ಗದಗ :-ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಅವಘಡದ ದುರಂತದಿಂದಾಗಿ ಚಿತ್ರನಟ ಯಶ್ ಅಭಿಮಾನಿಗಳು ಸಾವಿಗೀಡಾಗಿದ್ದರು. ಮೃತ ಮುರುಳಿ, ನವೀನ್, ಹನುಮಂತ ರವರ ಮನೆಗೆ ನರಗುಂದ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ ಪಾಟೀಲ, ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ, ವಿದಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. 10 ಸಾವಿರ ರೂಪಾಯಿ ವಯಕ್ತಿಕ ಪರಿಹಾರ ನೀಡಿದ ಮಾಜಿ ಸಚಿವ ಸಿ.ಸಿ ಪಾಟೀಲ. ತಲಾ 3 ಕುಟುಂಬಕ್ಕೂ ಪ್ರತ್ಯೇಕ 10 ಸಾವಿರ ರೂಪಾಯಿ ಪರಿಹಾರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳನ್ನು ಕಳೆದುಕೊಂಡು ಎದೆ ಬಡಿದುಕೊಂಡು ಅಳುತ್ತಿರುವ ಹೆತ್ತವರ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.
Author: AIN Author
ಬೆಂಗಳೂರು:- ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ ಮೂವರನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂಜಯ್, ಮಂಗನಹಳ್ಳಿಯ ಆನಂದ ಮತ್ತು ನಾಗದೇವಹಳ್ಳಿ ನಿವಾಸಿ ಹನುಮಂತು ಬಂಧಿತ ಆರೋಪಿಗಳು. ಈ ಆರೋಪಿಗಳು ಕಿಶನ್ ಕುಮಾರ್ ಎಂಬ ಯುವಕನನ್ನು ಅಪಹರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ವಾಪಸ್ ಕಳುಹಿಸಿದ್ದರು. ಮೊದಲ ಪ್ರಯತ್ನ ವಿಫಲವಾದ ನಂತರ ಗುರುಸಿದ್ದಪ್ಪ ಎಂಬುವವರನ್ನು ಅಪಹರಿಸಿ, ಜೀವಂತವಾಗಿ ಬಿಟ್ಟರೆ ತೊಂದರೆ ಮಾಡಬಹುದು ಎಂಬ ಭಯದಿಂದ ರಾಮನಗರ ಜಿಲ್ಲೆ ಕೂಟಗಲ್ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕೊಲೆ ಮಾಡಿದ್ದರು. ಈಗ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿಗೆ 15 ವರ್ಷಗಳ ಹಿಂದೆ ಬಂದಿದ್ದ ಸಂಜಯ್, ಮಂಗನಗಳ್ಳಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆನಂದ್ ತರಕಾರಿ ಡೆಲಿವರಿ ಕೆಲಸ ಮಾಡುತ್ತಿದ್ದ. ಈತ ಹಲವು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ರಾಯಚೂರು ಮೂಲದ ಹನುಮಂತ ನಾಗದೇವಹಳ್ಳಿಯಲ್ಲಿ ನೆಲೆಸಿದ್ದ. ಗಾಂಜಾ ವ್ಯಸನಿಗಳಾಗಿದ್ದ ಈ ಮೂವರು ಹಣಕ್ಕಾಗಿ ವ್ಯಕ್ತಿಗಳನ್ನು…
ಹುಬ್ಬಳ್ಳಿ: ಇಲ್ಲಿಯ ಎಂಎಜಿ ಸೊಸೈಟಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜ. 12ರಂದು ಸಂಜೆ 5ಕ್ಕೆ ಶಾಲೆಯ ಲಯನ್ ನಿರ್ಮಲಕುಮಾರ ಜವಳಿ ಮೆಮೋರಿಯಲ್ ಪೆವೆಲಿಯನ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಸೊಸೈಟಿ ಚೇರ್ಮನ್ ಜಯಪ್ರಕಾಶ ಟೆಂಗಿನಕಾಯಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೆಎಲ್‌ಇ ಸಂಸ್ಥೆಯ ಚೇರ್ಮನ್ ಡಾ. ಪ್ರಭಾಕರ ಕೋರೆ ಅವರು ಲಯನ್ ಸಿದ್ದಣ್ಣ ಯಾವಗಲ್ ಮೆಮೋರಿಯಲ್ ಗೋಲ್ಡನ್ ಜುಬ್ಲಿ ಅನೆಕ್ಸ್ ಉದ್ಘಾಟಿಸುವರು. ಲಯನ್ ನಿರ್ಮಲಕುಮಾರ ಜವಳಿ ಮೆಮೋರಿಯಲ್ ಪೆವೆಲಿಯನ್ ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಬೆಂಗಳೂರಿನ ಜೆಎನ್‌ಸಿಎಎಸ್‌ಆರ್ ಪ್ರಾಧ್ಯಾಪಕ ಡಾ.ಎಸ್.ಎಂ. ಶಿವಪ್ರಸಾದ ಉಪನ್ಯಾಸ ನೀಡುವರು. ಇದೇ ವೇಳೆ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು. ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಚೇರ್ಮನ್ ಗಿರೀಶ ಮಾನೆ ಮಾತನಾಡಿ, ಜ. 13ರಂದು ಸಂಜೆ 4ಕ್ಕೆ ಜಾಗತಿಕ ವಾರ್ಷಿಕ ಸಭೆ ನಡೆಯಲಿದೆ. ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳೆ ಎಚ್ಚರ, ಎಚ್ಚರ. ನಗರದಲ್ಲಿ ಯಮನ ರೂಪದಲ್ಲಿ ಕಾದು ಕುಳಿತಿರುವ ವಿದ್ಯುತ್ ತಂತಿಗಳು ಅನೇಕ ಕಡೆ ಪತ್ತೆಯಾಗಿವೆ. ಕೊಂಚ ಯಾಮಾರಿದ್ರೂ ಯಮಲೋಕ ಫಿಕ್ಸ್. ಇಂತಹದೊಂದು ಆಘಾತಕಾರಿ ಅಂಶವನ್ನ ಖುದ್ದು ಬೆಸ್ಕಾಂ ಅಧಿಕಾರಿಗಳ ಅಂಕಿ ಅಂಶವೇ ಬಯಲು ಮಾಡಿದೆ. ಕಾಡುಗೋಡಿ ಪೊಲೀಸ್ ಠಾಣಾ ಲಿಮಿಟ್ಸ್ ನಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಘೋರ ದುರಂತದ ಬಗ್ಗೆ ನಿಮ್ಗೆಲ್ಲಾ ಗೊತ್ತಿರ್ಬೋದು. ಅಂದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಯಿ & ಮಗು ಬಲಿಯಾಗಿದ್ರು. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಕೂಡ ಸರ್ವೇ ಮಾಡಿ, ಇಂತಹ ಡೇಂಜರಸ್ ಜಾಗಗಳನ್ನ ಪತ್ತೆ ಮಾಡಿ, ಅವುಗಳನ್ನ ಸರಿಪಡಿಸುವ ಕೆಲಸ ಮಾಡ್ತಿದೆ. ಆದರೆ ವಿಚಾರ ಏನಂದ್ರೆ ಇನ್ನೂ ಕೂಡ ಬೆಸ್ಕಾಂ ವ್ಯಾಪ್ತಿಯಲ್ಲಿ 30,243 ಡೇಂಜರ್ ಜಾಗ ಇದ್ದು, ಅವುಗಳನ್ನ ಸರಿಪಡಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನಲ್ಲೂ ಇಂತಹ ಡೇಂಜರಸ್ ಜಾಗಗಳ ಪಟ್ಟಿ ಕೂಡ ದೊಡ್ಡದಿದೆ. ಜನವರಿ ಕೊನೆಯೊಳಗೆ ಎಲ್ಲಾ ಡೇಂಜರಸ್ ಸ್ಪಾಟ್ ಗಳನ್ನು ಕ್ಲಿಯರ್ ಮಾಡ್ತಿವಿ ಎಂದು ಬೆಸ್ಕಾಂ…
ಹುಬ್ಬಳ್ಳಿ: ರೆಸ್ಟೋರೆಂಟ್ ರಿವೀವ್ ಮಾಡಿದರೆ ಹಣ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಧಾರವಾಡ ಸತ್ತೂರಿನ ವೈದ್ಯೆಯೊಬ್ಬರಿಂದ 5.91 ಲಕ್ಷ ರೂ. ವರ್ಗಾಯಿಸಿಕೊಡು ವಂಚಿಸಿದ್ದಾರೆ. ವೈದ್ಯೆಯ ವಾಟ್ಸ್ ಆ್ಯಪ್ ನಂಬರ್‌ಗೆ ಸಂಪರ್ಕಿಸಿದ ವಂಚಕರು, ಮೊದಲು ಸ್ವಲ್ಪ ಹಣ ಕೊಟ್ಟು ನಂಬಿಸಿದ್ದಾರೆ. ನಂತರ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ ಪ್ರಿಪೇಯ್ಡಿ ಟಾಸ್ಕ್ ಕೊಡುವುದಾಗಿ ನಂಬಿಸಿ ಕಮಿಷನ್ ಕೊಡುವ ಭರವಸೆ ನೀಡಿದ್ದಾರೆ. ವೈದ್ಯೆಯ ವಿವಿಧ ಬ್ಯಾಂಕ್ ಖಾತೆಗಳಿಂದ 5,91,200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ:- ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ಬಳಿ NH-52 ರಲ್ಲಿ ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನು ಸ್ಥಳದಲ್ಲಿಯೆ ಸಾವಿಗೀಡಾಗಿದ್ದು ಬಸ್ ಬೆಂಕಿ ಹೊತ್ತಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಅಪಘಾತಕ್ಕಿಡಾದ KA-28 F-2469 ನಂಬರಿನ ಈ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ದೌಡಾಯಿಸಿ ಬಸ್ಸಿಗೆ ಹೊತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ಸ್ಥಳಕ್ಕೆ ಸಿಂದಗಿ ಪೋಲಿಸರು ಬೇಟಿ ನೀಡುವ ಮೂಲಕ ಸ್ಥಳ ಪರಿಶೀಲನೆಯನ್ನು ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೀದರ್:- ಪ್ರಿಯಕರನ ಜೊತೆ ಮದುವೆ ಮಾಡಿಕೊಂಡಿದ್ದಕ್ಕೆ, ಕುಟುಂಬಸ್ಥರಿಂದ ಜೀವಭಯವಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿ ರಕ್ಷಣೆ ಕೋರಿದ್ದ ನವಜೋಡಿಗಳ ಪ್ರಕರಣ ತಿರುವು ಪಡೆದುಕೊಂಡಿದ್ದು, ಯುವತಿಗೆ ಈಗಾಗಲೇ ಮೊದಲ ಮದುವೆ ಆಗಿರುವ ವಿಚಾರ ಬಹಿರಂಗವಾಗಿದೆ. ಆದ್ರೆ ಮದುವೆ ಒತ್ತಾಯವಾಗಿ ಮಾಡಲಾಗದೆ, ನನಗೆ ಮದುವೆ ಆಗಿದ್ದೆ ಗೊತ್ತಿಲ್ಲಾ ಎಂದು ಯುವತಿ ಹೇಳುತ್ತಿದ್ದಾಳೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ…… ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದ ಲೊಕೇಶ್ ಹಾಗೂ ಭಾಲ್ಕಿ ತಾಲುಕಿನ ಕುರ್ನಳ್ಳಿ ನಿರ್ಮಲಾ ಪರಸ್ಪರ ಪ್ರೀತಿಸಿದ್ದಾರೆ. ಪ್ರೀತಿ ಬಳಿಕ ಅಕ್ಟೋಬರ್ 23 ರಂದು ಮದುವೆ ಆಗಿ, ಡಿಸೆಂಬರ್ 18 ರಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಬಳಿಕ ಹೈದರಾಬಾದ್‌ನಲ್ಲಿದ್ದು, ಜೀವನ ನಡೆಸಲು ಮುಂದಾಗಿದ್ದಾರೆ. ಆದ್ರೆ ಯುವತಿ ಕುಟುಂಬಸ್ಥರು ಜಿಲ್ಲೆಯ ಜನವಾಡ ಪೊಲೀಸ್ ಠಾಣೆಯಲ್ಲಿ ನೀಡಿದ ನಾಪತ್ತೆ ಪ್ರಕರಣ ಸಂಬಂಧ ಯುವತಿಯನ್ನ ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಣೆ…
ಹಾವೇರಿ:- ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಅರೇಮಲ್ಲಾಪುರ ಗ್ರಾಮದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿಸಿರುವಂತಹ ಘಟನೆ ಜರುಗಿದೆ. ಮಂಜುನಾಥನಿಗೆ ಎಂಬ ಆರೋಪಿಗೆ ಗ್ರಾಮದ ಮಹಿಳೆಯರು ಮತ್ತು ಪುರಷುರು ಗೂಸಾ ನೀಡಿದ್ದಾರೆ. ಪೋಕ್ಸೊ ಕಾಯ್ದೆ ಅಡಿ ಆರೋಪಿಯನ್ನ ಬಂಧಿಸಲು ಆಗ್ರಹಿಸಲಾಗಿದ್ದು, ಸ್ಥಳಕ್ಕೆ ರಾಣೇಬೆನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ:- ಕೋಟ್ಯಾಧೀಶ ವ್ಯಕ್ತಿಯೊಬ್ಬ ಜಸ್ಟ್ ಜೀಬ್ರಾ ಲೈನ್ ಕ್ರಾಸ್ ಮಾಡಿದ್ದಕ್ಕೆ ಕಾರಿನಿಂದ ಇಳಿದುಬಂದು ಟ್ರಾಫಿಕ್ ಪೊಲೀಸ್ ಬಳಿ ಕ್ಷಮೆಯಾಗಿಸಿದ್ದಾರೆ. ಕೋಟ್ಯಾಧೀಶ್ವರನ ಈ ಸೌಮ್ಯತೆ ಟ್ರಾಫಿಕ್ ಪೊಲೀಸ್ ಮನಸೋತು ಬಿಟ್ಟು ಕಳುಹಿಸಿದ್ದಾರೆ. ಈ ಒಂದು ಅಪರೂಪದ ಘಟನೆ ರಾಮನಗರದಲ್ಲಿ ನಡೆದಿದೆ. ವೇಗವಾಗಿ ಹೋಗುತ್ತಿದ್ದಾಗ ದಿಢೀರ್ ಸಿಗ್ನಲ್ ಬಿದ್ದಿದೆ. ಕೂಡಲೇ ಫೇರಾರಿ ಕಾರು ಚಾಲನ ಬ್ರೇಕ್ ಹಾಕಿದ್ದಾನೆ. ಆದರೂ ಸಹ ಸಹ ಕಾರು ಜೀಬ್ರಾ ಲೈನ್ ಕ್ರಾಸ್ ಆಗಿದೆ. ಇದರಿಂದ ಎಚ್ಚೆತ್ತ ಚಾಲಕ, ಕಾರಿನಿಂದ ಇಳಿದು ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸ್ ಬಳಿ ಹೋಗಿ ಕ್ಷಮೆ ಕೋರಿದ್ದಾರೆ. ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಟ್ರಾಫಿಕ್ ಪೊಲೀಸ್, ಕಾರಿಗೆ ಯಾವುದೇ ದಂಡ ಹಾಕದೇ ಬಿಟ್ಟು ಕಳುಹಿಸಿದ್ದಾರೆ. ವೇಗದಲ್ಲಿದ್ದ ಕಾರನ್ನು ಚಾಲಕ ಕಂಟ್ರೋಲ್ ಮಾಡಿದ್ದಾರೆ. ಆದರೂ ಸಹ ಸಿಗ್ನಲ್ ದಿಢೀರ್ ಬಿದ್ದಿದ್ದರಿಂದ ಕಾರು ಜೀಬ್ರಾ ಲೈನ್ ಕ್ರಾಸ್ ಆಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬರುವ ಮುಂಚೆಯೇ ಕಾರು ಮಾಲೀಕ ಸ್ವತಃ ತಾವೇ ಕಾರನಿಂದ ಕೆಳಗಿಳಿದು ಹೋಗಿ ಕ್ಷಮೆಯಾಚಿಸಿದ್ದಾರೆ. ಒಮ್ಮೆಲೆ ಸಿಗ್ನಲ್…
ಬೆಂಗಳೂರು:- ಸಿಎಂ ಸ್ಥಾನ ಉಳಿಸಿಕೊಳ್ಳುವಲ್ಲೇ ಸಿದ್ದರಾಮಯ್ಯ ಮಗ್ನರಾಗಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರೈತರಿಗೆ ಬರ ಪರಿಹಾರ ನೀಡಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಹಣ ಬಿಡುಗಡೆ ಆಗಿಲ್ಲ. ಬಂಡವಾಳ ಹೂಡಿಕೆಗೆ ಯಾರೂ ಬರುತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳುವ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ ಎಂದರು. ಈ ಸರ್ಕಾರ ಬಂದ ಕೂಡಲೇ ಬಂಡವಾಳ ಹೂಡಿಕೆದಾರರು ಹೊರಗೆ ಹೋಗುವಂತ ವಾತಾವರಣ ಸೃಷ್ಟಿ ಮಾಡಿದ್ದಾರೆ. ನಮ್ಮ ಕಾಲದಲ್ಲಿ ಹೂಡಿಕೆ ಮಾಡಲು ಬಂದವರು ವಾಪಸ್ ಹೋಗುತ್ತಿದ್ದಾರೆ. ಬಂಡವಾಳ ಹೂಡಿಕೆ ಆಕರ್ಷಣೆ ಆಗುತ್ತಿಲ್ಲ. FDI ನಲ್ಲಿ ಶೇ. 30% ಕಡಿತ ಆಗಿದೆ. ಸಿಎಂ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಅಲ್ಲದೇ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ರಚಿಸಿರುವ ಸಮಿತಿಗೆ ಕ್ಯಾಬಿನೆಟ್ ದರ್ಜೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಸಿಎಂ ಸಲಹೆಗಾರರನ್ನು ತೆಗೆದುಕೊಳ್ಳಬೇಕು ನಿಜ. ಅದು ಸದಸ್ಯರ ಶೇ 15% ಮೀರದಂತೆ ಕ್ಯಾಬಿನೆಟ್ ದರ್ಜೆ ಕೊಡಬೇಕು. ಅದಕ್ಕಿಂತ ಹೆಚ್ಚು ಕ್ಯಾಬಿನೆಟ್ ದರ್ಜೆ ಕೊಡುವಂತಿಲ್ಲ. ಹಿಂದೆ ಸಿಎಂ…