ಬೆಂಗಳೂರು: ಟ್ರಾಫಿಕ್ ಜಾಮ್, ವಾಯುಮಾಲಿನ್ಯ, ಮಿತಿಮೀರಿದ ಜನಸಂಖ್ಯೆಯ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ದಾಖಲೆಯೊಂದನ್ನ ಮಾಡಿದೆ. ಆದರೆ ದೆಹಲಿಯನ್ನೇ ಹಿಂದಿಕ್ಕೆ ಮಾಡಿರುವ ಈ ಸಾಧನೆ ಖುಷಿಯ ಬದಲು ಆತಂಕಕ್ಕೆ ಕಾಣವಾಗಿದೆ. ರಾಜ್ಯ ಸರ್ಕಾರದ ವಿಫಲತೆಯು ಎದ್ದು ಕಾಣ್ತಿದೆ. ಹಾಗಾದ್ರೆ ಆ ರೆಕಾರ್ಡ ಏನೂ ಅಂತೀರಾ ಈ ಸ್ಟೋರಿ ನೋಡಿ. ಐಟಿ-ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಇಡೀ ವಾರ್ಡ್ ಗೆ ಫೇವಸ್..ಕಿಲೋ ಮೀಟರ್ ಗಟ್ಟಲೇ ಜಾಮ್..ಗಟ್ಟೆಗಟ್ಟಲೇ ಟ್ರಾಫಿಕ್ ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ. ಕಾರು-ಬೈಕ್ ಬಸ್ ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್ ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ. ಈ ಗೋಳಾಟದ ನಡುವೆ ರಾಜ್ಯ ರಾಜಧಾನಿ ಅನಗತ್ಯವಾಗಿ ಹೊಸದಾಖಲೆ ಸೇರಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆ ಆತಂಕ ಮೂಡಿಸಿದೆ. ಕಾರುಗಳ ಸಂಖ್ಯೆಯಲ್ಲಿ ದೆಹಲಿಯನ್ನೂ ಸರಿಗಟ್ಟಿ ಮುನ್ನುಗ್ತಿದೆ. ಹೌದು.. ಬೆಂಗಳೂರು ಟ್ರಾಫಿನಲ್ಲಿಯೂ ವಿಶ್ವದ ಎರಡನೇ ನಗರ ಎಂಬ ಪಟ್ಟ ಅಲಂಕರಿಸಿಕೊಂಡಿದೆ. ಜೊತೆಗೆ ಕಾರುಗಳ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯನ್ನ…
Author: AIN Author
ಬೆಳಗಾವಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಹಿನ್ನಲೆ ಬೆಳಗಾವಿಯ ನಗರದಲ್ಲಿ ರಾಮನ ಸ್ಮರಿಸುವ ಮೂಲಕ ವಿಶೇಷ ಪೂಜೆ ಮಾಡಲಾಯಿತು. ಮಹಿಳೆಯರು ರಾಮನ ಜಪ ಮಾಡುವುದರ ಮೂಲಕ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಮಂದಿರದಲ್ಲಿ ಈ ಬಾರಿ ರಾಮನಿಗೆ ವಿಶೇಷ ಪೂಜೆ ಸಲ್ಲುವಂತೆ ಬೆಳಗಾವಿಯಲ್ಲಿ ಎಲ್ಲಿ ನೋಡಿದ್ದರು ಭಗವಮಯ ರಾಮನ ಪ್ರತಿಮೆ ಧ್ವಜಗಳು ಕಟೌಟ್ ಬ್ಯಾನರ್ ಸ್ವಾಗತದ ಫಲಕಗಳು ಕೆಂಗಳಿಸುತ್ತಿವೆ. ಇದು ದೇಶದಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿ ಮಾಡುತ್ತಿರುವುದರ ಮೂಲಕ ಉಂಡಿ ಜಿಲೇಬಿ ಸಿಹಿ ಹಂಚುವುದು ಹತ್ತು ಹಲವಾರು ಕಡೆ ಮಹಾಪ್ರಸಾದ ಆಯೋಜಿಸಲಾಗಿದೆ ರಾಮಭಕ್ತರು ಇತರ ಲಾಭ ಪಡೆಯುತ್ತಿದ್ದಾರೆ. ಎಲ್ಲಿ ನೋಡಿದರೂ ಬೆಳಗಾವಿಯಲ್ಲಿ ಮೂಲಿ ಮೂಲಿ ಗಲ್ಲಿ ಗಲ್ಲಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಇದೊಂದು ವಿಶೇಷವಾಗಿದೆ.
ದಿ ಡಾರ್ಕ್ ವೆಬ್, ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ಮತ್ತೊಂದು ಹೊಸ ಸಿನಿಮಾ. ವಿಶೇಷ ಅಂದರೆ ಪತ್ರಕರ್ತರೇ ಸೇರಿ ಮಾಡಿರುವ ಸಿನಿಮಾವಿದು. ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ತಮ್ಮ ಎಂಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೈಬರ್ ಕ್ರೈಂ ಆಧಾರಿತ ‘ದಿ ಡಾರ್ಕ್ ವೆಬ್’ ಸಿನಿಮಾ ಮಾಡಿದ್ದು ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ ಟೀಸರ್ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮೇಘನಾ ಮಿಂಚಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಈ ಸಿನಿಮಾದ ವಿಶೇಷ. ಮಂಜು ಬನವಾಸೆ ಅವರು ನಿರ್ಮಾಣದ ಜೊತೆಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಿರಣ್ ಸ್ವಾಮಿ ಅವರ ಚೊಚ್ಚಲ ನಿರ್ದೇಶನವಿದೆ. ಚಂದ್ರಮೌಳಿ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ. ಟೀಸರ್ ರಿಲೀಸ್ ಮಾಡುವ ಕಾರಣಕ್ಕೆ ಮಾಧ್ಯಮದ…
ಚಿತ್ರದುರ್ಗ: ಹಲ್ಲೆ ತೊಂದರೆ ಮಾಡುವುದು ಹೊಸದೇನಲ್ಲ ಕಿತಾಪತಿ ಮಾಡುವುದರಲ್ಲಿ ನಂಬರ್ 1 ಬಿಜೆಪಿಯವರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಹಲ್ಲೆ ತೊಂದರೆ ಮಾಡುವುದು ಹೊಸದೇನಲ್ಲ ಕಿತಾಪತಿ ಮಾಡುವುದರಲ್ಲಿ ನಂಬರ್ 1 ಬಿಜೆಪಿಯವರು, ನಾವು ರಾಮನ ಭಕ್ತರೆ ಅಲ್ಲ ಎನ್ನುವಂತೆ ಬಿಂಬಿಸುತ್ತಾರೆ. ಯಾವ ಹಿಂದು ಬೇರೆ ಧರ್ಮ ಜಾತಿ ಗೌರವವನ್ನು ಕೊಡ್ತಾರೆ ಅವರೇ ನಿಜವಾದ ಹಿಂದುಗಳು, ದೇವರ ಹೆಸರಲ್ಲಿ ರಾಜಕಾರಣ ಮಾಡುವುದು ಒಳ್ಳೆ ಪದ್ದತಿಯಲ್ಲ. ಸಂವಿಧಾನವೇ ನಮ್ಮ ದೇಶದ ದೇವರು, ಅದನ್ನು ಮನೆಗೆ ಅಡವಿಡಬಾರದು, ಒಂದೊಂದು ದೇವರನ್ನು ಒಂದೊಂದು ಪಕ್ಷಕ್ಕೆ ಅಡವಿಡಬಾರದು, ನೀವು ರಾಮಭಕ್ತರಾದರೆ ಇನ್ನೊಬ್ಬರು ರಾಮನ ವಿರೋಧಿಗಳ? ನಾವು ಎಲ್ಲ ಧರ್ಮ ದೇವರ ಭಕ್ತರು. ಅಧಿಕಾರದಲ್ಲಿದ್ದಾಗ ನಾವು ಬಹಳ ಜವಾಬ್ದಾರಿಯಿಂದಿರಬೇಕು. ಅವರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಇದನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಭಾಗ್ಯಗಳನ್ನು ನೀಡಿ ಹರಾಜಾಗಿದೆ ಎನ್ನುತ್ತಾರೆ. ಆದರೆ 92 % ರಷ್ಟು ಯಶಸ್ಸನ್ನು ನಾವು ಖಂಡಿದ್ದೇವೆ. ಭಾಗ್ಯಗಳ ಸೌಲಭ್ಯವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ.ನಾವು…
ಕಲಬುರಗಿ: ಶ್ರೀರಾಮನಿಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸುವ ಟೈಮಲ್ಲೇ ನಮಗೂ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಅಂತ VHP ಉತ್ತರ ಪ್ರಾಂತ್ಯದ ಕಾರ್ಯದರ್ಶಿ ಕಲಬುರಗಿ ಮೂಲದ ಲಿಂಗರಾಜಪ್ಪ ಅಪ್ಪ ಹೇಳಿದ್ದಾರೆ. ವಿಶೇಷ ಆಹ್ವಾನಿತರಾಗಿ ದಂಪತಿ ಸಮೇತ ಅಯೋಧ್ಯೆಗೆ ತೆರಳಿರುವ ಅಪ್ಪಾ ನಾಳೆ ಊರಿಗೆ ವಾಪಾಸ್ ಬರಲಿದ್ದಾರೆ..ಕಲ್ಯಾಣ ಕರ್ನಾಟಕದಿಂದ ತೆರಳಿರುವ ಏಕೈಕ ದಂಪತಿ ಜೋಡಿ ನಿನ್ನೆ ಪ್ರಾಣ ಪ್ರತಿಷ್ಠಾಪನೆ ವೇಳೆ ಗರ್ಭಗುಡಿ ಮುಂಭಾಗದ ಪ್ರಾಂಗಣ ಹತ್ತಿರದಲ್ಲೇ ಕುಳಿತಿದ್ದುದು ವಿಶೇಷವಾಗಿತ್ತು.
ಬೆಂಗಳೂರು : ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ..? ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಕೆರಳಿ ಕೆಂಡವಾದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರಲ್ಲಿ ಶಿವನ ಮಗ ಕುಮಾರನೂ ಇದ್ದಾನೆ ವಾಗ್ದಾಳಿ ನಡೆಸಿದರು. https://ainlivenews.com/siddaramaiah-himself-lord-rama-can-forgive-you-not-rama-devotees-bjp-spark/ ಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನ ಹಿಂದೂ ವಿರೋಧಿಗಳು ಅಂತಾ ಬಿಂಬಿಸಲು ಮಾಡ್ತಿದ್ದಾರೆ. ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ? ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ ಎಂದು ಕಿಡಿಕಾರಿದರು. ಮಹಾತ್ಮ ಗಾಂಧೀಜಿ ಹೇಳಿಲ್ವಾ..? ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಅಂತಾ.. ನಾವು ರಾಮನನ್ನೂ ಪೂಜಿಸ್ತೀವಿ.. ಸೀತೆಯನ್ನೂ ಪೂಜಿಸ್ತೀವಿ ಎಂದು ಬಿಜೆಪಿಗರ ವಿರುದ್ಧ ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರ: ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಹಲ್ಲೆ ಯತ್ನ ಬಿಜೆಪಿ ವಿರುದ್ದ ಗಡಿ ಜಿಲ್ಲೆ ಚಾಮರಾಜನರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಸಚಿವ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ ಸಮಾವೇಶಗೊಂಡ ಪ್ರತಿಭನಾಕಾರರು, ಭುವನೇಶ್ವರಿ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 209 ತಡೆದು ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆಯಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು. ಈ ವೇಳೆ ಅಸ್ಸಾಂ ರಾಜ್ಯದ ಬಿಜೆಪಿ ಕಾರ್ಯಕರ್ತರ ವಿರುದ್ದ ಅಕ್ರೋಶ ಹೊರ ಹಾಕಿದರು ಅಸ್ಸಾಂನಲ್ಲಿ ಕಾಂಗ್ರೆಸ್ಸಿಗರು ಶಾಂತಿಯುತವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಳ್ಗೊಂಡಿದ್ದ ವೇಳೆ ಬಿಜೆಪಿ ಕಾರ್ಯಕರ್ತರ ವಿರುದ್ದ ಆಕ್ರೋಶ ಹೊರ ಹಾಕಿದರು. ಕೂಡಲೆ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಪ್ರತಿಭಟನಾಕಾರರ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಮಹಮ್ಮದ್ ಹಜ್ಗರ್ ಮುನ್ನಾ, ಗುರುಸ್ವಾಮಿ,…
ಬೆಂಗಳೂರು: ಇಂದು ಬೆಳ್ಗೆಯಿಂದ ನಗರದಲ್ಲಿ ಪಿಎಸ್ ಐ ಮರು ಪರೀಕ್ಷೆ ನಡೆದಿದ್ದು ಸಂಜೆ ವೇಳೆಗೆ ಮುಕ್ತಾಯಗೊಂಡಿದೆ. 545 ಪಿಎಸ್ ಐ ಹುದ್ದೆಗಳ ಮರು ಪರೀಕ್ಷೆ ಮುಕ್ತಾಯ ಗೊಂಡಿದ್ದು ಇಂದು ಬೆಳಗ್ಗೆ 10 – 30 ರಿಂದ ಆರಂಭವಾಗಿದ್ದ ಪರೀಕ್ಷೆ ಸಂಜೆಗೆ ಅಂತ್ಯಗೊಂಡಿದೆ. ಬೆಂಗಳೂರಿನ ಒಟ್ಟು 117 ಕೇಂದ್ರಗಳಲ್ಲಿ ಪಿಎಸ್ಐ ನೇಮಕಾತಿ ಮರು ಪರೀಕ್ಷೆಯು ನಡೆದಿದ್ದು ಈ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದೆಂದು ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಬೆಂಗಳೂರಿನಲ್ಲಿ 117 ಕೇಂದ್ರಗಳಲ್ಲಿ ಇಂದು ಪರೀಕ್ಷೆ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲು ಆದೇಶದಲ್ಲಿ ಸೂಚಿಸಲಾಗಿತ್ತು. ಈ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದೆಂದು ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಸೂಚಿಸಿರುವಂತೆ ಅಭ್ಯರ್ಥಿಗಳು ವಸ್ತ್ರಸಂಹಿತೆಯನ್ನು ಪಾಲಿಸಬೇಕೆಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಅವರು ತಿಳಿಸಿದ್ದರು.
ಬೆಳಗಾವಿ: ಪ್ರತಿಯೊಬ್ಬರು ಅಲ್ಪಮತಿಗೆ ಹೊಳೆದಷ್ಟು ಮಾತನಾಡುತ್ತಾರೆ. ಅಲ್ಪಮತಿಗಳ ಬಗ್ಗೆ ನಾನು ಹೆಚ್ಚು ಒತ್ತುಕೊಡುವುದಿಲ್ಲ” ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಅಲ್ಪಮತಿ ಎಂದು ಜರಿದರು. ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, https://ainlivenews.com/do-you-sleep-less-than-6-hours-beware-of-this-deadly-disease/ ರಾಮ ಮಂದಿರ ಆಹ್ವಾನ ಬಂದಿದೆಯಾ? ನೀವು ದೇಣಿ ಕೊಟ್ಟಿದ್ದೀರಾ? ಅಂತ ಮಾಧ್ಯಮದವರು ಪ್ರಶ್ನಿಸಿದರು. ಅದಕ್ಕೆ ನಾನು ಬಿಜೆಪಿಯಲ್ಲಿದ್ದಾಗ 10 ಲಕ್ಷ ರೂ. ದೇಣಿಗೆ ಕೊಟ್ಟಿರುವೆ ಎಂದು ಹೇಳಿದೆ. ಇಲ್ಲಿ ಯಾರೋ ಒಬ್ಬರು ಕೋಟಿ ಕೊಟ್ಟವರಿಗೆ ಕರೆದಿಲ್ಲಾ ಹತ್ತು ಲಕ್ಷ ಕೊಟ್ಟವರು ಏನು ದೊಡ್ಡ ವಿಷಯ ಅಂದಿದ್ದಾರೆ. ಅದರ ಬಗ್ಗೆ ನನಗೆ ಬೇಸರವೆ ಇಲ್ಲ ಎಂದರು.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರಿನ ಬ್ಯಾನೆಟ್ ಮೇಲೆ ಕುಳಿತವನನ್ನು 400 ಮೀಟರ್‌ನಷ್ಟು ದೂರ ಎಳೆದೊಯ್ದು ಹುಚ್ಚಾಟ ಮೆರೆದಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರು ಚಲಾಯಿಸಿರೋ ಭಯಾನಕ ದೃಶ್ಯ ಸೆರೆಯಾಗಿದೆ.ʼ ನಗರದ ಸರ್ಕಲ್ ಮಾರಮ್ಮ ದೇವಸ್ಥಾನ ಬಳಿ ಮೊಹಮ್ಮದ್ ಮುನೀರ್ ಎಂಬಾತನಿಂದ ಕೃತ್ಯ ನಡೆದದಿದ್ದು 400 ಮೀಟರ್ ನಷ್ಟು ದೂರ ಬ್ಯಾನೆಟ್ ಮೇಲೆ ಎಳೆದೊಯ್ದ ಚಾಲಕ . ಕ್ಯಾಬ್ ಚಾಲಕ ಅಶ್ವತ್ಥ್ ನನ್ನ ಬ್ಯಾನೆಟ್ ಮೇಲೆ ಹೊತ್ತಯ್ದ ಮುನೀರ್ ಜನವರಿ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ. ಚಾಲಕ ಮುನೀರ್ ಅನ್ನು ಕಾರು ನಿಲ್ಲಿಸುವಂತೆ ಕ್ಯಾಬ್ ಡ್ರೈವರ್ ಅಶ್ವತ್ಥ್ ದುಂಬಾಲು ಬಿದ್ದಿದ್ದಾನೆ. ಈ ವೇಳೆ ಕಾರು ನಿಲ್ಲಸದೇ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಕ್ಯಾಬ್ ಡ್ರೈವರ್ ಕಾರಿನ ಮುಂದೆ ನಿಂತು ಕೆಳಗೆ ಬರುವಂತೆ ಪಟ್ಟು ಹಿಡಿದಿದ್ದಾನೆ. ಆಗ ತಕ್ಷಣವೇ ಚಾಲಕ ಕಾರು ಚಲಾಯಿಸಿದ್ದಾನೆ. 18ನೇ ಕ್ರಾಸ್ ಸಿಗ್ನಲ್‌ವರೆಗೆ ಬ್ಯಾನೆಟ್ ಮೇಲೆ…