Author: AIN Author

ಅಹಮದಾಬಾದ್‌: ವಿಶ್ವಕಪ್​ನಲ್ಲಿ ಗೆದ್ದ ತಂಡಕ್ಕೆ ಬಹುಮಾನ ರೂಪದಲ್ಲಿ ಎಷ್ಟು ಮೊತ್ತ ಪಡೆಯಲಿದೆ ಎಂಬ ಕುತೂಹಲವಿರವುದು ಎಲ್ಲಾ ಸಹಜ ಹಾಗಿದ್ರೆ ಗೆದ್ದ ಟೀಮ್​ಗೆ ಹಾಗೂ ರನ್ನರ್ ಅಪ್ ಮತ್ತು ಸೆಮಿಫೈನಲ್‌ ಹಂತದವರೆಗೆ ಬರುವವರಿಗೂ ಸಿಗಬಹುದಾದ ತಂಡಕ್ಕೆ ಸಿಗುವ ಮೊತ್ತವೆಷ್ಟು..? ಎಂಬುವುದರ ಕಂಪ್ಲಿಟ್​ ಡಿಟೇಲ್ಸ್ ಇಲ್ಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 383 ಕೋಟಿ ಮೊತ್ತವನ್ನು ಬಹುಮಾನ ಮತ್ತು ಪ್ರೋತ್ಸಾಹಧನ ರೂಪದಲ್ಲಿ ತಂಡಗಳಿಗೆ ನೀಡಲು ಐಸಿಸಿಯು ನಿರ್ಧರಿಸಿದೆ. ಇಂದಿನ ಪಂದ್ಯದಲ್ಲಿ ಅಡಿ ಚಾಂಪಿಯನ್ ಆಗಿ ಹೊರಹೊಮ್ಮಲಿರುವ ತಂಡ 733.3 ಕೋಟಿ ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿದೆ. ರನ್ನರ್ ಅಪ್ ತಂಡಕ್ಕೆ 716 ಕೋಟಿ ಸಿಗಲಿದೆ. ಸೆಮಿಫೈನಲ್‌ ಹಂತದವರೆಗೆ ಬಂದು ಸೋತು ನಿರ್ಗಮಿಸಿದ ದಕ್ಷಿಣಾ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳಿಗೆ ತಲಾ 6 ಕೋಟಿ ಸಿಗಲಿದೆ.

Read More

ಮಂಡ್ಯ:ನೀರಿನಲ್ಲಿ ಆಟವಾಡುವ ವೇಳೆ KRS ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ ನಲ್ಲಿ ನಡೆದಿದೆ. ಹರೀಶ್, ನಂಜುಂಡ ಹಾಗೂ ಜ್ಯೋತಿ ಮೃತ ದುರ್ದೈವಿಗಳಾಗಿದ್ದು ಮೂವರು ಮೃತರು ಮೈಸೂರಿನ ಕಾರುಣ್ಯ ಟ್ರಸ್ಟ್ ಸಿಬ್ಬಂದಿಗಳಾಗಿರುತ್ತಾರೆ.ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ 25 ಮಂದಿ ಸಿಬ್ಬಂದಿ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿದ್ದ ಮೂವರು. ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಮೃತದೇಹ ಮೇಲೆತ್ತುವ ಕಾರ್ಯ. ಮೂವರ ಪೈಕಿ ಇಬ್ಬರು ಮೃತದೇಹ ಪತ್ತೆ, ಮತ್ತೊಬ್ಬನ ಮೃತದೇಹಕ್ಕಾಗಿ ಮುಂದುವರಿದ ಶೋಧ ಕಾರ್ಯ

Read More

ಬಳ್ಳಾರಿ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಮಹಾ ಸಮರ ಹಿನ್ನಲೆ ಕ್ರಿಕೆಟ್ ನೇರ ಪ್ರಸಾರ ವೀಕ್ಷಿಸಲು ಆಗಮಿಸಿತ್ತಿರುವ ಕ್ರಿಕೆಟ್ ಅಭಿಮಾನಿಗಳು ಬಳ್ಳಾರಿಯ ಪುಟ್ಬಾಲ್ ಕ್ರೀಡಾಂಗಣದಲ್ಲಿ ಬೃಹತ್ ಎಲ್ಇಡಿ ಪರದೆ ಮೂಲಕ ವೀಕ್ಷಣೆಗೆ ಅವಕಾಶ, ಸಾವಿರಾರು ಸಂಖ್ಯೆಯಲ್ಲಿ ಲೈವ್ ಕ್ರಿಕೆಟ್ ವೀಕ್ಷಿಸಲು ಆಗಮಿಸುತ್ತಿರುವ ಅಭಿಮಾನಿಗಳು, ಭಾರತದ ಪರ ಘೋಷಣೆ ಕೂಗುತ್ತಿರುವ ಅಭಿಮಾನಿಗಳು, ಭಾರತ ತಂಡವು ವಿಶ್ವಕಪ್ ಗೆದ್ದು ಬೀಗಲಿ ಎಂದು ಘೋಷಣೆ ಕೂಗುತ್ತಿರುವ ಅಭಿಮಾನಿಗಳು, ಬಳ್ಳಾರಿಯ ಬಿಡಿಎಎ ಪುಟ್ಬಾಲ್ ಮೈದಾನದಲ್ಲಿ ಎಲ್ಇಡಿ ಪರದೆ ಮೂಲಕ ಮುಕ್ತ ಅವಕಾಶ ಕಲ್ಪಿಸಿರುವ ಬಳ್ಳಾರಿ ಜಿಲ್ಲಾಡಳಿತ.

Read More

ರಾಜ್‍ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್ ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ಅವರು ತಮ್ಮ ಆಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲೈಟರ್ ಬುದ್ಧ ಫಿಲಂಸ್‍ ಸಹಯೋಗದೊಂದಿಗೆ ನಿರ್ಮಾಣವಾಗಿರುವ “ಸ್ವಾತಿ ಮುತ್ತಿನ‌ ಮಳೆ ಹನಿಯೇ” ಚಿತ್ರ ನವೆಂಬರ್ 24ರಂದು ಕೆ.ಆರ್.ಜಿ. ಸ್ಟುಡಿಯೋಸ್‍ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ, ನಾನೊಬ್ಬ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿ. ನಾನು ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಾವಿನಂಚಿನಲ್ಲಿರುವ ರೋಗಿಗಳನ್ನು ಶುಶ್ರೂಷೆ ಮಾಡುವ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಕಥೆ ಮಾಡಬೇಕೆನಿಸಿತು. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು…

Read More

2023ರ ವಿಶ್ವಕಪ್‌ನ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎರಡು ಬಾರಿಯ ಚಾಂಪಿಯನ್ ಭಾರತ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಎಲ್ಲಾ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದರೆ, ಭಾರತ ಸೇರಿದಂತೆ ಮೊದಲ 2 ಪಂದ್ಯಗಳನ್ನು ಸೋತ ಆಸ್ಟ್ರೇಲಿಯಾ, ಸತತ 8 ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ

Read More

ಅಹಮದಾಬಾದ್: ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವಿನ ಐಸಿಸಿ (ICC) ವಿಶ್ವಕಪ್ (World Cup) ಟೂರ್ನಿಯ ಫೈನಲ್ ಪಂದ್ಯ ಪ್ರಾರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು, ಎರಡು ತಂಡಗಳ ರೋಚಕ ಪಂದ್ಯ ವೀಕ್ಷಣೆಗಾಗಿ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ. ಅಹಮದಾಬಾದ್‌ನ (Ahmedabad) ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಒಳಗೆ ಹಾಗೂ ಹೊರಗೆ ಎಲ್ಲಿ ನೋಡಿದರೂ ಜನವೋ ಜನ. ಭಾರತ ತಂಡಕ್ಕೆ ಬೆಂಬಲ ಸೂಚಿಸಲು ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂ ಬಳಿ ಕಿಕ್ಕಿರಿದಿದ್ದು, ನೀಲಿ ಸಮುದ್ರದಂತೆ ಗೋಚರಿಸುತ್ತಿದೆ. ತ್ರಿವರ್ಣ ಧ್ವಜ ಹಿಡಿದ ಅಭಿಮಾನಿಗಳು, ಭಾರತ ಪರ ಜಯಘೋಷ ಮೊಳಗಿಸುತ್ತಾ, ಟೀಂ ಇಂಡಿಯಾ ಗೆದ್ದು ಬರಲಿ ಎಂದು ಶುಭ ಕೋರುತ್ತಿದ್ದಾರೆ ಇದೇ ವೇಳೆ ಮಾತನಾಡಿದ ಟೀಂ ಇಂಡಿಯಾ ಬೆಂಬಲಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಚೌಧರಿ, ಭಾರತ ತಂಡ 2011ರ ಗೆಲುವನ್ನು ಪುನರಾವರ್ತಿಸುತ್ತದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಗಳಿಸಿ 450 ರನ್‌ಗಳ ಗುರಿ ನೀಡಿ…

Read More

ಸಿನಿಮಾ ರಂಗಕ್ಕೆ ಒಂದಾದ ಮೇಲೆ ಒಂದು ಶಾಕ್ ಎದುರಾಗುತ್ತಲೇ ಇದೆ. ಮಲಯಾಳಂ ನಟ ವಿನೋದ್ ಥಾಮಸ್ ನಿಧನದ ಬಳಿಕ ಇದೀಗ ಹೃದಯಾಘಾತದಿಂದ ‘ಧೂಮ್’ 2 (Dhoom 2) ಚಿತ್ರ ನಿರ್ದೇಶಕ ಸಂಜಯ್ ಘಡ್ವಿ (Sanjay Gadhvi) ನಿಧನರಾಗಿದ್ದಾರೆ. 57ನೇ ವಯಸ್ಸಿಗೆ ಸಂಜಯ್‌ ಇಹಲೋಕ ತ್ಯಜಿಸಿದ್ದಾರೆ. ಇಂದು (ನವೆಂಬರ್ 19) ಸಂಜಯ್ ಮನೆಯಲ್ಲೇ ಇದ್ದರು. ಬೆಳಿಗ್ಗೆ 8.45ಕ್ಕೆ ಅವರಿಗೆ ಹೃದಯಾಘಾತವಾಗಿದೆ. ಆಗ ಅವರು ಕುಸಿದು ಕೆಳಗೆ ಬಿದ್ದಿದ್ದಾರೆ. ಆ ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಏನೂ ಪ್ರಯೋಜನವಾಗಿಲ್ಲ. ಇದೀಗ ಸಂಜಯ್ ನಿಧನ ಬಗ್ಗೆ ನಿರ್ಮಾಪಕ ಬೋನಿ ಕಪೂರ್ ಖಚಿತಪಡಿಸಿದ್ದಾರೆ. ಸಂಜಯ್ ನಿಧನಕ್ಕೆ ಬಾಲಿವುಡ್ ನಟ-ನಟಿಯರು, ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಸಂಜಯ್ ಅವರು ಬಾಲಿವುಡ್‌ಗೆ (Bollywood) ಕಾಲಿಟ್ಟಿದ್ದು 2001ರಲ್ಲಿ. ‘ತೇರೆ ಲಿಯೇ’ ಅವರ ನಿರ್ದೇಶನದ ಮೊದಲ ಸಿನಿಮಾ. ಅವರು ಕೆಲವು ವರ್ಷ ಸೈಕಲ್ ಹೊಡೆದರು. 2004ರಲ್ಲಿ ಅವರು ನಿರ್ದೇಶನ ಮಾಡಿದ ‘ಧೂಮ್’ ಸಿನಿಮಾ ಸೂಪರ್ ಹಿಟ್ ಆಯಿತು. 2006ರಲ್ಲಿ ಧೂಮ್ ಪಾರ್ಟ್…

Read More

ಹೈದ್ರಾಬಾದ್: ಇಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಅಂತಿಮ ರಣರೋಚಕ ಕದನಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಸ್ಟೇಡಿಯಂಗೆ ಈಗಾಗಲೇ ಸಾವಿರಾರು ಜನರು ಬಂದು ಕಾಯುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಈ ಪಂದ್ಯ ವೀಕ್ಷಣೆಗೆ ದಿಗ್ಗಜ ಆಟಗಾರರು, ಪ್ರಸಿದ್ಧ ನಟ-ನಟಿಯರು ಕೂಡ ಆಗಮಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಖಾಸಗಿ ಜೆಟ್‌ನಲ್ಲಿ ಅಹ್ಮದಾಬಾದ್​ಗೆ ತಲುಪಿದ್ದಾರೆ. ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ. ಇವರು ಆಗಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸಾರಾ ತೆಂಡೂಲ್ಕರ್ 2023 ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಹಲವಾರು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅಂತೆಯೆ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಕೂಡ ಬಂದಿದ್ದಾರೆ.

Read More

ಹೈದರಾಬಾದ್: ಇಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ನಮ್ಮ ತಂಡ ದಾಖಲೆ ಸೃಷ್ಟಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ವಿಶ್ವಕಪ್ ಫೈನಲ್ ಮ್ಯಾಚ್ ಕುರಿತು ಮಾತನಾಡಿದ ಅವರು, ಇಂದು ವಲ್ರ್ಡ್ ಕಪ್ ಫೈನಲ್ ಮ್ಯಾಚ್ ಇದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಮ್ಮ ಟೀಂ ದಾಖಲೆ ಬರೆಯುತ್ತದೆ. ಇದು ಒಗ್ಗಟ್ಟಿನ ಸಂಕೇತವಾಗಿದೆ. ಟೀಂ ಇಂಡಿಯಾಗೆ ಶುಭಾಶಯ ಎಂದು ಹೇಳಿದ್ದಾರೆ. ಇತ್ತ ಕೈ ನಾಯಕ ರಾಹುಲ್ ಗಾಂಧಿ ಕೂಡ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಬ್ಲೂ ಬಾಯ್ಸ್‍ಗೆ ಶುಭಾಶಯಗಳು. ಬಲಿಯನ್‍ಗಿಂತಲೂ ಹೆಚ್ಚು ಹೃದಯಗಳು ನಿಮಗಾಗಿ ಮಿಡಿಯುತ್ತಿವೆ. ಹೀಗಾಗಿ ನಿರ್ಭೀತಿಯಿಂದ ಆಟವಾಡಿ ಗೆದ್ದು ಬನ್ನಿ. ವಿಶ್ವಕಪ್ ಮನೆಗೆ ತರೋಣ ಎಂದು ತಿಳಿಸಿದ್ದಾರೆ ಭಾರತ ಹಾಗೂ ಆಸ್ಟ್ರೇಲಿಯಾ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಅಹ್ಮದಾಬಾದ್‍ನ ನರೇಂದ್ರ…

Read More

ಅಹಮದಾಬಾದ್: ವಿಶ್ವಕಪ್ 2023ರ (World Cup 2023) ಫೈನಲ್ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದೆ. ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮೂರನೇ ಏಕದಿನದ ವಿಶ್ವಕಪ್‌ಗಾಗಿ ಹೋರಾಟ ನಡೆಸಲಿದೆ. ಈ ನಡುವೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಪಂದ್ಯ ಪ್ರಾರಂಭಕ್ಕೂ ಗಂಟೆಗಳ ಮೊದಲು ಅಹಮದಾಬಾದ್‌ಗೆ ಆಗಮಿಸಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಎಲ್ಲರೂ ಈ ದಿನಕ್ಕಾಗಿ ಕಾಯುತ್ತಿದ್ದಾರೆ. ನಾನು ಟೀಂ ಇಂಡಿಯಾಗೆ ಶುಭಾಶಯ ಹೇಳಲು ಬಂದಿದ್ದೇನೆ. ವಿಶ್ವಕಪ್‌ಗಾಗಿ ಹಣಾಹಣಿಯಲ್ಲಿರುವ ಭಾರತ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ವಿಶ್ವಕಪ್‌ಗಾಗಿ ಹೋರಾಟ ನಡೆಸಲಿರುವ ಕ್ರಿಕೆಟಿಗರು ಈಗಾಗಲೇ ಸ್ಟೇಡಿಯಂಗೆ ಲಗ್ಗೆಯಿಟ್ಟಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ಪ್ರಾರಂಭವಾಗಲಿದೆ. ಮೋದಿ ಸ್ಟೇಡಿಯಂನೆಡೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ದಂಡು ಹೊರಟಿದೆ. ಭಾರತಕ್ಕೆ ಕಪ್ ಒಲಿದು ಬರಲಿ ಎಂದು ದೇಶಾದ್ಯಂತ ಎಲ್ಲೆಡೆ ಪೂಜೆ ಪುನಸ್ಕಾರಗಳು ನೆರವೇರಿಸಲಾಗುತ್ತಿದೆ

Read More