Author: AIN Author

ಶಿವಮೊಗ್ಗ: ಎಳ್ಳಮಾವಾಸ್ಯೆ ಜಾತ್ರೆಗೆ ಬಂದಿದ್ದ ವ್ಯಾಪಾರಿ ಪುತ್ರ ತುಂಗಾನದಿ ಯಲ್ಲಿ  ಬಿದ್ದು ಸಾವನ್ನಪ್ಪಿರುವ ಘಟನೆ ಬಗ್ಗೆ ತೀರ್ಥಹಳ್ಳಿ ಯಿಂದ ವರದಿಯಾಗಿದೆ.  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ  ಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿದೆ. ಹೀಗಾಗಿ ವಿವಿಧ ಕಡೆಗಳಿಂದ ವ್ಯಾಪಾರಸ್ಥರು ತೀರ್ಥಹಳ್ಳಿಯ ಬೀದಿಗಳಲ್ಲಿ ಟೆಂಟ್ ಬಳಸಿ ವ್ಯಾಪಾರ ನಡೆಸ್ತಿದ್ದಾರೆ.   ಈ ನಡುವೆ ನಿನ್ನೆ ಬುಧವಾರ ತುಂಗಾ ನದಿಯಲ್ಲಿ ಬಾಲಕನೊಬ್ಬ, https://ainlivenews.com/do-you-know-the-must-see-tourist-spots-in-lakshadweep/ ಸ್ನಾನಕ್ಕೆ ಹೋದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜಾತ್ರೆಯಲ್ಲಿ ಊದುವ ಪೀಪಿ ಮಾರಾಲು ಬಂದಿದ್ದ ಬಿಹಾರ ಮೂಲದ ವ್ಯಕ್ತಿಯ ಜೊತೆ ಆತನ ಮಗನು ಬಂದಿದ್ದ ಜಾತ್ರೆಯಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ ಈತ ನದಿಯಲ್ಲಿ ಸ್ನಾನ ಮಾಡುತ್ತಿದ್ದ, ತಂದೆಯು ಜೊತೆಗಿದ್ದರು. ಈ ಮಧ್ಯೆ ನೀರಿನಲ್ಲಿ ಆಯ ತಪ್ಪಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನ ಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಗ್ಯಾರಂಟಿ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡಿ, 16 ಕೋಟಿ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಸುಮಾರು 31 ಜನ ಸದಸ್ಯರು ಇರಲಿದ್ದು ಇವರೆಲ್ಲರೂ ಕಾರ್ಯಕರ್ತರು. 31 ಜಿಲ್ಲಾ ಮಟ್ಟದಲ್ಲಿ ಒಬ್ಬ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವಧನ ನೀಡುವ ವ್ಯವಸ್ಥೆ ಆಗಲಿದೆ. 50 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು. 21 ಸದಸ್ಯರು ಇರಲಿದ್ದು, 224 ಕ್ಷೇತ್ರಗಳಲ್ಲಿ ಅಧ್ಯಕ್ಷರು ಹಾಗೂ 11 ಸದಸ್ಯರು ಇರಲಿದ್ದಾರೆ. ಇವರಿಗೆ ಗೌರವ ಧನ ಹಾಗೂ ಸಿಟ್ಟಿಂಗ್ ಫೀಸ್ ಸಹ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧ…

Read More

ಬೆಂಗಳೂರು: ನೀವು ಬ್ರಾಂಡೆಡ್‌ ಟೀ ಪುಡಿಯನ್ನು ತಗೆದುಕೊಳ್ಳತ್ತಾರೆ ಎಚ್ಚರದಿಂದ ಇರಬೇಕು.ಸ್ವಲ್ಪ ಯಾಮಾರಿದ್ರೂ ನಿಮ್ಮ ಟೀ ಕಲಬೆರಕೆಯಾಗುತ್ತದೆ. ನಕಲಿ ಟೀ ಪೌಡರ್‌ ಕಲಬೆರಕೆ  ಹಾಗೂ ನಕಲಿ ಡಿಟರ್ಜೆಂಟ್‌ ಪೌಡರ್‌ ಮಿಕ್ಸಿಂಗ್‌ನ ಕರಾಳ ಜಾಲವೊಂದು ಪತ್ತೆಯಾಗಿದೆ. 3 ರೋಸಸ್‌, ತಾಜ್‌ಮಹಲ್‌ ಮುಂತಾದ ಬ್ರಾಂಡೆಡ್ ಟೀ ಕುಡಿದರೂ ಬಾಯಿಗೆ ರುಚಿ ಸಿಕ್ತಿಲ್ಲ, ರಿನ್, ಸರ್ಫ್‌ ಎಕ್ಸೆಲ್ ಪೌಡರ್ ಹಾಕಿದರೂ ಬಟ್ಟೆಯಲ್ಲಿನ ಕೊಳೆ ಹೋಗ್ತಿಲ್ಲ ಎಂದಾದರೆ ನೀವು ಬಳಸುತ್ತಿರುವ ಟೀ ಪುಡಿ‌ ಮತ್ತು ಡಿಟರ್ಜೆಂಟ್ ಅಸಲಿ ಅಲ್ಲದೆ ನಕಲಿ ಆಗಿರಬಹುದು. ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ದ್ರವ್ಯಗಳನ್ನು ಕಲಬೆರಕೆ ಮಾಡುವ ಜಾಲವೂ ಪೂಲೀಸ್ ಬಲಿಗೆ ಸಿಕ್ಕಿ ಬಂದಿದ್ದಾರೆ. ನಗರದ ಹೊರವಲಯದ ಮಾದನಾಯಕನಹಳ್ಳಿಯಲ್ಲಿ ಈ ಅಕ್ರಮದ ಅಡ್ಡೆ ನಡೆಯುತ್ತಿತ್ತು. ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆಯ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆಗ ಇಲ್ಲಿದ್ದ ನಕಲಿ 3 ರೋಜಸ್ ಟೀ ಪುಡಿ ಜಾಲ ಕಂಡು ಶಾಕ್​ ಆಗಿದ್ದಾರೆ. ನಕಲಿ ಟೀ ಪುಡಿ ಮತ್ತು ಸರ್ಫ್ ಎಕ್ಸೆಲ್ ಫ್ಯಾಕ್ಟರಿ ನಡೆಸುತ್ತಿದ್ದ…

Read More

ಮಂಡ್ಯ: 7 ತಿಂಗಳ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸುಳ್ಳು ಕೇಸ್ ನೀಡಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದಾಳೆ ಈ ಮಹಿಳೆ. ಹೌದು ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ವಡ್ಡರಕೊಪ್ಪಲು ಗ್ರಾಮದ ನಿವಾಸಿ ಸವಿತಾ ಎಂಬಾಕೆ ಮಂಡ್ಯ ಜಿಲ್ಲೆಯ ಮಳವಳ್ಳಿ KSRTC ಬಸ್ ನಿಲ್ದಾಣದಲ್ಲಿ ತನ್ನ ಏಳು ತಿಂಗಳ ಮಗು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದಳು. ಆದರೀಗ ಆ ದೂರುದಾರೆ ಪೊಲೀಸರಿಗೆ ಯಾಮಾರಿಸಿದ್ದಾಳೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸವಿತಾ ಚನ್ನಪಟ್ಟಣದಿಂದ ಮಳವಳ್ಳಿಗೆ ಬರುವಾಗ ಮಗು ಕಳುವಾಗಿದೆ ಎಂದು ದೂರು ನೀಡಿದ್ದಳು. ತುಂಬಿದ್ದ ಕೆಎಸ್ಆರ್​​ಟಿಸಿ ಬಸ್ ನಲ್ಲಿ ಬರುವಾಗ ಸೀಟ್ ಸಿಗದೆ  ಕುಳಿತಿದ್ದ ಅಪರಿಚಿತ ಮಹಿಳೆಯ ಕೈಗೆ ಮಗು ಕೊಟ್ಟಿದ್ದೆ. ತಾನು ಇಳಿಯುವ ಮುನ್ನ ಅಪರಿಚಿತೆ ಮಗು ಎತ್ತಿಕೊಂಡು ಹೋಗಿದ್ದಾಳೆ ಎಂದು ಸವಿತಾ ದೂರು ನೀಡಿದ್ದಳು. ಈ ಪ್ರಕರಣದ ಬಗ್ಗೆ ಮಳವಳ್ಳಿ ಟೌನ್ ಪೊಲೀಸರು ಗಂಭೀರವಾಗಿ ತನಿಖೆ ಶುರು ಮಾಡಿದ್ದರು. https://ainlivenews.com/do-you-know-the-must-see-tourist-spots-in-lakshadweep/ ಆದರೆ ತನಿಖೆ ವೇಳೆ ಮಹಿಳೆ…

Read More

ಗದಗದಲ್ಲಿ ನಡೆದ ನಾಲ್ಕು ಅಭಿಮಾನಿಗಳ ದುರ್ಮರಣ ನಟ ಯಶ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಮರೆಯಾಗಿಸಿದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಈ ಹಿಂದೆ ಮಾಡಿದ್ದ ಮನವಿಗಳು ವೈರಲ್ ಆಗುತ್ತಿವೆ. ‘ದಯವಿಟ್ಟು ನಾನು ಗಾಡಿ ಓಡಿಸುವಾಗ ಅಕ್ಕಪಕ್ಕ ಬರಬೇಡಿ. ನಿಮ್ಮ ಮೊಬೈಲ್ ಹಿಡಿದುಕೊಂಡು ಫೋಟೋಗಳಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ನಾವು 110, 120 ಕಿ.ಮೀ. ಸ್ಪೀಡ್​ನಲ್ಲಿ ಹೋಗ್ತಾ ಇರ್ತೀವಿ. ನೀವು ಚೇಸ್​ ಮಾಡಿಕೊಂಡು ಬಂದ್ರೆ ಏನಾಗುತ್ತದೆ ಹೇಳಿ. ಬದುಕಿದ್ರೆ ಮತ್ತೆ ನನ್ನ ನೋಡಬಹುದು’ ಎಂದು ಹೇಳಿದ್ದರು. ‘ನನ್ನ ನೋಡದೇ ಇದ್ರೂ ತೊಂದರೆ ಇಲ್ಲ. ಆದರೆ, ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರ್ತಾರೆ. ಆಗತಾನೇ ಮದುವೆ ಆಗಿರ್ತೀರಾ. ಆಗತಾನೇ ಹುಟ್ಟಿದ ಮಗು ಇರುತ್ತದೆ. ಅವರ ಗತಿ ಏನಾಗಬೇಡ? ಅವರು ಸಾಯೋತನಕ ನನ್ನನ್ನು ದೂಷಿಸುತ್ತಾರೆ. ದಯವಿಟ್ಟು ಗಾಡಿಗಳ ಪಕ್ಕ ಬರಬೇಡಿ. ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಿ. ಕೈ ಮುಗಿದು.. ಕಾಲಿಗೆ ಬಿಳ್ತೀವಿ, ಇನ್ಮೇಲೆ ಈತರ ಮಾಡ್ಕೋಬೇಡಿ’ ಎಂದು ದರ್ಶನ್ ಮನವಿ…

Read More

ಬೆಂಗಳೂರು: ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬಹಿಷ್ಕಾರ ವಿಚಾರಕ್ಕೆ  ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ಗರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ರಾಮಮಂದಿರದ ವಿಶೇಷ ಸಂದರ್ಭದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗ್ತಿದೆ ಕಾಂಗ್ರೆಸ್ ನವರಿಗೆ ಆಮಂತ್ರಣ ಇದ್ದರೂ, ಅವರು ಹೋಗದೇ ಇರೋದು ದುರ್ಧೈವದ ಸಂಗತಿ ಅವರ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿರೋದು ಅಕ್ಷಮ್ಯ ಅಪರಾಧ ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವ ಅವರು ಮುಂದೆ ಪಶ್ಚತಾಪ ಪಡುವ ಕಾಲ ಬರುತ್ತದೆ ಇವಾಗ್ಲಾದ್ರು ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಹೇಳಿದರು.

Read More

ಹೊಸನಗರ : ಕಂಟೇನರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಾವಿನಹೊಳೆ ಕ್ರಾಸ್ ನಲ್ಲಿ ನಡೆದಿದೆ. ಹೊಸನಗರ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ಮತ್ತು ಸಾಗರ ಕಡೆಯಿಂದ ಹೊಸನಗರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಬೈಕ್ ಸವಾರ ಗರ್ತಿಕೆರೆಯ ಕಮ್ಮಚ್ಚಿ ರಸ್ತೆ ನಿವಾಸಿ ಶಮಂತ್ (25) ಎಂದು ಗುರುತಿಸಲಾಗಿದೆ‌. https://ainlivenews.com/do-you-know-the-must-see-tourist-spots-in-lakshadweep/ ಕಳೆದ ಒಂದೂವರೆ ವರ್ಷದ ಹಿಂದೇ ತನ್ನ ಅಕ್ಕಳನ್ನು ಮಾರುತಿಪುರ ಗ್ರಾಪಂ ವ್ಯಾಪ್ತಿಯ ಚಿಕ್ಕಮಣತಿ ಗ್ರಾಮದ ಮುತ್ತೂರಿಗೆ ಮದುವೆ ಮಾಡಿ ಕೊಟ್ಟಿದ್ದು, ಆಕೆಯ ಮನೆಗೆ ಮಜ್ಜಿಗೆ ಮೆಣಸಿನಕಾಯಿ ಕೊಟ್ಟು ಹೋಗುವುದಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ‌ ಎಂದು ತಿಳಿದುಬಂದಿದೆ. ಹೊಸನಗರ ಪಿಎಸ್‌ಐ ಶಿವಾನಂದ ಕೆ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಮಕರ ಸಂಕ್ರಾಂತಿಯು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ ಹಾಗೂ ಈ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ಹೊಸ ಬೆಳೆಗಳನ್ನು ಪೂಜಿಸುವ ಮತ್ತು ಸಂತೋಷದಿಂದ ಹಂಚಿಕೊಳ್ಳುವುದರೊಂದಿಗೆ ಈ ಹಬ್ಬ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಲೋಹ್ರಿಯ ನಂತರ ಒಂದು ದಿನ ಮಕರ ಸಂಕ್ರಾಂತಿಯನ್ನು ಗುರುತಿಸಲಾಗುತ್ತದೆ.  ಈ ವರ್ಷ ಈ ಹಬ್ಬವು ಭಾನುವಾರ, 15 ರಂದು ಬರುತ್ತದೆ. ದೃಕ್ ಪಂಚಾಂಗದ ಪ್ರಕಾರ ಸಂಕ್ರಾಂತಿ ತಿಥಿಯು 8:57, ಜನವರಿ 14 ಕ್ಕೆ ಇರುತ್ತದೆ. ಹಾಗೇ ಮಕರ ಸಂಕ್ರಾಂತಿಯ ಪುಣ್ಯ ಕಾಲವು ಬೆಳಗ್ಗೆ 7:15 ರಿಂದ ಸಂಜೆ 5:46 ರವರೆಗೆ ಇರುತ್ತದೆ. ಹಾಗೂ ಮಕರ ಸಂಕ್ರಾಂತಿಯ ಮಹಾ ಪುಣ್ಯ ಕಾಲ ಬೆಳಗ್ಗೆ 7:15 ಕ್ಕೆ ಪ್ರಾರಂಭವಾಗಿ ರಾತ್ರಿ 9:00 ಕ್ಕೆ ಕೊನೆಗೊಳ್ಳುತ್ತದೆ. ಮಕರ ಸಂಕ್ರಾಂತಿಯನ್ನು ಹೇಗೆ ಆಚರಿಸಲಾಗುತ್ತದೆ? ಹಿಂದೂಗಳು ಈ ಅವಧಿಯನ್ನು ಮಂಗಳಕರವೆಂದು ಪರಿಗಣಿಸಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಹೆಚ್ಚಿನ ಪ್ರದೇಶಗಳಲ್ಲಿ ಸಂಕ್ರಾಂತಿಯ ಹಬ್ಬಗಳು ಎರಡರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಹಬ್ಬದ ಸಮಯದಲ್ಲಿ…

Read More

ಹೊಸ ವರ್ಷ ಬಂದೇ ಬಿಟ್ಟಿದೆ. ಎಲ್ಲಾರು ಹೊಸ ವರ್ಷದ ಸಂಭ್ರಮದಲ್ಲಿ ಇದ್ದಾರೆ. ಈ ರಾಶಿಯವರಿಗೆ ತಾವು ಯಾರೆಂದು ಸಾಬೀತು ಪಡಿಸಲು ಹೊಸ  ಸುವರ್ಣ ಅವಕಾಶ ದೊರೆಯುವವು, ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಜನವರಿ 18 ರಂದು, ಶುಕ್ರನು ಧನು ರಾಶಿಯಲ್ಲಿ ಚಲಿಸುತ್ತಾನೆ. ಧನು ರಾಶಿಯಲ್ಲಿ ಶುಕ್ರ ಮತ್ತು ಬುಧನ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗವು ರೂಪಗೊಳ್ಳಲಿದೆ. ಈ ಯೋಗದ ಪರಿಣಾಮದಿಂದಾಗಿ, ಹೊಸ ವರ್ಷದ ಜನವರಿ ತಿಂಗಳು ಕೆಲವು ರಾಶಿಗಳಿಗೆ ತುಂಬಾ ಶುಭವನ್ನುಂಟು ಮಾಡಲಿದೆ. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಸೋಮಶೇಖರ್B.Sc Mob.93534 88403 ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು ​ಮೇಷ ರಾಶಿ ಮೇಷ ರಾಶಿಯವರು ವೃತ್ತಿಜೀವನದಲ್ಲಿ ಹೊಸ ಸಾಧನೆಗಳು ಮಾಡುವಿವೆ. ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ಆದಾಯದ ಹೊಸ ಮೂಲಗಳು ನಿಮಗೆ ಪ್ರಯೋಜನವನ್ನು ನೀಡುತ್ತವೆ. ಕಠಿಣ ಪರಿಶ್ರಮಕ್ಕೆ ಫಲ…

Read More

ಭಾನುವಾರ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಗೆಲುವು ಸಾಧಿಸಿದ್ದಾರೆ. ಮಾಗುರಾ -1 ಕ್ಷೇತ್ರದಿಂದ ಅವಾಮಿ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕೀಬ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಶಕೀಬ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಜಿ ರೆಜೌಲ್ ಹುಸೇನ್ ವಿರುದ್ಧ 1,50,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹುಸೇನ್ 45,993 ಮತಗಳನ್ನು ಪಡೆದರು. ಚುನಾವಣಾ ಪ್ರಚಾರಕ್ಕಾಗಿ ಅವರು ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದರು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭರ್ಜರಿ ಗೆಲುವಿನ ಮೂಲಕ ಐದನೇ ಅವಧಿಗೆ ಆಯ್ಕೆಯಾಗಿದ್ದಾರೆ. ಭಾನುವಾರದ ಮತದಾನ ಮುಗಿದ ತಕ್ಷಣ ನಡೆದ ಮತ ಎಣಿಕೆ ಕಾರ್ಯದಲ್ಲಿ ಅವರ ಪಕ್ಷವು ಸಂಸತ್ತಿನ 300 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದಿದೆ. ಅವಾಮಿ ಲೀಗ್ ಅನ್ನು ವಿಜೇತರೆಂದು ಕರೆಯಬಹುದು ಎಂದು ಚುನಾವಣಾ ಆಯೋಗದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಈಗಾಗಲೇ ಲಭ್ಯವಿರುವ ಫಲಿತಾಂಶಗಳೊಂದಿಗೆ ನಾವು ಅವಾಮಿ ಲೀಗ್ ವಿಜೇತರನ್ನು ಕರೆಯಬಹುದು ಆದರೆ ಉಳಿದ ಕ್ಷೇತ್ರಗಳಲ್ಲಿ ಮತ ಎಣಿಕೆ…

Read More