ಮಂಡ್ಯ :- ಮೇಲುಕೋಟೆ ಶಿಕ್ಷಕಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಕ್ಕ ಅಕ್ಕ ಅಂತ ಅಂತಿದವನಿಂದಲೇ ಮೂಹೂರ್ತ ಇಟ್ಟನಾ? ಎಂಬ ಗುಮಾನಿ ಮೂಡಿದೆ. ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ (28) ಮೃತದೇಹ ಕೊಲೆ ಮಾಡಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಕೆಯ ಕೊಲೆಯ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಇದೀಗ ಸ್ವಗ್ರಾಮದ ಯುವಕನ ವಿರುದ್ಧ ಮೃತ ದೀಪಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ದೀಪಿಕಾ ನಾಪತ್ತೆಗೂ ಮುನ್ನ ನಿತೀಶ್ ಎಂಬಾತ ಕೊನೆಯ ಕರೆ ಮಾಡಿದ್ದ. ದೀಪಿಕಾ ಮೃತದೇಹ ಸಿಗುತ್ತಿದ್ದಂತೆ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ನಿತೀಶ್ ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾ ಜೊತೆ ಸ್ನೇಹ ಬೆಳೆಸಿದ್ದ. ಒಂದೇ ಊರಿನವನಾದ್ದರಿಂದ ದೀಪಿಕಾ ಆತನ ಜೊತೆ ಸಲುಗೆಯಿಂದಲೇ ಮಾತನಾಡುತ್ತಿದ್ದಳು. ನಿತೀಶ್‌ನಿಂದಲೇ ದೀಪಿಕಾ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೂ ಮುನ್ನ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಮತ್ತು ನಿತೀಶ್ ಜಗಳವಾಡುತ್ತಿದ್ದ ವೀಡಿಯೋ ಸೆರೆಯಾಗಿದೆ. 13 ಸೆಕೆಂಡ್‌ಗಳ ವಿಡಿಯೋ ರೆಕಾರ್ಡ್ ಮಾಡಿದ್ದ ಪ್ರವಾಸಿಗರು ಅದನ್ನು ಪೊಲೀಸರಿಗೆ ನೀಡಿದ್ದಾರೆ. ನಾಪತ್ತೆ…
Author: AIN Author
ಡಿಸೀಸ್ ಎಕ್ಸ್ ಅನ್ನೋದು ಯಾವುದೇ ನಿರ್ದಿಷ್ಟ ರೋಗದ ಹೆಸರಲ್ಲ. ಆದರೆ, ಇದು ಸಂಭಾವ್ಯ ವೈರಸ್ ಒಂದರ ಸೋಂಕಿನ ಕುರಿತಾಗಿ ಇಟ್ಟಿರುವ ಹೆಸರು. ಕೋವಿಡ್ ಮಾದರಿಯ ಸೊಂಕು ಇದಾಗಿದ್ದು, ಹೊಸ ರೀತಿಯ ವೈರಸ್ ಇರಬಹುದು ಎಂದು ಭಾವಿಸಲಾಗಿದೆ. ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್.. ಯಾವುದೂ ಆಗಿರಬಹುದು. ಈ ಸೋಂಕಿಗೆ ಚಿಕಿತ್ಸೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಕೋವಿಡ್, ಎಬೋಲಾ, ಲಸ್ಸಾ ಜ್ವರ, ಮೆರ್ಸ್, ನಿಫಾ, ಝೀಕಾ ಸೇರಿದಂತೆ ಹಲವು ಹೊಸ ಬಗೆಯ ರೋಗಗಳನ್ನ ಗುರ್ತಿಸಿದೆ. ಇದೇ ಮಾದರಿಯ ಹೊಸ ರೋಗವೇ ಡಿಸೀಸ್ ಎಕ್ಸ್ ಎನ್ನಲಾಗಿದೆ. ಆರಂಭದಲ್ಲಿ ಎಲ್ಲಾ ಸೋಂಕುಗಳೂ ಹೆಚ್ಚಿನ ಜೀವ ಹಾನಿಗೆ ಕಾರಣವಾಗಿದ್ದವು. ನಂತರದ ದಿನಗಳಲ್ಲಿ ಸೋಂಕಿನ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಡಿಸೀಸ್ ಎಕ್ಸ್ ಅನ್ನೋ ಪದ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ 2018 ರಿಂದಲೂ ಅನುಸರಿಸುತ್ತಿದೆ. ಯಾವುದೇ ಒಂದು ಹೊಸ ಸೋಂಕು ಉದ್ಭವ ಆದಾಗಲೂ ಮೊದಲಿಗೆ ಅದನ್ನು ಡಿಸೀಸ್ ಎಕ್ಸ್ ಎಂದು ಕರೆಯಾಗುತ್ತದೆ. ಬಳಿಕ ಆ ಸಾಂಕ್ರಾಮಿಕದ ತೀವ್ರತೆ…
ದಾವಣಗೆರೆ:- ಕರ್ನಾಟಕಕ್ಕೆ ಖನಿಜ ಬ್ಲಾಕ್ಗಳ ಹರಾಜು, ನಿರ್ವಹಣೆಯಲ್ಲಿ 3ನೇ ಸ್ಥಾನ ಲಭಿಸಿದೆ. ಮಧ್ಯಪ್ರದೇಶದ ಭೂಪಾಲ್ನಲ್ಲಿ ಆಯೋಜಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರ ಸಮ್ಮೇಳನದಲ್ಲಿ ಘೋಷಣೆ ಮಾಡಲಾಗಿದೆ. ಕೇಂದ್ರ ಖನಿಜ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಂದ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಮರಳು ನೀತಿ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಿರ್ವಹಿಸಿದ ನೀತಿ ದೇಶಕ್ಕೆ ಮಾದರಿ ಆಗಿದೆ. ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದು, ಎರಡನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದ ಸಂದರ್ಭದಲ್ಲಿ ಭೋಪಾಲ್ ನಲ್ಲಿ ಗಣಿ ಮತ್ತು ಖನಿಜ ಸಚಿವಾಲಯ ಆಯೋಜಿಸಿದ್ದ “ಮೈನಿಂಗ್ ಆ್ಯಂಡ್ ಬಿಯಾಂಡ್” ವಸ್ತುಪ್ರದರ್ಶನವನ್ನು ಭೇಟಿ ನೀಡಿದ ಕ್ಷಣ. ಇದೇ ಸಂದರ್ಭದಲ್ಲಿ ಭೋಪಾಲ್ನ ಭೋಜೇಶ್ವರ ಮಹಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮಹದಾವಕಾಶ ನನ್ನದಾಯಿತು ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಎರಡು ದಿನ ಮೈಸೂರು, ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ 10 ಗಂಟೆಗೆ HAL ನಿಂದ ಮೈಸೂರಿಗೆ ತೆರಳಲಿದ್ದಾರೆ. ಜಲಸಂಪನ್ಮೂಲ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತ ಮತ್ತು 150 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟನೆ ಸಭೆ ಮಾಡಲಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿನಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಮತ್ತು ಸಾರ್ವಜನಿಕ ಸಭೆ ಮುಗಿಸಿ ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ ಜ. 25 ರಂದು ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಕೊಡಗು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದು, ಕೊಡಗಿನಲ್ಲಿ ಕಾನೂನು ಸಲಹೆಗಾರ/ಶಾಸಕ ಎ.ಎಸ್ ಪೊನ್ನಣ್ಣ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಸ್ವಪ್ನ ಶಾಸ್ತ್ರದಲ್ಲಿ ಕನಸುಗಳ ಬಗೆಗಳು ಮತ್ತು ಅವುಗಳಿಗೆ ಶಾಸ್ತ್ರವು ತಿಳಿಸುವ ಅರ್ಥವನ್ನು ಉಲ್ಲೇಖಿಸಲಾ ಗಿರುತ್ತದೆ. ಕೆಲವು ಕನಸು ಬಿದ್ದರೆ ಧನಲಾಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಯಾವ ರೀತಿಯ ಕನಸು ಬಿದ್ದರೆ ಹಣ ಸಿಗುತ್ತದೆ ಅಥವಾ ಲಕ್ಷ್ಮೀದೇವಿಯ ಕೃಪೆ ಲಭಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ… ಸ್ವಪ್ನ ಶಾಸ್ತ್ರದ ಪ್ರಕಾರ ಈ ಕನಸುಗಳು ಧನ ಲಾಭವಾಗುವ ಸಂಕೇತಗಳು ಮನೆಯಲ್ಲಿ ಕಸವಿದ್ದಂತೆ ಕನಸು ಬಂದರೆ ಮನೆಯಲ್ಲಿ ಕಸ ಬಿದ್ದಿರುವ ದೃಶ್ಯವನ್ನು ಕನಸಿನಲ್ಲಿ ನೋಡಿದರೆ ಅದು ಧನಲಾಭವಾಗುವ ಸಂಕೇತವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಯಾರಾದರೂ ಹೊರಗಿನಿಂದ ಮನೆಗೆ ಕಸವನ್ನು ತರುತ್ತಿರುವಂತೆ ಕಂಡರೆ ಅದು ಸಹ ಹಣ ಸಿಗುವ ಸಂಕೇತವನ್ನು ಸೂಚಿಸುತ್ತದೆ. ಈ ರೀತಿಯ ಕನಸುಗಳು ಬಿದ್ದರೆ ಅವು ಧನ ಲಾಭವಾಗುವ ಸೂಚನೆ ಎಂದು ಹೇಳಲಾಗುತ್ತದೆ. ಹಾಲು- ಮೊಸರು ಕಂಡರೆ ಕನಸಿನಲ್ಲಿ ಹಾಲು ಅಥವಾ ಮೊಸರನ್ನು ಇಟ್ಟಂತೆ ಕಂಡರೆ ಅದು ಧನಲಾಭವನ್ನು ಸೂಚಿಸುತ್ತದೆ. ಇಲ್ಲವೇ ಹಾಲು ಅಥವಾ ಮೊಸರನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ಅದರ ಅರ್ಥವು ಸಹ ಧನ-ಧಾನ್ಯಗಳಿಂದ ಮನೆಯು…
ಗೂಗಲ್ ಮ್ಯಾಪ್‌ನಲ್ಲಿ ಯಾವುದೇ ಸ್ಥಳ ತಲುಪಲು ಮ್ಯಾಪ್ ಹಾಕಿದ ಬಳಿಕ ಗೂಗಲ್ ಮ್ಯಾಪ್ ಫಾಸ್ಟೆಸ್ಟ್ ಮಾರ್ಗ ತೋರಿಸುತ್ತದೆ. ಹೊಸ ಫೀಚರ್‌ನಿಂದಾಗಿ ನಿಮಗೆ ಎರಡು ಮಾರ್ಗಗಳನ್ನು ತೋರಿಸಲಿದೆ. ಒಂದು ಫಾಸ್ಟೆಸ್ಟ್ ರೂಟ್ ಮತ್ತೊಂದು ಇಕೋ ಫ್ರೆಂಡ್ಲಿ ರೂಟ್. ಇಕೋ ಫ್ಲೆಂಡ್ಲಿ ರೂಟ್, ಮಾರ್ಗ ಮಧ್ಯದಲ್ಲಿ ಸಿಗವು ಟ್ರಾಫಿಕ್ ಜಾಮ್, ಗುಂಡಿ ಬಿದ್ದ ರಸ್ತೆಗಳ ಬದಲು ಬೇರೆ ರಸ್ತೆಗಳ ಮೂಲಕ ಹೆಚ್ಚು ಇಂಧನ ಖರ್ಚಾಗದಂತೆ ನಿಗದಿತ ಸ್ಥಳ ತಲುಪಿಸುವ ಮಾರ್ಗವನ್ನು ತೋರಿಸಲಿದೆ. ನಿಮ್ಮ ವಾಹನ ಪೆಟ್ರೋಲ್, ಡೀಸೆಲ್, ಹೈಬ್ರಿಡ್, ಎಲೆಕ್ಟ್ರಿಕ್ ಮಾದರಿಯನ್ನು ಆಧರಿಸಿ ಇಕೋ ಫ್ರೆಂಡ್ಲಿ ಮಾರ್ಗದ ಇಂಧನ ದಕ್ಷತೆ ಅಂದಾಜನ್ನು ಗೂಗಲ್ ಮ್ಯಾಪ್ ತೋರಿಸುತ್ತದೆ. ಗೂಗಲ್ ಮ್ಯಾಪ್‌ನಲ್ಲಿ ನೀವು ಇಕೋ ಫ್ಲೆಂಡ್ಲಿ ಆಯ್ಕೆ ಟರ್ನ್ ಆನ್ ಮಾಡಬೇಕು. ಹೀಗಾದಲ್ಲಿ ಮಾತ್ರ ಎರಡು ಮಾರ್ಗಗಳನ್ನು ತೋರಿಸುತ್ತದೆ. ಇಕೋ ಫ್ಲೆಂಡ್ಲಿ ಟರ್ನ್ ಆನ್ ಮಾಡಿದರೆ, ಈ ಮಾರ್ಗದಲ್ಲಿ ಸಾಗುವಾಗ ನಿಮ್ಮ ವಾಹನ ಇಂಧನ ಆಧರಿಸಿ ಇಂಧನ ದಕ್ಷತೆ ಅಂದಾಜು ಲೆಕ್ಕವನ್ನು ಗೂಗಲ್ ಮ್ಯಾಪ್ ತೋರಿಸಲಿದೆ. ಗೂಗಲ್…
ಸೂರ್ಯೋದಯ: 06:53, ಸೂರ್ಯಾಸ್ತ : 06:02 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಹೇಮಂತ ಋತು, ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಮೇಷ ರಾಶಿ: ಇವರಿಗೆ ಹಣಕಾಸಿನ ಸಾಕಷ್ಟು ಮುಗ್ಗಟ್ಟು ಎದುರಿಸುವಿರಿ, ಕೆಲಸದಲ್ಲಿ ಅಧಿಕಾರಿಗಳಿಂದ ತೊಂದರೆ, ದೇವ ದರ್ಶನಕ್ಕಾಗಿ ಪ್ರವಾಸ, ಶತ್ರು ಕಾಟದಿಂದ ತೊಂದರೆ,ನಂಬಿದ ಸಹೋದ್ಯೋಗಿಯಿಂದ ನೌಕರದಾರರಿಗೆ ಮುಂಬಡ್ತಿಯಿಂದ ವಿಳಂಬ,”ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” ಎಂಬ ನಾಣ್ನುಡಿಯಂತೆ ಯುವಕರು ಕೃಷಿಕ್ಷೇತ್ರ ಅಳವಡಿಸಿಕೊಂಡರೆ ಉತ್ತಮ. ಹೈನುಗಾರಿಕೆ ಉದ್ಯಮ ಪ್ರಗತಿ.ಆಸ್ತಿ ಮಾರಾಟ ವಿಳಂಬ. ಸಾಲ ತೀರಿಸಲು ಕೂಡಿಟ್ಟಿರುವ ಹಣ ಹಠಾತ್ ಖರ್ಚಾಗುವ ಸಂಭವ. ಸಾಲದ ಋಣಭಾರದಿಂದ ಚಿಂತೆಯಾಗಬಹುದು. ಆಸ್ತಿ ಕಳೆದುಕೊಳ್ಳುವ ಭೀತಿ. ವ್ಯಾಪಾರ ವಹಿವಾಟಿನಲ್ಲಿ ಚೇತರಿಕೆ ಆತಂಕಬೇಡ. ಹಿತೈಷಿಗಳಿಂದ ಹಣಕಾಸಿನಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಾನದ ಸಿಹಿ ಸುದ್ದಿ ಕೇಳಿ ಸಂತೋಷ. ಮಂಗಳ…
ಹುಬ್ಬಳ್ಳಿ:- ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಂದೆ-ತಾಯಿಗೆ ತೊಂದರೆ ಮಾಡಿದ್ದಾರೆ ಎಂದು ಹೇಳಿ ಮಿನಿ ವಿಧಾನಸೌಧದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಹೊಡೆದಾಟ ನಡೆದಿರುವಂತಹ ಘಟನೆ ಜರುಗಿದೆ. ಹನಮಂತಪ್ಪ ಹಾಗೂ ಮಹೇಶ್ ಗೌಡ ನಡುವೆ ಹೊಡೆದಾಟ ಮಾಡಲಾಗಿದೆ. ನಮ್ಮ ತಂದೆ ತಾಯಿಗೆ ತೊಂದರೆ ಮಾಡಿದ್ದಾರೆ ಅದಕ್ಕೆ ಹೊಡೆದಿದ್ದೇನೆ ಎಂದು ಮಹೇಶ್ ಗೌಡ ಹೇಳಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಹನಮಂತಪ್ಪ ಉಪನಗರ ಪೊಲೀಸ್ ಠಾಣೆಗೆ ಓಡಿಹೋಗಿದ್ದಾರೆ. ಬಳಿಕ ಉಪನಗರ ಪೊಲೀಸರು ಜಗಳವನ್ನು ಬಿಡಿಸಿದ್ದಾರೆ.
ಬೆಂಗಳೂರು:- ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಧರ್ಮದ ವಿಚಾರವಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಂದು ಕೈಯಲ್ಲಿ ಮಂತ್ರಾಕ್ಷತೆ ಹಿಡಿದರೆ, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಜನಪರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು. ನೀವು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದರೂ ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ, ಶಿವಕುಮಾರ ಹೆಸರಲ್ಲಿ ಶಿವ ಹಾಗೂ ಷಣ್ಮುಗ ಇದ್ದಾರೆ. ಹರಿಪ್ರಸಾದ್ ಅವರ ಹೆಸರಲ್ಲಿ ಹರಿ ಇದ್ದಾನೆ. ಕೃಷ್ಣ ಭೈರೇಗೌಡರ ಹೆಸರಲ್ಲಿ ಕೃಷ್ಣ ಇದ್ದಾನೆ. ಹಿಂದೂ ಧರ್ಮ ನಿಮ್ಮ ಮನೆ ಆಸ್ತಿಯೇ? ಧರ್ಮ ಯಾವುದಾದರೂ ತತ್ವವೊಂದೆ. ನಾಮ ನೂರಾದರೂ ದೈವವೊಂದೆ. ಪೂಜೆ ನೂರಾದರೂ ಭಕ್ತಿವೊಂದೆ. ಕರ್ಮ ಹಲವಾದರೂ ನಿಷ್ಠೆವೊಂದೆ. ದೇವನೊಬ್ಬ ನಾಮ ಹಲವು. ನಾವು ಕಲ್ಲು, ನೀರು, ಮರ, ಗಾಳಿಯಲ್ಲಿ ದೇವರನ್ನು ಕಾಣುತ್ತೇವೆ. ನಮ್ಮ ಸರ್ಕಾರದಲ್ಲಿ ಧಾರ್ಮಿಕ…
ದೆಹಲಿ:-ಹಿಂದುಳಿದ ವರ್ಗಗಳ ಹೋರಾಟಕ್ಕಾಗಿ ಹೆಸರುವಾಸಿಯಾಗಿರುವ ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಲಭಿಸಿದೆ. ಕರ್ಪೂರಿ ಎರಡು ಬಾರಿ ಬಿಹಾರದ ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿ ಮತ್ತು ದಶಕಗಳ ಕಾಲ ವಿರೋಧ ಪಕ್ಷದ ಶಾಸಕ ಮತ್ತು ನಾಯಕರಾಗಿದ್ದರು. 1952 ರಲ್ಲಿ ಮೊದಲ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ಅವರು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋತಿಲ್ಲ. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ” ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯು ಠಾಕೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಒಂದು ದಿನ ಮೊದಲು ಹೇಳಿದೆ. ಕರ್ಪೂರಿ ಠಾಕೂರ್ ಡಿಸೆಂಬರ್ 1970 ಮತ್ತು ಜೂನ್ 1971 ರ ನಡುವೆ ಹಾಗೂ ಡಿಸೆಂಬರ್ 1977 -ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ರಾಜ್ಯಸಭಾ ಸಂಸದರಾಗಿದ್ದಾರೆ. ಮುಖ್ಯಮಂತ್ರಿಯಾಗಿ, ಠಾಕೂರ್ ಅವರು ಮುಂಗೇರಿ ಲಾಲ್…