮಾಡಲು ಅಲ್ಲಿಯವರು ಬಿಡುತ್ತಿಲ್ಲ. ಅವರ ಮೇಲೆ ಒತ್ತಡ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ತಂದು ಸಿಎಂ…

Read More

ಭಾರತದ ಔದ್ಯೋಗಿಕ ಪ್ರಗತಿಗಾಗಿ ನೌಕರರು ವಾರಕ್ಕೆ 70 ಗಂಟೆ ಕಾಲ ಕೆಲಸ ಮಾಡಬೇಕು ಎಂದು ಕರೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ನಿಲುವಿಗೆ ನೌಕ್ರಿ ಡಾಟ್ ಕಾಮ್ ಅಧ್ಯಕ್ಷರು ಬೆಂಬಲ ಘೋಷಿಸಿದ್ದಾರೆ.  ಯಾರೂ ಕೂಡಾ ಸಂಜೆ 5 ಗಂಟೆ ಆಗುತ್ತಿದ್ದಂತೆಯೇ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಕೆಲಸ ಮುಗೀತು ಅನ್ನೋದಕ್ಕೆ ಸಾಧ್ಯವಿಲ್ಲ. ಶನಿವಾರ ಹಾಗೂ ಭಾನುವಾರ ನಾವು ಕೆಲಸ ಮಾಡೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀವು ಕೆಲಸ ಮಾಡಲೇ ಬೇಕಾಗುತ್ತೆ. ನೀವು ನಿಮ್ಮ ಔದ್ಯೋಗಿಕ ರಂಗದಲ್ಲಿ ಯಶಸ್ವಿ ಆಗಲೇ ಬೇಕು ಎಂದಾದರೆ ನೀವು ಕೆಲಸ ಮಾಡಲೇ ಬೇಕು ಎಂದು ನೌಕ್ರಿ ಡಾಟ್ ಕಾಮ್ ಅಧ್ಯಕ್ಷ ಸಂಜೀವ್ ಬಿಕ್ಚಾನಂದಾನಿ ಹೇಳಿದ್ದಾರೆ. ಯಾವುದೇ ಸ್ಟಾರ್ಟ್‌ ಅಪ್‌ನ ಸಂಸ್ಥಾಪಕರು ಆರಂಭದ ದಿನಗಳಲ್ಲಿ ತಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮಯ ಹೊಂದಿಸೋದಕ್ಕೆ ಕಷ್ಟ ಪಡುತ್ತಾರೆ. ಇಂದಿನ ದಿನಗಳಲ್ಲಿ ಭಾರತದಲ್ಲಿ ಯಶಸ್ವಿಯಾದ ಯಾವುದೇ ಉದ್ಯಮಿಯನ್ನು ನೀವು ಕೇಳಿ ನೋಡಿ, ನೀವು ಎಷ್ಟು ಗಂಟೆ…

Read More

ಬೆಂಗಳೂರು:- ಇಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಗಳು, ವಿಶೇಷ ಕಾರ್ಯಕ್ರಮ ಆಯೋಜಿಸಿವೆ. ಕೆಲವು ಮಂದಿರಗಳ ಬಳಿ ನೇರ ಪ್ರಸಾರ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆ, ರಾಮನ ಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಹಲವು ಜಿಲ್ಲೆಗಳಲ್ಲಿ ರಾಮನ ಮೂರ್ತಿಯ ಮೆರವಣಿಗೆ ನಡೆಸಲು ಸಂಘಟನೆಗಳು ಅವಕಾಶ ಕೋರಿದ್ದು, ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ‘ರಾಜ್ಯದ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ನಿಗಾ ವಹಿಸಬೇಕು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದ್ದು, ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಾರ್ಥನಾ ಮಂದಿರಗಳು, ಪ್ರಮುಖ ಜಂಕ್ಷನ್‌ಗಳು, ಹೆಚ್ಚು ಜನರು ಜಮಾವಣೆ ಆಗುವ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ರೌಡಿ ಪಟ್ಟಿಯಲ್ಲಿ ಹೆಸರು ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಸೂಚಿಸಲಾಗಿದೆ.

Read More

ಬರ, ನೀರಿನ ಕೊರತೆಯಿಂದಾಗಿ ಕಬ್ಬು, ತೊಗರಿ ಸೇರಿದಂತೆ ಇತರೆ ಬೆಳೆಗಳು ಕೈಕೊಟ್ಟರೂ ಕೂಡ ಮೆಣಸಿನಕಾಯಿ ಕೈಹಿಡಿಯುತ್ತದೆ ಎಂಬ ರೈತರ ಭರವಸೆ ಹುಸಿಯಾಗಿದೆ. ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಾಲತವಾಡ ಸೇರಿದಂತೆ ಹಲವೆಡೆ ಪ್ರತಿ ರೈತರು 20 ರಿಂದ 30 ಎಕರೆ ಪ್ರದೇಶದಲ್ಲಿ ಡಬ್ಬಿ, ಕಡ್ಡಿ, ಹೈಬ್ರಿಡ್‌, ಬ್ಯಾಡಗಿ ಹಾಗೂ 5531 ಸೇರಿದಂತೆ ನಾನಾ ಬಗೆಯ ಮೆಣಸಿನಕಾಯಿ ಬೆಳೆದಿದ್ದಾರೆ. ಜೋಳ, ಕಡಲೆ, ಗೋಧಿ ಬೆಳೆದ ರೈತರು ಅದರೊಟ್ಟಿಗೆ ಇರುವ ಜಮೀನಲ್ಲಿ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಬೆಳೆದಿದ್ದು, ಸದ್ಯ ಬೆಲೆ ಕುಸಿತಗೊಂಡಿದ್ದು ಮೆಣಸಿನಕಾಯಿ ರೈತರ ಪಾಲಿಗೆ ಖಾರವಾಗಿ ಮಾರ್ಪಟ್ಟಿದೆ. ವಾಡಿಕೆಯ ಮಳೆ ಕೈಕೊಟ್ಟ ಪರಿಣಾಮ ರೈತರು ಪ್ರತಿ ಬೆಳೆಯಲ್ಲೂ ಭಾರಿ ನಷ್ಟ ಅನುಭವಿಸುವಂತಾಗಿದೆ. ಕಬ್ಬಿನ ಇಳುವರಿ ಕುಂಠಿತದ ಶಾಕ್‌ ಅನುಭವಿಸಿದ ರೈತರು ಈ ಸಲ ಮೆಣಸಿನಕಾಯಿ ಬೆಳೆದಿದ್ದು, ಕೂಲಿ, ಔಷಧ, ಗೊಬ್ಬರಕ್ಕೆ ಅಪಾರ ಖರ್ಚು ಮಾಡಿದ್ದಾರೆ. ಈಗ ಸೂಕ್ತ ಬೆಲೆಯೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Read More

ನಮ್ರತಾ ʻಬಿಗ್ ಬಾಸ್ʼ ಮನೆಯಿಂದ ಹೊರಬಿದ್ದಿದ್ದಾರೆ. ಕಿಚ್ಚನ ಚಪ್ಪಾಳೆ, ಉತ್ತಮ ಗಿಟ್ಟಿಸಿಕೊಳ್ಳುವ ಮೂಲಕ ನಮ್ರತಾ ಮೋಡಿ ಮಾಡಿದ್ದರು. ಬಿಗ್ ಬಾಸ್‌ 15ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಫಿನಾಲೆ ವಾರಕ್ಕೆ ಕಾಲಿಡುವಲ್ಲಿ ಸೋತ ನಮ್ರತಾ ಕಡೆಯ ಹಂತದಲ್ಲಿ ದೊಡ್ಮೆನೆಯಿಂದ ಹೊರಬಂದಿದ್ದಾರೆ. ಟಾಪ್ 6 ಹಂತಕ್ಕೆ ಕಾಲಿಡದ ನಮ್ರತಾ ಕಣ್ಣೀರು ಹಾಕುತ್ತಾ ‘ಬಿಗ್ ಬಾಸ್‌’ ಮನೆಯಿಂದ ಹೊರಗೆ ಬಂದಿದ್ದಾರೆ. ನಮ್ರತಾ ಎಲಿಮಿನೇಟ್‌ ಆಗಿದ್ದರಿಂದ ದೊಡ್ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದು, ಮುಂದಿನ ವಾರದ ಮಧ್ಯೆದಲ್ಲಿ ಮತ್ತೊಬ್ಬರು ಸ್ಪರ್ಧಿ ಎಲಿಮಿನೇಷನ್‌ ಆಗಲಿದ್ದಾರೆ. ಇದರಿಂದ ಉಳಿದ ಐವರು ಸ್ಪರ್ಧಿಗಳು ಫೈನಲ್‌ ಹಂತಕ್ಕೆ ತಲುಪಲಿದ್ದಾರೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಟ್ರೋಲ್ ವಿಷ್ಯ ನಮ್ರತಾ ತಿಳಿದು ಕಣ್ಣೀರಿಟ್ಟಿದ್ದರು. ಕೆಲವು ದಿನಗಳಿಂದ ಕಾರ್ತಿಕ್‌ ಹಾಗೂ ನಮ್ರತಾ ಕ್ಲೋಸ್‌ ಆಗಿದ್ದಾರೆ. ಸ್ನೇಹಿತ್‌ ಇದ್ದಾಗ ನಮ್ರತಾ ಅವರು ಸ್ನೇಹಿತ್‌ ಜತೆ ಕ್ಲೋಸ್‌ ಆಗಿದ್ದರು. ಸ್ನೇಹಿತ್‌ ಮತ್ತೆ ಮನೆಯೊಳಗೆ ಬಂದಾಗ ನಮ್ರತಾ ಅವರಿಗೆ ಕಿವಿಮಾತು ಹೇಳಿದ್ದರು.’ನೀವು ಮಾಡೋದೆಲ್ಲ ಹೊರಗೆ ಕೆಟ್ಟದಾಗಿ…

Read More

ಅಯೋಧ್ಯೆ:- ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ. ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್‌ ತಾರೆಯರು ಸೇರಿದಂತೆ ಸರಿಸುಮಾರು ಎಂಟು ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಡೀ ಅಯೋಧ್ಯೆಯು ರಾಮ ಭಕ್ತಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾಧುಗಳು ಹಾಗೂ ಭಕ್ತರು ಭಜನೆ ಹಾಡುತ್ತ, ತುಳಸೀದಾಸರು ಬರೆದ ರಾಮಚರಿತಮಾನಸದ ಸಾಲುಗಳನ್ನು ಹೇಳುತ್ತ ನರ್ತಿಸುತ್ತಿರುವ ದೃಶ್ಯ ಇಲ್ಲಿನ ಬೀದಿಗಳಲ್ಲಿ ಕಾಣಿಸುತ್ತಿದೆ. ‘ಮಂಗಲ ಭವನ ಅಮಂಗಲ ಹಾರಿ, ದ್ರವಹು ಸುದಸರಥ ಅಜಿರ ವಿಹಾರಿ’ (ನನಗೆ ಯಾವ ಕೆಡುಕೂ ಆಗದಂತೆ ಶ್ರೀರಾಮ ಮಾತ್ರ ನೋಡಿಕೊಳ್ಳಬಲ್ಲ… ಅವನ ಆಶೀರ್ವಾದ ಕೋರಿ ಪ್ರಾರ್ಥಿಸುತ್ತೇನೆ) ಎಂದು ನೆರೆಯ ಅಂಬೇಡ್ಕರ್ ನಗರ ಜಿಲ್ಲೆಯ ಹರೇಂದ್ರ ಮಿಶ್ರಾ ಹೇಳುತ್ತಾರೆ. ಇಲ್ಲಿ ರಾಮ ಭಕ್ತರು ಶ್ರೀರಾಮನ ಸ್ಮರಣೆಯಲ್ಲಿ ಅದೆಷ್ಟು ಮಗ್ನರಾಗಿದ್ದಾರೆಂದರೆ, ತಮ್ಮನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಈ ದ್ವಿಪದಿಯನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ. ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು…

Read More

ರಾಮಮಂದಿರ ಉದ್ಘಾಟನೆಯಂದು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಇಂದು ನಿಮಗೆ ಶುಭಸುದ್ದಿ ಸಿಗುವುದು ಖಂಡಿತ. ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಚಿನ್ನದ ದರ ತಟಸ್ಥವಾಗಿದ್ದರೆ ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,780ರೂ ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,240 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 57,800 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,78,000 ರೂ. ಇದೆ. 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,305 ಇದೆ. 8 ಗ್ರಾಂ ಚಿನ್ನಕ್ಕೆ ಇಂದು 50,440 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,050 ರೂ. ಕೊಡಬೇಕು. ಇವತ್ತು 100 ಗ್ರಾಂ ಚಿನ್ನದ ದರ 6,30,500 ರೂ. ಇದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ…

Read More