ಎಲ್ಲರಿಗೂ ಗೊತ್ತಿರುವ ಹಾಗೆ ಎಳ್ಳು ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ.ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಈ ದಿನ ಕರ್ನಾಟಕದಲ್ಲಿ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ ನಮ್ಮ ಸನಾತನ ಧರ್ಮ ಧರ್ಮದಲ್ಲಿ ಅಮಾವಾಸ್ಯೆಗೊಂದು ವಿಶೇಷ ಮಹತ್ವವಿದೆ, ಅಮಾವಾಸ್ಯೆಯಲ್ಲಿ ನಾವು ಆಚರಿಸುವ ಪ್ರತಿಯೊಂದು ಪುಣ್ಯಕಾರ್ಯಗಳು ದ್ವಿಗುಣ ಫಲಗಳನ್ನು ನೀಡುತ್ತದೆ. ಆದಿನ ನಾವು ಪಾರ್ವತಿ ಪರಮೇಶ್ವರರ, ಲಕ್ಷ್ಮೀನಾರಾಯಣರ ಆರಾಧನೆಯನ್ನು ಮಾಡುವುದರಿಂದ ಮಹಾಲಕ್ಷ್ಮಿಯ ಕೃಪೆಯುಂಟಾಗುತ್ತದೆ. ಪಿತೃದೇವತೆಗಳ ಆರಾಧನೆಯನ್ನು 2ಮಾಡುವುದರಿಂದ ಪಿತೃದೇವರ ಕೃಪೆಗೆ ಪಾತ್ರರಾಗುತ್ತೀರ. ಅಮಾವಾಸ್ಯೆಯ ದಿನ ಮಾಡುವ ಪ್ರತಿಯೊಂದು ಶ್ರಾದ್ಧ ಕಾರ್ಯಗಳಿಂದ ಜಾತಕದಲ್ಲಿ ಉಂಟಾಗಿರುವ ಪಿತೃದೋಷಗಳು ಪರಿಹಾರವಾಗುತ್ತದೆ. ಎಳ್ಳಮಾವಾಸ್ಯೆಯ ದಿನ ನಾವು ಏನನ್ನು ಮಾಡಬೇಕು ಪವಿತ್ರ ನದಿಗಳಲ್ಲಿ ಸ್ನಾನ ಅಭ್ಯಂಜನ ಸ್ನಾನ ಗೋಪೂಜೆ ಅನ್ನದಾನಾದಿಗಳು ಯಜ್ಞಪೂಜಾದಿಗಳು ದಾನ ಧರ್ಮಾದಿಗಳು ಪ್ರಾಣಿ ಪಕ್ಷಿಗಳಿಗೆ ಆಹಾರಗಳನ್ನು ನೀಡುವುದು ನೀಡುವುದು ಕುಲದೇವರ ಆರಾಧನೆ ದೀಪಾರಾಧನೆ ಎಳ್ಳು ಪದಾರ್ಥಗಳನ್ನು ದಾನ ಮಾಡುವುದರಿಂದ ಶನಿ ದೇವರ ಅನುಗ್ರಹ ಸಿಗುತ್ತದೆ.…
Author: AIN Author
ಬೆಂಗಳೂರು:- ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆ ವಾಪಸ್ ಪಡೆಯಿರಿ ಎಂದು DCM ಗೆ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಿ ಕಳೆದ 2016-17ನೆ ಸಾಲಿನಿಂದಲೇ ಪರಿಷ್ಕೃತ ದರವನ್ನು ಪಾವತಿಸುವಂತೆ ಆಸ್ತಿ ಮಾಲಕರಿಗೆ ನೀಡಿರುವ ನೋಟಿಸ್‍ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ರಾಮಲಿಂಗಾರೆಡ್ಡಿ, ಈ ಕೂಡಲೇ ಅವೈಜ್ಞಾನಿಕ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ವಾಪಸ್ ಪಡೆಯುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ 2016-17ನೆ ಸಾಲಿನಿಂದ ಆಸ್ತಿ ತೆರಿಗೆ ಮೊತ್ತವನ್ನು ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ನೋಟಿಸ್ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಅಲ್ಲದೆ, ಬಿಬಿಎಂಪಿ ಆಸ್ತಿ ತೆರಿಗೆ ಪರಿಷ್ಕರಣೆಯನ್ನು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ 2016-17 ಸಾಲಿನಿಂದ 7 ವರ್ಷಗಳಿಗೆ ಪರಿಷ್ಕರಣೆ ನೋಟಿಸ್ ಜಾರಿ ಮಾಡಿರುವುದು ಕಂಡುಬಂದಿದೆ. ಈ ರೀತಿ ಸಾರ್ವಜನಿಕರ ಮೇಲೆ ಒತ್ತಡ ತರುತ್ತಿರುವುದು ಉತ್ತಮವಲ್ಲ. ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ-1976 ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ…
ಬೆಂಗಳೂರು:- ರಾಜ್ಯದಲ್ಲಿ ಇಂದು 201 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದಾಗಿ ಒಬ್ಬ ಮೃತಪಟ್ಟಿದ್ದಾನೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 6557 ಹಾಗೂ RAT ಮೂಲಕ 758 ಸೇರಿದಂತೆ 7315 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ ಅಂತ ತಿಳಿಸಿದೆ.
ಬೆಂಗಳೂರು :- ಹೆಚ್ಚುವರಿ ಡಿಸಿಎಂ ಹುದ್ದೆ ಊಹಾಪೋಹದ ಸುದ್ದಿ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರವೆಲ್ಲ ಊಹಾಪೋಹದ ಸುದ್ದಿಯಾಗಿದೆ ಎಂದರು. ನಮ್ಮ ಯೋಜನೆಗಳು ಎಲ್ಲ ಜನರನ್ನು ತಲುಪಬೇಕು ಮತ್ತು ಪ್ರತಿಯೊಂದು ಕ್ಷೇತ್ರಗಳಲ್ಲಿ ಆಸ್ಪತ್ರೆ, ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಮೂಲಸೌಕರ್ಯಗಳಿಗೆ ಒತ್ತು ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು. ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಬಗ್ಗೆ ಚರ್ಚೆ ನಡೆದಿದೆ. ತಳ ಮಟ್ಟದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು. ಕಾಂಗ್ರೆಸ್ ಗ್ಯಾರಂಟಿಯನ್ನು ಎಲ್ಲರಿಗೂ ತಲುಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಗ್ರ ರೂಪುರೇಷೆಯನ್ನು ಘೋಷಣೆ ಮಾಡಿದ್ದಾರೆ. ಎಲ್ಲರೂ ಅದಕ್ಕೆ ಅನುಮೋದನೆ ನೀಡಿದ್ದಾರೆ ಎಂದರು.
ಒಂದು ಪೈಸೆಯ ವೆಚ್ಚವಿಲ್ಲದೆ ನಮ್ಮ ಮನೆಯಲ್ಲಿ ಕೆಲವು ನೈಸರ್ಗಿಕ ಪದಾರ್ಥಗಳೊಂದಿಗೆ, ಯಾವುದೇ ಕಪ್ಪು ಕಲೆಗಳು ಮತ್ತು ಮೊಡವೆಗಳಿಲ್ಲದೆ ಮುಖವನ್ನು ಬಿಳಿ ಮತ್ತು ಪ್ರಕಾಶಮಾನವಾಗಿ ಹೊಳೆಯುವಂತೆ ನಾವು ಸುಲಭವಾಗಿ ಮಾಡಬಹುದು. ಒಂದು ಸಣ್ಣ ಟೊಮೆಟೊವನ್ನು ತೆಗೆದುಕೊಂಡು ಅದನ್ನು ಸ್ವಚ್ಛವಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ನಂತರ ಬ್ಲೆಂಡರ್ ತೆಗೆದುಕೊಂಡು ಅದರಲ್ಲಿ ಟೊಮೆಟೊ ತುಂಡುಗಳು ಮತ್ತು ಒಂದು ಕಪ್ ಪಪ್ಪಾಯಿ ತುಂಡುಗಳನ್ನು ಸೇರಿಸಿ ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಒಂದು ಚಮಚ ನಿಂಬೆ ರಸ, ಅರ್ಧ ಟೀಸ್ಪೂನ್ ಅರಿಶಿನ, ಎರಡು ಚಮಚ ಕಿತ್ತಳೆ ಸಿಪ್ಪೆಯ ಪುಡಿ, ಒಂದು ಚಮಚ ಮೊಸರು, ಸೇರಿಸಿ ಎಲ್ಲಾ ಪದಾರ್ಥಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ನೀವು ವಾರಕ್ಕೆ ಎರಡು ಬಾರಿ ಇದನ್ನು ಮಾಡಿದರೆ, ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಸ್ವಲ್ಪ ತಾಳ್ಮೆಯಿಂದ ನಾವು ನಮ್ಮ ಮನೆಯಲ್ಲಿ…
ರಾಯಬಾಗ:- ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತು ವಿವಿದ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಭಾಗ ಗೊಕಾಕ ಶಿವಾನಂದ ನಾಯಕವಾಡಿ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ. ರಾಯಬಾಗ PWD ಕಚೇರಿಯಿಂದ ಪಟ್ಟಣದ ಜೆಂಡಾ ಕಟ್ಟೆವರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಉದ್ದಕ್ಕೂ ಶಿವಾನಂದ ನಾಯಕವಾಡಿ ವಿರುದ್ದ ದಿಕ್ಕಾರ ಕೂಗುತ್ತಾ ಪ್ರತಿಭಟನೆ ಮಾಡಿದ್ದಾರೆ. ಶಿವಾನಂದ ನಾಯಕವಾಡಿ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ರಾಯಬಾಗ ಶಾಸಕ ದುರ್ಯೋಧನ ಐಹೋಳೆಯವರು ಅರಣ್ಯ ಇಲಾಖೆಯ ಕಟ್ಟಡ ಕಾಮಗಾರಿ ವಿಷಯವಾಗಿ ಪೋನ ಕರೆ ಮೂಲಕ ಮಾತನಾಡುವ ಸಮಯದಲ್ಲಿ ಏಕವಚನ ಬಳಸಿ ಅವಮಾನಿಸಿದ ಅರಣ್ಯ ಇಲಾಖೆ ಉಪ ಸಂರಕ್ಷಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಬಾಗ ಗೋಕಾಕ್ ಅಧಿಕಾರಿಯಾದ ಶಿವಾನಂದ ನಾಯಕವಾಡಿ ಅವರನ್ನ ಕುಡಲೆ ಅಮಾನತ್ತುಗೋಳಿಸಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ರಾಯಬಾಗ ತಹಶಿಲ್ದಾರ ಹಾಗೂ ಸಿಪಿಐ ಆಗಮಿಸಿ ಪ್ರತಿಭಟನಾಕಾರ ಮನವಿ ಸ್ವೀಕರಿಸಿದರು. ಪಟ್ಟಣದ ಜೆಂಡಾ ಕಟ್ಟೆ ಆವರಣದಲ್ಲಿ ಮಾನವ ಸರಪಳಿ…
ಬೆಳಗಾವಿ: ಕ್ರಿಮಿನಾಶಕ ಕುಡಿದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಗೋಕಾಕ ತಾಲೂಕಿನ ಲಗಮೇಶ್ವರ ಗ್ರಾಮದ ಕುಮಾರ್ ಕಲ್ಲಪ್ಪ ಕೊಪ್ಪದ (23) ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಾರ್ಕೆಟ್ ಠಾಣೆ ಪೊಲೀಸರು ಕ್ರಿಮಿನಾಶಕ ಕುಡಿದು ಅಸ್ವಸ್ಥನಾಗಿದ್ದ ಕುಮಾರನನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಐಸಿಯುದಲ್ಲಿ ಚಿಕಿತ್ಸೆ ಮುಂದುವರಿದಿದೆ. ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಆರೋಗ್ಯ ಸಮಸ್ಯೆಯಿಂದ ಯುವಕ ಬಳಲುತ್ತಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು:- ಹೆಚ್ಚುವರಿ ಡಿಸಿಎಂ ಬಗ್ಗೆ ಸುರ್ಜೇವಾಲ ಅವರೇ ಉತ್ತರಿಸುತ್ತಾರೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಬೇಡಿಕೆ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನೇ ಕೇಳಿ. ಅವರೇ ಇದಕ್ಕೆ ಸರಿಯಾದ ಉತ್ತರ ನೀಡುತ್ತಾರೆ ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಕುರಿತು ಮಾಹಿತಿ ನೀಡಿದರು. ಪಕ್ಷದ ಎಲ್ಲ ಶಾಸಕರು, ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜತೆ ಸಭೆ ನಡೆಸುತ್ತೇವೆ. ಸಭೆಯಲ್ಲಿ ಪಕ್ಷದ ಸಂಘಟನೆ, ಬೂತ್ ಮಟ್ಟದಲ್ಲಿ ಬಿಎಲ್‌ಎಗಳು, ಮತದಾರರ ಹೆಸರು ಸೇರ್ಪಡೆ, ಪರಿಷ್ಕರಣೆ, ಗ್ಯಾರಂಟಿ ಅನುಷ್ಠಾನ, ಜಿಲ್ಲಾ ಮಟ್ಟದ ಸಭೆ, ವಿಧಾನಸಭೆ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆ, ಕಾರ್ಯಕರ್ತರ ಸಮಾವೇಶ, ರಾಜ್ಯ ಮಟ್ಟದ ಸಮಾವೇಶದ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಕಲಘಟಗಿ:- ವಕೀಲನಿಂದ ಕಕ್ಷಿದಾರ ಹಾಗೂ ತಾಯಿ ಮೇಲೆ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಬಂಧನಕ್ಕೆ ಖಾಕಿ ಹಿಂದೇಟು ಹಾಕುತ್ತಿದೆ. ಆರೋಪಿ ವಕೀಲ ಆರು ದಿನಗಳ ಕಳೆದರೂ ಬಂಧನ ಆಗಿಲ್ಲ ಎರೆಡು ದಿನದಲ್ಲಿ ಅವನನ್ನು ಬಂದನ ಮಾಡಲಿಲ್ಲ ಅಂದ್ರೆ ಪೊಲೀಸ್ ಅಧೀಕ್ಷಕರ ಕಾರ್ಯಾಲಯ ಮುಂದೆ ಹೋರಾಟ ಮಾಡಲಾಗಿದೆ. ಕಲಘಟಗಿ ವಕೀಲನಿಂದ ಕಕ್ಷಿದಾರ ಹಾಗೂ ತಾಯಿ ಮೇಲೆ ಹಲ್ಲೆ ನಡೆದು ಆರು ದಿನಗಳ ಕಳೆದರೂ ಆರೋಪಿ ಕಲ್ಲಪ್ಪ ಗುಡಿಯಾಳ ವಕೀಲ ಇಲ್ಲಿಯವರೆಗೆ ಪೊಲೀಸರು ಆರೋಪಿ ವಕೀಲನ್ನು ದಸ್ತಗಿರಿ ಮಾಡಿಲ್ಲ. ಎರಡು ದಿನದಲ್ಲಿ ಆರೋಪಿ ವಕೀಲನ್ನು ಬಂಧಿಸಿದಿದ್ದರೆ ಪೊಲೀಸ್ ಅಧೀಕ್ಷಕರು ಕಾರ್ಯಾಲಯ ಮುಂದೆ ಹೋರಾಟ ಮಾಡುತ್ತೇವೆಂದು ಜಿಲ್ಲಾ ಉಪ ಪ್ರಧಾನ ಸಂಚಾಲಕರು ಮಾರುತಿ ಲಮಾಣಿ ತಿಳಿಸಿದ್ದಾರೆ,
ಚಳಿಗಾಲದಲ್ಲಿ ಚರ್ಮದ ಆರೈಕೆಯ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಬೇಕು. 1. ಮಾಯಿಶ್ಚರೈಸರ್: ವರ್ಷದ ಎಲ್ಲಾ ಋತುವಿನಲ್ಲೂ ನಿಮ್ಮ ಚರ್ಮದ ಮಾಯಿಶ್ಚರೈಸರ್ ಬಹಳ ಅಗತ್ಯ. ಚರ್ಮವನ್ನು ಒಣಗಲು ಬಿಡದೆ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ. 2. ಸನ್‌ಸ್ಕ್ರೀನ್:ಇದು ಬೇಸಿಗೆಯಲ್ಲಿ ಮಾತ್ರವಲ್ಲ ಚಳಿಗಾಲದಲ್ಲೂ ನಿಮ್ಮ ಚರ್ಮದ ಆರೈಕೆಗೆ ಬಹಳ ಮುಖ್ಯ. ಚಳಿಗಾಲವಿದ್ದರೂ ಹೊರಗೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ. ನಿಮ್ಮ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ. 3. ಎಕ್ಸ್‌ಫೊಲಿಯೇಟ್ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುವುದು ಕೂಡಾ ಬಹಳ ಮುಖ್ಯ. ಹೀಗೆ ಮಾಡುವುದರಿಂದ ಚರ್ಮದ ಮೇಲಿನ ಕೊಳೆ, ಬ್ಲಾಕ್ ಹೆಡ್, ವೈಟ್ ಹೆಡ್, ಸತ್ತ ಚರ್ಮದ ಕೋಶಗಳು ತೊಲಗುತ್ತವೆ. ವಾರಕ್ಕೆ ಒಮ್ಮೆ ತಪ್ಪದೆ ಎಕ್ಸ್‌ಫೋಲಿಯೇಟ್ ಮಾಡಿ. ಆದರೆ ಚರ್ಮವನ್ನು ಬಹಳ ಒರಟಾಗಿ ಉಜ್ಜಬೇಡಿ. 4 ಹೈಡ್ರೇಷನ್ ಚಳಿಗಾಲದಲ್ಲಿ ಕೂಡಾ ನೀವು ಹೆಚ್ಚು ನೀರು ಸೇವಿಸುವುದು ಬಹಳ ಮುಖ್ಯ. ಇದರಿಂದ ನಿಮ್ಮ ಚರ್ಮ ಹೊರಭಾಗದಿಂದ ಮಾತ್ರವಲ್ಲದೆ, ಒಳಭಾಗದಿಂದ ಕೂಡಾ ಸುಂದರವಾಗಿರುತ್ತದೆ. ದೇಹದ ಕಲ್ಮಷ, ಬೆವರು ಮೂತ್ರದ ಮೂಲಕ…