ಕಿವಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ರಕ್ತಹೀನತೆ, ವಿಟಮಿನ್ ಬಿ ಕೊರತೆ, ವೈರಲ್ ಸೋಂಕುಗಳನ್ನು ಗುಣಪಡಿಸಲು ಸಹಕಾರಿ. ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕಗಳ ಜೊತೆಗೆ ವಿಟಮಿನ್ ಬಿ6, ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ನೀರು, ರಂಜಕ, ಮೆಗ್ನೀಸಿಯಮ್, ತಾಮ್ರ, ಸತು, ಬೀಟಾ ಕ್ಯಾರೋಟಿನ್ ಇತ್ಯಾದಿಗಳು ಇದ್ರಲ್ಲಿವೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಯಾವುದನ್ನೂ ಅತಿಯಾಗಿ ಸೇವನೆ ಮಾಡಬಾರದು. ಅದ್ರಲ್ಲಿ ಕಿವಿ ಕೂಡ ಒಂದು. ಕಿವಿ ಹಣ್ಣನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯ ಸುಧಾರಿಸುವ ಬದಲು ಹಾಳಾಗುತ್ತದೆ. ಅತಿಯಾದ ಕಿವಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಅಲರ್ಜಿ: ವರದಿಯೊಂದರ ಪ್ರಕಾರ ದಿನದಲ್ಲಿ ಹೆಚ್ಚು ಕಿವಿ ಹಣ್ಣು ಸೇವಿಸಿದರೆ ಕೆಲವು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಚರ್ಮದ ಮೇಲೆ ಗುಳ್ಳೆ, ಊತ ಅಥವಾ ಉರಿಯೂತ, ಬಾಯಿಯಲ್ಲಿ ಕಿರಿಕಿರಿ ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ಕಿವಿ ಹಣ್ಣಿನ ಅತಿಯಾದ ಸೇವನೆಯಿಂದ ಓರಲ್ ಅಲರ್ಜಿ ಸಿಂಡ್ರೋಮ್ ಕಾಡುವ ಅಪಾಯವಿದೆ. ಇದರಲ್ಲಿ ಬಾಯಿ, ತುಟಿ ಮತ್ತು ನಾಲಿಗೆಯಲ್ಲಿ ಊತ ಕಂಡುಬರುತ್ತದೆ. ಕಿಡ್ನಿ ಸಮಸ್ಯೆ…
Author: AIN Author
ಸೂರ್ಯೋದಯ: 06:53, ಸೂರ್ಯಾಸ್ತ : 05:55 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಂ, ಶುಕ್ಲ ಪಕ್ಷ, ದಕ್ಷಿಣಾಯನಮ್, ಹೇಮಂತ ಋತು, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ10:30 ತನಕ ಅಮೃತಕಾಲ: ಬೆ.9:31 ನಿಂದ ಬೆ.10:58 ಅಭಿಜಿತ್ ಮುಹುರ್ತ: ಮ.12:02 ನಿಂದ ಮ.12:46 ತನಕ ಮೇಷ: ರಾಜಕಾರಣಿಗಳಿಗೆ ಉತ್ತಮ ಸ್ಥಾನ ದೊರೆಯುತ್ತದೆ,ನಿಮ್ಮ ಜನ್ಮಸ್ಥಳದಲ್ಲಿನ ಮನೆಯನ್ನು ನವೀಕರಿಸುವ ಯೋಚನೆ, ನಿಮ್ಮ ಪತ್ನಿಯೋಡನೆ ಪಾಲುಗಾರಿಕೆ ವ್ಯಾಪಾರದಲ್ಲಿ ಉತ್ತಮ ಆದಾಯ, ಬಾಕಿ ಇದ್ದ ಹಣ ಕೈ ಸೇರುವುದು, ಸ್ತ್ರೀಯರಿಗೆ ಉದ್ಯೋಗದಲ್ಲಿ ತೊಂದರೆ, ಇರುವ ಉದ್ಯೋಗ ಬದಲಿಸಬೇಡಿ, ಪಿ.ಜಿ ನಡೆಸುವವರಿಗೆ ಉತ್ತಮ ಆದಾಯ, ಶಾಲಾ-ಕಾಲೇಜು ಭೋಧನಾ ಸಂಸ್ಥೆ ಗಳನ್ನು ನಡೆಸುವವರಿಗೆ ಕೊಂಚ ಆತಂಕದ ಪರಿಸ್ಥಿತಿ ಎದುರಿಸಬೇಕಾದಿತು, ಹಣ್ಣು-ತರಕಾರಿ ವ್ಯಾಪಾರಸ್ಥರಿಗೆ ಧನಲಾಭವಿದೆ,ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ,ಗಂಡ ಹೆಂಡತಿ ಮಧುರ ಪ್ರೇಮ ಜೇನುಗೂಡು ಕುಟುಂಬ ಯಾರ ಮಾತಿಗೂ ಕಿವಿಗೊಡಬೇಡಿ, ಇಷ್ಟಪಟ್ಟವರ ಜೊತೆ ಮದುವೆ…
ದೇವನಹಳ್ಳಿ:- ದೇವನಹಳ್ಳಿಯಂದ ದೆಹಲಿಗೆ ತೆರಳುವಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಆಹಾರ ಸಚಿವರಿಂದ ರಾಮಕೋಟಿ ಜಪ ಮಾಡಲಾಗಿದೆ. ಎಐಸಿಸಿ ಸಭೆಗೆ ತೆರಳುವಾಗ ರಾಮಕೋಟಿ ಜಪ ಮಾಡಿದ್ದಾರೆ. ಮುನಿಯಪ್ಪ ಅವರು, ಪ್ರತಿದಿನ ರಾಮಕೋಟಿ ರಾಮನಾಮ ಬರೆಯುತ್ತಿದ್ದು, ಒಂದ್ಕಡೆ ಅಯೋದ್ಯೆ ರಾಮಮಂದಿರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆರೋಪ ಪ್ರತ್ಯಾರೋಪದ ವಿಷಯವಾಗಿದೆ. ಇನ್ನೊಂದ್ಕಡೆ ಕಾಂಗ್ರೆಸ್ ಸಚಿವರಿಂದಲೇ ರಾಮನಾಮ ಜಪ ಮಾಡಲಾಗುತ್ತಿದೆ. ಅಯೋದ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಟಾಪನೆ ಕಾರ್ಯ ಜನವರಿ 22ಕ್ಕೆ ನೆರವೇರಲಿದೆ.ಕಾಂಗ್ರೆಸ್ಸಿನ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಲಾಗಿತ್ತು. ಕಾರಣಾಂತರಗಳಿಂದ ಕಾಂಗ್ರೆಸ್ ನಾಯಕರು ಆಯೊದ್ಯೆ ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ. ಸಿದ್ದರಾಮಯ್ಯ ಬೇರೆ ಅಯೊದ್ಯೆ ರಾಮಮಂದಿರ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೆ.ಹೆಚ್.ಮುನಿಯಪ್ಪರವರ ರಾಮನಾಮ ಜಪ ಕುತೂಹಲ ಕೆರಲಿಸಿದೆ..
ಭೋಪಾಲ್:- ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮನ ಕುರಿತಾದ ಡೈಲಾಗ್ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುಯಾಗಿದ್ದು, ನಟಿ ನಯನತಾರಾ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ಗೆ ಪ್ರೇರೆಪಿಸಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕ, ನಿರ್ದೇಶಕ, ನಯನತಾರಾ ಸೇರಿದಂತೆ ಏಳು ಮಂದಿ ವಿರುದ್ಧ ಮಧ್ಯಪ್ರದೇಶದ ಜಬಲ್ಪುರದ ಒಮ್ಟಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಸೇವಾ ಪರಿಷತ್ತಿನ ಮುಖಂಡರೊಬ್ಬರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ಗೆ ಪ್ರೇರಣೆ ನೀಡಿದ ಆರೋಪದ ಮೇಲೆ ನಟಿ ನಯನತಾರಾ, ನಿರ್ದೇಶಕ ನೀಲೇಶ್ ಕೃಷ್ಣನ್, ನೆಟ್ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್, ಸಿನಿಮಾದ ನಿರ್ಮಾಪಕ ಹೀಗೆ ಒಟ್ಟು ಏಳು ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹಿಂದೂ ಸೇವಾ ಪರಿಷತ್ತಿನ ಮುಖಂಡರೊಬ್ಬರು ತಿಳಿಸಿದ್ದಾರೆ.
ಹಾಸನ: ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ಪಂಚಾಯತ್ ಕಛೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಇದೆ ವೇಳೆ ಸಂಘದ ಅಧ್ಯಕ್ಷೆ ಮಮತಾ ಮಾತನಾಡಿ, ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋ ತ್ಸಾಹಧನವು ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದ ರಿಂದ ಅವರಿಗೆ ವೇತನ ಸಂಪೂರ್ಣವಾಗಿ ಸಿಗದೆ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿ ರುವ ಹಾಗೂ ಇತರ ವೇತನ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ಮೊಬೈಲ್ ಆಧಾರಿತ ಕೆಲಸ ನೀಡುವುದನ್ನು ಕೈಬಿಡುವಂತೆ, ಎನ್‌ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಲೆ ಪ್ರೋತ್ಸಾಹಧನ ನೀಡದಿರುವ ಮತ್ತು ಆಶಾಗಳನ್ನು ತಮ್ಮದಲ್ಲದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳು ತ್ತಿರುವುದು ಇತರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ ಎಂದರು. ಆರ್.ಸಿ.ಹೆಚ್.(ಆಶಾ ನಿಧಿ) ಪೋರ್ಟಲ್‌ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ. ಕೆಲವು ಕಾಂಪೋನೆಂಟ್‌ಗಳಿಗೆ…
ಬೆಂಗಳೂರು:- ಮಹೇಶ್ವರ ರಾವ್ ಅವರನ್ನು ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇವರು BMRCLಗೆ ಪೂರ್ಣಾವಧಿ ಎಂ.ಡಿ. ಆಗಿದ್ದಾರೆ. ನಮ್ಮ ಮೆಟ್ರೋ ಫೇಸ್ 2 ಕಾಮಗಾರಿಗಳು ವಿಳಂಬವಾಗುತ್ತಿವೆ. ಇದಕ್ಕೆ ಪೂರ್ಣಾವಧಿ ಎಂ.ಡಿ. ಇಲ್ಲದೇ ಇರುವುದೇ ಕಾರಣ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಆರೋಪಿಸಿದ್ದರು. ಅವರ ಮನವಿ ಮೇರೆಗೆ ಇದೀಗ ಪೂರ್ಣಾವಧಿ ಎಂ.ಡಿ. ನೇಮಕ ಮಾಡಲಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿದೆ
ಬೆಂಗಳೂರು: ರಾಜ್ಯದಲ್ಲಿ ಇಂದು 240 ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಇಂದು 7,015 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಒಟ್ಟಾರೆಯಾಗಿ 993 ಸಕ್ರಿಯ ಕೊರೊನಾ ಕೇಸ್‌ಗಳು ದಾಖಲಾಗಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ ಇಂದು ಕೋವಿಡ್-19 ರಿಂದ ಗುಣಮುಖರಾಗಿ 220 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 3.42%ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು 124 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಅದೇ ರೀತಿ ಇಂದು ಮೈಸೂರಿನಲ್ಲಿ 19, ತುಮಕೂರಿನಲ್ಲಿ 21, ದಕ್ಷಿಣ ಕನ್ನಡದಲ್ಲಿ 2, ಶಿವಮೊಗ್ಗದಲ್ಲಿ 11 ಕೇಸ್‌ಗಳು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು:- ಗ್ಯಾರಂಟೀ ಯೋಜನೆಗಳ ಮೇಲುಸ್ತುವಾರಿ ಸಮಿತಿ ರಚನೆ ಪ್ರಸ್ತಾವಕ್ಕೆ, ಹಿರಿಯ ಬಿಜೆಪಿ ನಾಯಕರೂ, ಶಾಸಕರೂ ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ರವರು ಕಟುವಾಗಿ ಟೀಕಿಸಿದ್ದಾರೆ. “ಇದೊಂದು ಬೊಕ್ಕಸಕ್ಕೆ ಹೊರೆ ಯಾಗುವ ಹಾಗೂ ದುಂದು ವೆಚ್ಚಕ್ಕೆ ಕಾರಣವಾ ಗುವ ಯೋಜನೆಯಾಗಿದ್ದು ” ಎಂದ ಬಿಜೆಪಿ ನಾಯಕರು, ಸರಕಾರ, ಬರ ಕಾಮಗಾರಿ ಕೈಗೊಳ್ಳುವ ಹಾಗೂ ರೈತರಿಗೆ ಆರ್ಥಿಕ ಸಹಾಯ ನೀಡಲು ಯಾವುದೇ ಪ್ರಯತ್ನ ಮಾಡದೆ, ಹಣ ಪೋಲು ಮಾಡುವ ಹೇಯ ಕಾರ್ಯಕ್ಕೆ ಮುಂದಾಗಿದೆ ಎಂದು, ಹೇಳಿಕೆಯೊಂದರಲ್ಲಿ ಇಂದು, ಟೀಕಿಸಿದ್ದಾರೆ.
ಹಾಸನ:- ಕಾರು ಚಾಲಕನ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಕರಣದ ಬಗ್ಗೆ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದು ಹೇಳಿದ್ದಾರೆ. ಕೋರ್ಟ್‌ಗೆ ಕೇಸ್ ಹಾಕೊಂಡಿದ್ದೀನಿ ಅಂತ ಅವರೇ ಹೇಳಿದ್ದಾರೆ. ಕೋರ್ಟ್‌ಗೆ ಹಾಕಿಕೊಂಡ ಮೇಲೆ ಮಾಧ್ಯಮದ ಮುಂದೆ ಬರುವುದು ಏನಿದೆ. ಎಲೆಕ್ಷನ್ ಹತ್ತಿರ ಬರುತ್ತಿದೆ ಮಾತನಾಡುತ್ತಿದ್ದಾರೆ. ಎಂಟು, ಒಂಭತ್ತು ತಿಂಗಳ ಹಿಂದೆ ಆಗಿರುವುದು ಅಂತ ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಮಾಧ್ಯಮದ ಮುಂದೆ ಕುಳಿತುಕೊಂಡು ಒಬ್ಬರ ತೇಜೋವಧೆ ಮಾಡಬಾರದು ಎಂದು ಕಿಡಿಕಾರಿದ್ದಾರೆ. ಇವರಿಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ ಅಂತ ಕಾಣುತ್ತೆ. ಅವರ ಅಜೆಂಡಾ ಏನಿದೆ ಅದು ಎಂಪಿ ಚುನಾವಣೆ. ಯಾರು, ಯಾರ ಮೇಲೂ ಹಲ್ಲೆ ಮಾಡಲ್ಲ, ಆಗಲ್ಲ. ಎ.ಟಿ.ರಾಮಸ್ವಾಮಿ ಅವರು ದೊಡ್ಡವರಿದ್ದಾರೆ, ಅವರು ಹಿರಿಯ ರಾಜಕಾರಣಿ. ಇಂತಹ ಹೋರಾಟಕ್ಕೆ ಬರುತ್ತಾರೆ ಅಂದರೆ ನಾನು ಏನು ಹೇಳಬೇಕು.…
ಹುಕ್ಕೇರಿ:- ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಕ್ಷೀರ ಭಾಗ್ಯ ಹಾಲಿನಲ್ಲಿ ಹಲ್ಲಿ ಬಿದ್ದ ಪರಿಣಾಮ 80 ಮಕ್ಕಳ ಅಸ್ವಸ್ಥ ಅದರಲ್ಲಿ ನಾಲ್ಕು ಮಕ್ಕಳನ್ನು ಹುಕ್ಕೇರಿ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲ ಮಾಡಲಾಗಿದೆ ಇನ್ನುಳಿದ ವಿದ್ಯಾರ್ಥಿಗಳನ್ನು ಸಂಕೇಶ್ವರ್ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಎಲ್ಲಾ ವಿದ್ಯಾರ್ಥಿಗಳು ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಶಿಕ್ಷಕರು ನೋಡಿಕೊಳ್ಳಬೇಕಾಗಿದೆ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣದ ಜೊತೆ ಆಹಾರ ಹಾಲು ಮೊಟ್ಟೆ ಇನ್ನಿತರೆ ನೀಡುತ್ತಿರುವ ಸರ್ಕಾರದ ಯೋಜನೆಗಳು ದುರುಪಯೋಗ ಆಗದಿರಲಿ ಎಂದು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.