ಹುಬ್ಬಳ್ಳಿ:- ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. https://ainlivenews.com/how-to-find-out-whether-arashi-is-real-or-fake-do-this/ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಒದಗಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ ರೈಲು ಸಂಖ್ಯೆ 07371 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 19 ರಿಂದ 2025ರ ಜನವರಿ 14ರವರೆಗೆ ಸಂಚರಿಸಲಿದೆ. ರೈಲು ಸಂಖ್ಯೆ 07372 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 20 ರಿಂದ 2025ರ ಜನವರಿ 15ರವರೆಗೆ ಸಂಚರಿಸಲಿದೆ. 2 ಎಸಿ ಟು ಐಉರ್, 2 ಎಸಿ ತ್ರಿ ಟೈಯರ್, 6 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್ಡಿ ಸೇರಿದಂತೆ 18 ಬೋಗಿಗಳನ್ನು ಹೊಂದಿರಲಿದೆ ಹೆಚ್ಚುವರಿಯಾಗಿ ಇನ್ಮುಂದೆ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಾರಕ್ಕೋಮ್ಮೆ ಒಂದು ವಿಶೇಷ ರೈಲು ಸಂಚರಲಿಸಲಿದೆ. ಈ…
Author: AIN Author
ಮಸಾಲೆ ಪದಾರ್ಥಗಳು ಇದು ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಆದರೆ, ಒಂದಾನೊಂದು ಕಾಲದಲ್ಲಿ ಮಹಿಳೆಯರು ಮನೆಯಲ್ಲಿಯೇ ಅಡುಗೆಗೆ ಬೇಕಾಗುವ ಮಸಾಲೆ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ, ಇಂದಿನ ಬ್ಯುಸಿ ಲೈಫ್ನಲ್ಲಿ ಮನೆಯಲ್ಲಿ ಸಿದ್ಧಪಡಿಸಲು ತಾಳ್ಮೆ ಇಲ್ಲದಿದ್ದರೆ ಹೊರಗೆ ಕೊಳ್ಳುವುದು ಸಾಮಾನ್ಯ. https://ainlivenews.com/is-it-good-to-drink-hot-water-in-the-morning-is-it-good-to-drink-at-bedtime/ ಅದರಲ್ಲಿ ಅರಿಸಿನ. ಮಾರುಕಟ್ಟೆಯಿಂದ ತಂದ ಅರಶಿನ ಅಸಲಿಯೇ, ನಕಲಿಯೇ ಎಂದು ಪತ್ತೆಹಚ್ಚಲು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು. ಅರಿಶಿನವು ಅಸಲಿಯೇ ನಕಲಿಯೇ ಎಂದು ಬಣ್ಣಗಳ ಮೂಲಕ ಪರೀಕ್ಷಿಸಬಹುದು. ಶುದ್ಧ ಅರಿಶಿನವು ಸಾಮಾನ್ಯವಾಗಿ ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಅರಶಿನದ ಬಣ್ಣವು ಮಸುಕಾಗಿದ್ದು, ಮಂದ ಹಳದಿ ಬಣ್ಣದಲ್ಲಿದ್ದರೆ ಅದು ನಕಲಿ ಎಂದರ್ಥ. ಒಂದು ಚಿಟಿಕೆ ಅರಿಶಿನ ಪುಡಿಯನ್ನು ಅಂಗೈಯಲ್ಲಿ ಹೆಬ್ಬೆರಳಿನಿಂದ ಉಜ್ಜಿಕೊಳ್ಳಿ. ಅರಿಶಿನವು ಶುದ್ಧವಾಗಿದ್ದರೆ, ಕೈಯಲ್ಲಿ ಹಳದಿ ಬಣ್ಣವು ಉಳಿಯುತ್ತದೆ ಹಾಗೂ ಕೈಗೆ ಅರಶಿನವು ಅಂಟಿಕೊಳ್ಳುತ್ತದೆ. ಅರಶಿನವು ಕಲಬೆರಕೆಯಾಗಿದ್ದರೆ ಬಣ್ಣ ಬಿಡುವುದಿಲ್ಲ, ಪುಡಿಯು ಕೈಯಿಂದ ಉದುರಿ ಹೋಗುತ್ತದೆ. ಒಂದು ಚಮಚ ಅರಿಶಿನವನ್ನು ಒಂದು ಲೋಟ ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ…
ಬಿಸಿನೀರು ಕುಡಿಯುವುದರಿಂದ ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಕೊರೊನಾ ಕಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿದ ಅನೇಕರು ಬಿಸಿನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರು. https://ainlivenews.com/road-accident-mcf-staff-killed/ ಬಿಸಿನೀರು ನಮ್ಮ ದೇಹದಲ್ಲಿರುವ ನರಮಂಡಲವನ್ನೂ ಸಡಿಲಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಇಂತಹವರು ಮಲಗುವ ಮುನ್ನ ಬಿಸಿ ನೀರು ಕುಡಿದರೆ ಒತ್ತಡ ಕಡಿಮೆಯಾಗಿ ಶಾಂತದಿಂದ ಮಲಗಬಹುದು.. ಮಹಿಳೆಯರಿಗೆ ಪ್ರತಿ ತಿಂಗಳು ಪಿರಿಯಡ್ಸ್ ಇರುತ್ತದೆ. ಆ ಅವಧಿಯಲ್ಲಿ ವಿಪರೀತ ನೋವು ಇರುತ್ತದೆ. ಇಂತಹ ಸಮಯದಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿದರೆ ನೋವು ಕಡಿಮೆಯಾಗುತ್ತದೆ. ಶಾಂತಿಯುತವಾಗಿ ಮಲಗಬಹುದು. ಅಷ್ಟೇ ಅಲ್ಲ ಬಿಸಿ ನೀರು ನೋಯುತ್ತಿರುವ ಗಂಟಲು ಸಮಸ್ಯೆಗಳನ್ನೂ ಸಹ ಕಡಿಮೆ ಮಾಡುತ್ತದೆ. ಅಷ್ಟೇ ಏಕೆ.. ಮಲಗುವ ಮುನ್ನ ಬಿಸಿ ನೀರು ಕುಡಿದರೆ.. ನಿಮ್ಮ ಹಲ್ಲಿನಲ್ಲಿ ಅಂಟಿಕೊಂಡಿರುವ ಸೂಕ್ಷ್ಮಾಣುಗಳನ್ನು ಹೋಗಲಾಡಿಸುತ್ತದೆ. ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಬಿಸಿನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು…
ಹಾಸನ:- ಹಾಸನದ ಜಯನಗರ ಸರ್ಕಲ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ದುರ್ಮರಣ ಹೊಂದಿದ ಘಟನೆ ಜರುಗಿದೆ. https://ainlivenews.com/a-case-of-suspicious-death-of-a-person-inside-the-car/ ಅರವಿಂದ್ ಮೃತ ವ್ಯಕ್ತಿ ಅವರು MCFನಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೆಲಸ ಮುಗಿಸಿ ಸ್ಕೂಟಿಯಲ್ಲಿ ಹಾಸನ ನಗರಕ್ಕೆ ಬಂದಿದ್ದರು. ವಾಪಾಸ್ ಮನೆಗೆ ತೆರಳುವಾಗ ಅಪಘಾತ ನಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:- ಕಾರಿನೊಳಗೆ ವ್ಯಕ್ತಿ ಅನುಮಾನಾಸ್ಪದ ಸಾವು ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಸಾಲ ಬಾಧೆಯಿಂದ ತಾನೇ ಬೆಂಕಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. https://ainlivenews.com/kichcha-sudeep-praised-varthur-santhosh-in-kichchan-panchayat/ 42 ವರ್ಷದ ಪ್ರದೀಪ್ ಮೃತ ಉದ್ಯಮಿ. ಬಸವನಗುಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಧ್ಯಾಹ್ನ ಬ್ಯಾಡರಹಳ್ಳಿ ಬಂದಿರುವ ಪ್ರದೀಪ್, ಅನ್ನಪೂರ್ಣೇಶ್ವರಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ 4 ಲೀಟರ್ ಪೆಟ್ರೋಲ್ ಖರೀದಿಸಿದ್ದರು. ನಂತರ ಮುದ್ದಿನಪಾಳ್ಯದ ನಿರ್ಜನ ಪ್ರದೇಶಕ್ಕೆ ಬಂದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೆಟ್ರೋಲ್ ಬಂಕ್‍ನಲ್ಲಿ ಸ್ಕೋಡಾ ಕಾರ್‍ನಲ್ಲಿ ಬಂದು ಬಾಟೆಲ್ ನೀಡಿ ಪೆಟ್ರೋಲ್ ಹಾಕಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪ್ರದೀಪ್ ಪತ್ನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.
ಬಿಗ್ ಬಾಸ್ ಸೀಸನ್ 11 ರ ಸಧ್ಯ ಶನಿವಾರ, ಭಾನುವಾರದ ಕಿಚ್ಚನ ಪಂಚಾಯಿತಿ ನಡೆಯುತ್ತಿದ್ದು, ಈ ವೇಳೆ ಚೈತ್ರಾ ಮೇಲೆ ಗರಂ ಆಗಿರುವ ಕಿಚ್ಚ, ವರ್ತೂರು ಸಂತೋಷ್ ರನ್ನು ಹೊಗಳಿದ್ದಾರೆ. https://ainlivenews.com/shock-for-bpl-beneficiaries-card-cancellation-along-with-break-in-government-facilities/ ಅನಾರೋಗ್ಯ ನೆಪ ಒಡ್ಡಿ ಆಸ್ಪತ್ರೆಗೆ ಹೋಗಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಯಲ್ಲಿ ದಿನ ಕಳೆದಿದ್ದರು. ಮಾರನೇಯ ದಿನ ಬಿಗ್ಬಾಸ್ಗೆ ಮರಳಿದಾಗ ಅವರು ಇತರೆ ಸ್ಪರ್ಧಿಗಳ ಬಗ್ಗೆ ಹೊರಗೆ ಏನು ಅಭಿಪ್ರಾಯ ಇದೆ ಎಂಬುದನ್ನು ಹೇಳಿದರು. ಉಗ್ರಂ ಮಂಜು, ಧನರಾಜ್, ಹನುಮಂತು, ಮೋಕ್ಷಿತಾ, ತ್ರಿವಿಕ್ರಮ್, ಶಿಶಿರ್ ಇನ್ನಿತರೆ ಎಲ್ಲರ ಬಗ್ಗೆ ಹೊರಗೆ ಏನು ಅಭಿಪ್ರಾಯ ಇದೆ ಎಂದು ಹೇಳಿದರು. ಮಾತ್ರವಲ್ಲದೆ, ಅದನ್ನೆಲ್ಲ ಕತೆಗಳ ರೂಪದಲ್ಲಿ ಹೇಳಿದರು. ಇದು ಸುದೀಪ್ಗೆ ತೀವ್ರ ಅಸಮಾಧಾನ ತರಿಸಿತ್ತು. ಇದರ ಬಗ್ಗೆ ಮಾತನಾಡುತ್ತಾ, ಚೈತ್ರಾ ಕುಂದಾಪುರ ಹಾಗೂ ಮನೆಯ ಇತರರಿಗೆ ಬುದ್ಧಿವಾದ ಹೇಳುತ್ತಿದ್ದ ಸುದೀಪ್, ಮಾತಿನ ಮಧ್ಯದಲ್ಲಿ ವರ್ತೂರು ಸಂತೋಷ್ ಅವರನ್ನು ನೆನಪು ಮಾಡಿಕೊಂಡರು. ಹಿಂದಿನ ಸೀಸನ್ನಲ್ಲಿ ಒಬ್ಬ ಸ್ಪರ್ಧಿ ಇದ್ದರು ವರ್ತೂರು ಸಂತೋಷ್ ಎಂದು ಅವರ…
ಬೆಂಗಳೂರು:- ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಒಂದಿಲ್ಲೊಂದು ಸಮಸ್ಯೆಗಳು ಬರುತ್ತಿದೆ. ಕಳೆದ ಎರೆಡು ತಿಂಗಳು ಹಿಂದೆ ಗೃಹಲಕ್ಷ್ಮಿ ಯೋಜನೆಯಲ್ಲಿ 16 ಸಾವಿರ ಜಿಎಸ್ಟಿ ಹಾಗೂ ಐಟಿ ಇದ್ದ ಕಾರ್ಡ್ಗಳನ್ನ ರದ್ದು ಮಾಡಿ ಗೃಹಿಣಿಯರಿಗೆ ಮಹಿಳಾ ಅಭಿವೃದ್ಧಿ ಇಲಾಖೆ ಶಾಕ್ ಕೊಟ್ಟಿತ್ತು. ಇದರ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಯಲ್ಲಿ ಇದೀಗ ಬಿಪಿಎಲ್ ಕಾರ್ಡ್ನಲ್ಲಿ 10 ಸಾವಿರ ಫಲಾನುಭವಿಗಳ ಕಾರ್ಡ್ಗಳನ್ನ ರದ್ದು ಮಾಡಿದ್ದು, ಈ ಕಾರ್ಡ್ಗಳ ಫಲಾನುಭವಿಗಳು ಪಡೆಯುತ್ತಿದ್ದ ಸೌಕರ್ಯಗಳನ್ನ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್ಗಳಲ್ಲಿ ಇದ್ದವರಿಗೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ ಪರಿಹಾರ ನಿಧಿ, ನರೇಗಾ ಯೋಜನೆ ಸೇರಿದಂತೆ ವ್ಯಯಕ್ತಿಕ ಕಾಮಾಗಾರಿಯನ್ನ ಕೈಗೊಳ್ಳುವಂತಹ ಸೌಕರ್ಯಗಳು ಸಿಗುತ್ತಿದ್ದವು. ಆದರೆ ಈ ಸೌಕರ್ಯಗಳನ್ನು ಇದೀಗ ರದ್ದಾಗುವ ಸಾಧ್ಯತೆ ಇದ್ದು, ಫಲಾನುಭವಿಗಳಿಗೆ ಸದ್ಯ ಶಾಕ್ ಉಂಟಾಗಿದೆ. ಇನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ಎಪಿಎಲ್ ಕಾರ್ಡ್ಗಳನ್ನ ಕೂಡ ರದ್ದು ಮಾಡಲಾಗಿದೆ ಅಂತ ಸುದ್ದಿಹರಿದಾಡಿತ್ತು. ಈ ಕುರಿತಾಗಿ ಆಹಾರ ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ…
ಕನ್ನಡದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕ್ಯಾಮೆರಾ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಮಧ್ಯೆ ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ. ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. https://ainlivenews.com/efforts-to-solve-urdu-school-language-problems/ ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ ಚೈತ್ರಾ ಕುಂದಾಪುರ್ ಅವರಿಗೆ ಕಿಚ್ಚ ಸುದೀಪ್ ಅವರು, ಇಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಅನಾರೋಗ್ಯ ಆಗಿದ್ದರಿಂದ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೊರಹೋಗಿ ಬಂದ ಅವರು ಎಲ್ಲಾ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಹಿಂಟ್ ಕೊಟ್ಟಿದ್ದರು. ಇದು ಹೊರಗಿನ ಅಭಿಪ್ರಾಯ ಎಂದು ಕೂಡ ಹೇಳಿದ್ದರು. ಇದರಿಂದ ಸುದೀಪ್ ಸಖತ್ ಸಿಟ್ಟಾಗಿದ್ದಾರೆ. ಅಲ್ಲದೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚೈತ್ರಾ ಕ್ಷಮೆ ಕೇಳಿದರು. ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು…
ಹುಬ್ಬಳ್ಳಿ: ಉರ್ದು ಕಲಿಯದೆ ಜನರಿಗೆ ಉರ್ದು ಅಕಾಡೆಮಿ ತರಬೇತಿ ನೀಡುವ ಮೂಲಕ ಆ ಭಾಷೆಯ ಜ್ಞಾನ ಧಾರೆ ಎರೆಯುವುದು ಹಾಗೂ ಶಾಲೆಗಳಲ್ಲಿ ಉರ್ದು ಭಾಷೆ ಉಳಿಸಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖ್ವಾಜಾ ಹೇಳಿದರು. https://ainlivenews.com/i-dont-know-who-renukacharya-is-yatnal-rant/ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗದಲ್ಲಿನ ಗದಗ, ಹಾವೇರಿ , ಹುಬ್ಬಳ್ಳಿ ಧಾರವಾಡ ಸೇರಿದಂತೆ ಮುಂತಾದ ಭಾಗಗಳಲ್ಲಿನ ಉರ್ದು ಕವಿಗಳಿಗೆ ಪ್ರೋತ್ಸಾಹ ಹಾಗೂ ಉರ್ದು ಶಾಲೆಗಳಲ್ಲಿನ ಸಮಸ್ಯೆ ಕುರಿತು ಚರ್ಚೆ ಅದಕ್ಕೆ ಪರಿಹಾರ ಸಹ ಕಂಡುಕೊಳ್ಳಲಾಗುವುದು ಎಂದ ಅವರು ಕರ್ನಾಟಕ ಸರಕಾರ ಸಾಕಷ್ಟು ಪ್ರೋತ್ಸಾಹ ಉರ್ದು ಅಕಾಡೆಮಿಗೆ ಕೊಟ್ಟಿದ್ದು ಇದರ ಸದುಪಯೋಗ ಆಗಲಿ ಎಂಬುದು ನಮ್ಮ ಉದ್ದೇಶ ಎಂದರುಮ ಉರ್ದು ಭಾಷೆ,ಸಾಹಿತ್ಯ ನಶಿಸಿ ಹೋಗುವ ಕಾಲದಲ್ಲಿ ಇಂದು ಪುನರ್‌ಜನ್ಮ ಪಡೆದುಕೊಳ್ಳುತಿದ್ದು ಇದಕ್ಕೆ ಉರ್ದು ಅಕಾಡೆಮಿ ಸಾಕಷ್ಟು ಪ್ರೋತ್ಸಾಹ ಕೊಡುತ್ತದೆ ಎಂದರು. ಉರ್ದುಭಾಷೆ ಸಾಮರಸ್ಯದ ಭಾಷೆ. ಸರ್ವಧರ್ಮೀಯರು ಮಾತನಾಡುವ ಭಾಷೆ ಆದ್ದರಿಂದ ಇದಕ್ಕೆ…
ಸೂರ್ಯೋದಯ: 06:26, ಸೂರ್ಯಾಸ್ತ : 05:36 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ದ್ವಿತೀಯ ನಕ್ಷತ್ರ: ರೋಹಿಣಿ ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ಮ.2:27 ನಿಂದ ಮ.3:55 ತನಕ ಅಭಿಜಿತ್ ಮುಹುರ್ತ: ಬೆ.11:38 ನಿಂದ ಮ.12:23 ತನಕ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ವಿದೇಶ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ಎಣ್ಣೆ,, ನೀರು, ಮಾರಾಟಗಾರರಿಗೆ ಧನ ಲಾಭ, ಸ್ಯಾರಿ ಸೆಂಟರ್ ಪ್ರಾರಂಭಿಸುವ ಚಿಂತನೆ, ಸಂಗಾತಿಗೆ ನೆನೆದು ಮನದಲ್ಲಿ ಒಯ್ದಾಟ, ಕಮಿಷನ್ ಏಜೆಂಟರಿಗೆ ಧನ ಲಾಭ, ಆರ್ಥಿಕ ಸಲಹೆಗಾರರಿಗೆ ಸಿಹಿ ಸುದ್ದಿ, ಉದ್ಯೋಗದ ಪ್ರಮೋಷನ್ ಪ್ರಯತ್ನದಲ್ಲಿ ಹಿನ್ನಡೆ, ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ ಉನ್ನತ ಹುದ್ದೆ ದೊರೆಯಲಿದೆ,…