Author: AIN Author

ಹುಬ್ಬಳ್ಳಿ: ಸಮಾಜದ ಬಡವರ ಬಗ್ಗೆ ಅವರ ಏಳ್ಗೆ ಕುರಿತು ಸದಾ ಚಿಂತನೆ ಮಾಡುವುದೇ ನಾನು ಶ್ರಮಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಎಸ್ ಎಸ್ ಕೆ ಸಮಾಜದ ಯುವ ನಾಯಕ ರಾಜು ಸಾ ನಾಯಕವಾಡಿ ಹೇಳಿದರು. ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ನಮ್ಮ ಸೋಮವಮಶ ಕ್ಷೇತ್ರೀಯ ಸಮಾಜ ಯಾವುದೇ ಕಾರಣಕ್ಕೂ ಯಾರಿಗೂ ಜು ಹುಜುರೋ ಅನ್ನುವ ಸಮಾಜ ಅಲ್ಲಾ ಶಕ್ತಿ ಶಾಲಿ ಹಾಗೂ ಸಾಹಸಕ್ಕೆ ಹೆಸರು ವಾಸಿಯಾಗಿದೆ‌. ಆದರೆ ಇಂದಿನ ದಿನಗಳಲ್ಲಿ ಸಮಾಜದ ಅನೇಕರಿಗೆ ಸಹಾಯ ಹಾಗೂ ಪ್ರೋತ್ಸಾಹ ಬೇಕಾಗಿದೆ. ಆದ್ದರಿಂದ ನಮ್ಮ ಸಮಾಜದ ಕೇಲ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿ ಪಶು ಮಾಡತಾ ಇದ್ದಾರೆ. ಅವರಿಗೆ ಕೇವಲ ಅಧಿಕಾರದ ಹಪಾಹಪಿ ಯಾವುದೇ ರೀತಿಯ ಕಳಕಳಿ ಇಲ್ಲ. ಆದ್ದರಿಂದ ಅನೇಕ ಪ್ರತಿಭಾವಂತರು, ಸಾಧಕರು, ಅವಕಾಶ ವಂಚಿತರು, ವಿದ್ಯಾವಂತರು ಇದ್ದಾರೆ ಅವರಿಗೆ ಸಹಾಯ ಸಹಕಾರ ಬೇಕು. ಆದ್ದರಿಂದ ಅಧಿಕಾರಕ್ಕೆ ನಮ್ಮ ಸಮಾಜದ ಹಿರಿಯರು ಒಬ್ಬೊಬ್ಬ ನಾಯಕನ ಹಿಂದೆ ಹೋಗತಾ ಇದ್ದಾರೆ ಆದರೆ…

Read More

ಭಾರತ-ಆಸ್ಟ್ರೇಲಿಯಾ ನಡುವೆ ಇಂದು ನಡೆಯಲಿರುವ ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಕಲಬುರಗಿಯಲ್ಲಿ ಶುಭಾಶಯಗಳ ಮಹಾಪುರವೇ ಹರಿದು ಬರ್ತಿದೆ.. ನಗರದ VTU ವಿದ್ಯಾರ್ಥಿಗಳು ಸೇರಿ ಹಲವೆಡೆ ಅಭಿಮಾನಿಗಳು ಜೈಕಾರ ಹಾಕಿದ್ದು ಕಪ್ ನಮ್ದೆ ಅಂತ ಘೋಷಣೆ ಮೊಳಗಿಸಿದ್ದಾರೆ..ಟೀಂ ಇಂಡಿಯಾ ತಂಡದ ಫೋಟೋಗಳನ್ನ ಹಿಡಿದು ಆಲ್ ದಿ ಬೆಸ್ಟ್ ಹೇಳಿದ್ದಾರೆ

Read More

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ನಟಿಸಿದ ‘ಕಾಂತಾರ’ ಸಿನಿಮಾ ವರ್ಲ್ಡ್ ವೈಡ್ ರೀಚ್ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ‘ಕಾಂತಾರ’ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ನವೆಂಬರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಸರಳವಾಗಿ ಜರುಗಲಿದೆ. ಕಾಂತಾರ (Kantara) ಸೂಪರ್ ಡೂಪರ್ ಹಿಟ್ ಆದಂತೆಯೇ ‘ಕಾಂತಾರ 2’ ಅದಕ್ಕಿಂತ ಹೆಚ್ಚಿನ ಯಶಸ್ಸು ಪಡೆದು ಗೆದ್ದು ಬೀಗಲೇಬೇಕೆಂದು ರಿಷಬ್ ಶೆಟ್ಟಿ ಕೂಡ ತೆರೆಮರೆಯಲ್ಲಿ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕಾಗಿ ತಮ್ಮ ಲುಕ್ ಕೂಡ ಜೇಂಜ್ ಮಾಡಿ, ಸಿನಿಮಾ ಕಥೆಯಲ್ಲಿ ಸಾಕಷ್ಟು ಕೆಲಸ ಮಾಡಿಯೇ ಕಾಂತಾರ 2ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿನಿಮಾ ಮುಹೂರ್ತ ಸಮಾರಂಭದ ದಿನ…

Read More

ಬೆಂಗಳೂರು:- ರಾಜ್ಯದ ಕೇಸರಿ ಪಡೆಯಲ್ಲಿ ಸಂಭ್ರಮ ಹೆಚ್ಚಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಶನಿವಾರ ಪಕ್ಷದ ಕಚೇರಿಯವರೆಗೆ ತೆರೆದ ವಾಹನದಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಗಜಗಾತ್ರದ ಕಿತ್ತಳೆ ಹಣ್ಣಿನ ಹಾರ ಹಾಕಿ, ಹೂಮಳೆಗೆರೆದು, ಪಟಾಕಿ ಸಿಡಿಸಿದ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿ ಸಂತಸದ ಹೊಳೆಯಲ್ಲಿ ಮಿಂದೆದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತು 6 ತಿಂಗಳ ಬಳಿಕ ಪಕ್ಷದ ರಾಜ್ಯ ಸಮಿತಿಗೆ ಹೊಸ ಸಾರಥಿಯಾಗಿ ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಹಿರಿಯ ಶಾಸಕ ಆರ್.ಅಶೋಕ್ ಆಯ್ಕೆಯಾಗಿದೆ. ಎರಡೂ ಪ್ರಮುಖ ಹುದ್ದೆಗಳ ಭರ್ತಿ ಯಿಂದಾಗಿ ಕಾರ್ಯಕರ್ತರು ಖುಷಿ ಹೆಚ್ಚಿಸಿದೆ ಎಂದು ಪಕ್ಷದ ಮುಖಂಡರು ಹರ್ಷ ವ್ಯಕ್ತಪಡಿಸಿದರು. ನಂತರ ಆರ್.ಅಶೋಕ್​ಗೆ ಪಕ್ಷದ ಕಾರ್ಯ ಕರ್ತೆಯರು ಆರತಿ ಎತ್ತಿ, ಹೂಗುಚ್ಛ ನೀಡಿ ಕಚೇರಿ ಒಳಗೆ ಬರಮಾಡಿಕೊಂಡರು. ಭಾರತ ಮಾತೆ ಭಾವ ಚಿತ್ರಕ್ಕೆ ಪುಷ್ಪಾರ್ಚನೆ, ಜಗನ್ನಾಥರಾವ್ ಜೋಶಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ…

Read More

ಥಾಣೆ: ಪತ್ನಿಗೆ ಥಳಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಇಬ್ಬರು ಸಂಬಂಧಿಕರ ಮೇಲೆ ಪೊಲೀಸರು ಎಫ್‍ಐಆರ್ (FIR) ದಾಖಲಿಸಿದ ಘಟನೆ ನವಿಮುಂಬೈನಲ್ಲಿ (Navi Mumbai) ನಡೆದಿದೆ. 23 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಈ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಫ್ಯಾಶನ್ ಬಳೆಯನ್ನು ತೊಟ್ಟಿದ್ದಕ್ಕೆ ಪತಿ 30 ವರ್ಷದ ಪ್ರದೀಪ್ ಅರ್ಕಾಡೆಯು ಪತ್ನಿಗೆ ಬೆಲ್ಟ್ ನಲ್ಲಿ ಹಿಗ್ಗಾಮುಗ್ಗವಾಗಿ ಥಳಿಸಿದ್ದಾನೆ. ನವೆಂಬರ್ 13 ರಂದು 50 ವರ್ಷದ ಅತ್ತೆ ಮಹಿಳೆಯ ಕೂದಲನ್ನು ಎಳೆದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಪತಿ ಕೂಡ ಬೆಲ್ಟ್ ನಿಂದ ಥಳಿಸಿದ್ದಾನೆ. ಅಲ್ಲದೆ ಥಳಿಸುವ ಮುನ್ನ ಅತ್ತೆ ನೆಲಕ್ಕೆ ತಳ್ಳಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ನಂತರ ಸಂತ್ರಸ್ತೆ ಪುಣೆಯಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿ ದೂರು ದಾಖಲಿಸಿದರು. ನಂತರ ಪ್ರಕರಣವನ್ನು ನವಿ ಮುಂಬೈಗೆ ತನಿಖೆಗಾಗಿ ವರ್ಗಾಯಿಸಲಾಯಿತು ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು),…

Read More

ಹೊಸದಿಲ್ಲಿ: ಮನೆಯಿಂದ ಕೆಲಸ ಮಾಡುವ ಪದ್ಧತಿಗೆ (ವರ್ಕ್‌ ಫ್ರಂ ಹೋಂ) ತಿಲಾಂಜಲಿ ನೀಡಿ, ಕಚೇರಿಯಲ್ಲಿಯೇ ವಾರದ 5 ದಿನ ಕೆಲಸ ಮಾಡುವ ಪದ್ಧತಿಯನ್ನು ಜಾರಿಗೊಳಿಸಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌), ಈಗ ‘ದಿಢೀರ್‌ ವರ್ಗಾವಣೆ’ ನೀತಿಯನ್ನು ಜಾರಿಗೊಳಿಸಿದೆ. ಟಾಟಾ ಗ್ರೂಪ್‌ ಕಂಪನಿಯ ಈ ನಿರ್ಧಾರಕ್ಕೆ ಟಿಸಿಎಸ್‌ ವಿರುದ್ಧ ಅಸಮಾಧಾನಗೊಂಡಿರುವ ಐಟಿ ಉದ್ಯೋಗಿಗಳ ಸಂಘಟನೆಯು (ಎನ್‌ಐಟಿಇಎಸ್‌), ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ದೂರು ನೀಡಿದೆ. “2,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸರಿಯಾದ ಸೂಚನೆ ಅಥವಾ ಸಮಾಲೋಚನೆ ಇಲ್ಲದೆಯೇ ಬೇರೆ ಬೇರೆ ನಗರಗಳಿಗೆ ದಿಢೀರ್‌ ವರ್ಗಾವಣೆ ಮಾಡಲಾಗಿದೆ. 15 ದಿನಗಳಲ್ಲಿ ನಿಗದಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ನಮಗೆ ಉದ್ಯೋಗಿಗಳಿಂದ 180ಕ್ಕೂ ಹೆಚ್ಚು ದೂರುಗಳು ಬಂದಿವೆ. ಕಂಪನಿಯ ಕ್ರಮದಿಂದ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅಪಾರ ತೊಂದರೆಯಾಗಿದೆ,” ಎಂದು ಎನ್‌ಐಟಿಇಎಸ್‌ ಆರೋಪಿಸಿದೆ. “ಒತ್ತಾಯಪೂರ್ವಕವಾಗಿ ವರ್ಗಾವಣೆ ಮಾಡಲಾಗಿದೆ. ಅನೈತಿಕ ವರ್ಗಾವಣೆ ಅಭ್ಯಾಸಗಳನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಆರಂಭಿಸಿದೆ. ವರ್ಗಾವಣೆ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ ಉದ್ಯೋಗಿಗಳು ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ…

Read More

ಕಲಬುರಗಿ:- ಶನಿವಾರ ನಡೆದ KEA ನಡೆಸಿದ ಪರೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಹೊರಬಿದ್ದಿದ್ದು ಪರೀಕ್ಷೆ ಬರೆದವರಿಗಿಂತ ಗೈರಾದವರೇ ಹೆಚ್ಚು.. ಹೌದು ಬೆಳಗ್ಗೆ ಪೇಪರ್ ಗೆ ಎರಡು ಕೇಂದ್ರ ಸೇರಿ ಒಟ್ಟು ನೊಂದಾಯಿಸಿದ್ದು 941 ಅಭ್ಯರ್ಥಿಗಳು ಅದ್ರಲ್ಲಿ 767 ಜನ ಗೈರು ಹಾಜರಾಗಿದ್ದು ಕಂಡುಬಂತು..ಅದೇರೀತಿ ಮಧ್ಯಾಹ್ನದ ಆರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2427 ಅಭ್ಯರ್ಥಿಗಳು ನೊಂದಣಿ ಮಾಡಿಸಿದ್ದು ಆ ಪೈಕಿ‌ 1329 ಹಾಜರ್ ಆಗಿದ್ದರೆ 1100 ಅಭ್ಯರ್ಥಿಗಳು ಗೈರು ಹಾಜರ್ ಆಗಿದ್ದಾರೆ. ಒಟ್ನಲ್ಲಿ ಅದೇನು ಆತಂಕವೋ ಅದೇನು ಕಾರಣವೋ ಗೊತ್ತಿಲ್ಲ ಪರೀಕ್ಷೆಗೆ ಬಂದವರು ಕಮ್ಮಿ ದೂರಿನ ಉಳಿದು ಆಬ್ಸೆಂಟ್ ಆದೋರೇ ಜಾಸ್ತಿ ಅನ್ನುತ್ತಿದೆ ಅಂಕಿ ಅಂಶ.

Read More

ಬಳ್ಳಾರಿ:- ಇಂದು ವಿಶ್ವಕಪ್ ಕ್ರಿಕೇಟ್ ಫೈನಲ್ ಪಂದ್ಯವಳಿ ಹಿನ್ನೆಲೆ ಟೀಮ್ ಇಂಡಿಯಾಗೆ ಕ್ರೀಡಾ ಸಚಿವ ನಾಗೇಂದ್ರ ಅವರು ಶುಭ ಕೋರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಟೀಂ ಇಂಡಿಯಾ ಗೆದ್ದು ಬರಲಿ, ೩ನೇ ಬಾರಿ ವಿಶ್ವಕಪ್ ಭಾರತ ಮೂಡಿಗೆರಿಸಿಕೊಳ್ಳಲಿ ಎಂದು ಹೇಳುವ ಮೂಲಕ ಸಮಸ್ತ ೭ ಕೋಟಿ ಕನ್ನಡಿಗರ ಪರವಾಗಿ ಸಚಿವರು ಶುಭಾಶಯಗಳನ್ನು ತಿಳಿಸಿದ್ದಾರೆ. ಈಗಾಗಲೇ ೯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ತಂಡ, ಇಂದು ಅಂತಿಮ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಲಿ. ಉತ್ತಮ ಪ್ರದರ್ಶನ ನೀಡಿ, ವಿಶ್ವಕಪ್ ಗೆದ್ದು ಬರಲಿ ಎಂದು ಸಚಿವ ನಾಗೇಂದ್ರ ಹಾರೈಸಿದ್ದಾರೆ.

Read More

ಚಳಿಗಾಲ ಬಂತು ಅಂದ್ರೆ ವಿಪರೀತ ಚಳಿ ಈ ಕಾಲದಲ್ಲಿ ನಾವು ಚರ್ಮದ ಆರೈಕೆಯ ಮೇಲೆ ಸ್ವಲ್ಲನ್ನು ಗಮನಹರಿಸುವುದಿಲ್ಲ.ಇದರಿಂದ ನಮಗೆ ಅನಾರೋಗ್ಯ ಕೂಡಾ ಬರುವ ಸಾಧ್ಯತೆ ಇರಬಹುದು ಹಾಗದ್ರೆ ನಾವು ಈ ಸಮಸ್ಯೆಗಳಿಂದ ಬಜಾವ್ ಆಗಲು ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ನಮ್ಮ‌ ನಿತ್ಯ ಜೀವನದಲ್ಲಿ ಬಳಸಿಕೊಳ್ಳಬೇಕು. ಹೌದು, ಅನೇಕ ಜನರಸಾಮಾನ್ಯವಾಗಿ ಚಳಿಗಾಲದ ಉದ್ದಕ್ಕೂ ಒಣ ತ್ವಚೆಯಿಂದ ಬಳಲುತ್ತಾರೆ. ಇನ್ನೂ ಕೆಲವರ ಚರ್ಮ ಬಿರುಕಿನಂತಹ ಸಮಸ್ಸೆಗಳು ಕಾಡುತ್ತವೆ. ಆದರಿಂಧ ನಾವು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. 1. ಚಳಿಗಾಲದಲ್ಲೂ ಹೆಚ್ಚು ನೀರು ಕುಡಿಯಿರಿ:  ಚಳಿಗಾಲದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ.ಇದರಿಂದ ನಮ್ಮ ಚರ್ಮ ಒರಟು ಆಗುವ ಸಾಧ್ಯತೆ ಕೂಡ ಬರುತ್ತದೆ.ಇದರಿಂದ  ಶರೀರದಲ್ಲಿ ಸಾಕಷ್ಟು ನೀರು ಮತ್ತು ಕೊಬ್ಬಿನ ಅಂಶ ಇದ್ದಾಗ ಚರ್ಮ ಬಿರುಕು ಬಿಡುವುದಿಲ್ಲ. 2. ಬೆವರನ್ನು ಆಗಾಗ ಒರೆಸಲು ಮರೆಯಬೇಡಿ  ನಾವು ಆಗಾಗ ಬೆವರನ್ನು ಒರೆಸುತ್ತಾ ಇರಬೇಕು. ಇಲ್ಲವಾದರೆ ಆ ಕೊಳೆ ಅಲ್ಲೇ ಒಟ್ಟಾಗುತ್ತಾ ಹೋಗಿ ಚರ್ಮದ ಹೊಳಪನ್ನು ಕಡಿಮೆ ಮಾಡುತ್ತದೆ. ಅದಲ್ಲದೆ,…

Read More

ಬೆಂಗಳೂರು:- ಕುಮಾರಸ್ವಾಮಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿರುವುದು ತಿಳಿದ ವಿಚಾರವಾಗಿದೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿ ತಮ್ಮ ದ್ವಂದ್ವ ನಿಲುವುಗಳ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ಮೌಲ್ಯವನ್ನು ದಿನೇ ದಿನೆ ಕಳೆದುಕೊಳ್ಳುತ್ತಿದ್ದಾರೆ. ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕ ಆಡಿದ್ದ ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಸಚಿವ ಹೆಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ. ಉತ್ತಮ ಸಾರ್ವಜನಿಕ ಬದುಕಿನ ಭಾಗವಾಗಿ ಈ ಹಿಂದೆಯೇ ಸೈದ್ಧಾಂತಿಕ ಬದ್ಧತೆಯ ಪ್ರಾಮುಖ್ಯತೆ ಮತ್ತು ಅದು ನಾಯಕತ್ವದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹಿಂದೆಯೇ ಅವರಿಗೆ ನಾನು ಎಚ್ಚರಿಸಿದ್ದೆ. ಆದರೆ, ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಅವರು ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸೈದ್ಧಾಂತಿಕವಾಗಿ ತಾವೆಷ್ಟು ಅಧಃಪತನಕ್ಕೆ ಜಾರಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ. ಒಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳ ಮೂಲಕ…

Read More