ಹುಬ್ಬಳ್ಳಿ: ಮಂತ್ರಾಕ್ಷತೆ ನಾವು ಕೊಡುತ್ತಿದ್ದೇವೆ. ಇದರ ವಿವಾದವನ್ನು ಕಾಂಗ್ರೆಸ್ ಮಾಡುತ್ತಿದೆ. ನಮಗೆ ರಾಮಮಂದಿರ ಉದ್ಘಾಟನೆ ಸಂಪನ್ನವಾಗಬೇಕು. ನಮ್ಮ ಅಕ್ಕಿ ತಗೊಂಡು ಮಂತ್ರಾಕ್ಷಿತೆ ಅಂತಾರೆ. ಹೌದಪ್ಪಾ ನೀವ ಎಲ್ಲಿ ಅಕ್ಕಿ ಕೊಟ್ಟಿದ್ದೀರಿ. ಸುಳ್ಳ ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಕಾಳ ಅಕ್ಕಿ ಕೊಟ್ಟಿಲ್ಲ ನೀವು. ಮೊದಲು ಶ್ರೀರಾಮ ಇಲ್ಲ ಎಂದು ಅಪಮಾನ ಮಾಡಿದ್ರೀ. ಶ್ರೀರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿದ್ರೀ. ಇದೀಗ ಎಲ್ಲ ಆದ ಮೇಲೆ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ನಮ್ಮ ಅಕ್ಕಿ ಅಂತಿದ್ದಾರೆ. ನೀವು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು ಎಂದರು. ಕಾಂಗ್ರೆಸ್ ನವರು ಇಷ್ಟು ದಿನ ರಾಮ ಇಲ್ಲ ಅಂತೀದ್ರು. ಇದೀಗ ಪೂಜೆ ಮಾಡೋಕೆ ಹೇಳಿದ್ದಾರೆ. ಮೊನ್ನೆ ಸಿದ್ದರಾಮಯ್ಯ ಗುಡಿ ಒಳಗೆ ಹೋಗಲಿಲ್ಲ. ಇದನ್ನೆಲ್ಲಾ ರಿಪೇರಿ ಮಾಡೋಕೆ ಮಾಡಿದಾರೆ. ಕರಸೇವಕರ ಮೇಲೆ ಗುಂಡು ಹಾರಿಸಿದ್ದು ಯಾರೂ ಅನ್ನೋದ ಗೊತ್ತಿದೆ ಎಂದು ಅವರು ಹೇಳಿದರು. ಯಾರೂ…
Author: AIN Author
ದೊಡ್ಡಬಳ್ಳಾಪುರ: ನಾನು ಯಾರಿಗೂ ಮೋಸ ಮಾಡಿಲ್ಲ, ಮಿಸ್ ಯೂ ಆಲ್ ಫ್ರೆಂಡ್ಸ್, ಬುಜ್ಜಿ ಐ ಮಿಸ್ ಯೂ.. ನಾನು ಇನ್ನೂ ಈ ಲೋಕವನ್ನೇ ಬಿಟ್ಟು ಹೋಗುತ್ತಿದ್ದೇನೆ, ಎಲ್ಲರು ಖುಷಿಯಾಗಿರಿ. ಎಂದು ಡೆತ್ ನೋಟ್ ಬರೆದ ಯುವತಿ ನೇಣಿಗೆ ಶರಣಾಗಿದ್ದಾಳೆ. ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ, ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಜಾನ್ಸಿ(17) ನೇಣಿಗೆ ಶರಣಾಗಿದ್ದಾಳೆ, ನಿನ್ನೆ ಸಂಜೆ ಕಾಲೇಜ್ ನಿಂದ ಮನೆಗೆ ಬಂದ ಆಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. https://ainlivenews.com/another-road-rage-in-silicon-city-young-woman-stunned-by-youth/ ಮೃತ ಯುವತಿ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಮಕ್ಕಳನ್ನ ಕಷ್ಟಪಟ್ಟು ಓದಿಸುತ್ತಿದ್ದರು, ಆದರೆ ಆಕೆಯ ಮನಸ್ಸಿಗೆ ಯಾವ ವಿಚಾರ ಬೇಸರ ಜಿಗುಪ್ಸೆ ತಂದಿತ್ತೋ, ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ, ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ ಪೇಕ್ಟರ್ ಅಮರೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ದೇಶದ ಗಣ್ಯರಿಗೆ ಶ್ರೀ ರಾಮತೀರ್ಥ ಟ್ರಸ್ಟ್ ಆಹ್ವಾನ ನೀಡುತ್ತಿದೆ. ಈ ಮಧ್ಯೆ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಗೆ ಆಹ್ವಾನ ನೀಡಿದರು. ಜನವರಿ 22 ರಂದು, ಅಯೋಧ್ಯೆಯಲ್ಲಿ (Ayodhya) ಹೊಸದಾಗಿ ನಿರ್ಮಿಸಲಾದ ಭವ್ಯವಾದ ಶ್ರೀರಾಮ ಮಂದಿರದಲ್ಲಿ (Ram mandir) ಭಗವಾನ್ ರಾಮಲಲ್ಲಾನ ಪ್ರತಿಷ್ಠಾಪನೆ ಆಗಲಿದೆ. ಈ ಉತ್ಸವದಲ್ಲಿ ಭಾಗವಹಿಸಲು ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಗೆ ಆಹ್ವಾನ ನೀಡಿದರು. ಜನವರಿ 22 ರಂದು ನಡೆಯುವ ಐತಿಹಾಸಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳಿಗೆ ಆಹ್ವಾನ ನೀಡಿದರು.
ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 30ನೇ ಎಸಿಎಂಎಂ ಕೋರ್ಟ್ ನಾಳೆಗೆ ಮುಂದೂಡಿದೆ. https://ainlivenews.com/karaway-president-narayana-gowda-is-back-in-police-custody-after-being-released-from-jail/ 2017 ರಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕರವೇ (KaRaVe) ಅಧ್ಯಕ್ಷ ನಾರಾಯಣಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 30ನೇ ಎಸಿಎಂಎಂ ಕೋರ್ಟ್ ನಾಳೆಗೆ ಮುಂದೂಡಿದೆ. ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಾರಾಯಣಗೌಡ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ಆರೋಪಿಗೆ 2017 ರಲ್ಲಿ ಜಾಮೀನು ಸಿಕ್ಕಿದೆ. ಜಾಮೀನು ಪಡೆದ ಬಳಿಕ ರೆಗ್ಯುಲರ್ ಡೇಟ್ಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನ್ಯಾಯಾಲಯದ ಅರಿವಿಲ್ಲವೇ? ಈಗ ಗೊತ್ತಾಗಿಲ್ಲ, ಅರಿವಿರಲಿಲ್ಲ ಅಂತ ಹೇಳುವುದು ಸರಿಯಲ್ಲ. ಹೀಗಾಗಿ ಜಾಮೀನು ನಿರಾಕರಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸಿದೆ.
ಮಂಡ್ಯ: 8 ವರ್ಷ ಪ್ರೀತಿಸಿ ಎಲ್ಲ ರೀತಿಯಲ್ಲಿ ಬಳಸಿಕೊಂಡು ಯುವಕನೊಬ್ಬ ಯುವತಿಗೆ ವಂಚಿಸಿದ ಆರೋಪವೊಂದು ಕೇಳಿ ಬಂದಿದೆ. ಅನ್ಯಜಾತಿ ನೆಪವೊಡ್ಡಿ ಪ್ರಿಯತಗೆ ಕೈ ಕೊಟ್ಟಿದ್ದಾನೆ ಪ್ರಿಯಕರ. ಕೈ ಕೊಟ್ಟ ಪ್ರಿಯಕರನಿಗಾಗಿ ಮನೆ ಮುಂದೆಯೇ ಯುವತಿ ಕುಳಿತಿದ್ದಾಳೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಬಳ್ಳಗೆರೆ ಗ್ರಾಮದ ಮಂಜು.ಬಿ.ಆರ್ ಎಂಬಾತನೇ ಯುವತಿಯನ್ನ ನಂಬಿಸಿ ವಂಚನೆ ಮಾಡಿರುವ ಯುವಕನಾಗಿದ್ದಾನೆ. ನಂಜನಗೂಡಿನ ಮಹದೇಶ್ವರ ಲೇಔಟ್ ನ ರಮಶ್ರೀ ನಂಬಿ ಮೋಸ ಹೋದ ಯುವತಿಯಾಗಿದ್ದು, ಕಳೆದ ಎಂಟು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರಿಯತಮೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಿಯಕರ ಮುಂದಾಗಿದ್ದಾನೆ. ಬೇರೆ ಬೇರೆ ಕಾರಣ ಹೇಳಿಕೊಂಡು ಮದುವೆ ಮುಂದೆ ಆಗುವುದಾಗಿ ಭರವಸೆ ನೀಡಿದ್ದನಂತೆ ಯುವಕ. https://ainlivenews.com/another-road-rage-in-silicon-city-young-woman-stunned-by-youth/ ಇದೀಗ ಪ್ರಿಯಕರ ಮಂಜು ಪ್ರೀತಿಸಿದಾಕೆ ಬಿಟ್ಟು ಮತ್ತೊಂದು ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ. ವಿಷಯ ತಿಳಿದ ಪ್ರಿಯತಮೆ ಇದೀಗ ಪ್ರಿಯಕರನೊಂದಿಗೆ ಮದುವೆಗೆ ಪಟ್ಟು ಹಿಡಿದಿದ್ದಾಳೆ. ಪ್ರಿಯಕರ ಮಂಜನ ಮನೆ ಮುಂದೆ ಕುಳಿತು ಮದುವೆ ಆಗುವಂತೆ ಆಗ್ರಹಿಸಿದ್ದಾಳೆ.…
ಬೆಂಗಳೂರು : ಬರ, ಪ್ರವಾಹ ಇದ್ದಾಗ ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ರೈತರ ಪಾಲಿಗೆ ಸರ್ಕಾರ ಸತ್ತಂತೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಧರಣಿ ಮಾಡಿದ್ದೇವೆ, ಈಗ ರಾಜ್ಯಪಾಲರಿಗೂ ದೂರು ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. https://ainlivenews.com/big-shock-for-property-tax-arrears-owners-no-property-cannot-be-sold/ 18 ಸಾವಿರ ಕೋಟಿ ನಷ್ಟ ಆಗಿದೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಕೇವಲ 105 ಕೋಟಿ ರೂ. ಬಿಡುಗಡೆ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ತಕ್ಷಣ ಪರಿಹಾರ ಕೊಡೋದಾಗಿ ಹೇಳಿದ್ದರು. ಆದರೆ, ಇನ್ನೂ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಪೂರ್ತಿ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಕೂಡ ವಿಫಲವಾಗಿವೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆಯಿಲ್ಲ. ರೈತರು ಸತ್ತರೂ ಇವರಿಗೆ ಚಿಂತೆ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಬಹಳ ದಿನ ಇರಲ್ಲ ಎಂದು ಬಸವರಾಜ…
ಬೆಂಗಳೂರು: ನೀವೇನಾದ್ರು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ….ಒಂದು ವೇಳೆ ಟ್ಯಾಕ್ಸ್ ಏನಾದರೂ ಬಾಕಿ ಉಳಿಸಿಕೊಂಡಿದ್ರೆ ಈ ಕೂಡಲೇ ಪಾವತಿಸಿಬಿಡಿ.ಇಲ್ಲಾ ಅಂದರೆ ನಿಮ್ಮ ಆಸ್ತಿ ಮಾರಾಟ ಮಾಡೋಕೆ ಆಗಲ್ವಾಂತೆ ಹೌದು .ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ದ ಕಠಿಣ ಅಸ್ರ ಪ್ರಯೋಗಿಸಲು ಪಾಲಿಕೆ,ಮುಂದಾಗ್ತಿದೆ. ಹಾಗಾದ್ರೆ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಮಾಡಿರೋ ಹೊಸ ಹೇಗಿರಲಿದೆ ಅನ್ನೋ ರಿಪೋರ್ಟ್ ಇಲ್ಲಿದೆ ಆಸ್ತಿ ತೆರಿಗೆ ಬಿಬಿಎಂಪಿಯ ಪ್ರಮುಖ ಆದಾಯ ಮೂಲ..ಇವರು ಕಟ್ಟುವ ಆಸ್ತಿ ತೆರಿಗೆಯಿಂದ್ಲೇ ಬೆಂಗಳೂರಿ ಉದ್ದಾರ ಆಗೋದು. ಆದ್ರೆ ಆಸ್ತಿ ತೆರಿಗೆ ಕಟ್ಟೋದಕ್ಕೆ ಮಾತ್ರ ಜನ ಹಿಂದೇಟು ಹಾಕ್ತಿದ್ದಾರೆ. ಬರಬೇಕಾದ ಟ್ಯಾಕ್ಸ್ ವಸೂಲಿ ಮಾಡೋದಕ್ಕೆ ಅಂತೂ ಪಾಲಿಕೆಗೆ ತಲೆನೋವಾಗಿದೆ. .ಪ್ರತಿವರ್ಷ ನಿಗದಿತ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಯೋಜನೆ ರೂಪಿಸಿದ್ರೂ ನಿರೀಕ್ಷಿತ ತೆರಿಗೆ ಮಾತ್ರ ಖಾಜಾನೆಗೆ ಬಂದು ಸೇರುತ್ತಿಲ್ಲ..ಪ್ರಸ್ತುತ ವರ್ಷದಲ್ಲಿ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆ ಹೊಂದಿತ್ತು.ಆದರೆ ಸಂಗ್ರಹವಾಗಿರೋದು ಮಾತ್ರ 2400 ಕೋಟಿ ..ಗುರಿ ತಲುಪಲು ಇನ್ನೂ ಕೋಟಿ…
ಬೀದರ್: ಜೈಲಿನಿಂದ ಹೊರ ಬಂದ ಮುಖಂಡ ನಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಹೌದು ಪಿಸ್ತೂಲ್ ತೋರಿಸಿ ಹಣ ವಸೂಲಿ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜಿಲ್ಲಾ ಪಂಚಾಯತ ಮಾಜಿ ಸದಸ್ಯನಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಗ್ರಾಮದಲ್ಲಿ ನಡೆದಿದೆ. ಪಿಸ್ತೂಲ್ ಹಿಡಿದ ಹಣ ವಸೂಲಿ ಮಾಡಿದ ಹಿನ್ನಲೆ ಪೊಲಿಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು. https://ainlivenews.com/another-road-rage-in-silicon-city-young-woman-stunned-by-youth/ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಗುಂಡುರಡ್ಡಿ ಜಾಮೀನು ಮೇಲೆ ಹೊರ ಬಂದ ತಕ್ಷಣ ಅವರ ಅಭಿಮಾನಿ ಬಳಗದಿಂದ ಹಾಲಿನ ಅಭಿಷೇಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗ್ರಾಮದ ಮಂದಿರದಲ್ಲಿ ಎರಡು ನೂರು ಲೀಟರ್ ಹಾಲಿನಿಂದ ಅಭಿಷೇಕ್ ಮಾಡಿ ಹಾರ ಹಾಕಿ ಗುಂಡುರೆಡ್ಡಿ ಅಭಿಮಾನಿ ಬಳಗ ಸಂತಸಪಟ್ಟಿದೆ.
ಬೆಂಗಳೂರು: ಜನವರಿ 16ರಿಂದ ನಾಲ್ಕು ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ ಆಗಲಿದೆ ಕಾರಣವೇನೇಂದರೆ ಲೋಡ್ ಟೆಸ್ಟಿಂಗ್ ಮಾಡುವ ಸಲುವಾಗಿ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ ಹಾಗೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆ ಪೀಣ್ಯದಲ್ಲಿ ಪ್ರಾರಂಭವಾಗಿ ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. 2022ರಲ್ಲಿ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಹೆವಿ ವೆಹಿಕಲ್‌ಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. https://ainlivenews.com/2023-24-class-5th-8th-9th-class-public-exam-schedule-announced/ ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ವಾರ ತುಮಕೂರು ರಸ್ತೆಯಲ್ಲಿ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಗಳು ತಿಳಿಸಿವೆ. ಈ ಫ್ಲೈಓವರ್ 23…
ಬೆಂಗಳೂರು: ಸಿಗ್ನಲ್ ಗಳಲ್ಲಿ ರೂಲ್ಸ್ ಬ್ರೇಕ್ ಮಾಡೋರೆ ಇನ್ಮುಂದೆ ಎಚ್ಚರವಾಗಿರಬೇಕಿದೆ. ನಿಮ್ಮ ವಾಹನಗಳ ಮೇಲೆ ಸಂಚಾರಿ ಪೊಲೀಸರು ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ವಾಹನದ ಮೇಲೆ ಕೇಸ್ ಬೀಳೋದು ಪಕ್ಕಾ. https://ainlivenews.com/2023-24-class-5th-8th-9th-class-public-exam-schedule-announced/ ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಬಿಗ್ ಶಾಕ್ ಕಾದಿದ್ದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಡಿಎಲ್ ಕ್ಯಾನ್ಸಲ್ ಮಾಡಲು ಟ್ರಾಫಿಕ್ ಪೊಲೀಸರು ಯೋಚನೆ ಮಾಡುತ್ತಿದ್ದಾರೆ ಯಾಕಂದೆ ಅವರಿಗೂ ಕೂಡ ಇದರ ಬಗ್ಗೆ ವಾರ್ನಿಂಗ್ ಕೊಟ್ಟೂ ಕೊಟ್ಟೂ ಸಾಕಾಗಿರುತ್ತದೆ ಹಾಗಾಗಿ ಈ ದಾರಿಯನ್ನು ಹಿಡಿದಿದ್ದಾರೆ. ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ 711 ಜನರ ಡ್ರೈವಿಂಗ್ ಲೈಸೆನ್ಸ್ ಅಮಾನತು 2974 ಡ್ರೈವಿಂಗ್ ಲೈಸೆನ್ಸ್ ಅಮಾನತಿಗೆ ಸಂಚಾರಿ ಪೊಲೀಸರು ಸಾರಿಗೆ ಕಚೇರಿ ಕಳುಹಿಸಿದ್ರು ಈ ಪೈಕಿ 711 ಡ್ರೈವಿಂಗ್ ಲೈಸೆನ್ಸ್ ಅಮಾನತ್ತು ಉಳಿದ 2263 ಮಂದಿಯ ಡ್ರೈವಿಂಗ್ ಲೈಸೆನ್ಸ್ ಅಮಾನತ್ತುಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ