ತುಂಡಾದ ತಂತಿ ಮತ್ತು ಕಂಬದ ಮೇಲೆ ತೊಳೆದು ಬಟ್ಟೆಯನ್ನು ಹಾಕುವುದು ಮತ್ತು ಪ್ರಾಣಿಗಳನ್ನು ಕಟ್ಟುವುದು ಬೇಡ ಯಾಕೆಂದರೆ ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದು. ಯಾವಾಗಲೂ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಐ ಎಸ್ ಐ ಅಧಿಕೃತ ಗುಣಮಟ್ಟದ ಸಾಮಗ್ರಿಗಳನ್ನ ಉಪಯೋಗಿಸಿ. ಅಪಾಯ ಸಂಭವಿಸುವ ಸಮಯದಲ್ಲಿ ಕೂಡಲೇ ನಿಗಮದ ಅಧಿಕಾರಿಗಳಿಗೆ 1912 ಕರೆ ಮಾಡಿ ತಿಳಿಸಿ. ತಂತಿ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಹಾಯ್ಸಬಾರದು ಸಾರ್ವಜನಿಕರು ವಿದ್ಯುತ್ ಕಂಬಗಳನ್ನು ಹತ್ತಬಾರದು ಭೂಸಂಪರ್ಕ ವ್ಯವಸ್ಥೆ ಇಲ್ಲದೆ ವಿದ್ಯುತ್ ಉಪಕರಣಗಳನ್ನು ಬಳಸಬಾರದು. ವಿದ್ಯುತ್ ಮಾರ್ಗಗಳ ಕಡೆಗೆ ಬಾಲ್ಕನಿಗಳನ್ನು ಕಿಟಕಿಗಳನ್ನು ನಿರ್ಮಿಸಬಾರದು ಎಂದು ರಬಕವಿ ನಗರದ ಹೆಸ್ಕಾಂ ಅಧಿಕಾರಿ ಬ್ರಹ್ಮಾನಂದ ಮಾಸ್ತಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಹೆಸ್ಕಾಂ ರಬಕವಿ ಉಪವಿಭಾಗ ಹೆಸ್ಕಾಂ ರಬಕವಿ ನಗರ ಶಾಖೆ ವತಿಯಿಂದ ವಿದ್ಯುತ್ ಸುರಕ್ಷತಾ ಜಾಥಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸಿತಲ ಸಂಕಾರ. ವಿನೋದ ಬಾವಲತ್ತಿ. ನಿತಿನ್ ರಾಯನ್ನವರ. ರಿಯಾಜ್ ನದಾಫ.…
Author: AIN Author
ಕಲಬುರಗಿ: ನೆರೆ ಹಾವಳಿ ಉಂಟಾದಾಗ ರಕ್ಷಣಾ ಕಾರ್ಯಾಚರಣೆ ಹೇಗೆ ಮಾಡಬೇಕು ಎನ್ನುವ ಕುರಿತ ಅಣಕು ಪ್ರದರ್ಶನ ಇವತ್ತು ಕಲಬುರಗಿಯಲ್ಲಿ ನಡೆಯಿತು..ಮಹಾಗಾಂವ್ ಸಮೀಪದ ಕುರಿಕೋಟಾ ಹಿನ್ನೀರಿನಲ್ಲಿ ಜಿಲ್ಲಾಡಳಿತ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.. ಬೆಣ್ಣೆತೊರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿ ನೆರೆಹಾವಳಿ ಎದುರಾದಾಗ ಕೈಗೊಳ್ಳಬೇಕಾದ, ಪರಿಹಾರ ಕಾರ್ಯಗಳ ಕುರಿತಂತೆ ಅಣಕು ಪ್ರದರ್ಶನ ವೇಳೆ ತಿಳಿಸಲಾಯಿತು.ಜನರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವುದು, ಅಂಬುಲೆನ್ಸ್, ವೈದ್ಯಕಿಯ ಚಿಕಿತ್ಸೆ, ಊಟೋಪಚಾರ ರಕ್ಷಣಾ ಕಾರ್ಯಗಳು ಹೀಗೆ ಎಲ್ಲ ವಿಚಾರವನ್ನ ತಿಳಿಸಲಾಯಿತು..ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸ್ನಾತಕ ಕೋರ್ಸ್‌ಗಳ ಪ್ರವೇಶ ಕೌನ್ಸ್‌ಲಿಂಗ್‌ನಲ್ಲಿ ತಮಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಸ್ನಾತಕ ಕೋರ್ಸ್‌ಗಳಿಗೆ ವಿಳಂಬವಾಗಿ ಕೌನ್ಸ್‌ಲಿಂಗ್ ಆರಂಭಿಸಿದೆ. ಇಲ್ಲಿ ಕೌನ್ಸ್‌ಲಿಂಗ್ ವಿಳಂಬವಾಗಿ ಆರಂಭವಾಗಿದ್ದರಿಂದ ಇದಕ್ಕಿಂತ ಮುಂಚೆಯೇ ಕೆಲ ವಿದ್ಯಾರ್ಥಿಗಳು ಬೇರೆ ಬೇರೆ ಕಡೆ ಪ್ರವೇಶ ಪಡೆದಿದ್ದರು. ಇಂದು ಕೃಷಿ ವಿವಿ ಕೌನ್ಸ್‌ಲಿಂಗ್ ಕರೆದಿದ್ದು, ಇಲ್ಲಿ ಕೌನ್ಸ್‌ಲಿಂಗ್‌ಗೆ ಬರುವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ತರಬೇಕು ಎಂದು ಈಗ ಹೇಳುತ್ತಿದೆ. ಆದರೆ, ಇದಕ್ಕೂ ಮುಂಚೆ ಬೇರೆ ಕಡೆ ಕೌನ್ಸ್‌ಲಿಂಗ್ ಹಾಜರಾಗಿ ಅಲ್ಲಿ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಗಳನ್ನು ಸಲ್ಲಿಸಿದ್ದಾರೆ. https://ainlivenews.com/cancellation-of-dog-meat-consumption-bill-passed-in-the-south-korean-parliament/ ಸದ್ಯ ಇಲ್ಲಿ ಕೌನ್ಸ್‌ಲಿಂಗ್‌ಗೆ ಹಾಜರಾಗಿರುವ ವಿದ್ಯಾರ್ಥಿಗಳು ದೃಢೀಕೃತ ಅಂಕಪಟ್ಟಿಯೊಂದಿಗೆ ಕೌನ್ಸ್‌ಲಿಂಗ್‌ಗೆ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆದರೆ, ಮೂಲ ಅಂಕಪಟ್ಟಿ ಇಲ್ಲದವರಿಗೆ ಕೌನ್ಸ್‌ಲಿಂಗ್‌ಗೆ ಹಾಜರಾಗಲು ಅವಕಾಶ ಸಿಕ್ಕಿಲ್ಲ. ಸಂಬಂಧಿತ ಕಾಲೇಜಿನಿಂದಲೂ ಪ್ರಮಾಣ ಪತ್ರ ತಂದರೂ ಕೃಷಿ ವಿವಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು…
ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರಿಗೆ ಆಹ್ವಾನ ನೀಡಲಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಅವರು ಇಂದು (ಬುಧವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ರಾಮಮಂದಿರ ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಇಂತಹ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಏಕೆಂದರೆ ಶ್ರೀರಾಮನ ದೇವಾಲಯವು ಕೇವಲ ಪೂಜೆಯ ದೇವಾಲಯವಲ್ಲ. ಇದು ಈ ದೇಶದ ಪಾವಿತ್ರ್ಯತೆ ಮತ್ತು ಈ ದೇಶದ ಘನತೆಯ ಸ್ಥಾಪನೆಯ ಸಂದರ್ಭವಾಗಿದೆ. ಇಡೀ ದೇಶದಲ್ಲಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಪರಿಗಣಿಸಲಾಗಿದೆ. ನಾವು ಸ್ವತಂತ್ರರಾದಾಗ, ಸ್ವಾತಂತ್ರ್ಯದಲ್ಲಿ ‘ಸ್ವಯಂ’ ನಮ್ಮ ಘನತೆಯಾಗಿದೆ. ಆ ‘ಸ್ವ’ದಿಂದಲೇ ನಮ್ಮ ಬದುಕು ಪವಿತ್ರ, https://ainlivenews.com/cancellation-of-dog-meat-consumption-bill-passed-in-the-south-korean-parliament/ ಆ ‘ಸ್ವ’ದಿಂದಲೇ ನಮಗೆ ಜಗತ್ತಿನಾದ್ಯಂತ ಪ್ರತಿಷ್ಠೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ. ಈ…
ತೆಸತಿಗಹಜ್ಗಹಿಹಿಹಿಉಹುಹು
ಬೆಂಗಳೂರು: ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ ಸುಚನಾ ಸೇಠ್‌ಳ ಮತ್ತಷ್ಟು ರೋಚಕ ವಿಚಾರಗಳು ಪೊಲೀಸರ ತನಿಖೆಯಲ್ಲಿ ರಿವೀಲ್ ಆಗಿದ್ದು, ತನಿಖೆ ವೇಳೆ ಮಗುವನ್ನು (Child) ಕೊಂದಿದ್ದರ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ ಎಂದು ಆರೋಪಿ ಸುಚನಾ ಸೇಠ್ (Suchana Seth) ಹೇಳಿಕೆ ನೀಡಿದ್ದಾಳೆ. ಮಗುವಿನ ಸಾವಿನ ಬಗ್ಗೆ ತನ್ನ ಪಾತ್ರದ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದು ಸುಚನಾ ಸೇಠ್ ಹೇಳಿದ್ದಾಳೆ. ಮಗುವನ್ನು ಕೊಲೆ ಮಾಡುವ ಕೆಲವು ದಿನಗಳ ಹಿಂದೆ ಆರೋಪಿ ಸುಚನಾ ಪತಿಗೆ ಕಾಲ್ ಮಾಡಿದ್ದಳು. ಅಲ್ಲದೇ ಜನವರಿ 6ರಂದು ಪತಿ ವೆಂಕಟರಮಣ್‌ಗೆ ಮೆಸೇಜ್ ಮಾಡಿ ಮರುದಿನ ಮಗುವನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಳು. ಹೀಗಾಗಿ ಪತಿ ಮಗುವನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪತ್ನಿ ಹಾಗೂ ಮಗು ಬೆಂಗಳೂರಿನಲ್ಲಿ ಇಲ್ಲವಾದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಬಳಿಕ ಅದೇ ದಿನ ಪತಿ ವೆಂಕಟರಮಣ್ ಇಂಡೋನೇಷ್ಯಾಗೆ ವಾಪಸ್ಸಾಗಿದ್ದಾರೆ. ಇನ್ನು 2022ರಲ್ಲಿ ಸುಚನಾ ಸೇಠ್ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಳು. ಅಲ್ಲದೇ…
ಬೆಂಗಳೂರು : ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಕಾರ್ಯಕರ್ತರು, ನಾಯಕರ ಬಳಿ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ರಾಜ್ಯಮಟ್ಟದ ನಾಯಕರು. ಕುಮಾರಸ್ವಾಮಿ ಅವರನ್ನು ಜನ ಪ್ರೀತಿ ಕೊಟ್ಟು ಬೆಳೆಸಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ನಿಲ್ಲಬೇಕು ಎಂಬ ಬೇಡಿಕೆ ಇದೆ.ಅದರಲ್ಲಿ ಮಂಡ್ಯ ಜಿಲ್ಲೆ ಕೂಡಾ ಒಂದು. ಸ್ಪರ್ಧೆ ಮಾಡುವ ವಿಚಾರವಾಗಿ ಪಕ್ಷದ ಕಾರ್ಯಕರ್ತರು, ನಾಯಕರು ಚರ್ಚೆ ಮಾಡುತ್ತೇವೆ. ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಧಾರ ತಿಳಿಸುತ್ತೇವೆ ಎಂದರು. ಮಂಡ್ಯದಲ್ಲಿ ಸುಮಲತಾ ಅವರೇ ಸ್ಪರ್ಧೆ ಮಾಡುತ್ತಾರೆ ಎಂಬ ಆಪ್ತರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಪ್ತರ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ಸುಮಲತಾ ಅವರು ಬಿಜೆಪಿ ಜೊತೆ ಇದ್ದೇವೆ ಎಂದು ಹೇಳಿದಾಗ ಪ್ರತಿಯೊಬ್ಬರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ನಾವು ಎನ್‌ಡಿಎ ಭಾಗವಾಗಿ…
ಬೆಂಗಳೂರು : ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದ ಆಹ್ವಾನವನ್ನು ಬಹಿಷ್ಕರಿಸಿರುವ ಕಾಂಗ್ರೆಸ್ ನಾಯಕರ ನಡೆಗೆ ಸಂಸದ ಡಿ.ವಿ. ಸದಾನಂದಗೌಡ ಕಿಡಿಕಾರಿದ್ದಾರೆ ಹಾಗೆ ಕಾಂಗ್ರೆಸ್ ನಾಯಕರು ಸಂಪೂರ್ಣ ಹುಚ್ಚರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಲೇವಡಿ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದ ಆಹ್ವಾನವನ್ನು ಬಹಿಷ್ಕರಿಸಿರುವ ಕಾಂಗ್ರೆಸ್ ನಾಯಕರ ನಡೆಗೆ ಅವರು ಕಿಡಿಕಾರಿದ್ದಾರೆ. ಹುಚ್ಚುತನಕ್ಕೂ ಒಂದು ಲಿಮಿಟ್ ಇದೆ. ಹುಚ್ಚುತನ ಮೀರಿ ಹೋಗುವಂತದ್ದು ಕಾಂಗ್ರೆಸ್ ನವರ ಪರಿಸ್ಥಿತಿ ಆಗಿದೆ. ಇವಾಗ್ಲಂತೂ ಕಾಂಗ್ರೆಸ್ ನವರು ಸಂಪೂರ್ಣ ಹುಚ್ಚರಾಗಿದ್ದಾರೆ. ರಾಮಮಂದಿರ ವಿರುದ್ಧವಾಗಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಹಾಕಿದ್ದವರು, ರಾಮಸೇತು ಕಟ್ಟಿದ ಇಂಜಿನಿಯರ್ ಯಾರು ಅಂತ ರಿಪೋರ್ಟ್ ಕೊಡಿ ಎಂದವರು, ಇವಾಗ ಈ ರೀತಿಯ ಹೇಳಿಕೆಯಿಂದ ಅವರು ಹುಚ್ಚರೆಂದು ಗೊತ್ತಾಗುತ್ತದೆ ಎಂದು ಛೇಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಈ ಸಭೆ ಮಹತ್ವದ್ದಾಗಿದೆ. ಈ ಸಭೆಯ ಮೂಲಕ ಸಣ್ಣಪುಟ್ಟ ವ್ಯತ್ಯಾಸಗಳು, ಗೊಂದಲ…
ಧಾರವಾಡ: ತಮ್ಮದೇ ಇಲಾಖೆಯ ದಲಿತ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ಕಲಕೇರಿ ಅರಣ್ಯ ವೃತ್ತದ ಡಿಆರ್‌ಎಫ್ಓ ಪರಶುರಾಮ ಮಣಕೂರ ಮೇಲೆ ಅಟ್ರಾಸಿಟಿ, ಪ್ರಕರಣ ದಾಖಲಾಗಿದೆ. ಧಾರವಾಡ ಕಲಕೇರಿ ಅರಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿ ಪರಶುರಾಮ ಮಣಕೂರ ಎಂಬುವರು ತಮ್ಮದೇ ಇಲಾಖೆ ಸಹ ಸಿಬ್ಬಂದಿ (ಉಪ ವಲಯ ಅರಣ್ಯ ಅಧಿಕಾರಿ) ಅವಿನಾಶ ರಣಕಾಂಬೆ ಅವರ ಮೇಲೆ ಡಿಸೆಂಬರ್ 6 ರಂದು ಮಧ್ಯಾಹ್ನ 2.30ರ ಸಮಯದಲ್ಲಿ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಅಷ್ಟೇ ಅಲ್ಲದೇ ಅವಿನಾಶಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಅವಿನಾಶ ನೀಡಿದ ದೂರಿನ ಮೇರೆಗೆ ಜ.6 ರಂದು ಡಿಆರ್‌ಎಫ್‌ಓ ಮಣಕೂರ ಮೇಲೆ ಎಫ್.ಐ.ಆರ್ ದಾಖಲಾಗಿದೆ. https://ainlivenews.com/cancellation-of-dog-meat-consumption-bill-passed-in-the-south-korean-parliament/ ಅರಣ್ಯ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಮೇಲೆ ನಿತ್ಯ ಅನೇಕ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಯಂತಹ ಘಟನೆಗಳು ಮೊದಲಿನಿಂದಲೂ ನಡೆಯುತ್ತಲೇ…
ಬೆಂಗಳೂರು:ಮುಂಬರಲಿರುವ ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ನಾನು ಅಕಾಂಕ್ಷಿ ಅಲ್ಲ ಎಂದು ಜೆಡಿಎಸ್‌ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಒಂದು ದಿನ ಒಂದು ರೀತಿ ಮಾತನಾಡಿ, ಮತ್ತೊಂದು ದಿನ ಬೇರೆ ಮಾತನಾಡುವ ವ್ಯಕ್ತಿತ್ವ ನನ್ನದಲ್ಲ. ನಾಳೆ ಮಂಡ್ಯ ಜಿಲ್ಲೆಯ ಸಭೆಯನ್ನು ಮಾಡ್ತಿದ್ದೇವೆ. ಯಾರು ಸ್ಪರ್ಧೆ ಮಾಡಬೇಕೆಂದು ಅಲ್ಲಿ ಚರ್ಚೆಯಾಗುತ್ತದೆ’ ಎಂದು ವಿವರಣೆ ನೀಡಿದರು. ‘ಮಂಡ್ಯ ಕ್ಷೇತ್ರದಲ್ಲಿ ಯಾರು ನಿಲ್ಲಬೇಕೆಂಬುದು ಚರ್ಚೆ ಆರಂಭವಾಗಿದೆ. ಇದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ಸಂಭಾವ್ಯ ಆಕಾಂಕ್ಷಿಗಳನ್ನು ಸಭೆಯಲ್ಲಿ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುತ್ತಾರೆ’ ಎಂದು ಹೇಳಿದರು. ಎನ್‌ಡಿಎ ಜೊತೆಗಿನ ಜೆಡಿಎಸ್ ಸಂಬಂಧ ಒಳ್ಳೆಯ ಉದ್ದೇಶದಿಂದ ಮಾಜಿ ಪ್ರಧಾನಿ ದೇವೇಗೌಡರು ನಿರ್ಧಾರ ತೆಗದುಕೊಂಡಿದ್ದಾರೆ. ಪ್ರಧಾನಿ ಮೋದಿಯವರು ದೇವೇಗೌಡರಿಗೆ…