Author: AIN Author

ಬೆಂಗಳೂರು : ರಾಜ್ಯಮಟ್ಟದ ಖ್ಯಾತ ಫುಟ್‌ಬಾಲ್‌ ಆಟಗಾರ ಕೆ. ಮೊನೀಶ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದ ಖ್ಯಾತ ಫುಟ್‌ಬಾಲ್‌ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು ಎಂದು ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯ ಮೊನೀಶ್ ಅವರು ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್. ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರು ಈಗಲ್ಸ್ ಪರ ಮೊನೀಶ್ ಕಣಕ್ಕೆ ಬಾಬುಸಾಪಾಳ್ಯ ನಿವಾಸಿಯಾಗಿದ್ದ ಮೊನೀಶ್…

Read More

ಬೆಂಗಳೂರು: ಹಳೆಯ ಕಾಲದ ಗತವೈಭವವನ್ನ ಸಾರುವ ಡಬಲ್ ಡೆಕ್ಕರ್ ಬಸ್ ಗಳನ್ನ ಮತ್ತೆ ರಸ್ತೆಮೇಲೆ ನೋಡುವ ದಿನಗಳು ಸನ್ನಿಹದಲ್ಲಿವೆ. ಬಿಎಂಟಿಸಿ ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಗಳನ್ನ ರಸ್ತೆಗಿಳಿಸಲು ಗಂಭೀರ ಚಿಂತನೆ‌‌ ನಡೆಸುತ್ತಿದ್ದು,.‌ ಒಂದ್ ಕಾಲದಲ್ಲಿ ಮಿಂಚಿ ಮರೆಯಾದ ಬಸ್ ಗಳಿಗೆ ಟೆಂಡರ್ ಕರೆಯಲು ಮುಂದಾಗಿದೆ. ಹಾಗಾದ್ರೆ ಮತ್ತೆ ಯಾವಾಗ ಬರುತ್ವೆ ಡಬಲ್ ಡೆಕ್ಕರ್ ಬಸ್ ಗಳು ಅನ್ನೊ ಡೀಟೆಲ್ಸ್ ಇಲ್ಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲೆ ಮೂಲೆಗೆ ಬಸ್ ಸಂಚಾರ ಒದಗಿಸುತ್ತಿರುವ ಬಿಎಂಟಿಸಿ ಈಗ ಒಂದೆಜ್ಜೆ ಮುಂದೆ ಹೋಗಿದೆ. ನಗರದಲ್ಲಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಗಳನ್ನ ರಸ್ತೆಗಿಳಿಸಲು ಪ್ಲಾನ್ ಮಾಡ್ತಾಯಿದೆ.‌ ಡಬಲ್ ಡೆಕ್ಕರ್ ಬಸ್ ಗಳ ಖರೀದಿಗೆ ಟೆಂಡರ್ ಬಿಎಂಟಿಸಿ ಟೆಂಡರ್ ಕರೆಯಲು ಮುಂದಾಗಿದ್ದು, ಅಂದುಕೊಂಡಂತೆ ಆದ್ರೆ ಕೆಲ ತಿಂಗಳಲ್ಲೇ 10 ಬಸ್ ಗಳು ನಗರದ ರಸ್ತೆಗಿಳಿಯಲಿವೆ ಕೆಲ ದಿನಗಳಲ್ಲೇ ಟೆಂಡರ್ ಕರೆಯಲಿದ್ದು , ಟೆಂಡರ್ ರಿಪೋರ್ಟ್ ರೆಡಿ ಮಾಡ್ತಾಯಿದೆ.‌ ಮೊದಲ ಹಂತದಲ್ಲಿ 10 ಡಬಲ್ ಡೆಕ್ಕರ್ ಬಸ್…

Read More

ಅಯೋಧ್ಯೆ: ಪ್ರಭು ಶ್ರೀರಾಮನ ಅಸ್ತಿತ್ವಕ್ಕಾಗಿ ನಮ್ಮ ದೇಶದಲ್ಲಿ ಕಾನೂನು ಸಂಘರ್ಷ ಕೂಡ ನಡೆದಿದೆ. ಭಾರತದ ನ್ಯಾಯದೇವತೆ ಆದೇಶದಂತೆ ನ್ಯಾಯಬದ್ಧವಾಗಿ ಮಂದಿರ ನಿರ್ಮಾಣವಾಗಿದೆ. ಇಂದು ಇಡೀ ದೇಶ ಇಂದು ರಾಮ ದೀಪಾವಳಿ ಆಚರಿಸುತ್ತಿದೆ. ದೇಶದ ಪ್ರತಿ ಮನೆಯಲ್ಲೂ ಇಂದು ಸಂಜೆ ಶ್ರೀರಾಮನ ಜ್ಯೋತಿ ಬೆಳಗಲಿದೆ. ಕಾಲಚಕ್ರ ಮತ್ತೆ ಬದಲಾವಣೆಯಾಗಿದೆ. https://ainlivenews.com/pm-modi-pays-homage-to-balaram-in-ayodhya-hindu-dream-come-true/ ನನ್ನ 11 ದಿನಗಳ ಉಪವಾಸ ವ್ರತ ಶ್ರೀರಾಮನ ಮಂದಿರದಲ್ಲಿ ಅಂತ್ಯಗೊಳಿಸಿದ್ದೇನೆ. ಸಮುದ್ರದಿಂದ ಸರಯೂವರೆಗೆ ಯಾತ್ರೆಯ ಅವಕಾಶ ಸಿಕ್ಕಿದೆ. ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ ಎಂದು ಮೋದಿ ಹೇಳಿದರು.

Read More

ಬೆಂಗಳೂರು: ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಇಡಿಗೆ ದೂರು. ಅಬಕಾರಿ ಇಲಾಖೆಯಲ್ಲಿ ಅಕ್ರಮ ದಂಧೆ ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯಿಂದ ಇ.ಡಿ ಗೆ ದೂರು ನೀಡಲಾಗಿದೆ. ಲೋಕಸಭಾ ಚುನಾವಣೆಗೆ ಹಣ ಹೊಂದಿಸಲು ಅಕ್ರಮವಾಗಿ ವರ್ಗಾವಣೆ ಮಾಡುತ್ತಿರುವ ಆರೋಪ ಆರ್ಥಿಕ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದಾಗಿ ಆರೋಪಿಸಿದ ದಿನೇಶ್ ಕಲ್ಲಹಳ್ಳಿ ಸರ್ಕಾರ ಫಂಡ್ ವಸೂಲಿ ಮಾಡಲು ಕುಮ್ಮಕ್ಕು ನೀಡುತ್ತಿದೆ ತಕ್ಷಣ ತಿಮ್ಮಾಪುರ ರಾಜೀನಾಮೆ ಪಡೆಯಬೇಕೆಂದು ಕಲ್ಲಹಳ್ಲಿ ಒತ್ತಾಯ  ಮಾಡಿದ್ದಲ್ಲದೆ  ಇ.ಡಿ ಅಧಿಕಾರಿಗಳು ತನಿಖೆ ನಡೆಸಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.

Read More

ಬೆಂಗಳೂರು:  ಬರೋಬ್ಬರಿ 500 ವರ್ಷಗಳ ಕಾಯುವಿಕೆಗೆ ಇದೀಗ ಅಂತ್ಯ ಬಿದ್ದಿದೆ. ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಪ್ರತಿ ಮನೆ..ಮನೆಯಲ್ಲಿಯೂ ಜಯ ಶ್ರೀ ರಾಮನ ನಾಮ ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಲಾವಿದನೋರ್ವಅಕ್ಕಿಯಲ್ಲಿ ಸುಂದರವಾಗಿ ರಾಮನ ಮೂರ್ತಿಯನ್ನು ಬಿಡಿಸಿದ್ದು  ಈ ಕಲಾವಿದನ ಕೈಚಳಕ್ಕೆ ರಾಮ ಭಕ್ತರು ಫುಲ್ ಫಿದಾ  ಆಗಿದ್ದಾರೆ. ರೆಡಿ ಮಾಡಿದ ಕಲಾವಿದ ಪ್ರಮೋದ್ ಕೈಯಲ್ಲಿ ಮೂಡಿಬಂದ ಅಕ್ಕಿಯಿಂದ ರಾಮನ‌ ಮೂರ್ತಿ ಇದರಿಂದ ರಾಮ ಭಕ್ತರು ಫುಲ್ ಫಿದಾ  ಆಗಿದ್ದಾರೆ. 3 ದಿನಗಳ ಸತತ ಪ್ರಯತ್ನದ ನಂತರ 4 ಅಡಿ ಎತ್ತರದ ರಾಮ ಮೂರ್ತಿ ರೆಡಿ ಮಾಡಿದ ಕಲಾವಿದ ಪ್ರಮೋದ್

Read More

ತುಮಕೂರು: ಬಸವಣ್ಣನವರ (Basavanna) ತತ್ವಗಳು ಜಾರಿ ಆಗಿದ್ದರೆ ಧರ್ಮಗಳ ನಡುವೆ ಈ ದ್ವೇಷ ಇರುತ್ತಿರಲಿಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ (K.N Rajanna), ಬಿಜೆಪಿ (BJP)  ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸ್ವಾಮೀಜಿಗಳ ನಿರ್ದೇಶನದ ಮೇರೆಗೆ ನಾನು ಮಾತನಾಡುತ್ತಿದ್ದೇನೆ. 12 ನೇ ಶತಮಾನದಲ್ಲಿ ಬಸವಣ್ಣ ಅವರು ಮಾಡಿದ ಕೆಲಸವನ್ನು ಈಗ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. https://ainlivenews.com/pm-modi-pays-homage-to-balaram-in-ayodhya-hindu-dream-come-true/ ಹಾಗಂತ ಹಿಂದೆ ಯಡಿಯೂರಪ್ಪನವರು ಏನೂ ಮಾಡಿಲ್ಲ ಅಂತ ಅರ್ಥವಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು, ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸಿದ್ದರಾಮಯ್ಯನವರು. ಕಟ್ಟಕಡೆಯ ಜನರಿಗೂ ತಲುಪುವಂತೆ ಮಾಡಿದ್ದು ಅವರೇ ಎಂದು ತಿಳಿಸಿದ್ದಾರೆ. ಇವತ್ತು ಸಮಾಜದಲ್ಲಿ ಇರುವ ಪರಸ್ಪರ ಧರ್ಮಗಳ ನಡುವೆ ದ್ವೇಷದ ವಾತಾವರಣ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿದೆ. ಅದರಂತೆ ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 3336 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 89 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬ ಸೋಂಕಿತ ಮೃತಪಟ್ಟಿದ್ದು, 74 ಸೋಂಕಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 16 ಮಂದಿಗೆ ಕೋವಿಡ್ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಬ್ಬ ಸೋಂಕಿತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 2.66 ರಷ್ಟಿದೆ. ಒಟ್ಟು 497 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Read More

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಚೆನೈನಲ್ಲಿ (Chennai) ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಅರ್ಜುನ್ ಸರ್ಜಾ  (Arjun Sarja) ಪುತ್ರಿ ಐಶ್ವರ್ಯ ಅರ್ಜುನ್ ಸಹ ಜೊತೆಗಿದ್ದರು. ಮೋದಿ ಅವರನ್ನು ಭೇಟಿ ಮಾಡಿದ ನಂತರ ಅರ್ಜುನ್ ಸರ್ಜಾ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಚೆನ್ನೈಗೆ ಆಗಮಿಸಿದ್ದರು. ಈ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ನನ್ನನ್ನು ನೋಡಿದ ತಕ್ಷಣ ಮಂದಸ್ಮಿತರಾಗಿ ಮಾತನಾಡಿದ ಪ್ರಧಾನಿಗಳು, ನಮ್ಮ ಕುಟುಂಬದವರ ಹೆಸರೆಲ್ಲಾ ನೆನಪಿನಲ್ಲಿಟ್ಟುಕೊಂಡು ವಿಚಾರಿಸಿದ್ದು ನನಗೆ ಆಶ್ಚರ್ಯವಾಯಿತು. ಈ ಭೇಟಿ ಸಮಯದಲ್ಲಿ ನಾನು ಚೆನೈನಲ್ಲಿರುವ ನಮ್ಮ ಅಂಜನಾಸುತ ಶ್ರೀ ಯೋಗಾಂಜನೇಯ ಮಂದಿರಂ ದೇವಸ್ಥಾನದ ಭಾವಚಿತ್ರವನ್ನು ನೀಡಿ, ನಮ್ಮ ದೇವಸ್ಥಾನಕ್ಕೆ ಬರಬೇಕೆಂದು ಆಹ್ವಾನಿಸಿದೆ. ಮುಂದಿನ ಸಲ ಚೆನ್ನೈಗೆ ಬಂದಾಗ ಖಂಡಿತವಾಗಿಯೂ ಬರುವದಾಗಿ ಹೇಳಿದರು. ಇದೇ ಸಮಯದಲ್ಲಿ ನನ್ನ ಮಗಳ ವಿವಾಹದ ವಿಷಯಯನ್ನು…

Read More

ಮಾಸ್ಕೋಗೆ ತೆರಳುತ್ತಿದ್ದ ವಿಮಾನವೊಂದು ಅಫ್ಘಾನಿಸ್ತಾನದ ಬಡಾಖಾನ್‌ನ ವಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಬಡಾಖಾನ್‌ನಲ್ಲಿನ ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿಯ ಮುಖ್ಯಸ್ಥರು ಘಟನೆಯನ್ನು ದೃಢಪಡಿಸಿದ್ದಾರೆ, ಪ್ರಯಾಣಿಕ ವಿಮಾನವು ಪ್ರಾಂತ್ಯದ ಕರನ್, ಮಂಜನ್ ಮತ್ತು ಜಿಬಾಕ್ ಜಿಲ್ಲೆಗಳನ್ನು ವ್ಯಾಪಿಸಿರುವ ಟೋಪ್‌ಖಾನೆ ಪರ್ವತದಲ್ಲಿ ಪತನಗೊಂಡಿದೆ ಎಂದು ಹೇಳಿದ್ದಾರೆ. https://ainlivenews.com/pm-modi-pays-homage-to-balaram-in-ayodhya-hindu-dream-come-true/ ಅಧಿಕೃತ ಮೂಲಗಳು ಸಾವುನೋವುಗಳು ಅಥವಾ ಅಪಘಾತದ ಕಾರಣದ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ. ಶನಿವಾರ ರಾತ್ರಿ ರಾಡಾರ್‌ನಿಂದ ಕಣ್ಮರೆಯಾದ ವಿಮಾನವು ಟೋಪ್‌ಖಾನಾ ಪ್ರದೇಶದ ಎತ್ತರದ ಪರ್ವತ ಗಳಲ್ಲಿ ಪತನಗೊಂಡಿದೆ ಎಂದು ಬಡಾಕ್ಷಣ್‌ನಲ್ಲಿರುವ ತಾಲಿಬಾನ್‌ನ ಪೊಲೀಸ್ ಕಮಾಂಡ್ ಹೇಳಿದೆ. ಭಾರತ ಸರ್ಕಾರವು ವಿವರಗಳನ್ನು ಪರಿಶೀಲಿಸಲು ತಂಡವನ್ನು ಕಳುಹಿಸಿದೆ ಮತ್ತು ಸಾವುನೋವುಗಳು ಸಂಭವಿಸಬಹುದು ಎಂದು ವರದಿಗಳು ಸೂಚಿಸುತ್ತಿವೆ.  

Read More

ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಇಂದು ತಮ್ಮ ಇಬ್ಬರು ಮಕ್ಕಳ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಕ್ಕಳ ನಾಮಕರಣ ಸಮಾರಂಭಕ್ಕೆ ಸಾಕ್ಷಿಯಾಗಲು ಬಾಲಿವುಡ್ ನಿಂದ ಸಂಜಯ್ ದತ್ (Sanjay Dutt) ಆಗಮಿಸಿದ್ದರು. ಸಂಜಯ್ ಮತ್ತು ಧ್ರುವ ಕೆಡಿ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಈ ಹೊತ್ತಿನಲ್ಲಿ ನಟ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.‌ ಅಯೋಧ್ಯೆ ಬಾ;ಲರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಾಮಕರಣ ಶಾಸ್ತ್ರ ನಡೆದಿದ್ದು, ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ  ಇಟ್ಟಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ…

Read More