ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ ಅಂತ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ..ಕಲಬುರಗಿಯಲ್ಲಿಂದು ಮಾತನಾಡಿದ ಖರ್ಗೆ, ಈಗಾಗಲೇ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಇದೇ ವಿಷಯವಾಗಿ ನಾಳೆ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಪ್ರಮುಖವಾಗಿ ಚರ್ಚೆ ಆಗಲಿದೆ ಎಂದರು
Author: AIN Author
ರಾಯಚೂರು: ಕರ್ತವ್ಯ ನಿರತ ಪೊಲೀಸ್ ಪೇದೆಗಳ ಮೇಲೆ ಅಟ್ಟಾಡಿಸಿಕೊಂಡು ಕಬ್ಬಿಣದ ರಾಡು, ಕಲ್ಲುಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಕಾಲುವೆ ಬಳಿ ನಡೆದಿದೆ. ಕಾಪರ್ ವೈರ್ ಕಳ್ಳತನ ಆರೋಪಿಗಳನ್ನು ಬಂಧಿಸಲು ಹೋದಾಗ, ಬಳಗಾನೂರ ಠಾಣೆಯ ಪೊಲೀಸ್ ಪೇದೆ ಗಳಾದ ಮಂಜುನಾಥ್ ಹಾಗೂ ಗೋಪಾಲ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಕಾನ್ಸ್ಟೇಬಲ್ಗಳಿಗೆ ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾ ಗುತ್ತಿದ್ದು, ಹಲ್ಲೆಗೈದ ಆರೋಪಿಗಳಿಗಾಗಿ ಬಳಗಾನೂರ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಬಳಗಾನೂರ ಠಾಣೆಯಲ್ಲಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ: ಕರ್ನಾಟಕದಲ್ಲಿ ಒಂದು ಕೋಮಿನ ತುಷ್ಟೀಕರಣ ವ್ಯವಸ್ಥೆ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದು ತಾವೇ ಒಂದು ಧರ್ಮದ ತುಷ್ಟೀಕರಣ ಮಾಡುತ್ತಿದ್ದಾರೆ. ಆಂಗ್ಲ್ ರನ್ನು ಹೊಡೆದುೋಡಿಸಿ 60 ವರ್ಷ ಅಧಿಕಾರ ಮಾಡಿದ ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಕೊಟ್ಟ ಪಕ್ಷವಾಗಿದೆ, ಶಾಂತಿಯ ತೋಟವಾದ ಕನ್ನಡ ನಾಡನ್ನು ತಾಲಿಬಾನ್ ಅಫ್ಘಾನಿಸ್ತಾನ್ ಗೆ ಹೋಲಿಸಿರುವುದು ಕನ್ನಡ ನೆಲಕ್ಕೆ ಮಾಡಿದ ಅವಮಾನವಾಗಿದೆ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಲಬುರಗಿ: ರಾಜ್ಯದಲ್ಲಿ ಭುಗಿಲೆದ್ದ ಮೂರು ಡಿಸಿಎಂ,ಗಳ ಕುರಿತಾದ ಬೇಡಿಕೆಗಳ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಕಲಬುರಗಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ ಮೂವರು ಡಿಸಿಎಂ ಚರ್ಚೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಹೇಳಿದರು. ಮೂರು ಡಿಸಿಎಂ ಕೇವಲ ಊಹಾಪೋಹ ಅಷ್ಟೇ. ಚುನಾವಣೆಯ ಸಮಯದಲ್ಲಿ ಈ ವಿಚಾರವನ್ನು ತರುವುದು ಅಪ್ರಸ್ತುತ ಅಂದ್ರು. ಅಷ್ಟೇಅಲ್ಲ ಸರ್ಕಾರ ಸರಿಯಾಗಿ ನಡೆಸಿ ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವುದು ಮುಖ್ಯ ಗುರಿಯಾಗಿರಬೇಕು ಅಂತ ಸರ್ಕಾರಕ್ಕೆ ಸಲಹೆ ನೀಡಿದ್ರು.
ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 279 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿತರು ಮೃತಪಟ್ಟಿದ್ದಾರೆ. ಮೃತ ಪ್ರಕರಣಗಳ ಪೈಕಿ ಮೈಸೂರು ಜಿಲ್ಲೆಯಲ್ಲೇ ಎರಡು ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ ಒಂದು ಸಾವು ಪ್ರಕರಣ ದಾಖಲಾಗಿದೆ. https://ainlivenews.com/who-is-suchana-seth-who-killed-her-son-in-goa-what-is-the-background/ ಬೆಂಗಳೂರಿನಲ್ಲಿ ಇಂದು 134 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 6,359 ಜನರನ್ನು ಕೊವೀಡ್ ಟೆಸ್ಟ್ಗೆ ಒಳಪಡಿಸಲಾಗಿದ್ದು, 279 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು 235 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 1,222 ಸಕ್ರಿಯ ಕೊರೋನಾ ಸೋಂಕು ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡ 4.38ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಏನೆಲ್ಲ ಸಂಗತಿಗಳು ನಡೆಯುತ್ತಿವೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಸಖತ್ ಬೆಂಬಲ ನೀಡುತ್ತಿದ್ದಾರೆ. ಈ ಹೊತ್ತಿನಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಂದರ ತಾಣದಲ್ಲಿ ಹುಟ್ಟು ಹಬ್ಬ ಎಂದು ಫೋಟೋ ಹಂಚಿಕೊಂಡಿದ್ದಾರೆ. ಜನವರಿ 7 ರಂದು ಬಿಪಾಶಾ ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳು ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿದೆ. ನಿಮಗೆ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಕಿತ್ತಾಟ ಗೊತ್ತಿಲ್ಲವಾ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ ಪೇಚೆಗೆ ಸಿಲುಕಿದ ಮಾಲ್ಡೀವ್ಸ್ (Maldives) ಸರ್ಕಾರ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದು, ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ಭಾರತಕ್ಕೆ ಬರಲು ಮುಂದಾಗಿದ್ದಾರೆ. ಸ್ವತ: ಮಾಲ್ಡೀವ್ಸ್ ಜನರೇ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು…
ಬೆಂಗಳೂರು ಗ್ರಾಮಾಂತರ: ಅನುಮಾನಸ್ಪದ ರೀತಿಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ರಂಗನಾಥ ಕಲ್ಯಾಣ ಮಂಟಪ ಬಳಿ ಜರುಗಿದೆ. https://ainlivenews.com/who-is-suchana-seth-who-killed-her-son-in-goa-what-is-the-background/ ಮೃತ ವ್ಯಕ್ತಿ 30ರ ವಯಸ್ಸಿನ ಆಸುಪಾಸಿನ ಯುವಕ ಎನ್ನಲಾಗಿದೆ. ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈ ಮೇಲೆಲ್ಲಾ ಸುಟ್ಟ ಗಾಯ ಗುರುತು ಸಿಗದ ರೀತಿಯಲ್ಲಿ ಶವ ಪತ್ತೆ ಆಗಿದ್ದು, ಘಟನಾಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ವಿಜಯ್ ದೇವರಕೊಂಡ (Vijay Devarakonda) ಹೆಸರು ತಳುಕು ಹಾಕಿಕೊಂಡಿರೋದು ಇದೇ ಮೊದಲ ಬಾರಿ ಏನಲ್ಲ. ಆದರೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ಎಂಗೇಜ್‌ಮೆಂಟ್ (Engagement) ಮಾಡಿಕೊಳ್ತಿದ್ದಾರೆ ‘ಗೀತ ಗೋವಿಂದಂ’ ಜೋಡಿ ಡೇಟಿಂಗ್ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದೆ. ಇಬ್ಬರೂ ಜೊತೆಯಾಗಿರುವಾಗ ಸಾಕಷ್ಟು ಬಾರಿ ಪಾಪರಾಜಿಗಳ ಕಣ್ಣಿಗೆ ಒಟ್ಟಿಗೆ ತಗ್ಲಾಕೊಂಡಿದ್ದಾರೆ. ಆದರೂ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡಿದ್ದಾರೆ. ಇದುವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತಗೊಳಿಸಿಲ್ಲ. ವಿಜಯ್ ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಈ ವರ್ಷ ತೆರೆಗೆ ಬರಲಿದೆ. ಪುಷ್ಪ 2 ಚಿತ್ರ, ರೈನ್‌ಬೋ, ಚಾವಾ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.
ಬೆಂಗಳೂರು: ಮಗುವಿನ ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ರವಾನೆ ಮಾಡುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಾದಿಂದ ಬೆಂಗಳೂರಿಗೆ (Goa To Bengaluru) ತೆರಳುತ್ತಿದ್ದ ಸ್ಟಾರ್ಟ್‌ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ (Suchana Seth) ವಿರುದ್ಧ ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಚನಾ ಸೇಠ್ ಅವರು ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದರು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದರು. ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನ ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ (Taxi) ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಯಾರಿವರು ಸೂಚನಾ ಸೇಠ್? ಸುಚನಾ ಸೇಥ್ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್-ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ…
ಹಾವೇರಿ: ಅವರಿಬ್ಬರಿಗೂ ಮದುವೆಯಾಗಿ ಸುಮಾರು ಆರು ವರ್ಷ ಕಳೆದಿವೆ. ಅದರೆ ಆ ದಂಪತಿಗೆ ಮೊದಲ ಮಗು ಹೆಣ್ಣು, ಕಳೆದ ನಾಲ್ಕು ದಿನಗಳ ಹಿಂದೆ ಜನಿಸಿದ ಮಗು ಕೂಡಾ ಹೆಣ್ಣು. ಎರಡು ಮಕ್ಕಳು ಹೆಣ್ಣುಮಕ್ಕಳು ಹುಟ್ಟಿದ್ದಕ್ಕೆ, ಮಗುವನ್ನೇ ಕಿಡ್ನಾಪ್ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಪತಿ ಮಾಹಾಶಯ. ಪತಿ ಮಹಾಶಯನಿಂದ ಮಗುವನ್ನ ಕಾಪಾಡಿದ ಪತ್ನಿ ಪರಿಚಯಸ್ಥರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿಸಿದ್ದಾನೆ. ಬಾಣಂತಿಯ ಮಹಿಳೆ ಹಸಗೂಸು ಕರೆದುಕೊಂಡು ಎಸ್‍ಪಿ ಕಚೇರಿಗೆ ಆಗಮಿಸಿದಳು. https://ainlivenews.com/karaway-president-narayana-gowda-is-back-in-police-custody-after-being-released-from-jail/ ಮೊದಲನೇಯದು ಹೆಣ್ಣು ಮಗು, ಎರಡನೇಯದು ಹೆಣ್ಣು ಮಗು ಅಂತ ಸಿಟ್ಟಿಗೆದ್ದ ಪಾಪಿ ಪತಿರಾಯ ಹಸುಗೂಸನ್ನೇ ಮಾರಾಟ ಮಾಡಲು ಮುಂದಾಗಿದ್ದಾನೆ. ಕಳೆದ 4 ದಿನಗಳ ಹಿಂದೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕು ಆಸ್ಪತ್ರೆಯಿಂದ ಬಾಣಂತಿ ಗೀತಾ ಪತಿ ಸಿದ್ದಲಿಂಗಪ್ಪ ಹಸುಗೂಸನ್ನ ಕಿಡ್ನಾಪ್ ಮಾಡಿ ಮಾರಲು ಯತ್ನಿಸಿದ್ದಾನೆ. ವಿಷಯ ತಿಳಿದ ಪತ್ನಿ ಹಸುಗೂಸು ಸಮೇತ ಅಂಬುಲೆನ್ಸ್ ನಲ್ಲಿ ಎಸ್‍ಪಿ ಕಚೇರಿಗೆ ಆಗಮಿಸಿ ಪತಿ ವಿರುದ್ಧ ದೂರು ನೀಡಿದ್ದಾರೆ. ಮಗು ರಕ್ಷಿಸಿದವರ ವಿರುದ್ಧವೇ…