ಬೆಂಗಳೂರು:- ಇಂದು ಪಿಎಸ್ಐ ನೇರ ನೇಮಕಾತಿ ಪರೀಕ್ಷೆ ಹಿನ್ನೆಲೆ ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದೆ. ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗೂ ಬೆಂಗಳೂರಿನಲ್ಲೇ ಎಕ್ಸಾಂ ಇದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಪರೀಕ್ಷಾ ಅಭ್ಯರ್ಥಿಗಳಿಗಿರುವ ಸೂಚನೆಗಳು ಇಂತಿವೆ. ಪುರುಷ ಅಭ್ಯರ್ಥಿಗಳಿಗೆ ಮಾರ್ಗಸೂಚಿ:- ಪೂರ್ಣ ತೋಳಿನ ಅಂಗಿಗಳನ್ನ ಧರಿಸದಂತೆ ಸೂಚನೆ ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಬಳಸಲು ಸೂಚನೆ ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್ ಗಳಿಗೆ ಅನುಮತಿ ಇಲ್ಲ ಶರ್ಟ್ ಅಥವಾ ಪ್ಯಾಂಟ್ ಗಳಿಗೆ ಜಿಪ್ ಪ್ಯಾಕೆಟ್ ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರಬಾರದು ಪರೀಕ್ಷಾ ಹಾಲ್ ಗೆ ಶೂಗಳು ಕಟ್ಟು ನಿಟ್ಟಾಗಿ ನಿಷೇಧ ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧ ಮಹಿಳಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ:- ದೊಡ್ಡ ದೊಡ್ಡ ಡಿಸೈನ್, ಬಟನ್ ಇರೋ, ಹೂಗಳು ಇರೋ ಬಟ್ಟೆ…
Author: AIN Author
ಬಿಸಿಸಿಐ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು, ಇದರಲ್ಲಿ ವರ್ಷವಿಡೀ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಾಗುತ್ತದೆ. ಕಳೆದ ವರ್ಷ ಗಿಲ್ ಅವರ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಅವರನ್ನು ವರ್ಷದ ಅತ್ಯುತ್ತಮ ಭಾರತೀಯ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ. ಬಿಸಿಸಿಐ ಮಂಗಳವಾರ ಹೈದರಾಬಾದ್‌ನಲ್ಲಿ ಈ ಪ್ರಶಸ್ತಿಗಳನ್ನು ನೀಡಲಿದೆ. ಗಿಲ್ 2023 ರಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 28.66 ಸರಾಸರಿಯಲ್ಲಿ 1 ಶತಕ ಸೇರಿದಂತೆ 258 ರನ್ ಕಲೆಹಾಕಿದ್ದರು. ಹಾಗೆಯೇ ಗಿಲ್ 2023 ರಲ್ಲಿ 29 ಏಕದಿನ ಪಂದ್ಯಗಳನ್ನು ಆಡಿದ್ದು, 63.36 ಸರಾಸರಿಯಲ್ಲಿ 1584 ರನ್ ಗಳಿಸಿದ್ದಾರೆ. ಈ ವರ್ಷ ಅವರ ಬ್ಯಾಟ್‌ನಿಂದ ಐದು ಶತಕ ಮತ್ತು ಒಂಬತ್ತು ಅರ್ಧ ಶತಕಗಳು ಸೇರಿವೆ. ಟಿ20ಯಲ್ಲಿ ಗಿಲ್ ಈ ವರ್ಷ 13 ಪಂದ್ಯಗಳನ್ನು ಆಡಿದ್ದು, 30 ರ ಸರಾಸರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 304 ರನ್ ಗಳಿಸಿದ್ದಾರೆ. ಅಲ್ಲದೆ ಶುಭ್ಮನ್ ಗಿಲ್ ಕಳೆದ 12 ತಿಂಗಳುಗಳಲ್ಲಿ ಅಂದರೆ…
ಬೆಂಗಳೂರು:- ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರು ಇಂದು ಕೇಸರಿಮಯ ಆಗಿತ್ತು. ನಗರದ ಬಹುತೇಕ ಏರಿಯಾಗಳಲ್ಲಿ ಹಬ್ಬ ಸಂಭ್ರಮ ಮನೆ ಮಾಡಿದ್ರೆ, ನಗರದ ದೇವಾಲಯಗಳಲ್ಲಂತೂ ಸಹಸ್ರಾರು ಸಂಖ್ಯೆಯಲ್ಲಿ ಜನ ರಾಮನನ್ನ ಸ್ಮರಿಸಿದರು. ರಾಮನೂರಿನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಿಂದೂ ಸಮಾಜದ ಕೋಟ್ಯಂತರ ಮಂದಿ ಸಂಭ್ರಮಿಸಿದ್ದಾರೆ. ಆ ಐತಿಹಾಸಿಕ ಕ್ಷಣಕ್ಕಾಗಿ ನೂರಾರು ವರ್ಷ ಕಾದಿದ್ದ ಹಿಂದೂ ಸಮಾಜದ ಮನಕ್ಕಿಂದು ಆ ಕ್ಷಣ ಜೀವನ ಪಾವನವಾಗಿಸಿದೆ. ಬೆಂಗಳೂರಲ್ಲೂ ಈ ಸಂಭ್ರಮ ಅದ್ಧೂರಿಯಾಗಿ ಆಚರಣೆಯಾಗಿದ್ದು, ರಾಮ ಭಕ್ತರ ಸಂಭ್ರಮಕ್ಕಿಂದು ಪಾರವೇ ಇರಲಿಲ್ಲ. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಹಿನ್ನೆಲೆ ಬೆಳಗ್ಗೆಯಿಂದಲೇ ನಗರದ ಎಲ್ಲಾ ದೇವಾಲಯಗಳಲ್ಲೂ ಪೂಜೆ-ಪುನಸ್ಕಾರ ಜೋರಾಗಿತ್ತು. ವಿವಿಧ ಪೂಜೆ ಕೈಂಕರ್ಯ, ಅರ್ಚನೆ, ಹೋಮ, ಯಾಗಗಳ ಮೂಲಕ ಜನ ರಾಮನ ಭಕ್ತಿಯಲ್ಲಿ ಮುಳುಗಿದ್ದರು. ರಾಜಾಜಿನಗರದ ರಾಮಮಂದಿರ, ಗಾಳಿ ಆಂಜನೇಯಸ್ವಾಮಿ ದೇವಾಲಯ, ಶಿವಾಜಿನಗರ ರಾಮನ ದೇವಸ್ಥಾನ, ಸೇರಿದಂತೆ ಬಹುತೇಕ ಕಡೆ ಅದ್ಧೂರಿ ಅಲಂಕಾರಗಳ ಜೊತೆ ವಿಜೃಂಭಣೆಯ ಸಂಭ್ರಮ ನೇರವೇರಿತು. ಇನ್ನೂ ನಗರದ ಬಹುತೇಕ ದೇವಾಲಯಗಳಲ್ಲಿ ಅಯೋಧ್ಯೆ ಕಾರ್ಯಕ್ರಮ ನೇರಪ್ರಸಾರ ವೀಕ್ಷಣೆಗೆ…
ಮಂಡ್ಯ:- ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಲುಕೋಟೆಯಲ್ಲಿ ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಮಹಿಳೆಯೊಬ್ಬರು ಕೆಲ ದಿನಗಳಲ್ಲೇ ಅನುಮಾನಾಸ್ಪದ ಸಾವಿಗೀಡಾಗಿರುವ ಘಟನೆ ಜರುಗಿದೆ. ನಾಪತ್ತೆಯಾದ ಮಹಿಳೆಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ದೀಪಿಕಾ ಎಂದು ಗುರುತಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಗಿರುವ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜನವರಿ 20 ರಂದು ದೀಪಿಕಾ ಶಾಲೆಗೆ ಹೋಗಿ ಬರುತ್ತೇನೆ ಎಂದು ಕೆಲಸಕ್ಕೆ ತೆರಳಿದ್ದರು. ಅದೇ ದಿನ ಮಧ್ಯಾಹ್ನದ ವೇಳೆಗೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಅಂದು ಸಂಜೆ ಕುಟುಂಬಸ್ಥರು ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಸೋಮವಾರ ಸಂಜೆ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶವ ಪತ್ತೆಹಚ್ಚಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್‌ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟೀಮ್ ಇಂಡಿಯಾದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟರ್ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಎಲ್ ಟಿ20 ಟೂರ್ನಿಯಲ್ಲಿ ಬ್ರಾಂಡ್ ಅಂಬಾಸಿಡರ್ ಹಾಗೂ ವೀಕ್ಷಕ ವಿವರಣೆಕಾರರಾಗಿರುವ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್ ಅವರು ವಿರಾಟ್ ಕೊಹ್ಲಿಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಿದ್ದಾರೆ. ಕೊಹ್ಲಿ ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಬ್ಯಾಟರ್ ಎಂದು ಶ್ಲಾಘಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ತಮ್ಮ ವೃತ್ತಿ ಜೀವನದಲ್ಲಿ ರನ್ ಗಳ ಶಿಖರ ನಿರ್ಮಿಸಿದ್ದಾರೆ. ರಿಕಿ ಪಾಂಟಿಂಗ್ , ಬ್ರಿಯಾನ್ ಲಾರಾರೊಂದಿಗೆ ಸಚಿನ್ ಕೂಡ ಶ್ರೇಷ್ಠ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಶೇನ್ ವಾರ್ನ್ ಹಾಗೂ ವಾಸಿಮ್ ಅಕ್ರಮ್ ಕೂಡ ಸರ್ವಶ್ರೇಷ್ಠ ಬೌಲರ್ ಗಳಾಗಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ,” ಎಂದು ಪಾಕ್ ಮಾಜಿ ವೇಗಿ ಹೇಳಿದ್ದಾರೆ. “ವಿರಾಟ್…
ಬೆಂಗಳೂರು:- ಓರ್ವ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿನ ಮನೆಯೊಂದರಲ್ಲಿ ಜರುಗಿದೆ. 27 ವರ್ಷದ ರಂಜಿತಾ ಮೃತ ಮಹಿಳೆ ಎನ್ನಲಾಗಿದೆ. ಅಲ್ಲದೇ ಪತ್ನಿ ರಜಿತಾಗೆ ಪತಿ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಂಜಿತಾ ಅವರು ಮಧು ಅವರನ್ನು ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ರಂಜಿತಾ ವೃತ್ತಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು. ಇನ್ನು ಪತಿ ಮಧು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದಗಿನಿಂದಲೂ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ನೀಡಿಲ್ಲವೆಂದು ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆಂದು ರಂಜಿತಾ ಪೋಷಕರು ಆರೋಪ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳದ ಬಗ್ಗೆ ರಂಜಿತಾ ಆಗಾಗ ತಾಯಿ ಬಳಿ ಹೇಳಿದ್ದರು. ಅಲ್ಲದೆ ರಂಜಿತಾ ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದರು. ಬಳಿಕ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಜ್ಞಾನಭಾರತಿನಗರ…
ಮಳೆ ಕೊರತೆ ಸೇರಿ ಈ ಬಾರಿ ಆರಂಭದಿಂದಲೂ ಭತ್ತದ ಕೃಷಿಗೆ ಎದುರಾದ ಸಂಕಷ್ಟಗಳು ಒಂದೆರಡಲ್ಲ. ಎಲ್ಲವನ್ನೂ ದಾಟಿ ಮೇಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿದೆ. ಕೊಯ್ದು ಕಾಲದಲ್ಲಿ ಕಾಟಿ, ಹಂದಿ ಕಾಟ ವಿಪರೀತವಾಗಿರುವುದರಿಂದ ಫಸಲು, ಭತ್ತದ ಹುಲ್ಲು ಹಾಳಾಗುತ್ತಿದೆ. ಕಷ್ಟುಪಟ್ಟು ಬೆಳೆದ ಭತ್ತದ ಬೆಳೆ ಕಾಡುಪ್ರಾಣಿಗಳ ಉಪಟಳದಿಂದ ಮಣ್ಣು ಪಾಲಾಗುತ್ತಿದ್ದು ರೈತರು ಬರದ ಜತೆಗೆ ಈಗ ನಷ್ಟದ ಹೊರೆ ಯನ್ನೂ ಹೊರುವಂತಾಗಿದೆ. ಶೆಟ್ಟಿಹಳ್ಳಿ ಪ್ರದೇಶದಲ್ಲಿ ತೋಟ ಮತ್ತು ಭತ್ತದ ಗದ್ದೆಗೆ ನುಗ್ಗಿ ಬೆಳೆ, ಗಿಡವನ್ನು ನಾಶಪಡಿಸುತ್ತಿವೆ. ಅಲ್ಲದೆ ಗದ್ದೆಯಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವುದರಿಂದ ಪೈರು ಮಣ್ಣಿನಡಿ ಸಿಲುಕಿದ್ದು ಹುಲ್ಲು ಮತ್ತು ಭತ್ತ ಎರಡು ನಷ್ಟವಾಗಿದೆ. ಚೌಗು ಪ್ರದೇಶದಲ್ಲಿ ಒಮ್ಮೆಲೆ ಸಂಚರಿಸಿದಾಗ ಹೊಂಡ ನಿರ್ಮಾಣವಾಗುತ್ತಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿ ಕಾಟಿಗಳ ಉಪಟಳ ಆರಂಭವಾಗಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಭತ್ತದ ಗದ್ದೆಗಳಲ್ಲಿ ಮಾತ್ರವಲ್ಲದೆ ಕಾಟಿಗಳು ತೋಟದಲ್ಲೂ ದಾಂಧಲೆ ನಡೆಸಿವೆ. ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಸಸಿಗೆ ಹಾನಿ ಮಾಡುತ್ತಿವೆ. ಬೇಲಿ,…
ಬೆಂಗಳೂರು:- ಬಿಯರ್ ಪ್ರಿಯರಿಗೆ ದರ ಏರಿಕೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ. ‘ಕರ್ನಾಟಕ ಅಬಕಾರಿ ನಿಯಮಗಳು, 1968’ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ. ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಬಿಯರ್ ಮಾರಾಟದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿರುವುದರಿಂದ ಆ ಮೂಲದಿಂದ ಹೆಚ್ಚು ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸರ್ಕಾರವು ಸುಂಕವನ್ನು ಹೆಚ್ಚಿಸುವತ್ತ ಮನ ಮಾಡಿದೆ.
ಸ್ಯಾಂಡಲ್‌ವುಡ್‌ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅಕ್ಕ ಅನುಷಾ (Anusha) ಅವರು ಮದುವೆಗೆ ಸಜ್ಜಾಗಿದ್ದಾರೆ. ಇದೇ ಖುಷಿಯಲ್ಲಿ ಸಹೋದರಿ, ತಂಗಿ ಆಶಿಕಾ ಜೊತೆ ಬ್ರೈಡಲ್ ಪಾರ್ಟಿ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ‘ಗೋಕುಲದಲ್ಲಿ ಸೀತೆ’ ಎಂಬ ಧಾರಾವಾಹಿ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಅನುಷಾ ರಂಗನಾಥ್ (Anusha Ranganath) ಅವರು ಈಗ ಮದುವೆಗೆ ಸಜ್ಜಾಗಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ಬ್ರೈಡಲ್ ಪಾರ್ಟಿ ಮಾಡುವ ಮೂಲಕ ಅನುಷಾ & ಟೀಮ್ ಸಂಭ್ರಮಿಸಿದೆ. ತಂಗಿ ಆಶಿಕಾ ರಂಗನಾಥ್, ಸಿರಿ ಪ್ರಹ್ಲಾದ್, ಸುಶ್ಮಿತಾ ಗೌಡ ಮತ್ತು ಆಪ್ತರ ಜೊತೆ ಸೇರಿ ಬ್ರೈಡ್ ಪಾರ್ಟಿ ಮಾಡಿ ಮದುವೆ ಹುಡುಗಿ ಅನುಷಾ ಸಂಭ್ರಮಿಸಿದ್ದಾರೆ. ಇನ್ನೂ ಖುಷಿಯಿಂದ ತಂಗಿ ಆಶಿಕಾರನ್ನು ಎತ್ತಿಕೊಂಡು ಅನುಷಾ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಆಲ್ಕೋಹಾಲ್ ಸೇವನೆಯಿಂದ ಲಿವರ್ ಆರೋಗ್ಯ ಹದಗೆಡುತ್ತದೆ. ಇದು ಪ್ರಾಣಕ್ಕೂ ಸಂಚಕಾರ ತರಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಧೂಮಪಾನ, ಮದ್ಯಪಾನಗಳ ಅಭ್ಯಾಸ ಬಿಟ್ಟುಬಿಡಬೇಕೆಂದು ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತದೆ. ಆದರೆ, ಆಲ್ಕೋಹಾಲ್ಗಿಂತಲೂ ಹೆಚ್ಚು ನಮ್ಮ ಲಿವರ್ ಮೇಲೆ ಪರಿಣಾಮ ಬೀರುವ ಕೆಲವು ಆಹಾರಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ನಮ್ಮ ಲಿವರ್ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಲಿವರ್ ರಕ್ತದಲ್ಲಿನ ಹೆಚ್ಚಿನ ರಾಸಾಯನಿಕ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಪಿತ್ತರಸ ಎಂಬ ಉತ್ಪನ್ನವನ್ನು ಹೊರಹಾಕುತ್ತದೆ. ಇದು ಲಿವರ್ನಿಂದ ತ್ಯಾಜ್ಯ ಉತ್ಪನ್ನಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಅಂದರೆ, ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭವಾಗಿ ಚಲಿಸುವಂತೆ ಮಾಡುತ್ತದೆ. ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಯು ಸುಲಭವಾಗಿ ಕೆಲಸ ಮಾಡಲು ಸಹಾಯ ಮಾಡಲು ನಮ್ಮ ಹೊಟ್ಟೆಯಲ್ಲಿ ವಿಷಕಾರಿ ಆಹಾರ ಸೇರಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಲಿವರ್ ಅನ್ನು ರಕ್ಷಿಸಲು ನೀವು ಕೆಲವು ಆಹಾರಗಳ ಸೇವನೆಯನ್ನು ಅವಾಯ್ಡ್ ಮಾಡಬೇಕು. ಆ…