Author: AIN Author

ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಫೈನಲ್ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮೂರನೇ ಏಕದಿನದ ವಿಶ್ವಕಪ್‌ಗಾಗಿ ಹೋರಾಟ ನಡೆಸಲಿದೆ. ಈ ನಡುವೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಪಂದ್ಯ ಪ್ರಾರಂಭಕ್ಕೂ ಗಂಟೆಗಳ ಮೊದಲು ಅಹಮದಾಬಾದ್‌ಗೆ ಆಗಮಿಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಎಲ್ಲರೂ ಈ ದಿನಕ್ಕಾಗಿ ಕಾಯುತ್ತಿದ್ದಾರೆ. ನಾನು ಟೀಂ ಇಂಡಿಯಾಗೆ ಶುಭಾಶಯ ಹೇಳಲು ಬಂದಿದ್ದೇನೆ. ವಿಶ್ವಕಪ್‌ಗಾಗಿ ಹಣಾಹಣಿಯಲ್ಲಿರುವ ಭಾರತ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ವಿಶ್ವಕಪ್‌ಗಾಗಿ ಹೋರಾಟ ನಡೆಸಲಿರುವ ಕ್ರಿಕೆಟಿಗರು ಈಗಾಗಲೇ ಸ್ಟೇಡಿಯಂಗೆ ಲಗ್ಗೆಯಿಟ್ಟಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ಪ್ರಾರಂಭವಾಗಲಿದೆ. ಮೋದಿ ಸ್ಟೇಡಿಯಂನೆಡೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ದಂಡು ಹೊರಟಿದೆ. ಭಾರತಕ್ಕೆ ಕಪ್ ಒಲಿದು ಬರಲಿ ಎಂದು ದೇಶಾದ್ಯಂತ ಎಲ್ಲೆಡೆ ಪೂಜೆ ಪುನಸ್ಕಾರಗಳು ನೆರವೇರಿಸಲಾಗುತ್ತಿದೆ

Read More

ಚಿಕ್ಕಮಗಳೂರು: ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಜಾಹೀರಾತು ಪ್ರಕಟಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಜಾಹೀರಾತು ಪ್ರಕಟಿಸಿದ್ದೀರಿ. ಜನ ನೆಮ್ಮದಿಯಿಂದ ಇದ್ದಾರಾ ಇಲ್ಲ ಅಂತ ಜಾಹೀರಾತನಿಂದ ತಿಳಿಯಲ್ಲ. ರಾಜ್ಯದಲ್ಲಿ ಅಕ್ರಮಗಳು, ಅಪರಾಧ ಚಟುವಟಿಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಜನ ನೆಮ್ಮದಿಯಿಂದ ಬದುಕುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ನಿಮ್ಮ ಮಗನನ್ನು ಆಶ್ರಯ ಕಮಿಟಿ ಅಧ್ಯಕ್ಷರಾಗಿ ಮಾಡಿದ್ದೀರಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆಶ್ರಯ ಕಮಿಟಿ ಅಧ್ಯಕ್ಷರು ಅಧಿಕಾರಿಗಳನ್ನು ಕರೆದು ಸಭೆ ಮಾಡಬಹುದಾ? ‘ಹಲೋ ಅಪ್ಪಾ’ ಹೇಳಿಕೆಗೆ ಸ್ಪಷ್ಟನೆ ನೀಡಲು ಪರದಾಡುತ್ತಿದ್ದಾರೆ. ಎರಡು ದಿನದಿಂದ ಅವರ ಗೋಳಾಟ ನೋಡಿದ್ದೇನೆ. ನಿಮ್ಮ ಮಗ ರಾಜಕೀಯ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಅವರಿಂದ ರಾಜಕೀಯ ಮಾಡಿಸಿ ನಾವು ಬೇಡ ಅನ್ನುವುದಿಲ್ಲ. ಆಶ್ರಯ ಸಮಿತಿ ಸದಸ್ಯರು ಕೆಡಿಪಿ ಸಭೆ ನಡೆಸುವ ಅಧಿಕಾರ ಇರುತ್ತಾ? ಕ್ಷೇತ್ರ ನೋಡಿಕೊಳ್ಳಲು ಆಶ್ರಯ ಸಮಿತಿ ಸದಸ್ಯ ಮಾಡಿದ್ದೇವೆ ಅನ್ನುತ್ತೀರಿ. ನಿವೇಶನ ಕೊಡುವ ಕುರಿತು ಆಶ್ರಯ ಕಮಿಟಿ…

Read More

ಚಾಮರಾಜನಗರ: ಭಾರತ ಆಸ್ಟ್ರೇಲಿಯಾ ಫೈನಲ್ ಪಂದ್ಯಾವಳಿಯಲ್ಲಿ ಭಾರತ ಗೆಲ್ಲಲಿ ಎಂದು ಕೇರಳದ ಗುರುವಾಯೂರು ಕೃಷ್ಣ ಚೋಟಾನಿಕೆರೆ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಚಾಮರಾಜನಗರ ಜಿಲ್ಲೆ ಹನೂರು ಪಟ್ಟಣದ ಅಯ್ಯಪ್ಪ ಭಕ್ತರು. 2023ನೇ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ಸತತವಾಗಿ 10 ಪಂದ್ಯಗಳಲ್ಲಿ ಅಜೇಯರಾಗಿ ಜಯಗಳಿಸಿ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಇಂದು ನಡೆಯುವ ಫೈನಲ್ ಪಂದ್ಯಾವಳಿಯಲ್ಲಿ ಭಾರತ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ವೇಳೆ ಅಯ್ಯಪ್ಪ ಭಕ್ತರಾದ ಗುರುಸ್ವಾಮಿ ಹಾಗೂ ಸತೀಶ್ ಮಾತನಾಡಿ, ಭಾರತ ನಾಲ್ಕನೇ ಬಾರಿಗೆ ವಿಶ್ವ ಕಪ್ ಫೈನಲ್ ಗೆ ಆಯ್ಕೆಯಾಗಿದ್ದು ಎರಡು ಬಾರಿ ವಿಶ್ವಕಪ್ ಗೆದ್ದಿದೆ .ಈ ಬಾರಿಯೂ ಭಾರತ-ಆಸ್ಟ್ರೇಲಿಯಾ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ. ಕೋಟ್ಯಾಂತರ ಭಾರತೀಯರ ಕನಸು ನನಸಾಗಲಿ ಎಂದು ಶುಭ ಕೋರಿದರು.

Read More

ಬಳ್ಳಾರಿ : ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಕಪ್ ಫೈನಲ್ ಹಿನ್ನಲೆಯಲ್ಲಿ  ನಗರದ ಅಧಿದೇವತೆ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಕಪ್ ಫೈನಲ್ ಹಿನ್ನಲೆಯಲ್ಲಿ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಬ್ಯಾಟ್, ಬಾಲ್ ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸಿದ ಅಭಿಮಾನಿಗಳು, ಹಾಗೆ ಭಾರತಂಬೆಯ ಪೋಟೋಗೆ ವಿಶೇಷ ಪೂಜೆ ಮಾಡಿ ಅಭಿಮಾನಿಗಳು, ಭಾರತ ಗೆಲ್ಲಲಿದೆ, ಬೊಲೋ ಭಾರತ್ ಮಾತಾ ಕೀ  ಘೋಷಣೆ, ಈ ಬಾರಿ ಇಂಡಿಯಾ ಟೀಂ ವಿಶ್ವ ಕಪ್ ಗೆಲ್ಲುವುದು ಗ್ಯಾರಂಟಿ  ಎಂದು ವಿಶ್ವಾಸ ವ್ಯಕ್ತಪಡಿಸಿದ ಆಭಿಮಾನಿಗಳು.

Read More

ಅಹಮದಾಬಾದ್: ಏಷ್ಯಾ ಕಪ್‌ ಗೆದ್ದ ಬಳಿಕ ಶ್ರೇಷ್ಠ ಲಯ ಕಂಡುಕೊಂಡ ಟೀಮ್ ಇಂಡಿಯಾ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ ತಲುಪಿದೆ. ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಭಾರತ ತಂಡದ ಯಶಸ್ಸಿನ ಶ್ರೇಯಸನ್ನು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಸಲ್ಲಬೇಕು ಎಂದು ಹೇಳಿದ್ದಾರೆ. ಫೈನಲ್‌ ಪಂದ್ಯಕ್ಕೂ ಹಿಂದಿನ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ತಂಡದ ಯಶಸ್ಸಿನ ಹಿಂದೆ ರಾಹುಲ್ ದ್ರಾವಿಡ್‌ ಮಾರ್ಗದರ್ಶನದ ಪ್ರಭಾವ ವಿವರಿಸಿದ್ದಾರೆ. “ತಂಡದ ಯಶಸ್ಸಿನ ಹಿಂದ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪಾತ್ರ ಅಪಾರ. ತಂಡದ ಎಲ್ಲ ಆಟಗಾರರಿಗೂ ಸ್ವಾತಂತ್ರ ನೀಡಿದ್ದಾರೆ. ಆಟಗಾರರಿಗೆ ಬೇಕ್ಕಾದ್ದನ್ನು ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನಿಗೆ ಅವರದ್ದೇ ಜವಾಬ್ದಾರಿಯನ್ನು ಅವರು ನೀಡಿದ್ದಾರೆ. ಇದರಿಂದ ಆಟಗಾರರಲ್ಲಿ ಸ್ಪಷ್ಟತೆ ಕಾಣಬಹುದು. ಸದಾ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಾರೆ. 2022ರ ಟಿ20 ವಿಶ್ವಕಪ್‌ ಬಳಿಕ ಪ್ರತಿಯೊಬ್ಬ ಆಟಗಾರನಿಗೆ ಬೆಂಬಲ ನೀಡಿದ್ದಾರೆ.…

Read More

ದೇಶಕ್ಕೆ ದೇಶವೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಕಾಳಕ್ಕೆ ಕಾತುರದಿಂದ ಕಾಯುತ್ತಿದೆ. 12 ವರ್ಷಗಳ ಬಳಿಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡವು ಮೂರನೇ ಬಾರಿ ಏಕದಿನ ವಿಶ್ವಕಪ್‌ ಎತ್ತಿಹಿಡಿಯಲ್ಲಿ ಎಂದು ಎಲ್ಲೆಡೆ ಪೂಜೆ ಪ್ರಾರ್ಥನೆಗಳು ನಡೆಯುತ್ತಿದೆ.ಭಾರತ ಗೆದ್ದು ಬೀಗಲಿ, ವಿಶ್ವಕಪ್‌ ರೋಹಿತ್‌ ಪಡೆಯ ಪಾಲಾಗಲಿ ದೇಶಾದ್ಯಂತ ಶತಕೋಟಿ ಭಾರತೀಯರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ವಿಶ್ವಕಪ್‌ ಫೈನಲ್‌ ಪಂದ್ಯವು ಕುತೂಹಲ ಕೆರಳಿಸಿದೆ. ಮ್ಯಾಚ್ ನೋಡಲು ಗಣ್ಯರು ದಂಡು  ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಪಂದ್ಯ ಆರಂಭವಾಗಲಿದ್ದು, ಗಣ್ಯರ ದಂಡೇ ಅಹಮದಾಬಾದ್‌ನಲ್ಲಿ ಬೀಡುಬಿಟ್ಟಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ರಿಚರ್ಡ್ ಮಾರ್ಲ್ಸ್ ಮತ್ತು ಅನೇಕ ರಾಜಕೀಯ ಗಣ್ಯರು ಈ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಅಹಮದಾಬಾದ್‌ನ ಪೊಲೀಸ್ ಕಮಿಷನರ್ ಜ್ಞಾನೇಂದ್ರ ಸಿಂಗ್ ಮಲಿಕ್ ತಿಳಿಸಿದ್ದಾರೆ.

Read More

ಬೆಂಗಳೂರು: ಭಾರತ ವಿಶ್​ಕಪ್ ಗೆಲ್ಲಲಿ ಎಂದು ಕ್ರಿಕೆಟ್ ಅಭಿಮಾನಿಗಳು ನಗರದ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಮ್ಮನವರ ಜೊತೆ ತ್ರಿವರ್ಣ ಧ್ವಜ ಇಟ್ಟು ಪ್ರಾರ್ಥನೆ ಭಕ್ತರು ಕೂಡ ವಿಶೇಷ ಪೂಜೆ ಸಲ್ಲಿಸಿದರು. ಹಾಗೆ ದೇವರಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದು ಪ್ರಾರ್ಥಿಸಿದರು. ಎರಡು ಬಾರಿ ಈಗಾಗಲೇ ಭಾರತ ವಿಶ್ವಕಪ್ ಗೆದ್ದಿದೆ, ಭಾರತ ತಂಡದಲ್ಲಿ ಅದ್ಭುತವಾದ ಆಟಗಾರರು ಇದ್ದಾರೆ. ಈ ನಿಟ್ಟಿನಲ್ಲಿ ಭಾರತ ತಂಡಕ್ಕೆ ನಾವೆಲ್ಲರೂ ಶುಭಹಾರೈಸುತ್ತೇವೆ ಎಂದು ಘೋಷಣೆ ಕೂಗಿದರು.

Read More

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೆಸ್ಕಾಂ ನಿರ್ಲಕ್ಷ್ಯ ಕ್ಕೆ ತಾಯಿ – ಮಗಳು ದಾರುಣ ಸಾವನ್ನಪ್ಪಿರುವ ಘಟನೆನಗರದ ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ನಡೆದಿದೆ. ತಾಯಿ ಸೌಂದರ್ಯ , ಮಗಳು ಲೀಲಾ ಸಾವನ್ನಪ್ಪಿರುವ ದುರ್ದೈವಿ,  ಬೆಳಗಿನ ಜಾವ ಐದು ಗಂಟೆ ವೇಳೆಗೆ ನಡೆದಿರುವ ಘಟನೆಯಾಗಿದೆ. ತಮಿಳು ನಾಡಿನಿಂದ ಬೆಂಗಳೂರಿನ ಮನೆಗೆ ಬರ್ತಿದ್ದ ತಾಯಿ – ಮಗಳು ಈ ವೇಳೆ ರಸ್ತೆ ಬದಿ ಕಟ್ ಆಗಿ ನೆಲದಲ್ಲಿ ಬಿದ್ದಿದ್ದ ಕರೆಂಟ್ ವೈಯರ್ ಕತ್ತಲಲ್ಲಿ ವೈಯರ್ ಕಾಣಿಸಿದೇ ತುಳಿದಿದ್ದ ತಾಯಿ ಮಗು ಈ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ತಾಯಿ – ಮಗಳು ಘಟನೆ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Read More

ಬಾಗಲಕೋಟೆ: ಎರಡು ನೂರು ವರ್ಷ ಇತಿಹಾಸ ಹೊಂದಿದ ಶ್ರೀ ಗಟಗಿ ಬಸವೇಶ್ವರ ಜಾತ್ರೆ ಮತ್ತು ತೇರು ವಾದ್ಯ ಮೇಳದೊಂದಿಗೆ ನಡೆಯಿತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗಟಗಿ ಬಸವೇಶ್ವರ ದೇವಸ್ಥಾನವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದ ಕೊನೆಯ ಕಡಿಪಡ್ಡೆ ದಿನದಂದು ಬೆಳಿಗ್ಗೆ ಶ್ರೀ ಗಟಗಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ. ಸಾವಿರಾರು ಮಹಿಳೆಯರಿಗೆ ಉಡಿ ತುಂಬಿ ಮತ್ತು ಭಕ್ತರಿಗೆ ಪ್ರಸಾದ ಅವ್ಯವಸ್ಥೆ ಮಾಡಿದರು. ಸಂಜೆ ಆರು ಗಂಟೆಗೆ ರಬಕವಿಯ ಪ್ರಮುಖ ರಸ್ತೆಯಲ್ಲಿ ವಾದ್ಯ ಮೇಳ ದೊಂದಿಗೆ ಸಂಭ್ರಮದಿಂದ ತೇರು ಎಳೆಯಿತು. ಶ್ರೀ ಗಟಗಿ ಬಸವೇಶ್ವರ ದೇವಸ್ಥಾನದ ತೇರು ಎಳೆಯುವ ಸಮಯದಲ್ಲಿ ಸಾವಿರಾರು ಭಕ್ತರು ದೇವರಿಗೆ ಕೈ ಮುಗಿದು ತಮ್ಮ ಹರಕೆಗಳನ್ನು  ತೀರಿಸಿಕೊಂಡರು. ಇದೇ ಸಂದರ್ಭದಲ್ಲಿ ಬಸವರಾಜ ಯಂಡಿಗೇರಿ. ಚಿದಾನಂದ ಸೊಲ್ಲಾಪುರ. ಮಹೇಶ  ಬಿಲವಡಿ. ಗಜಾನನ ತೆಗ್ಗಿ. ರಾಜಶೇಖರ್ ಕುರ್ಲಿ ಸೇರಿದಂತೆ ಶ್ರೀ ಕಟಗಿ ಬಸವೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ…

Read More

ಬೆಂಗಳೂರು: ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಕ್ರಿಕೆಟ್ ಪೈನಲ್ ಪಂದ್ಯ ನೋಡಲು ಇಡೀ ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾನೂ ಫೈನಲ್ ಪಂದ್ಯ ನೋಡಲು ಕಾತುರನಾಗಿದ್ದೇನೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಬಾರಿ ವಿಶ್ವ ಕಪ್ಬಗೆಲ್ಲುವ ಫೆವರಿಟ್ ತಂಡವಾಗಿದೆ. https://x.com/BSBommai/status/1726103938657890592?t=m8mJptuaovF-le_aoo5DEg&s=08 ರನ್ ಮಷಿನ್ ವಿರಾಟ್ ಕೋಹ್ಲಿಯ ರನ್ ಹೊಳೆ, ಮೊಹಮದ್  ಶಮಿನ ಬಾಲಿಂಗ್ ದಾಳಿ, ಸಂಘಟಿತ ಹೋರಾಟದಿಂದ ಭಾರತ ತಂಡ ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ. ಭಾರತ ಕ್ರಿಕೆಟ್ ತಂಡ ಜಯಶಾಲಿಯಾಗಿ ಮೂರನೇ ಬಾರಿ  ಕ್ರಿಕೆಟ್  ಲೋಕದ ವಿಶ್ವ ಚಾಂಪಿಯನ್ ಆಗಲಿ ಎಂದು ಶುಭ ಹಾರೈಸುತ್ತೇನೆ. ಗುಡ್ ಲಕ್ ಟೀಮ್ ಇಂಡಿಯಾ

Read More