ಲಿಖಿತ್ ಶೆಟ್ಟಿ (Likhit Shetty) ನಾಯನಾಗಿ ನಟಿಸಿರುವ ‘ಫುಲ್ ಮೀಲ್ಸ್’ (Full Meals) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಚಿತ್ರೀಕರಣ (Shooting) ಆರಂಭಿಸಿದ್ದ ಚಿತ್ರತಂಡ, ಕನಕಪುರ ರಸ್ತೆಯ ರೆಸಾರ್ಟ್ ಒಂದರ, ರಮಣೀಯ ಸ್ಥಳದಲ್ಲಿ ಕುಂಬಳಕಾಯಿ ಒಡೆದು ಚಿತ್ರೀಕರಣ ಮುಗಿಸಿದೆ. ಚಿತ್ರದ ಉಳಿದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಆದಷ್ಟು ಬೇಗ ಮುಗಿಸಿ, ಶೀಘ್ರದಲ್ಲೇ ತೆರೆಗೆ ತರುವ ಉತ್ಸಾಹದಲ್ಲಿ ಚಿತ್ರತಂಡವಿದೆ. ಈ ಹಿಂದೆ ‘ಸಂಕಷ್ಟ ಕರ ಗಣಪತಿ’ ‘ಫ್ಯಾಮಿಲಿ ಪ್ಯಾಕ್’ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಾಯಕ ಲಿಖಿತ್ ಶೆಟ್ಟಿ, ಫುಲ್ ಮೀಲ್ಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಹಂತ ಮೇಲೇರುವ ವಿಶ್ವಾಸವನ್ನು ಹೊಂದಿದ್ದಾರೆ. ಆಲ್ಬಮ್ ಸಾಂಗ್ಸ್ ಮತ್ತು ಕಿರುಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಎನ್ ವಿನಾಯಕ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದು, ಅಂದುಕೊಂಡ ರೀತಿಯಲ್ಲೇ ಚಿತ್ರೀಕರಣ ಮುಗಿದಿದ್ದು ಸಿನಿಮಾ ಜನರಿಗೆ ಇಷ್ಟವಾಗುವ ಭರವರಸೆಯನ್ನು ಹೊಂದಿದ್ದಾರೆ. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಲಿಖಿತ್ ಶೆಟ್ಟಿಗೆ…
Author: AIN Author
ದೆಹಲಿ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಬ್ಯಾಟರ್ ಡೇವಿಡ್ ವಾರ್ನರ್‌ಗೆ (David Warner) ಭಾರತ, ಇಲ್ಲಿನ ಜನ, ಸಂಸ್ಕೃತಿ ಎಂದರೆ ಅಚ್ಚುಮೆಚ್ಚು. ಆದ್ದರಿಂದ ಭಾರತಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ವಾರ್ನರ್ ಕೂಡ ಸಂಭ್ರಮಿಸುತ್ತಾರೆ. ತೆಲುಗಿನ ಹಿಟ್ ಸಿನಿಮಾ ‘ಪುಷ್ಪ’ದ ಹೀರೋ ಸ್ಟೈಲ್‌ನ್ನು ಅನುಕರಿಸಿ ಭಾರತೀಯರ ಗಮನ ಸೆಳೆದಿದ್ದರು. ಅಂತೆಯೇ ಈಗ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆಯಲ್ಲಿ ವಿಶೇಷ ಪೋಸ್ಟ್ ಹಾಕುವ ಮೂಲಕ ಭಾರತೀಯರಿಗೆ ವಿಶ್ ಮಾಡಿದ್ದಾರೆ. ವಾರ್ನರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಭಾರತದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಜೈ ಶ್ರೀ ರಾಮ್ ಇಂಡಿಯಾ’ ಎಂದು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಭಗವಾನ್ ರಾಮನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್, ಪ್ರಾಣ ಪ್ರತಿಷ್ಠಾಪನೆ (Ram Mandir Pran Pratishtha Ceremony) ಆಚರಿಸಲು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಮಹೇಶ್…
ನಿದ್ರೆ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್, ಲ್ಯಾಪ್‌ಟಾಪ್ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು. 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ 6 ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ (Heart Disease), ಮಧುಮೇಹ (Diabetes) ಮತ್ತು ಕ್ಯಾನ್ಸರ್‌ನಂತಹ (Cancer) ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಕಡಿಮೆ ನಿದ್ದೆ ಮಾಡುವವರು ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಶೀತ, ಜ್ವರ, ಸುಸ್ತು, ಆಯಾಸ, ಮುಂತಾದ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಬರಬಹುದು. ಕಡಿಮೆ ನಿದ್ರೆಯ ಪರಿಣಾಮ ದೇಹದ ಮೇಲೆ ದುಷ್ಪರಿಣಾಮ ಬೀರಲು…
ಹೈದರಾಬಾದ್: ಇಂಗ್ಲೆಂಡ್ (England) ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ಟೀಮ್ ಇಂಡಿಯಾ (Team India) ಆಟಗಾರ ವಿರಾಟ್ ಕೊಹ್ಲಿ (Virat Kohli) ಹೊರಗುಳಿದಿದ್ದಾರೆ. ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಜ.25 ರಂದು ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ವೈಯಕ್ತಿಕ ಕಾರಣದಿಂದ ಕೊಹ್ಲಿ ಈ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ತಂಡದಿಂದ ಬಿಡುಗಡೆ ಮಾಡುವಂತೆ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದರು. ಈ ಮನವಿಗೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಕೊಹ್ಲಿ ಅಲಭ್ಯರಾದರೂ, ಟೆಸ್ಟ್ ತಂಡದಲ್ಲಿ ಅವರನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಿದೆ. ಸರಣಿಯ ಎರಡನೇ ಪಂದ್ಯವು ಫೆ.2 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಮರಳುವ ನಿರೀಕ್ಷೆಯಿದೆ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್,…
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ PSI ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೊಂದೆಡೆ ಪರೀಕ್ಷೆ ಬರೆಯುವ ಮುನ್ನವೇ ಕೈಗೆ ಅಭ್ಯರ್ಥಿಯೋರ್ವ ಗಾಯ ಮಾಡಿಕೊಂಡಿದ್ದಾನೆ. ಗದಗದಿಂದ ಬೆಂಗಳೂರಿಗೆ ಪಿಎಸ್ ಐ ಪರೀಕ್ಷಾ ಅಭ್ಯರ್ಥಿ ಬಂದಿದ್ದು, ಎರಡು ವರ್ಷದ ಹಿಂದೆ ಕೈಗೆ ಹಾಕಿದ್ದ ಕಡಗ ತೆಗೆಯುವಂತೆ ಭದ್ರತಾ ಸಿಬ್ಬಂದಿಗಳು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಕೈಗರ ಹಾಕಿದ್ದ ಕಡಗ ತೆಗೆಯಲು ಅಭ್ಯರ್ಥಿ ಪರದಾಟ ನಡೆಸಿದ್ದಾರೆ. ಶಾಂಪೂ ಬಳಸಿ ಕೈನಲ್ಲಿದ್ದ ಕಡಗ ತೆರವು ಮಾಡಿದ್ದಾನೆ. ಕಡಗ ತೆಗೆಯುವ ವೇಳೆ ಕೈಗೆ ಅಭ್ಯರ್ಥಿ ಗಾಯ ಮಾಡಿಕೊಂಡಿದ್ದಾನೆ.
ಬೆಂಗಳೂರು:- ಕರ್ನಾಟಕ ಮತ್ತು ಗೋವಾವನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸಲು ನೈಋತ್ಯ ರೈಲ್ವೆಯ ‘ಆಸ್ತಾ ಸ್ಪೆಷಲ್ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳನ್ನು ಓಡಿಸಲಿದೆ. ಎರಡು ರೈಲುಗಳು ಮೈಸೂರಿನಿಂದ (ಎಸ್ಎಂವಿಟಿ ಬೆಂಗಳೂರು ಮೂಲಕ), ಮತ್ತು ಎಸ್ಎಂವಿಟಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ (ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ) ಮತ್ತು ವಾಸ್ಕೋಡಗಾಮಾ (ರತ್ನಗಿರಿ ಮತ್ತು ಪನ್ವೇಲ್) ಮೂಲಕ ತಲಾ ಒಂದು ರೈಲು ಅಯೋಧ್ಯೆಗೆ ಸಂಚರಿಸಲಿದೆ. ಪ್ರಯಾಣಿಕರು ಇಂಡಿಯನ್ ರೈಲ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್) ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ ಎಂದು ನೈಋತ್ಯ ರೈಲ್ವೆ ಈಗಾಗಲೇ ತಿಳಿಸಿದೆ. ಈ ರೈಲುಗಳು ಸೀಮಿತ ಟ್ರಿಪ್ಗಳನ್ನು ಹೊಂದಿದ್ದರೂ, ರೈಲ್ವೆ ಮಂಡಳಿಯು ಬೇಡಿಕೆಯ ಆಧಾರದ ಮೇಲೆ ಅವುಗಳನ್ನು ವಿಸ್ತರಿಸಲು ನಿರ್ಧರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಕಿಂಗ್ ಮತ್ತು ದರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 06203:- ಇದು ತುಮಕೂರನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸುತ್ತದೆ. ಈ ರೈಲು…
ಚಿತ್ರದುರ್ಗ:- ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಚಿತ್ರದುರ್ಗ ಜಿಲ್ಲೆ ಸ್ವಯಂಪ್ರೇರಿತ ಬಂದ್ಗೆ ಕರೆ ಕೊಟ್ಟಿದೆ. ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ಇಂದು ಬೆಳಗ್ಗೆ 6:30ರಿಂದ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿಭಟನೆ ಹಿನ್ನೆಲೆ ರೈತ ಮುಖಂಡರು ಜಮಾಯಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ.
ತುಮಕೂರು:- ಇತ್ತೀಚೆಗೆ ತುಮಕೂರು ನಗರದಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಳ ಹಿನ್ನೆಲೆ ಎಸ್ ಪಿ ಅಶೋಕ್ ಅವರು ದಂಧೆಗೆ ಬ್ರೇಕ್ ಹಾಕಲು ಖಡಕ್ ಸೂಚನೆ ನೀಡಿದ್ದಾರೆ. The Karnataka prohibition of charging exorbitant interest act ಪ್ರಕಾರ ವರ್ಷಕ್ಕೆ 18% ಗಿಂತ ಹೆಚ್ಚು ಬಡ್ಡಿ ವಿಧಿಸಿ ವ್ಯವಹಾರ ಮಾಡುತ್ತಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸ್ ಪಿಎಸ್ ಐ,ಸಿಪಿಐ ಅಥವಾ ಡಿವೈಎಸ್ ಪಿಗಳಿಗೆ ಸಂಪರ್ಕ ಮಾಡಿ ದೂರು ನೀಡಲು SP ಮನವಿ ಮಾಡಿದೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯವಾಣಿ ನಂಬರ್ 9480802900 ಗೆ ಕರೆ ಮಾಡಿ ದೂರು ನೀಡಬಹುದು. ತುಮಕೂರು ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಎಸ್ ಪಿ ಪ್ಲಾನ್ ಮಾಡಿದ್ದಾರೆ. ಇನ್ನೂ ಇತ್ತೀಚೆಗೆ ಬಡ್ಡಿ ದಂಧೆಗೆ ಆತ್ಮಹತ್ಯೆ ಗಳು ನಡೆದಿದ್ದವು..ಯಾರಾದರೂ ವರ್ಷಕ್ಕೆ 18% ಹೆಚ್ಚು ಸಾಲಕ್ಕೆ ಬಡ್ಡಿ ಪಡೆಯುತ್ತಿದ್ದರೇ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಲು ಎಸ್ ಪಿ ಅಶೋಕ್ ಮನವಿ ಮಾಡಿದ್ದಾರೆ.
ಚೀನಾ:-ಚೀನಾದಲ್ಲಿ ತಡರಾತ್ರಿ 7.2 ತೀವ್ರತೆಯ ಪ್ರಬಲ ಭೂಕಂಪನ ಆಗಿದ್ದು, ದೆಹಲಿಯಲ್ಲೂ ಭೂಕಂಪನ ಆಗಿದೆ. ಈ ಹಿನ್ನೆಲೆ ಜನತೆ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆಸ್ತಿಪಾಸ್ತಿ ಹಾನಿಯಾದ ಬಗ್ಗೆಯೂ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು, ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ ಸೋಮವಾರ ಬೆಳಿಗ್ಗೆ ಈಶಾನ್ಯ ಚೀನಾದ ಗುಡ್ಡಗಾಡು ಹಾಗೂ ಪರ್ವತ ಶ್ರೇಣಿಯಲ್ಲಿ ಭೂಕಂಪ ಸಂಭವಿಸಿದ್ದು, 47 ಮಂದಿ ಜೀವಂತ ಸಮಾಧಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಪ್ರಸಾರಸಂಸ್ಥೆಗಳು ವರದಿ ಮಾಡಿವೆ. ಅಲ್ಲದೇ ದಿಢೀರ್ ಮಳೆ ಹಿನ್ನೆಲೆಯಲ್ಲಿ ಚೀನಾದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಗದಗ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗ್ತಿದ್ದಂತೆ ಇಡೀ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಗದಗ ನಗರದಲ್ಲೂ ಸಹ ಶ್ರೀ ರಾಮನ ಆರಾಧನೆಯನ್ನ ಶ್ರಧ್ಧಾ ಭಕ್ತಿಯಿಂದ ಮಾಡಲಾಗಿದೆ. ನಗರದ ಟ್ಯಾಗೋರ ರಸ್ತೆಯ ಎರಡನೇ ಕ್ರಾಸ್ ನ ಮಹಾಂತೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿದೆ. ದೀಪೋತ್ಸವ ಮಾಡುವ ಮೂಲಕ ಇಡೀ ಟ್ಯಾಗೋರ್ ರಸ್ತೆಯ ಜನ್ರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ರು. ಬಂದಂತಹ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾದ್ರು.