ಬೆಂಗಳೂರು: ಜನವರಿ 23 ರಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಜಯಂತಿಯ ಜೊತೆ ಜೊತೆಗೆ ಪರಾಕ್ರಮ ದಿನವನ್ನಾಗಿ ಆಚರಿಸಲಾಗುತ್ತಿದೆ ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ವಿಧಾನಸೌಧ ಆವರಣದಲ್ಲಿ ಇರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಸಿಎಂ ಮಾರ್ಲಾಪಣೆ ಮಾಡಿದರು. “ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ” ಎನ್ನುವ ನೇತಾಜಿಯವರ ಈ ಹೇಳಿಕೆಯೂ ಯುವಕರ ಮೈಯ ರಕ್ತವು ಕುದಿಯುವಂತೆ ಮಾಡುತ್ತದೆ. ನೇತಾಜಿಯವರ ಈ ಹೇಳಿಕೆಯೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಯುವಕರು ಭಾಗಿಯಾಗಲು ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವತ್ತಿಗೂ ಕೂಡ ಯುವಕರು ಸುಭಾಸ್ ಚಂದ್ರ ಬೋಸ್ ಅವರು ಮಾದರಿಯಗಿ ತೆಗೆದುಕೊಳ್ಳುತ್ತಾರೆ. ಈ ಎಲ್ಲವನ್ನು ಗಮನಿಸಿದಾಗ ನೇತಾಜಿಯವರ ಸ್ವಾತಂತ್ಯ ಹೋರಾಟದ ಹಾದಿಯೂ ಯುವಕರಿಗೆ ಎಷ್ಟು ಪ್ರಭಾವ ಬೀರಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
Author: AIN Author
ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರದಲ್ಲಿ ನನ್ನ ಪರಿಗಣನೆ ತೆಗದುಕೊಂಡಿಲ್ಲ ಎಂಬ ಪರಮೇಶ್ವರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಲು ಸಾಧ್ಯವಿಲ್ಲ MLA ಗಳದ್ದು ಎಲ್ಲಾ ಕ್ಲೀಯರ್ ಆಗಿದೆ ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ಆಗ್ತಿದೆ ನಾವು ಡಿಕೆಶಿ ಚರ್ಚೆ ನಡೆಸಿದ್ದೇವೆ ಇದರ ಬಗ್ಗೆ ನಾನು ಪರಮೇಶ್ವರ್ ಜೊತೆ ಮಾತನಾಡಿದ್ದೇನೆ ಹಾಗೆ ವೇಣುಗೋಪಾಲ್ ಸಹಿ ಆಗಬೇಕಿದೆ ಎಂದು ಹೇಳಿದ್ದಾರೆ. ಬಾಲರಾಮನ ದರ್ಶನಕ್ಕೆ ಆಯೋಧ್ಯೆಗೆ ಜನರನ್ನ ಕಳುಹಿಸಸಲು ಬಿಜೆಪಿ ಪ್ಲ್ಯಾನ್ ವಿಚಾರ ಬಗ್ಗೆಯೂ ಮಾತನಾಡಿ, ರಾಮಮಂದಿರದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ ನಾವು ವಿರೋಧ ಮಾಡ್ತಿರುವುದು ಬಿಜೆಪಿ ರಾಜಕೀಯವನ್ನ ನಾವು ಬಿಜೆಪಿ ರಾಮನನ್ನ ವಿರೋಧ ಮಾಡ್ತಿದ್ದೇವೆ ಗಾಂಧೀಜಿ ರಾಮನನ್ನ ಆರಾಧಿಸುತ್ತೀವಿ ದಶರಥ ಮಗ ರಾಮನನ್ನ ಗೌರವಿಸ್ತೀವಿ ನಮ್ಮ ಕರ್ನಾಟಕದಲ್ಲಿ ರಾಮಮಂದಿರಗಳು ಇಲ್ವಾ ಎಲ್ಲೆಲ್ಲೂ ರಾಮ ಮಂದಿರಗಳು ಇವೆ ಹಳ್ಳಿಗಳಲ್ಲೂ ರಾಮ, ಸೀತೆ, ಲಕ್ಷ್ಮಣ ಇಲ್ವಾ ಎಂದು ಪ್ರಶ್ನೆ ಮಾಡಿದರು. ರಾಹುಲ್…
ದೊಡ್ಡಬಳ್ಳಾಪುರ: AIN ಕನ್ನಡ ವರದಿ ಬೆನ್ನಲ್ಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ.ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿತ್ತು. 2022 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಡಿಎಂಎಫ್ ನಿಂದ 10 ಲಕ್ಷ ಮತ್ತು ನರೇಗಾ ಯೋಜಯಡಿ 5 ಲಕ್ಷ ರೂ ನೂತನ ಅಂಗಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಗನವಾಡಿ ಕಟ್ಟಡ ನೆನೆಗುದಿಗೆ ಬಿದ್ದಿತ್ತು.. ನವೆಂಬರ್ 9 ರಂದು AIN ಕನ್ನಡ ಈ ಕುರಿತು ಸಂಪೂರ್ಣ ವರದಿ ಮಾಡಲಾಗಿತ್ತು.ಕೂಡಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಹಳೆಯ ಕಟ್ಟಡವನ್ನು ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. AIN ಕನ್ನಡಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ..! ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿತ್ತು.ಈ ಕುರಿತು ಗ್ರಾಮಸ್ಥ ಹರೀಶ್ ಕುಮಾರ್ ಮಾತನಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಹಲವು ಬಾರಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ಸ್ಫಂದಿಸಲಿಲ್ಲ ಈ ಕುರಿತು AIN…
ಬೆಂಗಳೂರು: ನಿನ್ನೆಯಷ್ಟೇ ರಾಮಮಂದಿರದ ರಾಮಲಲ್ಲಾನ ಪ್ರಾಣ ಪ್ರತಿಷ್ಟೆಯಾಗಿದೆ ಎಲ್ಲರು ಸಂಭ್ರಮದಲ್ಲಿ ತೇಲಾಡುತ್ತಿದ್ದರೆ ಈ ಹೊತ್ತಿನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಹೊಸ ವಿವಾದವನ್ನು ಸೃಷ್ಟಿಮಾಡಿದ್ದಾರೆ ನಗರದಲ್ಲಿ ಮಾತನಾಡಿದ ಅವರು, ನಮಗೆ ಮೋದಿ ರಾಮಬೇಡ, ದಶರಥ ರಾಮಬೇಕು ಅಂತ ಗೃಹ ಸಚಿವ ಪರಮೇಶ್ವರ್ ಮತ್ತೊಮ್ಮೆ ವಿವಾದ ಸೃಷ್ಟಿಸಿ ಮೈ ಮೇಲೆ ಎಳೆದುಕೊಳ್ಳಲಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ (Siddaramaiah) ಜೈ ಶ್ರೀರಾಮ್ ಅಂತ ಘೋಷಣೆ ಕೂಗಿದ್ದಕ್ಕೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಜೈ ಶ್ರೀರಾಮ್ ಅಂದರೆ ತಪ್ಪೇನು? ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧಿ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಅಂತ ಪ್ರಶ್ನೆ ಮಾಡಿದ್ರು. ನಾವೆಲ್ಲ ಶ್ರೀರಾಮನ ಭಕ್ತರೇ, ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳ್ತೀವಿ. ಶ್ರೀರಾಮ ಇವರಾರೋ 4 ಜನಕ್ಕೆ ಆಗೋದಲ್ಲ. ನಮಗೆ ದಶರಥ ರಾಮ ಬೇಕು. ನಮಗೆ ಮೋದಿ ರಾಮ ಬೇಕಾಗಿಲ್ಲ. ನಮಗೆ…
ಟೊರಾಂಟೊ: ದುಬೈಗೆ ಹೊರಟಿದ್ದ ಏರ್ ಕೆನಡಾ ವಿಮಾನಯಾನ ಸಂಸ್ಥೆಯ ವಿಮಾನವು ಟೇಕ್ ಆಫ್ ಆಗುವ ಮುಂಚೆ, ಪ್ರಯಾಣಿಕನೊಬ್ಬ ಹೊರಗೆ ಜಿಗಿದ ಘಟನೆ ಘಟನೆ ಕೆನಡಾದ ಟೊರಾಂಟೊ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆತ ಸುಮಾರು 20 ಅಡಿ ಎತ್ತರದಿಂದ ಜಿಗಿದು ಟಾರ್ಮಾಕ್ ಮೇಲೆ ಬಿದ್ದ ವ್ಯಕ್ತಿಗೆ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಏರಿದ್ದ ಈ ವ್ಯಕ್ತಿಯ ವರ್ತನೆ ಸಹಜವಾಗಿತ್ತು. ಆದರೆ ತನ್ನ ಸೀಟ್‌ನಲ್ಲಿ ಕೂರುವ ಬದಲು ಆತ ದಿಢೀರನೆ ಕ್ಯಾಬಿನ್ ಬಾಗಿಲು ತೆರೆದಿದ್ದ ಎಂದು ವರದಿಯಾಗಿದೆ. ಘಟನೆ ಬಳಿಕ ಪೀಲ್ ಪ್ರಾದೇಶಿಕ ಪೊಲೀಸ್ ಮತ್ತು ಇತರೆ ತುರ್ತು ಸೇವಾ ಸಂಸ್ಥೆಗಳಿಗೆ ಕರೆ ಮಾಡಲಾಯಿತು. ವಿಮಾನದ ಸಿಬ್ಬಂದಿ ಪ್ರಯಾಣಿಕನ ಸಹಾಯಕ್ಕೆ ಧಾವಿಸಿ, https://ainlivenews.com/psi-re-examination-staff-shocked-candidate-wearing-full-shirt/ ಪರಿಸ್ಥಿತಿಯನ್ನು ಸುಧಾರಿಸುವ ಕಾರ್ಯದಲ್ಲಿ ತೊಡಗಬೇಕಾದ ಕಾರಣದಿಂದ ಬೋಯಿಂಗ್ 747 ವಿಮಾನದ ಹಾರಾಟ ಸುಮಾರು ಆರು ಗಂಟೆ ತಡವಾಯಿತು ಎಂದು ಏರ್ ಕೆನಡಾ ವೆಬ್‌ಸೈಟ್ ತಿಳಿಸಿದೆ. “ಎಲ್ಲಾ ಅನುಮೋದಿತ ಬೋರ್ಡಿಂಗ್ ಮತ್ತು ಕ್ಯಾಬಿನ್ ಕಾರ್ಯ…
ಬೆಂಗಳೂರು: ಪಿಎಸ್‍ಐ ಮರುಪರೀಕ್ಷೆ ಪತ್ರಿಕೆ ಲೀಕ್ (PSI exam Scam) ಮಾಡಿದ ಆರೋಪ ಎದುರಿಸುತ್ತಿರುವ ಆಡಿಯೋ ಸೂತ್ರಧಾರ ಸಬ್ ಇನ್ಸ್‌ಪೆಕ್ಟರ್ ಲಿಂಗಯ್ಯ ವಿಚಾರಣೆ ನಡೆಯುತ್ತಿದ್ದು ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು ಎಸ್ ಐ ಲಿಂಗಯ್ಯನನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು ಈ ವೇಳೆ ತನ್ನದೇನು ತಪ್ಪೇ ಇಲ್ಲ ಅಂತಾ ಸಮರ್ಥನೆ ಮಾಡಿಕೊಂಡಿರುವ ಲಿಂಗಯ್ಯ ನನ್ನ ಮೇಲೆ ಮಾಡಿರೋದೆಲ್ಲವೂ ಆರೋಪ ನಾನೇನು ಮಾಡಿಲ್ಲ ಅಂತಾ ಸಿಸಿಬಿ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾನೆ. ಹಾಗೆ ಇದರಲ್ಲಿ ಭಾಗಿಯಾದ ಇನ್ನುಳಿದ ಇಬ್ಬರಿಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆದಿರೋ ಸಿಸಿಬಿ ಪವನ್ ಮತ್ತು ರಜತ್ ಎಂಬುವರಿಗೆ ನೊಟೀಸ್ ಕೊಟ್ಟಿದ್ದು ಅವರನ್ನ ವಿಚಾರಣೆ ನಡೆಸಿ ಕೇಸ್ ಸಂಬಂಧ ಮಾಹಿತಿ ಕಲೆ ಹಾಕಲಿರೋ ಸಿಸಿಬಿ ಟೀಂ ಜನವರಿ 23ಕ್ಕೆ ಪಿಎಸ್‍ಐ ಪರೀಕ್ಷೆ ನಡೆದಿದ್ದು, ಲಿಂಗಯ್ಯ ಎರಡೂ ಪರೀಕ್ಷೆಗಳ ಬಗ್ಗೆ ಚಾಟಿಂಗ್ ನಡೆಸಿರುವ ಆರೋಪವಿದೆ. ಹೀಗಾಗಿ ಅಜ್ಞಾತ ಸ್ಥಳದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಮಂಡ್ಯ: ರೀಲ್ಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದ ಶಿಕ್ಷಕಿ ಇದ್ದಕ್ಕಿದ್ದಂತೆ ಶವವಾಗಿ ಪತ್ತೆಯಾಗಿದ್ದು, ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕಿ ದೀಪಿಕಾ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಅಲ್ಲದೇ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಯಾರೋ ದುಷ್ಕರ್ಮಿಗಳು ಕೊಲೆಗೈದು ಮೃತದೇಹ ಹೂತಿಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಏನಿದು ಘಟನೆ? ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಮಹಿಳೆಯೊಬ್ಬರು ಮೂರೇ ದಿನಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಲುಕೋಟೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಗಿರುವ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜನವರಿ 20 ರಂದು ದೀಪಿಕಾ ಶಾಲೆಗೆ ಹೋಗಿ ಬರುತ್ತೇನೆ ಎಂದು ಕೆಲಸಕ್ಕೆ ತೆರಳಿದ್ದರು. ಸಂಜೆಯಾದರೂ ಮಗಳು ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ತಂದೆ ವೆಂಕಟೇಷ್ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. https://ainlivenews.com/good-news-for-those-going-to-ayodhya/ ಈ ಸಂಬಂಧ…
ಕಲಬುರಗಿ: ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರೋದನ್ನ ಖಂಡಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಕೋಟನೂರು ಬಡಾವಣೆಯಲ್ಲಿ ಘಟನೆ ನಡೆದಿದ್ದು ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಟೈರಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ನ್ಯಾಯ ಕೊಡಿಸಬೇಕು ಅಂತ ಒತ್ತಾಯಿಸಿದ್ರು..
ಬಾಗಲಕೋಟೆ: ಶ್ರೀ ರಾಮ ಜನ್ಮಭೂಮಿ ಅಯ್ಯೋದ್ಯಯ ಶ್ರೀರಾಮ ಮಂದಿರದಲ್ಲಿ ಪ್ರಭು ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಥಾಪನೆಯ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ನಗರದ ಸರ್ವ ಹಿಂದೂ ಬಾಂಧವರ ವತಿಯಿಂದ ಶ್ರೀ ಗಣಪತಿ ದೇವಸ್ಥಾನ ದಲ್ಲಿ ರುದ್ರಾಭಿಷೇಕ ಪವಮಾನ ಮತ್ತು ರುದ್ರ ಹೊಮ ಹವಣಗಳು ನಿರ್ವಿಘ್ನವಾಗಿ ನೆರವೇರಿದವು .. ಅರ್ಚಕರು ಬಸಪ್ಪ ಘಂಟಿ ವಿರಬಸಪ್ಪ ಘಟ್ಟೆಪನವರ ಮಹೇಶ್ ಕಮತಗಿ ಪ್ರಕಾಶ ಕೊರ್ತಿ ಕಿರಣ್ ಸೂಗೂರು ಶ್ರೀಶೈಲ ಮುದ್ದಾಪುರ ರವಿ ಕೊರ್ತಿ ಗಜಾನನ ಮನಗುತ್ತಿ ಈರಣ್ಣ ಶಿರೋಳ ಗಣಪತಿ ದೇವಸ್ಥಾನ ಸಮಿತಿ ಸರ್ವ ಸದಸ್ಯರು ರಾಮಪೂರದ ಸಮಸ್ತ ಗುರು ಹಿರಿಯರು ಹಾಗು ತಾಯಂದಿರು ಸಕಲ ಸದ್ಭಕ್ತರು. ಪ್ರಕಾಶ ಕುಂಬಾರ ಬಾಗಲಕೋಟೆ
ಕಲಬುರಗಿ: ಕಲಬುರಗಿಯ ಫರ್ತಾಬಾದ್ ಠಾಣಾ ವ್ಯಾಪ್ತಿಯ ಹೊಲದಲ್ಲಿನ ನೀರಿನ ಹೊಂಡದಲ್ಲಿ ಕಾರೊಂದು ಬಿದ್ದಿದ್ದು ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ..ಸ್ಥಳಕ್ಕೆ ಸಂಚಾರಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.. ಪ್ರಾಥಮಿಕ ಮಾಹಿತಿ ಪ್ರಕಾರ ಸಾವಿಗೀಡಾಗಿದ್ದು ಅಮೃತ್ ಎಂದು ಗುರುತಿಸಲಾಗಿದೆ.. ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಅಮೃತ್ ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.